​ಮೂಲೊದ್ದೇಶ ​


ಮಂಡಳಿಯ ಮುಖ್ಯ ಉದ್ದೇಶಗಳು:-

  • ಕೊಳಚೆ ನಿವಾಸಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅರಿಯಲು ಕೊಳಚೆ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಕೈಗೊಳ್ಳುವುದು.
  • ಕೊಳಚೆ ಪ್ರದೇಶ ಪರಿಸರ ಸುಧಾರಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದು.
  • ಕೊಳಚೆ ನಿವಾಸಿಗಳು ಉತ್ತಮ ವಾತಾವರಣದಲ್ಲಿ ನೆಲೆಸುವಂತೆ ಮಾಡಲು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಸಾರ್ವಜನಿಕ ಶೌಚಗೃಹ ಹಾಗೂ ಸಾಧ್ಯವಾದ ಕಡೆ ಸಮುದಾಯ ಭವನ ನಿರ್ಮಾಣ ಮಾಡುವುದು.
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಧಾನದ ಜೊತೆಗೆ ಹುಡ್ಕೋ ಸಂಸ್ಥೆಯಿಂದ ಸಾಲದ ಹಣ ಪಡೆದು ವಸತಿ ಗೃಹಗಳನ್ನು ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ವಸತಿ ಗೃಹಗಳನ್ನು ಹಂಚಿಕೆ ಮಾಡುವುದು.
  • ಕೊಳಚೆ ನಿವಾಸಿಗಳ ಜೀನವ ಮಟ್ಟವನ್ನು ಸುಧಾರಿಸಲು ಸರ್ಕಾರದ ಚಾಲ್ತಿಯಲ್ಲಿರುವ ಯೋಜನೆಗಳನ್ನು ಉಪಯೋಗಿಸಿಕೊಂಡು ಕೌಶಲ್ಯ ವರ್ದನೆಗೆ ತರಬೇತಿ ನೀಡುವುದು.
  • ಕೊಳಚೆ ನಿವಾಸಿಗಳ ಆರೋಗ್ಯ ಮತ್ತು ಶುಚಿತ್ವವನ್ನು ಕಾಪಾಡಲು ಸಾಮಾಜಿಕ ಅರಿವು ಮೂಡಿಸುವ ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  • ಸಿಬಿಓ/ಎನ್.ಜಿ.ಓ ಗಳ ನೆರವಿನೊಂದಿಗೆ ಸಾಮಾಜಿಕ ಅರಿವು ಮೂಡಿಸಿ, ಸಮುದಾಯದ ಅಭಿವೃದ್ಧಿಯನ್ನು ಮಾಡುವುದು.