ಯೋಜನೆ

ಯೋಜನೆ

ಮಹಾಮಂಡಳಿಯು ಅನುಷ್ಠಾನಗೊಳಿಸಿದ ಯೋಜನೆಗಳು:

1.   ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ಸಿಡಿಸಿ), ನವದೆಹಲಿ ನೆರವಿನ ``ಸಮಗ್ರ ಜಲಾಶಯ ಒಳನಾಡು ಅಭಿವೃದ್ಧಿ ಯೋಜನೆ’: ರೂ. 428.39 ಲಕ್ಷ (1989-90 ರಿಂದ 1997-98)

2.   ಮೈಸೂರು, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ``ಒಳನಾಡು ಮೀನು ಮಾರಾಟ ವ್ಯವಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ’:  ರೂ. 139.00 ಲಕ್ಷ (1993-94 ರಿಂದ 1996-97)

3.   ದಾವಣಗೆರೆ, ರಾಯಚೂರು, ಧಾರವಾಡ, ಶಿವಮೊಗ್ಗ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ಸಿಡಿಸಿ), ನವದೆಹಲಿ ನೆರವಿನ ``ಸಮಗ್ರ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆ’’: ರೂ. 254.42 ಲಕ್ಷ (2002-03 ರಿಂದ 2008-09)

4.   ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹುಡ್ಕೋ ನೆರವಿನ ``ಮತ್ಸ್ಯಾಶ್ರಯ ಯೋಜನೆ’’: (1 ಮತ್ತು 2ನೇ ಹಂತದ ಯೋಜನೆ), ರೂ. 771.792 ಲಕ್ಷ  (2005-06 ರಿಂದ 2007-08)

5.   ರಾಷ್ಟ್ರೀಯ ಮೀನುಗಾರಿಕೆÉ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಬಿ), ಹೈದರಾಬಾದ್ ನೆರವಿನ ``ಕೆರೆ/ಜಲಾಶಯಗಳ ಅಭಿವೃದ್ಧಿ ಕಾರ್ಯಕ್ರಮ’’: ರೂ. 156.85 ಲಕ್ಷ (2007-08)

6.   ಕೇಂದ್ರ ಸರ್ಕಾರದ ``ಮೀನು ಹಿಡುವಳಿ ನಂತರ ತಂತ್ರಜ್ಞಾನ- ಮೀನು ಮಾರಾಟಕ್ಕೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿ ಯೋಜನೆ’’: ರೂ. 75.22 ಲಕ್ಷ (2007-08)

7.   ರಾಷ್ಟ್ರೀಯ ಮೀನುಗಾರಿಗೆ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಬಿ), ಹೈದರಾಬಾದ್ ನೆರವಿನಡಿ ``ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣ’’: ರೂ. 32.07 ಲಕ್ಷ (2010-11)

8.   ರಾಜ್ಯ ಸರ್ಕಾರದ ``ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆ’’ಯಡಿಯಲ್ಲಿ 200 ಮತ್ಸ್ಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಆವರ್ತಕನಿಧಿ ವಿತರಣೆ: ಯೋಜನಾ ವೆಚ್ಚ ರೂ. 100 ಲಕ್ಷ (2009-10)

9.   ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಹೈದರಾಬಾದ್ ಇದರ ಆರ್ಥಿಕ ನೆರವಿನಡಿಶೀತಲ ಸರಪಳಿಯೋಜನೆ ಅನುಷ್ಠಾನ: ಯೋಜನಾ ವೆಚ್ಚ ರೂ. 2.31 ಕೋಟಿ (2012-13)  

10.  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಳನಾಡು ಮೀನು ಮಾರಾಟಕ್ಕೆ ಮೂಲಭೂತ ಸೌಕರ್ಯಗಳ ಬಲವರ್ಧನೆ ಘಟಕ ಎಂಬ ಕಾರ್ಯಕ್ರಮ ಅನುಷ್ಠಾನ: ಯೋಜನಾ ವೆಚ್ಚ ರೂ. 75 ಲಕ್ಷ (2011-12)  

