​​​​​


ಮಾನವರಹಿತ ವೈಮಾನಿಕ ವ್ಯವಸ್ಥೆ

ಅಧ್ಯಕ್ಷರು, ಕಜ್ಞಾಆರೊಂದಿಗಿನ ಸಭೆಯಲ್ಲಿ, ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರು, ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನದ ಕುರಿತು ಪ್ರಸ್ತಾಪಿಸಿದರು ಮತ್ತು ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಅನ್ವಯಗಳು ಮತ್ತು ನೀತಿ ಅಭಿವೃದ್ಧಿಯ ಕುರಿತಾದ ಮೌಲ್ಯಮಾಪನ ಅಧ್ಯಯನವನ್ನು ಕಜ್ಞಾಆ ಕೈಗೆತ್ತಿಕೊಳ್ಳುವ ಅಗತ್ಯದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸೆಪ್ಟೆಂಬರ್ 22, 2014ರಂದು ನಡೆದ ಕಜ್ಞಾಆದ ಎರಡನೆಯ ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಸದಸ್ಯರು ಈ ಅಧ್ಯಯನದ ಕುರಿತಾದ ಪ್ರಸಕ್ತತತೆಯ ಹಿನ್ನಲೆಯನ್ನು ಮನಗಂಡು ಕಜ್ಞಾಆ ಮತ್ತು ಕರ್ನಾಟಕ ಸರ್ಕಾರ ಈ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು. ಇದನ್ನು ಮುಂದುವರೆಸಲು, ಅಧ್ಯಕ್ಷರು, ಕಜ್ಞಾಆರವರು ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನ, ಅನ್ವಯಗಳು ಮತ್ತು ನೀತಿ ವ್ಯಾಪ್ತಿಯ ಕುರಿತು ಚರ್ಚಿಸಲು ತಜ್ಞರುಗಳನ್ನು ಆಹ್ವಾನಿಸಿ ಚರ್ಚೆಗಳು/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂಬ ಸಲಹೆ ನೀಡಿದರು. 

ಈ ಆರಂಭಿಕ ಚರ್ಚೆ/ಕಾರ್ಯಾಗಾರದ ಫಲಿತಾಂಶದ ಆಧಾರದ ಮೇರೆಗೆ, ಮಾನವರಹಿತ ವೈಮಾನಿಕ ವ್ಯವಸ್ಥೆಯ ಕುರಿತಾದ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಕಜ್ಞಾಆವು ಅಧ್ಯಯನ ತಂಡವನ್ನು ರಚಿಸಬಹುದೆಂಬ ಸಲಹೆ ನೀಡಲಾಯಿತು. ಈ ವರದಿಯು ಪ್ರಯೋಜನಗಳು ಮತ್ತು ಸಾಮರ್ಥ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಕರ್ನಾಟಕವು ನೆಲೆಗೊಳ್ಳುತ್ತಿರುವ ಮತ್ತು ಹೊಸಹಂತದಲ್ಲಿರುವ ಈ ವಲಯಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಾಯಕವಾಗಬಹುದು.    

ಮುಂದಿನ ಕ್ರಮಗಳು

  • ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ (ಭಾರತ) (ಐಇಐ), ಕರ್ನಾಟಕ ಭಾಗ, ಗೀತಂ ವಿಶ್ವವಿದ್ಯಾನಿಲಯ ಮತ್ತು ಜೈನ್ ವಿಶ್ವವಿದ್ಯಾನಿಲಯ ಇವರೊಂದಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರ ಕುರಿತು ಚರ್ಚಿಸಲಾಯಿತು. ಐಇಐರವರು, ಜೈನ್ ವಿಶ್ವವಿದ್ಯಾನಿಲಯ (ರೋಟರಿ ಕ್ಲಬ್ ಇವರೊಂದಿಗೆ) ಮಾನವರಹಿತ ವೈಮಾನಿಕ ವ್ಯವಸ್ಥೆಯ ಕುರಿತಾದ ಪ್ರದರ್ಶನವನ್ನು ಮಾರ್ಚ್ 6, 2015ರಂದು ಜೈನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿದ್ದಾರೆ ಎಂದು ತಿಳಿಸಿದರು ಮತ್ತು ಕಜ್ಞಾಆ ಈ ಒಂದು ದಿನದ ಕಾರ್ಯಾಗಾರವನ್ನು ಪ್ರದರ್ಶನದ ದಿನಾಂಕದ ಹಿಂದು ಮುಂದಿನಲ್ಲಿ ಹಮ್ಮಿಕೊಂಡರೆ, ತಜ್ಞರ ಲಭ್ಯತೆ ಸುಗಮವಾಗುತ್ತದೆ ಎಂದು ಸಲಹೆ ನೀಡಿದರು. ಈ ಪ್ರಕಾರವಾಗಿ, ಜೈನ್ ವಿಶ್ವವಿದ್ಯಾನಿಲಯದ ವತಿಯಿಂದ ಕಾರ್ಯಾಗಾರದ ಆಯೋಜನೆಯ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಯಿತು. 
  • ಜೈನ್ ವಿಶ್ವವಿದ್ಯಾನಿಲಯವು ಜ್ಞಾನ ಕಾರ್ಯಾಗಾರ: ಮಾನವರಹಿತ ವೈಮಾನಿಕ ವ್ಯವಸ್ಥೆಯ ನಾಗರಿಕ ಅನ್ವಯಗಳ ಪ್ರಸಾವನೆಯನ್ನು ಕಜ್ಞಾಆಕ್ಕೆ ಸಲ್ಲಿಸಿತು. ಈ ಕಾರ್ಯಾಗಾರವು ಐಎಐ(ಭಾರತ), ಕರ್ನಾಟಕ ಭಾಗ, ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಮತ್ತು ಗೀತಂ ವಿಶ್ವವಿದ್ಯಾನಿಲಯದ ಪ್ರಾಯೋಜನಕತ್ವದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ್ 7, 2017ರಂದು ಜೈನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡರು. 
  • ಈ ಪ್ರಸಾವನೆಯು ಅಧ್ಯಕ್ಷರು, ಕಜ್ಞಾಆ-ತಾಂತ್ರಿಕ ಸಮಿತಿ ಮತ್ತು ಅಧ್ಯಕ್ಷರು, ಕಜ್ಞಾಆ-ನಿರ್ವಹಣಾ ಸಮಿತಿಯವರು ಪರಿಶೀಲಿಸಿ, ಅನುಮೋದಿಸಿ, ತಮ್ಮ ಸಮ್ಮತಿಯನ್ನು ಸೂಚಿಸಿದರು. 
  • ಕಾರ್ಯಾಗಾರ ಮತ್ತು ಪ್ರದರ್ಶನವು ಮಾರ್ಚ್ 7, 3015ರಂದು ಕನಕಪುರ ರಸ್ತೆಯಲ್ಲಿರುವ ಜೈನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಿತು ಮತ್ತು ಕಾರ್ಯಾಗಾರದ ಉದ್ದೇಶಗಳು ಈ ಕೆಳಗಿನಂತಿವೆ:  
​          o    ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನದ ಅಂಶಗಳನ್ನು ಪರಿಶೀಲಿಸುವುದು
          o    ಮಾನವರಹಿತ ವೈಮಾನಿಕ ವ್ಯವಸ್ಥೆಯ ನಾಗರಿಕರ ಅನ್ವಯಗಳನ್ನು ಪರಿಶೀಲಿಸುವುದು
          o    ಮಾನವರಹಿತ ವೈಮಾನಿಕ ವ್ಯವಸ್ಥೆಯ ನೀತಿಯ ದೃಷ್ಟಿಕೋನಗಳನ್ನು ಚರ್ಚಿಸುವುದು
​          o    ಮಾನವರಹಿತ ವೈಮಾನಿಕ ವ್ಯವಸ್ಥೆಯ ತಂತ್ರಜ್ಞಾನಗಳ ದೂರದೃಷ್ಟಿಯ ಅಂಶಗಳಿಗೆ ಒತ್ತು ನೀಡುವುದು
​​​

​​​​​​