​​​​​
ಪುರಾತತ್ವ ಶಾಸ್ತ್ರದಲ್ಲಿ ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್‍ಐಎಎಸ್) ಪುರಾತತ್ವ ಶಾಸ್ತ್ರದಲ್ಲಿ ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಎಂಬ ಪ್ರಸ್ತಾವನೆಯನ್ನು ಕಜ್ಞಾಆಕ್ಕೆ ಸಲ್ಲಿಸಿತು. ಉಪಗ್ರಹ ಭೂಮಿಯ ವೀಕ್ಷಣಾ ಚಿತ್ರಣಗಳನ್ನು ಬಳಸುವುದರ ಮೂಲಕ ನಿರ್ಣಾಯಕ ಮತ್ತು ಮೌಲ್ಯಯುತವಾದ ಪುರಾತತ್ವದ ಮಾಹಿತಿಯನ್ನು ಪಡೆಯುವುದು ಮತ್ತು ಅಳೆಯುವುದು ಹಾಗೂ ದಾಖಲೀಕೃತವಾದ ಪುರಾತತ್ವಗಳ ಮಾಹಿತಿ (ಉತ್ಖನನಗಳ ವರದಿಗಳು, ಪ್ರಕಟಣೆಗಳು ಇತ್ಯಾದಿ)ಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆಯ ದತ್ತಾಂಶದೊಂದಿಗೆ ಆಯೋಜಿಸಿದರೆ, ಪುರಾತತ್ವ ಸ್ಥಳಗಳು ಮತ್ತು ಸಾಂಸ್ಕೃತಿಕ ಅಂಶಗಳ ಕುರಿತಾದ ತಿಳುವಳಿಕೆ ಮತ್ತು ಜ್ಞಾನವನ್ನು ಗಣನೀಯವಾಗಿ ವರ್ಧಿಸುತ್ತದೆ. ಈ ಯೋಜನೆಯು ಕೆಲವು ಪುರಾತತ್ವ ತಾಣಗಳಲ್ಲಿ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಪರಿಕಲ್ಪನೆಯ ಪುರಾವೆಯ ಹಂತದಲ್ಲಿದೆ. ಹೆಚ್ಚಿನ ದೃಢ ಚಿತ್ರಣವನ್ನು (0.5ಎಂ ವರೆಗೆ), ಬಹು-ರೋಹಿತ ಚಿತ್ರಣ, ಐತಿಹಾಸಿಕ ಚಿತ್ರಣ, ಕೋರೆ ದೃಢ ಚಿತ್ರಣ, 3ಡಿ ಚಿತ್ರಣ ಮತ್ತು ರೇಡಾರ್ ಚಿತ್ರಣಗಳನ್ನು ವಿಶ್ಲೇಷಿಸುವುದು ಈ ಸಂಶೋಧನಾ ಅಧ್ಯಯನದ ಪ್ರಸ್ತಾವನೆಯಾಗಿದೆ. ಈ ಎಲ್ಲಾ ಚಿತ್ರಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತದೆ ಮತ್ತು ಅಸಂಬದ್ಧ ಲಕ್ಷಣಗಳನ್ನು ಗುರುತಿಸಲಾಗುತ್ತದೆ. ಎಲ್ಲಾ ಪತ್ತೆಹಚ್ಚಬಹುದಾದ ವೈಶಿಷ್ಟ್ಯಗಳನ್ನು ಪ್ರತಿ ಚಿತ್ರದ ಕುರಿತು ಪ್ರತ್ಯೇಕವಾಗಿ ಅಧ್ಯಯನ ಮಾಡುವುದರ ಜೊತೆಗೆ ತಳಮಟ್ಟದ ವೀಕ್ಷಣೆಯ ಮೂಲಕವು ಸಹ ಅಭ್ಯಸಿಸಲಾಗುತ್ತದೆ. ಈ ಪ್ರಯತ್ನವು ಪುರಾತತ್ವ ವರದಿಗಳಲ್ಲಿ ಪಟ್ಟಿ ಮಾಡಲಾದ ಪುರಾತತ್ವ ಸ್ಮಾರಕಗಳು, ದಿಬ್ಬಗಳು ಮತ್ತು ರಚನೆಗಳ ನಿಖರವಾದ ಅಕ್ಷಾಂಶ/ರೇಖಾಂಶ ನಿರ್ದೇಶಾಂಕಗಳನ್ನು ಜಿಯೋಟ್ಯಾಗಿಂಗ್‍ನೊಂದಿಗೆ ನಿಯೋಜಿಸುವುದರೆಡೆಗೆ ಗಮನಹರಿಸುತ್ತದೆ. ಹೀಗೆ ರಚಿಸಿದ ಜಿಯೋಸ್ಪೇಶಿಯಲ್ ಸ್ತರವು ಮುಂದಿನ ಹಂತದಲ್ಲಿ ಸಂಯೋಜಿತಗೊಂಡು, ವಿಲೀನಗೊಂಡು, ಸೂಚಿತಗೊಂಡು ಮತ್ತು ದೈಶಿಕವಾಗಿ ವಿಶ್ಲೇಷಿಸಲ್ಪಡುತ್ತದೆ. ಭೂದೃಶ್ಯದ 3ಡಿ ವೀಕ್ಷಣೆಗಳನ್ನು ರಚಿಸಲು, ಫ್ಲೈ ಮೂಲಕ ಸಿಮ್ಯುಲೇಶನ್‍ಗಳನ್ನು ಸೃಷ್ಟಿಸಲು, ಪ್ರವಾಹಗಳ ನಮೂನೆಗಳನ್ನು ಅರ್ಥೈಸಿಕೊಳ್ಳಲು ಮತ್ತು 3ಡಿ ಪರಿಸರದಲ್ಲಿ ಬಹು-ಸ್ತರೀಯ ಭೌಗೋಳಿಕ ಮಾಹಿತಿ ವ್ಯವಸ್ಥೆಯ ದತ್ತಾಂಶಗಳನ್ನು ವಿಶ್ಲೇಷಿಸಲು ಡಿಜಿಟಲ್ ಎಲಿವೇಶನ್ ಮಾದರಿಯನ್ನು ಬಳಸಲಾಗುತ್ತದೆ. ಈ ಎಲ್ಲಾ ಜಿಯೋಸ್ಪೇಶಿಯಲ್ ಸ್ತರಗಳು ಒಂದು ಸ್ಥಳದ ಕುರಿತ ಅನನ್ಯವಾದ ಜ್ಞಾನಗಳಿಂದ ಸಂಯೋಜಿಸಲ್ಪಡುತ್ತದೆ ಮತ್ತು ಇವುಗಳನ್ನು ಮಾಪನ ಮಾಡುವುದರೊಂದಿಗೆ ನಿರ್ದಿಷ್ಟ ವಿಷಯಾಧಾರಿತ ನಕ್ಷೆಗಳನ್ನು ರಚಿಸಬಹುದಾಗಿದೆ. ಈ ಪ್ರಾಯೋಗಿಕ ಯೋಜನೆಯು 1 ವರ್ಷದಲ್ಲಿ ಪೂರ್ಣಗೊಳ್ಳುತ್ತದೆ.        

