​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಕರ್ನಾಟಕ ಕೌಶಲ್ಯಭಿವೃದ್ಧಿ ಯೋಜನೆಯ ಕಜ್ಞಾಆ ಕಾರ್ಯತಂಡ

ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಅಗತ್ಯವಿರುವ ಪ್ರಯತ್ನಗಳು ಮತ್ತು ಶಿಕ್ಷಣ, ಯುವಕರ ಸ್ವ-ಉದ್ಯೋಗ, ವೃತ್ತಿಪರರು ಮತ್ತು ಸೇವೆಸಲ್ಲಿಸುತ್ತಿರುವ ಸಿಬ್ಬಂದಿಗಳ ಒಳಗೊಳ್ಳುವಿಕೆಯೆಡೆಗೆ ಗಮನನೀಡುವ ನಿಟ್ಟಿನಲ್ಲಿ ಕರ್ನಾಟಕ ಸಮಗ್ರ ಕೌಶಲ್ಯ ಅಭಿವೃದ್ಧಿ ಯೋಜನೆಯ ಕುರಿತು ಸೆಪ್ಪೆಂಬರ್ 22, 2014ರಂದು ನಡೆದ ಕಜ್ಞಾಆ ತನ್ನ ಎರಡನೆಯ ಸಭೆಯಲ್ಲಿ ಚರ್ಚಿಸಿತು. ಅರ್ಥವ್ಯವಸ್ಥೆಯ ನಿರಂತರ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗಳಿಗೆ, ಜ್ಞಾನ ಮತ್ತು ಕೌಶಲ್ಯ ಇವೆರೆಡು ಚಾಲನಾ ಶಕ್ತಿಗಳಾಗಿವೆ. ಭವಿಷ್ಯದ ಸವಾಲುಗಳು ಮತ್ತು ರಾಜ್ಯಕ್ಕೆ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ತರುವಲ್ಲಿ ಅವಕಾಶಗಳನ್ನು ಪರಿಣಾಮಕಾರಿಯಾಗಿ ಮತ್ತು ನಿರಂತರವಾಗಿ ಅಳವಡಿಸಿಕೊಳ್ಳಲು, ಕರ್ನಾಟಕವು ಉನ್ನತ ಮತ್ತು ಉತ್ತಮ ಮಟ್ಟದ ಕೌಶಲ್ಯಗಳನ್ನು ಸಿದ್ಧಪಡಿಸಬೇಕಾಗಿದೆ. 

ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯತಂತ್ರವು ಪ್ರಾಥಮಿಕ, ದ್ವಿತೀಯ ಮತ್ತು ಉನ್ನತ ಶಿಕ್ಷಣ ಹಾಗೂ ವೃತ್ತಿಪರ/ಪೂರಕ ಕೌಶಲ್ಯ ಅಭಿವೃದ್ಧಿಗಳಲ್ಲಿ ನಾವೀನ್ಯತೆಗಳನ್ನು ತರುವ ನಿಟ್ಟಿನಲ್ಲಿ, ಮೂಲಭೂತ ಶಿಕ್ಷಣ ಸುಧಾರಣೆಗಳ ಅಗತ್ಯವನ್ನು ಕಜ್ಞಾಆ ಗುರುತಿಸಿದೆ. ಕರ್ನಾಟಕ ಸರ್ಕಾರದ ಪ್ರಧಾನ ಪಾತ್ರ, ಖಾಸಗಿ ಕ್ಷೇತ್ರದ ಪಾತ್ರ, ಫಲಿತಾಂಶಗಳನ್ನು ಸೂಸುವ ಉನ್ನತ ಮಟ್ಟದ ಮಾದರಿಗಳ ಗುರಿಯನ್ನು ಹೊಂದಿರುವ ಲಾಭರಹಿತ ಮತ್ತು ಲಾಭಸಹಿತ ಉದ್ದೇಶದ ಉಪಕ್ರಮಗಳನ್ನು ಹೊರತುಪಡಿಸಿ, ಇನ್ನಿತರವುಗಳು ಸಹ ಕಜ್ಞಾಆದ ಕೌಶಲ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿರಬೇಕೆಂದು ಚರ್ಚಿಸಲಾಯಿತು. 

ಸಮಗ್ರ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕೆಂದು ಮತ್ತು ಕೌಶಲ್ಯ, ವೃತ್ತಿಪರ ಮತ್ತು ಶಿಕ್ಷಣ ತಜ್ಞರುಗಳು ಹಾಗೂ ಜ್ಞಾನ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ಕಾರ್ಯತಂಡವನ್ನು ಕಜ್ಞಾಆ ರಚಿಸಲು ನಿರ್ಧರಿಸಿದೆ. 

ಈ ಕಾರ್ಯತಂಡವು ಶ್ರೀ ಮನೀಷ್ ಸಭರ್ವಾಲ್ ಮತ್ತು ಶ್ರೀ ಮೋಹನದಾಸ್ ಪೈರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. 

ರಾಜ್ಯದ ಭವಿಷ್ಯದಲ್ಲಿ ಅಗತ್ಯವಿರುವ ಕೌಶಲ್ಯಗಳ ಮೌಲ್ಯಮಾಪನ ಮತ್ತು ಪ್ರಸಕ್ತ ರಾಜ್ಯ ಕೌಶಲ್ಯ ಅಭಿವೃದ್ಧಿಯ ಚಟುವಟಿಕೆಗಳು ಮತ್ತು ಅಂತರ/ಸವಾಲುಗಳನ್ನು ಒಳಗೊಂಡಂತೆ ಸಮಗ್ರವಾದ "ಕರ್ನಾಟಕ ಕೌಶಲ್ಯಾಭಿವೃದ್ಧಿ ಯೋಜನೆ"ಯನ್ನು ರೂಪಿಸುವುದು/ಅಭಿವೃದ್ಧಿಪಡಿಸುವುದು ಈ ಕಾರ್ಯತಂಡದ ಪ್ರಮುಖ ಉದ್ದೇಶವಾಗಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಯು ಭವಿಷ್ಯಾಧಾರಿತವಾದ ಜ್ಞಾನ, ನಾವೀನ್ಯತೆ ಮತ್ತು ರಚಾನಾತ್ಮಕ ಸಾಂಸ್ಥಿಕ ಚೌಕಟ್ಟನ್ನು ನಿರ್ಮಿಸಿ, ಈ ಯೋಜನೆಯ ಅನುಷ್ಠಾನಕ್ಕಾಗಿ ಕೌಶಲ್ಯ ಮಾರ್ಗಸೂಚಿಯನ್ನು ರೂಪಿಸುತ್ತದೆ. ಈ ಕಾರ್ಯತಂಡವು ರಾಜ್ಯದ ಉದ್ದಗಲಕ್ಕೂ ವ್ಯಾಪಕವಾದ ಸಮಾಲೋಚನೆಗಳನ್ನು ಕೈಗೊಳ್ಳುತ್ತದೆ ಮತ್ತು ತಜ್ಞರನ್ನೊಳಗೊಂಡ ಕಾರ್ಯಾಗಾರಗಳನ್ನು ಸಂಘಟಿಸುತ್ತದೆ ಮತ್ತು ಕೌಶಲ್ಯ ಅಭಿವೃದ್ಧಿಯ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅಭ್ಯಸಿಸುತ್ತದೆ. ಕಾರ್ಯತಂಡವು 6 ತಿಂಗಳ ಅವಧಿಯೊಳಗೆ ತನ್ನ ವರದಿಯನ್ನು ಕಜ್ಞಾಆಗೆ ಸಲ್ಲಿಸುತ್ತದೆ. ಕಜ್ಞಾಆದ ಸಮ್ಮತಿಯ ಮೇರೆಗೆ, ಈ ಶಿಫಾರಸ್ಸನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ.​     

ಈ ಕಾರ್ಯತಂಡವು ಈ ಕೆಳಗಿನ ಸದಸ್ಯರುಗಳನ್ನೊಳಗೊಂಡಿದೆ:

1

ಶ್ರೀ ಮನೀಶ್ ಸಭಾರ್ವಾಲ್, ಅಧ್ಯಕ್ಷರು, ಟೀಮ್ ಲೀಸ್ ಸೇವೆಗಳುಬೆಂಗಳೂರು


ಸಹ-ಅಧ್ಯಕ್ಷರು
2ಶ್ರೀ ಟಿ. ವಿ. ಮೋಹನ್ ದಾಸ್ ಪೈ, ಸದಸ್ಯರು, .ಜ್ಞಾ.             
ಸಹ-ಅಧ್ಯಕ್ಷರು
3ಡಾ. ಶುಕ್ಲಾ ಬೋಸ್, ಸ್ಥಾಪಕರು, ಪರಿಕ್ರಮಾ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು
ಸದಸ್ಯರು
4ಪ್ರೊ. ಸನ್ನಿ ತರಪ್ಪನ್, ಸದಸ್ಯರು, .ಜ್ಞಾ.
ಸದಸ್ಯರು
5ಶ್ರೀ ದಿಲೀಪ್ ಶೆನಾಯ್, ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮ,  ನವದೆಹಲಿ
ಸದಸ್ಯರು
6ಶ್ರೀ ಬಾಲಚಂದರ್ ನಟರಾಜನ್, ಗ್ರೂಪ್ ಹೆಡ್, ಕೆಫೆ ಕಾಫಿಡೇ
ಸದಸ್ಯರು
7ಶ್ರೀ ಜಾನ್ ಜಾಟ್ಸ್, ಸಿ.., ಮಣಿಪಾಲ್ ಸಿಟಿ & ಗಿಲ್ಡ್ಸ್ ಪ್ರೈವೇಟ್ ಲಿಮಿಟೆಡ್ 
ಸದಸ್ಯರು
8ಶ್ರೀ ರಾಜ್ ನಾರಾಯಣ್, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಗಳು, ಟೈಟಾನ್  ಕಂಪನಿ              
ಸದಸ್ಯರು
9ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
10ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ
ಸದಸ್ಯರು
11ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ            
ಸದಸ್ಯರು
​12ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ​- ಸದಸ್ಯರು
​13ಶ್ರೀಮತಿ ನೀತಿ ಶರ್ಮಾ, ಉಪಾಧ್ಯಕ್ಷರು, ಟೀಮ್ ಲೀಸ್ ಸರ್ವಿಸಸ್ ಪ್ರೈವೇಟ್  ಲಿಮಿಟೆಡ್​- ಸದಸ್ಯ ಕಾರ್ಯದರ್ಶಿಗಳು
​14ಡಾ. ಪದ್ಮಾವತಿ ಬಿ.ಎಸ್, ಹಿರಿಯ ಸಂಶೋಧನಾ ಸಹಾಯಕರು, .ಜ್ಞಾ.  ​- ಸಂಚಾಲಕರು​ 

ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ​ ಮುಖೇನ ಮತ್ತು/ಅಥವಾ ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು neeti@teamlease.com ಮುಖೇನ ಸಂಪರ್ಕಿಸಬಹುದಾಗಿದೆ.