ಕೈಗಾರಿಕೆಗಳು

ಕರ್ನಾಟಕದಲ್ಲಿ ಕೈಗಾರಿಕೆ

 

ಭಾರತದ ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕವು ಪ್ರಮುಖ ವಹಿಸುತ್ತಿದ್ದು ಮುಖ್ಯವಾಗಿ ಹೆಚ್ಚಿನ ತಂತ್ರಜ್ಞಾನದ ಕೈಗಾರಿಕೆಗಳಾದ ವಿದ್ಯುತ್ ಹಾಗೂ ವಿದ್ಯುನ್ಮಾನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇತ್ತೀಚಿಗೆ ನ್ಯಾನೋ ತಂತ್ರಜ್ಞಾನದ ಕೈಗಾರಿಕೆಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒಟ್ಟಿನಲ್ಲಿ ಕರ್ನಾಟಕದ ಕೈಗಾರಿಕಾ ವಿನ್ಯಾಸವು, ಒಂದು ಕಡೆ ಆಧುನಿಕ ಉನ್ನತಮಟ್ಟದ ತಂತ್ರಜ್ಞಾನದ ಬಂಡವಾಳ ವಸ್ತುಗಳು ಹಾಗೂ ತೀವ್ರ ಜ್ಞಾನದಾಹಿ ಕೈಗಾರಿಕೆ, ಇನ್ನೊಂದೆಡೆ ಸಾಂಪ್ರದಾಯಿಕ ಗ್ರಾಹಕ ವಸ್ತುಗಳ ಕೈಗಾರಿಕೆಗಳ ಸಮ್ಮಿಶ್ರಣವಾಗಿದೆ. ಇದರೊಂದಿಗೆ ಕರ್ನಾಟಕದ ಕೈಗಾರಿಕಾ ಬೆಳವಣಿಗೆ ಹಾಗೂ ಸರ್ಕಾರವು ತೆಗೆದುಕೊಂಡಿರುವ ಕೈಗಾರಿಕಾ ನೀತಿ ನಿರೂಪಣೆಗಳ ಬಗ್ಗೆ ಸ್ಥೂಲ ವಿವರಣೆಯನ್ನು ಇತರೆ ಮಾಹಿತಿಯೊಂದಿಗೆ ಈ ಮಾಹಿತಿಯೊಂದಿಗೆ ನೀಡುವ ಪ್ರಯತ್ನ ಮಾಡಲಾಗಿದೆ. 0

 

ಕೈಗಾರಿಕೆ ಉತ್ಪಾದನೆಯ ಪ್ರವೃತ್ತಿಗಳು:

ಕೈಗಾರಿಕಾ ಉತ್ಪಾದನೆಯ ಪ್ರವೃತ್ತಿಗಳನ್ನು ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿನ ಬದಲಾವಣೆಗಳಿಂದ ವಿಶ್ಲೇಷಿಸಬಹುದಾಗಿದೆ. ಆದರೆ ವರ್ಷದ ಒಟ್ಟು ಮೌಲ್ಯಾಧಾರಿತ ಕೊಡುಗೆಯ ಆಧಾರದ ಮೇಲೆ ವಿವಿಧ ವಲಯ ಹಾಗೂ ಉಪ ವಲಯಗಳ ತೂಕವನ್ನು ನಿರ್ಧರಿಸಿ ಸೂಚ್ಯಂಕವನ್ನು ರಚಿಸಲಾಗುವುದು. ಉತ್ಪಾದನಾ ವಲಯವು ಶೇ.೮೧.೧ರಷ್ಟು ಹೆಚ್ಚಿನ ತೂಕವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ವಿದ್ಯುತ್ ವಲಯ (ಶೇ.೧೧.೮) ಹಾಗೂ ಗಣಿ ವಲಯ (ಶೇ. ೬.೯) ಇರುತ್ತದೆ.

 

 

ಬಳಕೆಯಾಧಾರಿತ ಕೈಗಾರಿಕಾ ಗುಂಪುಗಳ ಉತ್ಪಾದನಾ ಬೆಳವಣಿಗೆ

ಸಂಘಟಿತ ಕೈಗಾರಿಕಾ ವಲಯದ ಬಳಕೆಯಾಧಾರಿತ ಕೈಗಾರಿಕಾ ಗುಂಪುಗಳ ಉತ್ಪಾದನಾ ಬೆಳವಣಿಗೆಯನ್ನು, ೧) ಮೂಲ ವಸ್ತುಗಳು ೨) ಬಂಡವಾಳ ವಸ್ತುಗಳು ೩) ಮಧ್ಯವರ್ತಿ ವಸ್ತುಗಳು ೪) ಗ್ರಾಹಕ ವಸ್ತುಗಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೈಗಾರಿಕಾ ಉತ್ಪಾದನಾ ವಲಯದ ನಾಲ್ಕು ವಿಭಾಗಗಳಲ್ಲಿ ಗ್ರಾಹಕ ವಸ್ತುಗಳ ವಲಯವು ಅತಿ ಹೆಚ್ಚಿನ ತೂಕ ಹೊಂದಿದ್ದು, ನಂತರದ ಸ್ಥಾನವನ್ನು ಮೂಲ ವಸ್ತುಗಳ ಗುಂಪು ಹೊಂದಿದೆ. ಗ್ರಾಹಕ ವಸ್ತುಗಳ ವಲಯದ ಶೇ.೨೮.೫ರಷ್ಟು ತೂಕದಲ್ಲಿ ಸ್ಥಿರವಲ್ಲದ ಗ್ರಾಹಕ ವಸ್ತುಗಳ ತೂಕ ಶೇ.೨೪.೭ರಷ್ಟು ಹಾಗೂ ಸ್ಥಿರ ಗ್ರಾಹಕ ವಸ್ತುಗಳು ಶೇ.೩.೭ರಷ್ಟು ತೂಕ ಹೊಂದಿವೆ. ಕರ್ನಾಟಕ ತಯಾರಿಕಾ ವಲಯದ ವಿವಿಧ ವರ್ಗೀಕರಣದ ತೂಕ ಅನುಪಾತವು ಈ ನಾಲ್ಕು ಗುಂಪುಗಳ ತೂಕಗಳಿಗೆ ಮೂಲ ಆಧಾರವಾಗಿರುತ್ತವೆ.

ವಾರ್ಷಿಕ ಉತ್ಪಾದನಾ ಕೈಗಾರಿಕಾ ವಲಯದ ಪ್ರಮುಖ ಗುಂಪುಗಳಲ್ಲಿ ಉತ್ಪಾದನಾ ಬೆಳವಣಿಗೆ

ರಾಷ್ಟ್ರೀಯ ಕೈಗಾರಿಕಾ ಸಂಕೇತ- ೨೦೦೪ರ ೨ ಅಂಕಿಗಳ ಮಟ್ಟದಲ್ಲಿ ಕೈಗಾರಿಕಾ ಉತ್ಪಾದನಾವಲಯವನ್ನು ಒಟ್ಟು ೨೨ ಪ್ರಮುಖ ಗುಂಪುಗಳಾಗಿ ವಿಂಗಡಿಸಲಾಗಿದೆ.  ಮೂಲ ಲೋಹ ವಸ್ತುಗಳು (೧೧೯.೯೩ ರಷ್ಟು) ಅತ್ಯದಿಕ ತೂಕವನ್ನು ಹೊಂದಿದ್ದು, ನಂತರದಲ್ಲಿ ರಾಸಾಯನಿಕ ಉತ್ಪನ್ನಗಳು (೧೦೭.೮೯) ಮತ್ತು ಆಹಾರೋತ್ಪನ್ನಗಳು ಹಾಗೂ ಪಾನೀಯಗಳು (೭೧.೩೦) ಇರುತ್ತವೆ. ಈ ೩ ಗುಂಪುಗಳು ೨೦೦೪-೦೫ರ ಆಧಾರ ವರ್ಷದ ಒಟ್ಟು (೮೧೧.೩೬) ತೂಕದಲ್ಲಿ ೧/೩ರಷ್ಟು ತೂಕವನ್ನು ಹೊಂದಿವೆ.

 

ಸಂಘಟಿತ ಉತ್ಪಾದನಾ ವಲಯ

ಕೈಗಾರಿಕಾ ವಾರ್ಷಿಕ ಸಮೀಕ್ಷೆಯು ಸಂಘಟಿತ ಕೈಗಾರಿಕಾ ವಲಯದ ಉತ್ಪಾದಕತೆಗೆ ಸಂಬಂದಿಸಿದಂತೆ ಸುಧೀರ್ಘವಾದ ಅಂಕಿ ಅಂಶಗಳನ್ನು ಪ್ರಸ್ತುತಪಡಿಸುತ್ತದೆ. ೨೦೧೬-೧೭ನೇ ಸಾಲಿನ ಭಾರತದಲ್ಲಿ ಒಟ್ಟು ನೋಂದಣಿಯಾದ ಕೈಗಾರಿಕಾ ಘಟಕಗಳ ಪೈಕಿ ಶೇ.೫.೬೮ರಷ್ಟು ಭಾಗ ಕರ್ನಾಟಕದ್ದಾಗಿದೆ. ಸದರಿ ಸಾಲಿನಲ್ಲಿ ನೋಂದಣಿಯಾದ ಈ ಕೈಗಾರಿಕಾ ಘಟಕಗಳು ಸ್ಥಿರ ಬಂಡವಾಳದಲ್ಲಿ ಶೇ.೫.೬೮ರಷ್ಟು, ಒಟ್ಟು ಹುಟ್ಟುವಳಿಯಲ್ಲಿ ಶೇ.೬.೯೦ ರಷ್ಟು ಹಾಗೂ ಶೇ.೭.೧೧ ರಷ್ಟು ಒಟ್ಟು ಮೌಲ್ಯವರ್ಧಿತ ಕೊಡುಗೆಯನ್ನು ನೀಡಿರುತ್ತವೆ. ೨೦೧೫-೧೬ಕ್ಕೆ ಹೋಲಿಸಿದಾಗ ೨೦೧೬-೧೭ರಲ್ಲಿ ನೋಂದಣಿ ಯಾದ ಕೈಗಾರಿಕಾ ಘಟಕಗಳು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ನೋಂದಣಿಯಾದ ಕೈಗಾರಿಕಾ ವಲಯದ ಪ್ರದರ್ಶನದಲ್ಲಿ ಕಾರ್ಯಾಚರಣೆ ಬಂಡವಾಳ, ಒಟ್ಟು ಹುಟ್ಟುವಳಿ ಮತ್ತು ಹೂಡುವಳಿಯಲ್ಲಿ, ಒಟ್ಟು, ನಿವ್ವಳ ಮೌಲ್ಯವರ್ಧಿತಗಳಲ್ಲಿ ಹಾಗೂ ಲಾಭ ಗಳಿಕೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಸಹ ಸ್ಥಿರ ಬಂಡವಾಳದಲ್ಲಿ ಇಳಕೆಯಾಗಿರುವುದು ಕಂಡು ಬಂದಿದೆ.

 

 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು

ಕರ್ನಾಟಕದ ಕೈಗಾರಿಕಾ ವಲಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು (ಎಂ.ಎಸ್.ಎಂ.ಇ.) ಮುಖ್ಯ ಹಾಗೂ ಬೆಳವಣಿಗೆ ಹೊಂದುತ್ತಿರುವ ಭಾಗವಾಗಿದೆ. ಎಂ.ಎಸ್.ಎಂ.ಇ. ಕಾಯಿದೆ ೨೦೦೬ ಅನುಸಾರವಾಗಿ ಎಂ.ಎಸ್.ಎಂ.ಇ. ಕೈಗಾರಿಕೆ ಘಟಕಗಳನ್ನು ತಯಾರಿಕೆ ಹಾಗೂ ಸೇವಾ ಘಟಕಗಳೆಂದು ಸ್ಥೂಲವಾಗಿ ವಿಂಗಡಿಸಿದೆ. ಈ ಕಾಯ್ದೆಯ ಅನ್ವಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ. ೨೦೧೮-೧೯ನೇ ಸಾಲಿಗೆ ಈ ವಲಯದಲ್ಲಿ ೬೯೨೭೮ ಸೂಕ್ಷ , ಸಣ್ಣ ಮತ್ತು ಮಧ್ಯsಮ ಕೈಗಾರಿಕಾ ಘಟಕಗಳ ರೂ.೧೪೮೭೬.೯೮ ಕೋಟಿಗಳ ಬಂಡವಾಳದಿಂದ ರಾಜ್ಯದಲ್ಲಿ ನೋಂದಣಿಯಾಗಿದ್ದು ೫,೮೨,೯೪೩ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗಿದೆ.

೨೦೧೭-೧೮ನೇ ಸಾಲಿಗೆ ಹೋಲಿಸಿದಾಗ, ೨೦೧೮-೧೯ ರಲ್ಲಿ ನೋಂದಣಿಯಾದ ಘಟಕಗಳು ಶೇ ೪೨.೮೯ ರಷ್ಟು ಹೆಚ್ಚಾಗಿರುವುದು, ಕ್ರಮವಾಗಿ ಬಂಡವಾಳ ಹೂಡಿಕೆ ಶೇ.೨೮.೪೧ ರಷ್ಟು ಹಾಗೂ ಉದ್ಯೋಗಾವಕಾಶವು ಶೇ.೩೨.೩೪ ರಷ್ಟು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ೨೦೧೮-೧೯ರವೇಳೆಗೆ ನೋಂದಣಿಯಾದ  ಒಟ್ಟು ೬೯೨೭೮ ಘಟಕಗಳಲ್ಲಿ, ಸುಮಾರು ೯.೪೩%ರಷ್ಟು (೬೫೩೯ ಘಟಕಗಳು) ಬಟ್ಟೆ ತಯಾರಿಕೆ ಘಟಕಗಳಿದ್ದು ಮೊದಲ ಸ್ಥಾನದಲ್ಲಿ ಇರುತ್ತದೆ. ಶೇ.೮.೨೬ ರಷ್ಟಿರುವ ಆಹಾರೋತ್ಪನ್ನಗಳು ಹಾಗೂ ಪಾನೀಯಗಳಿಗೆ ಸಂಬಂಧಿಸಿದ ಘಟಕಗಳು ನಂತರದ ಸ್ಥಾನದಲ್ಲಿರುತ್ತದೆ. ಶೇ.೧೧.೦೮ ರಷ್ಟು ಬಂಡವಾಳದೊಂದಿಗೆ ಆಹಾರೋತ್ಪನ್ನಗಳು ಹಾಗೂ ಪಾನೀಯಗಳ ಘಟಕಗಳು ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ, ಶೇ.೬.೧೦ ರಷ್ಟು ಬಂಡವಾಳದೊಂದಿಗೆ ಬಟ್ಟೆ ತಯಾರಿಕೆಯ ಘಟಕಗಳು ಇರುವುದು ಕಂಡು ಬಂದಿರುತ್ತದೆ.

ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ, ಶೇ.೭.೭೬ರಷ್ಟು ಉದ್ಯೋಗವಕಾಶಗಳು ಸಿದ್ಧ ಉಡುಪುಗಳ ತಯಾರಿಕೆ, ತುಪ್ಪಳ ಹದಗೊಳಿಸುವುದು ಮತ್ತು ತುಪ್ಪಳಕ್ಕೆ ಬಣ್ಣ ಹಾಕುವ ಘಟಕಗಳಲ್ಲಿ ಸೃಜನೆಯಾಗಿದ್ದು, ಮೊದಲ ಸಾಲ್ಲಿನಲ್ಲಿರುತ್ತದೆ. ನಂತರದಲಿ ಶೇ.೭.೫೩ರಷು ಉದ್ಯೋಗವಕಾಶಗಳು ಆಹಾರೋರೋತ್ಪನ್ನಗಳು ಹಾಗೂ ಪಾನೀಯ ಘಟಕಗಳಲ್ಲಿ ಇರುತ್ತದೆ.

 

 

ಆಯ್ದ ಕೈಗಾರಿಕಾ ವಲಯಗಳು

ಆಹಾರ ಪಾರ್ಕುಗಳ ಪ್ರಸ್ತುತ ಪ್ರಗತಿ

ಅ) ೧೦ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯವು ಮಾಲೂರು (ಕೋಲಾರ ಜಿಲೆ), ಹಿರಿಯೂರು (ಚಿತ್ರದುರ್ಗ ಜಿಲ್ಲೆ), ಬಾಗಲಕೋಟೆ (ಬಾಗಲಕೋಟೆ ಜಿಲ್ಲೆ) ಹಾಗೂ ಜೇವರ್ಗಿ (ಕಲಬುರ್ಗಿ ಜಿಲ್ಲೆ) ಗಳಲ್ಲಿ ಆಹಾರ ಪಾರ್ಕುಗಳ ಸ್ಥಾಪನೆಗೆ ಅನುಮೋದನೆಯನ್ನು ನೀಡಿರುತ್ತದೆ. ಸದರಿ ಪಾರ್ಕುಗಳ ಸ್ಥಾಪನಾ ಕಾರ್ಯದ ಉಸ್ತುವಾರಿ ಸಂಸ್ಥೆಯಾಗಿ ಆಹಾರ ಕರ್ನಾಟಕ ನಿಯಮಿತವನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.ಸದರಿ ಪಾರ್ಕುಗಳ ಪ್ರಸ್ತುತ ಪ್ರಗತಿಯ ಸ್ಥೂಲ ವಿವರ ಕೆಳಕಂಡಂತಿದೆ.

೧. ಇನ್ನೋವಾ ಅಗ್ರಿ ಬಯೋ-ಪಾರ್ಕು ನಿಯಮಿತ ಮಾಲೂರು: ಕೋಲಾರ ಜಿಲ್ಲೆಯ, ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ೮೭ ಎಕರೆ ವಿಸ್ತೀರ್ಣದಲ್ಲಿ ಆಹಾರ ಪಾರ್ಕನ್ನು ಅಭಿವೃದ್ಧಿ ಪಡಿಸಲಾಗಿದೆ. ಕಂಪನಿಯು ಹಣ್ಣು ಮತ್ತು ತರಕಾರಿ ಶ್ರೇಣಿಗೊಳಿಸುವ, ಧಾನ್ಯ ಸಂಸ್ಕರಿಸುವ ಮತ್ತು ಪ್ಯಾಕೇಜಿಂಗ್ ಯಂತ್ರೊಪಕರಣಗಳನ್ನು ಅಳವಡಿಸಿದೆ. ಇದರ ಜೊತೆಗೆ ಪ್ರಹಾರಾವಿಕಿರಣ ಘಟಕವನ್ನು ಪೂರ್ಣಗೊಳಿಸಿದ್ದು ಎಲ್ಲ ಘಟಕಗಳು ಕಾರ್ಯ ಪ್ರಾರಂಭಿಸಿರುತ್ತವೆ. ಇದುವರೆವಿಗೂ ೨೨ ಆಹಾರ ಸಂಸ್ಕರಣಾ ಘಟಕಗಳಿಗೆ ೫೦.೪೮ ಎಕರೆ ಭೂಮಿ ಹಂಚಿಕೆ/ಕೊಡಲು ತೀರ್ಮಾನ ಮಾಡಿದ್ದು, ಉಳಿದ ೩.೦೮ ಎಕರೆ ಭೂಮಿ ಹಂಚಿಕೆಗೆ ಲಭ್ಯsವಿರುತ್ತದೆ.

ಸದರಿ ಪಾರ್ಕಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ ರೂ.೪೦೦ ಲಕ್ಷಗಳ ಅನುದಾನ (ಒಟ್ಟು ರೂ.೮೦೦ ಲಕ್ಷಗಳು) ನೀಡಲಾಗಿದೆ. ಪ್ರಸ್ತುತ ೧೪ ಆಹಾರ ಸಂಸ್ಕರಣಾ ಘಟಕಗಳು ಪಾರ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಸದರಿ ಪ್ರಹಾರಾವಿಕಿರಣ ಘಟಕದಲ್ಲಿ ಕಳೆದ ವರ್ಷದಿಂದ ಮಾವಿನ ಹಣ್ಣಗಳನ್ನು ಸಂಸ್ಕರಿಸಿ ಅಮೇರಿಕಾ ಹಾಗೂ ಆಷ್ಟ್ರೇಲಿಯಾ ದೇಶಗಳಿಗೆ ರಫ್ತನ್ನು ಮಾಡಲಾಗುತ್ತಿದೆ.

೨. ಗ್ರೀನ್‌ಪುಡ್ ಪಾರ್ಕ್, ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ, ನವನಗರ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು ೧೦೦ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದುವರೆಗೂ ೧೮ ಆಹಾರ ಸಂಸ್ಕರಣಾ ಘಟಕಗಳಿಗೆ ಒಟ್ಟು ೫೨.೫ ಎಕರೆ ಭೂಮಿ ಹಂಚಿಕೆ ಮಾಡಿದ್ದು, ಉಳಿದ ೨.೨೫ ಎಕರೆ ಭೂಮಿ ಹಂಚಿಕೆಗೆ ಲಭ್ಯವಿರುತ್ತದೆ. ಸದರಿ ಪಾರ್ಕಗೆ ರಾಜ್ಯ ಸರ್ಕಾರದ ೪೦೦ ಲಕ್ಷಗಳು ಮತ್ತು ಕೇಂದ್ರ ಸರ್ಕಾರ ತಲಾ ರೂ.೩೦೦ ಲಕ್ಷಗಳಂತೆ (ಒಟ್ಟು ರೂ. ೭೦೦ ಲಕ್ಷಗಳು) ಅನುದಾನ ನೀಡಲಾಗಿದೆ. ಪ್ರಸ್ತುತ ೦೬ ಆಹಾರ ಸಂಸ್ಕರಣಾ ಘಟಕಗಳು ಪಾರ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

೩. ಅಕ್ಷಯ ಆಹಾರ ಪಾರ್ಕ್ ನಿಯಮಿತ, ಹಿರಿಯೂರು: ಸದರಿ ಆಹಾರ ಪಾರ್ಕನ್ನು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಹುಚ್ಚವನಹಳ್ಳಿಯಲ್ಲಿ ಸುಮಾರು ೧೦೬ ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸದರಿ ಪಾರ್ಕಗೆ ಕೇಂದ್ರ ಸರ್ಕಾರದಿಂದ ರೂ.೪೦೦ ಲಕ್ಷಗಳ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ರೂ.೪೦೦ ಲಕ್ಷಗಳ ಬಡ್ಡಿರಹಿತ/ಭದ್ರತೆ ರಹಿತ ಸಾಲ (ಒಟ್ಟು ರೂ. ೮೦೦ ಲಕ್ಷಗಳು) ನೀಡಲಾಗಿದೆ. ಪ್ರಸ್ತುತ ೦೮ ಆಹಾರ ಸಂಸ್ಕರಣಾ ಘಟಕಗಳು ಪಾರ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

೪. ಜೇವರ್ಗಿ ಆಹಾರ ಪಾರ್ಕ್ ನಿಯಮಿತ, ಜೇವರ್ಗಿ: ಸದರಿ ಪಾರ್ಕನ್ನು ಕಲಬುರ್ಗಿ ಜಿಲ್ಲೆಯ, ಜೇವರ್ಗಿಯಲ್ಲಿ ೧೦೫ ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ಭೂಮಿ ಸಮತಟ್ಟು ಮಾಡಿ, ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಉಗ್ರಾಣದ ಕಾಮಗಾರಿಯು ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ರೂ.೩೯೬ ಲಕ್ಷಗಳ ಮತ್ತು ರಾಜ್ಯ ಸರ್ಕಾರದ ರೂ. ೪೦೦ ಲಕ್ಷಗಳ ಅನುದಾನದಲ್ಲಿ (ಒಟ್ಟು ರೂ. ೭೯೬ ಲಕ್ಷಗಳು) ಕ್ರಮವಾಗಿ ರೂ.೨೦೦ ಲಕ್ಷ ಹಾಗೂ ರೂ.೩೦೦ ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ. ೧೧೩ ಆಹಾರ ಸಂಸ್ಕಾರಣಾ ಉದ್ದಿಮೆದಾರರಿಗೆ ಘಟಕಗಳನ್ನು ಸ್ಥಾಪಿಸಲು ಭೂಮಿ ಹಂಚಿಕೆ ಮಾಡಿರುವುದಾಗಿ ತಿಳಿದಿರುತ್ತದೆ. ಪ್ರಸ್ತುತ ೦೩ ಆಹಾರ ಸಂಸ್ಕರಣಾ ಘಟಕಗಳು ಪಾರ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

 

ಆ) ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿಯ ಆಹಾರ ಪಾರ್ಕುಗಳು: ರಾಜ್ಯ ಸರ್ಕಾರವು ೨೦೦೮-೦೯ರ ಆಯವ್ಯಯದಲ್ಲಿ ಒಟ್ಟು ೦೬ ಜಿಲ್ಲೆಗಳಲ್ಲಿ ಅಂದರೆ, ಬೆಂಗಳೂರು (ಗ್ರಾಮಾಂತರ) ತುಮಕೂರು, ಶಿವಮೊಗ್ಗ, ದಾವಣಗೆರೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಆಹಾರ ಪಾರ್ಕುಗಳ ಸ್ಥಾಪನೆಗೆ ಯೋಜಿಸಲಾಗಿತ್ತು. ಸದರಿ ಆಹಾರ ಪಾರ್ಕುಗಳ ಅಭಿವೃದ್ಧಿಯನ್ನು ಕೈಗೊಳ್ಳವುದುಕ್ಕೂ ಮುನ್ನ ಆಹಾರ ಪಾರ್ಕುಗಳ ಅಭಿವೃದ್ಧಿಯನ್ನು ತುಲನೆ ಮಾಡಿ ನಿರ್ಣಯ ಕೈಗೊಳ್ಳಲಾಗುತ್ತಿದೆ.

೧. ಶಿವಮೊಗ್ಗ ಆಹಾರ ಪಾರ್ಕ್: ಮೆ: ಎಲ್.ಎಂ.ಜೆ ಇಂಟರ್ ನ್ಯಾಷನಲ್ ಲಿ. ೧೦೦ ಎಕರೆ ಸೊಗಾನೆ ಹಳ್ಳಿಯ, ನಿಧಿಗೆ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿ ಆಹಾರ ಪಾರ್ಕ್ ಸ್ಥಾಪಿಸಲು ಡೆವಲಪರ್ ಆಗಿ ಆಯ್ಕೆಯಾಗಿದ್ದಾರೆ. ಆದಾಗ್ಯೂ ರಾಜ್ಯದಲ್ಲಿ ಸ್ಥಾಪಿಸುತ್ತಿರುವ ಇತರೇ ಆಹಾರ ಪಾರ್ಕ್‌ಗಳ ಅಭಿವೃದ್ಧಿಯ ಮಂದಗತಿಯ ಪ್ರಗತಿಯನ್ನು ಮನಗಂಡು ಶಿವಮೊಗ್ಗ ಆಹಾರ ಪಾರ್ಕ್‌ನ ಪ್ರವರ್ತಕರಿಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತಿದೆ. ಸದರಿ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ.

೨. ವಿಜಯಪುರ ಆಹಾರ ಪಾರ್ಕ್: ಆಹಾರ ಕರ್ನಾಟಕ ನಿಯಮಿತಕ್ಕೆ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ವಿಜಯಪುರ ಜಿಲ್ಲಾಧಿಕಾರಿಯವರು ೭೫ ಎಕರೆ ಭೂಸ್ವಾಧೀನ ಮಾಡಿ ಹಸ್ತಾಂತರಿಸಿದ್ದಾರೆ. ಸದರಿ ಆಹಾರ ಪಾರ್ಕ ಅಭಿವೃದ್ಧಿ ಪಡಿಸಲು ಪ್ರವರ್ತಕರನ್ನು ಆಯ್ಕೆಮಾಡಬೇಕಾಗಿದೆ.

೩. ಸ್ಪೈಸ್ ಪಾರ್ಕ್, ಬ್ಯಾಡಗಿ, ಹಾವೇರಿ ಜಿಲ್ಲೆ: ಆಹಾರ ಕರ್ನಾಟಕ ನಿಯಮಿತ ಸಂಸ್ಥೆಯು ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್‌ನ್ನು ಅಭಿವೃದ್ದಿಗೊಳಿಸಲು ಖಾಸಗಿ ಸಂಸ್ಥೆಯವರಿಂದ ಪ್ರಸ್ತಾವನೆಯನ್ನು ಕೋರಿ ಪ್ರಮುಖ ಪತ್ರಿಕೆಗಳಲ್ಲಿ ಎರಡು ಬಾರಿ ಜಾಹೀರಾತು ಪ್ರಕಟಿಸ ಲಾಗಿತ್ತು. ಆದರೆ ಪ್ರಕಟಿತ ಜಾಹೀರಾತಿಗೆ ಖಾಸಗಿ ಸಂಸ್ಥೆಯವರಿಂದ ಯಾವುದೇ ಪ್ರಸ್ತಾವನೆ ಬಾರದ ಕಾರಣ, ಈಗಾಗಲೇ ಸದರಿ ಪಾರ್ಕ್‌ಗೆ ಅವಶ್ಯವಿರುವ ಭೂಮಿ ಖರೀದಿಗೆ ಅನುವಾಗುವಂತೆ ರೂ.೧೦೦ ಲಕ್ಷ್ಗಳನ್ನು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪಾವತಿಸಲಾಗಿದ್ದು, ಅವಶ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ.

 

ಜವಳಿ ಕೈಗಾರಿಕೆ

ಕೈಮಗ್ಗ ಮತ್ತು ಜವಳಿ ಇಲಾಖೆಯು ದಿನಾಂಕ: ೦೧/೦೪/೧೯೯೨ ರಂದು ಅಸ್ತಿತ್ವಕ್ಕೆ ಬಂದಿದ್ದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕರ್ನಾಟಕ ಸರ್ಕಾರ ಇದರ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ.

 

ಧ್ಯೇಯ ಮತ್ತು ಬದ್ಧತೆ

  • ಕರ್ನಾಟಕದ ಜವಳಿ ಮತ್ತು ಉಡುಪಿನ ಕ್ಷೇತ್ರವನ್ನು ಅಂತರ್‌ರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾದ ಹೆಚ್ಚಿನ ಮೌಲ್ಯಗಳು ಸೇರಿದ ಉತ್ಪನ್ನಗಳ ಉತ್ಪಾದಕವಾಗಿ ಸ್ಥಾಪಿಸುವುದು, ತನ್ಮೂಲಕ ಬೆಳೆಯುತ್ತಿರುವ ಸ್ವದೇಶಿ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಬಲ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಹಾಗೂ ರಾಜ್ಯದ ಸುಸ್ಥಿರ ಉದ್ಯೋಗಾವಕಾಶ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವುದು.
  • ಬಂಡವಾಳ ಹೂಡಿಕೆ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಉನ್ನತೀಕರಣ ಮತ್ತು ಸಹಾಯಹಸ್ತದ ಮೂಲಕ ರಾಜ್ಯದಲ್ಲಿ ಜವಳಿ ಕೈಗಾರಿಕೆಯ ಮೌಲ್ಯ ಸರಣಿಯನ್ನು ಭದ್ರಗೊಳಿಸುವುದು.

ಉದ್ದೇಶಗಳು

  • ಸಂತುಲಿತ ಪ್ರಾದೇಶಿಕ ಅಭಿವೃದ್ಧಿಯ ಮೇಲೆ ಪ್ರಾಮುಖ್ಯತೆಯೊಂದಿಗೆ ಫೈಬರ್‌ನಿಂದ ಪೂರ್ಣಗೊಂಡ ಉತ್ಪನ್ನಗಳವರೆಗೆ ಸಂಪೂರ್ಣ ಜವಳಿ ಮೌಲ್ಯ ಸರಣಿಯಲ್ಲಿ ಉನ್ನತ ಮತ್ತು ಸುಸ್ಥಿರ ಉನ್ನತಿಯನ್ನು ಸಾಧಿಸುವುದು.
  • ಉತ್ಪಾದನೆ, ತಂತ್ರಜ್ಞಾನ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂಥ ಪ್ರಮುಖ ಪ್ರದೇಶಗಳಲ್ಲಿ ಹೊಮ್ಮುವ ತಾಂತ್ರಿಕ ಜವಳಿಗಳಿಗೆ ಅನುಕೂಲವನ್ನು ಒದಗಿಸುವುದು. ರಾಜ್ಯದಲ್ಲಿ ಜವಳಿ ಘಟಕಗಳ ಸುಸ್ಥಿರತೆಯ ಗುರಿ ಹೊಂದಿರುವ ವಲಯಲ್ಲಿ ಸಂಘಟಿತ ಅಭಿವೃದ್ಧಿಯನ್ನು ಇಲಾಖೆಯು ಪ್ರೋತ್ಸಾಹಿಸುವುದು.
  • ಕುಶಲ ಮಾನವ ಸಂಪನ್ಮೂಲದೊಂದಿಗೆ ಕೈಗಾರಿಕೆ ಯನ್ನು ಬೆಂಬಲಿಸುವುದು ಮತ್ತು ಉದ್ಯೋಗಾವಕಾಶಗಳನ್ನು ರಾಜ್ಯದಲ್ಲಿ ಸೃಷ್ಟಿಸುವುದು. ನಿರುದ್ಯೋಗಿ ಯುವ ಜನರಿಗಾಗಿ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳನ್ನು ಮತ್ತು ಜವಳಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಕೌಶಲ್ಯದ ಉನ್ನತೀಕರಣವನ್ನು ಬೆಂಬಲಿಸುವುದು.

 

ಧ್ಯೇಯೋದ್ದೇಶಗಳು

ಮಧ್ಯವರ್ತನೆಗೆ ಕೇಂದ್ರೀಕರಣದ ವಿಷಯಗಳು

  • ಜವಳಿ ಮೌಲ್ಯ ಸರಣಿಯ ಚಟುವಟಿಕೆಗಳನ್ನು ಬಲಪಡಿಸುವುದು
  • ತಾಂತ್ರಿಕ ಜವಳಿ
  • ಜವಳಿ ಮತ್ತು ಉಡುಪಿನ ಘಟಕಗಳ ಭೌಗೋಳಿಕ ಚದರುವಿಕೆ
  • ಮಾನವ ಸಂಪನ್ಮೂಲ ಅಭಿವೃದ್ಧಿ
  • ಮೂಲಭೂತ ಸೌಕರ್ಯ ಅಭಿವೃದ್ಧಿ
  • ಸಂಪೂರ್ಣ ಜವಳಿ ಮೌಲ್ಯ ಸರಣಿಯ ತಾಂತ್ರಿಕ ಉನ್ನತೀಕರಣ
  • ಸಾಮರ್ಥ್ಯ ರಚನೆ- ಮಾರುಕಟೆಯ ಅಭಿವೃದ್ಧಿ, ಬ್ರ್ಯಾಂಡಿಂಗ್, ವಿನ್ಯಾಸದ ಅಭಿವೃದ್ಧಿ ಮತ್ತು ಉತ್ಪನ್ನ ವೈವಿಧ್ಯೀಕರಣ
  • ಸಂಸ್ಥೆಯ ಅಭಿವೃದ್ಧಿ
  • ಮಾನದಂಡಗಳು ಮತ್ತು ಅನುವರ್ತನೆಗಳು

ಈ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು ೭೨೮ ಕೈಮಗ್ಗ ಮತ್ತು ೨೧೬ ವಿದ್ಯುತ್ ಮಗ್ಗಗಳ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಅವುಗಳಲಿ ೬೧೦ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

 

 

ನೇಕಾರರ ವಿಶೇಷ ಪ್ಯಾಕೇಜ್-ವಿಶೇಷ ಘಟಕ ಯೋಜನೆ

ಪರಿಶಿಷ್ಟ ಜಾತಿಯ ಜನರಿಗೆ ಜವಳಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲು ಸದರಿ ಯೋಜನೆಯನ್ನು ರೂಪಿಸಲಾಗಿರುತ್ತದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸಾಮಾನ್ಯ ಸೌಲಭ್ಯ ಕೇಂದ್ರಗಳು, ಸುಧಾರಿತ ಮಗ್ಗ ಮತ್ತು ಸಲಕರಣೆಗಳು, ದುಡಿಮೆ ಬಂಡವಾಳ, ಹೊಸ ಸದಸ್ಯರುಗಳಿಗೆ ಶೇರು, ಮಗ್ಗಪೂರ್ವ ಸೌಲಭ್ಯಗಳು, ಸಂಚಾರಿ ಮಾರುಕಟ್ಟೆ ವಾಹನ ವಿದ್ಯುತ್‌ಮಗ್ಗ ಒದಗಿಸುವುದು, ಸೆಮಿ ಆಟೋಲೂಮ್ಸ್, ಕಾರ್ಯಗಾರ, ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ಸಹಾಯಧನ, ಮಿನಿ ಪವರ್‌ಲೂಮ್ ಪಾರ್ಕ ಸ್ಥಾಪನೆ, ಸೈಜಿಂಗ್ ಘಟಕ ಸ್ಥಾಪನೆ ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮಗಳಿಗೆ ಶೇ.೯೦ ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ.

 

ನೇಕಾರರ ವಿಶೇಷ ಪ್ಯಾಕೇಜ್-ಗಿರಿಜನ ಉಪ ಯೋಜನೆ

ಪರಿಶಿಷ್ಟ ಪಂಗಡದ ಜನರಿಗೆ ಜವಳಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲು ಸದರಿ ಯೋಜನೆಯನ್ನು ರೂಪಿಸಲಾಗಿರುತ್ತದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸಾಮಾನ್ಯ ಸೌಲಭ್ಯ ಕೇಂದ್ರಗಳು, ಸುಧಾರಿತ ಮಗ್ಗ ಮತ್ತು ಸಲಕರಣೆಗಳು, ದುಡಿಮೆ ಬಂಡವಾಳ, ಹೊಸ ಸದಸ್ಯರುಗಳಿಗೆ ಶೇರು, ಮಗ್ಗಪೂರ್ವ ಸೌಲಭ್ಯಗಳು, ಸಂಚಾರಿ ಮಾರುಕಟ್ಟೆ ವಾಹನ ವಿದ್ಯುತ್‌ಮಗ್ಗ ಒದಗಿಸುವುದು, ಸೆಮಿ ಆಟೋಲೂಮ್ಸ್, ಕಾರ್ಯಗಾರ, ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ಸಹಾಯಧನ, ಮಿನಿ ಪವರ್‌ಲೂಮ್ ಪಾರ್ಕ ಸ್ಥಾಪನೆ, ಸೈಜಿಂಗ್ ಘಟಕ ಸ್ಥಾಪನೆ ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮಗಳಿಗೆ ಶೇ.೯೦ ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ.

 

ರೇಷ್ಮೆ

ಪ್ರಮುಖ ಉದ್ಯೋಗಜನಕ ಕ್ಷೇತ್ರಗಳಲ್ಲಿ ರೇಷ್ಮೆ ತಯಾರಿಕೆ ಒಂದಾಗಿದೆ ಮತ್ತು ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗವಕಾಶವನ್ನು ಕಲ್ಪಿಸುವುದರಲ್ಲಿ ಇದರ ಬೆಳವಣಿಗೆ ವಿಶೇಷ ಪಾತ್ರವನ್ನು ವಹಿಸುತ್ತದೆ. ರೇಷ್ಮೆ ಗೂಡಿನ ಉತ್ಪಾದನೆ, ರೇಷ್ಮೆ ಗೂಡುಗಳ ಮಾರಾಟ, ಉತ್ಪಾದಿಸಲ್ಪಟ್ಟ ಕಚ್ಚಾ ರೇಷ್ಮೆ ಕಡಿಮೆಯಾಗಿದೆ ಹಾಗೂ ಈ ಉದ್ದಿಮೆಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ. ರೇಷ್ಮೆ ಭಾಗೀದಾರರು ರೇಷ್ಮೆ ವ್ಯವಸಾಯ ಹಾಗೂ ರೇಷ್ಮೆ ಉದ್ಯಮದಲಿ  ನಿರಂತರವಾಗಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಲು, ಬಿತ್ತನೆ ಗೂಡಿಗೆ, ದ್ವಿತಳಿ ಚಾಕಿಗೆ, ಸ್ವಯಂಚಾಲಿತ ರೀಲಿಂಗ್ ಘಟಕದಲ್ಲಿ ಉತ್ಪಾದಿಸಿದ ಕಚ್ಚಾ ರೇಷ್ಮೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಮೂಲಭೂತ ಸೌಕರ್ಯಗಳಾದ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ, ಚಾಕಿ ಸಾಕಾಣಿಕೆ ಕೇಂದ್ರ ಸ್ಥಾಪನೆ, ಹನಿ ನೀರಾವರಿ ಅಳವಡಿಕೆ ಮುಂತಾದ ಕಾರ್ಯಕ್ರಮಗಳಿಗೆ ರೇಷ್ಮೆ ಬೆಳೆಗಾರರಿಗೆ ಹಾಗೂ ಸ್ವಯಂಚಾಲಿತ ರೀಲಿಂಗ್ ಯಂತ್ರ, ಮಲ್ಟಿ ಎಂಡ್ ರೀಲಿಂಗ್ ಯಂತ್ರ, ಕಾಟೇಜ್/ಪಿ ಲೇಚರ್ ಬೇಸಿನ್ ರೀಲಿಂಗ್ ಯಂತ್ರೋಪಕರಣಗಳ ಅಳವಡಿಕೆ ಮುಂತಾದ ಕಾರ್ಯಕ್ರಮಗಳಿಗೆ ರೀಲರುಗಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ರೇಷ್ಮೆ ವ್ಯವಸಾಯ ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಡುವಂತಹುದಾಗಿದ್ದು, ಹಿಪ್ಪುನೇರಳೆ ಪ್ರದೇಶದಲ್ಲಿ ಹೆಚ್ಚಳವಾಗಿರುವುದು ಕೃಷಿಕರು ರೇಷ್ಮೆ ವ್ಯವಸಾಯವನ್ನು ಅವಲಂಬಿಸುತ್ತಿರುವುದರ ಕುರುಹಾಗಿರುತ್ತದೆ.

 

ಹೊಸ ಕಾರ್ಯಕ್ರಮಗಳು

(೧) ಕೇಂದ್ರ ರೇಷ್ಮೆ ಮಂಡಳಿಯ ಸಹಯೋಗದೊಂದಿಗೆ ಇಲಾಖೆಯು ಬೆಂಗಳೂರು, ಮೈಸೂರು ಕಾರಿಡಾರ್‌ನಲ್ಲಿ ರೇಷ್ಮೆ ಟೂರಿಸಂನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು ಅಂತರಾಷ್ಟ್ರೀಯ ಮಟ್ಟದ ಲೈವ್‌ ಮ್ಯೂಸಿಯಂ ಅನ್ನು ಚನ್ನಪಟ್ಟಣದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು

(೨) ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತು  ಅಭಿವೃದ್ಧಿ ಸಂಸ್ಥೆಯಲ್ಲಿ ಹಿಪ್ಪು ನೇರಳೆ ಕೃಷಿ ಚಟುವಟಿಕೆಯಿಂದ ರೇಷ್ಮೆ ವಸ್ತ್ರ ತಯಾರಿಸುವವರೆಗಿನ ಸಿಲ್ಕ್‌ ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗುವುದು

(೩) ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ರೇಷ್ಮೆ ಇಲಾಖೆ ಹಾಗೂ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಉಪಕೇಂದ್ರದ ವ್ಯಾಪ್ತಿಯಲ್ಲಿ ೪೦ ಎಕರೆ ವಿಸ್ತೀರ್ಣದ ಜಮೀನು ಲಭ್ಯವಿದ್ದು, ಇದರಲ್ಲಿ ಹಿಪ್ಪುನೇರಳೆ ಮರಕೃಷಿ ಅಭಿವೃದ್ಧಿ ಪಡಿಸಿ ಸೋಲಿಗ ಜನಾಂಗಕ್ಕೆ ಪ್ರಯೋಜನವಾಗುವಂತೆ ಕಡಿಮೆ ವೆಚ್ಚದ ರೇಷ್ಮೆ ಹುಳು ಸಾಕಾಣಿಕೆ ಶೆಡ್‌ಗಳನ್ನು ನಿರ್ಮಿಸಿ ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಉದ್ದೇಶಿಸಿರುವುದರಿಂದ ಸೋಲಿಗ ಜನಾಂಗದ ಆರ್ಥಿಕ ಮಟ್ಟ ಸುಧಾರಣೆಯೊಂದಿಗೆ, ರೇಷ್ಮೆ ಚಟುವಟಿಕೆಗಳ ವಿಸ್ತರಣೆಗೂ ಸಹ ಅವಕಾಶವಾಗುತ್ತದೆ

(೪) ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಲು ಒಟ್ಟು ೩ ಕೋಟಿ ರೂ. ವೆಚ್ಚದಲ್ಲಿ ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು

(೫) ಕರ್ನಾಟಕ ರೇಷ್ಮೆನಾಡು. ವಿಶ್ವಬ್ಯಾಂಕ್ ನೆರವಿನೊಂದಿಗೆ ೭೦ರ ದಶಕದಲ್ಲಿ ರೇಷ್ಮೆ ಕೃಷಿಗೆ ಪೂರಕವಾಗಲೆಂದ ಬೆಂಗಳೂರ ಸಮಿಪದ ತಲಘಟ್ಟಪುರದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆಯ ಪೂರ್ಣ ಪ್ರಮಾಣದ ಅನುಕೂಲ ಪಡೆಯಲು ತಜ್ಞರಿಂದ ಸಂಪೂರ್ಣ ಅಧ್ಯಯನ ನಡೆಸಿ ವರದಿ ಪಡೆದು ಈ ಸಂಸ್ಥೆಯ ಪುನಶ್ಚೇತನ ಮಾಡುವ ಉದ್ದೇಶಕ್ಕಾಗಿ ೫ ಕೋಟಿ ರೂ.ಗಳನ್ನು ನೀಡಲಾಗುವುದು

(೬) ಸಾಂಪ್ರದಾಯಿಕ ರೇಷ್ಮೆವಸ್ತ್ರ ಉತ್ಪಾದನೆಯ ಜೊತೆಗೆ ರೇಷ್ಮೆ ಉಪಉತ್ಪನ್ನಗಳಾದ ಉಗುರು ಪಾಲಿಷ್‌, ಲಿಪ್‌ಸ್ಟಿಕ್ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವವ್ಯಾಪಿ ಬೇಡಿಕೆಯಿದೆ. ಈ ಮಾರುಕಟ್ಟೆಯ ಅವಕಾಶ ವನ್ನು ಬಳಸಿಕೊಳ್ಳಲು ಅನುವಾಗುವಂತೆ ಕಾರ್ಯತಂತ್ರ ರೂಪಿಸಲು ಎರಡು ಕೋಟಿ ರೂ.ಗಳನ್ನು ನೀಡಲಾಗುವುದು

 (೭) ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆ.ಎಸ್.ಐ.ಸಿ.) ಘಟಕದ ಪುನಶ್ಚೇತನಕ್ಕಾಗಿ ೫ ಕೋಟಿ ರೂ. ಗಳನ್ನು ಒದಗಿಸಲಾಗುವುದು ಮುಂತಾದುವು ಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ.

 

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತವು ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು, ರೇಷ್ಮೆ ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ರೈತರ ಮತ್ತು ರೀಲರುಗಳ ಹಿತ ಕಾಪಾಡುವ ಉದ್ದೇಶದಿಂದ ೧೯೭೯ರಲ್ಲಿ ಸ್ಥಾಪನೆಗೊಂಡಿರುತ್ತದೆ.  

ಮಂಡಳಿಯು ಪ್ರಧಾನವಾಗಿ ರೇಷ್ಮೆ ನೂಲಿನ ಬೆಲೆ ಸ್ಥಿರೀಕರಣ ಮಾಡುವ ಚಟುವಟಿಕೆ ಹೊಂದಿದ್ದು, ಇದು ಸಾಮಾನ್ಯವಾಗಿ ಲಾಭ ರಹಿತ ಚಟುವಟಿಕೆ ಆಗಿರುತ್ತದೆ. ಕರ್ನಾಟಕದಲ್ಲಿನ ಎಲ್ಲಾ ರೇಷ್ಮೆ ವಿನಿಮಯ ಕೇಂದ್ರಗಳಲ್ಲಿ ರೇಷ್ಮೆ ನೂಲನ್ನು ಖರೀದಿಸುವ ಮೂಲಕ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೈತರ ಹಿತವನ್ನು ಕಾಪಾಡುತ್ತಿದೆ. ಮಂಡಳಿಯು ಅತಿ ದೊಡ್ಡ ಪರಿಮಾಣದಲ್ಲಿ ರೇಷ್ಮೆ ಖರೀದಿ ಮಾಡುವ ಸರ್ಕಾರದ ಸಂಸ್ಥೆಯಾಗಿದ್ದು, ಬೆಲೆ ಸ್ಥಿರೀಕರಣವನ್ನು ಮಾಡುವಲ್ಲಿ ಹಾಗೂ ವ್ಯಾಪಾರಿಗಳ ಗುಂಪುಗಾರಿಕೆಯನ್ನು ತಡೆಯಲು ಮತ್ತು ಗೂಡು ಉತ್ಪಾದಿಸುವವರ, ನೂಲು ಬಿಚ್ಚಾಣಿಕೆದಾರರ ಹಾಗೂ ನೇಕಾರರ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ. ಮಂಡಳಿಯು ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಾದ್ಯಂತ ಹರಡಿರುವ ಬಳಕೆದಾರರ ರೇಷ್ಮೆ ಅಗತ್ಯವನ್ನು ತನ್ನ ಮಾರಾಟ ಶಾಖೆಗಳ ಮೂಲಕ ಪೂರೈಸಲು ಬೇಕಾಗುವಷ್ಟು ದಾಸ್ತಾನನ್ನು ಖರೀದಿಸುತ್ತದೆ. ಮಂಡಳಿಯು ನೇಯ್ಗೆಯವರಿಗೆ ನೂಲು ಸರಬರಾಜು ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ರೇಷ್ಮೆ ದರಗಳಲ್ಲಿ ಸ್ಥಿರತೆ ಕಂಡಾಗ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು ಮಧ್ಯ ಪ್ರವೇಶ ಅಗತ್ಯವಿಲ್ಲದೇ ಮಂಡಳಿಯ ಖರೀದಿ ಮತ್ತು ಮಾರಾಟವು ಅತಿ ಕಡಿಮೆ ಆಗಬಹುದು. ಪ್ರಮುಖವಾಗಿ ಬೆಲೆ ಸ್ಥಿರೀಕರಣ ಪಾತ್ರವನ್ನು ಸಂಸ್ಥೆಯು ನಿರ್ವಹಿಸುತ್ತಿದೆ

 

ಮಂಡಳಿಯ ಕರ್ತೃತ್ವ ಶಕ್ತಿ ಮತ್ತು ತಂತ್ರಗಳ ಬಗ್ಗೆ ಟಿಪ್ಪಣಿ

ಮಂಡಳಿಯು ರಾಜ್ಯದ ಎಲ್ಲಾ ರೇಷ್ಮೆ ವಿನಿಮಯ ಕೇಂದ್ರಗಳಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಿ ಸತತವಾಗಿ ರೇಷ್ಮೆ ಖರೀದಿಸುತ್ತಿದೆ ಹಾಗೂ ಗೂಡಿನ ಬೆಲೆಗಳಲ್ಲಿ ಹಾಗೂ ರೇಷ್ಮೆ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಪಾಡಿ ರೇಷ್ಮೆ ಗೂಡು ಬೆಳೆಯುವವರ ಹಾಗೂ ರೇಷ್ಮೆ ಬಿಚ್ಚಾಣಿಕೆದಾರರ ಹಿತ ಕಾಪಾಡುತ್ತಿದೆ.

  • ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಹಾಗೂ ನೇಕಾರರಿಗೆ ಸಮಾಧಾನಕರ ಬೆಲೆ ನೀಡುವುದು.
  • ಬೆಲೆಗಳಲ್ಲಿ ಸ್ಥಿರತೆಯನ್ನು ಕಾಪಾಡಲು ಪರಿಣಾಮಕಾರಿಯಾಗಿ ಮಾರುಕಟೆಯಲ್ಲಿ ಮಧ್ಯ ಪ್ರವೇಶಿಸುವುದು.
  • ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಗ್ರಾಹಕರ ನಡುವೆ ಉತ್ತಮ ಸಂಪರ್ಕ ಒದಗಿಸುವುದು.
  • ಸರ್ಕಾರದಿಂದ ನೀಡಲಾಗುವ ಆರ್ಥಿಕ ಬೆಂಬಲವನ್ನು ಸಮರ್ಥವಾಗಿ ಬಳಸಲಾಗುವುದು.
  • ಮಂಡಳಿಯು ಪ್ರಮುಖ ನೇಯ್ಗೆ ಕೇಂದ್ರಗಳಲ್ಲಿ - ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾರಾಟ ಶಾಖೆಗಳನ್ನು ಹೊಂದಿರುತ್ತದೆ.

 

ಕರ್ನಾಟಕ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸೇವೆಗಳು

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯು ಪ್ರಪ್ರಥಮವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಈ ಕೆಳಕಂಡ ವಿವರಗಳನ್ನು ಪ್ರಸ್ತುತ ಪಡಿಸುತ್ತಿರುವ ಈ ಮಾಹಿತಿಯಲ್ಲಿ ನೀಡುವ ಪ್ರಯತ್ನ ಮಾಡಲಾಗುವುದು.

 

  • ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ವಿವರಗಳು
  • ಬೆಂಗಳೂರಲ್ಲದೆ ಇತರ ವಲಯಗಳಿಗೆ ಐ.ಟಿ.ಬಿ.ಟಿ. ನುಗ್ಗುವಿಕೆಯೊಂದಿಗೆ ಕರ್ನಾಟಕ ಐ೪ ನೀತಿ (ಐಟಿ, ಐಟಿಇಎಸ್, ನಾವೀನ್ಯತೆ, ಪ್ರೋತ್ಸಾಹಕಗಳ ನೀತಿ) ಮುಖ್ಯಾಂಶಗಳು.
  • ಕರ್ನಾಟಕ ಸರ್ಕಾರ ಹಾಗೂ ನ್ಯಾಸ್ಕಾಂ ಸಹಯೋಗ ದೊಂದಿಗೆ ೨ನೇ ಸ್ಟಾರ್ಟ್‌ಅಪ್ ವೇರ್ ಹೌಸ್ ಸ್ಥಾಪಿಸುವುದು.
  • ಅರೆ-ನಿರ್ವಾಹಕ ಸಾಹಸೋದ್ಯಮ (ವೆಂಚರ್) ಬಂಡವಾಳ ನಿಧಿ
  • ಕರ್ನಾಟಕ ಆನಿಮೇಷನ್, ವಿಷ್ಯುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಕೆ.ಎ.ವಿ.ಜಿ.ಸಿ) ನೀತಿ
  • ಕರ್ನಾಟಕದ ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಹಾಗೂ ಉತ್ಪಾದನೆ ನೀತಿ ೨೦೧೩
  • ಐಸಿಟಿ ಕೌಶಲ್ಯಗಳ ಅಭಿವೃದ್ಧಿ ಸೊಸೈಟಿ
  • ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಹಣಕಾಸು ಹೂಡಿಕೆ

 

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇಆಡಳಿತ)ಗೆ ಸಂಬಂಧಿಸಿದ ಇ-ಆಡಳಿತ ಕ್ರಮಗಳು

 

ಸರ್ಕಾರದ ಪ್ರಕ್ರಿಯೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಅದರ ಲಾಭವನ್ನು ನಾಗರೀಕರಿಗೆ ಒದಗಿಸುವ ಸಲುವಾಗಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆಡಳಿತ ಸುಧಾರಣಾ ವಿಭಾಗದಲ್ಲಿ ಸರ್ಕಾರದ ಕಾರ್ಯದರ್ಶಿ, ಸಿಆಸುಇ (ಇ-ಆಡಳಿತ) ಹುದ್ದೆಯನ್ನು ಸೃಜಿಸುವ ಮೂಲಕ ೨೦೦೩ ರಲ್ಲಿ ಇ-ಆಡಳಿತ ಸಚಿವಾಲಯವನ್ನು ಸ್ಥಾಪಿಸಲಾಯಿತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಇ-ಆಡಳಿತವನ್ನು ಸರ್ಕಾರದಲಿ ಅನುಷ್ಠಾನಗೊಳಿಸಲು ಅವಶ್ಯಕ ಮೂಲಭೂತ ಸೌಕರ್ಯವನ್ನು ಕಲ್ಪಿಸುತ್ತಿದೆ. ಇ-ಆಡಳಿತ ಇಲಾಖೆಯ ಯೋಜನೆಗಳು ಮುಂದಿನಂತಿವೆ.

೧. ಮೊಬೈಲ್ ಆಡಳಿತ: ಮೊಬೈಲ್ ಒನ್ ಯೋಜನೆಯು ರಾಷ್ಟ್ರದ ಪ್ರಥಮ ಮತ್ತು ವಿಶ್ವದಾ ಬೃಹತ್ ವಿವಿಧೋದ್ದೇಶ ವ್ಯಾಪ್ತಿಯ ಮೊಬೈಲ್ ಆಡಳಿತದ ವೇದಿಕೆಯಾಗಿರುವುದು ಒಂದು ವಿಶೇಷವಾದ ವ್ಯೆಶಿಷ್ಟ್ಯವೆಂದು ಗುರುತಿಸಲ್ಪಟ್ಟಿದೆ. ಸರ್ಕಾರ ಮತ್ತು ಖಾಸಗಿ ವಲಯದ ನಾಗರೀಕ ಸೇವೆಗಳ ಏಕೀಕೃತ ಮೊಬೈಲ್ ವೇದಿಕೆ ಇದಾಗಿರುತ್ತದೆ. ರಾಷ್ಟ್ರದಲ್ಲಿ ಯಾವುದೇ ಮೊಬೈಲ್ ಉಪಕರಣದಿಂದ ಎಲ್ಲಿಂದಲಾದರೂ, ಯಾವ ಸಮಯದಲ್ಲಿ ಯಾದರೂ ಮತ್ತು ಹೇಗಾದರೂ ಸರ್ಕಾರದ ಸೇವೆಗಳನ್ನು 24 x7x365 ಪಡೆಯಬಹುದಾಗಿದೆ.

 

೨. KSWAN: ಕೊನೆಯ ಮೈಲಿ ಸಂಪರ್ಕವನ್ನು ಖಚಿತಪಡಿಸುವುದು

ಡಿಸೆಂಬರ್ ೨೦೦೯ ರಿಂದ ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟವರ್ಕ್ ಕಾರ್ಯಾಚರಣೆಯಲ್ಲಿದೆ. ಇದು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ರಾಜ್ಯ ಮಾಹಿತಿಯನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಧ್ವನಿ, ವೀಡಿಯೋ ಮಾಹಿತಿ ಸೇವೆಗಳು ಮತ್ತು ಸುರಕ್ಷಿತ ಅಂತರ್ಜಾಲ ಸೇವೆಗಳನ್ನು ಒದಗಿಸುತ್ತಿದೆ. ಆರಂಭದಲ್ಲಿ, ಕೆಸ್ವಾನ್‌ ಅನ್ನು ಬೂಟ್ ಮಾಡೆಲ್‌ನಲ್ಲಿ ನಿರ್ಮಿಸಲಾಯಿತು ಮತ್ತು ಡಿಸೆಂಬರ್ ೨೦೦೯ ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಇದರ ಕಾರ್ಯಾಚರಣೆಯಿಂದಾಗಿ ಕೆಸ್ವಾನ್‌ ಖಜಾನೆ, ಐಜಿಆರ್, ಆರೋಗ್ಯ, ಆರ್‌ಟಿಒ, ಭೂಮಿ ಮುಂತಾದ ಪ್ರಮುಖ ಸರ್ಕಾರಿ ಇಲಾಖೆಗಳಿಗೆ ಸುರಕ್ಷಿತ ಜಾಲಬಂಧ, s ಸಂಪರ್ಕದ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಕಾವೇರಿ, ಖಜಾನೆ, ಇ-ಹಾಸ್ಪಿಟಲ್, ಭೂಮಿ, ಇ-ಪ್ರೊಕ್ಯೂರ್ಮೆಂಟ್ ಇ-ಆಫೀಸ್ ಕೆಸ್ವಾನ್‌ ಸಹಾಯದಿಂದ ಚಾಲನೆಯಲ್ಲಿವೆ. ೩೦೦೦ ಕ್ಕಿಂತ ಹೆಚ್ಚು ಸರ್ಕಾರಿ ಕಚೇರಿಗಳು ಕೆಸ್ವಾನ್‌ ಸಂಪರ್ಕ ಹೊಂದಿವೆ. ಕೆಸ್ವಾನ್‌(KSWAN) ನಿಯಂತ್ರಣ ಕೊಠಡಿಗಳು (ಪಿ.ಒ.ಪಿ) ಜಿಲ್ಲೆಯ   ತಾಲೂಜು ಕೇಂದ್ರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ನೆಟವರ್ಕ್ ದಟ್ಟಣೆಯನ್ನು ಒಟ್ಟು ಗೂಡಿಸುವಿಕೆಯನ್ನು ಹಂತವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕು ಪಿ.ಒ.ಪಿಗಳಿಗೆ ಬ್ಯಾಂಡವಿಡ್ತ್‌ ಅನ್ನು ಬಿಎಸ್‌ಎನ್‌ಎಲ್ ನಿಂದ ತೆಗೆದುಕೊಳ್ಳಲಾಗುತ್ತಿದೆ, ಇದು ನಿಜವಾದ ಅವಶ್ಯಕತೆಗೆ ಅನುಗುಣವಾಗಿ ಮತ್ತು ಕಾಲಕಾಲಕ್ಕೆ ಅಪ್‌ಗ್ರೆಡ್ ಆಗುತ್ತದೆ ಮತ್ತು ಟ್ರಾಫಿಕ್ ಬೇಡಿಕೆ ಅಗತ್ಯವಾಗಿರುತ್ತದೆ. ಕರ್ನಾಟಕ ಸರ್ಕಾರ ಕೆಸ್ವಾನ್‌(KSWAN) ೨.೦ ಅನ್ನು ಹೆಚ್ಚು ದೃಢವಾದ ಮತ್ತು ಸುರಕ್ಷಿತ ನೆಟವರ್ಕ್‌ಗೆ ನವೀಕರಿಸುತ್ತಿದೆ. ಇದು ನೆಟವರ್ಕ್ ನಲ್ಲಿರುವ ಎಂಪಿಎಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸುರಕ್ಷಿತ ಡಬ್ಲ್ಯೂಎಎನ್‌ ಸೇವೆಗಳನ್ನು ಕೊನೆಗೊಳಿಸಲು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ಬ್ಯಾಂಡವಿಡ್ತ್ ಸೇವಾ ಪೂರೈಕೆದಾರರ ಮತ್ತು ಎಲ್‌ಎಎನ್‌ ಸೇವೆಗಳ ಅಂತ್ಯಗೊಳಿಸಲು ಖಚಿತಪಡಿಸುತ್ತದೆ. ಕೆಸ್ವಾನ್‌(KSWAN) ೨.೦ ಒಪ್ಪಂದವನ್ನು s ವಿಪ್ರೊ ಮತ್ತು ಕನ್ಸಾರ್ಟಿಯಮ್ ಪಾಲುದಾರರಿಗೆ ನೀಡಲಾಗಿದೆ ಮತ್ತು ಅವರ  ಅಸ್ತಿತ್ವದಲ್ಲಿರುವ ನೆಟ್ವರ್ಕ್‌ನ್ನು ತೆಗೆದುಕೊಂಡಿದ್ದಾರೆ ಮತ್ತು ಅದನ್ನು ನವೀಕರಿಸುತ್ತಿದ್ದಾರೆ. ಕೆಸ್ವಾನ್‌(KSWAN) ೨.೦ ಅನುಷ್ಠಾನದ ಭಾಗವಾಗಿ, ಎರಡು ಟೆಲಿಕಾಂ ಸೇವೆ ಒದಗಿಸವವರಿಂದ ಬ್ಯಾಂಡ್‌ವಿಡ್ತ್‌ಅನ್ನು ತೆಗೆದುಕೊಳ್ಳಬೇಕಾಗುತ್ತದೆ, ಒಂದು ಪ್ರಾಥಮಿಕ ದ್ವಿತೀಯಕ ಲಿಂಕ್ ಒದಗಿಸುವವರು. ಇದು ನೆಟವರ್ಕ್‌ಗಾಗಿ ೯೯.೯೯% ಕ್ಕಿಂತ ಹೆಚ್ಚಿನ ಸಮಯವನ್ನು ಖಾತ್ರಿಪಡಿಸುತ್ತದೆ. ನೆಟವರ್ಕ್ ಸರ್ಕಾರದ ದತ್ತಾಂಶ ವ್ಯವಹಾರಗಳಲ್ಲಿ ಭದ್ರತೆ ಪ್ರಮುಖ ಅಂಶವಾಗಿದೆ, ಕೆಸ್ವಾನ್‌(KSWAN) ೨.೦ ರಲ್ಲಿ, Art IPSec, DMVPN  ಮತ್ತು MPLS  ವೈಶಿಷ್ಟ್ಯಗಳನ್ನು   ಸಕ್ರಿಯಗೊಳಿಸಲಾಗಿದೆ. ಕೆಸ್ವಾನ್‌(KSWAN) ಗೆ ೩೫೦೦ ಕ್ಕಿಂತಲೂ ಹೆಚ್ಚು ಸರ್ಕಾರಿ ಕಚೇರಿಗಳು ಸಂಪರ್ಕ ಹೊಂದಿದ್ದರೂ, ಈ ಕಚೇರಿಗಳಿಗೆ ಬ್ಯಾಂಡವಿಡ್ತ್‌ನ್ನು ಅಗತ್ಯತೆಂ i ಆz sರದ ಮೇಲೆ ಸಮಂ iವನ್ನು ನವೀಕರಿಸಲಾಗುತ್ತಿದೆ, ಕೆಸ್ವಾನ್‌(KSWAN) ೨.೦ ಪ್ರಕಾರ ಸಿಇಜಿ ರಾಜ್ಯದಲ್ಲಿನ ಹೆಚ್ಚಿನ ಸರ್ಕಾರಿ ಕಚೇರಿಗಳಿಗೆ ಸುರಕ್ಷಿತ ಸಂಪರ್ಕವನ್ನು ಕಲ್ಪಿಸುತ್ತಿದೆ (ಸುಮಾರು ೬೪೦೦ ಸರ್ಕಾರ ಕಚೇರಿಗಳು). ಕೆಲಸದ ಆದೇಶವನ್ನು ಮೆ|| ಬಿಎಸ್‌ಎನ್‌ಎಲ್ ಮತ್ತು ಎಂ / ಎಸ್ ಏರ್‌ಟೆಲ್‌ನಲ್ಲಿ ೪೦೦೦+ ಲಿಂಕಗಳಿಗೆ ಇರಿಸಲಾಗಿದೆ ಮತ್ತು ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ಎಲ್ಲಾ ಜಿಲ್ಲೆಯ ಪ್ರಧಾನ ಕಛೇರಿಗಳಲ್ಲಿ ಅಗತ್ಯವಿರುವ ಆನ್‌ಲೈನ್ ಸರ್ಕಾರಿ ವಹಿವಾಟುಗಳನ್ನು ಪೂರೈಸಲು ಸ್ಥಳೀಯ ಪ್ರದೇಶ ಜಾಲ (ಲ್ಯಾನ್) ಅನ್ನು ಉನ್ನತೀಕರಣ ಗೊಳಿಸಲಾಗುವುದು.

 

೩. ಇ-ಸಂಗ್ರಹಣೆ:

ಇ-ಸಂಗ್ರಹಣೆ ಯೋಜನೆಯು ನಿಖರತೆ, ಹೊಣೆಗಾರಿಕೆ, ಪ್ರತಿಕ್ರಿಯಾಶಕ್ತಿ ಮತ್ತು ಪಾರದರ್ಶಕತೆಯನ್ನು ಎಲ್ಲಾ ಸರ್ಕಾರಿ ಸಂಗ್ರಹಣೆಯಲ್ಲಿ ವೃದ್ಧಿಸುವ ಗುರಿಯನ್ನು ಹೊಂದಿದೆ. ಇ-ಸಂಗ್ರಹಣೆಯು ಒಂದು ಸಂಪೂರ್ಣ ನಿರ್ವಹಣ ಪದ್ಧತಿಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.. ಈ ಯೋಜನೆಯಲ್ಲಿ ಖಾಗದ ರಹಿತ ಕಚೇರಿಯನ್ನು ಅಳವಡಿಸಿರುವುದು ಒಂದು ಹೆಗ್ಗಳಿಕೆಯಾಗಿದೆ. ಈ ವೇದಿಕೆಯಲ್ಲಿ ಹೆಚ್ಚಿನ ಬಿಡ್ಡರ್‌ಗಳು ಸ್ಪರ್ಧಾತ್ಮಕವಾಗಿ ಭಾಗವಹಿಸುವ ಅವಕಾಶವಿರುವುದರಿಂದ ಬಿಡ್‌ದಾರರ ಸಂಖ್ಯೆ ಹೆಚ್ಚಾಗಿದೆ.

 

೪. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥಾ ಪದ್ಧತಿ

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥಾ ಪದ್ಧತಿಯು ಎಲ್ಲಾ ಮಾನವ ಸಂಪನ್ಮೂಲ ರಜೆ, ವರ್ಗಾವಣೆ, ವೇತನವಹಿ, ಆಡಳಿತ ಮತ್ತು ಸೇವಾ ವಿಷಯಗಳನ್ನು ಸ್ವಯಂ ಚಾಲಿತವಾಗಿ ನಿರ್ವಹಿಸುತ್ತಾ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಂಪನ್ಮೂಲರ ಮಾಹಿತಿಯ ಏಕೀಕೃತ ದೃಶ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯು ವಿಸ್ತೃತವಾದ ಮತ್ತು ನಿಖರವಾದ ಮಾನವ ಸಂಪನ್ಮೂಲ ವ್ಯವಸ್ಥೆನ್ನು ಒದಗಿಸಿ ಪರಿಣಾಮಕಾರಿಯಾದ ಆಡಳಿತ ವ್ಯವಸ್ಥೆಗೆ ಸಹಕಾರಿಯಾಗಿದೆ. ರಾಜ್ಯದಲಿ ಹೆಚ್.ಆರ್.ಎಂ.ಎಸ್. ಸಂಪೂರ್ಣವಾಗಿ ಅನುಷ್ಠಾನದಲ್ಲಿದೆ.

ಅ) ವೇತನ, ತುಟ್ಟಿಭತ್ಯ, ಮುಂಗಡ, ಹೆಚ್ಚಳ ಭತ್ಯೆ ಇತ್ಯಾದಿಗಳು ವಿದ್ಯುನ್ಮಾನ ವೇದಿಕೆಯ ಮುಖಾಂತರ ಪಾವತಿ ಆ) ಆರ್ಥಿಕ ಇಲಾಖೆಯ ಆಯವ್ಯಯ ಸಿದ್ಧತೆಗೆ ತಕ್ಷಣದಲ್ಲಿ ವೇತನ ವಿಷಯದ ಮಾಹಿತಿಯ ಲಭ್ಯ. ಇ) ಹೆಚ್.ಆರ್.ಎಮ್.ಎಸ್ - ೨.೦ ಯೋಜನೆಗೆ ಸರ್ಕಾರವು ಮಂಜೂರಾತಿ ನೀಡಿದ್ದು, ತಯಾರಿಕೆ ಹಂತದಲ್ಲಿದ್ದು ಹೆಚ್‌ಆರ್‌ಎಂಎಸ್‌-೧ ಪೂರ್ಣಗೊಳ್ಳುವ ಹಂತದಲ್ಲಿದೆ. ಈ) ಪತ್ರಾಂಕಿತ ಅಧಿಕಾರಿಗಳ ರಜೆ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲು ಅನುವು ಮಾಡಿಕೊಟ್ಟು ಬಾಕಿ ರಜೆಯ ಇಂದೀಕರಣಕ್ಕಾಗಿ ಮಹಾಲೇಖಪಾಲಕರ ಕಛೇರಿಗೆ ಇಂಟರ್‌ಪೆಸ್ ಒಂದನ್ನು ಕಲ್ಪಿಸಿಕೊಡಲಾಗಿದೆ. ಉ) ವೇತನ ಪ್ರಕ್ರಿಯೆ ಮತ್ತು ಅನುಮೋದನೆಗಾಗಿ ಹೆಚ್.ಆರ್.ಎಂ.ಎಸ್ ತಂತ್ರಾಂಶವನ್ನು ರಾಜ್ಯ ಖಜಾನೆ ತಂತ್ರಾಂಶ - ಖಜಾನೆ-೨ ನೊಂದಿಗೆ ಸಂಯೋಜಿಸಲಾಗಿದೆ. ಹೆಚ್.ಆರ್.ಎಂ.ಎಸ್ ತಂತ್ರಾಂಶದಿಂದ ವೇತನ ಬಿಲ್‌ಗಳ ಉತ್ಪಾದನೆಯ ನಂತರ, ಈ ಏಕೀಕರಣದ ಭಾಗವಾಗಿ ಬಿಲ್‌ಗಳನ್ನು ವಿದ್ಯುನ್ಮಾನವಾಗಿ ಖಜಾನೆ-೨ಗೆ ರವಾನಿಸಲಾಗುತ್ತಿದೆ.

 

೫. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ

ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಸುರಕ್ಷಿತ, ದೃಢವಾದ, ವಿಶ್ವಾಸಾರ್ಹ ಮತ್ತು ಆರೋಹಣ ಮಾಹಿತಿ ಮೂಲಸೌಕರ್ಯವನ್ನು ಒದಗಿಸುವ ಸಲುವಾಗಿ ಕರ್ನಾಟಕ ಸರಕಾರವು ಬದ್ಧವಾಗಿದೆ ಮತ್ತು ವೇಗವಾಗಿ ಮತ್ತು ವಿಶ್ವಾಸಾರ್ಹ ನಾಗರಿಕ ಸೇವೆಗಳನ್ನು ಒದಗಿಸಲು ತಮ್ಮ ಇ-ಆಡಳಿತ ಅಪ್ಲಿಕೇಶನ್‌ಗಳನ್ನು/ಉಪಕ್ರಮಗಳನ್ನು ಸುರಕ್ಷಿತ ರೀತಿಯಲ್ಲಿ ಚಾಲನೆ ಮಾಡಲು. ವಸ್ತುನಿಷ್ಠದ ಮೇಲೆ ತಿಳಿದುಕೊಳ್ಳಲು ಕರ್ನಾಟಕದ ಸ್ಟೇಟ್ ಡಾಟಾ ಸೆಂಟರ್ ೨೦೦೪-೦೫ರಲ್ಲಿ ಕೋರ್ ಸಾಮಾನ್ಯ ತಾಂತ್ರಿಕ ಮೂಲಸೌಕರ್ಯದ ಭಾಗವಾಗಿ ಖನಿಜಭವದಲ್ಲಿ ಸ್ಥಾಪನೆಯಾಯಿತು ಮತ್ತು ಇಲ್ಲಿಯವರೆಗೂ ಕಾರ್ಯನಿರ್ವಹಿಸುತ್ತದೆ. ಈ ರಾಜ್ಯ ದತ್ತಾಂಶ ಕೇಂದ್ರವು ಕೇಂದ್ರ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಅನ್ವಯಿಕೆಗಳನ್ನು ಕ್ರೂಢೀಕರಿಸುವ ಮತ್ತು ಹೋಸ್ಟಿಂಗ್‌ಗೆ ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುತ್ತದೆ. ರಾಜ್ಯ ಸರ್ಕಾರವು ರಾಜ್ಯ ಡೇಟಾ ಸೆಂಟರ್ ಸ್ಥಾಪಿಸಲು ರಾಜ್ಯಗಳಿಗೆ ಆರ್ಥಿಕ ನೆರವು ಒದಗಿಸಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎನ್‌ಐಎಫ್ಪಿ) ಯಿಂದ ರಾಷ್ಟ್ರವ್ಯಾಪಿ ಯೋಜನೆ, ರಾಷ್ಟ್ರೀಯ ಇ-ಗವರ್ನನ್ಸ್ ಆಕ್ಷನ್ ಪ್ಲಾನ್ (ಎನ್ಜಿಎಪಿ) ಅನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಹಣಕಾಸಿನ ನೆರವು ಕಾಪ್ಸೆಕ್ಸ್ ಮತ್ತು ಒಪೆಕ್ಸ್ ಎರಡನ್ನೂ ೫ ವರ್ಷಗಳ ಅವಧಿಯಲ್ಲಿ ಒಳಗೊಂಡಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರವು ೨೦೧೨ ರಲ್ಲಿ ವಿಕಾಸ ಸೌಧದಲ್ಲಿ ಸ್ಥಾಪನೆಯಾಗಿದೆ ಮತ್ತು ಇದು ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಎರಡನೇ ಡಾಟಾ ಸೆಂಟರ್ ನೀಡುವ ಸೇವೆಯಾಗಿದೆ. ಡಾಟಾ ಕೇಂದ್ರಗಳು ಎರಡೂ ೨೪ X ೭ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ ಮತ್ತು ಎಲ್ಲಾ ಡಾಕ್ ಇಲಾಖೆಗಳಿಗೆ ಅನುಗುಣವಾಗಿ ರಾಜ್ಯ ಡೇಟಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಹೊರಗುತ್ತಿಗೆ ಸೇವಾ ಪೂರೈಕೆದಾರರ ಸಹಾಯದಿಂದ ಸಿಇಜಿ ಈ ಡೇಟಾ ಕೇಂದಗಳನ್ನು ನಿರ್ವಹಿಸುತ್ತಿದೆ. ಮತ್ತು ದತ್ತಾಂಶ ಕೇಂದಗಳನ್ನು ನಿರ್ವಹಿಸುವಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿದೆ.

 

ಎಸ್‌ಡಿಸಿ ಪ್ರಸ್ತುತ ಕರ್ನಾಟಕ ಸರ್ಕಾರದ ಇಲಾಖೆಗಳಿಗೆ ಕೆಳಗಿನ ರೀತಿಯ ಸೇವೆಗಳನ್ನು ಒದಗಿಸುತ್ತದೆ: ಸಲಕರಣೆ ಹೋಸ್ಟಿಂಗ್: ಇಲಾಖೆಗಳ ಸಲಕರಣೆಗಳನ್ನು ಹೋಸ್ಟ್ ಮಾಡಲು ಎಸ್ ಡಿ ಸಿ ಭೌತಿಕ ಸ್ಥಳ ಮತ್ತು ಸರ್ವರ್ ರ್ಯಾಕ್‌ ಜಾಗವನ್ನು ಹೊಂದಿರುವ ಸುರಕ್ಷಿತ, ನಿಯಂತ್ರಿತ ಮತ್ತು ಮೇಲ್ವಿಚಾರಣೆ ಪ್ರದೇಶವಾಗಿ ಕಾರ್ಯನಿರ್ವಹಿಸಬಹುದು. ಎಸ್‌ಡಿಸಿಯ ಈ ವೈಶಿಷ್ಟ್ಯವನ್ನು ಬಳಸುವುದು ಪ್ರತ್ಯೇಕ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವುದು, ಭದ್ರಪಡಿಸುವುದು ಮತ್ತು ನಿರ್ವಹಿಸುವುದು.

ಅಪ್ಲಿಕೇಶನ್ ಹೋಸ್ಟಿಂಗ್: ಎಸ್‌ಡಿಸಿ ಇಲಾಖೆಗಳಿಗೆ ವೈವಿಧ್ಯಮಯ ಅನ್ವಯಿಕೆಗಳನ್ನು ಹೋಸ್ಟ್‌ ಮಾಡಲು ಬಳಸಬಹುದಾದ ಸರ್ವರ್‌ಗಳು ಮತ್ತು ಸಾಫ್ಟವೇರ್‌ಗಳ ಸ್ಟ್ಯಾಕಗಳನ್ನು ಹೊಂದಿದೆ. ಹೋಸ್ಟ್ ಮಾಡಿದ ಅಪ್ಲಿಕೇಶನಗಳನ್ನು ಮತ್ತಷ್ಟು ಸಾಪ್ಟ್‌ವೇರ್ ನಿಯಂತ್ರಣಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳಿಂದ ಪಡೆದುಕೊಳ್ಳಬಹುದು.

 

ದತ್ತಾಂಶ ಹೋಸ್ಟಿಂಗ್: ಕೆಎಸ್‌ಡಿಸಿಯು ಹಲವಾರು ಟೆರಾಬೈಟಗಳ ದತ್ತಾಂಶವನ್ನು ಶೇಖರಣಾ ವ್ಯವಸ್ಥೆಗಳಲ್ಲಿ ಹಿಡಿದಿರುವ ಮಾಧ್ಯಮಿಕ ಸಂಗ್ರಹ ಮಾಧ್ಯಮದೊಂದಿಗೆ ಹಿಡಿದಿಡಲು ಸಾಮರ್ಥ್ಯ ಹೊಂದಿದೆ. ಇದು ಕೆಎಸ್‌ಡಿಸಿಯಲ್ಲಿ ಹೆಚ್ಚಿನ ಪ್ರಮಾಣದ ಡೇಟಾವನ್ನು ಸಂಗ್ರಹಿಸಲು ಮತ್ತು  ಪ್ರವೇಶಿಸಲು ಇಲಾಖೆಗಳನ್ನು ಅನುಮತಿಸುತ್ತದೆ.

ನಿರ್ವಹಣಾ ಸೇವೆಗಳು:

ಮಾನಿಟರಿಂಗ್: ಕೆಎಸ್‌ಡಿಸಿಯು ವ್ಯವಸ್ಥೆಗಳ ಕಾರ್ಯವವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವ ೨೪/೭ ಕಾರ್ಯಾಚರಣೆಗಳು ಮತ್ತು ನಿರ್ವಹಣಾ ಸಿಬ್ಬಂದಿಗಳನ್ನು ಹೊಂದಿದೆ ಮತ್ತು ಸಂಭವನೀಯ ಸಮಸ್ಯೆಗಳ ಮುಂಚಿನ ಪತ್ತೆಗೆ ಸಹಾಯ ಮಾಡುತ್ತದೆ. ಭೌತಿಕ ಪ್ರವೇಶ ಮತ್ತು ವ್ಯವಸ್ಥೆಗಳ ಪ್ರವೇಶವನ್ನು ಸಹ ನಿಗಾ ವಹಿಸುತ್ತದೆ ಮತ್ತು ಲಾಗ್ ಮಾಡಲಾಗಿದೆ.

ನಿರ್ವಹಣೆ: ೨೪/೭ ಕಾರ್ಯಾಚರಣೆಗಳು ಮತ್ತು ವ್ಯವಸ್ಥಾಪನಾ ಸಿಬ್ಬಂದಿಯು ನಿಯಮಿತವಾಗಿ ಅಥವಾ ಬೇಡಿಕೆಲ್ಲಿರುವ ನಿರ್ವಹಣಾ ಚಟುವಟಿಕೆಗಳಲ್ಲಿ ಸಹಾಯಕವಾಗಬಹುದು. ಎರಡೂ ಡೇಟಾ ಕೇಂದ್ರಗಳಲ್ಲಿ ೨೬೭+ ಭೌತಿಕ ಸರ್ವರ್‌ಗಳು, ೧೬೦೦+ ವಿಎಂಗಳು, ೧೫೦೦ ಟಿಬಿ ಎಸ್‌ಎಎನ್ ಶೇಖರಣಾ ಆಯಿಯನ್ನು ನಿಯೋಜಿಸಲಾಗಿದೆ, ಕೆಎಸ್‌ಡಿಸಿ ಐಎಸ್‌ಒ ೨೭೦೦೧ ಮತ್ತು ಐಎಸ್‌ಒ ೨೦೦೦೦ ಪ್ರಮಾಣೀಕರಿಸಲ್ಪಟ್ಟಿದೆ, ಕೆಎಸ್‌ಡಿಸಿ ಮತ್ತು ಆರ್‌ಎಸ್‌ಡಿಸಿಯಲ್ಲಿ ೧೪೨ ವಿಭಾಗದ ೨೫೮ ಅರ್ಜಿಗಳನ್ನು ಆಯೋಜಿಸಲಾಗಿದೆ. ಡೇಟಾ ಕೇಂದ್ರದಲ್ಲಿ ಅರ್ಜಿಗಳನ್ನು ಹೋಸ್ಟ್ ಮಾಡಿದ ಕೆಲವು ಪ್ರಮುಖ ಇಲಾಖೆಗಳು ಈ ಕೆಳಕಂಡಂತಿವೆ: ಕಂದಾಯ, ಐಜಿಆರ್, ಎಸ್‌ಎಸ್‌ಎಲ್‌ಆರ್, ಚುನಾವಣಾ ಆಯೋಗ, ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ, ಬೆಂಗಳೂರು ಸಂಚಾರ ಪೊಲೀಸ್, ಖಜಾನೆ, ಕಾರ್ಮಿಕ, ಡಿಎಸ್‌ಎಸ್‌ಪಿ, ಸಾರ್ವಜನಿಕ ಸೂಚನೆಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕೆಇಎ, ಬಿಡಬ್ಲ್ಯೂಎಸ್‌ಎಸ್‌ಬಿ, ಗಣಿ ಮತ್ತು ಭೂ ವಿಜ್ಞಾನ, ಕೆಎಸ್‌ಆರ್‌ಎಸಿ, ಆರೋಗ್ಯ ನಿರ್ದೇಶನಾಲಯ ಮತ್ತು ಎಫ್‌ಡಬ್ಲ್ಯೂ, ಕರ್ನಾಟಕ ವಿಧಾನಸಭೆ, ಕೆಆರ್‌ಇಡಿಎಲ್, ಎಚ್‌ಇಡಿ, ಹಿಂದುಳಿದ ವರ್ಗಗಳ ಇಲಾಖೆ, ತೋಟಗಾರಿಕೆ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕರ್ನಾಟಕ ಪೊಲೀಸ್ ವಸತಿ ನಿಗಮ, ರಾಜೀವ್ ಗಾಂಧಿ ವಸತಿ ನಿಗಮ, ಐಟಿ ಮತ್ತು ಬಿಟಿ, ತಾಂತ್ರಿಕ ಶಿಕ್ಷಣ ಇಲಾಖೆ, ಯುಪಿಒಆರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಇ-ಆಡಳಿತ.

 

೬. ಆಧಾರ್

ಆಧಾರ್ ತಮ್ಮ ಬೈಯೊಮೆಟ್ರಿಕ್ ಮತ್ತು ಡೆಮೊಗ್ರಾಫಿಕ್ ಡೇಟಾವನ್ನು ಆಧರಿಸಿ ಎಲ್ಲಾ ಭಾರತೀಯ ನಿವಾಸಿಗಳಿಗೆ ನೀಡಲಾದ ೧೨ ಅಂಕಿಯ ಅನನ್ಯ ಗುರುತಿನ ಸಂಖ್ಯೆ. ಇಂದಿನಂತೆ ಕರ್ನಾಟಕದ ೯೯% ನಿವಾಸಿಗಳಿಗೆ ಆಧಾರ್ ನೀಡಲಾಗಿದೆ. ಉಳಿದಿರುವ ಜನರನ್ನು ಒಳಗೊಳ್ಳಲು ಸಿ.ಇ.ಜಿ ಯಿಂದ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

೧. ಉಳಿದ ಜನಸಂಖ್ಯೆಯು ೦-೫ ವರ್ಷ ವಯಸ್ಸಿನೊಳಗಿನ ಮಕ್ಕಳ ದಾಖಲಾತಿಯನ್ನು ತೀವ್ರಗೊಳಿಸಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು ೨೦೦೦ ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗಿದೆ ಮತ್ತು ಸೂಕ್ತವಾದ ಸೂಚನೆಗಳನ್ನು ಮತ್ತು ಎಲ್ಲ ಮಕ್ಕಳ ದಾಖಲಾತಿಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಲಾಗಿತ್ತು. ಮುಂದುವರೆದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧಾರ್‌ ನಿರ್ವಹಣೆಗೆ ಟ್ಯಾಬ್ಲೆಟ್‌ಗಳನ್ನು ನೀಡಲಾಗಿದೆ.  ೨. ಬೆಂಗಳೂರಿನಲ್ಲಿರುವ ಜನಸಂಖ್ಯೆ ಹೆಚ್ಚಿರುವುದರಿಂದ, ಜನಸಂಖ್ಯೆಯು ಇತರ ಜಿಲ್ಲೆಗಳಿಗಿಂತ ಹೆಚ್ಚಾಗಿದೆ. ಆದ್ದರಿಂದ, ಹೆಚ್ಚುವರಿ ೨೫೮ ಆಧಾರ್ ನೋಂದಣಿ ಕಿಟ್‌ಗಳು ಇಡಿಸಿಎಸ್‌ ಡೈರೆಕ್ಟರೇಟ್‌ಗೆ ಸೇರಿದ ಬೆಂಗಳೂರು-೧ ಕೇಂದ್ರಗಳಿಗೆ ಒದಗಿಸಲಾಗಿದೆ. ಬಿಬಿಎಂಪಿ ವಾರ್ಡ್ ಅಧಿಕಾರಿಗಳಲ್ಲಿ ೨೧೦ ದಾಖಲಾತಿ ಕೇಂದ್ರಗಳನ್ನು ಸಿ.ಇ.ಜಿ ಮೂಲಕ ರಿಯಾಯಿತಿ ದರದಲ್ಲಿ ತೆರೆಯಲು ಪ್ರಸ್ತಾಪಿಸಲಾಗಿದೆ. ೩. ದೈಹಿಕವಾಗಿ ದುರ್ಬಲ ವ್ಯಕ್ತಿಗಳ, ಮನೆಯ ಆಧಾರ್ ದಾಖಲಾತಿಗಳನ್ನು ತಮ್ಮ ವಿನಂತಿಗಳ ಪ್ರಕಾರ ನಡೆಸಲಾಗುತ್ತಿದೆ. ೪. ಅಂಚೆ ಕಛೇರಿಗಳು ಮತ್ತು ಬ್ಯಾಂಕುಗಳ ಸಂಬಂಧಪಟ್ಟ ಇಲಾಖೆಗಳು ಹಲವು ಪೋಸ್ಟಲ್ ಮತ್ತು ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ದಾಖಲಾತಿಯನ್ನು ಪ್ರಾರಂಭಿಸಿವೆ. ದಾಖಲಾತಿಗಳನ್ನು ಹೆಚ್ಚಿಸಲು ಪೋಸ್ಟಲ್ ಇಲಾಖೆಗಳು ಮತ್ತು ಬ್ಯಾಂಕುಗಳೊಂದಿಗೆ ಯುಐಡಿ ಸಹಕರಿಸುತ್ತಿದೆ. ೫. ಎಲ್ಲಾ ಜಿಲ್ಲೆಗಳಲ್ಲಿ ಆಧಾರ್ ಅದಾಲತ್‌ಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಎಲ್ಲಾ ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲಾಗುವುದು. ೬. ಪ್ರಸ್ತುತ, ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ೭೨೨ ನಾಡ ಕಚೇರಿಗಳಲ್ಲಿ  (ಎಜೆಎಸ್‌ಕೆ) ಸಿಇಜಿ ನಿರ್ವಾಹಕ ಕಿಟ್‌ಗಳ ಮೂಲಕ ನೋಂದಣಿ ಮತ್ತು ನವೀಕರಣಗಳನ್ನು ಸುಗಮಗೊಳಿಸಲಾಗುತ್ತಿದೆ. ೭. ನವೀಕರಣಗಳನ್ನು ೬೦೨೪ ಆರ್‌ಡಿಪಿಆರ್ ಅಪ್ಡೇಟ್ ಕೇಂದ್ರಗಳ ಮೂಲಕ ಪಂಚಾಯಿತಿ ಮಟ್ಟದಲ್ಲಿ ಸುಗಮಗೊಳಿಸಲಾಗಿದೆ. ೮. ಪ್ರಶ್ನೆಗಳು ಮತ್ತು ದೂರುಗಳ ಸಮಸ್ಯೆಗಳನ್ನು ಪರಿಹರಿಸಲು ಕಾಲ್ ಸೆಂಟರ್ ಅನ್ನು ಸಿದ್ಧಪಡಿಸಲಾಗಿದೆ. ೯. ೫ ಮತ್ತು ೧೫ ವರ್ಷಗಳಲ್ಲಿ ಮಕ್ಕಳನ್ನು ಆಧಾರ್ ಬಯೋ-ಮೆಟ್ರಿಕ್‌ ವಿವರಗಳಿಗೆ ನವೀಕರಿಸಬೇಕು ಎಂದು ನಿಯಮಿತವಾಗಿ ನವೀಕರಣಗಳನ್ನು ಸಕ್ರಿಯಗೊಳಿಸಲು ಇಸಿಎಂಪಿ ಕಿಟ್‌ಗಳನ್ನು ರಾಜ್ಯದಾದ್ಯಂತ ಶಾಲೆಗಳಲ್ಲಿ ನಿಯೋಜಿಸಲಾಗಿದೆ. ೧೦. ಜನ್ಮ ನೋಂದಣಿ  ಮೂಲಕ ಆಧಾರ್‌ ಅನ್ನು ಸಂಯೋಜಿಸಲು ಪ್ರಸ್ತಾಪಿಸಲಾಗಿದೆ.

 

೭. ಕರ್ನಾಟಕ ನಿವಾಸ ದತ್ತಾಂಶ ಕೇಂದ್ರ (ಕೆಆರ್ ಡಿಎಚ್)

೧. ASA / AUAಗೆ ಆನ್-ಬೋರ್ಡ್ ಇಲಾಖೆಗಳ ಮಾಹಿತಿ

ಪೂರ್ವ ಉತ್ಪಾದನೆ (Pre-Production)

೧. ಇ-ಆಡಳಿತ ಕೇಂದ್ರ ೨. ಭೂಮಿ ಮಾನಿಟರಿಂಗ್ ಸೆಲ್ ೩. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಲಿಮಿಟೆಡ್. ೪. ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್

ಉತ್ಪಾದನೆ (Production)

೧. ಇ-ಆಡಳಿತ ಕೇಂದ್ರ

  • ಡಿಬಿಟಿ ಮತ್ತು ವಿದ್ಯಾರ್ಥಿವೇತನ ಪೋರ್ಟ್‌ಲ್
  • ಮೊಬೈಲ್-೧
  • ಪಶುಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆ
  • ನಾಗರಿಕ ಸೇವೆಗಳ ವಿದ್ಯುನ್ಮಾನ ನಿರ್ದೇಶನಾಲಯ
  • ಬೆಳೆ ವಿಮೆ
  • ಕೃಷಿ ಇಲಾಖೆ
  • ಭೂಮಿ ಮಾನಿಟರಿಂಗ್ ಸೆಲ್
  • ಸಿಂಗಲ್ ಸೈನ್ ಆನ್
  • ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್

೨. ಶಿಕ್ಷಣ ಇಲಾಖೆ

೩. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್

 

ವಾರ್ಷಿಕ ಆಧಾರದ ಮೇಲೆ ಹೆಸರು ಮ್ಯಾಚರ್‌ಆಪ್ ತಂತ್ರಾಂಶ ಬೆಂಬಲ / ನಿರ್ವಹಣೆ:

ನೇಮಸ್ಕೇಫ್‌ ಸಾಫ್ಟವೇರ್‌ ಕಾರ್ಯಗಳನ್ನು ಹೋಲಿಕೆಗೆ ಸ್ಟ್ರಿಂಗ್ ಹೊಂದಿರುತ್ತದೆ, ಇಂಗ್ಲಿಷ್‌ನಿಂದ ಕನ್ನಡ ಹೆಸರುಗಳು, ಕನ್ನಡದಿಂದ ಇಂಗ್ಲಿಷ್ ಹೆಸರುಗಳು ಮತ್ತು ಭೌದ್ಧಿಕತೆಕೆ ಸ್ಟ್ರಿಂಗ್ ಹೋಲಿಕೆಯ ವೆಬ್ ಸೇವೆಗಳನ್ನು ರಾಜ್ಯ ಡೇಟಾ ಕೇಂದ್ರದಲ್ಲಿ ಆಯೋಜಿಸಲಾಗುತ್ತದೆ. ಸಿ-ಡಿಎಸಿ ನಿಂದ ನೇಮ್‌ಸ್ಕೇಪ್ ಟೂಲ್ ತಂತ್ರಾಂಶವನ್ನು ಸೆಪ್ಟೆಂಬರ್ ೨೦೧೭ ರಲ್ಲಿ ಖರೀದಿಸಲಾಗಿದೆ.

ಸಿ-ಡಾಕ್ ಎಯುಎ-ಎಎಸ್‌ಎ ಸೆಕ್ಯುರಿಟಿ ಆಡಿಟ್ ಎಯುಎ-ಎಎಸ್‌ಎ ವೆಬ್-ಸೇವೆಗಳು

ಪೂರ್ವ ಉತ್ಪಾದನೆ ಮತ್ತು ಉತ್ಪಾದನಾ ಪರಿಸರದಲ್ಲಿದೆ ಮತ್ತು ವಿವಿಧ ಇಲಾಖೆಗಳು / ಅನ್ವಯಗಳ ಮೂಲಕ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ದುರುದ್ದೇಶಪೂರಿತ ಬಳಕೆದಾರರಿಂದ ಅಪ್ಲಿಕೇಶನ್‌ನನ್ನು ನೋಡಲು ಮತ್ತು ರಾಜಿಮಾಡಿಕೊಳ್ಳಬಹುದಾದ ದೋಷಗಳನ್ನು ಕಂಡು ಹಿಡಿಯುವುದು ಇಡೀ ಪರೀಕ್ಷೆಯ ಉದ್ದೇಶವಾಗಿತ್ತು. ಫsಲಿತಾಂಶಗಳ ಮೌಲ್ಯಮಾಪನ ಅವಧಿಯಲ್ಲಿ ಮಾತ್ರ ಅಪ್ಲಿಕೇಶನ್ ಸ್ಥಿತಿಯನ್ನು ಸೂಚಿಸುತ್ತವೆ. ಭದ್ರತಾ ಆಡಿಟ್‌ಗಾಗಿ ಸಿ-ಡಿಎಸಿಗೆ ಎಯುಎ-ಎಎಸ್‌ಎ ವೆಬ್ ಸೇವೆಗಳ ಸುರಕ್ಷತಾ ಲೆಕ್ಕಪರಿಶೋಧನೆಗೆ ಶುಲ್ಕಗಳ ಈ ಮೊತ್ತ ರೂ.೫೩,೧೦೦ ಆಗಿರುತ್ತದೆ.

೨. ಇ-ಸೈನ್‌ಗಾಗಿ ಎಎಸ್‌ಪಿಯಾಗಿ ಕೆಆರ್‌ಡಿಹೆಚ್

ಇ-ಸೈನ್ ದಾಖಲೆಗಳನ್ನು ಅಥವಾ ಅರ್ಜಿಯಗಳನ್ನು ವಿದ್ಯುನ್ಮಾನವಾಗಿ ಮತ್ತು ಆಧಾರ್ ಅನ್ನು ಉಪಯೋಗಿಸುವ ಮೂಲಕ ಆನ್‌ಲೈನ್‌ನಲ್ಲಿ ಡಿಜಿಟಲ್ ಸಹಿ ಮಾಡುವಿಕೆಯನ್ನು ಶಕ್ತಗೊಳಿಸುತ್ತದೆ. ಸಿ-ಡಾಕ್ (ಪುಣೆ) ಯನ್ನು ಇ-ಆಡಳಿತ ಕೇಂದ್ರದ ಇ-ಸೈನ್ ಸೇವೆಗಾಗಿ ಎಎಸ್‌ಪಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ. ಇ-ಸೈನ್‌ನನ್ನು ಆಧಾರ್ e-KYC ಬಳಕೆ ಮಾಡಿ ಕೊಂಡು ವಿದ್ಯುನ್ಮಾನವಾಗಿ ಸಹಿ ಹಾಕಲು ಬಳಕೆ ಮಾಡಲಾಗುತ್ತಿದೆ.

ಬಳಕೆ ಮಾಡುತ್ತಿರುವ ಇಲಾಖೆಗಳೆಂದರೆ,  ಬಿಬಿಎಂಪಿ, ಸ್ಕೂಲ್ ಸ್ಕಾಲರ್‌ಶಿಪ್, ಸೇವಾ ಸಿಂಧು, ಡ್ರಗ್ ನಿಯಂತ್ರಣ ಇಲಾಖೆ, ಆರಕ್ಷಕ ಇಲಾಖೆ, ಎಜೆಎಸ್‌ಕೆ ಇಲಾಖೆ, e-Attestation ಅಪ್ಲಿಕೇಶನ್‌, ಕೆಬಿಟ್ಸ್, ಕೆಎಸ್‌ಪಿಸಿಬಿ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಬೆಂಗಳೂರು-೧, ಕೃಷಿ ಇಲಾಖೆ, ವಿದ್ಯುತ್ ತಪಾಸಣೆ ಇಲಾಖೆ, ಪಿಎಂ-ಕಿಸಾನ್, ಕಾರ್ಮಿಕ ಇಲಾಖೆ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಕರ್ನಾಟಕ ವಸತಿ ಮಂಡಳಿ, ಬೃಹತ್‌ ಮತ್ತು ಮೆಗಾ ಕೈಗಾರಿಕೆಗಳ ನಿರ್ದೇಶನಾಲಯ, ಕೆಎಂಡಿಎಸ್, ಸಾರಿಗೆ ಇಲಾಖೆ, ಇ- ಆಫೀಸ್, ಕೃಷಿ ಮಾರುಕಟ್ಟೆ ಇಲಾಖೆ, ಆದಾಯ-ಬಿಎಂಸಿ, ಬೆಸ್ಕಾಮ್, ಕೆ.ಎಂ.ಎಫ್, ಅಬಕಾರಿ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಎಸ್‌ಎಸ್‌ಪಿ-ಪೋಸ್ಟ್ ಮೆಟ್ರಿಕ್ ಯೋಜನೆ,

ಸೈನ್‌ಗಳ ಅನುಷ್ಠಾನ ಪ್ರಕ್ರಿಯೆಯಲ್ಲಿರುವ ಇಲಾಖೆಗಳು:

೧. ಇ-ಆಡಳಿತ ಕೇಂದ್ರ ಡಿಜಿಲಾಕರ್

೨. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಿರ್ದೇಶನಾಲಯ

೩. ಡಿಜಿಲಾಕರ್

ಡಿಜಿಟಲ್ ಲಾಕರ್ ಎಂಬುದು ಡಿಜಿಟಲ್ ಇಂಡಿಯಾದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ, ಕೈಬರಹದ ದಾಖಲೆಗಳ ಬಳಕೆಯನ್ನು ತೆಗೆದುಹಾಕುವ ಉದ್ದೇಶದಿಂದ ಮತ್ತು ಆನ್‌ಲೈನ್‌ದಾಖಲೆಗಳ “ವಿಶ್ವಾಸ ಅರ್ಹತೆಯನ್ನು” ಪರಿಶೀಲಿಸಲು ಒಂದು ಯಾಂತ್ರಿಕ ವ್ಯವಸ್ಥೆಯ ಮೂಲಕ ಇ-ಡಾಕ್ಯುಮೆಂಟ್‌ಗಳ ಸರಕಾರಿ ಏಜೆನ್ಸಿಗಳ ಹಂಚಿಕೆಯನ್ನು ಶಕ್ತಗೊಳಿಸುತ್ತದೆ. ಡಿಜಿಟಲ್ ಇ-ಸೈನ್ ಸೌಲಭ್ಯವನ್ನು ಬಳಸಿ ಡಿಜಿಟಲ್‌ನಲ್ಲಿ ಸಹಿ ಮಾಡಿ ನಿವಾಸಿಗಳು ತಮ್ಮ ಸ್ವಂತ ಇ-ಡಾಕ್ಯುಮೆಂಟನ್ನು ಸಹ ಅಪ್ಲೋಡ್ ಮಾಡಬಹುದು. ಈ ಡಿಜಿಟಲ್‌ಲ್ಲಿ ಸಹಿ ಮಾಡಿದ ಡಾಕ್ಯುಮೆಂಟ್‌ಗಳನ್ನು ಸರ್ಕಾರ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳೊಂದಿಗೆ ಹಂಚಬಹುದು.

ಡಿಜಿಲಾಕರ್‌ನನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿರುವ ಇಲಾಖೆಗಳು: ಔಷಧ ನಿಯಂತ್ರಣ ಇಲಾಖೆ, ಆಹಾರ ಮತ್ತು ನಾಗರಿಕ ಸೇವೆಗಳು ಮತ್ತು ಕೆಬಿಟ್ಸ್.

 

ಕರ್ನಾಟಕ ರಾಜ್ಯ ಡಿಬಿಟಿ ಪೋರ್ಟಲ್

ಇ-ಆಡಳಿತ ಕೇಂದ್ರವು ಡಿಬಿಟಿ ಕರ್ನಾಟಕ ಪೋರ್ಟಲ್‌ನನ್ನು ಕರ್ನಾಟಕ ದತ್ತ ಸಂಗ್ರಹಣ ಕೇಂದ್ರದಲ್ಲಿ ನಿಯೋಜಿಸಲಾಗಿದ್ದು ಮತ್ತು ಇಲಾಖೆಗಳಿಗೆ ಲಾಗಿನ್ ದೃಢೀಕರಣವನ್ನು ರಚಿಸಲಾಗಿದೆ ಮತ್ತು ಹಂಚಿಕೊಂಡಿದೆ. ಪ್ರತಿ ತಿಂಗಳು ೫ ನೇ ದಿನಾಂಕರೊಳಗೆ ಸ್ಕೀಮ್‌ಡೇಟಾವನ್ನು ಅಪ್ಡೇಟ್ ಮಾಡಲು ಇಲಾಖೆಗಳಿಗೆ ತಿಳಿಸಲಾಗಿದೆ. ಡಿಬಿಟಿ ಕರ್ನಾಟಕ ಪೋರ್ಟಲ್‌ನನ್ನು ಇತ್ತೀಚಿನ ಆವೃತ್ತಿಗಳಿಗೆ ನವೀಕರಿಸಲು ಮತ್ತು ಡಿಬಿಟಿ ಭಾರತ್ ಮಿಷನ್‌ಗೆ ವೆಬ್ ಸೇವೆಗಳ ಮೂಲಕ ಡೇಟಾವನ್ನು ಹಂಚಿಕೊಳ್ಳಲು ಸಿಇಜಿ ಡಿಬಿಟಿ ಭಾರತ್ ಮಿಷನ್‌ಗೆ ಸಹಕರಿಸುತ್ತಿದೆ. ಡಿಬಿಟಿ ಕರ್ನಾಟಕ ಪೋರ್ಟಲ್ ಪ್ರಕಾರ ಪ್ರಸ್ತುತ ೨೭ ವಿಭಾಗಗಳು ೧೬೫ ಯೋಜನೆಗಳಿವೆ.

 

ಕರ್ನಾಟಕ ರಾಜ್ಯ ಜಾಲತಾಣ ವಿಭಾಗ

ಕರ್ನಾಟಕ ಜಾಲತಾಣ ವಿಭಾಗವು ರಾಜ್ಯದ ನಾಗರೀಕರು, ಉದ್ದಿಮೆದಾರರಿಗೆ ಮಾಹಿತಿ ಮತ್ತು ಸಂಪರ್ಕವನ್ನು ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಈ ವಿಭಾಗದಿಂದ ಪ್ರಕಟಗೊಂಡಿರುವ ವಿವಿಧ ಇಲಾಖೆಯ ಜಾಲತಾಣಗಳು ಸರ್ಕಾರದ ಆಡಳಿತವನ್ನು ಇನ್ನಷ್ಟು ಸುಲಭ ಹಾಗೂ ನಾಗರೀಕ ಸ್ನೇಹಿಯನ್ನಾಗಿಸಿವೆ.

೧. ಯೋಜನಾ ಉಸ್ತುವಾರಿ ಘಟಕ ಪ್ರಾರಂಭ

ಜಾಲತಾಣ ವಿಭಾಗದಲ್ಲಿ ಯೋಜನಾ ಉಸ್ತುವಾರಿ ಘಟಕ ಪ್ರಾರಂಭವಾಗಿದ್ದು ರಾಜ್ಯ ಸರ್ಕಾರಿ ಜಾಲತಾಣಗಳ ರಚನೆ ಮತ್ತು ನಿರ್ವಹಣೆ, ಡೊಮೇನ್ ನಾಮಕರಣ ಮತ್ತು ನಿರ್ವಹಣೆ, ಅನ್ವಯಕಗಳ ಅಭಿವೃದ್ಧಿ, ಸರ್ವರ್‌ಗಳ ನಿರ್ವಹಣೆ, ಡೇಟಾಬೇಸ್, ಸರ್ವರ್ ಪ್ರಮಾಣಪತ್ರಗಳ ನಿರ್ವಹಣೆ, ಸುರಕ್ಷತೆಯ ಪರೀಕ್ಷೆ ಮತ್ತು ಪ್ರಮಾಣಪತ್ರ ನೀಡಿಕೆ ಹಾಗೂ ತರಬೇತಿಯಂತಹ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.

೨. ರಾಜ್ಯ ಸರ್ಕಾರಿ ಜಾಲತಾಣಗಳಿಗೆ ಮಾರ್ಗದರ್ಶನ ಸೂತ್ರಗಳು ಬಳಕೆದಾರರನ್ನು ಕೇಂದ್ರಿಕರಿಸಿಕೊಂಡು ಸಾರ್ವತ್ರಿಕ ಲಭ್ಯತೆ ಮತ್ತು ಉಪಯುಕ್ತತೆಯ ಅವಶ್ಯಕತೆಗಳನ್ನು ಅರೆತುಕೊಂಡು ಜಾಲತಾಣಗಳ ರಚನೆಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದ್ದು, ಸರ್ಕಾರದ ಎಲ್ಲಾ ಜಾಲತಾಣಗಳು ಇದೇ ಮಾರ್ಗದರ್ಶನದಲ್ಲಿ ರಚನೆಯಾಗುತ್ತಿವೆ. ಅಂತರ್‌ರಾಷ್ಟ್ರೀಯ ಗುಣಮಟ್ಟ ಐಎಸ್‌ಓ ೨೩೦೨೬ ಪ್ರಮಾಣಿಕೃತ, ಕೇಂದ್ರ ಸರ್ಕಾರದ ಮಾರ್ಗದರ್ಶಿಗಳು ಮತ್ತು ಜಾಲತಾಣ ಬಳಕೆದಾರ ಮಾರ್ಗಸೂಚಿಗಳನ್ನು ಆಧಾರವಾಗಿಟ್ಟುಕೊಂಡು ಇವುಗಳನ್ನು ಸಿದ್ಧಪಡಿಸಲಾಗಿದೆ. ಈ ಮಾರ್ಗದರ್ಶಿಗಳು ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ-೨೦೦೫ರಂತಹ ಕಾನೂನುಗಳನ್ನೂ ಉಲ್ಲೇಖಿಸುತ್ತದೆ.

೩. ರಾಜ್ಯ ಸರ್ಕಾರಿ ಜಾಲತಾಣಗಳಿಗೆ ಡೊಮೇನಗಳ ನಾಮಕರಣ ಯಾವುದೇ ಸರ್ಕಾರಿ ವೆಬ್‌ಸೈಟ್‌ನ ಯುನಿವರ್ಸಲ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) / ಡೊಮೇನ್ ಹೆಸರು / ವೆಬ್ ವಿಳಾಸವು ಅದರ ಸತ್ಯಾಸತ್ಯತೆ ಮತ್ತು ಅಧಿಕೃತ ಸ್ಥಾನಮಾನದ ಬಲವಾದ ಸೂಚಕವಾಗಿದೆ. ಸಾಮಾನ್ಯವಾಗಿ ಸ್ವೀಕಾರ ಅರ್ಹ ಡೊಮೇನ್ ನೇಮ್ ಸರ್ವಿಸ್ (ಡಿಎನ್‌ಎಸ್) ಹೆಸರಿಸುವ ಸಮಾವೇಶವನ್ನು ಹೊಂದುವ ಮೂಲಕ, ಇಲಾಖೆಗಳು ತಮ್ಮ ಆನ್‌ಲೈನ್ ಗುರುತನ್ನು ಸ್ಥಾಪಿಸುತ್ತದೆ ಮತ್ತು ಹೆಸರನ್ನು ಆಯ್ಕೆ ಮಾಡುವ ಸಂಕೀರ್ಣತೆಗಳನ್ನು ಕಡಿಮೆ ಮಾಡುತ್ತದೆ. ಇಲಾಖೆಯ ನಿರ್ದಿಷ್ಟ ಡೊಮೇನ್‌ಗಳನ್ನು ತಿಳಿದು ಕೊ‍ಳ್ಳುವುದು ತುಂಬಾ ಸರಳವಾಗಿರುತ್ತದೆ ಏಕೆಂದರೆ ಸಾಮಾನ್ಯ ಮಾದರಿಯನ್ನು ಯಾವಾಗಲೂ ಅನುಸರಿಸ ಲಾಗುತ್ತದೆ; ಇಲಾಖೆ-ಹೆಸರು www.karnataka.gov.in ಅನ್ನು ನೋಂದಾಯಿಸಲಾಗುವುದು. ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಜಾಲತಾಣ ಯೋಜನೆಯು ಕನ್ನಡದಲ್ಲೇ ಡೊಮೇನ್‌ ನೇಮ್‌ ನೋಂದಣಿ ಪ್ರಕ್ರಿಯೆಗೆ ಮುಂದಾಗಿದೆ.

೪. ಸುರಕ್ಷತಾ ಕ್ರಮಗಳು  

ಜಾಲತಾಣಗಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಸುರಕ್ಷತಾ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು. ಆ ಮೂಲಕ ಜಾಲತಾಣಕ್ಕೆ ಅಕ್ರಮ ಪ್ರವೇಶ, ಮಹತ್ವದ ಮಾಹಿತಿ ಸೋರಿಕೆಯಂತ ಸಮಸ್ಯೆಗಳನ್ನು ನಿವಾರಿ ಭದ್ರೆತೆಯನ್ನು ಒದಗಿಸುವುದು.

೫. ಜಾಲತಾಣಗಳ ಒಗ್ಗೂಡಿಸುವಿಕೆ

ಸರ್ಕಾರದ ವಿವಿಧ ಇಲಾಖೆಗಳ ಜಾಲತಾಣಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ರಾಜ್ಯ ಸರ್ಕಾರದ ಅಧಿಕೃತ ಜಾಲತಾಣವನ್ನು ರಚಿಸಿ ಎಲ್ಲಾ ಇಲಾಖೆಗಳ ಸೇವೆಗಳು ಮತ್ತು ಅವುಗಳ ವಿವರ, ಆನ್‌ಲೈನ್ ಸೇವೆಗಳನ್ನು ಒಂದೇ ಕಡೆ ದೊರೆಯುವಂತೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಸೇವೆಗಳು ದೊರೆಯದೇ ಇದ್ದಲ್ಲಿ ಸಂಬಂಧಿಸಿದ ಇಲಾಖೆ/ಕಚೇರಿ/ ಅಧಿಕಾರಿಗಳ ಸಂಪೂರ್ಣ ವಿವರವನ್ನು ಈ ಜಾಲತಾಣದಲ್ಲಿ ನೀಡಲಾಗುವುದು.

೬. ಮಾಹಿತಿ ನಿರ್ವಹಣೆ ಮತ್ತು ಅನುಮೋದನಾ ನೀತಿ(CMAP)

ಮಾಹಿತಿ ನಿರ್ವಹಣೆ ಮತ್ತು ಅನುಮೋದನಾ ನೀತಿ ಆಧಾರದ ಮೇಲೆ ದೃಢೀಕರಣ ಮತ್ತು ಪ್ರವೇಶ ಜಾಲತಾಣಗಳ ನಿರ್ವಹಣೆ ಹೊಣೆಯನ್ನು ಮಾಲಿಕತ್ವ ಹೊಂದಿರುವ ಇಲಾಖೆಗೆ ನೀಡಲಾಗಿದೆ. ಸಿ.ಎಂ.ಎ.ಪಿ. ಆಧಾರದಲ್ಲಿ ವಸ್ತುವಿಷಯದ ರಚನೆ, ಪರಿಷ್ಕರಣೆ ಮತ್ತು ಅನುಮೋದನೆಯ ಅಧಿಕಾರವನ್ನೂ ಸಂಬಂಧಿತ ಇಲಾಖೆಗೆ ನೀಡಲಾಗಿದೆ ಮತ್ತು ಜಾಲತಾಣಗಳಿಗೆ ಮಾಹಿತಿಯನ್ನು ಅಪ್ಲೋಡ್ ಮಾಡುವ ಕುರಿತು ತರಬೇತಿ ನೀಡಲಾಗುತ್ತಿದೆ.

 

 

೭. ಇ- ಕಛೇರಿ(ಇ-ಆಫೀಸ್‌)

ಇ-ಕಛೇರಿಯು ಭಾರತ ಸರ್ಕಾರದ ರಾಷ್ಟ್ರೀಯ ಇ-ಆಡಳಿತ ಕಾರ್ಯಕ್ರಮದಡಿ ಮಿಷನ್ ಮೋಡ್ ಯೋಜನೆಯಾಗಿದೆ. ಈ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಅಭಿವೃದ್ಧಿ ಪಡಿಸಿರುತ್ತಾರೆ. ಇದು ಸರ್ಕಾರದ ಕಾರ್ಯ ಚಟುವಟಿಕೆಯನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನೈತಿಕತೆಯನ್ನು ಹೆಚ್ಚಿಸಲು ಅನುಕೂಲವಾಗಿರುತ್ತದೆ.

ಇ-ಕಛೇರಿಯ ಲಕ್ಷಣಗಳು

  • ಓಪನ್ ಆರ್ಕಿಟೆಕ್ಚರ್ ಮತ್ತು ತಟಸ್ಥ ತಂತ್ರಜ್ಞಾನ
  • ಸಾಮಾನ್ಯ ಡೇಟಾ ಸೆಟ್ಸ್ ಮತ್ತು ಗುಣಮಟ್ಟಗಳು
  • ಅಧಿಕಾರ ನಿರ್ವಹಣೆಗೆ ಪಾತ್ರ ಆಧಾರಿತ ಪ್ರವೇಶ
  • ಕಾರ್ಯಪ್ರಸರಣ ನಿರ್ವಹಣೆ
  • ಮುಕ್ತ ಮಾನದಂಡಗಳು ಮತ್ತು ತಂತ್ರಜ್ಞಾನಗಳ ಆಧಾರ

 

  • ಯುನಿಕೋಡ್ ಬಳಕೆ ಮೂಲಕ ಸ್ಥಳೀಯ ಭಾಷೆಗಳಿಗೆ ಬೆಂಬಲ
  • ವಿವಿಧ ಸೇವೆಗಳು ಮತ್ತು ಅರ್ಜಿ ಬಳಕೆದಾರರ ಮಾಹಿತಿಯ ಸಾಂಸ್ಥಿಕ ಮಟ್ಟ ಸಾಮಾನ್ಯ ಭಂಡಾರ.

 

ಇ-ಕಛೇರಿಯ ಲಾಭಗಳು

  • ಪಾರದರ್ಶಕತೆ ಹೆಚ್ಚಳ - ಕಡತಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಅದರ ಸ್ಥಿತಿಯನ್ನು ಎಲ್ಲಾ ಸಮಯದಲ್ಲೂ ತಿಳಿಯಬಹುದು.
  • ಹೊಣೆಗಾರಿಕೆಯನ್ನು ಹೆಚ್ಚಿಸುವುದು - ನಿರ್ಣಯ ಮಾಡುವ ಗುಣಮಟ್ಟ ಮತ್ತು ವೇಗದ ಜವಾಬ್ದಾರಿಯನ್ನು ಮೇಲ್ವಿಚಾರಣೆ ಮಾಡುವುದು ಸುಲಭ
  • ಡೇಟಾ ಭದ್ರತೆ ಭರವಸೆ ಮತ್ತು ಡೇಟಾ ಸಮಗ್ರತೆ
  • ಸರ್ಕಾರದ ಕೆಲಸ ಸಂಸ್ಕೃತಿ ಮತ್ತು ನೈತಿಕತೆಗಳನ್ನು ರೂಪಾಂತರಗೊಳಿಸಿ
  • ಕೆಲಸದ ಸ್ಥಳ ಮತ್ತು ಪರಿಣಾಮಕಾರಿ ಜ್ಞಾನ ನಿರ್ವಹಣೆಯಲ್ಲಿ ಹೆಚ್ಚಿನ ಸಹಯೋಗ ಉತ್ತೇಜನ

ಪ್ರಸ್ತುತ ರಾಜ್ಯ ಸರ್ಕಾರದ ಎಲ್ಲ ಸಚಿವಾಲಯದಲ್ಲಿ ಇ-ಕಛೇರಿಯ ತಂತ್ರಾಂಶ ಸಂಪೂರ್ಣವಾಗಿ ಅನುಷ್ಠಾನವಾಗಿದ್ದು, ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಕಛೇರಿಗಳಲ್ಲಿ ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ.

 

ಅನುಷ್ಠಾನ ವಿಧಾನ

ಹಂತ ಒಂದು: ಎಲ್ಲಾ ಸೆಕ್ರೆಟರಿಯಟ್ ಒಂದು ಘಟಕವಾಗಿ ಮತ್ತು ವಿಭಾಗದ ಮುಖ್ಯಸ್ಥರು

ಹಂತ ಎರಡು: ಜಿಲ್ಲಾ ಮಟ್ಟದ ಕಚೇರಿಗಳು

ಹಂತ ಮೂರು: ತಾಲ್ಲೂಕು ಮಟ್ಟದ ಕಚೇರಿಗಳು

 

೮. ಸಾಮರ್ಥ್ಯ ಅಭಿವೃದ್ಧಿ ಯೋಜನೆ

ಸಾರ್ವಜನಿಕೆ ಸೇವೆಗಳ ವಿತರಣೆಯನ್ನು ಸುಧಾರಿಸುವ ಸಲುವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ಇ-ಆಡಳಿತ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚುಣಿ ಯಲ್ಲಿದೆ. ವಿಶೇಷ ತರಬೇತಿ ಮತ್ತು ಜ್ಞಾನವನ್ನು ಹೆಚ್ಚಿಸುವುದು, ಹಾಗೂ ಇ-ಆಡಳಿತ ಮತ್ತು ಐಸಿಟಿಯ ವಿವಿಧ ಅಂಶಗಳ ಬಗ್ಗೆ ಕುರಿತು ಅಧಿಕಾರಿಗಳು ಮತ್ತು ಸರ್ಕಾರಿ ನೌಕರರುಗಳಿಗೆ ಹೆಚ್ಚಿನ ಕೌಶಲ್ಯತೆ ಮತ್ತು ಸ್ವಯಂ ಕಲಿಕೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. ಇ-ಆಡಳಿತ ಯೋಜನೆಗಳ ಅನುಷ್ಠಾನಕ್ಕಾಗಿ ಇತರೆ ಇಲಾಖೆಗಳಿಗೆ ಸಲಹೆಗಾರರನ್ನು ಒದಗಿಸುತ್ತಿದೆ. ಈ ಉದ್ದೇಶಕ್ಕಾಗಿ ರಾಜ್ಯ ಇ-ಮಿಷನ್ ಟೀಮ್ (ಎಸ್‌ಇಎಂಟಿ) ಇಲಾಖೆಯ್ಲ್ಲಿ ಸ್ಥಾಪಿಸಲಾಗಿದೆ ಮತ್ತು ಇತರ ಇಲಾಖೆಗಳೊಂದಿಗೆ ಸಂವಹನ ನಡೆಸುತ್ತಿದೆ.

 

ಕನ್ನಡ ಕಂಪ್ಯೂಟಿಂಗ್

ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ ೨೦೧೫-೧೬ ರ ಆಯವ್ಯಯದಲ್ಲಿ ಕನ್ನಡ ಕಂಪ್ಯೂಟಿಂಗ್ ಯೋಜನೆಯನ್ನು ಘೋಷಿಸಿದ್ದು, ಸರ್ಕಾರವು ಅದರ ಅನುಷ್ಠಾನಕ್ಕಾಗಿ ಆದೇಶವನ್ನು ಜಾರಿ ಮಾಡಿದೆ. ಈ ಆದೇಶದಲ್ಲಿ ಕರ್ನಾಟಕ ಸರ್ಕಾರವು, ಇ-ಆಡಳಿತ ಅಪ್ಲಿಕೇಶನ್‌ಗಳಿಗಾಗಿ, ದತ್ತಾಂಶ ಮೂಲ ವ್ಯವಹಾರಗಳಿಗಾಗಿ, ಅಂತರ್‌ಜಾಲ, ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಅಪ್ಲಿಕೇಷನ್‌ಗಳಿಗಾಗಿ, ಕಿಯೋಸ್ಕ್, ಎಟಿಎಂ ಮುಂತಾದ ಮಾಹಿತಿ ತಂತ್ರಜ್ಞಾನದ ಎಲ್ಲಾ ಅಂಶಗಳ ಅಪ್ಲಿಕೇಶನ್‌ಗಳಿಗಾಗಿ ಯುನಿಕೋಡ್ ೬.೦.೦ ಮತ್ತು ಇದರ ಭವಿಷ್ಯದ ಅವೃತ್ತಿಗಳನ್ನು ಕನ್ನಡ ಭಾಷೆಗೆ ಸಂಬಂಧಿಸಿದಂತೆ ಶಿಷ್ಠ ಆವೃತ್ತಿಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ. ಈ ಯೋಜನೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿನ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ಯುನಿಕೋಡ್ ಆನ್‌ಲೈನ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

 

೯. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಕೋಶ

ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲು ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರವು ಏಕೀಕೃತ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವು ವಿದ್ಯಾರ್ಥಿಯ ಆಧಾರ್ ಜೋಡಣೆಗೊಂಡಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯನ್ನು ಮಾಡುತ್ತದೆ.

ಅ. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ವಿದ್ಯಾರ್ಥಿವೇತನ ವಿತರಿಸುವ ಇಲಾಖೆಗಳು ಈ ಕೆಳಗಿನಂತಿವೆ:

  • ಸಮಾಜ ಕಲ್ಯಾಣ ಇಲಾಖೆ
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ

೧. ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ ೧, ೨೦೧೯ ರಂದು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವನ್ನು ಪ್ರಾರಂಭಿಸಲಾಯಿತು.

೨. ವಿದ್ಯಾರ್ಥಿವೇತನ ವಿತರಿಸುವ ಇಲಾಖೆಗಳು ಈ ಕೆಳಗಿನಂತಿವೆ:

  • ಸಮಾಜ ಕಲ್ಯಾಣ ಇಲಾಖೆ
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  • ತಾಂತ್ರಿಕ ಶಿಕ್ಷಣ ಇಲಾಖೆ
  • ವೈದ್ಯಕೀಯ ಶಿಕ್ಷಣ ಇಲಾಖೆ
  • ಆಯುಷ್ ಇಲಾಖೆ

 

೧೦. ನೇರ ನಗದು ವರ್ಗಾವಣೆ

ಸರ್ಕಾರದ ಕಲ್ಯಾಣ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಲಾಗುವ ಅನುದಾನವನ್ನು ಆಧಾರ್ ಆಧಾರಿತ ನೇರ ನಗದು ವರ್ಗಾವಣೆ ವ್ಯವಸ್ಥೆಯ ಮೂಲಕ ಫಲಾನುಭವಿಗಳ ಆಧಾರ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಪೂರಕವಾಗುವಂಥೆ ನೇರ ನಗದು ವರ್ಗಾವಣೆ ವೇದಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಫಲಾನುಭವಿಗಳನ್ನು ಗುರುತಿಸುವುದೊಂದಿಗೆ, ಸದರಿ ಫಲಾನುಭವಿಗಳ ಆಧಾರ್ ಜೋಡಣೆಯಾದ ಆರ್ಥಿಕ ವಿಳಾಸ ಧೃಢೀಕರಣ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಆಧಾರ್ ಆಧಾರಿತ ನೇರ ನಗದು ವರ್ಗಾವಣೆಯಿಂದ ಅರ್ಹ ಫಲಾನುಭವಿಗಳ ನಗದು ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವುದು. ಇದರಿಂದ ಸರ್ಕಾರದ ನಗದು ಸೌಲಭ್ಯಗಳು ವಿಳಂಬವಿಲ್ಲದೇ ಫಲಾನುಭವಿಗಳಿಗೆ ತಲುಪುವುದರೊಂದಿಗೆ, ಸೋರಿಕೆ/ ಅನರ್ಹ ಫಲಾನುಭವಿಗಳಿಗೆ ವರ್ಗಾವಣೆ ತಡೆಯಲು ಸಹಕಾರಿಯಾಗಿದೆ.

 

 

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ಸಂಸ್ಥೆ (ಕಿಯೋನಿಕ್ಸ್)

ಕರ್ನಾಟಕವು ವಿಶೇಷವಾಗಿ ಬೆಂಗಳೂರು, ಸ್ವಸ್ಥಳ ಹಾಗೂ ಕಡಲಾಚೆಗೆ ತಮ್ಮ ಮಾಹಿತಿ ತಂತ್ರಜ್ಞಾನವನ್ನು ಬೆಳೆಸುವ ಕಂಪನಿಗಳಿಗೆ ಇಷ್ಟವಾದ ತಾಣವಾಗಿದೆ. ಕರ್ನಾಟಕ ಸರ್ಕಾರವು ಮಾಹಿತಿ ತಂತ್ರಜ್ಞಾನ ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಹಂಚಿಕೆಯ ರೂಪದಲ್ಲಿ ತಂತ್ರಜ್ಞಾನ ಕೈಗಾರಿಕೆಯನ್ನು ಬೆಂಬಲಸುತ್ತಿರುವದರ ಜೊತೆಗೆ, ಮಹಾನಗರದ ನೈಸರ್ಗಿಕ ಮತ್ತು ಕಾರ್ಯ ನೀತಿಯ ಪ್ರಮುಖಗಳೊಂದಿಗೆ ಇದು ಸಾಧ್ಯವಾಗಿದೆ. ಅಲ್ಲದೆ, ಆಂತರಿಕ ಸೌಲಭ್ಯಗಳು ಹಾಗೂ ಇತರೆ ತೆರಿಗೆ ವಿನಾಯಿತಿಗಳು ಉದ್ಯಮಿಗಳನ್ನು ಆಕರ್ಷಿಸುತ್ತಿದೆ. ರಾಜ್ಯದಲ್ಲಿ ವ್ಯವಹಾರದ ಅವಕಾಶಗಳು ಮತ್ತು ನುರಿತ ಜನರ ಲಭ್ಯತೆ ಇರುವುದರಿಂದ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಕೈಗಾರಿಕೆಯನ್ನು ಸ್ಥಾಪಿಸಲು ಆಕರ್ಷಣೆಯ ಸ್ಥಳವಾಗಿದೆ. ಇದಲ್ಲದೇ ಭಾರತದ ಅಗ್ರ ತಂತ್ರಜ್ಞಾನ ಸಂಸ್ಥೆಗಳು ಭಾರತದ ಸಿಲಿಕಾನ್ ಕಣಿವೆಯೆಂದೇ ಪ್ರಸಿದ್ಧಿಯಾಗಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಮ್ಮ ಪ್ರಬಲ ನೆಲೆಯನ್ನು ಹೊಂದಿವೆ. ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯನ್ನು ಹರಡಲು ಮತ್ತು ಎರಡನೇ ಶ್ರೇಣಿಯ ನಗರಗಳಲ್ಲಿ ಸ್ಥಳೀಯ ಉದ್ಯಮಿಗಳು ತಮ್ಮ ವ್ಯವಹಾರ ಘಟಕಗಳ ಸ್ಥಾಪನೆಯನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರವು ಆಂತರಿಕ ಸೌಲಭ್ಯಗಳುಳ್ಳ ಐಟಿ ಪಾರ್ಕುಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಕಿಯೋನಿಕ್ಸ್ ಸಂಸ್ಥೆಗೆ ಜವಾಬ್ದಾರಿ ನೀಡಿದೆ ಹಾಗೂ ಈ ವಿಚಾರವಾಗಿ ಕಿಯೋನಿಕ್ಸ್ ಸಂಸ್ಥೆಯನ್ನು ಸಂಪರ್ಕ ಸೇತುವನ್ನಾಗಿ ಮಾಡಿದೆ.

 

ಪ್ರಸ್ತುತ ಕಿಯೋನಿಕ್ಸ್ ಕೈಗೊಂಡಿರುವ ಚಟುವಟಿಕೆಗಳನ್ನು ಸ್ಥೂಲವಾಗಿ ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ : ಅ. ಐಟಿ ಸೇವೆಗಳು

ಕಂಪನಿಯು ಕರ್ನಾಟಕ ಸರ್ಕಾರ ಮತ್ತು ಇತರೆ ರಾಜ್ಯಗಳ ವಿವಿಧ ಇಲಾಖೆಗಳಿಗೆ ಐಟಿ ಸಾಫ್ಟ್‌ವೇರ್ ಒದಗಿಸುವ ಮತ್ತು ಪ್ರೋಗ್ರಾಮಿಂಗ್‌ನ ಹಲವಾರು ಯೋಜನೆಗಳು ಮತ್ತು  ಇ-ಆಡಳಿತ ಯೋಜನೆಗಳನ್ನು ಕೈಗೊಂಡಿದೆ. ಕಂಪನಿಯು ವಿವಿಧ ಸರ್ಕಾರಿ ಇಲಾಖೆಗಳು ಮತು  ಸಂಸ್ಥೆಗಳಿಗೆ ಕಂಪ್ಯೂಟರ್‌ ಯಂತ್ರಾಂಶಗಳು ಮತ್ತು ತಂತ್ರಾಂಶಗಳ ಪೂರೈಕೆ ಇ-ಟೆಂಡರಿಂಗ್ ಸೇವೆಗಳು, ವಿವಿಧ ಎಲೆಕ್ಟ್ರಾನಿಕ್ ಮತ್ತು ಐಟಿ ಉಪಕರಣಗಳು, ಎಲ್‌ಇಡಿ ದೀಪಗಳು, ಸೋಲಾರ್ ಎಲ್‌ಇಡಿ ದೀಪಗಳು, ವಿಚಕ್ಷಣ ಕ್ಯಾಮರಗಳು ಇತ್ಯಾದಿಯನ್ನು ಸಹ ಸರಬರಾಜು ಮಾಡುತ್ತಿದೆ. ಇದರ ಜೊತೆಗೆ ಕಂಪನಿಯು ನೆಟ್‌ವರ್ಕಿಂಗ್, ವೆಬ್ ಕ್ರಿಯೇಷನ್, ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮತ್ತು ಕಂಪ್ಯೂಟರೀಕರಣ ಯೋಜನೆಗಳ ಕ್ಷೇತ್ರಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಯೋಜನಾ ಅನುಷ್ಠಾನದ ಬಗ್ಗೆ ಸಲಹೆ ನೀಡಿಕೆ ಕಾರ್ಯವನ್ನು ಮುಂದುವರಿಸುತ್ತಿದೆ.

 

ಐಟಿ ಶಿಕ್ಷಣ ಸೇವೆಗಳು :

ಕಂಪನಿಯು  ಐಟಿ ಶಿಕ್ಷಣ ವಿಭಾಗವು ಗ್ರಾಮೀಣ ಕರ್ನಾಟಕಕ್ಕೆ ಐಟಿ ಸೌಲಭ್ಯಗಳನ್ನು ಕೊಂಡೊಯ್ಯುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಕಂಪನಿಯು ಕರ್ನಾಟಕದಾದ್ಯಂತ ಸುಮಾರು ೧೯೦ ಫ್ರಾಂಚೈಸೀ ತರಬೇತಿ ಕೇಂದ್ರಗಳ ಜಾಲಬಂಧವನ್ನು ಹೊಂದಿದೆ. ಕಂಪನಿಯ ಪ್ರಮುಖ ಚಟುವಟಿಕೆಗಳಲ್ಲಿ ಐಟಿ ಶಿಕ್ಷಣವು ಒಂದಾಗಿರುತ್ತದೆ. ಕಂಪನಿಯು ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಿಂದ ರಾಜ್ಯದಾದ್ಯಂತ ಬೇಸಿಕ್‌ನಿಂದ ಪ್ರಾರಂಭಿಸಿ, ಉದ್ಯೋಗ ಆಧಾರಿತ, ವೃತ್ತಿಪರ ಮತ್ತು ಅತ್ಯುನ್ನತ ಮಟ್ಟದ ತರಬೇತಿ ಕೋರ್ಸುಗಳಿಗೆ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ. ಕಂಪನಿಯು ಸರ್ಕಾರಿ ನೌಕರರುಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಕಾರ್ಯಕ್ರಮವನ್ನು ಸಹ ಕೈಗೊಂಡಿದೆ. ಇದಲ್ಲದೆ ಸರ್ಕಾರಿ ನೌಕರರುಗಳಿಗೆ ಕಂಪ್ಯೂಟರ್ ಸಾಕ್ಷರತೆ ಆನ್‌ಲೈನ್ ಪರೀಕ್ಷೆ ನಡೆಸುವ ಕಾರ್ಯವನ್ನು ಕಂಪನಿ ಕೈಗೊಂಡಿದೆ. ಕರ್ನಾಟಕ ಸರ್ಕಾರದ ಬಹುಪಾಲು ಸರ್ಕಾರಿ ಪ್ರಾಯೋಜಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು ಕಂಪನಿಯು ಅನುಷ್ಠಾನಗೊಳಿಸುತ್ತಿದೆ. ಕಂಪನಿಯು ಈ ತರಬೇತಿ ಪಡೆದ ಅಭ್ಯರ್ಥಿಗಳನ್ನು ಸರ್ಕಾರದ ವಿವಿಧ ಇಲಾಖೆಗಳು/ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಪೂರೈಕೆ ಸೇವೆಗಳ ವಿಭಾಗದ ಮೂಲಕ ನಿಯೋಜನೆ ಮಾಡಲಾಗುತ್ತಿದೆ.

 

ಇ.ಮಾನವ ಸಂಪನ್ಮೂಲ ಪೂರೈಕೆ ಸೇವೆಗಳು

ಕಂಪನಿಯ ಪ್ರಮುಖ ಚಟುವಟಿಕೆಗಳನ್ನು ಮುಂದುವರಿಸುವುದರ ಜೊತೆಗೆ ತನ್ನ ವ್ಯವಹಾರ ಪಾಲುದಾರರುಗಳು ಮತ್ತು ಸಹವರ್ತಿಗಳ ಮೂಲಕ ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು ಹಾಗೂ ನಿಗಮಗಳಿಗೆ ನುರಿತ ಮಾನವ ಸಂಪನ್ಮೂಲ ಸೇವೆಗಳನ್ನು ಪೂರೈಸುವ ವ್ಯವಹಾರದಲ್ಲಿ ಕಂಪನಿ ತೊಡಗಿದೆ. ಈ ಹೊಸ ಚಟುವಟಿಕೆ ಕ್ಷೇತ್ರದಲ್ಲಿ ಪಡೆದ ಅನುಭವವು ಪ್ರೋತ್ಸಾಹದಾಯಕವಾಗಿದೆ. ಕಂಪನಿಯ ಒಟ್ಟಾರೆ ವಹಿವಾಟಿಗೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಕೊಡುಗೆಯು ಗಣನೀಯವಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಇದು ಕಂಪನಿಯ ದೀರ್ಘಕಾಲಿಕ ಅಸ್ತಿತ್ವಕ್ಕೆ ಮತ್ತು ದೃಢ ಪ್ರಗತಿಗೆ ಇಂಬು ನೀಡುವ ಸಂಕೇತವಾಗಿದೆ.

ಈ. ಮೂಲಭೂತ ಸೌಕರ್ಯ ಅಭಿವೃದ್ಧಿ:

ಎಲೆಕ್‌ಟ್ರಾನಿಕ್ಸ್ ಸಿಟಿ:

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಕಂಪನಿಯು ೩೩೨ ಎಕರೆ ವಿಶಾಲವಾದ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ರೂಪಿಸಿದೆ. ಇಂದು ಈ ಎಲೆಕ್ಟ್ರಾನಿಕ್ಸ್ ಸಿಟಿಯು ಮಾಹಿತಿ ತಂತ್ರಜ್ಞಾನ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಕಿಯೋನಿಕ್ಸ್ ಸಂಸ್ಥೆಯು ರಾಜ್ಯದ ಎರಡನೇ ಶ್ರೇಣಿಯ ನಗರಗಳಾದ ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಐಟಿ ಪಾರ್ಕ್ ಅನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯು ಈ ಕೆಳಕಂಡಂತಿದೆ.

ಐಟಿ ಪಾರ್ಕ್ ಹುಬ್ಬಳ್ಳಿ: ಕರ್ನಾಟಕ ಸರ್ಕಾರವು ಮಾಹಿತಿ ತಂತ್ರಜ್ಞಾನದ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಹುಬ್ಬಳ್ಳಿಯಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಐಟಿ ಪಾರ್ಕ್ ಸ್ಥಾಪಿಸಲು ಹಲವಾರು ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ೧೯೯೯-೨೦೦೦ ದಲ್ಲಿ ೨,೭೫,೦೦೦ ಚದರ ಅಡಿ ಪ್ರದೇಶದಲ್ಲಿ ರೂ.೪೨.೩೬ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಐಟಿ ಸಂಕೀರ್ಣ (ಕಾಂಪ್ಲೆಕ್ಸ್)ವನ್ನು ಹುಬ್ಬಳ್ಳಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಸರ್ಕಾರವು ಐಟಿ ಕಾಂಪ್ಲೆಕ್ಸ್‌ನಲ್ಲಿ ಲಭ್ಯವಿರುವ ಜಾಗವನ್ನು ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಗುತ್ತಿಗೆ ಬಾಡಿಗೆಗೆ ಸ್ಥಳವನ್ನು ಒದಗಿಸುವ ಮೂಲಕ ಐಟಿ ಉದ್ಯಮಿಗಳಿಗೆ ಹಾಗೂ ಐಟಿ ವ್ಯವಹಾರಸ್ಥರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದೆ. ಹುಬ್ಬಳ್ಳಿಯಲ್ಲಿಯ ಐಟಿ ಪಾರ್ಕ್ ಕಾಂಪ್ಲೆಕ್ಸ್‌ನ ನಿರ್ವಹಣೆಯ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಗೆ ವಹಿಸಲಾಗಿದ್ದು ಸರ್ಕಾರದಿಂದ ಅನುದಾನ ಪಡೆದು ನಿರ್ವಹಿಸಲಾಗುತ್ತಿರುತ್ತದೆ.

ಐಟಿ ಪಾರ್ಕ್, ಶಿವಮೊಗ್ಗ: ಕರ್ನಾಟಕ ಸರ್ಕಾರವು ಶಿವಮೊಗ್ಗದಲ್ಲಿ ಐಟಿ ಎಸ್‌ಇಜೆಡ್ ಪಾರ್ಕ್‌ನ್ನು ಎಸ್‌ಇಜೆಡ್‌ಗೆ ಹೊರತುಪಡಿಸಿದ ಪ್ರದೇಶದಲ್ಲಿ ಸ್ಥಾಪಿಸಲು ಘೋಷಿಸಿದೆ. ಕಿಯೋನಿಕ್ಸ್ ಸಂಸ್ಥೆಯು ಐಟಿಎಸ್‌ಇಜೆಡ್ ಮತ್ತು ಐಟಿ ಪಾರ್ಕ್‌ನ್ನು ಸ್ಥಾಪಿಸಲು ಮತ್ತು ಅಭಿವೃದ್ದಿಗೊಳಿಸಲು ಕೆಐಡಿಬಿಯ ಕೈಗಾರಿಕಾ ಪ್ರದೇಶದಲ್ಲಿ ನಿಧಿಗೆ, ಮಾಚೇನಹಳ್ಳಿ ಶಿವಮೊಗ್ಗ ಈ ಸ್ಥಳದಲ್ಲಿ ನಿರ್ಮಿಸಲು ಆದೇಶಿಸಿದೆ. ಪ್ರಸಕ್ತ ೩೩ ಎಕರೆ ಜಮೀನು ಮೆ||ಕೆ.ಐ.ಎ.ಡಿ.ಬಿ. ಸಂಸ್ಥೆಯಿಂದ ಹಂಚಿಕೆಯಾಗಿದ್ದು ಈ ಪೈಕಿ ೬ ಎಕರೆ ಜಮೀನನ್ನು ಎಸ್.ಇ.ಜಡ್ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿರುತ್ತದೆ. ಮುಂದುವರಿದು, ೫ ಎಕರೆ ಜಮೀನಿನಲ್ಲಿ ರೂ. ೧೬.೧೦ ಕೋಟಿ ವೆಚ್ಚದಲ್ಲಿ ಐ.ಟಿ.ಪಾರ್ಕ್, ಶಿವಮೊಗ್ಗ ಸ್ಥಾಪಿಸಲಾಗಿರುತ್ತದೆ. ಈ ಐ.ಟಿ. ಪಾರ್ಕ್ ನೆಲಮಹಡಿ ಹಾಗೂ ನಾಲ್ಕು ಮಹಡಿಗಳನ್ನು ಹೊಂದಿದ್ದು ಲಭ್ಯವಿರುವ ಕಾರ್ಪೆಟ್ ಮತ್ತು ಕಾಮನ್ ಏರಿಯ ಸೇರಿ ಒಟ್ಟು ೭೦೬೨೩.೧೧ ಚದರ ಅಡಿಗಳಲ್ಲಿ ೬೬೭೮೮.೭೩ ಚದರ ಅಡಿಗಳಷ್ಟು ಜಾಗ ಐ.ಟಿ. ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಹಂಚಿಕೆಯಾಗಿರುತ್ತದೆ. ಈ ಐ.ಟಿ. ಪಾರ್ಕ್‌ನ ನಿರ್ವಹಣೆಯನ್ನು ಕಿಯೋನಿಕ್ಸ್‌ ನಿರ್ವಹಿಸುತ್ತಿರುತ್ತದೆ.

 

ಐಟಿ ಪಾರ್ಕ್, ಕಲಬುರಗಿ: ಕಿಯೋನಿಕ್ಸ್ ಸಂಸ್ಥೆಯು ಅಂದಾಜು ವೆಚ್ಚ ರೂ.೨೩.೯೦ ಕೋಟಿಯಲ್ಲಿ ಐಟಿ ಪಾರ್ಕ್ ಯೋಜನೆಯನ್ನು ಕಲಬುರಗಿ ಕೇಂದ್ರದಲ್ಲಿ ನಿರ್ಮಿಸುವ ಸಲುವಾಗಿ ೨ ಎಕರೆ ಜಮೀನನ್ನು ಖರೀದಿಸಲಾಗಿರುತ್ತದೆ. ಪ್ರಸಕ್ತ ೧.೭೨ ಎಕರೆ ಜಮೀನಿನಲ್ಲಿ ೫೩೦೦೦ ಚದರ ಅಡಿ ಕಟ್ಟಡ ನಿರ್ಮಾಣವನ್ನು ರೂ. ೯.೧೯ ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲಾಗಿರುತ್ತದೆ. ಈ ಪಾರ್ಕ್ ನೆಲ ಮತ್ತು ನಾಲ್ಕು ಮಹಡಿಗಳನ್ನು ಹೊಂದಿದ್ದು ೩೩೫೫೨.೪೮೬ ಚದರ ಅಡಿ ಜಾಗ ಐ.ಟಿ. ಉದ್ಯಮಿಗಳಿಗೆ ರಿಯಾಯಿತಿ ದರದಲಿ  ಹಂಚಿಕೆಯಾಗಿರುತ್ತದೆ ಹಾಗೂ ಈ ಕಟ್ಟಡದಲ್ಲಿ ನಾಲ್ಕು ಇನ್‌ಕ್ಯೂಬಿಷೆನ್‌ ಕೇಂದ್ರಗಳನ್ನು ಸ್ಥಾಪಿಸಿದ್ದು ಐ.ಟಿ. ಉದ್ಯವಿ ಗಳಿಗೆ ರಿಯಾತಿ ದರದಲ್ಲಿ ಹಂಚಿಕೆಯಾಗಿರುತ್ತದೆ. ಈ ಐ.ಟಿ. ಪಾರ್ಕ್‌ನ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಯು ಹೊಂದಿರುತ್ತದೆ. ಐಟಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲದೆ ಕಿಯೋನಿಕ್ಸ್ ಇತರೆ ಚಟುವಟಿಕೆಗಳಲ್ಲಿಯೂ ತೊಡಗಿಸಿ ಕೊಂಡಿದೆ.

ಕಿಯೋನಿಕ್ಸ್ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ ಯೋಜನೆ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಮತ್ತು ಕರ್ನಾಟಕ ಹಾಗೂ ಭಾರತ ಸರ್ಕಾರದವತಿಯಿಂದ ಬೆಂಗಳೂರಿನ ಸಮೀಪವಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಅಭಿವೃದ್ಧಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕಾರ್ಯವನ್ನು ರೂ.೧೬೦೦ ಕೋಟಿ ಹೂಡಿಕೆಯೊಂದಿಗೆ ಸುಮಾರು ೨೧೦೦ ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ. ಒಂದು ಸಮಗ್ರ ನಗರದಲ್ಲಿ ಇತರೆ ಕೈಗಾರಿಕೆಗಳೊಂದಿಗೆ ಐಟಿ ಎಸ್‌ಇಜೆಡ್, ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಪಾರ್ಕ್‌ಗಳಿಗೆ ವಸತಿ ಯೋಜನೆ ನೀಡುವ ಉದ್ದೇಶ ಹೊಂದಿದೆ. ಪ್ರಸಕ್ತ ಮೆ||ಕೆ.ಐ.ಎ.ಡಿ.ಬಿ. ಬೆಂಗಳೂರು ಈ ಸಂಸ್ಥೆಯು ೧೨.೧೩ ಎಕರೆ ಜಮೀನನ್ನು ನಂ. 4 ಹೈಟೆಕ್‌  ಡಿಫೆನ್ಸ್‌ ಮತ್ತು ಏರೋಸ್ಪೇಸ್‌, ದೇವನಹಳ್ಳಿ, ಬೆಂಗಳೂರು ಗ್ರಾಮೀಣ ಜಿಲ್ಲೆ ಎಂಬಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಹಂಚಿಕೆಯಾಗಿದ್ದು ಜಮೀನಿನ ಒಟ್ಟು ಬೆಲೆ ರೂ. ೩೩.೩೬ ಕೋಟಿ ಪಾವತಿಸಲಾಗಿದ್ದು ಜಮೀನಿನ ಸ್ವಾಧೀನ ಪತ್ರ ಪಡೆಯಲಾಗಿರುತ್ತದೆ. ಈ ಭೂಮಿ ಖರೀದಿಗೆ ರಾಜ್ಯ ಸರ್ಕಾರದಿಂದ ರೂ.೫.೦೦ ಕೋಟಿ ಅನುದಾನ ಪಡೆಯಲಾಗಿರುತ್ತದೆ.

 

 

 

ಗಣಿಗಾರಿಕೆ ಮತ್ತು ಗಣಿ ಉದ್ಯಮ

ಪ್ರಸಕ್ತ ೧೪೧ ಕಟ್ಟಡ ಕಲ್ಲು ಗಣಿ ಗುತ್ತಿಗೆ ಹಾಗೂ ಇತರ ಉಪಖನಿಜ ಗಣಿಗುತ್ತಿಗೆಗಳು ಮತ್ತು ೧೫ ಅಲಂಕಾರಿಕ ಶಿಲಾ ಕಲ್ಲು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ. ರಾಜ್ಯಾದ್ಯಂತ ಒಟ್ಟು ೨೭೬೪ ಕಟ್ಟಡ ಕಲ್ಲು ಗಣಿ ಗುತ್ತಿಗೆ ಹಾಗೂ ಇತರ ಉಪಖನಿಜ ಗಣಿಗುತ್ತಿಗೆಗಳು ಮತ್ತು ೫೦೪ ಅಲಂಕಾರಿಕ ಶಿಲಾ ಕಲ್ಲು ಗಣಿಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ.

 

ಕರ್ನಾಟಕ ರಾಜ್ಯದಲ್ಲಿನ ಸಾರ್ವಜನಿಕ ಉದ್ದಿಮೆಗಳ ಪ್ರಗತಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ (ಕರಾಸಕೈಅನಿ)

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು ಸಣ್ಣಕೈಗಾರಿಕೆಗಳ ವಲಯದ ಅಬಿವೃದ್ಧಿಯನ್ನು ಉತ್ತೇಜಿಸಲು ಔದ್ಯಮಿಕ ಕಟ್ಟಡಗಳನ್ನು ಒದಗಿಸುವುದು, ಸಂಗ್ರಹಣಾ ವ್ಯವಸ್ಥೆ ಮತ್ತು ಕಚ್ಚಾ ವಸ್ತುಗಳ ವಿತರಣೆ, ಸಣ್ಣ ಕೈಗಾರಿಕೆಗಳ ಉದ್ದಿಮೆದಾರರಿಗೆ ನಿರ್ವಹಣಾ ಮಾರ್ಗದರ್ಶನವನ್ನು ಒದಗಿಸುತ್ತಿದೆ. ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ವಿತರಣಾ ಸಲುವಾಗಿ ಸಂಸ್ಥೆಯು ರಾಜ್ಯದಾದ್ಯಂತ ಒಂಬತ್ತು (೯) ಕಚ್ಚಾ ವಸ್ತುಗಳ ವಿತರಣಾ ಘಟಕಗಳ ಜಾಲವನ್ನು ಹೊಂದಿರುತ್ತದೆ. ಸಂಸ್ಥೆಯು ಬೆಂಗಳೂರಿನಲ್ಲಿ ಮತ್ತು ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಹಾಗೂ ಉಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಘಟಕಗಳ ಕೈಗಾರಿಕಾ ನಿವೇಶನಗಳನ್ನು ಮತ್ತು ಕಟ್ಟಡಗಳನ್ನು ನಿರ್ಮಿಸಲು ಸಣ್ಣ ಕೈಗಾರಿಕಾ ಘಟಕಗಳ ಬೇಡಿಕೆಗೆ ಅನುಗುಣವಾಗಿ ಭೂಮಿಯನ್ನು ಪಡೆದುಕೊಂಡಿರುತ್ತದೆ.

 

 

ಕರ್ನಾಟಕ ಕೈಗಾರಿಕಾ ನೀತಿ

೨೦೧೪-೧೯ ರಲ್ಲಿ, ಕೆ.ಐ.ಎ.ಡಿ.ಬಿ.ಯು ಭೂಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಪೈಕಿ ಕನಿಷ್ಟ ಶೇ.೨೦ ರಷ್ಟು ಜಮೀನನ್ನು ಎಂ.ಎಸ್.ಎಂ.ಇ. ಘಟಕಗಳ ಸ್ಥಾಪನೆಗಾಗಿ ಗುರುತಿಸಲು / ಮೀಸಲಿಡಲು ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ಯ ಕೋರಿಕೆಯಂತೆ ಅದನ್ನು ಹಂಚಿಕೆ ಮಾಡಲು ನೀತಿ ನಿರೂಪಿಸಿರುತ್ತದೆ. ಅಂತೆಯೆ, ಕೆ.ಐ.ಎ.ಡಿ.ಬಿ.ಯು ಸ್ಥಾಪಿಸುವ ಕೈಗಾರಿಕಾ ಪ್ರದೇಶಗಳಲ್ಲಿ ನಿಗಮಕ್ಕೆ ಅಗತ್ಯವಿರುವ ಸೂಕ್ತ ಜಮೀನುಗಳ ಹಂಚಿಕೆ ಪಡೆದು ಎಂ.ಎಸ್.ಎಂ.ಇ. ಘಟಕಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲಾಗುವುದು. ಕರ್ನಾಟಕ ಸರ್ಕಾರದ ಹೊಸ ಕೈಗಾರಿಕಾ ನೀತಿ ೨೦೧೪-೧೯ರಂತೆ ಕೆ.ಐ.ಎ.ಡಿ.ಬಿ. ಯು, ಕೆ.ಎಸ್.ಎಸ್.ಐ.ಡಿ.ಸಿ.ಗೆ ಸೂಕ್ತ ಜಮೀನುಗಳನ್ನು ಹಂಚಿಕೆ ಮಾಡುತ್ತಿಲ್ಲ. ಈ ಸಂಬಂಧವಾಗಿ ದಿನಾಂಕ ೦೩.೧೨.೨೦೧೬ ರಂದು ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಎಸ್.ಎಸ್.ಐ.ಡಿ.ಸಿ.ಗೆ ಸೂಕ್ತ ಜಮೀನುಗಳನ್ನು ಭೂಸ್ವಾಧೀನ ವೆಚ್ಚ + ಸೇವಾ ಶುಲ್ಕ ಹಾಗೂ ಪ್ರೋರೇಟಾ ಅಭಿವೃದ್ಧಿ ವೆಚ್ಚದಲ್ಲಿ ಹಂಚಿಕೆ ಮಾಡಲು ಸರ್ಕಾರವು ಹೊರಡಿಸುವ ಸೂಕ್ತ ಅಧಿಕೃತ ಆದೇಶವನ್ನು ನಿರೀಕ್ಷಿಸಲಾಗಿದೆ.

ಕರ್ನಾಟಕ ಹೊಸ ಕೈಗಾರಿಕಾ ನೀತಿ ೨೦೧೪-೧೯ರಲ್ಲಿ, ಕೆ.ಎಸ್.ಎಸ್.ಐ.ಡಿ.ಸಿ.ಯ ಉದ್ದೇಶಿತ ಕೈಗಾರಿಕಾ ವಸಾಹತು ಸ್ಥಾಪಿಸುವ ಯೋಜನೆಗಳಿಗಾಗಿ ಒಂದು ಸ್ಥಳದಲ್ಲಿ ೫೦ ಎಕರೆ ವಿಸ್ತೀರ್ಣಕ್ಕೂ ಹೆಚ್ಚಿನ ಜಮೀನನ್ನು ನೇರವಾಗಿ ಖರೀದಿಸಲು ನೀತಿ ನಿರೂಪಿಸಿರುತ್ತದೆ. ಈ ನೀತಿಯಂತೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಕೈಗಾರಿಕಾ ವಸಾಹತುವನ್ನು ಸ್ಥಾಪಿಸಲು ಅಗತ್ಯವಿರುವ ಜಮೀನುಗಳನ್ನು ಆಯ್ಕೆಮಾಡಿ ಮಾಲೀಕರ ಒಪ್ಪಿಗೆ ಮೇರೆಗೆ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಕಲಂ ೧೦೯ರನ್ವಯ ಕಂದಾಯ ಇಲಾಖೆಯ ಅನುಮೋದನೆ ಪಡೆದು ನೇರವಾಗಿ ಖರೀದಿಸಿ ಹೊಸ ಕೈಗಾರಿಕಾ ವಸಾಹತು ಗಳನ್ನು ಸ್ಥಾಪಿಸಲಾಗುವುದು. ಕರ್ನಾಟಕ ಭೂಸುಧಾರಣಾ ಅಧಿನಿಯಮ ೧೯೬೧ರ ಕಲಂ ೧೦೯ರಡಿಯಲ್ಲಿ ಕಂದಾಯ ಇಲಾಖೆಯ ಅನುಮೋದನೆ ಪಡೆದು ನೇರವಾಗಿ ರೈತರಿಂದ ಜಮೀನು ಖರೀದಿಸಲು ಸರ್ಕಾರದ ಅನುಮೋದನೆ ಕೋರಿ ದಿನಾಂಕ ೨೪.೦೪.೨೦೧೭ರಂದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಮುಂದುವರೆದು, ನಿಗಮದ ಉದ್ದೇಶಿತ ಯೋಜನೆಗೆ ಅಗತ್ಯವಿರುವ ೫ ರಿಂದ ೫೦ ಎಕರೆ ವಿಸ್ತೀರ್ಣದ ಜಮೀನನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮ ೧೯೬೧ರ ಕಲಂ ೧೦೯ರಂತೆ ನೇರವಾಗಿ ಜಮೀನಿನ ಮಾಲೀಕರಿಂದ ಖರೀದಿಸಲು ಅನುಕೂಲವಾಗುವಂತೆ ಸರ್ಕಾರದ ಅನುಮೋದನೆ ಕೋರಿ, ದಿನಾಂಕ ೨೧.೦೩.೨೦೧೭ ರಂದು ಸರ್ಕಾರಕ್ಕೆ ಪತ್ರಬರೆಯಲಾಗಿರುತ್ತದೆ.

ಅಂತೆಯೇ, ನಿಗಮಕ್ಕೆ ಅಗತ್ಯವಿರುವ ಜಮೀನನ್ನು ನೇರವಾಗಿ ಮಾಲೀಕರಿಂದ ಖರೀದಿಸಲು ಅನುಕೂಲವಾಗುವಂತೆ ಸೂಕ್ತ ಆದೇಶ ನೀಡಲು ೫ ರಿಂದ ೫೦ ಎಕರೆ ಹಾಗೂ ೫೦ ಎಕರೆ ಮೇಲ್ಪಟ್ಟು ಖರೀದಿಸುವ ಬಗ್ಗೆ ಸರ್ಕಾರದ ಅನುಮೋದನೆ ಕೋರಿ ಎರಡು ಪ್ರತ್ಯೇಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ವತಿಯಿಂದ ಆದೇಶ ನಿರೀಕ್ಷಿಸಲಾಗಿದೆ.

ಸರ್ಕಾರವು ೨೦೧೮-೧೯ರ ಆಯವ್ಯಯ ಭಾಷಣದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ೧೧ ವಿವಿಧ ಸ್ಥಳಗಳಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆ ಘೋಷಣೆ ಮಾಡಿದ್ದು, ಅದರನ್ವಯ ನಿಗಮವು ದಿನಾಂಕ:೨೨.೧೨.೨೦೧೮ರ ಪತ್ರದಲ್ಲಿ ಕೆಐಎಡಿಬಿ ಸಂಸ್ಥೆಗೆ ಸದರಿ ಸರ್ಕಾರದ ಘೋಷಣೆಯನ್ನು ಅನುಷ್ಟಾನಗೊಳಿಸಲು ಸೂಕ್ತ ಜಮೀನು ಹಂಚಿಕೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಈ ಸಂಬಂಧ ಕೆಐಎಡಿಬಿ ಸಂಸ್ಥೆಯಿಂದ ಸೂಕ್ತ ಜಮೀನಿನ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ.

ಅಲ್ಲದೇ ಸರ್ಕಾರದ ಪ್ರಚಲಿತ ಹೊಸ ಕೈಗಾರಿಕಾ ನೀತಿ ೨೦೧೪-೧೯ರ ಅನ್ವಯ, ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ ಮಾಡುವ ಸಂಬಂಧ ಕನಿಷ್ಟ ೧೦ ಎಕರೆ ವಿಸ್ತೀರ್ಣದ ಜಮಿನನ್ನಾದರೂ ನಿಗಮಕ್ಕೆ ಮಂಜೂರು ಮಾಡಿಕೊಡುವಂತೆ ಕೋರಿ ದಿನಾಂಕ: ೨೩.೦೪.೨೦೧೯  ತದನಂತರದಲ್ಲಿ ೧೧.೧೦.೨೦೧೯ ರಂದು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸೂಕ್ತ ಜಮೀನಿನ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ಪ್ರಮಾಣ ಕೈಗಾರಿಕೆಗಳನ್ನು ಉನ್ನತೀಕರಿಸುವುದು ಹಾಗೂ ಅಭಿವೃದ್ಧಿ ಪಡಿಸುವುದು ನಿಗಮದ ಪ್ರಮುಖ ಉದ್ದೇಶವಾಗಿದೆ ಪ್ರಮುಖವಾಗಿ ಹಿಂದುಳಿದ ಪ್ರದೇಶಗಳಲ್ಲಿ ನಿರ್ಮಾಣ ಮತ್ತು ಮುಲಭೂತ ಸೌಕರ್ಯಗಳ ಉಪಯುಕ್ತತೆ, ಕೈಗಾರಿಕಾ ಕಚ್ಚಾ ಸಾಮಾಗ್ರಿಗಳ ಖರೀದಿ ಮತ್ತು ಮಾರುಕಟ್ಟೆ ಮತ್ತು ತಾಂತ್ರಿಕ ಬೆಂಬಲ ಹಾಗೂ ಸಹಾಯ ವಿಸ್ತರಿಸುವುದು ಇವುಗಳ ಈ ಮೇಲಿನ ಗುರಿಗಳನ್ನು ತಲುಪಲು ಕಂಡುಕೊಂಡಿರುವ ಮಾರ್ಗಗಳಾಗಿವೆ. ಹೊಸ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವ ಮುಖೇನ ಎಂ.ಎಸ್.ಎಂ.ಇ ಘಟಕಗಳನ್ನು ಅಭಿವೃದ್ಧಿಪಡಿಸುವುದು, ಖಾಲಿ ಇರುವ ಕೈಗಾರಿಕಾ ವಸಾಹತುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು, ಕೈಗಾರಿಕಾ ವಸಾಹತು ಮತ್ತು ವಾಣಿಜ್ಯ ಕಾರ್ಯ ಚಟುವಟಿಕೆಗಳಲ್ಲಿ ವಿವಿಧ ಉದ್ಯಮಿಗಳ ಸ್ನೇಹಪರ ಕಾರ್ಯಕ್ರಮಗಳನ್ನು ಪರಿಚಯಿಸುವಲ್ಲಿ ನಿಗಮವು ಅತ್ಯಂತ ಪ್ರಮುಖ ಪಾತ್ರವನ್ನು ಕಳೆದ ಹಲವಾರು ವರ್ಷಗಳಿಂದಲೂ ನಿರ್ವಹಿಸುತ್ತಿದೆ. ಕೆ.ಎಸ್.ಎಸ್.ಐ.ಡಿ.ಸಿ.ಯ ನೀತಿ ನಿರ್ಣಯ ಮತ್ತು ಧ್ಯೇಯಗಳು ಈ ಕೆಳಕಂಡವುಗಳನ್ನು ಒಳಗೊಂಡಿರುತ್ತವೆ.

ಹಂಚಿಕೆಯಾದ ನಿವೇಶನಗಳ ಸದುಪಯೋಗಕ್ಕಾಗಿ ಕಡ್ಡಾಯ ಸಮಯ ಮಿತಿಯನ್ನು ವಿಧಿಸುವುದರೊಂದಿಗೆ ಹಂಚಿಕೆ ಆಗಿರುವ ಜಮೀನುಗಳ ಉಪಯೋಗಕ್ಕೆ ಒಳಪಡುವಂತೆ ನೋಡಿಕೊಳ್ಳುವುದು.

ಅಭಿವೃದ್ಧಿಪಡಿಸಬೇಕಿರುವ ಕೈಗಾರಿಕಾ ವಸಾಹತುಗಳ ಸೌಲಭಯದಲ್ಲಿ ಜಮೀನು ಮಾಲೀಕರುಗಳನ್ನು ಪಾಲುದಾರರನ್ನಾಗಿ ಮಾಡಲು ಸ್ಪರ್ಧಾತ್ಮಕ ನೀತಿ ನಿರ್ಣಯವನ್ನು ಜರುಗಿಸುವುದು/ ಪ್ರಾರಂಭಿಸುವುದು.

ಭೂಸ್ವಾಧೀನ ಪ್ರಕ್ರಿಯೆ ತಡೆಯಲು ಮತ್ತು ನಿಧಿಯ ಮುಗ್ಗಟ್ಟನ್ನು ತಡೆಯಲು ಖಾಸಗಿ ಜಮೀನಿನ ಮೇಲೆ ಪಿ.ಪಿ.ಪಿ. ಮಾದರಿಯಲ್ಲಿ ಪಾರ್ಕ್‌ಗಳನ್ನು ಹಾಗೂ ಕ್ರಿಯಾತ್ಮಕ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿ ಪಡಿಸಲು ನೀತಿ ನಿರ್ಣಯ ರೂಪಿಸುವುದು.

ಆಧುನಿಕ ಮೂಲಭೂತ ಸೌಕರ್ಯ ಉಪಯುಕ್ತತೆ ಮತ್ತು ಸೇವಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವಿಸುವುದು.

ರಾಜ್ಯದ ಆಯವ್ಯಯದಲ್ಲಿ ಪ್ರತ್ಯೇಕ ನಿಧಿಯನ್ನು ಕೋರುವುದರೊಂದಿಗೆ ಹಾಲಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಕೈಗಾರಿಕಾ ವಸಾಹತುಗಳಲ್ಲಿ ಕ್ಲಿಷ್ಟಕರ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಹಾಗೂ ಅವುಗಳನ್ನು ಕೈಗಾರಿಕಾ ಟೌನ್‌ಷಿಪ್ ಕಾಯ್ದೆ ವವ್ಯಾಪ್ತಿಗೆ ತರುವುದರಿಂದ ಸಂಬಂಧಪಟ್ಟ ವಸಾಹತುಗಳ ಕೈಗಾರಿಕೆಗಳ ಸಂಘಗಳು ತಾವೇ ದಕ್ಷತೆಯಿಂದ ತೆರಿಗೆಗಳು ಮತ್ತು ಇತರೇ ಬಾಬ್ತುಗಳನ್ನು ವಸೂಲು ಮಾಡುವಂತಾಗುವುದು. ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಕರಿಸುವ ದೃಷ್ಟಿಯಿಂದ ಹಾಗೂ ಅದರಿಂದ ಸಾರ್ವಜನಿಕ ಉದ್ದಿಮೆಗಳು / ಮಂಡಳಿಗಳು ಮತ್ತು ನಿಗಮಗಳು ಹಾಗೂ ಇತರೇ ಏಜೆನ್ಸಿಗಖಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಿಗಮದಲ್ಲಿ ಮಾರುಕಟ್ಟೆ ಸಹಾಯಕ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿತ್ತು. ಈ ಸಂಬಂಧ ಸರ್ಕಾರವು ಕರ್ನಾಟಕ ಸರ್ಕಾರದ ಪಾರದರ್ಶಕ ಕಾಯ್ದೆ ಅನುಬಂಧ ೪(ಜಿ) ಅಡಿಯಲ್ಲಿ ವಿನಾಯಿತಿ ನೀಡಿದ್ದಲ್ಲಿ ಮಾತ್ರ ನಿಗಮದಲ್ಲಿ ಮಾರುಕಟ್ಟೆ ಸಹಾಯ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಎಂ.ಎಸ್.ಎಂ.ಇ.ಘಟಕಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳಾದ ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ಸಿಮೆಂಟ್, ಪ್ಯಾರಾಫಿನ್ ಮೇಣ ಮುಂತಾದ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ ನಿಗಮವು ತನ್ನ ಒಂಬತ್ತು (೯) ಕಚ್ಚಾ ಸಾಮಗ್ರಿ ಮಾರಾಟ ಮಳಿಗೆಗಳ ಮೂಲಕ ವಿತರಿಸುತ್ತಾ ಸಣ್ಣ ಕೈಗಾರಿಕಾ ಘಟಕಗಳಿಗೆ ಸೇವೆ ಸಲ್ಲಿಸುತ್ತಿದೆ. ಕೆ.ಎಸ್.ಎಸ್.ಐ.ಡಿ.ಸಿ.ಯು ವಿವಿಧ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ ವಿತರಿಸುವುದರಿಂದ, ಎಂ.ಎಸ್.ಎಂ.ಇ ಘಟಕಗಳು ಉತ್ತಮ ಗುಣಮಟ್ಟದ ಸರಕುಗಳನ್ನು ಸಮರ್ಪಕವಾದ ದರದಲ್ಲಿ ಖರೀದಿಸಲು ಸಹಕಾರಿಯಾಗಿದೆ. ಅಲ್ಲದೆ ಇದು ಖಾಸಗಿ ವ್ಯಾಪಾರಿಗಳು ಎಂ.ಎಸ್.ಎಂ.ಇ ಘಟಕಗಳನ್ನು ಶೋಷಣೆ ಮಾಡುವುದನ್ನು ತಪ್ಪಿಸಲು ಸಹಕಾರಿಯಾಗಿದೆ. ಸಣ್ಣ ಕೈಗಾರಿಕಾ ಘಟಕಗಳು ನೀಡುವ ಬ್ಯಾಂಕ್ ಗ್ಯಾರಂಟಿಗೆ ಎದುರಾಗಿ ಮೂವತ್ತು ದಿನಗಳ ಬಡ್ಡಿ ರಹಿತ ಸಾಲದ ಸೌಲಭ್ಯವನ್ನು ನೀಡಿ ನಿಗಮದ ಕಚ್ಚಾ ಸಾಮಗ್ರಿ ಮಾರಾಟ ಮಳಿಗೆಗಳ ಮೂಲಕ ಕಚ್ಚಾ ಸಾಮಗ್ರಿ ವಿತರಿಸಲಾಗುತ್ತಿದೆ. ನಿಗಮ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಮಾಡಿಕೊಂಡಿರುವ ಒಡಂಬಡಿಕೆ ಅಡಿಯಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಒಂದು ಘಟಕಕ್ಕೆ ಒಂದು ವರ್ಷಕ್ಕೆ ರೂ.೧೦೦.೦೦ ಲಕ್ಷಗಳವರೆಗೂ ಆರ್ಥಿಕ ಸೌಲಭ್ಯವನ್ನು ಕಚ್ಚಾ ಸಾಮಗ್ರಿಗಳ ಖರೀದಿಗಾಗಿ ನೀಡುತ್ತಿದೆ. ಇದರಿಂದ ಎಂ.ಎಸ್.ಎಂ.ಇ. ಘಟಕಗಳು ತಕ್ಷಣಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳದೇ ತಮ್ಮ ಕಚ್ಚಾ ಸಾಮಗ್ರಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಸಹಕಾರಿಯಾಗಿದೆ.

 

 

ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆ.ಐ.ಎ.ಡಿ.ಬಿ):

ರಾಜ್ಯದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸ್ಥಾತಿ ಸಂಸ್ಥೆಯಾಗಿ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಆರಂಭವಾದಾಗಿನಿಂದಲೂ ರಾಜ್ಯದ ಸುಮಾರು ೬೧೩೫೪.೭೩ಎಕರೆ ಪ್ರದೇಶದಲ್ಲಿ ೩೦ ಜಿಲ್ಲೆಗಳಲ್ಲಿ ೧೭೦ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದೆ. ಕೆ.ಐ.ಎ.ಡಿ.ಬಿ. ಅಭಿವೃದ್ಧಿ ಪಡಿಸಿರುವ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ, ಆಂತರಿಕ ರಸ್ತೆಗಳು, ನೀರಿನ ಪೂರೈಕೆ, ವಿದ್ಯುತ್ ಪೂರೈಕೆ, ಬೀದಿ ದೀಪಗಳು, ಸಾಮಾನ್ಯ ಸೌಲಭ್ಯಗಳನ್ನೊಳಗೊಂಡ ಕೇಂದ್ರಗಳು, ಕಟ್ಟಡಗಳು, ವಸತಿ ಮತ್ತು ರಸ್ತೆ ಅಗಲೀಕರಣ ಮತ್ತು ಮಾರ್ಗ ರಸ್ತೆಗಳ ಸುಧಾರಣೆ, ಹುಲ್ಲುಗಾವಲಿನ ಒಳಗೆ ಹಾಗೂ ಹೊರಗೆ ಮೂಲಭೂತ ಸೌಕರ್ಯ ಮತ್ತು ಸೌಲಭ್ಯ ಇತ್ಯಾದಿಗಳನ್ನು ಒದಗಿಸಿದೆ. ಕೈಗಾರಿಕಾ ಅಭಿವೃದ್ಧಿ ಗೋಸ್ಕರ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಚಟುವಟಿಕೆಗಳನ್ನು ಸುಲಭಗೊಳಿಸಲು ಒಂದು ಎಕರೆ ಭೂಮಿ ಕಳೆದುಕೊಳ್ಳುವ ವ್ಯಕ್ತಿಗೆ ಒಂದು ಎಕರೆ ಸಾಮಾನ್ಯ ಭೂಮಿ ಪರಿಹಾರದ ಹಣದ ಬದಲಾಗಿ ೯೫೮೩.೦೦ ಚ.ಅಡಿ ಅಭಿವೃದ್ಧಿ ಪಡಿಸಿದ ಭೂಮಿ ನೀಡುವ ಯೋಜನೆಯನ್ನು ಸರ್ಕಾರವು ದಿನಾಂಕ: ೧೩-೦೮-೨೦೦೭ ಮತ್ತು ೧೩-೦೫-೨೦೧೦ರ ಆದೇಶದನ್ವಯ ಹಮ್ಮಿಕೊಂಡಿದ್ದು, ಈ ಯೋಜನೆಯನ್ವಯ ಪರಿಹಾರ ಪಡೆಯಲಿಚ್ಚಿಸುವ ಭೂಮಾಲೀಕರಿಗೆ ಭೂ ಪರಿಹಾರದ ಬದಲು ೯೫೮೩.೦೦ ಚ.ಅಡಿ ಅಭಿವೃದ್ಧಿ ಪಡಿಸಿದ ಭೂಮಿ ನೀಡಲಾಗುತ್ತಿದೆ.

 

 

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ

ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ಕಾಯ್ದೆಯಡಿಯಲ್ಲಿ ನೋಂದಾಯಿತವಾದ ಕಾರ್ಖಾನೆಗಳಲ್ಲಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಜವಾಬ್ದಾರಿ (ಉಸ್ತುವಾರಿ) ವಹಿಸಿದೆ. ಕರ್ನಾಟಕ ರಾಜ್ಯದಲ್ಲಿ ೧೬,೯೧೪ ನೋಂದಾಯಿತ ಕಾರ್ಖಾನೆಗಳಿದ್ದು, ಅವುಗಳಲ್ಲಿ ಸುಮಾರು ೧೭,೬೧,೭೨೧ ಕೆಲಸಗಾರರಿದ್ದಾರೆ ರಾಜ್ಯದಲಿ ೫,೨೨೪ ನೋಂದಾಯಿತ ಬಾಯ್ಲರುಗಳು ಇರುತ್ತವೆ. ಕೆಲಸದ ಸ್ಥಳದಲ್ಲಿ ಶೇಖರಿಸುವ ಅಪಾಯಕಾರಿ ರಾಸಾಯನಿಕಗಳ ಪ್ರಮಾಣವನ್ನು ಪರಿಗಣಿಸಿ, ೨೧ ಜಿಲ್ಲೆಗಳಲ್ಲಿರುವ ೮೪ ಕಾರ್ಖಾನೆಗಳನ್ನು ಅತಿ ಅಪಾಯಕಾರಿ ಘಟಕಗಳೆಂದು ಗುರುತಿಸಲಾಗಿದೆ. ಸದರಿ ಕಾರ್ಖಾನೆಗಳನ್ನು ರಿಸ್ಕ್‌ ಬೇಸಡ್ ಪರಿವೀಕ್ಷಣೆಗಳ ಮುಖಾಂತರ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗಿರುತ್ತದೆ. ಸುಮಾರು ೧೪೩೨ ಕಾರ್ಖಾನೆಗಳನ್ನು ಅಪಾಯಕಾರಿ ಚಟುವಟಿಕೆಗಳಿರುವ ಕಾರ್ಖಾನೆಗಳೆಂದು ಗುರುತಿಸಲಾಗಿದೆ ಹಾಗೂ ಸದರಿ ಕಾರ್ಖಾನೆಗಳನ್ನು ಪರಿಣಾಮಕಾರಿ ಪರಿವೀಕ್ಷಣೆಗಳ ಮುಖಾಂತರ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಅಪಘಾತಗಳು ಮತ್ತು ಅಪಾಯಗಳನ್ನು ತಡೆಯಲು ಇಲಾಖೆಯು ಚಾಲ್ತಿಯಲ್ಲಿರುವ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕೆಲಸಗಾರರಿಗೆ ಸುರಕ್ಷತೆ ಹಾಗೂ ಸ್ವಾಸ್ಥ್ಯ ಒದಗಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ಹಲವಾರು ವರ್ಷಗಳಿಂದ ಇಲಾಖೆಯು ಕೈಗಾರಿಕಾ ಸಂಸ್ಥೆಗಳಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುವ ಮುಖಾಂತರ ಆಡಳಿತ ವರ್ಗದವರು ಹಾಗೂ ಕಾರ್ಮಿಕರಿಗೆ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿರುತ್ತದೆ.

 

 

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ.ಎಸ್.ಎಫ್.ಸಿ)

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿದ್ದು, ರಾಜ್ಯ ಹಣಕಾಸು ಸಂಸ್ಥೆಗಳ ಕಾಯ್ದೆ ೧೯೫೧ರ ಅನ್ವಯ ೧೯೫೯ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿತವಾಯಿತು. ರಾಜ್ಯದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸಿನ ನೆರವನ್ನು ನೀಡುವುದೇ ಸಂಸ್ಥೆಯ ಮೂಲೋದ್ದೇಶವಾಗಿದೆ. ಸಂಸ್ಥೆಯು ಕಳೆದ ೬೦ ವರ್ಷಗಳಿಂದ ರಾಜ್ಯದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಮತ್ತು ಸಂಬಂಧಿಸಿದ ಸೇವಾ ಕ್ಷೇತ್ರದ ಘಟಕಗಳಿಗೆ ಹಣಕಾಸಿನ ನೆರವನ್ನು ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ.

 

ಕರ್ನಾಟಕ ರಾಜ್ಯ ಔದ್ಯಮಿಕ ಹೂಡಿಕೆ ಮತ್ತು ಅಭಿವೃದ್ಧಿ ಸಂಸ್ಥೆ (ಕೆ.ಎಸ್.ಐ.ಐ.ಡಿ.ಸಿ)

೧೯೬೪ರಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮವು ವಿಶೇಷವಾಗಿ ಬೃಹತ್ ಮತ್ತು ಮಧ್ಯಮ ವಲಯದಲ್ಲಿ ಕೈಗಾರಿಕರಣಕ್ಕೆ ಹೆಚ್ಚಿನ ಕಾರ್ಯಸಾಧುವಾಗಿತ್ತು. ಅಕ್ಟೋಬರ್ ೨೦೦೨ ರಿಂದ ಈ ಸಂಸ್ಥೆಯು ಆರ್ಥಿಕ ಸಾಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಬಾಕಿ ಸಾಲ ವಸೂಲು ಮತ್ತು ಷೇರು ಬಂಡವಾಳ ಹಿಂತೆಗೆಯುವಿಕೆ ಇದರ ಮುಖ್ಯ ಚಟುವಟಿಕೆಯಾಗಿದೆ. ಆದರೆ ಕರ್ನಾಟಕ ಸರ್ಕಾರದ ಆದೇಶದಂತೆ ಕೆಲವು ಹೂಡಿಕೆಗಳನ್ನು ಕಾಲ ಕಾಲಕ್ಕೆ ಮಾಡುತ್ತಿದೆ. ಈ ಸಂಸ್ಥೆಯು ಸಾರ್ವಜನಿಕ-ಖಾಸಗಿ-ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಮೂಲಸೌಲಭ್ಯ ಯೋಜನೆಯ ಪ್ರಚಾರವನ್ನು ಪೂರ್ವ ಭಾವಿ ಯೋಜನೆಯಂತೆ ಮುಂದುವರೆಸುತ್ತಿದೆ ಮತ್ತು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಸಂಪರ್ಕ ಸೇತುವೆಯಾಗಿ ತನ್ನ ಪಾತ್ರ ನಿರ್ವಹಿಸುತ್ತಿದೆ. ಸಂಸ್ಥೆಯು ಮೂಲಸೌಲಭ್ಯ ವಲಯದಲ್ಲಿ ತನ್ನ ತೊಡಗುವಿಕೆಯಿಂದಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಎಂದು ನವೆಂಬರ್ ೨೨, ೨೦೧೦ ರಿಂದ ಮರು ನಾಮಕರಣಗೊಂಡಿದೆ. ಪ್ರಸ್ತುತ, ನಿಗಮವು ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳ ಪಥದಲಿ ರಾಜ್ಯದ ಮೂಲಸೌಭ್ಯ ಅಭಿವೃದ್ಧಿಯ ಕಾರ್ಯನೀತಿಯಡಿಯಲ್ಲಿ ಈ ಕೆಳಕಂಡ ಯೋಜನೆಗಳ ಅಭಿವೃದ್ದಿ ಚಟುವಟಿಕೆಗಳತ್ತ ಗಮನ ಹರಿಸಿದೆ:

  • ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ
  • ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್‌ ಅಭಿವೃದ್ಧಿ
  • ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದ ಸ್ಥಾಪನೆ.
  • ಕಿರು ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್‌ಗಳ ಅಭಿವೃದ್ಧಿ
  • ಬೆಂಗಳೂರು ಸಿಟಿ ಗ್ಯಾಸ್ ವಿತರಣೆ ಯೋಜನೆ ಜೊತೆಗೆ ಕಾಲಕಾಲಕ್ಕೆ ನಿಗಧಿತ ಯೋಜನೆಗಳಿಗೆ ಸಂಬಂಧಿಸಿ ದಂತೆ ಸಂಸ್ಥೆಯು ರಾಜ್ಯ ಸರ್ಕಾರದ ಸಂಪರ್ಕ ಸೇತುವಾಗಿ ಕಾರ್ಯ ಮುಂದುವರಿಸುತ್ತಿದೆ.

ಹೆಚ್ಚುವರಿಯಾಗಿ ಮೇಲಿನಂತೆ  ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳೊಂದಿಗೆ ಈ ಕೆಳಗಿನ ಅಸ್ತಿತ್ವದಲ್ಲಿರುವ ಚಟುವಟಿಕೆಗಳನ್ನು ಮುಂದುವರಿಸಿದೆ.

  • ಪ್ರಸ್ತಾಪಿತ ಹೊಸ ಓಟಿಎಸ್ ನಿಯಮದ ಅಡಿಯಲ್ಲಿ ಬಾಕಿ ಸಾಲ ಖಾತೆಗಳ ಇತ್ಯರ್ಥ
  • ಎಸ್.ಎಫ್.ಸಿ.ಕಾಯಿದೆ ವಿಭಾಗ ೨೯ರ ಅಡಿಯಲ್ಲಿ ತೆಗೆದುಕೊಂಡ ಪ್ರಾಥಮಿಕ ಸ್ವತ್ತುಗಳ ಮಾರಾಟ ಮತ್ತು ಎಸ್‌ಎಫ್‌ಸಿ ಮತ್ತು ಇತರೆ ಖಾಯಿದೆಗಳ ಅಡಿಯಲ್ಲಿ ಕಾನೂನಿನ ಪ್ರಕಾರ ಬಾಕಿ ಸಾಲ ವಸೂಲಿ.

 

 

ಸಾರ್ವಜನಿಕ ಉದ್ಯಮ ಇಲಾಖೆ

ಕರ್ನಾಟಕ ಸರ್ಕಾರ ೧೯೮೧ ರಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಕಾರ್ಯಾಲಯವನ್ನು ಸ್ಥಾಪಿಸಿತು. ಈ ಕಾರ್ಯಾಲಯವು ೨೦೦೨ ರಲ್ಲಿ ಬಂಡವಾಳ ಹಿಂತೆಗೆಯುವಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸುಧಾರಣೆ ಇಲಾಖೆಯೆಂದು ಪರಿವರ್ತನೆಗೊಂಡಿದೆ. ಈ ಇಲಾಖೆಯ ಮುಖ್ಯ ಗುರಿ ಬಂಡವಾಳ ಹಿಂತೆಗೆಯುವಿಕೆ, ಮರುಸ್ಥಾಪನೆ, ಮಿಶ್ರಣಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದೆ. ೨೦೦೫ ರಲ್ಲಿ ಸರ್ಕಾರವು ಸ್ವತಂತ್ರ ಸ್ಥಾನಮಾನವನ್ನು ಈ ಇಲಾಖೆಗೆ ನೀಡಿರುತ್ತದೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಎಂದು ಮರುನಾಮಕರಣ ಮಾಡಿರುತ್ತದೆ ಹಾಗೂ ಉದ್ಯಮಗಳ ಸಾಮರ್ಥ್ಯವನ್ನು ಉತ್ತಮಪಡಿಸುವ ಸಲುವಾಗಿ ನಿಯಂತ್ರಕ, ಕ್ರಮಬದ್ದ, ಮೌಲ್ಯಮಾಪನ ಹಾಗೂ ಸಲಹಾ ಕಾರ್ಯಗಳನ್ನು ನಿರ್ವಹಿಸುವ ಹೊಣೆಗಾರಿಕೆ ನೀಡಿರುತ್ತದೆ. ಒಟ್ಟು ಕಾರ್ಯನಿರ್ವಹಿಸುತ್ತಿರುವ ಸುಮಾರು ೬೦  ಸಾರ್ವಜನಿಕ ಉದ್ಯಮಗಳಗನ್ನು ಹೊಂದಿರುತ್ತದೆ. ೬೦ ಸಾರ್ವಜನಿಕ ಉದ್ದಿಮೆಗಳನ್ನು ವಿವಿಧ ವಲಯಗಳಾಗಿ ವಿಂಗಡಿಸಲಾಗಿದ್ದು, ಅವುಗಳು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಇಂಧನ, ವಸತಿ, ಸಾರಿಗೆ, ಸಹಕಾರ ಮುಂತಾದವುಗಳಾಗಿರುತ್ತವೆ. ಸುಮಾರು ೩೬ಕ್ಕಿಂತ ಹೆಚ್ಚು ಸಾರ್ವಜನಿಕ ಉದ್ದಿಮೆಗಳು ಲಾಭsದಾಯಕ ಉದ್ದಿಮೆಗಳಾಗಿರುತ್ತವೆ. ಸಾರ್ವಜನಿಕ ಉದ್ದಿಮೆಗಳು ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾರ್ವಜನಿಕ ಉದ್ದಿಮೆಗಳ ಮುಖ್ಯ ಉದ್ದೇಶ ಅಭಿವೃದ್ಧಿ ಹಾಗೂ ಸೇವೆಗಳನ್ನು ನೀಡುವಲ್ಲಿ ಸರ್ಕಾರವನ್ನು ಬೆಂಬಲಿಸುವುದಾಗಿರುತ್ತದೆ. ಈ ಉದ್ದೇಶಗಳನ್ನು ಗಮನದಲ್ಲಿಟ್ಟು ಅತೀವ ಸ್ಪರ್ಧಾತ್ಮಕ ಹಾಗೂ ಅತಿವೇಗವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಸಾರ್ವಜನಿಕ ಉದ್ದಿಮೆಗಳ ಕಾರ್ಯದಕ್ಷತೆ ಹಾಗೂ ಪರಿಣಾಮ ಕಾರಿತ್ವವನ್ನು ಹೆಚ್ಚಿಸಲು ಮತ್ತು ಅವುಗಳ ಉತ್ಪಾದಕತೆಯನ್ನು ಅತ್ಯುತ ಮಗೊಳಿಸುವಂತಾಗಲು ಅವುಗಳ ವ್ಯವಸ್ಥೆ ಹಾಗೂ ರಚನೆಯನ್ನು ವ್ಯವಸ್ಥಿತಗೊಳಿಸುವುದು ಅತ್ಯಗತ್ಯವಾಗಿದೆ. ಇಲಾಖೆಯು ನುರಿತ ಸಂಸ್ಥೆಗಳಿಂದ ಉದ್ದಿಮೆಗಳ ಮೌಲ್ಯಮಾಪನ ಹಾಗೂ ಅಧ್ಯಯನವನ್ನು ಹಮ್ಮಿಕೊಳ ಲಾಗುತ್ತಿದ್ದು, ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಯು ನಷ್ಟದಿಂದ ಹೊರಬರಲು ಹಾಗೂ ಲಾಭದಾಯಕತದತ್ತ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮುಂದುವರೆದು, ಸಾರ್ವಜನಿಕ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಿಕಾರಿಗಳು/ಸಿಬ್ಬಂದಿಗಳು ಬುದ್ಧಿ ಶಕ್ತಿ ಮತ್ತು ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಉತ್ಪಾದನಾ ಮಾರುಕಟ್ಟೆಯ ಕಾರ್ಯಕ್ಷಮತೆ, ವರಮಾನ, ಮಾನವ ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ನಿಯಂತ್ರಣ, ಪರಿಸರ ಮತ್ತು ಜೀವಿಶಾಸ್ತ್ರ ಮತ್ತು ಕೈಗಾರಿಕಾ ಸುರಕ್ಷತೆ ಇತ್ಯಾದಿ ವಿಷಯಗಳ ಬಗ್ಗೆ ನುರಿತ(ಗುರುತಿಸಲ್ಪಟ್ಟ) ಸಂಸ್ಥೆಗಳಿಂದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವತಿಯಿಂದ ತರಬೇತಿಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಉದ್ದಿಮೆಗಳನ್ನು ಗುರುತಿಸಿ ಅವುಗಳ ಕಾರ್ಯಕ್ರಮತೆಯನ್ನು ಪ್ರೇರೇಪಿಸಲು ಹಾಗೂ ಪ್ರಶಂಸಿಸಲು ಮಾನ್ಯ ಮುಖ್ಯಮಂತ್ರಿಯವರ “ವಾರ್ಷಿಕ ರತ್ನ ಪ್ರಶಸ್ತಿ”ಯನ್ನು ಪ್ರತಿ ವರ್ಷವು ಆ ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ.

 

ಕೈಗಾರಿಕಾ ನೀತಿಯ ಪ್ರಾರಂಭಿಕ ಹೆಜ್ಜೆಗಳು ಮತ್ತು ಕೈಗಾರಿಕಾ ಹೂಡಿಕೆಗಳು

ರಾಜ್ಯ ಸರ್ಕಾರವು ಈವರೆಗೆ ರೂಪಿಸಲಾಗಿದ  ಕಾರ್ಯತಂತ್ರಗಳು ಮತ್ತು ಸಾಧನೆಗಳನ್ನು ಕ್ರೋಢೀಕರಿಸುವ ಸಲುವಾಗಿ ಸಮರ್ಪಕ ಮೂಲಸೌಲಭ್ಯಗಳು, ಆಕರ್ಷಕ ಹಾಗೂ ಅಧಿಕ ಪ್ರೋತ್ಸಾಹಗಳು ಮತ್ತು ಸುಧಾರಿತ ಅನುಕೂಲತೆಗಳ ವ್ಯವಸ್ಥೆಯೊಂದಿಗೆ ಆಡಳಿತ ಸುಧಾರಣೆಗಳ ಬೆಂಬಲವನ್ನು ಒದಗಿಸಲು ಉದ್ದೇಶಿಸಿದೆ. ಭಾರತ ಸರ್ಕಾರವು, ಚುರುಕುಗೊಂಡ ಬೆಳವಣಿಗೆ, ಆಮೂಲಾಗ್ರ ಅಭಿವೃದ್ಧಿ ಮತ್ತು ಲಾಭಕರ ಉದ್ಯೋಗವನ್ನು ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಉತ್ಪಾದನಾ ನೀತಿಯನ್ನು ೨೦೧೧ರಲ್ಲಿ ಜಾರಿಗೆ ಬಂದಿತು. ಈ ನೀತಿಯು ಒಂದು ದಶಕದಲ್ಲಿ ಜೆ.ಡಿ.ಪಿ. ಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲನ್ನು ೨೫%ಗೆ ಹೆಚ್ಚಿಸಿ, ಸೂಕ್ತ ಕುಶಲತೆಗಳನ್ನು ಹೊಂದಿರುವ ೧೦೦ ದಶಲಕ್ಷ ಉದ್ಯೋಗಗಳನ್ನು ಕಲ್ಪಿಸುವುದಲ್ಲದೇ, ಜಾಗತಿಕವಾಗಿ ಸ್ಪರ್ದೆಯನ್ನು ಎದುರಿಸುವ ಉತ್ಪಾದನೆಯನ್ನು ಗಹನಗೊಳಿಸುವ ಗುರಿಯನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಉತ್ಪಾದನಾ ವಲಯದ ಬಗ್ಗೆ ಅಧ್ಯಯನ ಮಾಡಿ, ಇದು ಎದುರಿಸುವ ಪ್ರಸಕ್ತ ಸವಾಲುಗಳು ಮತ್ತು ಜಾಗತಿಕ ಬೇಕು ಬೇಡಗಳನ್ನು ಗಣನೆಗೆ ತೆಗೆದುಕೊಂಡು, ಸತತ ಮತ್ತು ಸಂಪೂರ್ಣ ವಿಧಾನದಲ್ಲಿ ಬೆಳವಣಿಗೆಯನ್ನು ಸಾಧಿಸಲು ರಚಿಸಲಾದ ಕರ್ನಾಟಕ ಉತ್ಪಾದನಾ ಕಾರ್ಯ ಪಡೆಯು (ಎಮ್.ಟಿ.ಎಫ್) ಅಮೂಲ್ಯ ಸಲಹೆಗಳನ್ನು ಶಿಫಾರಸ್ಸು ಮಾಡಿದೆ. ಕರ್ನಾಟಕದಲ್ಲಿ ಉತ್ಪದನಾ ವಲಯದ ಬಗ್ಗೆ ಅಧ್ಯಯನ ಮಾಡಿ, ಇದು ಎದುರಿಸುವ ಪ್ರಸಕ್ತ ಸವಾಲುಗಳು ಮತ್ತು ಜಾಗತಿಕ ಬೇಕುಬೇಡಗಳನ್ನು ಗಣನೆಗೆ ತೆಗೆದುಕೊಂಡು, ಸತತ ಮತ್ತು ಸಂಪೂರ್ಣ ವಿಧಾನದಲ್ಲಿ ಬೆಳವಣಿಗೆಯನ್ನು ಸಾಧಿಸಲು ರಚಿಸಲಾದ ಕರ್ನಾಟಕ ಉತ್ಪಾದನಾ ಕಾರ್ಯ ಪಡೆಯು (ಎಮ್.ಟಿ.ಎಫ್) ಅಮೂಲ್ಯ ಸಲಹೆಗಳನ್ನು ಶಿಫಾರಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು, ರಾಜ್ಯದ ಬಂಡವಾಳ ಹೂಡಿಕೆದಾರರ ಪ್ರಯೋಜನಕ್ಕಾಗಿ ಸುಸೂತ್ರ ಕ್ರಮಗಳನ್ನು ಒದಗಿಸುವಂತೆ ರಾಷ್ಟ್ರೀಯ ಉತ್ಪಾದನಾ ನೀತಿ ೨೦೧೧ದ ಧ್ಯೇಯೋದ್ದೇಶಗಳು ಮತ್ತು ಗುರಿಗಳು ಹಾಗೂ ಕರ್ನಾಟಕ ಉತ್ಪಾದನಾ ಕಾರ್ಯಪಡೆಯ (ಎಮ್.ಟಿ.ಎ s) ಶಿಫಾರಸ್ಸುಗಳಿಗೆ ಅನುರೂಪವಾದ ಒಂದು ಹೊಸ ಕೈಗಾರಿಕಾ ನೀತಿಯನ್ನು ರೂಪಿಸಲು ಬಯಸುತ್ತದೆ.

 

 

ವಿದೇಶ ನೇರ ಬಂಡವಾಳ ಹೂಡಿಕೆ

ಕಳೆದ ಮೂರು ವರ್ಷಗಳಲ್ಲಿ ವಿದೇಶಿ ಬಂಡಾವಳ ಹೂಡಿಕೆಯ ಒಳ ಹರಿವಿನಲ್ಲಿ ವಿಪರೀತ ವ್ಯತ್ಯಾಸವಿದ್ದರೂ ಕಳೆದ ದಶಕದಲ್ಲಿ ಭಾರತದ ಶೇ.೯ರಷ್ಟು ಭಾಗ ಕರ್ನಾಟಕದ್ದಾಗಿದೆ. ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಒಳ ಹರಿವಿನ ಒಟ್ಟು ಮೊತ್ತವನ್ನು ನೋಡಿದಾಗ ಕರ್ನಾಟಕವು ೩ನೇ ಸ್ಥಾನದಲ್ಲಿದೆ.

 

ಕರ್ನಾಟಕ ಉದ್ಯೋಗ ಮಿತ್ರ (ಕೆ.ಯು.ಎಮ್)

ಕರ್ನಾಟಕ ಉದ್ಯೋಗ್ ಮಿತ್ರ ಕರ್ನಾಟಕದಲ್ಲಿ ಉದ್ಯಮಗಳನ್ನು / ವ್ಯಾಪಾರವನ್ನು ಸ್ಥಾಪಿಸುವ ಎಲ್ಲಾ ಹೂಡಿಕೆದಾರರಿಗೆ ಒಂದೇ ಸಂಪರ್ಕ ಕೇಂದ್ರವಾಗಿದೆ. ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯು ನೋಡಲ್ ಏಜೆನ್ಸಿಯಾಗಿ ಬಂಡವಾಳ ಉದ್ದಿಮೆ ದಾರರಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಮಾರ್ಗದರ್ಶನ ನೀಡುವುದು ಯೋಜನೆಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಬಲ ಸೇವೆ ಒದಗಿಸುವುದು ಉದ್ದೇಶವಾಗಿರುತ್ತದೆ. ರೂ.೫೦೦.೦೦ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ಯೋಜನೆಗಳಿಗೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಮತ್ತು ರೂ.೧೫.೦೦ ಕೋಟಿಗಿಂತ ಮೇಲ್ಪಟ್ಟು ರೂ.೫೦೦.೦೦ ಕೋಟಿಗಳ ಒಳಗಿನ ಬಂಡವಾಳ ಹೂಡಿಕೆ ಯೋಜನೆಗಳಿಗೆ ಬೃಹತ್ ಮತ್ತು ಮೆಗಾ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಗಳು ಕಾರ್ಯನಿರ್ವಹಿಸುತ್ತಿದೆ.

 

 

ಕೈಗಾರಿಕಾ ನೀತಿಯ ಪ್ರಮುಖ ಆರಂಭಗಳು

ಕರ್ನಾಟಕ ಕೈಗಾರಿಕಾ ನೀತಿ ೨೦೧೪-೧೯ ಸರ್ಕಾರವು ಕೈಗಾರಿಕೆಗಳನ್ನು ಉತ್ತೇಜಿಸಲು ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ ೨೦೧೪-೧೯ನ್ನು ಜಾರಿಗೆ ತಂದಿದೆ. ಜಾಗತಿಕ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ವೈಯಕ್ತಿಕವೂ ಸೇರಿದಂತೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಲು ಕೈಗಾರಿಕಾ ವಸಾಹತು/ ಕೇಂದ್ರಗಳ ಸ್ಥಾಪನೆಯನ್ನು ಉದ್ದೇಶಿಸಲಾಗಿದೆ. ಈ ಕೈಗಾರಿಕಾ ನೀತಿಯು ಬೆಂಗಳೂರಿನ ಆಚೆಗೆ ರಾಜ್ಯದ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿರುತ್ತದೆ. ಹೊಸ ಕೈಗಾರಿಕಾ ನೀತಿಯಲ್ಲಿ ಈ ಕೆಳಗಿನ ವಿನಾಯತಿ ಮತ್ತು ಪ್ರೋತ್ಸಾಹಗಳನ್ನು ನೀಡಲಾಗುವುದು.

  • ಬೃಹತ್, ಮೆಗಾ, ಅಲ್ಟ್ರಾ ಮೆಗಾ ಹಾಗೂ ಸೂಪರ್ ಮೆಗಾ ಉದ್ದಿಮೆಗಳು ಸೇರಿದಂತೆ ದೊಡ್ಡ ಉದ್ದುಮೆಗಳಿಗೆ ಮೌಲ್ಯಾಧಾರಿತ ತೆರಿಗೆ ಮತ್ತು ಕೇಂದ್ರೀಯ ಮಾರಾಟ ತೆರಿಗೆಯನ್ನು ಆಧರಿಸಿ ಪ್ರತಿಶತ ೪೦ ರಿಂದ ೧೦೦ರಷ್ಟು ಬಡ್ಡಿರಹಿತ ಸಾಲ ಒದಗಿಸುವುದು, ಮೌಲ್ಯಾಧಾರಿತ ತೆರಿಗೆ ಮತ್ತು ಕೇಂದ್ರೀಯ ಮಾರಾಟ ತೆರಿಗೆ ಮೊತ್ತವನ್ನು ಆಧರಿಸಿ ಸ್ಥಿರಾಸ್ತಿಯ ಮೌಲ್ಯದ ಪ್ರತಿಶತ ೧೦೦ರ ವರೆಗೆ ೭ ರಿಂದ ೧೪ ವರ್ಷಗಳ ಅವಧಿಯ ಸಾಲ ಮಂಜೂರಾತಿಯನ್ನು ಬಂಡವಾಳ ಹೂಡಿಕೆಯ ಪ್ರಮಾಣ ಮತ್ತು ಹೂಡಿಕೆಯ ವಲಯವನ್ನು ಆಧರಿಸಿ ಮಂಜೂರಿಸಲು ಯೋಜಿಸಲಾಗಿದೆ.
  • ಆಂಕರ್ ಘಟಕ: ತಾಲ್ಲೂಕಾ ಮಟ್ಟದಲ್ಲಿ ಕನಿಷ್ಠ ೧೫೦ ಜನರಿಗೆ ಉದ್ಯೋಗಾವಕಾಶ ಒದಗಿಸುವಂತಹ ಮತ್ತು ರೂ. ೨೫೦ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಿ ಉತ್ಪಾದನಾ ವಲಯದ ಉದ್ಯಮಗಳನ್ನು ಆಂಕರ್ ಘಟಕ ಎಂದು ಗುರುತಿಸಲಾಗಿದ್ದು, ತಾಲ್ಲೂಕಾ ಮಟ್ಟದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ಇಂತಹ ಉದ್ಯಮಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಲು ವಿಶೇಷ ಸಹಾಯಧನ ನೀಡುವುದು ತೆರಿಗೆಗೆ ಸಂಬಂಧಿಸಿ ದಂತೆ ಹೆಚ್ಚುವರಿ ವಿನಾಯತಿ ನೀಡಲಾಗುತ್ತದೆ.
  • ಯೋಜನಾ ಸ್ಥಳವನ್ನು ಆಧರಿಸಿ ಬಂಡವಾಳ ಹೂಡಿಕೆ ಸಹಾಯಧನವನ್ನು ಕನಿಷ್ಠ ರೂ.೯ ಲಕ್ಷಗಳಿಂದ ಗರಿಷ್ಠ ರೂ. ೬೫ ಲಕ್ಷಗಳ ಮೊತ್ತದವರೆಗೆ ಒದಗಿಸಲಾಗುವುದು.
  • ಮುದ್ರಾಂಕ ಶುಲ್ಕದಲ್ಲಿ ವಿನಾಯತಿ ಮತ್ತು ಕಡಿಮೆ ನೋಂದಣಿ ಶುಲ್ಕ
  • ಬಂಡವಾಳ ಹೂಡಿಕೆಯ ಸ್ಥಳವನ್ನು ಆಧರಿಸಿ, ಪ್ರತಿಶತ ೭೫ ರಿಂದ ೧೦೦ರಷ್ಟು ಭೂ ಪರಿವರ್ತನಾ ಶುಲ್ಕ ಮರುಪಾವತಿ.
  • ಬಂಡವಾಳ ಹೂಡಿಕೆಯ ಸ್ಥಳವನ್ನು ಆಧರಿಸಿ, ೩ ರಿಂದ ೫ ವರ್ಷಗಳ ಅವಧಿಗೆ ಪ್ರತಿಶತ ೧೦೦ರಷ್ಟು ತೆರಿಗೆಯ ವಿನಾಯತಿ, ಕಚ್ಚಾ ವಸ್ತುಗಳಿಗೆ ೫ ರಿಂದ ೮ ವರ್ಷಗಳ ಅವಧಿಗೆ ಪ್ರತಿಶತ ೧೦೦ರಷ್ಟು ತೆರಿಗೆ ವಿನಾಯತಿ.
  • ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಯ ಸ್ಥಳವನ್ನು ಆಧರಿಸಿ, ಪ್ರತಿಶತ ೫೦ರಷ್ಟು ಗರಿಷ್ಠ ೫೦ ಲಕ್ಷಗಳ ವರೆಗೆ ಅಥವಾ ಪ್ರತಿಶತ ೭೫ರಷ್ಟು ಗರಿಷ್ಠ ೧೦೦ ಲಕ್ಷಗಳ ವರೆಗೆ ತ್ಯಾಜ್ಯ ಸಂಸ್ಕರಣಾ ಘಟಕದ ವೆಚ್ಚದಲ್ಲಿ ಸಹಾಯಧನ ಒದಗಿಸುವುದು.
  • ಬಂಡವಾಳ ಹೂಡಿಕೆಯ ಸ್ಥಳವನ್ನು ಆಧರಿಸಿ, ಸೂಕ್ಷ್ಮ ಮೈಕ್ರೋ ಕೈಗಾರಿಕೆಗಳಿಗೆ ೪ ರಿಂದ ೭ ವರ್ಷಗಳ ಅವಧಿಗೆ ಪ್ರತಿಶತ ೫ರಷ್ಟು ಮೊತ್ತದ ಬಡ್ಡಿ ಸಹಾಯಧನ ಒದಗಿಸುವುದು.
  • ೪ ರಿಂದ ೮ ವರ್ಷಗಳ ಅವಧಿಗೆ ವಿದ್ಯುತ್ ದರದ ಮೇಲಿನ ತೆರಿಗೆಯಲ್ಲಿ ಪ್ರತಿಶತ ೧೦೦ರಷ್ಟು ವಿನಾಯತಿ.
  • ಎಂಎಸ್‌ಎಂಇಗಳಿಗೆ ತಾಂತ್ರಿಕತೆಯನ್ನು ಉನ್ನತೀಕರಿಸಲು ಗುಣಮಟ್ಟದ ಪ್ರಮಾಣೀಕರಣಕ್ಕಾಗಿ (ಪ್ರತಿಶತ ೫ರಷ್ಟು ಬಡ್ಡಿ ಸಬ್ಸಿಡಿ, ಐ.ಎಸ್.ಓ ಪ್ರಮಾಣೀಕರಣಕ್ಕೆ ಗರಿಷ್ಠ ರೂ ೧ ಲಕ್ಷ ಅಥವಾ ಪ್ರತಿಶತ ೭೫ರಷ್ಟು ಸಹಾಯಧನ, ಬಿ.ಐ.ಎಸ್ ಪ್ರಮಾಣೀಕರಣಕ್ಕೆ ಗರಿಷ್ಠ ರೂ ೧ ಲಕ್ಷ ಅಥವಾ ಪ್ರತಿಶತ ೭೫ ರಿಂದ ೧೦೦ರಷ್ಟು, ತಂತ್ರಜ್ಞಾನ ಅಳವಡಿಕೆಗೆ ಗರಿಷ್ಠ ರೂ ೧ ಲಕ್ಷ ಅಥವಾ ಪ್ರತಿಶತ ೨೫ ರಿಂದ ೫೦ರಷ್ಟು, ಔದ್ಯಮಿಕ ತಂತ್ರಜ್ಞಾನ ಬೆಳವಣಿಗೆ ಕೇಂದ್ರ ಸ್ಥಾಪನೆಗೆ ಗರಿಷ್ಠ ರೂ ೭೫ ಲಕ್ಷ ಅಥವಾ ಪ್ರತಿಶತ ೨೫ ರಿಂದ ೫೦ರಷ್ಟು, ಇಲೆಕ್ಟ್ರಾನಿಕ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಯೋಜನೆಗೆ ಗರಿಷ್ಠ ರೂ ೧೫ ಲಕ್ಷ ಅಥವಾ ಪ್ರತಿಶತ ೫ರಷ್ಟು) ಯೋಜನೆಯ ಬಂಡವಾಳ ಮೊತ್ತ ಹಾಗೂ ಹೂಡಿಕೆಯ ವಲಯವನ್ನು ಆಧರಿಸಿ ನೀಡಲಾಗುತ್ತದೆ.
  • ಜಲ ಸಂರಕ್ಷಣೆ ಅಥವಾ ಮಳೆ ನೀರು ಕೊಯ್ಲು ಕ್ರಮಗಳಿಗೆ ಉತ್ಪಾದನಾ ವಲಯದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಮಳೆ ಕೊಯ್ಲು -ಗರಿಷ್ಠ ರೂ. ೧.೫ ಲಕ್ಷ ಅಥವಾ ಪ್ರತಿಶತ ೫೦ ರಿಂದ ೭೫ರಷ್ಟು, ತಾಜ್ಯ ನೀರಿನ ಮರುಬಳಕೆ -ಗರಿಷ್ಠ ರೂ.೭.೫ ಲಕ್ಷ ಅಥವಾ ಪ್ರತಿಶತ ೫೦ ರಿಂದ ೭೫ರಷ್ಟು, ಶೂನ್ಯ ತ್ಯಾಜ್ಯ -ಗರಿಷ್ಠ ರೂ. ೭.೫ ಲಕ್ಷ ಅಥವಾ ಪ್ರತಿಶತ ೫೦ ರಿಂದ ೭೫ರಷ್ಟು) ಯೋಜನೆಯ ಬಂಡವಾಳ ಮೊತ್ತ ಹಾಗೂ ಹೂಡಿಕೆಯ ವಲಯವನ್ನು ಆಧರಿಸಿ ನೀಡಲಾಗುತ್ತದೆ.
  • ಇಂಧನ ಸಂರಕ್ಷಣೆ: ಉತ್ಪಾದನಾ ವಲಯದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿ (ಇಂಧನ ಸಂರಕ್ಷಣೆ ಕ್ರಮಗಳಿಗೆ - ಗರಿಷ್ಠ ರೂ ೭.೫ ಲಕ್ಷ ಅಥವಾ ಪ್ರತಿಶತ ೧೦ ರಿಂದ ೧೫ರಷ್ಟು, ಅಸಂಪ್ರದಾಯಿಕ ಇಂಧನ ಮೂಲಗಳು - ಗರಿಷ್ಠ ರೂ.೭.೫ ಲಕ್ಷ ಅಥವಾ ಪ್ರತಿಶತ ೧೦ ರಿಂದ ೧೫ರಷ್ಟು, ಇಂಧನ ಉತ್ಪಾದನಾ ಸಹಾಯಧನ-ಪ್ರತಿ ಯೂನಿಟ್ ಗೆ ರೂ.೦.೫೦ ಯಿಂದ ರೂ. ೦.೭೫ ಸೋಲಾರ್ ಮತ್ತು ಪವನ ವಿದ್ಯುತ್ ಯೋಜನೆಗಳಿಗೆ) ಯೋಜನೆಯ ಬಂಡವಾಳ ಮೊತ್ತ ಹಾಗೂ ಹೂಡಿಕೆಯ ವಲಯವನ್ನು ಆಧರಿಸಿ ನೀಡಲಾಗುತ್ತದೆ.
  • ಎಂಎಸ್‌ಎಂಇ ಘಟಕಗಳು: ಈ ವಲಯದ ಬೆಳವಣಿಗೆಗೆ ವಿಶೇಷ ಆಸಕ್ತಿವಹಿಸಲಾಗಿದ್ದು ಪ್ರತಿಯೊಂದು ಕೈಗಾರಿಕಾ ಕೇಂದ್ರದಲ್ಲಿಯೂ ಪ್ರತಿಶತ ೨೦ರಷ್ಟು ಭೂಮಿಯನ್ನು ಈ ವಲಯದ ಘಟಕಗಳಿಗೆ ಮೀಸಲಿರಿಸಲಾಗಿದೆ. ಅಲ್ಲದೇ ಆರ್ಥಿಕ ಬೆಂಬಲ ಮತ್ತು ಮಾರಾಟ ವ್ಯವಸ್ಥೆಯ ಕುರಿತಂತೆ ಆಕರ್ಷಕ ಕೊಡುಗೆಗಳು ಮತ್ತು ವಿನಾಯಿತಿಗಳ ಪ್ಯಾಕೇಜ್ ಪ್ರಸ್ತಾಪಿಸಲಾಗಿದೆ.
  • ಸಮಗ್ರ ಬೆಳವನಿಗೆ: ಕೈಗಾರಿಕಾ ನೀತಿಯು ರಾಜ್ಯದಾದ್ಯಂತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವುದಲ್ಲದೇ ಸಮಾಜದ ಎಲ್ಲಾ ವಲಯಗಳು ಮಹಿಳೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರರು ಸೇರಿದಂತೆ ಸಮಗ್ರ ಬೆಳವಣಿಗೆಯ ಉದ್ದೇಶವನ್ನು ಹೊಂದಿದ್ದು ಆಕರ್ಷಕ ಕೊಡುಗೆಗಳು ಮತ್ತು ವಿನಾಯಿತಿಗಳ ಪ್ಯಾಕೇಜ್ ನೀಡಲಾಗುತ್ತಿದೆ.

ಅ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ

  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳು ಹಂಚಿಕೆ ಮಾಡಬಹುದಾದ ಕ್ಷೇತ್ರದ ಪ್ರತಿಶತ ೨೨.೫ರಷ್ಟು ಕ್ಷೇತ್ರವನ್ನು ಈ ವರ್ಗದವರಿಗೆ ಮೀಸಲಿರಿಸಲಾಗುತ್ತಿದೆ.
  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳು ಯೋಜನೆಯ ಬಂಡವಾಳ ಮೊತ್ತ ಹಾಗೂ ಹೂಡಿಕೆಯ ವಲಯವನ್ನು ಆಧರಿಸಿ ಗರಿಷ್ಠ ಮಿತಿ ೩೫ ಲಕ್ಷಗಳಿಗೆ ಒಳಪಟ್ಟಂತೆ ಪ್ರತಿಶತ೩೦ ರಿಂದ ೪೦ರಷ್ಟು ಸಬ್ಸಿಡಿ ನೆರವು ಅಡಿಯಲ್ಲಿ ಭೂಮಿಯನ್ನು ಹಂಚಿಕೆ ಮಾಡುತ್ತವೆ.

ಆ. ಮಹಿಳಾ ಉದ್ದಿಮೆದಾರರಿಗೆ

  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳು ಹಂಚಿಕೆ ಮಾಡಬಹುದಾದ ಕ್ಷೇತ್ರದ ಪ್ರತಿಶತ ೫ರಷ್ಟು ಕ್ಷೇತ್ರವನ್ನು ಈ ವರ್ಗದವರಿಗೆ ಮೀಸಲಿರಿಸಲಾಗುತ್ತಿದೆ.
  • ಪ್ರೋತ್ಸಾಹಕ ಕೊಡುಗೆಗಳ ವಿಶೇಷ ಪ್ಯಾಕೇಜ್.

 

ಇ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರರು, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ.

  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳು ಹಂಚಿಕೆ ಮಾಡಬಹುದಾದ ಕ್ಷೇತ್ರದ ಪ್ರತಿಶತ ೫ರಷ್ಟು ಕ್ಷೇತ್ರವನ್ನು ಈ ವರ್ಗದವರಿಗೆ ಮೀಸಲಿರಿಸಲಾಗುತ್ತಿದೆ.
  • ಪ್ರೋತ್ಸಾಹಕ ಕೊಡುಗೆಗಳ ವಿಶೇಷ ಪ್ಯಾಕೇಜ್.
  • ಅನಿವಾಸಿ ಕನ್ನಡಿಗರಿಗೆ ಪ್ರೋತ್ಸಾಹ.
  • ಉತ್ಪಾದನಾ ವಲಯ ಅಂದರೆ ವಾಹನ ಮತ್ತು ಯಂತ್ರೋಪಕರಣಗಳ ಉತ್ಪಾದನೆ (ಸ್ಟೀಲ್ ಮತ್ತು ಸಿಮೆಂಟ್ ಉದ್ಯಮ ಹೊರತುಪಡಿಸಿ) ಅಲ್ಟ್ರಾ ಹಾಗೂ ಸೂಪರ್ ಮೆಗಾ ಉದ್ಯಮಗಳಿಗೆ ಆದ್ಯತೆಯ ಮೇರೆಗೆ ಹೆಚ್ಚುವರಿ ಆಕರ್ಷಕ ಕೊಡುಗೆಗಳು ಮತ್ತು ವಿನಾಯಿತಿಗಳ ಪ್ಯಾಕೇಜ್ ಪ್ರಸ್ತಾಪಿಸಲಾಗಿದೆ.
  • ವಿಶೇಷ ಕೊಡುಗೆಗಳು: ವಿನಾಯತಿಗಳು ಮತು ಕೊಡುಗೆಗಳ ಕುರಿತಂತೆ ನಿಗದಿಪಡಿಸಲಾದ ಅರ್ಹತಾ ನಿಯಮಗಳನ್ನು ಕೆಲವು ವಿಶೇಷ ಪ್ರಕರಣಗಳಲ್ಲಿ ಸಡಿಲಿಸಿ ಪರಿಗಣಿಸಲಾಗುವುದು. ಇವೆಲ್ಲವುಗಳ ಹೊರತಾಗಿ, ರಾಜ್ಯವು ವಲಯಾಧಾರಿತವಾಗಿ ಬಾಹ್ಯಾಕಾಶ ನೀತಿ, ಜವಳಿ ನೀತಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನೀತಿ, ಇಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್, ಪ್ರವಾಸೋದ್ಯಮ ನೀತಿ, ಸಮಗ್ರ ಕೃಷಿ ವ್ಯವಹಾರ ನೀತಿ, ಸೋಲಾರ್ ನೀತಿ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿಗಳನ್ನು ರೂಪಿಸಿದೆ.

 

 

ನೂತನ ಕೈಗಾರಿಕಾ ನೀತಿ ೨೦೧೪-೧೯ಕ್ಕೆ ತಿದ್ದುಪಡಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಚಿಸಿದ ಕರ್ನಾಟಕ ಔಷಧ ವಸ್ತುಗಳ ನೀತಿ ೨೦೧೨ನ್ನು ಅಕ್ಟೋಬರ್, ೨೦೧೫ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ವರ್ಗಾಯಿಸಲಾಗಿದೆ. ಭಾರತ ಸರ್ಕಾರವು ಕರಡು ರಾಷ್ಟ್ರೀಯ ವೈದ್ಯಕೀಯ ಉಪಕರಣಗಳ ನೀತಿ, ೨೦೧೫ನ್ನು ಪ್ರಕಟಿಸಿತು. ೨೦೧೬-೧೭ನೇ ಸಾಲಿನ ಆಯವ್ಯಯದಲ್ಲಿ ಎಸ್‌ಸಿ/ ಎಸ್‌ಟಿಗಳಿಗೆ ಮತ್ತು ಇತರ ದುರ್ಬಲ ವರ್ಗಗಳಿಗೆ ಕೈಗಾರಿಕಾ ಪ್ಲಾಟಗಳು ಮತ್ತು ಮಳಿಗೆಗಳನ್ನು ರಿಯಾಯ್ತಿ ದರದಲ್ಲಿ ಕಾಯ್ದಿರಿಸುವುದಾಗಿ ಪ್ರಕಟಿಸಲಾಯಿತು. ಮೇಲಿನ ವಿಷಯಗಳಿಗೆ ಒತ್ತು ನೀಡಲು ಮತ್ತು ನೀತಿಯ ವ್ಯಾಪ್ತಿಯನ್ನು ವಿಸ್ತರಿಸಲು, ಪ್ರಸ್ತುತ ಇರುವ ಕರ್ನಾಟಕ ಕೈಗಾರಿಕಾ ನೀತಿ ೨೦೧೪-೧೯ಕ್ಕೆ ಈ ಮುಂದಿನ ತಿದ್ದುಪಡಿಗಳನ್ನು ಮಾಡಲಾಗಿದೆ.

  • ಕರ್ನಾಟಕ ಔಷಧ ವಸ್ತುಗಳ ನೀತಿ ೨೦೧೨ರ ಪರಿಷ್ಕೃತ ಪ್ರೋತ್ಸಾಹಕಗಳೊಂದಿಗೆ ಉಪಬಂಧಗಳನ್ನು, ಕೈಗಾರಿಕಾ ನೀತಿ ೨೦೧೪-೧೯ಕ್ಕೆ ಅನುಬಂಧ -೭ ಎಂದು ಸೇರಿಸಲಾಯಿತು.
  • ಆಕರ್ಷಕ ಪ್ರೋತ್ಸಾಹಕಗಳು ಮತ್ತು ರಿಯಾಯ್ತಿಗಳೊಂದಿಗೆ ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳ ಪ್ರವರ್ತನೆಗೆ ಒಂದು ಹೊಸ ಅಧ್ಯಾಯವನ್ನು ಅನುಬಂಧ-೮ ರಂತೆ ಸೇರ್ಪಡೆಗೊಳಿಸಲಾಗಿದೆ.
  • ಔಷಧವಲಯದಲ್ಲಿರುವ ನೀತಿಗಳನ್ನು ಮತ್ತು ಅವಕಾಶಗಳ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಅವುಗಳನ್ನು ಪ್ರಸಾರ ಮಾಡಲು, ವಲಯತಜ್ಞರ ಅಧ್ಯಕ್ಷತೆಯಲ್ಲಿ ಒಂದು ವಿಷನ್ ಗ್ರೂಪ್ ರಚಿಸಲು ಪ್ರಸ್ತಾಪಿಸಲಾಯಿತು.
  • ಕರ್ನಾಟಕದ ಉತ್ತಮ ಸ್ಥಾನಮಾನವನ್ನು ಕ್ರೋಡಿಕರಿಸಲು ಸಹಾಯಕವಾಗುವಂತಹ ವಾರ್ಷಿಕ/ ದ್ವೈವಾರ್ಷಿಕ ಔಷಧ ವಸ್ತುಗಳ ವ್ಯಾಪಾರೀ ಪ್ರದರ್ಶನಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಲು ಪ್ರಸ್ತಾಪಿಸಲಾಯಿತು.

ಅಂತರಿಕ್ಷ ವಿಮಾನಯಾನ ನೀತಿ ೨೦೧೩-೨೩ಕ್ಕೆ ತಿದ್ದುಪಡಿಗಳು

ಭಾರತದಲ್ಲಿನ ಅಂತರಿಕ್ಷ ವಿಜ್ಞಾನ, ರಕ್ಷಣೆ ಮತ್ತು ಎಂಆರ್‌ಓ ವಲಯಗಳಲ್ಲಿನ ಹೂಡಿಕೆಗಳಿಗಾಗಿ, ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ, ೨೦೧೬ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ನೀತಿಯಲ್ಲಿನ ಬದಲಾವಣೆಗಳ ಪ್ರಮುಖ ಅವಕಾಶಗಳಿಗೆ ಉದ್ದಿಮೆ ತಜ್ಞರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಏರೊಸ್ಪೇಸ್‌ ನೀತಿ ೨೦೧೩-೨೩ಯ ವ್ಯಾಪ್ತಿಯನ್ನು ಎಂಆರ್‌ಓ, ನಾಗರಿಕ ವಿಮಾನಯಾನ ಇತ್ಯಾದಿಗಳನ್ನು ಒಳಗೊಳ್ಳುವಂತೆ ವಿಸ್ತರಿಸಲು ಮತ್ತು ಇತರ ರಾಜ್ಯಗಳಲ್ಲಿ ನೀಡಲಾಗತ್ತಿರುವ ಪ್ರೋತ್ಸಾಹಕಗಳ ಮತ್ತು ವಿನಾಯ್ತಿಗಳನ್ನು ತಮಗೂ ನೀಡುವಂತೆ ಕೋರಿದರು.

ಏರೊಸ್ಪೇಸ್ ನೀತಿ ೨೦೧೩-೨೩ಕ್ಕೆ ನಿಷ್ಕೃಷ್ಟತೆಯನ್ನು ಮತ್ತು ಕೈಗಾರಿಕಾ ನೀತಿ ೨೦೧೪-೧೯ಕ್ಕೆ ಸಾಮಂಜಸ್ವ ತರಲು ಮತ್ತು ನೀತಿಯ ವ್ಯಾಪ್ತಿಯನ್ನು ವಿಸ್ತರಿಸಲು, ಈಗಿರುವ ಏರೊಸ್ಪೇಸ್ ನೀತಿ ೨೦೧೩-೨೩ಕ್ಕೆ ಈ ಕೆಳಕಂಡ ತಿದ್ದುಪಡಿಗಳನ್ನು ತರಲಾಗಿದೆ.

  • ಏರೊಸ್ಪೇಸ್ ವಲಯದಲ್ಲಿನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಹೊಸ ಕಂಡಿಕೆಯನ್ನು ಸೇರಿಸಲಾಯಿತು.
  • ವಿಶೇಷ ವಲಯವಾಗಿರುವ ಏರೊಸ್ಪೇಸ್ ವಲಯದಲ್ಲಿನ ಹೂಡಿಕೆಗಳನ್ನು ಉತ್ತೇಜಿಸುವ ಸಲುವಾಗಿ ವಲಯ ೪ರಲ್ಲಿನ ಡೆಸಿಗ್ನೇಟೆಡ್ ಏರೋಸ್ಪೇಸ ಪಾರ್ಕ್‌ಗಳಲ್ಲಿ ಅಂದರೆ ಬೆಂಗಳೂರಿನ ಸುತ್ತ ಮುತ್ತಲೂ ಇರುವ ಘಟಕಗಳಿಗೆ ಪ್ರೋತ್ಸಾಹಕಗಳು ಮತ್ತು ವಿನಾಯಿತಿಗಳು ಲಭ್ಯವಿದೆ. ಡೆಸಿಗ್ನೇಟೆಡ್ ಪಾರ್ಕ್‌ಗಳನ್ನು ಹೊರತು ಪಡಿಸಿದ ಘಟಕಗಳು ಸೇರಿದಂತೆ ವಲಯ ೪ರಲ್ಲಿ ಬರುವ ಹೂಡಿಕೆಗಳಿಗಾಗಿ ಪ್ರೋತ್ಸಾಹಕಗಳನ್ನು ಪ್ರಸ್ತಾವಿಸಲಾಗಿದೆ. ಇದಲ್ಲದೇ, ರಾಜ್ಯವು ಜವಳಿ ನೀತಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನೀತಿ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ ನೀತಿ, ಪ್ರವಾಸೋದ್ಯಮ ನೀತಿ, ಏಕೀಕೃತ ಕೃಷಿ ವ್ಯಾಪಾರಿ ನೀತಿ, ಸೌರ ನೀತಿ ಮತ್ತು ಮೂಲಭೂತ ಸೌಲಭ್ಯನೀತಿಗಳಂತಹ ವಲಯಾಧಾರಿತ ನಿರ್ದಿಷ್ಠ ನೀತಿಗಳನ್ನು ಹೊಂದಿದೆ.

ವಿವಿಧ  ವಲಯಗಳಿಗಾಗಿ ನೀಡಲಾದ ಕ್ಷಮತೆ ಮತು ಪ್ರೋತ್ಸಾಹಕಗಳ ಮುಖ್ಯಾಂಶಗಳು

ಜೈವಿಕ ತಂತ್ರಜ್ಞಾನ

  • ೨೦೧೩-೧೪ರಲಿ ೧.೧೮ ಬಿಲಿಯನ್‌ ರಾಜಸ್ವ ತರುವುದರೊಂದಿಗೆ, ಬೆಂಗಳೂರು ಭಾರತದಲ್ಲಿಯೇ ನಂ. ೧ ಜೈವಿಕ ತಂತ್ರಜ್ಞಾನ ಜಾಲವೆನಿಸಿದೆ.
  • ಜೈವಿಕ ತಂತ್ರಾಜ್ಞಾನದ ಅತಿದೊಡ್ಡ ಸಿಗ್ಮೆಂಟ್ ಬಯೋಫಾರ್ಮ (೬೦%ಕ್ಕಿಂತ ಹೆಚ್ಚು)
  • ರಾಷ್ಟ್ರದ ಜೈವಿಕ ತಂತ್ರಜ್ಞಾನದ ರಫ್ತಿನಲ್ಲಿ ಕರ್ನಾಟಕ ೧/೩ರಷ್ಟು ಕೊಡುಗೆ ನೀಡುತ್ತಿದೆ.
  • ರಾಷ್ಟ್ರದಲ್ಲಿರುವ ಜೈವಿಕ ತಂತ್ರಜ್ಞಾನ ಕಂಪನಿಗಳಲ್ಲಿ ೫೦% ಗಿಂತಲೂ ಹೆಚ್ಚು ಕಂಪನಿಗಳಿಗೆ ಇದು ನೆಲೆಯಾಗಿದೆ.
  • ಬಯೊ-ವೆಂಚರ್ಸ್‌ ನಿಧಿ ಮತ್ತು ಬಯೊ ಜೈವಿಕ ಅನ್ವೇಷಣ ಕೇಂದವನ್ನು ಅತ್ಯಾಧುನಿಕ ಪ್ರಯೋಗ ಶಾಲಾ ಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುತ್ತಿದೆ.
  • ವಿಸಿ ಫಾರ್ಮನೊಂದಿಗೆ ಸಹಭಾಗಿತ್ವದಲ್ಲಿ ೫೦ ಕೋಟಿ ರೂ. ಗಳ ನಿಧಿ
  • ಬೆಂಗಳೂರು ಜೈವಿಕ ಅನ್ವೇಷಣಾ ಕೇಂದ್ರ ಅನ್ವೇಷಣಾ ಆಧಾರದ ಆರ್ ಆಂಡ್ ಡಿ ಸ್ಟಾರ್ಟ್ ಅಪ್‌ಗಳನ್ನು ಪ್ರೋತ್ಸಾಹಿಸಲು ೨೫ ಸುಸಜ್ಜಿತ ಪ್ರಯೋಗ ಶಾಲೆಗಳು.
  • ರಾಜ್ಯದಲ್ಲಿ ವಾರ್ಷಿಕವಾಗಿ ೩೦% ನಂತೆ ವೃದ್ಧಿಸುತ್ತಿರುವ ಜೈವಿಕ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳು.
  • ೫ ಜೈವಿಕ ತಂತ್ರಜ್ಞಾನ ಸಂಪೂರ್ಣ ಶಾಲೆಗಳು ಸ್ನಾತಕೋತ್ತರ ಡಿಪ್ಲೊಮೊವನ್ನು ನೀಡುತ್ತಿವೆ, ಸೆಂಟರ್ ಫಾರ್ ಜೆನೆಟಿಕ್ಸ್ ವಿಜ್ಞಾನಿಗಳಿಗಾಗಿ ಕೋರ್ಸುಗಳು ಮತ್ತು ಕಾರ್ಯ ಶಿಬಿರಗಳನ್ನು ಆಯೋಜಿಸುತ್ತಿದೆ.
  • ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವೆಚ್ಚ ಮಾಡುವ (ದೇಶದಲ್ಲಿ ೩ನೇ) ರಾಜ್ಯವಾಗಿದೆ.
  • ಜೈವಿಕ ತಂತ್ರಜ್ಞಾನ ಪಾರ್ಕುಗಳ ಸ್ಥಾಪನೆ.
  • ಹಸಿರು ವಲಯದಲ್ಲಿ ಸಂಶೋಧನಾ ಪ್ರಯೋಗಾಲಯ ಸ್ಥಾಪನೆ.
  • ಪ್ರಥಮ ಎರಡು ಉತ್ಪಾದನಾ ಉದ್ಯಮಗಳಿಗೆ ಮಂಚೂಣಿ ಘಟಕ ಸಹಾಯಧನ ಮಂಜೂರಾತಿ.

