​​​​​​​​

ಕಾವೇರಿ ನದಿ ಗ್ಯಾಲರಿ

ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮದ ಗೌರವಾನ್ವಿತ ಮಂತ್ರಿಗಳೊಂದಿಗೆ ನಡೆದ ವಿಸ್ತೃತ ಚರ್ಚೆಯಲ್ಲಿ, ಕಜ್ಞಾಆದ ಅಧ್ಯಕ್ಷರು,  ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ  (ಎನ್ಎಎಸ್ಐ) ಸ್ಥಾಪಿಸಿದ ಗಂಗಾ ಗ್ಯಾಲರಿ,  ಅಲಹಾಬಾದ್ ಮತ್ತು ಬ್ರಹ್ಮಪುತ್ರಾ ಗ್ಯಾಲರಿ,  ಅಸ್ಸಾಂ  ಬಗ್ಗೆ ಉಲ್ಲೇಖಿಸಿದರು. ಗೌರವಾನ್ವಿತ ಮಂತ್ರಿಗಳು ಇದೇ ಮಾದರಿಯಲ್ಲಿ ಕರ್ನಾಟಕದ ನದಿ ಕಾವೇರಿಗೆ ಗ್ಯಾಲರಿ ಸ್ಥಾಪಿಸಲು ತಮ್ಮ  ಆಸಕ್ತಿಯನ್ನು  ವ್ಯಕ್ತಪಡಿಸಿದರು. ಮಾನ್ಯ ಮಂತ್ರಿಗಳ  ಆಶಯದ ಮೇರೆಗೆ, ಕಜ್ಞಾಆದ ಅಧ್ಯಕ್ಷರು, ಗಂಗಾ ಮತ್ತು ಬ್ರಹ್ಮಪುತ್ರ ಗ್ಯಾಲರಿಗಳ ಸ್ಥಾಪನೆಗೆ ಕಾರಣವಾದ ಡಾ. ಮಂಜು ಶರ್ಮಾ, ಮಾಜಿ ಕಾರ್ಯದರ್ಶಿಗಳು, ಜೀವ ತಂತ್ರಜ್ಞಾನ ಇಲಾಖೆ ಮತ್ತು ಎನ್‍ಎಎಸ್‍ಐನ ಮಾಜಿ ಅಧ್ಯಕ್ಷರು ಇವರಿಗೆ ಗ್ಯಾಲರಿಯ ಕುರಿತ ಪರಿಕಲ್ಪನೆಯನ್ನು ಕಳುಹಿಸಲು ವಿನಂತಿಸಿಕೊಂಡರು. ಎನ್ಎಎಸ್ಐ ಕಳುಹಿಸಿದ ಪರಿಕಲ್ಪನೆಯು ಸೆಪ್ಟೆಂಬರ್ 22, 2014 ರಂದು ನಡೆದ 2ನೇ ಕಜ್ಞಾಆ ದ ಸಭೆಯಲ್ಲಿ ಚರ್ಚಿಸಿ ಅಂಗೀಕಾರಗೊಂಡಿತು. ಮುಂದಿನ  ಪ್ರಕ್ರಿಯೆಗಾಗಿ ಎನ್ಎಎಸ್ಐ ಯಿಂದ ವಿಸ್ತೃತ ಯೋಜನೆ ಪ್ರಸ್ತಾವನೆಯನ್ನು ನಿರೀಕ್ಷಿಸಲಾಯಿತು. ಎನ್ಎಎಸ್ಐ ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಮ್ಸ್ (ಎನ್‍ಸಿಎಸ್‍ಎಮ್) ಸಲ್ಲಿಸಿದ ಯೋಜನೆಯ ಪ್ರಸ್ತಾಪವನ್ನು 2014ರ ನವೆಂಬರ್ 29 ರಂದು ನಡೆದ ಸಭೆಯಲ್ಲಿ ಗೌರವಾನ್ವಿತ ಮಂತ್ರಿಗಳು ಅವಲೋಕಿಸಿದರು. ಗೌರವಾನ್ವಿತ ಸಚಿವರು ಯೋಜನೆಯನ್ನು ಅಂಗೀಕರಿಸಿದರು ಮತ್ತು ವಿವರವಾದ ಯೋಜನಾ ವರದಿಯನ್ನು ಪಡೆದುಕೊಳ್ಳುವಂತೆ ಕಜ್ಞಾಆಕ್ಕೆ ಮನವಿ ಮಾಡಿದರು. ವಿವರವಾದ ಯೋಜನಾ ವರದಿಯನ್ನು ಎನ್ಎಎಸ್ಐ ಮತ್ತು ಎನ್‍ಸಿಎಸ್‍ಎಮ್ ಇವರಿಂದ ಜಂಟಿಯಾಗಿ ಪಡೆದ ನಂತರ, ಕಜ್ಞಾಆವು ಕಾವೇರಿ ಗ್ಯಾಲರಿಯನ್ನು ಸ್ಥಾಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತು.

