​​​​​

​​​​ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಅನ್ವಯಿಕಗಳು ಮತ್ತು ನೀತಿ: ಕರ್ನಾಟಕದ ದೃಷ್ಟಿಕೋನದ ಕಜ್ಞಾಆ ಅಧ್ಯಯನ ತಂಡ

ಕರ್ನಾಟಕ ರಾಜ್ಯವು ಅಂತರಿಕ್ಷಯಾನದ ತಂತ್ರಜ್ಞಾನ ಮತ್ತು ಸಂಯೋಜಿತ ಐಸಿಟಿ ಪರಿಹಾರಗಳ ಬಳಕೆಗಳನ್ನು ಸರ್ಕಾರ, ಖಾಸಗಿ ವಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ರೀತಿಯಲ್ಲಿ ಬಳಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು ವಾಯುಯಾನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮುಂಚೂಣಿ ಸಾಧಿಸುವ ಗುರಿಯನ್ನು ಹೊಂದಿದೆ. ವಿಶ್ವದಾದ್ಯಂತ, ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ ಮತ್ತು ಬಳಕೆ  ಏರಿಕೆಯಾಗುತ್ತಿದ್ದು, ಇದು ಇನ್ನೂ ಭಾರತದಲ್ಲಿ ಉದಯಿಸುತ್ತಿದೆ. ಈ ವ್ಯವಸ್ಥೆಯು ಸಮಾಜಕ್ಕೆ ಒಂದು ನವೀನ ರೀತಿಯ ಮಾದರಿಗೆ ಒಡ್ಡುವುದರೊಂದಿಗೆ, ಸರಳವಾದ "ಚಾಲನಾ ಅನುಭವವನ್ನು" ಸಮಾಜದ ಸಾಮಾನ್ಯ ನಾಗರಿಕರಿಗೆ ತರುತ್ತದೆ ಮತ್ತು ಇದೇ ಸಂದರ್ಭದಲ್ಲಿ ಈ ವ್ಯವಸ್ಥೆಯು ಅತ್ಯಾಧುನಿಕ ರೀತಿಯಲ್ಲಿ ರೂಪ ತಾಳುವುದಲ್ಲದೆ, ನಿರ್ವಹಿಸಲು ಸುಲಭ ಸಾಧ್ಯವಾಗಿರುತ್ತದೆ. ಚಿತ್ರಣ/ದತ್ತಾಂಶಗಳ ಸಂಗ್ರಹಣಗಳ ತಂತ್ರ ಜ್ಞಾನಗಳು ಬೆಳೆಗಳು, ಅರಣ್ಯಗಳು, ಜಲ ಸಂಪನ್ಮೂಲಗಳು, ನಗರಗಳ ಬೆಳವಣಿಗೆ ಇತ್ಯಾದಿಗಳಲ್ಲಿ, ನಾಗರಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಲು, ವಿಪತ್ತು ನಿರ್ವಹಣಾ ಸವಲತ್ತು ಮತ್ತು ಇನ್ನಿತರ ಆಡಳಿತದ ಅಗತ್ಯಗಳನ್ನು ಪೂರೈಸುವಲ್ಲಿ ಸಹಾಯಕವಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಮಾನವರಹಿತ ವೈಮಾನಿಕ ವ್ಯವಸ್ಥೆಯ ಅತ್ಯುತ್ತಮವಾದ ಸಾಧನವಾಗಿದೆ ಮತ್ತು ಯಂತ್ರೋಪಕರಣ, ಉತ್ಪಾದನೆ, ಏವಿಯೋನಿಕ್ಸ್, ಸಲಕರಣೆ, ದತ್ತಾಭಿವೃದ್ಧಿ ತಂತ್ರಾಂಶದೊಂದಿಗೆ ಸಂಯೋಜಿತವಾಗಿರುವ ಅಂತರಿಕ್ಷಯಾನ ತತ್ವಗಳ ಪರಿಕಲ್ಪನೆಗಳನ್ನು ತರುತ್ತದೆ. ಅನೇಕ ಮಾರುಕಟ್ಟೆಯ ಅಧ್ಯಯನಗಳು ಯುಎಎಸ್ ಗಮನಾರ್ಹ ವಾಣಿಜ್ಯ ಬೆಳವಣಿಗೆಯನ್ನು ತರುತ್ತದೆಂದು ಊಹಿಸಿವೆ.

