​​​​​​​​​​​​​​

ಪದವೀಧರ ವಿದ್ಯಾರ್ಥಿಗಳ ಸಂಶೋಧನಾ ತರಬೇತಿಗಾಗಿ ಸಿದ್ಧತೆ

 
ಮಲೆನಾಡ್ ಪ್ರೊಗ್ರೆಸ್ಸಿವ್ ಎಜುಕೇಷನ್ ಸೊಸೈಟಿ (ಎಂಪಿಇಎಸ್) ಹೊನ್ನಾವರ ಇವರು, "ಪದವೀಧರ ವಿದ್ಯಾರ್ಥಿಗಳಿಗೆ ಸಂಶೋಧನಾ ತರಬೇತಿಗಾಗಿ ಸಿದ್ಧತೆ" ಎಂಬ ವಿಶಿಷ್ಟವಾದ ಪ್ರಸ್ತಾವನೆಯವನ್ನು ಕಜ್ಞಾಆ ಕ್ಕೆ ಸಲ್ಲಿಸಿದರು ಮತ್ತು ಕೊಂಕಣ ಪ್ರದೇಶದ  ಪರಿಸರ ಮಾಲಿನ್ಯಕಾರಕಗಳ ಮೇಲೆ ವಿದ್ಯಾರ್ಥಿಗಳಿಗೆ ಸಂಶೋಧನಾ ತರಬೇತಿ ನೀಡುವ  ಬಗ್ಗೆ ಪೈಲಟ್ ಅಧ್ಯಯನವನ್ನು ಪ್ರಸ್ತಾಪಿಸಿದರು.
 
ಜನವರಿ 31, 2015 ರಂದು ನಡೆದ ಕಜ್ಞಾಆ ದ  3ನೆಯ ಸಭೆಯಲ್ಲಿ ಈ  ಪ್ರಸ್ತಾವನೆಯು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಶೋಧನೆ / ಯೋಜನಾ ಅನುಭವವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂಬುದನ್ನು ಗಮನಿಸಿದರು ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮೊದಲ-ಹಂತದ ಅನುಭವವನ್ನು ಅವರಿಗೆ ತಿಳಿಸುವ ಮೂಲಕ - ವೀಕ್ಷಣೆ, ಕೌಶಲಗಳ ಕುರಿತ ಪರಿಣತಿ, ದತ್ತಾಂಶ  ಜೋಡಣೆ, ಮಾಹಿತಿ ವಿಶ್ಲೇಷಣೆ, ಸಲಕರಣೆ ನಿರ್ವಹಣೆ ಮತ್ತು ಮೂಲಭೂತ ವಿಶ್ಲೇಷಣೆ ಸಾಫ್ಟ್ವೇರ್ ಕೌಶಲ್ಯ ಮತ್ತು ವರದಿ ಬರವಣಿಗೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.. 

 
ಈ ಪ್ರಸ್ತಾವನೆಯು ಪರಿಸರೀಯ ಮೌಲ್ಯಮಾಪನ ಯೋಜನೆಗಾಗಿ ಎಂಪಿಇಎಸ್​ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಿದೆ ಮತ್ತು ಭೂಮಿ/ಜಲ/ವಾಯು ಗುಣಮಟ್ಟದಲ್ಲಿನ ಪರಿಸರ ಸಮಸ್ಯೆಗಳನ್ನು ವೀಕ್ಷಿಸಲು, ಉಪಕರಣಗಳೊಂದಿಗೆ ಮಾಲಿನ್ಯದ ಮಾಪನಗಳನ್ನು ಮಾಡಿ ದತ್ತಾಂಶ ರಚಿಸಲು ಮತ್ತು ವಿಶ್ಲೇಷಣೆಯನ್ನು ಕೈಗೊಳ್ಳಲು ಪದವಿ-ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಇಂತಹ ಒಂದು ಚಟುವಟಿಕೆ ವಿದ್ಯಾರ್ಥಿಗಳು "ಯೋಜನೆಗಳನ್ನು ಮಾಡುವುದರ" ಮೂಲಕ ಅನುಭವವನ್ನು ಒದಗಿಸುತ್ತವೆ ಮತ್ತು ಮೂಲಭೂತ ಮಟ್ಟದಲ್ಲಿ "ಸಂಶೋಧನೆ" ಮಾಡಲು ಅವರನ್ನು ಒಡ್ಡುತ್ತದೆ ಎಂದು ಎಂಪಿಇಎಸ್ ಪ್ರಸ್ತಾಪಿಸಿದರು.

