ಪರಿಚಯ


ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವನ್ನು ಭಾರತ ಸರ್ಕಾರದ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಂತ್ರಾಲಯವು ಪರಿಸರ (ನಿಯಂತ್ರಣ) ಕಾಯ್ದೆ 1986ರ ನಿಯಮ(3)ರ ಉಪ ನಿಯಮ(1) & (3)ರ ಅಡಿಯಲ್ಲಿ ಕರಾವಳಿ ವಲಯ ನಿರ್ವಹಣ ಅಧಿಸೂಚನೆ 2011ರಲ್ಲಿ ನಿಗಧಿಪಡಿಸಿದ ಕಾರ್ಯವನ್ನು ನಿಯಂತ್ರಿಸಲು ಮತ್ತು ನಿರ್ವಹಿಸುವ ಉದ್ದೇಶದಿಂದ ರಚಿಸಲಾಗಿದೆ. ಪ್ರಾಧಿಕಾರವು ಕರಾವಳಿ ಪರಿಸರದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದೆಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ವಲಯಗಳಲ್ಲಿ ಪರಿಸರದ ಮಾಲಿನ್ಯವನ್ನು ತಡೆಗಟ್ಟುವುದು, ತಗ್ಗಿಸುವುದು ಮತ್ತು ನಿಯಂತ್ರಿಸುವ ಉದ್ದೇಶವನ್ನು ಸಹ ಒಳಗೊಂಡಿದೆಕರಾವಳಿ ನಿಯಂತ್ರಣ ವಲಯದ ವರ್ಗೀಕರಣದಲ್ಲಿ ಬದಲಾವಣೆಗಳಿಗೆ ಅಥವಾ ಬದಲಾವಣೆಗಳಿಗೆ ಪ್ರಸ್ತಾವನೆಗಳನ್ನು ಪರಿಶೀಲಿಸುವ ಹಾಗೂ ಪರಿಸರ (ನಿಯಂತ್ರಣ) ಕಾಯ್ದೆ 1986ರ ನಿಬಂಧನೆಗಳ ಉಲ್ಲಂಘನೆಯ ಪ್ರಕರಣಗಳನ್ನು ವಿಚಾರಿಸುವ ಮತ್ತು CRZ ಅಧಿಸೂಚನೆಯ 2011ರ  ನಿಬಂಧನೆಗಳನ್ನು ಉಲ್ಲಂಘಿಸಿರುವ ಪ್ರಕರಣಗಳನ್ನು ಪರಿಶೀಲಿಸಲು ಪ್ರಾಧಿಕಾರಕ್ಕೆ ಅಧಿಕಾರವನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು  ಕರ್ನಾಟಕ ಸರ್ಕಾರದ, ಅರಣ್ಯ, ಪರಿಸರ ಮತ್ತು  ಜೀವಿಪರಿಸ್ಥಿತಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ  ಅಧ್ಯಕ್ಷತೆಯಲ್ಲಿ  ಕಾರ್ಯನಿರ್ವಹಿಸುತ್ತದೆ ಹಾಗೂ ಇದರ ಕೇಂದ್ರಸ್ಥಾನವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುತ್ತದೆ.     ವಿಶೇಷ ನಿರ್ದೇಶಕರು (ತಾಂತ್ರಿಕ  ಶಾಖೆ), ಅರಣ್ಯ ಪರಿಸರ ಮತ್ತು ಜೀವ ಪರಿಸ್ಥಿತಿ ಇಲಾಖೆ ಇವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಪರಿಸರ ಹಾಗೂ ಜೀವ ಪರಿಸ್ಥಿತಿ ಇಲಾಖೆಯು ಪ್ರಾಧಿಕಾರಕ್ಕೆ ಸಚಿವಾಲಯದ ಸಹಾಯವನ್ನು ಒದಗಿಸುತ್ತದೆಮೂರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಜಿಲ್ಲಾ ಕರಾವಳಿ ನಿರ್ವಹಣಾ ಸಮಿತಿಗಳು ಪ್ರಾಧಿಕಾರದ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಪ್ರಾಧಿಕಾರಕ್ಕೆ ಸಹಾಯ ಮಾಡುತ್ತವೆ.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದಿಂದ ದಿನಾಂಕ:26ನೇ ನವೆಂಬರ್ 1996ರಂದು ರಚಿಸಲಾಗಿದೆ.  ಮುಂದುವರಿದು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವನ್ನು ಮೂರು ವಷಕ್ಕೆ ಅಂದರೆ ದಿನಾಂಕ:1-3-2017ರಿಂದ ಜಾರಿಗೆ ಬರುವಂತೆ  ಈ ಕೆಳಕಂಡ ಸದಸ್ಯರೊಂದಿಗೆ ಪುನರ್ ರಚಿಸಲಾಗಿದೆ.  ಅದರ ವಿವರಗಳು ಈ ಕೆಳಕಂಡಂತಿವೆ:

1.

ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿಗಳು,

ಅರಣ್ಯ, ಪರಿಸರ ಮತ್ತು  ಜೀವಿಪರಿಸ್ಥಿತಿ ಇಲಾಖೆ,

4ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು.

ಅಧ್ಯಕ್ಷರು

2

ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿಗಳು,

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,

ವಿಕಾಸ ಸೌಧ, ಬೆಂಗಳೂರು.

ಸದಸ್ಯರು

3.

ಸರ್ಕಾರದ  ಪ್ರಧಾನ ಕಾರ್ಯದರ್ಶಿಗಳು,

ಪ್ರಾವಾಸೋಧ್ಯಮ ಇಲಾಖೆ,

ವಿಕಾಸ ಸೌಧ, ಬೆಂಗಳೂರು

ಸದಸ್ಯರು

4.

ಸರ್ಕಾರದ  ಪ್ರಧಾನ ಕಾರ್ಯದರ್ಶಿಗಳು,

ಪಶು ಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ,

ವಿಕಾಸ ಸೌಧ, ಬೆಂಗಳೂರು.

 ಆಥವಾ ಪ್ರತಿನಿಧಿ

ಸದಸ್ಯರು

5.

ಸರ್ಕಾರದ  ಕಾರ್ಯದರ್ಶಿಗಳು,

ಪರಿಸರ ಹಾಗೂ ಜೀವಿಪರಿಸ್ಥಿತಿ ಇಲಾಖೆ,

ಬಹುಮಹಡಿಗಳ ಕಟ್ಟಡ, ಬೆಂಗಳೂರು.

ಸದಸ್ಯರು

6.

ಸದಸ್ಯ ಕಾರ್ಯದರ್ಶಿಗಳು,

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,

ನಂ.49, ಪರಿಸರ ಭವನ, ಚರ್ಚ್ ಸ್ಟ್ರೀಟ್,

ಬೆಂಗಳೂರು-560 001.

ಸದಸ್ಯರು

7.

ಮಹಾ ನಿರ್ದೇಶಕರು,

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ,

“ಹಸೀರು ಭವನ”, ದೊರೆಸಾನಿಪಾಳ್ಯ ಅರಣ್ಯ ಕ್ಯಾಂಪಸ್, ವಿನಾಯಕನಗರ ವೃತ್ತ, ಜೆ.ಪಿ ನಗರ 5ನೇ ಹಂತ,

ಬೆಂಗಳೂರು-560 078.

ಸದಸ್ಯರು

8.

ನಿರ್ದೇಶಕರು,

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್, (KSRSAC), ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು-560 097.

ಸದಸ್ಯರು

9.

ಡಾ: ಕೆ.ಎಸ್. ಜಯಪ್ಪ,

ಪ್ರಾಧ್ಯಪಕರು, ಸಾಗರ ಭೂವಿಜ್ಞಾನ ವಿಭಾಗ,

ಮಂಗಳೂರು ವಿಶ್ವವಿದ್ಯಾಲಯ,

ಮಂಗಳ ಗಂಗೋತ್ರಿ, ಮಂಗಳೂರು.

ಸದಸ್ಯರು

10.

ಡಾ: ದ್ವಾರಕೀಶ್ ಜಿ.ಎಸ್.

ಪ್ರಾಧ್ಯಪಕರು ಮತ್ತು ಮುಖ್ಯಸ್ಥರು,

ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ, ಸೂರತ್ಕಲ್, ಮಂಗಳೂರು.

ಸದಸ್ಯರು

11.

ಡಾ: ಜಗನಾಥ್ ಎಲ್. ರಾಥೋಡ್,

ಸಹ ಪ್ರಾಧ್ಯಾಪಕರು,

ಸಾಗರ ಭೂವಿಜ್ಞಾನ ಅಧ್ಯಾಯನ ವಿಭಾಗ,

ಕರ್ನಾಟಕ ವಿಶ್ವವಿದ್ಯಾಲಯ,

ಪಿ.ಜಿ ಮತ್ತು ಸಂಶೋಧನ ಕೇಂದ್ರ, ಕೋಡಿಭಾಗ್,

ಕಾರವಾರ-581303.

ಸದಸ್ಯರು

12.

ಡಾ: ಲಕ್ಷ್ಮೀಪತಿ ಎಂ.ಟಿ.

ಸಹ ಪ್ರಧ್ಯಾಪಕರು,

ಅಕ್ವ್ಯಾಟಿಕ್ ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್,

ಕಾಲೇಜ್ ಆಫ್ ಫೀಷರಿಸ್, ಮತ್ಸ್ಯನಗರ, ಮಂಗಳೂರು.

ಸದಸ್ಯರು

13.

ನಿರ್ದೇಶಕರು,

ಪೌರಾಡೆಳಿತ ನಿರ್ದೇಶನಾಲಯ,

ಡಾ: ಬಿ.ಆರ್ ಅಂಬೇಡ್ಕರ್ ವೀಧಿ,

 9 ಮತ್ತು 10ನೇ ಮಹಡಿ, ವಿ.ವಿ ಟವರ್, ಬೆಂಗಳೂರು.

ಸದಸ್ಯರು

14.

ಡಾ: ಎಂ. ದಿನೇಶ್ ನಾಯಕ್,

ಅಧ್ಯಕ್ಷರು

ಸಸ್ಯಶಾಮಲ, ವಿಠ್ಠಲ, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ,

ಸದಸ್ಯರು

15.

ವಿಶೇಷ ನಿರ್ದೇಶಕರು (ತಾಂತ್ರಿಕ ಶಾಖೆ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,

ಬಹುಮಹಡಿಗಳ ಕಟ್ಟಡ, ಬೆಂಗಳೂರು.

ಸದಸ್ಯ ಕಾರ್ಯದರ್ಶಿಗಳು,