​​​​​​​​

ಶುಶ್ರೂಷಕಿಯರ  ತರಬೇತಿಗೆ ಸಿಮ್ಯುಲೇಟರ್‍ಗಳು

ಮಾರ್ಚ್ 12, 2014 ರಂದು ನಡೆದ ಕಜ್ಞಾಆ ದ ಮೊದಲ ಸಭೆಯಲ್ಲಿ ಆಯೋಗದ ಸದಸ್ಯರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರು  ನಿರ್ಣಾಯಕ ಆರೈಕಾ ಘಟಕದಲ್ಲಿ ಕಾರ್ಯ ನಿರ್ವಹಿಸಲು ದಾದಿಯರಿಗೆ ತರಬೇತಿ ನೀಡಲು ನರ್ಸಿಂಗ್ ಸಿಮ್ಯುಲೇಟರ್ ಅನ್ನು ಪ್ರಸ್ತಾಪಿಸಿದರು.  'ದಾದಿಯರ ತರಬೇತಿಗಾಗಿ  ಪೋಸ್ಟ್ ಆಪರೇಟಿವ್ ಕಾರ್ಡಿಯಾಕ್ ಕ್ರಿಟಿಕಲ್  ಕೇರ್ ಸಿಮುಲೇಟರ್ ನ  ವಿನ್ಯಾಸ ಮತ್ತು ಅಭಿವೃದ್ಧಿ'  ಎಂಬ ಪ್ರಸ್ತಾವನೆಯನ್ನು  ಐಐಎಸ್ ಸ್ಸಿಯಪ್ರೊಫೆಸರ್ ಡಾ. ಗುರುಮೂರ್ತಿ ಮತ್ತು ಡಾ. ದೇವಿ ಶೆಟ್ಟಿ ಅವರು ಜಂಟಿಯಾಗಿ  ಪ್ರಸ್ತಾವನೆಯನ್ನು ಕಜ್ಞಾಆಕ್ಕೆ ಸಲ್ಲಿಸಿದರು. ಸೆಪ್ಟೆಂಬರ್ 22, 2014 ರಂದು ನಡೆದ ಕಜ್ಞಾಆ ದ ಎರಡನೇ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು  ಮತ್ತು ಪ್ರಸ್ತಾವನೆಯನ್ನು ತಜ್ಞರ ವಿಮರ್ಶೆಗಾಗಿ  ಸೂಚಿಸಲಾಯಿತು.

ಹೃದಯಾಘಾತ ಶಸ್ತ್ರಚಿಕಿತ್ಸೆ ನಂತರ ನಿರ್ಣಾಯಕ ಘಟಕದಲ್ಲಿ ನಡೆಸಲಾಗುವ ರೋಗನಿರ್ಣಯ ಮತ್ತು ಕಾರ್ಯವಿಧಾನಗಳನ್ನು ಅಭ್ಯಾಸ ಮಾಡಲು ದಾದಿಯರಿಗೆ ವೈದ್ಯಕೀಯ ಸಿಮ್ಯುಲೇಟರ್ ಅನ್ನು ಅಭಿವೃದ್ಧಿಪಡಿಸಲು ಈ ಪ್ರಸ್ತಾವನೆಯು ಸೂಚಿಸುತ್ತದೆ. ಈ ಸಿಮ್ಯುಲೇಟರ್ ಭಾರತ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ನರ್ಸಿಂಗ್ ಸಿಬ್ಬಂದಿಗಳ ತರಬೇತಿಯಲ್ಲಿನ  ಅಂತರವನ್ನು  ಪರಿಹಾರ ಮಾಡುವುದಲ್ಲದೆ,  ಹಿರಿಯ ಶುಶ್ರೂಷಕರ ಕೆಲಸದ ಒತ್ತಡವನ್ನು ಕಡಿತಗೊಳಿಸುತ್ತದೆ. ಸಾಮರ್ಥ್ಯದ ಮೌಲ್ಯಮಾಪನ, ಡೇಟಾ ಲಾಗಿಂಗ್ ಮತ್ತು ಪ್ರಮಾಣೀಕರಣದ ಸಾಧನವಾಗಿ ಕೂಡ ಉಪಯೋಗವಾಗಲಿದೆ. ಈ ಉಪಕರಣವು ಮೂಲ ಮನುಷ್ಯಾಕೃತಿವನ್ನು ಹೊಂದಿದ್ದು, ಸಿಮುಲೇಟರ್ ಕನ್ಸೋಲ್, ಸಂಬಂಧಿತ ಜೀವಾಧಾರಕಗಳು  ಮತ್ತು ವೆಂಟಿಲೇಟರ್ ಸಲಕರಣೆಗಳನ್ನೊಳಗೊಂಡಿದೆ.

ಮುಂದಿನ ಕ್ರಮಗಳು
  • ಈ ಪ್ರಸ್ತಾವನೆ ಯನ್ನು ಎರಡು ಬಾಹ್ಯ ಪರಿಣಿತರಾದ ಡಾ. ಎಂ. ಎಸ್.  ವಲಿಯಥನ್ ಮತ್ತು ಡಾ.ವಿ. ರಾಮ್ ಕುಮಾರ್ ವಿಮರ್ಶೆಗಾಗಿ  ಕಳುಹಿಸಲಾಯಿತು.
  • ಜನವರಿ ೨೦೧೫ ರಂದು ಅಧ್ಯಕ್ಷರು, ಕಜ್ಞಾಆ ನಡೆಸಿದ ವಿಮರ್ಶನಾ  ಸಭೆಯಲ್ಲಿ  ತಜ್ಞರು ಈ ಪರಿಕಲ್ಪನೆಯನ್ನು ಮೆಚ್ಚಿದರು ಮತ್ತು  ನರ್ಸಿಂಗ್ ಸಿಮ್ಯುಲೇಟರ್ ಅನ್ನು ನರ್ಸಿಂಗ್ ತರಬೇತಿ ಸಿಮ್ಯುಲೇಟರ್ ಎಂದು ಬದಲಾಯಿಸಲು ಸಲಹೆ ನೀಡಿದರು. ಪ್ರಸ್ತಾವನೆಯನ್ನು ಪರಿಗಣಿಸಲು ತಜ್ಞರು ಕಜ್ಞಾಆಕ್ಕೆ  ಶಿಫಾರಸು ಮಾಡಿದರು.
  • ಜನವರಿ 31, 2015 ರಂದು ನಡೆದ ಮೂರನೇ ಕಜ್ಞಾಆ  ಸಭೆಯಲ್ಲಿ  ಔಪಚಾರಿಕವಾಗಿ ನರ್ಸಿಂಗ್ ತರಬೇತಿ ಸಿಮ್ಯು ಲೇಟರ್ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು.
  • ಯೋಜನೆಯನ್ನು ಅನುಷ್ಠಾನಗೊಳಿಸಲು ಐಐಎಸ್ಸ್ಸಿಗೆ ಮಂಜೂರಾತಿ ಆದೇಶವನ್ನು ನೀಡಲಾಯಿತು.