 
೩ ವರ್ಷದ ಪವಿ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅಂತಿಮವಾಗಿ ವರದಿಗಳನ್ನು ಬರೆಯಲು ಮತ್ತು ಇಂತಹ ಪರಿಕಲ್ಪನೆಯನ್ನು ಪದವಿ ವಿದ್ಯಾರ್ಥಿಗಳಿಗೆ ನೀಡುವುದು. ಈ ಪ್ರಸ್ತಾವನೆಯ ಫಲಿತಾಂಶಗಳಾಗಿವೆ. ತಜ್ಞರ  ಸಮಿತಿಯ ವಿವರವಾದ ಮೌಲ್ಯಮಾಪನದ ನಂತರ, ಕಜ್ಞಾಆ ವು  2016 ರ ಜನವರಿಯಲ್ಲಿ ಎಂಪಿಇಎಸ್ಗೆ ಎರಡು ವರ್ಷಗಳ ಅವಧಿಗೆ ಯೋಜನೆಯನ್ನು ಮಂಜೂರು ಮಾಡಿದೆ. ಕಜ್ಞಾಆ ದ ಉಸ್ತುವಾರಿ ಮತ್ತು ಮಾರ್ಗದರ್ಶನ ಸಮಿತಿ (ಎಂಸಿಜಿ) ಯೋಜನೆಯನ್ನು ಕಾರ್ಯಗತಗೊಳಿಸಲು ಎಂಪಿಇಎಸ್ ತಂಡಕ್ಕೆ ಔಪಚಾರಿಕವಾಗಿ ಮಾರ್ಗದರ್ಶನ ನೀಡಲಿದೆ ಎಂಬ ನಿಯಮಾವಳಿಯನ್ನು ಹೊರಡಿಸಿದೆ ಹಾಗೂ ಎಂಸಿಜಿಯು ನಿಯಮಿತವಾಗಿ ಪ್ರಗತಿಯನ್ನು ಪರಿಶೀಲಿಸಿ ಮತ್ತು ನಿರೀಕ್ಷಿಸಲ್ಪಡುವ ವಿತರಣೆಗಳನ್ನು ಎಂಪಿಇಎಸ್ ಒದಗಿಸಬಹುದೆಂದು ಖಚಿತಪಡಿಸಿಕೊಳ್ಳಲಿದೆ. ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ​. 
ಉಸ್ತುವಾರಿ ಮತ್ತು ಮಾರ್ಗದರ್ಶನ ಸಮಿತಿಯು ಈ ಕೆಳಕಂಡ ತಜ್ಞರನ್ನು ಒಳಗೊಂಡಿದೆ:
 
1. ಡಾ. ಗಾಯತ್ರಿ ಸಬರ್ವಾಲ್, ಸದಸ್ಯರು, ಕ.ಜ್ಞಾ.ಆ                                                                      - ಸಹ ಅಧ್ಯಕ್ಷರು
2. ಪ್ರೊ. ಎಮ್. ಆರ್. ಸತ್ಯನಾರಾಯಣ ರಾವ್, ಸದಸ್ಯರು, ಕ.ಜ್ಞಾ.ಆ                                                   - ಸಹ ಅಧ್ಯಕ್ಷರು
3. ಪ್ರೊ. ಜಿ. ಪದ್ಮನಾಭನ್, ಸದಸ್ಯರು, ಕ.ಜ್ಞಾ.ಆ                                                                            - ಸದಸ್ಯರು​​
4. ಉನ್ನತ ಶಿಕ್ಷಣ ಇಲಾಖೆಯ ಪ್ರತಿನಿಧಿಗಳು                                                                                ​- ಸದಸ್ಯರು
5. ಶ್ರೀ. ಅಶೋಕ್ ಕುಮಾರ್ ಕೆ. ಎಸ್, ನಿರ್ವಹಣೆ/ಹಣಕಾಸು ಕಾರ್ಯನಿರ್ವಾಹಕರು, ಕ.ಜ್ಞಾ.ಆ                     - ಸದಸ್ಯರು
6. ಡಾ. ಶ್ರೀಕಾಂತ್ ಹೆಗ್ಡೆ, ಅಧ್ಯಕ್ಷರು​, ನಾಮನಿರ್ದೇಶಿತ ಪ್ರತಿನಿಧಿಗಳು, ಎಂಪಿಇ​ಸ್                                 - ಎಂಪಿಇಎಸ್‍ನ ಉಲ್ಲೇಖಿತ ವ್ಯಕ್ತಿ

 

ಯೋಜನೆಯು ಮುಂದುವರಿಯುತ್ತಿದ್ದುಎಂಸಿಜಿ​ ಅವರು ನಡೆಸಿದ ಆಗಸ್ಟ್ 26, 2016 ರಂದು ಯೋಜನೆಯ ಪ್ರಗತಿಯನ್ನು, ಜನವರಿ 25, 2017 ಮತ್ತು ಫೆಬ್ರವರಿ 28, 2017 ಸಭೆಗಳಲ್ಲಿ  ಆನ್-ಸೈಟ್ ಪರಿಶೀಲನೆಯನ್ನು ಮಾಡಲಾಗಿದೆ.​

 

.ಜ್ಞಾ.​ ಸೆಪ್ಟೆಂಬರ್ ೭, ೨೦೧೭ ರಂದು ನಡೆದ ತನ್ನನೇ ಸಭೆಯಲ್ಲಿ ಯೋಜನೆಯನ್ನು ಪರಾಮರ್ಶಿಸಿತು

 

ಎಂಪಿಇಎಸ್ ತನ್ನ ಅಂತಿಮ ಯೋಜನಾ ವರದಿಯನ್ನು ಕಜ್ಞಾಆಗೆ ಸಲ್ಲಿಸಿದೆ

​​

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆ ಇವರನ್ನು mukund.k.rao@gmail.com ಮೂಲಕ ಸಂಪರ್ಕಿಸಿ. ​