​​​​​​​​​​​​​​​​​​​​​​

ಕಜ್ಞಾಆ – ತಾಂತ್ರಿಕ ಸಮಿತಿ

ಕರ್ನಾಟಕ ಜ್ಞಾನ ಆಯೋಗವು ರಾಜ್ಯದ ಪ್ರಸ್ತುತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವಂತಹ ಹೊಸ ಕಲ್ಪನೆ ಮತ್ತು ಪರಿಕಲ್ಪನೆಗಳನ್ನು; ತಂತ್ರಜ್ಞಾನ, ನೀತಿ ವಿಶ್ಲೇಷಣೆ ಮತ್ತು ಸಂಶೋಧನೆ ಸಂಬಂಧಿತ ನವೀನ ಪ್ರಸ್ತಾವನೆಗಳನ್ನು ಹಾಗೂ ಆಳವಾದ ಚರ್ಚೆಗಳನ್ನು ಪರಿಗಣಿಸುತ್ತದೆ. ಕೈಗಾರಿಕೆಗಳು, ಶಿಕ್ಷಣ, ನಾಗರೀಕರು, ವಿವಿಧ ಹಂತಗಳಲ್ಲಿ ಸರ್ಕಾರಿ ಇಲಾಖೆಗಳಾದ್ಯಂತ ಕ್ಷಿಪ್ರವಾದ ದಾರಿಯಲ್ಲಿ ಸಮಗ್ರ ಚರ್ಚೆ ಹಾಗೂ ಸಮಾಲೋಚನೆಗಳನ್ನೂ ಸಹ ಕರ್ನಾಟಕ ಜ್ಞಾನ ಆಯೋಗವು ಕೈಗೊಳ್ಳುತ್ತದೆ. ನೆಟ್ವರ್ಕಿಂಗ್, ಸಮಾಲೋಚನೆ ಹಾಗೂ ಚರ್ಚೆಗಳಂತಹ ವ್ಯಾಪಕ ಪ್ರಕ್ರಿಯೆಗಳ ಮುಖಾಂತರ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಅಧ್ಯಯನಗಳು/ಯೋಜನೆಗಳು/ಮೌಲ್ಯಮಾಪನಗಳು/ಇತರೆಗಳನ್ನು ಉತ್ತೇಜಿಸಿ, ವಿನ್ಯಾಸಗೊಳಿಸಿ ಹಾಗೂ ಶಿಫಾರಸ್ಸು ಮಾಡಿ, ಆ ಮೂಲಕ ಜ್ಞಾನ ಮತ್ತು ಪರಿಣತಿಯನ್ನು ರಾಜ್ಯದ ಅಭಿವೃದ್ಧಿಗೆ ಉಪಯೋಗಿಸಲು ಜ್ಞಾನ ಆಯೋಗಕ್ಕೆ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ, ಜ್ಞಾನ ಆಯೋಗವು ಹಲವಾರು ನವೀನ, ಜ್ಞಾನದ ಕಲ್ಪನೆಗಳಿಗೆ ವೇಗವರ್ಧಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಆಯೋಗದ ಪ್ರಸ್ತಾವನೆ/ಯೋಜನೆ/ಶಿಫಾರಸ್ಸುಗಳ ಮೂಲಕ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಲು ಕೈಗೆತ್ತಿಕೊಳ್ಳಬಹುದಾದಂತಹ ನಿರ್ದಿಷ್ಟ ಕ್ರಮಗಳನ್ನು ಗುರುತಿಸುತ್ತದೆ. 

