​​

ಸದಸ್ಯ ಕಾರ್ಯದರ್ಶಿಗಳು  

MukundRao.jpg

ಡಾ. ಮುಕುಂದ್ ಕಡೂರ್ ಶ್ರೀನಿವಾಸ್ ರಾವ್ 
ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್‍ಐಎಎಸ್), ಬೆಂಗಳೂರು.

ಡಾ. ಮುಕುಂದ್ ಕಡೂರ್ ಶ್ರೀನಿವಾಸ್ ರಾವ್ (mukund.k.rao@gmail.com) ರವರು ಭೂವಿಜ್ಞಾನದಲ್ಲಿ ಎಂ.ಎಸ್ಸಿ., ಆರ್.ಎಸ್. ಮತ್ತು ಜಿ.ಐ.ಎಸ್. ನಲ್ಲಿ ಎಂ.ಫಿಲ್. ಮತ್ತು ಪಿಹೆಚ್.ಡಿ. ಪದವಿಯನ್ನು ಹೊಂದಿದ್ದಾರೆ. ಡಾ. ರಾವ್ ರವರು ಇ.ಒ., ಜಿ.ಐ.ಎಸ್. ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಮಾರು 34 ವರ್ಷಗಳ  ಸರ್ಕಾರಿ/ಕೈಗಾರಿಕೆ/ಸಲಹಾ ವಲಯಗಳಲ್ಲಿ ಸೇವೆಗೈದ ವಿಶಿಷ್ಟವಾದ ಅನುಭವವನ್ನು ಹೊಂದಿದ್ದಾರೆ. ಸುಮಾರು 24 ವರ್ಷಗಳ ಕಾಲ ಡಾ. ರಾವ್ ರವರು ಇಸ್ರೋ ಸಂಸ್ಥೆಯಲ್ಲಿ,  ಭಾರತೀಯ ರಿಮೋಟ್ ಸೆನ್ಸಿಂಗ್ ಮತ್ತು ಎನ್.ಎನ್.ಆರ್.ಎಂ.ಎಸ್. ಯೋಜನೆಯನ್ನು ರೂಪಿಸುವಲ್ಲಿ ಹಾಗೂ ರಾಷ್ಟ್ರೀಯ ಅಭಿವೃದ್ಧಿ ಕ್ಷೇತ್ರಗಳಿಗಾಗಿ ಹಲವಾರು ಇ.ಒ./ಜಿ.ಐ.ಎಸ್ ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ರಾಷ್ಟ್ರೀಯ ಇಒ/ಜಿಐಎಸ್ ಕಾರ್ಯಕ್ರಮಗಳಾದ ಎನ್‍ಆರ್ಐಎಸ್, ಎನ್‍ಎಸ್‍ಡಿಐ, ಎನ್‍ಯುಐಎಸ್ ಮತ್ತು ರಾಷ್ಟ್ರೀಯ ಜಿಐಎಸ್ ಮುಂತಾದವುಗಳಿಗೆ ನಾಯಕತ್ವಗಳನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ. ಇವರು ಇ.ಒ. ಮತ್ತು ರಾಷ್ಟ್ರೀಯ ಜಿ.ಐ.ಎಸ್ ಗಾಗಿ ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ, 6 ವರ್ಷಗಳ ಕಾಲ, ಯು.ಎಸ್.ಎ., ಸಿಂಗಪೂರ್, ಮಧ್ಯ-ಪೂರ್ವ, ಜಪಾನ್ ಮತ್ತು ಭಾರತದ ವಿವಿಧ ಯೋಜನೆಗಳಿಗೆ, ಜಿ.ಐ.ಎಸ್. ಮತ್ತು ಇಮೇಜ್ ಅಪ್ಲಿಕೇಷನ್‍ಗಳನ್ನು ಇವರ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವರು ದೆಹಲಿ ರಾಜ್ಯದ ಎಸ್.ಡಿ.ಐ., ಭಾರತದ ಮೆಟಾಡಾಟ ಪೋರ್ಟಲ್ ವಿನ್ಯಾಸ ಮತ್ತು ಅಭಿವೃದ್ಧಿ ಹಾಗೂ ಇನ್ನಿತರೆ ಹಲವಾರು ಪ್ರಕ್ರಿಯೆಗಳಲ್ಲಿ ಕರ್ತವ್ಯವೆಸಗಿದ್ದಾರೆ. ಇವರು ಭಾರತದಲ್ಲಿ ಪ್ರಮುಖ ಜಿ.ಐ.ಎಸ್. ವಿತರಣಾ ಕಾರ್ಯವನ್ನು ಮುನ್ನಡೆಸಿದ್ದು, ಉಪಗ್ರಹ ಸಂವಹನಗಳೊಂದಿಗೆ ಜಿ.ಐ.ಎಸ್./ಜಿ.ಪಿ.ಎಸ್. ಗಳ ವಿನ್ಯಾಸಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 4 ವರ್ಷಗಳಿಂದ, ಡಾ. ರಾವ್ ಭಾರತೀಯ ಸರ್ಕಾರಿ ಸಂಸ್ಥೆಗಳಿಗೆ, ಭಾರತೀಯ/ ಅಂತಾರಾಷ್ಟ್ರೀಯ ಉದ್ಯಮಗಳಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಡಾ. ರಾವ್ ರವರು ಯೋಜನಾ ಆಯೋಗಕ್ಕೆ ಸಲಹೆ, ರಾಷ್ಟ್ರೀಯ ಜಿ.ಐ.ಎಸ್. ನ ದೃಷ್ಟಿ ವ್ಯಾಖ್ಯಾನಿಸುವಲ್ಲಿ ಮುಂದಾಳತ್ವ ಹಾಗೂ ರಾಷ್ಟ್ರೀಯ ಜಿ.ಐ.ಎಸ್. ಕೋರ್ ಗುಂಪಿನ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ರಾವ್ ರವರು 2012-13 ರಲ್ಲಿ ಜ್ಞಾನ ಆಯೋಗದ ಕರ್ನಾಟಕ-ಜಿ.