​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಕರ್ನಾಟಕ ಕ್ರೀಡಾನೀತಿ ಅಭಿವೃದ್ಧಿಯ ಕಜ್ಞಾಆ ಕಾರ್ಯತಂಡ

ಸೆಪ್ಟೆಂಬರ್ 22, 2014ರಂದು ನಡೆದ ಕಜ್ಞಾಆದ ಎರಡನೆಯ ಸಭೆಯಲ್ಲಿ, ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ವಿವಿಧ ರೀತಿಯ ಕ್ರೀಡೆಗಳು, ಯುವಕರಲ್ಲಿ ಮತ್ತು ಮಕ್ಕಳಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ಮತ್ತು ಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರವಹಿಸಿದೆ. ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ "ಕ್ರೀಡಾ ಸಂಸ್ಕೃತಿ"ಯನ್ನು ಅಳವಡಿಸಿಕೊಳ್ಳಬೇಕು ಮತ್ತು ಅಭಿವೃದ್ಧಿಪಡಿಸಬೇಕು.  ಕ್ರೀಡೆಗಳು ಶಾಲೆಗಳಲ್ಲಿ ಉತ್ತೇಜಿತಗೊಳ್ಳಬೇಕು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರೋತ್ಸಾಹಿತಗೊಳ್ಳಬೇಕು ಹಾಗೂ ಸಾಮಾನ್ಯ ನಾಗರಿಕರು/ಸಮಾಜದ ಮಟ್ಟದಲ್ಲಿ ಕ್ರೀಡಾ ಸಂಸ್ಕೃತಿಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸಬೇಕು ಮತ್ತು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಸಹಕಾರಿಯಾಗಬೇಕು. ಇಂತಹ ಕ್ರೀಡಾ ಚಾಲನೆಗಳಿಗೆ ಶಾಲೆಗಳು, ವಿಶ್ವವಿದ್ಯಾನಿಲಯಗಳು/ಕಾಲೇಜುಗಳು ಮತ್ತು ಸಮುದಾಯ ಮಟ್ಟಗಳಲ್ಲಿ ಉತ್ತಮ ಕ್ರೀಡಾ ಸೌಕರ್ಯಗಳ ಅಗತ್ಯವಿದೆ. ರಾಜ್ಯಮಟ್ಟದ (ಮತ್ತು ರಾಷ್ಟ್ರೀಯ ಮಟ್ಟದ) ಕ್ರೀಡಾ ಸ್ಪರ್ಧೆಗಳ ಹೊರತಾಗಿ, ನಾಗರಿಕರ ಒಟ್ಟಾರೆ ಭಾಗವಹಿಸುವಿಕೆಗಾಗಿ ಮತ್ತು ಯುವಕರಲ್ಲಿ ಸ್ಪರ್ಧಾತ್ಮಕ ಹುರಪನ್ನು ಹುಟ್ಟುಹಾಕುವ ಮೂಲಕ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಉತ್ಸುಕರಾಗುವಂತೆ ಮಾಡುವ ನಿಟ್ಟಿನಲ್ಲಿ ಸಮುದಾಯ ಮತ್ತು ಪಂಚಾಯತ್/ಜಿಲ್ಲಾ ಮಟ್ಟದಲ್ಲಿ ವಿಕೇಂದ್ರಿಕೃತವಾದ ಕ್ರೀಡಾ ಸ್ಪರ್ಧೆಗಳನ್ನು ಪ್ರೋತ್ಸಾಹಿಸಬೇಕು. ತರಬೇತಿ ಮತ್ತು ಕ್ರೀಡಾ ಬೋಧನಾ ವಿಭಾಗವು ವಿವಿಧ ಮಟ್ಟದಲ್ಲಿ ತರಬೇತಿಯನ್ನು ನೀಡಲು ನುರಿತ ತಜ್ಞರನ್ನು ಒಳಗೊಳ್ಳಬೇಕು. 

ಒಟ್ಟು ಕ್ರೀಡೆಯ ಅಭಿವೃದ್ಧಿಗಾಗಿ ಹೊಸ ಕೋರ್ಸ್‍ಗಳ ಪಟ್ಟಿ ಮತ್ತು ರಾಜ್ಯದಲ್ಲಿ ಪ್ರಾಯೋಗಿಕ ಕ್ರೀಡಾ ಪರಿಸರದ ವ್ಯವಸ್ಥೆಯನ್ನು ಸ್ಥಾಪಿಸಲು, ಕಜ್ಞಾಆವು ಕರ್ನಾಟಕದ ಸಮಗ್ರ ಕ್ರೀಡಾ ನೀತಿಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರೂಪುರೇಖಿತವಾದ ರಾಜ್ಯ ಯುವನೀತಿಯು, ಕ್ರೀಡಾ ನೀತಿಯ ಪರಿಕಲ್ಪನೆಯ ಕುರಿತು ಒತ್ತುನೀಡಿದೆ. ಕಜ್ಞಾಆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೊಂದಿಗೆ ಜೊತೆಗೂಡಿ, ಕ್ರೀಡಾ ತಜ್ಞರು ಮತ್ತು ಕ್ರೀಡೆಗಳಲ್ಲಿನ ಜ್ಞಾನ ವ್ಯಕ್ತಿಗಳನ್ನು ಒಗ್ಗೂಡಿಸಿ, ದೂರದೃಷ್ಟಿಯುಳ್ಳ ಕ್ರೀಡಾನೀತಿಯನ್ನು ತರಲು ಕಾರ್ಯತಂಡವನ್ನು ರಚಿಸಿತು.      

ಈ ಕಾರ್ಯತಂಡವು ಕಜ್ಞಾಆದ ಸದಸ್ಯರುಗಳಾದ ಶ್ರೀ ಪ್ರಕಾಶ್ ಪಡುಕೋಣೆ, ಶ್ರೀ ರಾಹುಲ್ ದ್ರಾವಿಡ್ ಮತ್ತು ಡಾ. ನಾಗಲಾಂಬಿಕಾ ದೇವಿ, ಪ್ರಧಾನ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಇವರುಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. 

ಕರ್ನಾಟಕದ ಕ್ರೀಡಾಭಿವೃದ್ಧಿಗೆ ಒಂದು ದೃಷ್ಟಿಕೋನವನ್ನು ವ್ಯಾಖ್ಯಾನಿಸುವುದಲ್ಲದೆ, ಕರ್ನಾಟಕವು ಭವಿಷ್ಯದಲ್ಲಿ ಒಂದು ಕ್ರೀಡೆಗಳ ಗಮ್ಯಸ್ಥಾನವನ್ನಾಗಿ ಪರಿಣಮಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೊಳಗೊಂಡ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಈ ಕಾರ್ಯತಂಡದ ಪ್ರಮುಖ ಉದ್ದೇಶವಾಗಿದೆ. ಕಾರ್ಯತಂಡವು ರಾಜ್ಯವ್ಯಾಪಿ ಸಮಾಲೋಚನೆಯನ್ನು ಕೈಗೊಳ್ಳುವುದಲ್ಲದೆ, 6 ತಿಂಗಳ ಅವಧಿಯಲ್ಲಿ ಕ್ರೀಡಾ ನೀತಿಯನ್ನು ಕಜ್ಞಾಆಗೆ ಸಲ್ಲಿಸುತ್ತದೆ. ತದನಂತರ ಕಜ್ಞಾಆದ ಸಮ್ಮತಿಯ ಮೇರೆಗೆ, ಈ ಶಿಫಾರಸ್ಸನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುವುದು.  ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ.     

ಈ ಕಾರ್ಯತಂಡವು ಈ ಕೆಳಗಿನ ಸದಸ್ಯರುಗಳನ್ನೊಳಗೊಂಡಿದೆ:

​1

ಶ್ರೀ
. ಪ್ರಕಾಶ್ ಪಡುಕೋಣೆ, ಸದಸ್ಯರು .ಜ್ಞಾ.

-ಪ-ಅಧ್ಯಕ್ಷರು
2ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆ
ಉಪ-ಅಧ್ಯಕ್ಷರು
3ಶ್ರೀ ರಾಹುಲ್ ಶರದ್ ದ್ರಾವಿಡ್, ಸದಸ್ಯರು .ಜ್ಞಾ.
ಉಪ-ಅಧ್ಯಕ್ಷರು
4ಡಾ. ಮೋಹನ್ ಆಳ್ವ, ಸದಸ್ಯರು .ಜ್ಞಾ.
ಸದಸ್ಯರು
5ಡಾ. ಶುಕ್ಲಾ ಬೋಸ್, ಸ್ಥಾಪಕರು, ಪರಿಕ್ರಮಾ ಹ್ಯುಮಾನಿಟಿ ಫೌಂಡೇಶನ್ಬೆಂಗಳೂರು
ಸದಸ್ಯರು
6ಶ್ರೀಮತಿ ಅಶ್ವಿನಿ ನಾಚಪ್ಪ, ಇಂಟರ್ನ್ಯಾಷನಲ್ ಅಥ್ಲೀಟ್
ಸದಸ್ಯರು
7ಶ್ರೀ . ಬಿ. ಸುಬ್ಬಯ್ಯ, ಪ್ರಖ್ಯಾತ ಹಾಕಿ ಆಟಗಾರರು
ಸದಸ್ಯರು
8ಶ್ರೀ ಹಕಿಮುದ್ದೀನ್ ಎಸ್ ಹಬೀಬುಲ್ಲಾ, ಪ್ರಖ್ಯಾತ ಈಜುಗಾರರು
ಸದಸ್ಯರು
9ಶ್ರೀಮತಿ ರೀತ್ ಅಬ್ರಹಾಂ, ಜಂಟಿ ಸಂಚಾಲಕರು, ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ 
ಸದಸ್ಯರು
10ನಿರ್ದೇಶಕರು, ಎಸ್..ದಕ್ಷಿಣ ವಲಯ, ಬೆಂಗಳೂರು
ಸದಸ್ಯರು
11ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ಬೆಂಗಳೂರು
ಸದಸ್ಯರು
12ಶ್ರೀ ರೋಷನ್ ಗೋಪಾಲಕೃಷ್ಣ, ಕ್ರೀಡಾ ವಕೀಲರು, ಬೆಂಗಳೂರು
ಸದಸ್ಯರು
13ಡಾ. ಯು. ವಿ. ಶಂಕರ್ ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
ಸದಸ್ಯರುr​
14ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
15ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಸದಸ್ಯರು
​16ಶ್ರೀ ನಂದನ ಕಾಮತ್, ವ್ಯವಸ್ಥಾಪಕ ಟ್ರಸ್ಟಿ, ಗೋ ಸ್ಪೋರ್ಟ್ಸ್ ಫೌಂಡೇಶನ್, ಬೆಂಗಳೂರು
​- ಸದಸ್ಯ-ಕಾರ್ಯದರ್ಶಿಗಳು
​17ಡಾ. ಪದ್ಮಾವತಿ ಬಿ.ಎಸ್, ಹಿರಿಯ ಸಂಶೋಧನಾ ಸಹಾಯಕರು, .ಜ್ಞಾ.
​- ಸಂಚಾಲಕರು


ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು​ mukund.k.rao@gmail.com ಮುಖೇನ ಮತ್ತು/ಅಥವಾ ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು nandankamath@gmail.com ಮುಖೇನ ಸಂಪರ್ಕಿಸಬಹುದಾಗಿದೆ. 


​​