Last modified at 14/03/2019 12:25 by kmvstdcl

​​​​

ಸ್ಫೂರ್ತಿ ಯೋಜನೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ಇರುವ ಪ್ರತಿಭೆಯನ್ನು ತರಬೇತಿಯ ಮೂಲಕ ವೃದ್ಧಿಗೊಳಿಸಿ ಸ್ಫೂರ್ತಿದಾಯಕ ವೃತ್ತಿ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಸ್ಪೂರ್ತಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಸ್ಪೂರ್ತಿದಾಯಕ ಕ್ಷೇತ್ರಗಳಲ್ಲಿ ನೈಪುಣ್ಯ ತರಬೇತಿ ಹಾಗೂ ತರಬೇತಿಯ ನಂತರ ಕಡ್ಡಾಯವಾಗಿ ಉದ್ಯೋಗ ವ್ಯವಸ್ಥೆ ಮಾಡಲು ನಿಗಮದ ಸಹಾಯಧನದೊಂದಿಗೆ ಯೋಜನೆ ಅನುಷ್ಟಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ರಾಷ್ಟ್ರ /ರಾಜ್ಯ ಮಟ್ಟದ ಬ್ರಾಂಡೆಂಡ್ ಕ್ರೀಡೆ ಮತ್ತು ಸೇವಾ ಕ್ಷೇತ್ರದ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಟೆನ್ನಿಸ್ ಕೋಚ್ ತರಬೇತಿ, ಟೆನ್ನಿಸ್ ಮಾರ್ಕರ್/ಗ್ರೌಂಡ್ಸ್‍ಮನ್ ತರಬೇತಿ, ಸ್ವಿಮ್ಮಿಂಗ್-ಲೈಫ್‍ಗಾರ್ಡ್ /ಟೀಚರ್ ತರಬೇತಿಯ, ಸ್ವಿಮ್ಮಿಂಗ್-ಪೂಲ್ ಆಪರೇಟರ್, ಬ್ಯಾಟ್‍ಮಿಂಟನ್ ಕೋಚ್ ತರಬೇತಿ, ಬ್ಯಾಟ್‍ಮಿಂಟನ್  ಮಾರ್ಕರ್ ತರಬೇತಿ, ಸ್ಕ್ವಾಶ್ ಕೋಚ್ ತರಬೇತಿ, ಸ್ಕ್ವಾಶ್ ಮಾರ್ಕರ್ ತರಬೇತಿ, ಕ್ರಿಕೆಟ್ ಕೋಚ್ ಮತ್ತು ಅಂಪೈರ್ ತರಬೇತಿ, ಕ್ರಿಕೇಟ್-ಗ್ರೌಂಡ್ಸ್‍ಮನ್ ತರಬೇತಿ, ಫಿಟ್‍ನೆಸ್ ಕೋಚ್ ತರಬೇತಿ ಹಾಗೂ ಇತರೆ ತರಬೇತಿ ಯೋಜನೆಯನ್ನು ಪರಿಶಿಷ್ಟ ಜಾತಿಯ ಯುವಕ/ಯುವತಿಯರಿಗೆ ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ತರಬೇತಿಯ ಅವಧಿಯು ಮೂರು ತಿಂಗಳಿಂದ ಆರು ತಿಂಗಳವರೆಗೆ ಇರುತ್ತದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸರ್ಕಾರದ ಆದೇಶ ಆಧರಿಸಿ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು.

ಸಾಮಾನ್ಯ ಅರ್ಹತೆಗಳು:

1.            ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.

2.            ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

3.            ಅರ್ಜಿದಾರರು  18 ವರ್ಷ ಮೇಲ್ಪಟ್ಟ  ವಯೋಮಾನದವರಾಗಿರಬೇಕು.

4.            ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.5,00,000/- ಮಿತಿಯೊಳಗಿರಬೇಕು.

5.            ಅರ್ಜಿದಾರರು/ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ/ಸರ್ಕಾರದಿಂದ ರೂ.1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು                            ಈ  ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

6.            ಅರ್ಜಿದಾರರು ದೈಹಿಕ ಆಟ ಪಾಟಗಳು ಮತ್ತು ಕ್ರೀಡೆ ಮತ್ತು ಸೇವಾ ಕ್ಷೇತ್ರಗಳಲ್ಲಿ ತಿಳುವಳಿಕೆ/ಶಿಕ್ಷಣ ಪಡೆದಿರುವವರಾಗಿರಬೇಕು.

7.            ಅರ್ಜಿದಾರರು /ಕುಟುಂಬ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

 

 

ಷರತ್ತುಗಳು:

1.            ಅರ್ಜಿದಾರರು ಆಯ್ಕೆ ಸಮಿತಿ, ಕ್ರೀಡಾ ಮತ್ತು ಸೇವಾ ತರಬೇತಿ ಸಂಸ್ಥೆಯ ಕನಿಷ್ಟ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾಗಬೇಕು.

2.            ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಆಭಿವೃದ್ಧಿ ನಿಗಮ ನಿಯಮಿತ(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top