​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಮೆಷಿನ್ ಇಂಟೆಲಿಜೆನ್ಸ್ ಅಭಿವೃದ್ಧಿಯ ಕಜ್ಞಾಆದ ಕಾರ್ಯತಂಡ

2015 ರ ಮೇ 13 ರಂದು ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮದ ಮಾನ್ಯ  ಮಂತ್ರಿಗಳು ನಡೆಸಿದ ವಿಮರ್ಶನಾ ಸಭೆಯಲ್ಲಿ 3D ಮುದ್ರಣ ತಂತ್ರಜ್ಞಾನ ಮತ್ತು ಐಒಟಿ ಇತ್ಯಾದಿಗಳನ್ನು ಒಳಗೊಂಡಂತೆ  ಮೆಷಿನ್ ಇಂಟೆಲಿಜೆನ್ಸ್  ಸಂಬಂಧಿಸಿದ ವಿಷಯಗಳನ್ನು  ಚರ್ಚಿಸಲಾಯಿತು. ಮೆಷಿನ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ಸಲಹೆ ನೀಡಲು ಒಂದು ಕಾರ್ಯತಂಡವನ್ನು ರಚಿಸಲು ಮಾನ್ಯ ಮಂತ್ರಿಗಳು ಮತ್ತು ಕಜ್ಞಾಆ ದ ಅಧ್ಯಕ್ಷರು ಸಲಹೆ ನೀಡಿದರು . ಅದರಂತೆ ಕಜ್ಞಾಆ ವು ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಾಹಿತಿ ತಂತ್ರಜ್ಞಾನ, ಜೀವ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರೊಂದಿಗೆ ಚರ್ಚಿಸಿ ಕಾರ್ಯತಂಡವನ್ನು ರಚಿಸಲಾಯಿತು. ಯಂತ್ರಗಳು, ಮಾಹಿತಿ ತಂತ್ರಜ್ಞಾನ, ಏರೋಸ್ಪೇಸ್ ಟೆಕ್ನಾಲಜಿ, ಶಿಕ್ಷಣ ತಂತ್ರಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನದ ಆತಿಥ್ಯವನ್ನು ಒಳಗೊಂಡಂತೆ ತಂತ್ರಜ್ಞಾನದ ವ್ಯಾಪ್ತಿಗೆ ಒಳಪಡುವ ವ್ಯಾಪಕ ಶ್ರೇಣಿಯ ಸರ್ಕಾರಿ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ತಂತ್ರಜ್ಞಾನ ಮತ್ತು ಯಂತ್ರಜ್ಞಾನದಲ್ಲಿ ಕರ್ನಾಟಕವು ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಇವುಗಳ ಸಹಾಯದಿಂದ  ಕರ್ನಾಟಕವು ಹೆಚ್ಚಿನ ಎತ್ತರಕ್ಕೆ ಏರಲಿದೆ, ಇದರಿಂದಾಗಿ ಅದರ ನಾಗರಿಕರಿಗೆ ಮುಂದುವರಿದ ತಂತ್ರಜ್ಞಾನ ಅಭಿವೃದ್ಧಿ ಪ್ರಯೋಜನಗಳ ಬಗ್ಗೆ ಭರವಸೆ ನೀಡಬಹುದು ಮತ್ತು ಮುಂದುವರಿದ, ಪ್ರಬುದ್ಧ ಮತ್ತು ಆರ್ಥಿಕವಾಗಿ ಶ್ರೀಮಂತ ಮತ್ತು ರಾಷ್ಟ್ರೀಯ ಅಭಿವೃದ್ಧಿ ಪ್ರಕ್ರಿಯೆಗಳಿಗೆ ಸಿದ್ಧಪಡಿಸುವಂತಹ ಭವಿಷ್ಯದ ತಂತ್ರಜ್ಞಾನದ ಕುರಿತು ಪರಿಸರವನ್ನು  ರಾಜ್ಯವು ಹೊಂದಬಹುದು.  

ಸ್ಮಾರ್ಟ್ ಮೊಬೈಲ್ ಸಿಸ್ಟಮ್ಗಳು ಮತ್ತು ಕ್ಲೌಡ್ ಕಂಪ್ಯೂಟಿಂಗ್‍ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಲಕ್ಷಾಂತರ ಸಾಧನಗಳ ಸಂಪರ್ಕವನ್ನು ಶಕ್ತಗೊಳಿಸುತ್ತವೆ ಮತ್ತು ಇದು ಯಂತ್ರಗಳ ನೆಟ್ವರ್ಕ್ ಮೂಲಕ ಯಾವುದೇ ಆಡಳಿತ, ತಾಂತ್ರಿಕ, ಸಮರ್ಥ, ಮೌಲ್ಯಗಳು ಮತ್ತು ನೈತಿಕ ಅಗತ್ಯತೆಯನ್ನು ಹೆಚ್ಚಿಸುತ್ತದೆ. ಸ್ಮಾರ್ಟ್ ಯಂತ್ರಗಳು ಈಗ ಮಾನವನ ಹಸ್ತಕ್ಷೇಪವಿಲ್ಲದೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಉಪಕರಣಗಳಾಗಿ ಹೊರಹೊಮ್ಮಲಿದೆ. ಮೆಷಿನ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳಾದ - 3D​ ಪ್ರಿಂಟಿಂಗ್, ಸ್ಥಳೀಯ ಕ್ಲೌಡ್  ವಿನ್ಯಾಸ, ಇಂಟರ್ನೆಟ್-ಆಫ್-ಥಿಂಗ್ಸ್ (ಐಒಟಿ), ರೊಬೊಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಆಲ್ಗೋರಿಧಮಿಕ್ ಸಾಮಾಜಿಕ ಉಪಕರಣಗಳು, ಸಾಮಾಜಿಕ ವಿಶ್ಲೇಷಣೆ ಇತ್ಯಾದಿಗಳು ಶಿಕ್ಷಣ ವ್ಯವಸ್ಥೆ, ಉನ್ನತ ಮಟ್ಟದ ಕೈಗಾರಿಕಾ ಸಾಮರ್ಥ್ಯ, ವಿಶ್ಲೇಷಣಾತ್ಮಕ ಆಡಳಿತ ಮತ್ತು ಸಮರ್ಥ ಆಡಳಿತದ ಮೂಲಕ ಸುಧಾರಿತ ಗುಣಮಟ್ಟದ ಜೀವನದ ನಾಗರಿಕ ಕೇಂದ್ರಿತ ಸೇವೆಗಳೊಂದಿಗೆ ಸಂಯೋಜನೆಗೊಳ್ಳುತ್ತವೆ.

ಕ್ರಿಯಾಯೋಜನೆಯನ್ನು ತಯಾರಿಸಲು ಮತ್ತು ಸಮಗ್ರ ಹಾಗೂ ಕ್ರಮಬದ್ಧವಾದ ವರದಿಯನ್ನು ಸಿದ್ಧಪಡಿಸಲು ತಂತ್ರಜ್ಞಾನ ತಜ್ಞರು / ಪರಿಣತರ ಕಾರ್ಯ ತಂಡವನ್ನು  ರಚಿಸಲಾಗುವುದು ಎಂದು ಕಜ್ಞಾಆ ನಿರ್ಧರಿಸಿತು.  ಶ್ರೀ ವೆಂಕಟೇಶ್ ವಲ್ಲುರಿ  ಮತ್ತು ಪ್ರೊ. ಚಿರಂಜೀಬ್  ಭಟ್ಟಾಚಾರ್ಯ ಅವರನ್ನು ಕಾರ್ಯತಂಡದ ಸಹ ಅದ್ಯಕ್ಷರುಗಳನ್ನಾಗಿ ನೇಮಿಸಲಾಯಿತು. 

ಮೆಷಿನ್ ಇಂಟೆಲಿಜೆನ್ಸ್  ಕಾರ್ಯತಂಡದ  ಪ್ರಮುಖ  ಕಾರ್ಯವೆಂದರೆ ಮುಖ್ಯ ತಂತ್ರಜ್ಞಾನಗಳು, ಅನ್ವಯಗಳ ಅಭಿವೃದ್ಧಿ, ಶಿಕ್ಷಣ ಮತ್ತು ಸಂಶೋಧನೆ ಮತ್ತು ಕೈಗಾರಿಕೀಕರಣದ ಸಮಗ್ರ ಅಭಿವೃದ್ಧಿಯ ಮೂಲಕ ಮೆಷಿನ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಕರ್ನಾಟಕ ನಾಯಕತ್ವವನ್ನು ವಹಿಸಿಕೊಳ್ಳಲು ಉತ್ತಮ ವೇದಿಕೆಯನ್ನು ನಿರ್ಮಿಸಬಹುದು.  ಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ​  

ಕಾರ್ಯತಂಡವು  ಈ ಕೆಳಕಂಡ ಸದಸ್ಯರನ್ನು ಒಳಗೊಂಡಿದೆ,

1

ಶ್ರೀ ವೆಂಕಟೇಶ್ ವೆಲ್ಲುರಿ, ಸದಸ್ಯರು .ಜ್ಞಾ.