ಈ ಪ್ರಸ್ತಾವನೆಯು ಕಜ್ಞಾಆದ ತಾಂತ್ರಿಕ ಸಮಿತಿಯ ಸೆಪ್ಟಂಬರ್ 17, 2014ರ ಸಭೆಯಲ್ಲಿ ಚರ್ಚಿತವಾಗಿದೆ. ಕಜ್ಞಾಆ ತಾಂತ್ರಿಕ ಸಮಿತಿಯು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಮತ್ತು ಹೆಚ್ಚಿನ ಚರ್ಚೆಗೆ ವಿವಿರವಾದ ಪ್ರಸ್ತಾವನೆಯನ್ನು ಪಡೆಯಲು ಸಲಹೆ ಮಾಡಿದೆ. ಕಜ್ಞಾಆ, ಸೆಪ್ಟೆಂಬರ್ 22, 2014ರಂದು ನಡೆದ ತನ್ನ ಎರಡನೆಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿದೆ. ಅಧ್ಯಕ್ಷರು, ಕಜ್ಞಾಆರವರು ಈ ಪ್ರಸ್ತಾವನೆಯನ್ನು ಬಾಹ್ಯತಜ್ಞರ ಪರಿಶೀಲನೆಗಾಗಿ ಮತ್ತು ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ​ ಇಲಾಖೆಗೆ ಸಲಹೆಗಳಿಗಾಗಿ ಕಳುಹಿಸಲು ಸಲಹೆ ನೀಡಿದರು. 

ಮುಂದಿನ ಕ್ರಮಗಳು

  • ಸವಿವರವಾದ ಪ್ರಸ್ತಾವನೆ​ಯನ್ನು ಡಾ. ಆರ್. ಆರ್. ನವಲಗುಂದ ಮತ್ತು ಡಾ. ನರಸಿಂಹನ್ ಎಂಬ ಎರಡು ತಜ್ಞರಿಗೆ ಸಲಹೆಗಳಿಗಾಗಿ ಕಳುಹಿಸಲಾಗಿದೆ. ಇಬ್ಬರೂ ತಜ್ಞರು ಈ ಪ್ರಾಯೋಗಿಕ ಯೋಜನೆಗೆ ಕಜ್ಞಾಆ ಬೆಂಬಲ ಸೂಚಿಸಲು ಶಿಫಾರಸ್ಸು ಮಾಡಿದರು.
  • ಆಯುಕ್ತರು, ಕರ್ನಾಟಕ ಸರ್ಕಾರದ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇವರಿಗೆ ಈ ಪ್ರಾಯೋಗಿಕ ಯೋಜನೆಯ ಕುರಿತು ಪ್ರಸ್ತುತಿಯನ್ನು ನೀಡಲಾಗಿದೆ. ಯೋಜನೆಯಲ್ಲಡಗಿರುವ ನವೀನತೆಯನ್ನು ಪರಿಗಣಿಸಿ ಕರ್ನಾಟಕದ ಪ್ರಮುಖ ಪರಂಪರೆಯ ತಾಣಗಳನ್ನು ಗುರುತಿಸಲು, ತಂತ್ರಜ್ಞಾನದ ಹಸ್ತಕ್ಷೇಪದ ಅಗತ್ಯವಿರುವ ನಿಟ್ಟಿನಲ್ಲಿ, ಆಯುಕ್ತರು ಈ ಯೋಜನೆಗೆ ತಮ್ಮ ಬೆಂಬಲವನ್ನು ಸೂಚಿಸುವುದರ ಮುಖೇನ ಕಜ್ಞಾಆಕ್ಕೆ ಈ ಯೋಜನೆಯನ್ನು ಪರಿಗಣಿಸಲು ತಿಳಿಸಿದರು.  
  • ಕಾರ್ಯಪ್ರಗತಿಗಾಗಿ ಎನ್‍ಐಎಎಸ್‍ಗೆ ಅನುಮತಿ ಆದೇಶವನ್ನು ಹೊರಡಿಸಲಾಗಿದೆ. 


ಸವಿವರವಾದ ಯೋಜನಾ ವರದಿಗಾಗಿ ಇಲ್ಲಿ ಒತ್ತಿರಿ.
​​