Last modified at 18/04/2016 08:35 by Ksfes
Page Content
ಮೂಲೊದ್ದೇಶ
- ಸಾರ್ವಜನಿಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳುವಳಿಕೆಯನ್ನು ನೀಡಲು " ಫೈರ್ ವಾರ್ಡನ್" ವಿಂಗ್ನ್ನು ಸ್ಥಾಪಿಸಲಾಗಿದೆ. ಇಂತಹ ವಿಂಗ್ನಲ್ಲಿ ತರಭೇತಿ ಪಡೆದ ಶಿಕ್ಷಕರಿಂದ ಸಾರ್ವಜನಿಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಶಿಕ್ಷಣವನ್ನು ನೀಡುತ್ತಿದ್ದು, ಇಂತಹ ಶಿಕ್ಷಣದಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ. ಈ ವಿಂಗ್ನಲ್ಲಿ 60 ರಿಂದ 70 ವಿಧ್ಯಾರ್ಥಿಗಳನ್ನು ತರಭೇತಿಗೊಳಿಸಲಾಗಿದೆ. ಇಂತಹ ತರಭೇತಿ ಪಡೆದ ವಿಧ್ಯಾರ್ಥಿಗಳು ಪ್ರತಿ ವರ್ಷ ಸುಮಾರು 1000 ವಿಧ್ಯಾರ್ಥಿಗಳೊಂದಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
- ಿ ಮತ್ತು ಇತರೇ ಅವಘಡಗಳಿಂದ ಜನರ ಜೀವ ಮತ್ತು ಆಸ್ತಿ ರಕ್ಷಣೆಯೇ ಪರಮ ಗುರಿ.
- ಮನುಷ್ಯನಿಂದ ಇಲ್ಲವೇ ಪ್ರಕೃತಿಯಿಂದ ಉಂಟಾಗುವ ಅವಘಡಗಳನ್ನು ಕಂಡು ಹಿಡಿದು ಅವುಗಳನ್ನು ತಡೆಗಟ್ಟುವುದು.
- ಿ ಸಂರಕ್ಷಣೆ, ಅಗ್ನಿ ತಡೆಗಟ್ಟುವಿಕೆ, ತುರ್ತುಪರಿಹಾರ ಕಾರ್ಯ, ಅಣುಕ ಪ್ರದರ್ಶನ ಹಾಗೂ ಸಾಮೂಹಿಕ ಅಭ್ಯಾಸಗಳನ್ನೊಳಗೊಂಡ ವಿಷಯಗಳ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು.
- ು ಅಂತಸ್ತುಗಳ ಕಟ್ಟಡಗಳು, ಸಾರ್ವಜನಿಕ ಮನರಂಜನಾ ಸ್ಥಳಗಳು, ರೆಸಾಟ್ರ್ಸ್ಗಳು , ಸಾರ್ವಜನಿಕ ಸಭೆ. ಸಮಾರಂಭ ಸ್ಥಳಗಳು, ಅಪಾಯಕ್ಕೆ ಗುರಿಮಾಡುವ ಕಾರ್ಖಾನೆಗಳು, ದೊಡ್ಡ ದೊಡ್ಡ ದಾಸ್ತಾನು ಮಳಿಗೆಗಳು, ವ್ಯಾಪಾರ ವಾಣಿಜ್ಯ ಮಳಿಗೆಗಳು ಮತ್ತು ಇತರೆ ಅಪಾಯಕಾರಿಯಾದ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತೆಯ ವಿಧಾನಗಳನ್ನು ಜಾರಿಗೆ ತರಲು.