ಈ ಪ್ರಸ್ತಾವನೆಯು ಕಾವೇರಿ ನದಿಯ ಉಗಮ, ಪುರಾಣ ಮತ್ತು ದಂತಕಥೆಗಳು, ಭೌಗೋಳಿಕತೆ, ಉಪನದಿಗಳು, ಭೌಗೋಳಿಕ-ವೈಜ್ಞಾನಿಕ ಪ್ರಾಮುಖ್ಯತೆ, ಜಲಾನಯನ ಪ್ರದೇಶದ ಜೀವವೈವಿಧ್ಯ, ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆ, ಪ್ರವಾಸೋದ್ಯಮ, ಸಂಸ್ಕೃತಿ, ಮೇಳಗಳು ಮತ್ತು ಉತ್ಸವಗಳು, ನದಿಗೆ ಬಂದೊದಗುವ ಅಪಾಯಗಳು, ನದಿಸಂರಕ್ಷಣೆ ಮತ್ತು ಪುನಃಸ್ಥಾಪನೆ ಪ್ರಯತ್ನಗಳು ಮತ್ತು ಸಂಶೋಧನೆ ಮಾಹಿತಿಗಳನ್ನು ಒಳಗೊಂಡಿದೆ. ಈ ಎಲ್ಲಾ ಮಾಹಿತಿಗಳು  ಡ​ಯೋರಾಮಾ, ಅನಿಮೇಷನ್ಳು, ಬ್ಯಾಕ್ಲಿಟ್ ಗ್ರಾಫಿಕ್ ಪ್ರದರ್ಶನ, ಗ್ರಾಫಿಕ್ಸ್​ನೊಂದಿಗೆ ಆರ್ಫ್ಐಡಿ  ಆಧಾರಿತ ಸಂವಾದಾತ್ಮಕ  ಮೇರುಕೃತಿಗಳು, ಸಂವಾದಾತ್ಮಕ ನಕ್ಷೆಯ ಬ್ರೌಸರ್, ವೀಡಿಯೊ ಬೆಂಬಲಿತವಾದ ಫಲಕ ಪ್ರದರ್ಶನ ಮತ್ತು ಪರಸ್ಪರ ವರ್ಚುವಲ್ ಪ್ರವಾಸಗಳು ಬಹುಮಾಧ್ಯಮ ಸಂವಾದಾತ್ಮಕ ತಂತ್ರಾಂಶಗಳ ಮೂಲಕ ಪ್ರದರ್ಶಿತಗೊಳ್ಳುತ್ತದೆ.  ಎನ್ಎಎಸ್ಐಯು ತನ್ನ  ಕಾರ್ಯಯೋಜನೆಯ ಪ್ರಕಾರ ಗ್ಯಾಲರಿ ಸ್ಥಾಪನೆಗೆ ಸುಮಾರು ೯ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಮುಂದಿನ ಕ್ರಮಗಳು
  • ​ಕಜ್ಞಾಆವು  ಶ್ರೀ ಆರ್.ವಿ ದೇಶಪಾಂಡೆ, ಗೌರವಾನ್ವಿತ ಸಚಿವರು, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆ ಇವರಿಗೆ ಕಾವೇರಿ ನದಿಯ ಸಾರ್ವಜನಿಕ ಗ್ಯಾಲರಿ ಸ್ಥಾಪನೆಯ ಶಿಫಾರಸು  ಮತ್ತು ಯೋಜನಾ ವರದಿ​ಯನ್ನು  ಮಾರ್ಚ್ 2, 2015 ರಂದು ಔಪಚಾರಿಕವಾಗಿ ಸಲ್ಲಿಸಿತು.
  • ಕರ್ನಾಟಕ ಸರ್ಕಾರವು ಕಜ್ಞಾಆದ ಶಿಫಾರಸ್ಸನ್ನು  ಅಂಗೀಕರಿಸಿ, 2015-2016ರ ರಾಜ್ಯದ ಮುಂಗಡಪತ್ರದಲ್ಲಿ ಇದರ ಅನುಷ್ಠಾನವನ್ನು ಘೋಷಿಸಿದೆ.
  • ​ಗೌರವಾನ್ವಿತ ಸಚಿವರಾದ ಶ್ರೀ  ಆರ್.ವಿ ದೇಶಪಾಂಡೆ ಅವರು,  ಡಾ. ಕೆ. ಕಸ್ತೂರಿರಂಗನ್, ಡಾ. ಮಂಜು ಶರ್ಮಾ ಮತ್ತು ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಏಪ್ರಿಲ್ 10, 2015 ರಂದು ಕಾವೇರಿ ಗ್ಯಾಲರಿ ಸ್ಥಾಪನೆಯ ಮುಂದಿನ ಯೋಜನೆಯ ಬಗ್ಗೆ ವಿಮರ್ಷಣಾ ಸಭೆಯನ್ನು ನಡೆಸಿದರು.
  • ಕಜ್ಞಾಆ, ಉನ್ನತ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯು ಏಪ್ರಿಲ್ 16, 2015 ರಂದು  ಮೈಸೂರಿಗೆ ಭೇಟಿ ನೀಡಿ ಗ್ಯಾಲರಿ ಸ್ಥಾಪನೆಗೆ ಸ್ಥಳವನ್ನು ಗುರುತಿಸಿದರು. 
  • ಕಜ್ಞಾಆ, ಎನ್ಎಎಸ್ಐ  ಮತ್ತು ಎನ್ಸಿಎಸ್ಎಮ್ ರವರು  ಏಪ್ರಿಲ್ 17, 2015 ರಂದು ಮೈಸೂರಿಗೆ ಭೇಟಿ ನೀಡಿ ಕಾವೇರಿ ಗ್ಯಾಲರಿ ಸ್ಥಾಪನೆಗೆ ರಾಜ್ಯ ಪುರಾತತ್ತ್ವ ಇಲಾಖೆಯಲ್ಲಿ  ಸ್ಥಳವನ್ನು ಗುರುತಿಸಿದರು. 
ಬಜೆಟ್ ಹಂಚಿಕೆ

ಗೌರವಾನ್ವಿತ ಮುಖ್ಯಮಂತ್ರಿಗಳು  ಕಾವೇರಿ ಗ್ಯಾಲರಿ ಅನುಷ್ಠಾನಕ್ಕಾಗಿ ಹಣಕಾಸು ವರ್ಷ 2015-2016ರಲ್ಲಿ ನಿಧಿಯನ್ನು ಹಂಚಿಕೆ ಮಾಡಿದ್ದಾರೆ.