ಜೈನ್  ವಿಶ್ವವಿದ್ಯಾನಿಲಯ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐಎಎಸ್), ಜಿಐಟಿಎಎಂ  ವಿಶ್ವವಿದ್ಯಾನಿಲಯ ಮತ್ತು ಎನ್ಡಿಆರ್ಎಫ್​ / ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ - ಕರ್ನಾಟಕ ಸೆಂಟರ್ ಸಹಕಾರದೊಂದಿಗೆ ಮಾರ್ಚ್ 7, 2015 ರಂದು ಮಾನವರಹಿತ ವೈಮಾನಿಕ ವ್ಯವಸ್ಥೆಯ ನಾಗರಿಕ ಅನ್ವಯಿಕಗಳ ಜ್ಞಾನ ಸಂವಾದ ಮತ್ತು ಮತ್ತು ದುಂಡು ಮೇಜಿನ ಸಭೆಯನ್ನು ಏರ್ಪಡಿಸಲಾಯಿತು. ಸಭೆಯಲ್ಲಿ 20 ರಾಷ್ಟ್ರೀಯ ಮಟ್ಟದ ತಜ್ಞರು ಮಾನವರಹಿತ ವೈಮಾನಿಕ ವ್ಯವಸ್ಥೆಯ ವಿವಿಧ ಅಂಶಗಳನ್ನು ಚರ್ಚಿಸಿ  ರಾಷ್ಟ್ರೀಯ ವಾಯುಪ್ರದೇಶದಲ್ಲಿ  ಈ ತಂತ್ರಜ್ಞಾನದ ಉತ್ತಮವಾದ ಸ್ಥಾನೀಕರಣದ ಅವಶ್ಯಕತೆಯಿದೆ ಎಂದು ಸೂಚಿಸಿದರು ಮತ್ತು ಈ ತಂತ್ರಜ್ಞಾನದ ನೀತಿ, ಕಾರ್ಯವಿಧಾನಗಳು, ನಿಯಮಗಳು ಮತ್ತು ಮಾರ್ಗದರ್ಶನವನ್ನು ಅಭಿವೃದ್ಧಿಪಡಿಸುವ  ಅಗತ್ಯವಿದೆಯೆಂದು ಸಲಹೆ ನೀಡಿದರು. ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಬಳಕೆ,  ನೀತಿ- ಕರ್ನಾಟಕದ ದೃಷ್ಟಿಕೋನವನ್ನು  ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡು ಅಭಿವೃದ್ಧಿಪಡಿಸುವಂತೆ ಸಭೆಯು ಸೂಚಿಸಿತು. 