11.  `ಮೀನುಗಾರಿಕೆ ಮಹಾಮಂಡಳಿಗಳಿಗೆ ಬಂಡವಾಳ ಪಾಲುಯೋಜನೆ ಅನುಷ್ಠಾನ: ಯೋಜನಾ ವೆಚ್ಚ ರೂ. 70 ಲಕ್ಷ (2012-13)  

 

 

ಸಮಗ್ರ ಜಲಾಶಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆ (1ನೇ ಹಂತ):

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನವದೆಹಲಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಮೊದಲನೇ ಹಂತದ ``ಸಮಗ್ರ ಜಲಾಶಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆ’’ಯನ್ನು 1989-90 ರಿಂದ 1997-98 ಯೋಜನಾ ಅವಧಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ` 428.39 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

    ಮೀನುಮರಿ ಉತ್ಪಾದನಾ ಕೇಂದ್ರಗಳು:

     ಹೊಸ ನಿರ್ಮಾಣ: ಬಿದರಳ್ಳಿ ಕೇಂದ್ರ, ಮೈಸೂರು ಜಿಲ್ಲೆ

     ಪುನಃಶ್ಚೇತನ:         ಕಬಿನಿ ಮತ್ತು ನುಗು ಕೇಂದ್ರ, ಮೈಸೂರು ಜಿಲ್ಲೆ

     ಗುಂಡಾಲ್ ಕೇಂದ್ರ, ಚಾಮರಾಜನಗರ ಜಿಲ್ಲೆ

 

    ಅಭಿವೃದ್ಧಿ ಪಡಿಸಿದ ಕೆರೆಗಳ ಸಂಖ್ಯೆ: 120

    ಮೀನು ಉತ್ಪಾದನೆ ಹೆಚ್ಚಳ: 5000 ದಿಂದ 8000 ಮೆಟ್ರಿಕ್ ಟನ್

    ಮೀನುಗಾರಿಕೆ ಸಲಕರಣೆ ವಿತರಣೆ: 4950 ಮೀನುಗಾರರು (69 ಸಂಘಗಳು)

    ಮೀನು ಮಾರಾಟ ಮಳಿಗೆ ಸ್ಥಾಪನೆ: 52 ಸಂಖ್ಯೆ

     ಮೀನು ಹ್ಯಾಂಡ್ಲಿಂಗ್ ಶೆಡ್: 50 ಸಂಘಗಳಿಗೆ ಸಹಾಯ  

 

 

 

ಸಮಗ್ರ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆ (2ನೇ ಹಂತ):

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನವದೆಹಲಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಎರಡನೇ ಹಂತದ ``ಸಮಗ್ರ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆ’’ಯನ್ನು 2002-03 ರಿಂದ 2008-09 ಯೋಜನಾ ಅವಧಿಯಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ` 254.42 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

     ಮೀನುಮರಿ ಉತ್ಪಾದನಾ ಕೇಂದ್ರಗಳು:

     ಹೊಸ ನಿರ್ಮಾಣ: ಭದ್ರಾ ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ

 

    ಅಭಿವೃದ್ಧಿ ಪಡಿಸಿದ ಕೆರೆಗಳ ಸಂಖ್ಯೆ: 13

    ಮೀನುಗಾರಿಕೆ ಸಲಕರಣೆ ವಿತರಣೆ: 252 ಮೀನುಗಾರರು (13 ಸಂಘಗಳು)

     ಮೀನು ಮಾರಾಟ ಮಳಿಗೆ ಸ್ಥಾಪನೆ: 19 ಸಂಖ್ಯೆ

ಮೀನು ಮಾರಾಟಕ್ಕೆ ಸಹಾಯ: 35 ಮೀನುಗಾರರು (ಬೈಸಿಕಲ್ ಮತ್ತು ಕ್ರೇಟ್ಸ್)  

 

ಮತ್ಸ್ಯಾಶ್ರಯ ಯೋಜನೆ:

                ಹುಡ್ಕೊ, ನವದೆಹಲಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ 1 ಮತ್ತು 2ನೇ ಹಂತದ ``ಮತ್ಸ್ಯಾಶ್ರಯ ಯೋಜನೆಯನ್ನು 2005-06 ರಿಂದ 2007-08 ಯೋಜನಾ ಅವಧಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಹಾವೇರಿ ಜಿಲ್ಲೆಗಳಲ್ಲಿ ` 721.792 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  

 

ಸಾಧನೆ ಮತ್ತು ಸೌಲಭ್ಯಗಳು:

     ನಿರ್ಮಿಸಲಾದ ಮನೆಗಳು: 2411

 

ಒಳನಾಡು ಮೀನು ಮಾರಾಟ ವ್ಯವಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ:

ಕೇಂದ್ರ ಸರ್ಕಾರದ ಆರ್ಥಿಕ ನೆರವಿನಒಳನಾಡು ಮೀನು ಮಾರಾಟ ವ್ಯವಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಯನ್ನು 1993-94 ರಿಂದ 1996-97 ಯೋಜನಾ ಅವಧಿಯಲ್ಲಿ ಮೈಸೂರು, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ` 139.00 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  

 

ಸಾಧನೆ ಮತ್ತು ಸೌಲಭ್ಯಗಳು:

      ನಿರ್ಮಿಸಲಾದ ಮಂಜುಗಡ್ಡೆ ಮತ್ತು ಶೀತಲಗೃಹ ಕಾರ್ಖಾನೆ: 03 (ಮೈಸೂರು, ರಾಯಚೂರು &  ಹಾವೇರಿ)

     ಪ್ರತಿ ಮಂಜುಗಡ್ಡೆ ಘಟಕಗಳ ಉತ್ಪಾದನಾ ಸಾಮಥ್ರ್ಯ: 6 ಟನ್

      ಪ್ರತಿ ಶೀತಲಗೃಹ ಘಟಕಗಳ ಸಾಮಥ್ರ್ಯ: 5 ಟನ್

      ಮೀನು ಸಾಗಾಣಿಕೆ ವಾಹನ: 02 ಟಾಟಾ 407

       ಮೀನು ಮಾರಾಟ ಮಳಿಗೆ ನಿರ್ಮಾಣ: 16 ಸಂಖ್ಯೆ

      ಮೀನು ಮಾರಾಟಕ್ಕೆ ಬೈಸಿಕಲ್ ಮತ್ತು ಕ್ರೇಟ್: 90 ಮೀನುಗಾರರಿಗೆ

 

ಮೀನು ಹಿಡುವಳಿ ನಂತರ ತಂತ್ರಜ್ಞಾನ- ಮೀನು ಮಾರಾಟಕ್ಕೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿ ಯೋಜನೆ:

ಕೇಂದ್ರ ಸರ್ಕಾರದ ಆರ್ಥಿಕ ನೆರವಿನಮೀನು ಹಿಡುವಳಿ ನಂತರ ತಂತ್ರಜ್ಞಾನ- ಮೀನು ಮಾರಾಟಕ್ಕೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿ ಯೋಜನೆಯನ್ನು 2007-08 ನೇ ಸಾಲಿನ ಯೋಜನಾ ಅವಧಿಯಲ್ಲಿ ` 75.22 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  

 

ಸಾಧನೆ ಮತ್ತು ಸೌಲಭ್ಯಗಳು:

     ಮೀನು ಮಾರಾಟ ಮಳಿಗೆ ನಿರ್ಮಾಣ: 17

     ಡೀಪ್ಫ್ರೀಜûರ್ ಮತ್ತು ಸ್ಟೆಬಿಲೈಜûರ್: 17

     ಎಲೆಕ್ಟ್ರಾನಿಕ್ ತಕ್ಕಡಿ: 17

     ಮೀನು ಸಾಗಾಣಿಕೆ ವಾಹನ: 02 ಟಾಟಾ 407 (01 ಇನ್ಸುಲೆಟೆಡ್)

     ಮೀನು ಸಾಗಾಣಿಕೆ ವಾಹನ: 01 ಟಾಟಾ ಏಸ್

     ಕಂಪ್ಯೂಟರ್, ಪ್ರಿಂಟರ್, ಫ್ಯಾಕ್ಸ್, ಸ್ಕ್ಯಾನರ್, ಯುಪಿಎಸ್: 03

      ಶಾಖಾ ನಿರೋಧಕ ಪೆಟ್ಟಿಗೆಗಳು: 1500 ಸಂಖ್ಯೆ

ಫಿಶ್ ಕ್ರೇಟ್ಸ್, ಫಿಶ್ ಕಟಿಂಗ್ ಮತ್ತು ಸ್ವಚ್ಛತಾ ಉಪಕರಣಗಳು: 17 

 

ಕೆರೆ, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಯೋಜನೆ:

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ ಇದರ ಆರ್ಥಿಕ ನೆರವಿನಕೆರೆ, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಯೋಜನೆಯನ್ನು 2007-08 ನೇ ಸಾಲಿನ ಯೋಜನಾ ಅವಧಿಯಲ್ಲಿ ` 156.85 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  

 

ಸಾಧನೆ ಮತ್ತು ಸೌಲಭ್ಯಗಳು:

     ಮಹಾಮಂಡಳಿಯ ಮುಖಾಂತರ ಅಭಿವೃದ್ಧಿ ಪಡಿಸಲಾದ ಕೆರೆ, ಜಲಾಶಯ: 12

     ಮೀನುಮರಿ ದಾಸ್ತಾನು: 43.08 ಲಕ್ಷ ಅಡ್ವಾನ್ಸ್ ಫಿಂಗರ್ಲಿಂಗ್ಸ್

     ಮೀನುಗಾರಿಕೆ ಇಲಾಖೆ ಮುಖಾಂತರ ಅಭಿವೃದ್ಧಿ ಪಡಿಸಲಾದ ಜಲಾಶಯ: 06

      ಮೀನುಮರಿ ದಾಸ್ತಾನು: 72.89 ಲಕ್ಷ ಅಡ್ವಾನ್ಸ್ ಫಿಂಗರ್ಲಿಂಗ್ಸ್

      ಮೀನು ಸಾಕಾಣೆ ಕೊಳಗಳ ನಿರ್ಮಾಣಕ್ಕಾಗಿ ಸಹಾಯಧನ

       ಮೀನುಗಾರರಿಗೆ ತರಬೇತಿ ಹಾಗೂ ತಿಳಿವಳಿಕೆ ಕಾರ್ಯಕ್ರಮ

 

ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣ ಯೋಜನೆ:

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ ಇದರ ಆರ್ಥಿಕ ನೆರವಿನಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣ ಯೋಜನೆಯನ್ನು 2010-11 ನೇ ಸಾಲಿನ ಯೋಜನಾ ಅವಧಿಯಲ್ಲಿ ಮೈಸೂರು, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ` 32.07 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  

 

ಸಾಧನೆ ಮತ್ತು ಸೌಲಭ್ಯಗಳು:

      ಅಭಿವೃದ್ಧಿಪಡಿಸಲಾದ ಕೇಂದ್ರಗಳು: ಕಬಿನಿ, ನುಗು, ಬಿದರಳ್ಳಿ (ಮೈಸೂರು ಜಿಲ್ಲೆ)

        ಗುಂಡಾಲ್ (ಚಾಮರಾಜನಗರ ಜಿಲ್ಲೆ)

        ಭದ್ರಾ ಪ್ರಾಜೆಕ್ಟ್ (ಶಿವಮೊಗ್ಗ ಜಿಲ್ಲೆ)

 

ಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿ ಯೋಜನೆ:

ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿ ಯೋಜನೆಯನ್ನು 2008-09 ನೇ ಸಾಲಿನ ಯೋಜನಾ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ` 30.00 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

             ಅಭಿವೃದ್ಧಿಪಡಿಸಲಾದ ಕೇಂದ್ರ: ಕಬಿನಿ (ಮೈಸೂರು ಜಿಲ್ಲೆ)

             ನವೀಕರಿಸಲಾದ ಕೊಳಗಳು: 19

             ನವೀಕರಿಸಲಾದ ಸಿಬ್ಬಂದಿ ವಸತಿ ಗೃಹಗಳು: 03 ಅವಳಿ ವಸತಿಗೃಹಗಳು

 

ಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆ:

ರಾಜ್ಯ ಸರ್ಕಾರದ ಆರ್ಥಿಕ ನೆರವಿನಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆಯನ್ನು 2009-10 ನೇ ಸಾಲಿನ ಯೋಜನಾ ಅವಧಿಯಲ್ಲಿ ಕರಾವಳಿ ಜಿಲ್ಲೆ ಹೊರತುಪಡಿಸಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ` 100.00 ಲಕ್ಷಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

             ಮೀನು ಸಲಕರಣೆ, ಮೀನು ಮಾರಾಟ ಮತ್ತು ಸಂಬಂಧಿತ ಚಟುವಟಿಕೆಗೆ ಆವರ್ತಕ ನಿಧಿ

             ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳು: 200

             ಒಟ್ಟು ಫಲಾನುಭವಿಗಳು: 2000 ಮಹಿಳಾ ಮೀನುಗಾರರು

 

ಶೀತಲಸರಪಳಿ ಯೋಜನೆ:

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಹ್ಶೆದರಾಬಾದ್ ಇದರ ಆರ್ಥಿಕ ನೆರವಿನಶೀತಲ ಸರಪಳಿ’’ ಯೋಜನೆಯನ್ನು 2012-13 ನೇ ಸಾಲಿನ ಯೋಜನಾ ಅವಧಿಯಲ್ಲಿ ` 2.31 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

             ಮೈಸೂರು ನಗರದ ವಿಶ್ವೇಶ್ವರನಗರದಲ್ಲಿ 10 ಟನ್ ಸಾಮಥ್ರ್ಯದ ಮಂಜುಗಡ್ಡೆ ಘಟಕ 

             ಮೈಸೂರು ನಗರದ ವಿಶ್ವೇಶ್ವರನಗರದಲ್ಲಿ 05 ಟನ್ ಸಾಮಥ್ರ್ಯದ ಶೀತಲಗೃಹ ಘಟಕ (2)

             ಮೈಸೂರು ನಗರದ ವಿಶ್ವೇಶ್ವರನಗರದಲ್ಲಿ 05 ಟನ್ ಸಾಮಥ್ರ್ಯದ ಘನೀಕೃತ ಘಟಕ

             ಮೀನು ಮಾರಾಟ ಮಳಿಗೆ

             ಮೀನು ಸಂಸ್ಕರಣ ಘಟಕ

             ತರಬೇತಿ ಕೇಂದ್ರ

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಳನಾಡು ಮೀನು ಮಾರಾಟಕ್ಕೆ ಮೂಲಭೂತ ಸೌಕರ್ಯಗಳ ಬಲವರ್ಧನೆ ಘಟಕ ಎಂಬ ಯೋಜನೆಯನ್ನು 2011-12 ನೇ ಸಾಲಿನ ಯೋಜನಾ ಅವಧಿಯಲ್ಲಿ ` 75.00 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

 

ಸಾಧನೆ ಮತ್ತು ಸೌಲಭ್ಯಗಳು:

             ಮೀನಿನ ವಿನ್ಯಾಸದ 30 ಮೀನು ಮಾರಾಟ ಮಳಿಗೆ ಸ್ಥಾಪನೆ 

             ಮೀನು ಮಾರಾಟ ಮಳಿಗೆಗಳಿಗೆ 400 ಲೀಟರ್ ಸಾಮಥ್ರ್ಯದ ಡೀಪ್ಫ್ರೀಜûರ್, 100 ಕೆಜಿ ಸಾಮಥ್ರ್ಯದ ವಿದ್ಯುತ್ ಚಾಲಿತ ತಕ್ಕಡಿ, 100 ಲೀಟರ್ ಸಾಮಥ್ರ್ಯದ ಶಾಖಾ ನಿರೋಧಕ ಪೆಟ್ಟಿಗೆ ಮತ್ತು ಡಸ್ಟ್ಬಿನ್ಗಳನ್ನು ವಿತರಿಸಲಾಗಿದೆ.

 

ಮಹಾಮಂಡಳದ ಕಾರ್ಯಕ್ರಮಗಳ ಕುರಿತು ಆರ್ಥಿಕ ಹಾಗೂ ಭೌತಿಕ ಪ್ರಗತಿಯ ವಿವರಗಳ ಅನುಬಂಧಗಳನ್ನು ಅಡಕಗೊಳಿಸಲಾಗಿದೆ.

  
  
  
  
  
Description
  
There are no items to show in this view of the "Schemes" document library.
ವಿಷಯ ನಿರ್ವಹಣೆ : ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ ಮೈಸೂರು., ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.