​ಸ್ಥಾಪನೆ:

ರ್ನಾಟಕ ರಾಜ್ಯದಲ್ಲಿ ಕಂಪನಿ ಕಾಯ್ದೆ 1956 ರ ಅಡಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ.) ಎಂಬ ಹೆಸರಿನಲ್ಲಿ ನೊಂದಣಿ ಮಾಡಿದ್ದು, ದಿನಾಂಕ 19-01-2011 ರಿಂದ ಅಸ್ಥಿತ್ವಕ್ಕೆ ಬಂದಿರುತ್ತದೆ.

ಉದ್ದೇಶ:

ರಾಜ್ಯದಲ್ಲಿ ಮಾವಿನ ಬೆಳೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಾವು ಬೆಳೆಗಾರರ ಅಭ್ಯುದಯಕ್ಕೆ ಪೂರಕವಾಗಿ ಮಾವು ಬೇಸಾಯ, ಕೊಯ್ಲೋತ್ತರ ನಿರ್ವಹಣೆ, ಮಾವು ಮಾರಾಟ ಮತ್ತು ಮಾವಿನ ಹಣ್ಣುಗಳ ರಫ್ತಿಗೆ ಪ್ರೋತ್ಸಾಹಿಸುವುದು.

ನಿಗಮದ ಅಧೀನದಲ್ಲಿ ಎರಡು ಮಾವು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.

1.ಮಾವು ಅಭಿವೃದ್ಧಿ ಕೇಂದ್ರ, ಹೊಗಳಗೆರೆ ತೋಟಗಾರಿಕೆ ಕ್ಷೇತ್ರ, ಶ್ರೀನಿವಾಸಪುರ, ಕೋಲಾರ ಜಿಲ್ಲೆ- 

 ಈ ​ ಕೇಂದ್ರದ ಉದ್ದೇಶವು ಮಾವು ಬೆಳೆಗಾರರಿಗೆ ಅಗತ್ಯವಿರುವ ಕೊಯ್ಲು ಪೂರ್ವ ತರಬೇತಿ, ಪ್ರಾತ್ಯಕ್ಷತೆ ಮತ್ತು ತಂತ್ರಜ್ಞಾನ ಪ್ರಸರಣದ ಮೂಲಕ ಅರಿವು ನೀಡಲಾಗುತ್ತಿದೆ.

​2.ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆ ತೋಟಗಾರಿಕೆ ಕ್ಷೇತ್ರ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ-

ಈ ಕೇಂದ್ರದ ಉದ್ದೇಶವು ರೈತರಿಗೆ ಮಾವು ಬೆಳೆಯ ಕೊಯ್ಲೋತ್ತರ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

 

 

​​​ ​


​​