ಆಯೋಗವು  ತನ್ನ 4ನೇ ಸಭೆಯಲ್ಲಿ ದುಂಡು ಮೇಜು ಸಭೆಯ  ಶಿಫಾರಸುಗಳನ್ನು ಪರಿಗಣಿಸಿ ಮಾನವರಹಿತ ವೈಮಾನಿಕ ವ್ಯವಸ್ಥೆಯ ಸಮಗ್ರ ಅಧ್ಯಯನವನ್ನು ಕೈಗೊಳ್ಳಲು ನಿರ್ಧರಿಸಿತು ಮತ್ತು ಕರ್ನಾಟಕವನ್ನು ರಾಷ್ಟ್ರೀಯ ಕಣದಲ್ಲಿ ಮುನ್ನಡೆಸಲು ಒಂದು ಉದಾಹರಣೆಯನ್ನು ರಚಿಸಲು ತೀರ್ಮಾನಿಸಿತು. ಭಾರತವು ಮಾನವರಹಿತ ವೈಮಾನಿಕ ವ್ಯವಸ್ಥೆಗಾಗಿ ಪರಿಣಾಮಕಾರಿಯಾದ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಬಲ್ಲದು ಎಂದು ಆಯೋಗವು  ಅಭಿಪ್ರಾಯಪಟ್ಟಿದೆ. ಅಂತಹ ರಾಷ್ಟ್ರೀಯ ಮಾನವರಹಿತ ವೈಮಾನಿಕ ವ್ಯವಸ್ಥೆಯ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಕೇಂದ್ರವಾಗಿರುವುದಕ್ಕೆ ಕರ್ನಾಟಕವು ಸರಿಯಾದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ವಿಷಯದಲ್ಲಿ ಮುನ್ನಡೆ ಸಾಧಿಸಬೇಕಾಗಿದೆ.

ಈ ಅಧ್ಯಯನ ತಂಡವು ಮೂರು ಹಂತದ ಕಾರ್ಯಗಳನ್ನು​ ಹೊಂದಿದೆ. ಮೊದಲನೆಯದು, ಕರ್ನಾಟಕವು ಮುನ್ನಡೆಸಬಹುದಾದ ರಾಷ್ಟ್ರದ ತಂತ್ರಗಾರಿಕೆಯ ಯೋಜನೆಯಾಗಿ ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಅನ್ವಯಗಳು ಮತ್ತು ನೀತಿಯ  ಸಮಗ್ರವಾದ ವರದಿಯನ್ನು ಹೊರತರುವುದು, ಎರಡನೆಯದು, ಕರ್ನಾಟಕ ಸರ್ಕಾರದ ಇಲಾಖೆಗಳನ್ನು ಒಳಗೊಂಡಿರುವ ನಿರ್ದಿಷ್ಟ ಪ್ರಾತಿನಿಧ್ಯದ ಅನ್ವಯಿಕ ಯೋಜನೆಗಳನ್ನು ರಾಜ್ಯದಲ್ಲಿ ಕೈಗೊಳ್ಳುವುದು, ಮತ್ತು ಮೂರನೆಯದಾಗಿ ಮಾನವರಹಿತ ವೈಮಾನಿಕ ವ್ಯವಸ್ಥೆಯ ಸಂಶೋಧನೆ ಮತ್ತು ತಂತ್ರಜ್ಞಾನವು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಗೆ ಅಳವಡಿಸಿಕೊಳ್ಳುವಂತೆ ಮಾಡುವುದು.  ಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ

ಮೇಲಿನ ದೃಷ್ಟಿಕೋನದಂತೆ, ಈ ಕೆಳಕಂಡ ಸದಸ್ಯರ ಅಧ್ಯಯನ ತಂಡವನ್ನು ರಚಿಸಲಾಗಿದೆ:

1

ಡಾ. ದೇವ್ ರಾಜ್, ನಿರ್ದೇಶಕರು, ಎನ್ಐಸ್, ಬೆಂಗಳೂರು

ಉಪ-ಅಧ್ಯಕ್ಷರು
2ಡಾ. ಬಿ. ವಿ. ನಾಯ್ಡು, ಸದಸ್ಯರುಕ.ಜ್ಞಾ.
ಉಪ-ಅಧ್ಯಕ್ಷರು
3ಡಾರಾಮಚಂದ್ರ, ಕಾರ್ಯಕ್ರಮ ನಿರ್ದೇಶಕರು, ಎನ್ಡಿರ್ಎಫ್
ಸದಸ್ಯರು
4ಡಾಜಿ. ರಮೇಶ್, ಮುಖ್ಯಸ್ಥರು, ಸಣ್ಣ ಮತ್ತು ಮೈಕ್ರೋ ಏರ್ ವಾಹನಗಳು, ಸಿಎಸ್ಆರ್-ಎನ್ಎಲ್
ಸದಸ್ಯರು
5ಡಾಕೆ. ಘೋಷ್, ಏರೋಸ್ಪೇಸ್ ಇಲಾಖೆ, ಐಐಟಿ, ಕಾನ್ಪುರ್
ಸದಸ್ಯರು
6ನಾಮನಿರ್ದೇಶಿತ ಪ್ರತಿನಿಧಿಗಳು, ಡಿಜಿ, ಡಿಜಿಸಿ, ನವದೆಹಲಿ
ಸದಸ್ಯರು
7ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
8ಡಾ. ಎಮ್.ವೈ.ಎಸ್.ಪ್ರಸಾದ್, ಮಾಜಿ ನಿರ್ದೇಶಕರು, ಎಸ್ಡಿಸಿಸಿಎಸ್ಆರ್
ಸದಸ್ಯರು
9ಶ್ರೀ ರಾಹುಲ್ ನಾರಾಯಣನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿ), ಇಂಡಸ್​         
ಸದಸ್ಯರು
10ನಾಮನಿರ್ದೇಶಿತ ಪ್ರತಿನಿಧಿಗಳು, ಉಪ ಕುಲಪತಿಗಳು, ವಿಟಿಯು, ಬೆಳಗಾವಿ
ಸದಸ್ಯರು
11ಡಾ. ಕೃಷ್ಣ ವೆಂಕಟೇಶ್, ಜೈನ್ ವಿಶ್ವವಿದ್ಯಾಲಯ
ಸದಸ್ಯರು
12ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
13ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರುr​
14ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕೃಷಿ ಇಲಾಖೆ, (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
15ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯೋಜನೆ ಇಲಾಖೆ, (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)          
ಸದಸ್ಯರು
​16ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಐಟಿ/ಬಿಟಿ ಮತ್ತು ಎಸ್.ಟಿ ಇಲಾಖೆ, (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
​- ಸದಸ್ಯರು
​17ಪಿಸಿಸಿಎಫ್, ಕರ್ನಾಟಕ ಸರ್ಕಾರ
​- ಸದಸ್ಯರು
18ಸರ್ಕಾರದ ಕಾರ್ಯದರ್ಶಿಗಳು, ನಗರ ಅಭಿವೃದ್ದಿ ಇಲಾಖೆ, (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
​19ಜಿಪಿ, ಪ್ರತಿನಿಧಿಗಳು, ಕರ್ನಾಟಕ ಸರ್ಕಾರ
​- ಸದಸ್ಯರು
​20ಶ್ರೀ ಆರ್. ವಿಜಯ್ ಕೃಷ್ಣ, ಪ್ರಾಜೆಕ್ಟ್ ಮ್ಯಾನೇಜರ್, ಎನ್ಡಿಆರ್ಎಫ್ ​- ಸದಸ್ಯ ಕಾರ್ಯದರ್ಶಿಗಳು
​21ಡಾ. ಎಂ. ಜಯಶ್ರೀ, ಸಂಶೋಧನಾ ಸಹಾಯರು​, .ಜ್ಞಾ.
​- ಸಂಚಾಲಕರು

ಹೆಚ್ಚಿನ ಮಾಹಿತಿಗಾಗಿ, ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು rvjkrish@gmail.com  ಮುಖೇನ ಸಂಪರ್ಕಿಸಬಹುದಾಗಿದೆ. 


​​ಕಜ್ಞಾಆವು ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಅನ್ವಯಿಕಗಳು ಮತ್ತು ನೀತಿ: ಕರ್ನಾಟಕದ ದೃಷ್ಟಿಕೋನ​ ಅಭಿವೃದ್ಧಿಯ ಶಿಫಾರಸ್ಸನ್ನು  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ​, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ.