​​​​​​​​​​​​​​​

ಕಜ್ಞಾಆದ ನಿರ್ವಹಣಾ ಸಮಿತಿ

ಕಜ್ಞಾಆವು ಹೊಸ ವಿಚಾರಗಳು ಮತ್ತು ಪರಿಕಲ್ಪನೆಗಳು; ತಂತ್ರಜ್ಞಾನ, ನೀತಿ ವಿಶ್ಲೇಷಣೆಗಳು ಮತ್ತು ಸಂಶೋಧನೆಗಳ ಕುರಿತ ನವೀನಾತ್ಮಕವಾದ ಪ್ರಸ್ತಾವನೆಗಳು; ರಾಜ್ಯದ ಪ್ರಸಕ್ತತೆಗನುಗುಣವಾಗಿ ದಿಗ್ದರ್ಶನಗೊಳ್ಳುವ ಮತ್ತು ಅಭಿಪ್ರಾಯಕ್ಕೊಳಪಡುವ ನಿದರ್ಶಿತವಾದ ವಿಸ್ತೃತ ಚರ್ಚೆಗಳನ್ನು ಪರಿಗಣಿಸುತ್ತದೆ. ಇದನ್ನು ಹೊರತುಪಡಿಸಿ, ಕಜ್ಞಾಆವು ಪರ್ಯಾಪಿತ ಮತ್ತು ಸಂಯೋಜಿತ ಚರ್ಚೆಗಳು ಹಾಗೂ ವಿವಿಧ ಹಂತಗಳಲ್ಲಿ ಸರ್ಕಾರದ ಇಲಾಖೆಗಳು, ಉದ್ದಿಮೆಗಳು, ಶಿಕ್ಷಣ ಮತ್ತು ನಾಗರಿಕರುಗಳ ನಡುವಿನ ಸಮಾಲೋಚನೆಗಳನ್ನು ಸಹಾ ಕೈಗೊಳ್ಳುತ್ತದೆ. ನಿರಂತರ ಸಂಪರ್ಕ, ಸಮಾಲೋಚನೆಗಳು ಮತ್ತು ಚರ್ಚೆಗಳು ಇಂತಹ ವ್ಯಾಪಕ ಪ್ರಕ್ರಿಯೆಗಳ ಮೂಲಕ, ಕಜ್ಞಾಆವು ವಿವಿಧ ವಲಯಗಳ ಕುರಿತಾದ ಅಧ್ಯಯನಗಳು/ಯೋಜನೆಗಳು/ಮೌಲ್ಯಮಾಪನಗಳನ್ನು ಉತ್ತೇಜಿಸುತ್ತದೆ, ವಿನ್ಯಾಸಗೊಳಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಶಿಫಾರಸ್ಸುಗಳನ್ನು ಸಲ್ಲಿಸುತ್ತದೆ. ಇದರಿಂದಾಗಿ, ರಾಜ್ಯದ ಅಭಿವೃದ್ಧಿಗೆ ಜ್ಞಾನದ ಒಳಹರಿವನ್ನು ಹೆಚ್ಚಿಸುವುದರೊಂದಿಗೆ ಪರಿಣತಿಯನ್ನು ವರ್ಧಿಸುತ್ತದೆ. ಕಜ್ಞಾಆವು ತನ್ನ ವಿವಿಧ ಪ್ರಸ್ತಾವನೆಗಳು/ಯೋಜನೆಗಳು/ಶಿಫಾರಸ್ಸುಗಳು ಹಾಗೂ ಕರ್ನಾಟಕ ಸರ್ಕಾರವು ಕೈಗೆತ್ತಿಕೊಳ್ಳಬಹುದಾದ ಯಾವುದೇ ನಿರ್ದಿಷ್ಟವಾದ ಅನುಷ್ಠಾನ ಕ್ರಮಗಳನ್ನು ಗುರುತಿಸುವುದರ ಮುಖೇನ ಅನೇಕ ನವೀನ ಮತ್ತು ಜ್ಞಾನದ ವಿಚಾರಗಳಿಗೆ ವೇಗವರ್ಧಕ ಕಾರ್ಯಕರ್ತನಾಗಿ ಆಯೋಗವು ಕೆಲಸ ನಿರ್ವಹಿಸುತ್ತದೆ. 

ದಿನನಿತ್ಯದ ಆಡಳಿತ, ನಿರ್ವಹಣೆ ಮತ್ತು ಖರ್ಚುವೆಚ್ಚಗಳ ವಿಷಯಗಳ ಕುರಿತು ಗಮನಹರಿಸುವುದು ಮತ್ತು ಹೆಚ್ಚಿನ ಕ್ರಮಗಳಿಗೆ ಸೂಕ್ತ ಸಲಹೆ ನೀಡುವ ಸಲುವಾಗಿ ಕಜ್ಞಾಆ ನಿರ್ವಹಣಾ ಮತ್ತು ಆಡಳಿತಾತ್ಮಕ ವಿಷಯಗಳನ್ನು ನಿಯಮಿತವಾಗಿ ಓರೆಹಚ್ಚುತ್ತದೆ. 