-ಸಹ-ಅಧ್ಯಕ್ಷರು
2ಪ್ರೊ. ಚಿರಂ​ಜೀಬ್ ಭಟ್ಟಾಚಾರ್ಯ, ಎಸ್ಸಿ, ಬೆಂಗಳೂರು
ಸಹ​-ಅಧ್ಯಕ್ಷರು
3ಪ್ರೊ. ಎಸ್. ಸಡಗೋಪನ್, ನಿರ್ದೇಶಕರು, ಐಐಐಟಿ, ಬೆಂಗಳೂರು
ಸದಸ್ಯರು
4ಡಾ. ಯು. ಚಂದ್ರಶೇಖರ್, ನಿರ್ದೇಶಕ ಜನರಲ್, ಎಸ್ಸಿ, ಹೈದರಾಬಾದ್
ಸದಸ್ಯರು
5ಶ್ರೀ ನಿಖಿಲ್ ಚೌಧರಿ, ಎಸ್ಸಿ, ಹೈದರಾಬಾದ್
ಸದಸ್ಯರು
6ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
7ಡಾ. ಅವನೀಶ್ ಅಗರ್ವಾಲ್, ಅಧ್ಯಕ್ಷರು, ಕ್ವಾಲ್ಕಾಮ್ ಇಂಡಿಯಾ
ಸದಸ್ಯರು
8ಪ್ರೊ. ರಮೇಶ್ ಹರಿಹರನ್, ಸಿಟಿ, ಸ್ಟ್ರಾಂಡ್ ಲೈಫ್ ಸೈನ್ಸಸ್
ಸದಸ್ಯರು
9ಪ್ರೊ. ರವಿ ಕಣ್ಣನ್, ಡಾಟಾ ಸೈನ್ಸ್ ಎಕ್ಸ್ಪರ್ಟ್, ಮೈಕ್ರೋಸಾಫ್ಟ್
ಸದಸ್ಯರು
10ನಾಮನಿರ್ದೇಶಿತ ಪ್ರತಿನಿಧಿಗಳು, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ
ಸದಸ್ಯರು
11ನಾಮನಿರ್ದೇಶಿತ ಪ್ರತಿನಿಧಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ
ಸದಸ್ಯರು
12ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  
ಸದಸ್ಯರು
13ನಾಮನಿರ್ದೇಶಿತ ಪ್ರತಿನಿಧಿಗಳು, ಐಟಿ ಎಜುಕೇಷನ್ ಸ್ಟ್ರಾಂಡ್ಡ್ರ್ಸ್, (ಬಿಟಿಎಸ್)
ಸದಸ್ಯರುr​
14ರಾಜ್ಯ ಇನ್ಫಾಮ್ರ್ಯಾಟಿಕ್ಸ್ ಅಧಿಕಾರಿಳು (ಎಸ್..),  ಎನ್ಐಸಿ
ಸದಸ್ಯರು
15ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಳು (ಸಿ), -ಗವರ್ನನ್ಸ್ ಕೇಂದ್ರ, ಕರ್ನಾಟಕ ಸರ್ಕಾರ
ಸದಸ್ಯರು
​16ಡಾ. ಮೌಲೀಶ್ರೀ ., ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಳು (ಸಿ), ಐಸಿಟಿ ಕೌಶಲ್ಯ ಅಭಿವೃಧಿ ಸೊಸೈಟಿ, ಬೆಂಗಳೂರು 
​- ಸದಸ್ಯ ಕಾರ್ಯದರ್ಶಿಳು
​17ಡಾಪದ್ಮಾವತಿ ಬಿ.ಎಸ್ಹಿರಿಯ ಸಂಶೋಧನಾ ಸಹಾಯಕರು​.ಜ್ಞಾ.
​- ಸಂಚಾಲಕರು​


ಹೆಚ್ಚಿನ ಮಾಹಿತಿಗಾಗಿ, ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು  1maulishree@gmail.com  ಮುಖೇನ ಸಂಪರ್ಕಿಸಬಹುದಾಗಿದೆ. 

​​ಕಜ್ಞಾಆವು ಮೆಷಿನ್ ಇಂಟೆಲಿಜೆನ್ಸ್ ಅಭಿವೃದ್ಧಿಯ ಶಿಫಾರಸ್ಸನ್ನು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ​, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ.