​​​​​​ ​ಗಂಗಾ ಕಲ್ಯಾಣ​ ಏತ ನೀರಾವರಿ ಯೋಜನೆ

  • ಯೋಜನೆಯಡಿ, ನೈಸರ್ಗಿಕವಾಗಿ ನದಿ, ತೊರೆ, ನಾಲೆಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಪಂಗಡದ ಕನಿಷ್ಟ 3 ಸಣ್ಣ ಮತ್ತು ಅತಿ ಸಣ್ಣ ರೈತರುಗಳ ಜಮೀನುಗಳಿಗೆ ಪಂಪ್ಸೆಟ್ ಮತ್ತು ಪೈಪ್ಲೈನ್ ಅಳವಡಿಸಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು.
  •  ಘಟಕ ವೆಚ್ಚವು ಕನಿಷ್ಟ 8-00 ಎಕರೆ ಖುಷ್ಕಿ ಜಮೀನಿನ ಘಟಕಕ್ಕೆ ರೂ.4.00 ಲಕ್ಷ ಮತ್ತು 15-00 ಎಕರೆ ಜಮೀನಿನ ಘಟಕಕ್ಕೆ ರೂ.6.00 ಲಕ್ಷ ಇರುತ್ತದೆ.

 
ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು 

1. ಈ ಯೋಜನೆಯಡಿ ಯಲ್ಲಿ ಪ್ರತಿ ಘಟಕದಲ್ಲಿ ಕನಿಷ್ಟ 3 ಫಲಾನುಭವಿಗಳಿರಬೇಕು ಮತ್ತು ಕನಿಷ್ಟ 8 ಎಕರೆ ಹಾಗೂ ಗರಿಷ್ಟ 15 ಎಕರೆ ಖುಷ್ಕ ಜಮೀನು ಒಳಗೊಂಡಿರಬೇಕು

2. ಘಟಕಕ್ಕೆ ಸಂಬಂಧಿಸಿದಂತೆ ಫಲಾನುಭವಿUಳ ಎಲ್ಲಾ ಜಮೀನು ಒಂದೇ ಕಡೆ ಇರುವ ಬಗ್ಗೆ ದೃಢೀಕೃತ ನಕಾಶೆಯನ್ನು ಭೂ ಮಾಪನಾ ಇಲಾಖೆಯಿಂದ ಪಡೆದು ಕಡತದಲ್ಲಿ ಇಡುವುದು.

3. ಫಲಾನುಭವಿಗಳಿಂದ ಅಗತ್ಯ ದಾಖಲಾತಿಗಳನ್ನು ಪಡೆದು, ದೃಢೀಕರೀಸಿ ಅವುಗಳನ್ನು ಕಡತದಲ್ಲಿ ಇಡುವುದು.

4..ಜಿಲ್ಲಾ ವ್ಯವಸ್ಥಾಪಕರು/ತಾಲ್ಲೂಕು ಅಭೀವೃದ್ಧಿ ಅಧಿಕಾರಿಗಳು ಅರ್ಹತೆ ಕುರಿತಂತೆ ಖುದ್ದು ಸ್ಥಳ ಪರೀಶೀಲನೆ ನಡೆಸಿ ಪರೀಶೀಲನಾ ವರದಿಯನ್ನು ಸಂಬಂಧಿಸಿದ ಘಟಕದ ಕಡತದಲ್ಲಿ ಇಡುವುದು. 

5.ನೀರಾವರಿ ಇಲಾಖೆಯಿಂದ ನೀರೆತ್ತುವ ಕುರಿತು ಪೂರ್ವಾನುಮತಿ ಪತ್ರ ಪಡೆಯಬೇಕು.

6.ವಿದ್ಯುತ್ ಸರಬರಾಜು ಕಂಪಪನಿಗಳಿಂದ ವಿದ್ಯುತ್ ಮಂಜೂರಾ​ತಿ ಪತ್ರ ಪಡೆಯಬೇಕು.

7..ಘಟಕz ಕಾಮಗಾರಿ ಪೂರ್ಣಗೊಂಡ ನಂತರ ಜಿಲ್ಲಾ ವ್ಯವಸ್ಥಾಪಕರು ನಿಗದಿತ ನಮೂನೆಯಲ್ಲಿ ವರದಿಯನ್ನು   ಕೇಂದ್ರ ಕಛೇರಿಗೆ ಕಳುಹಿಸುವುದು

8. ಈಗಾಗಲೇ ಸಾಮೂಹಿಕ ನೀರಾವರಿ/ ಏತ ನೀರಾವರಿ ಯೋಜನೆ ಯನ್ನು ಅನುಷ್ಟಾಗೊಳಿಸಲಾಗಿರುವ ಘಟಕಕ್ಕೆ  ಪುನಃ ಹೊಸದಾಗಿ ಪ್ರಸ್ತಾವನೆಯನ್ನು ಯಾವೂದೇ ಕಾರಣಕ್ಕೂ ಸಲಿ

ನಿಗಮದ ವಿವಿಧ ಯೋಜನೆಗಳಡಿ ಅನುಸರಿಸಬೇಕಾದ ನೀತಿ ನಿಯಮಗಳ ಕುರಿತು ಈ ಕ್ರಿಯಾ ಯೋಜನೆಯಡಿ  ನೀಡಲಾದ ಅಂಶಗಳಲ್ಲದೇ, ಹೆಚ್ಚಿನ ವಿವರಗಳನ್ನು ಕೇಂದ್ರ ಕಛೇರಿಯಿಂದ ಆಗಿಂದಾಗ್ಗೆ ನೀಡುವ ಸುತ್ತೋಲೆಗಳ  / ಸರ್ಕಾರದ ಆದೇಶಗಳಲ್ಲಿ ತಿಳಿಸಿಲಾಗುವ ನೀತಿ ನಿಯಮಗಳನ್ನು ಅನುಸರಿಸಿಕೊಂಡು ಯೋಜನೆಗಳನ್ನು  ಅನುಷ್ಟಾನಗೊಳಿಸತಕ್ಕದ್ದು.  ​


ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​​
 

   ​

   ​