ಕಜ್ಞಾಆದ ಹತ್ತು ಹಲವು ನಿರ್ವಹಣಾ ಮತ್ತು ಆಡಳಿತ ಸಂಬಂಧಿತ ವಿಷಯಗಳೆಡೆಗೆ ಗಮನಹರಿಸಲು ಕಜ್ಞಾಆ-ನಿರ್ವಹಣಾ ಸಮಿತಿಯನ್ನು ಸೆಪ್ಟೆಂಬರ್ 8, 2014 ರಂದು, ಡಾ. ಗಾಯತ್ರಿ ಸಬರ್ವಾಲ್ರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಕಜ್ಞಾಆ-ನಿರ್ವಹಣಾ ಸಮಿತಿಯು ಅಧಿಕೃತವಾಗಿದ್ದು, ಕಜ್ಞಾಆದ ಬದಲಾಗಿ ಆಡಳಿತ ಮತ್ತು ನಿರ್ವಹಣೆಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳಾದ ಸಂಗ್ರಹಣೆ/ಖರೀದಿ ಮತ್ತು ಹೊರಗುತ್ತಿಗೆ, ಒಪ್ಪಂದದ ಮೇರೆಗೆ ಸಲಹೆಗಾರರು/ಸಂಶೋಧನಾ ಸಿಬ್ಬಂದಿ/ಕಾರ್ಯದರ್ಶಿ ಮತ್ತು ಇತರ ಸಿಬ್ಬಂದಿಗಳ ನೇಮಕಾತಿ, ನೇಮಕಗೊಂಡ ಸಿಬ್ಬಂದಿಗಳ ಕಾರ್ಯಕ್ಷಮತೆಯ ಪುನರಾವಲೋಕನ ಹಾಗೂ ವೇತನ ಹೆಚ್ಚಳದ ಕುರಿತು ಸಲಹೆಗಳು, ವೆಚ್ಚದ ಅಧಿಕಾರ, ಕಜ್ಞಾಆದ ತಾಂತ್ರಿಕ ಸಮಿತಿಯೊಂದಿಗಿನ ಸಂಪರ್ಕ ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳೆಡೆಗೆ ಗಮನ ನೀಡುತ್ತದೆ. ಕಜ್ಞಾಆವು ಸೆಪ್ಟೆಂಬರ್ 7, 2017ರಂದು ನಡೆದ ತನ್ನ ಏಳನೇ ಸಭೆಯಲ್ಲಿ, ಡಾ. ಗಾಯತ್ರಿ ಸಭರ್ವಾಲ್ ಮತ್ತು ಡಾ. ಸಡಗೋಪನ್‍ರವರ ಅಧ್ಯಕ್ಷತೆಯಲ್ಲಿ ಕಜ್ಞಾಆ-ನಿರ್ವಹಣಾ ಸಮಿತಿಯ ಮುಂದುವರಿಕೆಯನ್ನು ಅನುಮೋದಿಸಿದೆ ಹಾಗೂ ಕಜ್ಞಾಆದ ನವೀಕೃತ ಅವಧಿಗೂ ಸಹಾ ತನ್ನ ಪಾತ್ರವನ್ನು ಮುಂದುವರಿಸಲು ಸೂಚಿಸಿದೆ. ಹೀಗಾಗಿ, ಕಜ್ಞಾಆ-ನಿರ್ವಹಣಾ ಸಮಿತಿಯು ತನ್ನ ಕಾರ್ಯವನ್ನು ಮುಂದುವರಿಸುತ್ತದೆ ಮತ್ತು ಕೆಳಗಿನ ಸದಸ್ಯರನ್ನು ಒಳಗೊಂಡಂತೆ ನವೆಂಬರ್ 7, 2017ರಂದು ಪುರ್ನರಚಿತಗೊಂಡಿದೆ. ಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ

1

ಡಾ. ಗಾಯತ್ರಿ ಸಬರ್ವಾಲ್, ಸದಸ್ಯರು, .ಜ್ಞಾ. 


ಸಹ-ಅಧ್ಯಕ್ಷರು
2ಪ್ರೊ. ಎಸ್. ಸಡಗೋಪನ್, ಸದಸ್ಯರು, .ಜ್ಞಾ.       
ಸಹ-ಅಧ್ಯಕ್ಷರು
3ಡಾ. ಬಿ. ಎನ್. ಸುರೇಶ್, ಸದಸ್ಯರು, .ಜ್ಞಾ.
ದಸ್ಯರು​
4ಪ್ರೊ. ಕೆ. . ರಾಧಾಕೃಷ್ಣ, ಸದಸ್ಯರು, .ಜ್ಞಾ.
ಸದಸ್ಯರು
5ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳುಹಣಕಾಸು ಇಲಾಖೆ
ಸದಸ್ಯರು

6ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ
ಸದಸ್ಯರು
7ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
8ಆಡಳಿತ/ಹಣಕಾಸು ಕಾರ್ಯನಿರ್ವಾಹಕರು, .ಜ್ಞಾ.               
ಸದಸ್ಯ ಕಾರ್ಯದರ್ಶಿಗಳು
9ಡಾ. ಎಂ. ಜಯಶ್ರೀಹಿರಿಯ ಸಂಶೋಧನಾ ಸಹಾಯಕರು, .ಜ್ಞಾ.
ಸಂಚಾಲಕರು