ಪರಿಚಯ
ನೋಂದಣಿ
ಮತ್ತು ಮುದ್ರಾಂಕ ಇಲಾಖೆಯು ಕರ್ನಾಟಕ ಸರ್ಕಾರ ಕ್ಕೆ ಹೆಚ್ಚು ರಾಜಸ್ವಗಳಿಸುವ ಇಲಾಖೆಗಳಲ್ಲಿ ಮೂರನೆ ಸ್ಥಾನ ಹೊಂದಿರುತ್ತದೆ. 2017-18 ನೇ ಸಾಲಿನಲ್ಲಿ ರೂ.9041.80
ಕೋಟಿರಾಜಸ್ವ ಗಳಿಸಿದ್ದು, 19.34 ಲಕ್ಷ ದಸ್ತಾವೇಜುಗಳು ನೋಂದಣಿಯಾಗಿರುತ್ತವೆ. ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡು,
ಇಲಾಖೆಯ ಮಂಜೂರಾದ ಹುದ್ದೆಗಳ ಸಂಖ್ಯೆಯು 1662 ಆಗಿರುತ್ತದೆ. ಇಲಾಖೆಯು ಸಾರ್ವಜನಿಕರೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿರುತ್ತದೆ.
ಇಲಾಖೆಯ ಮುಖ್ಯ ಕಾರ್ಯಗಳು ಈ ಕೆಳಕಂಡಂತಿವೆ.
- ದಸ್ತಾವೇಜುಗಳ ನೋಂದಣಿ
- ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ಪಾರ್ಸಿ ವಿವಾಹ ಕಾಯ್ದೆ ಅಡಿಯಲ್ಲಿ ವಿವಾಹಗಳ ನೋಂದಣಿ
- ಪಾಲುದಾರಿಕೆ ಸಂಸ್ಥೆಗಳ ನೋಂದಣಿ
- ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದ ಮುಖಾಂತರ ಸರ್ಕಾರಕ್ಕೆ ರಾಜಸ್ವ ಸಂಗ್ರಹಣೆ
- ಉಪಯೋಗಿಸದ, ಹಾಳಾದ ಮತ್ತು ಹೆಚ್ಚಾಗಿ ಪಾವತಿಸಿದ ಮುದ್ರಾಂಕಗಳ ಮರುಪಾವತಿ
- ಮರಣ ಶಾಸನಗಳ ಠೇವಣಿ
- ಶಾಶ್ವತ ದಾಖಲೆಗಳಾದ ನೋಂದಣಿ ದಸ್ತಾವೇಜುಗಳು, ವಿವಾಹಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ಇವುಗಳ ಅನುಸೂಚಿಗಳ ಸಂರಕ್ಷಣೆ ಮತ್ತು ನಿರ್ವಹಣೆ
- ಕೃಷಿ ಜಮೀನುಗಳಿಗೆ ಸಂಬಂಧಿಸಿದ ವ್ಯವಹಾರಗಳ ಜೆ-ನಮೂನೆಗಳನ್ನು ಕಂದಾಯ ಇಲಾಖೆಗೆ ಕಳುಹಿಸುವುದು.
ಇಲಾಖೆಯ ಮುಖ್ಯ ಸೇವೆಗಳು ಈ ಕೆಳಕಂಡಂತಿವೆ.
- ಋಣಭಾರ ಪ್ರಮಾಣ ಪತ್ರಗಳನ್ನು ನೀಡುವುದು.
- ದಸ್ತಾವೇಜುಗಳ ದೃಢೀಕೃತ ಪ್ರತಿಗಳನ್ನು ನೀಡುವುದು.
- ವಿವಾಹ ನೋಂದಣಿ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ನೀಡುವುದು.
- ಇಲಾಖೆಯಲ್ಲಿ ಫೈಲು ಮಾಡಿರುವ ಮತ್ತು ನೋಂದಣಿಯಾಗಿರುವ ಪಾಲುದಾರಿಕೆ ದಾಖಲೆಗಳ ದೃಢೀಕೃತ ಪ್ರತಿಗಳನ್ನು ನೀಡುವುದು.