​​​​


ತ್ಯಾಜ್ಯನೀರಿನ ನಿರ್ವಹನಾ ಮಾರ್ಗಸೂಚಿಯ ಅಧ್ಯಯನ

ಅಪರ ಕಾರ್ಯದರ್ಶಿಗಳು, ನಗರಾಭಿವೃದ್ಧಿ, ಅಧ್ಯಕ್ಷರು, ಕಜ್ಞಾಆ ಇವರೊಂದಿಗೆ ನಡೆದ ಸಂವಾದದಲ್ಲಿ ತ್ಯಾಜ್ಯನೀರಿನ ನಿರ್ವಹಣೆಯ ಮಾರ್ಗಸೂಚಿಯು ಅಲಭ್ಯವಿರುವ ಹಿನ್ನಲೆಯಲ್ಲಿ, ಈ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಅಧ್ಯಯನವನ್ನು ಕಜ್ಞಾಆ ಕೈಗೊಳ್ಳಬಹುದೆಂಬುದು ಪ್ರಮುಖ ಅಂಶವಾಗಿದೆ. ಕಜ್ಞಾಆವು ಡಾ. ಇಷರ್ ಅಹ್ಲುವಾಲಿಯಾ, ಅಧ್ಯಕ್ಷರು, ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್ನ್ಯಾಷನಲ್​ ಎಕನಾಮಿಕ್ ರಿಲೇಷನ್ಸ್ (ಐಸಿಆರ್ಐಇಆರ್) ರವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲು ಆಹ್ವಾನಿಸಲಾಯಿತು. ಈ ಸಭೆಯಲ್ಲಿ, ಕಜ್ಞಾಆ, ನಗರಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಜೂನ್ 2015ರಂದು ತ್ಯಾಜ್ಯನೀರಿನ ನಿರ್ವಹಣೆಯ ಕುರಿತು ವರದಿ ಅಥವಾ ಮಾರ್ಗಸೂಚಿಯನ್ನು ರಚಿಸುವ ಸಲುವಾಗಿ ಚಿಂತನ ಮಂಥನ ಕಾರ್ಯಾಗಾರವನ್ನು ಆಯೋಜಿಸಲು ನಿರ್ಧರಿಸಲಾಯಿತು. ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‍ಸಿ)ವನ್ನು ಕಜ್ಞಾಆದ ಸಹಭಾಗಿತ್ವ ಮತ್ತು ಪಾಲುದಾರಿಕೆಯಲ್ಲಿ ಈ ಚಿಂತನ ಮಂಥನ ಕಾರ್ಯಾಗಾರವನ್ನು ಆಯೋಜಿಸಲು ಕೋರಲಾಯಿತು. ಐಸಿಆರ್ಐಇಆರ್, ಕಜ್ಞಾಆ ಮತ್ತು ಕೆಯುಐಡಿಎಫ್‍ಸಿಯೊಂದಿಗೆ ಚಿಂತನ ಮಂಥನ ಕಾರ್ಯಾಗಾರವನ್ನು ಆಯೋಜಿಸಿತು.            

ಮುಂದಿನ ಕ್ರಮಗಳು
  • ​ತ್ಯಾಜ್ಯನೀರಿನ ನಿರ್ವಹಣೆ ಮತ್ತು ನೈರ್ಮಲ್ಯ ಜ್ಞಾನ ಸಂವಾದದ ಕುರಿತಾದ ಜಂಟಿ ಹಿನ್ನಲಾ ಕೈಪಟ್ಟಿಯನ್ನು ಕಜ್ಞಾಆ ಮತ್ತು ಕೆಯುಐಡಿಎಫ್‍ಸಿಯು ರೂಪಿಸಿತು.
  • ಕಾರ್ಯಕಾರಿ ನಿರ್ದೇಶಕರು, ಕೆಯುಐಡಿಎಫ್‍ಸಿ ಮತ್ತು ಸಮಾಲೋಚಕರು, ಕೆಯುಐಡಿಎಫ್‍ಸಿ ಇವರೊಂದಿಗೆ ನಡೆದ ಸಭೆಯಲ್ಲಿ ಕಾರ್ಯಾಗಾರದ ಕಾರ್ಯಾಚರಣೆಯ ವಿವರಗಳ ಕುರಿತು ಚರ್ಚೆ ನಡೆಸಲಾಯಿತು ಮತ್ತು ಈ ಕಾರ್ಯಾಗಾರವನ್ನು ಜೂನ್ 19, 2015ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಈ ಪ್ರಕ್ರಿಯೆಯನ್ನು ಮುಂದುವರೆಸಲು ಕೆಯುಐಡಿಎಫ್‍ಸಿಯು ಸಂಘಟನಾ ಸಮಿತಿಯನ್ನು ರಚಿಸಬೇಕೆಂದು ನಿರ್ಧರಿಸಲಾಯಿತು.      ​
​​