ಕರ್ನಾಟಕ ಜ್ಞಾನ ಆಯೋಗವು ತನ್ನ ಸದಸ್ಯರಿಂದ ಸ್ವೀಕರಿಸಲ್ಪಟ್ಟ ಅಥವಾ ಆಯೋಗದ ಚರ್ಚೆಗಳಿಂದ ಸೃಜಿಸಲ್ಪಟ್ಟ ಅಥವಾ ಸರ್ಕಾರದ ವಿವಿಧ ಇಲಾಖೆಗಳು ತಿಳಿಸಿದ ಅವಶ್ಯಕತೆಗಳಿಂದ ಅಥವಾ ಆಯೋಗವು ತನ್ನ ಉದ್ದೇಶವನ್ನು ಪೂರ್ಣಗೊಳಿಸಲು ತನ್ನ ಸ್ವಂತಿಕೆಯ ಮೇರೆಗೆ ಪಡೆದ ಪ್ರಸ್ತಾವನೆಗಳನ್ನು ಪರಿಗಣಿಸಬೇಕಾಗಿದೆ. ಪ್ರತಿ ಪ್ರಸ್ತಾವನೆಯನ್ನು ತಾಂತ್ರಿಕ ಅರ್ಹತೆ, ಜ್ಞಾನದ ಪ್ರಸ್ತುತತೆ, ನಾವೀನ್ಯತೆ ಮತ್ತು ಪ್ರಮುಖವಾಗಿ ರಾಜ್ಯಕ್ಕೆ ಜ್ಞಾನ ಆಯೋಗದ ಪ್ರಯತ್ನಗಳಿಂದ ದೊರಕಬಹುದಾದ ಅಲ್ಪಾವಧಿ ಪ್ರಯೋಜನಗಳು ಹಾಗೂ ಸರ್ಕಾರದ ಅನುಷ್ಠಾನದಿಂದ ಮತ್ತು ಇತರ ಕಾರ್ಯವಿಧಾನಗಳಿಂದ ದೊರಕಬಹುದಾದ ದೀರ್ಘಾವಧಿ ಪ್ರಯೋಜನಗಳ ಆಧಾರದ ಮೇಲೆ ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ. 

ಪ್ರಸ್ತಾವನೆಗಳ ತಾಂತ್ರಿಕ ಮೌಲ್ಯಮಾಪನವನ್ನು ನಡೆಸಲು ಜ್ಞಾನ ಆಯೋಗವು ಕರ್ನಾಟಕ ಜ್ಞಾನ ಆಯೋಗ-ತಾಂತ್ರಿಕ ಸಮಿತಿಯನ್ನು ಪ್ರೊ. ಸಡಗೋಪನ್ ರವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 8, 2014 ರಂದು ರಚಿಸಿತು. ಕರ್ನಾಟಕ ಜ್ಞಾನ ಆಯೋಗವು ಸೆಪ್ಟೆಂಬರ್ 7, 2017 ರಂದು ನಡೆದ ತನ್ನ 7ನೇ ಸಭೆಯಲ್ಲಿ ಪ್ರೊ. ಸಡಗೋಪನ್ ರವರ ಅಧ್ಯಕ್ಷತೆಯ ಕರ್ನಾಟಕ ಜ್ಞಾನ ಆಯೋಗ-ತಾಂತ್ರಿಕ ಸಮಿತಿಯನ್ನು ಆಯೋಗದ ನವೀಕೃತ ಅವಧಿಯಲ್ಲಿ ಕಾರ್ಯವನ್ನು ಮುಂದುವರೆಸಲು ಅನುಮೋದನೆಯನ್ನು ನೀಡಿತು. ಕರ್ನಾಟಕ ಜ್ಞಾನ ಆಯೋಗ-ತಾಂತ್ರಿಕ ಸಮಿತಿಯು ಆಯೋಗದ ಪರವಾಗಿ ಎಲ್ಲಾ ಪ್ರಸ್ತಾವನೆಗಳನ್ನು ಪರಿಗಣಿಸಲು ಹಾಗೂ ತಾಂತ್ರಿಕ/ಆರ್ಥಿಕ ಅನುಮೋದನೆಗಳನ್ನು ಶಿಫಾರಸ್ಸು ಮಾಡಲು ಅಥವಾ ಮುಂದಿನ ಕ್ರಮಕ್ಕಾಗಿ ಯಾವುದೇ ಶಿಫಾರಸ್ಸುಗಳನ್ನು  ಮಾಡುವ ಅಧಿಕಾರವನ್ನು ಹೊಂದಿದೆ. ಕರ್ನಾಟಕ ಜ್ಞಾನ ಆಯೋಗ-ತಾಂತ್ರಿಕ ಸಮಿತಿಯನ್ನು ಮುಂದುವರೆಸಲಾಗಿದ್ದು, ನವಂಬರ್ 7, 2017 ರಂದು ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ಪುನಃರಚಿಸಲಾಗಿದೆ.  ಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ    

1

ಪ್ರೊ. ಎಸ್. ಸಡಗೋಪನ್, ಸದಸ್ಯರು, .ಜ್ಞಾ.

ಹ-ಅಧ್ಯಕ್ಷರು
​2ಡಾ. ಬಿ. ಎನ್. ಸುರೇಶ್, ಸದಸ್ಯರು, .ಜ್ಞಾ.
ಸಹ-​ಅಧ್ಯಕ್ಷರು
3ಶ್ರೀ. ಪಿ. ಜಿ. ಆರ್. ಸಿಂಧಿಯಾ, ಸದಸ್ಯರು, .ಜ್ಞಾ.
ಸದಸ್ಯರು
4ಶ್ರೀ. ಎಸ್. ವಿ. ರಂಗನಾಥ್, ಸದಸ್ಯರು, .ಜ್ಞಾ.
ಸದಸ್ಯರು
5ಪ್ರೊ. ಅನುರಾಗ್ ಬೆಹರ್, ಸದಸ್ಯರು, .ಜ್ಞಾ.
ಸದಸ್ಯರು
6ಪ್ರೊ. ಎಮ್. ಆರ್. ಸತ್ಯನಾರಾಯಣ ರಾವ್, ಸದಸ್ಯರು, .ಜ್ಞಾ.
ಸದಸ್ಯರು
7ಪ್ರೊಜಿಪದ್ಮನಾಭನ್ಸದಸ್ಯರು.ಜ್ಞಾ.
ಸದಸ್ಯರು
8ಡಾ. ಕೆ. ಪಿ. ಬಸವರಾಜಪ್ಪ, ಸದಸ್ಯರು, .ಜ್ಞಾ.
ಸದಸ್ಯರು
9ಡಾಎಸ್ಆರ್ಪಾಟೀಲ್ಸದಸ್ಯರು.ಜ್ಞಾ.
ಸದಸ್ಯರು
10ಡಾಗಾಯತ್ರಿ ಸಬರ್ವಾಲ್ಸದಸ್ಯರು.ಜ್ಞಾ./ಉಪಾಧ್ಯಕ್ಷರು.ಜ್ಞಾ.-ನಿರ್ವಹಣಾ ಸಮಿತಿ 
ಸದಸ್ಯರು
11ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳುಹಣಕಾಸು ಇಲಾಖೆ ಮತ್ತು ಸದಸ್ಯರು.ಜ್ಞಾ.
ಸದಸ್ಯರು
12ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸದಸ್ಯರು.ಜ್ಞಾ.
ಸದಸ್ಯರು
13ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳುವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಸದಸ್ಯರು.ಜ್ಞಾ.
ಸದಸ್ಯರುr​
14ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಉನ್ನತ ಶಿಕ್ಷಣ ಇಲಾಖೆ ಮತ್ತು ಸದಸ್ಯರು.ಜ್ಞಾ.
ಸದಸ್ಯರು
15ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮತ್ತು ಸದಸ್ಯರು.ಜ್ಞಾ.
ಸದಸ್ಯರು
​16ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಮಾಹಿತಿ ತಂತ್ರಜ್ಞಾನಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸದಸ್ಯರು.ಜ್ಞಾ.
​- ಸದಸ್ಯರು
​17ಡಾ. ಮುಕುಂದ್ ಕಡೂರ್ ಶ್ರೀನಿವಾಸ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
​- ಸದಸ್ಯ ಕಾರ್ಯದರ್ಶಿಳು
18ಡಾ. ಎಂ. ಜಯಶ್ರೀಹಿರಿಯ ಸಂಶೋಧನಾ ಸಹಾಯಕರು​, .ಜ್ಞಾ.
ಸಂಚಾಲಕರು

​​