ಐ.ಎಸ್ ನ ಕಾರ್ಯತಂಡದ ನೇತೃತ್ವ​ನ್ನು ವಹಿಸಿದ್ದಾರೆ. ಇವರು ರಾಜ್ಯ ಮತ್ತು ರಾಷ್ಟ್ರಾದ್ಯಂತ ಹಲವಾರು ದೊಡ್ಡ ಇ.ಒ./ಜಿ.ಐ.ಎಸ್. ಯೋಜನೆಗಳ ವಿನ್ಯಾಸ ಮತ್ತು ಅನುಷ್ಠಾನಕ್ಕೆ ನೆರವು ನೀಡಿದ್ದಾರೆ. ಪ್ರಸ್ತುತ, ಇವರು ಕರ್ನಾಟಕ ರಾಜ್ಯ ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ಸಂಸ್ಥೆಗೆ ಸಲಹೆ ನೀಡುತ್ತಿದ್ದು, ಎನ್‍ಐಎಎಸ್ ನಲ್ಲಿ ಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಇವರು ಬಾಹ್ಯಾಕಾಶ ನೀತಿಗಳ ಅಧ್ಯಯನ; ಜಿ.ಐ.ಎಸ್. ಮಾನದಂಡಗಳನ್ನು ವಿವರಿಸುವಲ್ಲಿ ಮತ್ತು ‘ಮಾನವರಹಿತ ವೈಮಾನಿಕ ವ್ಯವಸ್ಥೆ ತಂತ್ರಜ್ಞಾನ ಮತ್ತು ನೀತಿ’ ಮೌಲ್ಯಮಾಪನ ಅಧ್ಯಯನಗಳ ಕುರಿತು ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ರಾವ್ ರವರು ಅಂತಾರಾಷ್ಟ್ರೀಯ ಜಿ.ಎಸ್.ಡಿ.ಐ.ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇವರು ಅಂತಾರಾಷ್ಟ್ರೀಯ ಇಒ, ಜಿಐಎಸ್ ಮತ್ತು ಬಾಹ್ಯಾಕಾಶ ವೇದಿಕೆಗಳಾದ - ಸಿಇಒಎಸ್, ಐಎಎಫ್, ಐಎಎ, ಐಎಸ್‍ಪಿಆರ್‍ಎಸ್, ಜಿಎಸ್‍ಡಿಐ, ಯುಎನ್-ಸಿಒಪಿಯುಒಎಸ್, ಯುಎನ್-ಸಿಎಸ್‍ಎಸ್‍ಟಿಇಎಪಿ, ಐಐಎಸ್‍ಎಲ್ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ಡಾ. ರಾವ್ ರವರು 200 ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊಂದಿದ್ದಾರೆ. ArcNews (www.esri.com) ತನ್ನ ಚಳಿಗಾಲ/2010 ನೇ ಸಂಪುಟದಲ್ಲಿ ಡಾ. ರಾವ್ ರವರನ್ನು ‘ಜಿ.ಐ.ಎಸ್. ಹೀರೋ’ ಎಂದು ಗುರುತಿಸಿದೆ. ಅಲ್ಲದೇ, ಡಾ. ರಾವ್ ರವರು ಮ್ಯಾಪ್ ಇಂಡಿಯಾ 2010 ರ ಸಮ್ಮೇಳನದಲ್ಲಿ 2009 ರ ಜಿ.ಐ.ಎಸ್. ವೃತ್ತಿಪರ ಪ್ರಶಸ್ತಿ (GIS Professional of 2009 Award); 2009 ರಲ್ಲಿ ಭಾರತೀಯ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್, ಪ್ರಾದೇಶಿಕ ತಂತ್ರಜ್ಞಾನದಲ್ಲಿನ ಶ್ರೇಷ್ಠತೆಗಾಗಿ ರಾಷ್ಟ್ರೀಯ ಜಿಯೋಸ್ಪೇಷಿಯಲ್ ಪ್ರಶಸ್ತಿ (ISRS); 2009 ರಲ್ಲಿ ಅಂತರರಾಷ್ಟ್ರೀಯ ಗ್ಲೋಬಲ್ ಸ್ಪೇಷಿಯಲ್ ಡಾಟಾ ಇನ್ಫ್ರಾಸ್ಟ್ರಕ್ಚರ್ (ಜಿಎಸ್‍ಡಿಐ) ಅಸೋಸಿಯೇಷನ್ ಇವರಿಂದ ಅನುಕರಣೀಯ ಸೇವೆ ಪದಕ ಮತ್ತು 2002 ರಲ್ಲಿ ಸಿಸ್ಟಮ್ಸ್ ವಿಶ್ಲೇಷಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಹರಿ ಓಂ ಆಶ್ರಮದ ವಿಕ್ರಮ್ ಸಾರಾಭಾಯಿ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ . 

ಕರ್ನಾಟಕ ಸರ್ಕಾರವು ಡಾ. ರಾವ್ ರವರನ್ನು ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿಗಳಾಗಿ ಅಧಿಕಾರವಹಿಸಲು ಆಹ್ವಾನಿಸಿತು ಮತ್ತು ಇವರು ಆಗಸ್ಟ್ 18, 2014 ರಿಂದ ತಮ್ಮ ಅಧಿಕಾರದಲ್ಲಿ ಮುಂದುವರೆದಿದ್ದಾರೆ.