 

ಇಲೆಕ್ಟ್ರಾನಿಕ್ಸ್‌ವಿನ್ಯಾಸ ವ್ಯವಸ್ಥೆ ಮತ್ತು ಉತ್ಪಾದನೆ

  • ಕರ್ನಾಟಕವು ಇಲೆಕ್ಟ್ರಾನಿಕ್‌ ವಿನ್ಯಾಸ ವ್ಯವಸ್ಥೆಯ ಉತ್ಪಾದನೆಯಲ್ಲಿ ದೇಶದ ನಾಲ್ಕನೇ (ದೇಶದ ಒಟ್ಟಾರೆ ಉತ್ಪಾದನೆಯ ಪ್ರತಿಶತ ೧೦ರಷ್ಟು) ದೊಡ್ಡ ಉತ್ಪಾದಕವಾಗಿದ್ದು ಸಿಎಜಿಆರ್ ವರದಿಯ ಅನುಸಾರ ೨೦೦೮-೧೩ರ ಅವಧಿಯಲ್ಲಿ ಪ್ರತಿಶತ ೧೮ರಷ್ಟು ಬೆಳವಣಿಗೆ ಸಾಧಿಸಿದೆ.
  • ಕರ್ನಾಟಕವು ದೇಶದಲ್ಲಿಯೇ ೨ನೇ ಅತಿ ದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ‌
  • ಕನಾಟಕ ಇಎಸ್‌ಡಿಎಂ ನೀತಿ.
  • ಮಂಚೂಣಿ ಘಟಕಗಳಿಗೆ ಹಸಿರು ಕ್ಲಸ್ಟರ್ ವಲಯದಲ್ಲಿ ಬಂಡವಾಳ ಸಬ್ಸಿಡಿ
  • ಬಂಡವಾಳ ಸಬ್ಸಿಡಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಬ್ಸಿಡಿ ರೂಪದಲ್ಲಿ ಆರ್ಥಿಕ ಉತ್ತೇಜನ ನೀಡುವುದು.
  • ಪೇಟೆಂಟ್ ಪಡೆಯುವುದಕ್ಕಾಗಿ ಹಣಕಾಸು ನೆರವು ನೀಡುವುದು.
  • ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಎರಡು ಪ್ರಧಾನ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ.
  • ವ್ಯಾಪಕ ಪ್ರೊಟೋಟೈಪಿಂಗ್.
  • ಪ್ರಿಟೋ ಪಿ.ಸಿ.ಬಿ ಉತ್ಪಾದನೆ
  • ಪ್ರಯೋಗಾಲಯ ಸೌಲಭ್ಯದೊಂದಿಗೆ ಎಸ್.ಎಮ್.ಟಿ ಜೋಡಣೆ.
  • ಕ್ಯಾಲಿರೇಶನ್ ಕೇಂದ್ರ ಸ್ಥಾಪನೆ.
  • ಇ.ಎಮ್ ಡಿಸ್ಚಾರ್ಜ್ ಪ್ರಯೋಗಾಲಯ, ಉಪಕರಣ ಅಚ್ಚು ಕೇಂದ್ರಗಳು.
  • ಇಎಸ್‌ಡಿಎಂ ನೈಪುಣ್ಯತೆ ಅಭಿವದ್ಧಿಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪ್ರಥಮ ರಾಜ್ಯವಾಗಿದ್ದು ಮುಂದಿನ ೫ ಅವರ್ಷಗಳ ಅವಧಿಯಲ್ಲಿ ಸುಮಾರು ೧೫೦೦೦ ಜನರಿಗೆ ತರಬೇತಿ ನೀಡುವ ಗುರಿ ಹೊಂದಿದೆ.
  • ವಿನ್ಯಾಸ, ಪ್ರೊಟೋಟೈಪಿಂಗ್, ಪ್ರಯೋಗಾಲಯ ಮತ್ತು ಪ್ರಮಾಣೀಕರಣಕ್ಕಾಗಿ ಜಾಗತಿಕ ಗುಣಮಟ್ಟದ ಎರಡು ವಿನೂತನ ಕೇಂದ್ರಗಳ ಸ್ಥಾಪನೆ (IIIT-Bangalore ಮತ್ತು STPI-Bangalore).
  • ಭಾರತ ಸರ್ಕಾರ ಮತ್ತು ಎನ್‌ಎಎಸ್‌ಎಸ್‌ಸಿಓಎಂ ಸಹಯೋಗ ದೊಂದಿಗೆ ಕೈಗಾರಿಕೆಗಳ ಪೂರೈಕೆಗೆ ಅನುಸಾರ ಐಸಿಟಿ ಪರಿಣಿತಿ ಅಭಿವೃದ್ಧಿ.
  • ಐಸಿಟಿ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು ಚಿಪ್ ವೈಫಲ್ಯದ ಕುರಿತಂತೆ ವಿಫಲತೆಯ ಅಂಶಗಳ ವಿವರ ಅರಿಯಲು ಪ್ರಯೋಗಾಲಯ (Semiconductor Measurement, Analysis and Reliability Test Lab) ಸ್ಮಾರ್ಟ್‌ ಜಾಗತಿಕ ಗುಣಮಟ್ಟದ ಪ್ರಯೋಗಲಾಯ ಸ್ಥಾಪನೆ.

 

ಎ.ವಿ.ಜಿ.ಸಿ (ಅನಿಮೇಷನ್‌, ವಿಷುವಲ್‌ ಎಫೆಕ್ಟ್‌, ಗೇಮಿಂಗ್‌ ಮತ್ತು ಕಾಮಿಕ್ಸ್‌)

  • ಕರ್ನಾಟಕವು ಎವಿಜಿಸಿ ಉದ್ಯಮಕ್ಕಾಗಿಯೇ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿದೆ.
  • ಕನಾಟಕವು ಎವಿಜಿಸಿ ಉದ್ಯಮದಲ್ಲಿ ಪ್ರಖ್ಯಾತ ಉದ್ದಿಮೆದಾರರನ್ನು ಹೊಂದಿರುತ್ತದೆ.
  • ಬೆಂಗಳೂರು ಮೂಲದ ಸಂಸ್ಥೆಗಳು ಆಸ್ಕರ್ ಮತ್ತಿತರ ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿರುವ ಹಲವಾರು ಚಲನಚಿತ್ರಗಳಿಗೆ ಕೊಡುಗೆ ನೀಡಿರುತ್ತವೆ.
  • ಬೆಂಗಳೂರು ಎನಿಮೇಶನ್ ಉದ್ಯಮಗಳ ಒಕ್ಕೂಟವು ಉದ್ಯಮ, ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿರುವುದು ಎನಿಮೇಶನ್ ವಲಯದಲ್ಲಿ ಕೌಶಲ್ಯ ಅಭಿವೃದ್ಧಿ, ನೆಟ್‌ವರ್ಕಿಂಗ್ ಮುಂತಾದವುಗಳ ಮೂಲಕ ಹೊಸತನ್ನು ಸಾಧಿಸಲು ನೆರವಾಗುತ್ತಿವೆ.
  • ತರಬೇತುದಾರರಿಗೆ ತರಬೇತಿ: ಪ್ರಾಯೋಗಿಕ ಕಾರ್ಯಚಟುವಟಿಕೆಗಳೊಂದಿಗೆ, ತರಬೇತುದಾರರ ಕೌಶಲ್ಯವನ್ನು ಉತ್ತಮಪಡಿಸಲು ವೈಯಕ್ತಿಕ ಮತ್ತು ಗುಂಪು ಪ್ರಾಜೆಕ್ಟ್ ಹೊಂದಿರುವ ೬ ವಾರಗಳ ತರಬೇತಿ ಕಾರ್ಯಕ್ರಮ.
  • ಕಲಾ ಕಾಲೇಜುಗಳ ಡಿಜಿಟಲೀಕರಣ: ಬೆಂಗಳೂರು ಎನಿಮೇಷನ್‌ ಉದ್ದಿಮೆಗಳ ಒಕ್ಕೂಟ ಸಹಯೋಗದೊಂದಿಗೆ ಆಸಕ್ತ ಕಾಲೇಜುಗಳಲ್ಲಿ ಪರಿಣಿತರಿಂದ ರೂಪಿಸಲಾದ ಪಠ್ಯವನ್ನು ಆಧರಿಸಿ ಡಿಜಿಟಲ್ ಕಲಾ ತರಬೇತಿ ಕೇಂದ್ರಗಳ ಸ್ಥಾಪನೆ.
  • ಪ್ರವೇಶ ಹಂತದಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ಎವಿಜಿಸಿ ಫಿನಿಶಿಂಗ್ ಶಾಲೆಗಳ ಸ್ಥಾಪನೆಗೊಳಿಸಿ, ನವ ಪದವೀಧರರಿಗೆ ಉದ್ಯಮದಲ್ಲಿ ಇಂಟರ್ನ್ ಶಿಪ್ ಮತ್ತು ಅಪ್ರೆಂಟಿಶಿಪ್ ತರಬೇತಿಗಳ ಮೂಲಕ ಔದ್ಯೋಗಿಕ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುವ ಪರಿಣಿತಿಯನ್ನು ಅಭಿವೃದ್ಧಿಪಡಿಸುವುದು.
  • ಕರ್ನಾಟಕ ಸರ್ಕಾರವು ಮಾಧ್ಯಮ ಮತ್ತು ಮನೋರಂಜನಾ ಉದ್ಯಮಗಳಿಗೆ ಅವಶ್ಯಕವಿರುವ ಸಮಗ್ರ ಸೇವೆಗಳನ್ನು ಸಹವರ್ತಿ ವ್ಯವಸ್ಥೆಯ ಅಡಿಯಲ್ಲಿ ಒದಗಿಸಲು ಡಿಜಿಟಲ್ ಮೀಡಿಯಾ ಕೇಂದ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.
  • ಮುಂಬರುವ ಹೂಡಿಕೆಯ ಅವಕಾಶಗಳು
  • ಕೆಎವಿಜಿಸಿ ಪಾರ್ಕ್
  • ಡಿಜಿಟಲ್ ಮೀಡಿಯಾ ಸಿಟಿ
  • ಡಕೆಎವಿಜಿಸಿ ಪ್ರಯೋಗಾಲಯ

 

ಐಟಿ ಮತ್ತು ಐಟಿಇಎಸ್‌ (IT and ITeS)

  • ದೇಶದ ಒಟ್ಟಾರೆ ಸಾಫ್ಟ್‌ವೇರ್ ರಫ್ತಿನಲ್ಲಿ ಮೂರನೇ ಒಂದರಷ್ಟು ಕೊಡುಗೆಯನ್ನು ಕರ್ನಾಟಕವು ನೀಡುತ್ತಿದ್ದು ಭಾರತದಲ್ಲಿಯೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತು ಮಾಡುವ ರಾಜ್ಯವಾಗಿದೆ.
  • ಜಗತ್ತಿನಲ್ಲಿಯೇ ಕರ್ನಾಟಕವು ೪ನೇ ದೊಡ್ಡ ತಂತ್ರಜ್ಞಾನ ಸಮೂಹವಾಗಲಿದೆ.
  • ಕರ್ನಾಟಕದಲ್ಲಿ ಪ್ರತಿಶತ ೮೦ರಷ್ಟು (೪೦೦) ಫಾರ್ಚೂನ್ ೫೦೦ ಹೊರಗುತ್ತಿಗೆ ನಿರ್ವಹಣಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
  • ಕ್ಯಾಂಪಸ್‌ ಸಂಸ್ಥೆಯ ಅನುಸಾರ ಜಾಗತಿಕ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರು ೨ನೇ ಶ್ರೇಯಾಂಕವನ್ನು ಪಡೆದಿರುತ್ತದೆ.
  • ಐ.ಸಿ.ಟಿ. ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಉದ್ಯಿಮೆ ಮಧ್ಯಸ್ಥಿಗಾರರ ನಿರ್ದಿಷ್ಟ ಅವಶ್ಯಕತೆಗಳಿಗನುಗುಣವಾಗಿ ತರಬೇತಿ ಸೌಲಭ್ಯವನ್ನು ಒದಗಿಸುತ್ತದೆ.
  • ದೇಶದ ಸ್ಟಾರ್ಟ್-ಅಪ್ ಅವಶ್ಯಕತೆಗಳನ್ನು ಪೂರೈಸಲು ಕರ್ನಾಟಕಸರ್ಕಾರ, ಕೆಬಿಟ್ಸ್ ಮತ್ತು ನಾಸ್‌ಕಾಮ್ ಸಹಭಾಗಿತ್ವದಲ್ಲಿ ದೇಶದ ಪ್ರಪ್ರಥಮ ಸ್ಟಾರ್ಟ್-ಅಪ್ ವೇರ್ ಹೌಸ್ ಸ್ಥಾಪಿಸಲಾಗಿದೆ.
  • ಕರ್ನಾಟಕದ ೪ ನೀತಿಯು ಈ ವಲಯದ ಬೆಳವಣ ಗೆಯನ್ನು ರಾಜ್ಯದ ಇತರೆ ಭಾಗಗಳಲ್ಲಿ ವಿಸ್ತರಿಸುವ ಗುರಿ ಹೊಂದಿರುತ್ತದೆ.
  • ಈ ನೀತಿಗಳ ಅನ್ವಯ ಸ್ಟಾರ್ಟ್‌ಅಪ್‌ ಯೋಜನೆಗಳನ್ನು ಪ್ರೋತ್ಸಾಹಿಸಲು ಸಣ್ಣ, ಮಧ್ಯಮ ಉದ್ಯಿಮೆಗಳೂ ಸೇರಿದಂತೆ ಬೃಹತ್ ಉದ್ಯಮಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
  • ಕರ್ನಾಟಕ ಸ್ಟಾರ್ಟ್-ಅಪ್ ನೀತಿ ೨೦೧೫-೨೦ರ ಮೇರೆಗೆ ಸ್ಟಾರ್ಟ್-ಅಪ್ ಕ್ಷೇತ್ರದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ವಿನೂತನ ಸಾಮಾಜಿಕ ಪರಿಣಾಮ ವ್ಯವಸ್ಥೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತು ಉದ್ಯಮದೊಂದಿಗೆ ಸಹಭಾಗಿತ್ವ ಸೃಷ್ಠಿಗೆ ಯೋಜಿಸಲಾಗಿದೆ.
  • ವಿವಿಧ ಹೂಡಿಕೆ ವಲಯಗಳು ಮತ್ತು ಮಾಹಿತಿ ತಂತ್ರಜ್ಞಾನ ಪಾರ್ಕುಗಳಲ್ಲಿ ೯೦೦ ಎಕರೆಗಳಿಗೂ ಅಧಿಕ ವಿಸ್ತೀರ್ಣದ ಭೂಮಿಯು ಲಭ್ಯವಿರುತ್ತದೆ.

ಮೂಲ ಸೌಕರ್ಯ ಅಭಿವೃದ್ಧಿ

  • ಸಾರ್ವಜನಿಕ ಖಾಸಗಿ ಸಹಭಾಗಿತ್ವ ನೀತಿಯನ್ವಯ ಖಾಸಗಿ ಕ್ಷೇತ್ರದ ಸಹಯೋಗದೊಂದಿಗೆ ಹಲವಾರು ಪ್ರಮಖ ಯೋಜನೆಗಳನ್ನು ಜಾರಿಜೊಳಿಸಿ ಕರ್ನಾಟಕವು ಹೂಡಿಕೆ ಸ್ನೇಹಿ ರಾಜ್ಯವಾಗಿದೆ.
  • ಭಾರತದಲ್ಲಿಯೇ ೩ನೇ ಅತಿ ದೊಡ್ಡ ಹಾಗೂ ಹೆಚ್ಚು ಆದ್ಯತೆಯನ್ನು ಪಡೆದಿರುವ ಬೆಂಗಳೂರ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜಿ.ವಿ.ಕೆ ಸಂಸ್ಥೆಯ ಸಯಭಾಗಿತ್ವದಲ್ಲಿ ನಿರ್ಮಿಸಲಾಗಿದೆ.
  • ಸಾರ್ವಜನಿಕ ಖಾಸಗಿ ಸಹಭಾಗಿತ್ವ ನೀತಿಯನ್ನು ಅಳವಡಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೂಲ ಪ್ರವರ್ತಕವಾಗಿದೆ.
  • ನಗರ ನೀರು ಸರಬರಾಜು, ಬಸ್ ನಿಲ್ದಾಣಗಳ ಅಭಿವೃದ್ಧಿ ಮುಂತಾದ ಯೋಜನೆಗಳು ಈ ವಲಯದಲ್ಲಿ ಯಶಸ್ಸು ಸಾಧಿಸಿದ ಕ್ಷೇತ್ರಗಳಾಗಿವೆ.
  • ಇತ್ತೀಚೆಗೆ ಸಚಿವ ಸಂಪುಟವು ಅನುಮೋದಿಸಿದ ಮೂಲಸೌಕರ್ಯ ಅಭಿವೃದ್ಧಿ ನೀತಿಯ ಅನುಸಾರ, ಹಲವಾರು ಆಯಕಟ್ಟಿನ ಮೂಲ ಸೌಕರ್ಯ ಯೋಜನೆಗಳೂ ಸೇರಿದಂತೆ ಹೊಸ ಸಾಮರ್ಥ್ಯ ಸೃಷ್ಟಿ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತಿ ರುವ ಯೋಜನೆಗಳ ನಿರ್ವಹಣೆ ಕುರಿತಂತೆ ವಿವಿಧ ಸಂಗ್ರಹಣಾ ಮಾದರಿಗಳಲ್ಲಿ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುತ್ತದೆ.
  • ರಾಜ್ಯದಲ್ಲಿ ಹಲವಾರು ಮೂಲ ಸೌಕರ್ಯ ಹೂಡಿಕೆ ಯೋಜನೆಗಳಿಗೆ ಹಸಿರು ನಿಶಾನೆ ದೊರಕಿದ್ದು, ಈ ಯೋಜನೆಗಳನ್ನು ಸಹಭಾಗಿತ್ವದ ಅಡಿಯಲ್ಲಿ ಜಾರಿಗಳಿಸಲ ರಾಜ್ಯವು ಪುನಃ ಪ್ರಖ್ಯಾತ ಹೂಡಿಕೆದಾರರನ್ನು ನಿರೀಕ್ಷಿಸುತ್ತಿದೆ.
  • ರಸ್ತೆಗಳು: ರಸ್ತೆ ವಲಯದಲ್ಲಿ ಕೆಶಿಪ್ ಮತ್ತು ಕೆ.ಆರ್.ಡಿ.ಸಿ.ಎಲ್. ಅಡಿಯಲ್ಲಿ ರೂ ೪೬೦೦ ಕೋಟಿ ಮೊತ್ತದ ಸುಮಾರು ೧೯೦೦ ಕಿ.ಮೀ ವ್ಯಾಪ್ತಿಯ ೨೩ ರಸ್ತೆ ಯೋಜನೆಗಳನ್ನು ಗುರುತಿಸಲಾಗಿದೆ.
  • ನೀರು: ರಾಜ್ಯದ ನಗರ ಪ್ರದೇಶಗಳಲ್ಲಿ ನಿರಂತರ ನೀರು ಸರಬರಾಜು ಖಚಿತಪಡಿಸಲು ನೀರು ಪೂರೈಕೆ ಮತ್ತು ನೀರಿನ ಪುನರ್ಬಳಕೆ ಕಾರ್ಯಕ್ರಮಕ್ಕೆ ರೂ ೧೨೫ ಕೋಟಿ ಹೂಡಿಕೆಯ ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ.
  • ಬಂದರು: ರಾಜ್ಯವು ೩೩೦ ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದ್ದು ಸಮುದ್ರ ಮಾರ್ಗ ವ್ಯವಹಾರಗಳನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ರಾಜ್ಯದಲ್ಲಿ ಬಂದರುಗಳ ಅಭಿವೃದ್ಧಿ ಅಡಿಯಲ್ಲಿ ಪಶ್ಚಿಮ ಕರಾವಳಯ ತದಡಿ, ಬೇಲೆಕೇರಿ, ಕಾರವಾರ ಬಂದರುಗಳನ್ನು ಗುರುತಿಸಲಾಗಿದೆ.
  • ವಿಮಾನ ನಿಲ್ದಾಣ: ಏರ್-ಸ್ಟ್ರಿಪ್ ಮತ್ತು ಹೆಲಿಪ್ಯಾಡ್ ನಿರ್ಮಿಸಿ ಸ್ಥಳೀಯ ವಾಯು ಸಾರಿಗೆ ಮತ್ತು ಏರ್-ಟ್ಯಾಕ್ಸಿ ಸೇವೆಯನ್ನು ಒದಗಿಸಲು ರಾಜ್ಯದ ಆಂತರಿಕ ವಾಯುಯಾನ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ರಾಜ್ಯದಲ್ಲಿ ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವಾರು ಪ್ರಮುಖ ನಗರಗಳಿದ್ದು, ಕೊಡಗು ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವಾರು ಪ್ರವಾಸಿ ತಾಣಗಳನ್ನು ಅನಿಗದಿತ ವಾಯು ಟ್ಯಾಕ್ಸಿ ಸೇವೆಯೊಂದಿಗೆ ಬೆಂಗಳೂರಿಗೆ ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಭಾರತ ಸರ್ಕಾರದ ಸ್ಥಳೀಯ ವಾಯುಯಾನ ನೀತಿ ಹಾಗೂ ರಾಜ್ಯದ ಏರ್-ಸ್ಟ್ರಿಪ್ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಹೂಡಿಕೆದಾರರನ್ನು ಆಹ್ವಾನಿಸುತ್ತದೆ.
  • ಕೈಗಾರಿಕಾ ಮೂಲ ಸೌಕರ್ಯ: ಕರ್ನಾಟಕವು ರಾಜ್ಯದಾದ್ಯಂತ ಉತ್ಪಾದನಾ ವಲಯದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಉದ್ಯಮ ಯೋಜನೆಗಳ ಬೆಳವಣಿಗೆಗೆ ಪೂರಕವಾಗುವಂತಹ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕವು ಎರಡು ಪ್ರಮುಖ ಔದ್ಯೋಗಿಕ ಕಾರಿಡಾರ್ ಗಳ ತವರಾಗಿದೆ. ಚೆನ್ನೈ-ಬೆಂಗಳೂರು-ಚಿತ್ರದುರ್ಗ ಔದ್ಯೋಗಿಕ ಕಾರಿಡಾರ್ ಹಾಗೂ ಬೆಂಗಳೂರು ಮುಂಬೈ ಆರ್ಥಿಕ ಕಾರಿಡಾರ್ ವ್ಯಾಪ್ತಿಯಲ್ಲಿ ಭಾರತ ಸರ್ಕಾರ ಹಾಗೂ ಮಲ್ಟಿ ಲ್ಯಾಟರಲ್ ಏಜೆನ್ಸಿಗಳ ಹೂಡಿಕೆಯ ಸಹಭಾಗಿತ್ವದ ಅಡಿಯಲ್ಲಿ ಜಾಗತಿಕ ಮಟ್ಟದ ೯ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇನ್ನುಳಿದಂತೆ ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆ, ಮಂಗಳೂರಿನಲಿ ಸಾಗರೋತ್ಪನ್ನಗಳ ಆಹಾರ ಪಾರ್ಕ್ ಸ್ಥಾಪನೆ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಪ್ರಾಥವಿಕ ತಂತ್ರಜ್ಞಾನ ವಲಯದಲ್ಲಿ ರಾಜ್ಯದಲ್ಲೆಡೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
  • ನಗರ ಮೂಲಸೌಕರ್ಯ: ದಾಬೋಲ್-ಬೆಂಗಳೂರು ಗ್ಯಾಸ್ ಪೈಪ್‌ಲೈನ್ ಯೋಜನೆಯ ಅಡಿಯಲ್ಲಿ ರಾಜ್ಯದ ಹಲವಾರು ನಗರ ಪ್ರದೇಶಗಳನ್ನು ಗ್ಯಾಸ್ ವಿತರಣಾ ಜಾಲದಲ್ಲಿ ಜೋಡಿಸುವ ದಿಸೆಯಲ್ಲಿ ರಾಜ್ಯಕ್ಕೆ ಅನನ್ಯ ಅವಕಾಶ ಒದಗಿಸುತ್ತಿದೆ. ಈ ವಲಯದಲ್ಲಿ ಪ್ರಥಮ ಹೂಡಿಕೆಯ ಅವಕಾಶವನ್ನು ಬೆಂಗಳೂರಿನಲ್ಲಿ ೫ ವರ್ಷಗಳ ಅವಧಿಯಲ್ಲಿ ೧೫೮೩ ಇಂಚು- ಕಿಮೀ ಯೋಜನೆಯಲ್ಲಿ ಒದಗಿಸಲಾಗಿದ್ದು, ಮುಂದಿನ ೨೫ ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂರ ಜಿಲ್ಲೆಗಳ ವ್ಯಾಪ್ತಿಪಿಗೊಳಪಡಿಸಲು ಯೋಜಿಸಲಾಗಿದೆ. ಪ್ರಥಮ ಹಂತದ ಯೋಜನೆಯಲ್ಲಿ ರೂ ೭೫೦ ಕೋಟಿ ಮೊತ್ತದ ಹೂಡಿಕೆಯಲ್ಲಿ ೧.೫ ಲಕ್ಷ ಗೃಹ ಬಳಕೆ ಗ್ರಾಹಕರಿಗೆ ಪ್ರಯೋಜನ ದೊರಕಿಸುವ ಗುರಿ ಹೊಂದಲಾಗಿದೆ.

ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ

  • ಕರ್ನಾಟಕವು ಪುಷ್ಪೋದ್ಯಮ ಮತ್ತು ತೋಟಗಾರಿಕೆ ಉದ್ಯಮದಲ್ಲಿ ಮಂಚೂಣಿಯಲ್ಲಿದೆ. ದೇಶದಲ್ಲಿ ಗೆರ್ಕಿನ್ಸ್ ಹಾಗೂ ಇನ್ನಿತರರ ವಿವಿಧ ಪುಷ್ಟೋತ್ಪನ್ನಗಳನ್ನು ಕರ್ನಾಟಕವು ಅತಿ ಹೆಚ್ಚು ರಫ್ತು ಮಾಡುವ ರಾಜ್ಯವಾಗಿದೆ.
  • ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿ ರಾಷ್ಟ್ರ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕವು ಈ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ.
  • ಕೃಷಿ ಮತ್ತು ವೈನ್ ಮೀಸಲಾದ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿ, ಉತ್ಪನ್ನಗಳ ಮಾರಕಟ್ಟೆ ವ್ಯವಸ್ಥೆಗೆ ಏಕೀಕೃತ ವೇದಿಕೆಯನ್ನು ಒದಗಿಸಿ ಕರ್ನಾಟಕವು ಈ ವಲಯದ ಸುಧಾರಣೆಯಲ್ಲಿ ಮಂಚೂಣಿಯಲ್ಲಿದೆ.
  • ದೇಶದ ಒಟ್ಟಾರೆ ಕಾಫೀ ಉತ್ಪಾದನೆಯ ಪ್ರತಿಶತ ೭೦ರಷ್ಟು ಕಾಫೀ ಉತ್ಪಾದಿಸುವ ಕರ್ನಾಕವು ದೇಶದ ಕಾಫೀ ರಾಜಧಾನಿಯಾಗಿದೆ.
  • ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ ವಲಯದ ಸಮರ್ಥನೀಯ ಬೆಳವಣಿಗೆಯನ್ನು ಸಾಧಿಸಲು ಕರ್ನಾಟಕವು ಕರ್ನಾಟಕ ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ ನೀತಿ ೨೦೧೫ನ್ನು ಜಾರಿಗೊಳಿಸಿದೆ. ಈ ನೀತಿಯನ್ವಯ ಸಮಾನ ರೀತಿಯ ಪ್ರೋತ್ಸಾಹ ನೀಡಲು ರಾಜ್ಯವನ್ನು ಏಕೈಕ ವಲಯವನ್ನಾಗಿ ಪರಿಗಣಿಸಲಾಗಿದೆ.
  • ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ದಿಸೆಯಲ್ಲಿ ಸೋಲಾರ್ ಕೃಷಿ ಪಂಪ್‌ಗಳು, ತುಂತುರು ಮತ್ತು ಹನಿ ನೀರಾವರಿ ಹಾಗೂ ಸಾವಯವ ಕೃಷಿ ವಲಯದಲ್ಲಿ ಬಂಡವಾಳ ಹೂಡಿಕೆಗೆ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ.

ಪ್ರವಾಸೋದ್ಯಮ

  • ಕರ್ನಾಟಕವು ಸಮಗ್ರ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತಮ ರಾಜ್ಯ ಎಂದು ೨೦೧೫ರ ಟ್ರಾವೆಲ್ ಅವಾರ್ಡ್ ಪ್ರಶಸ್ತಿ ಪಡೆದಿರುತ್ತದೆ.
  • ಕರ್ನಾಟಕವು ವನ್ಯಜೀವಿ, ಪ್ರೇಕ್ಷಣೀಯ ನಗರಗಳು, ಪಾರಂಪರಿಕ ಕಟ್ಟಡಗಳು, ಸಾಹಸ ಕ್ರೀಡೆಗಳು, ಸಮುದ್ರ ತಟಗಳು ಮತ್ತು ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ ವೈವಿಧ್ಯಮಯ ಪ್ರವಾಸಿ ತಾಣಗಳ ತವರಾಗಿದೆ.
  • ೨೦೦೮ನೇ ಸಾಲಿನಿಂದ ೨೦೧೩ನೇ ಸಾಲಿನ ಅವಧಿಯಲ್ಲಿ ಪ್ರವಾಸಿಗರ ಭೇಟಿಯಲ್ಲಿ ೭ ಪಟ್ಟು ಹೆಚ್ಚಾಗಿದೆ.
  • ಪ್ರೈಡ್ ಆಫ್ ಸೌಥ್, ಸದರ್ನ್ ಸ್ಪೆಂಡರ್ ಮುಂತಾದ ಐಷಾರಾಮಿ ರೈಲುಗಳು ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ಕರ್ನಾಟಕದ ವಿವಿಧ ಪ್ರವಾಸಿ ತಾಣಗಳೊಂದಿಗೆ ಸಂಪರ್ಕ ಬೆಳೆಸುತ್ತಿದ್ದು ಜಾಗತಿಕ ಮಟ್ಟದ ಪ್ರವಾಸಿ ಅನುಭವವನ್ನು ನೀಡುತ್ತದೆ.
  • ರಾಜ್ಯದಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನಂತಹ ೧೮ ರೆಸಾರ್ಟ್‌ಗಳು ಮತ್ತು ೨ ಪಾರಂಪರಿಕ ಹೋಟೆಲ್‌ಗಳು ಪರಿಸರ ಸ್ನೇಹಿ ಮತ್ತು ಸಾಹಸ ಪ್ರವಾಸೋದ್ಯಮವನ್ನು ಬೆಳೆಸುತ್ತಿವೆ.
  • ಕನಾಟಕ ಸರ್ಕಾರವು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಗುಣಮಟ್ಟದ ಸೇವೆ, ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದು ಕರ್ನಾಟಕ ಪ್ರವಾಸೋದ್ಯಮ ವಾಣಿಜ್ಯ ಸೌಲಭ್ಯಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
  • ಹೊಸ ಪ್ರವಾಸೋದ್ಯಮ ನೀತಿ ೨೦೧೫-೧೯ ಕರ್ನಾಟಕವನ್ನು ಪ್ರವಾಸಿಗರಿಗೆ ಆದ್ಯತೆಯ ಭೇಟಿ ತಾಣವನ್ನಾಗಿಸುವ ಗುರಿ ಹೊಂದಿದು ಬೃಹತ್ ಪ್ರವಾಸೋದ್ಯಮ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ.
  • ರೂ. ೧೧೦೦ ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಸಾಮರ್ಥ್ಯವನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಗುರುತಿಸಲಾಗಿದ್ದು ಹೀಗೆ ವರ್ಗೀಕರಿಸಲಾಗಿದೆ. ವಿಹಾರ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳ ಪ್ರವಾಸೋದ್ಯಮ (ಕೇಬಲ್ ಕಾರ್ ಮತ್ತು ಜಲಯಾನ), ಹೋಟೆಲ್ ಮತ್ತು ರೆಸಾರ್ಟ್ಸ್, ಥೀಮ್ ಪಾರ್ಕ್, ರಸ್ತೆ ಬದಿಯ ಸೌಕರ್ಯಗಳು

 

ವಾಹನ ಮತ್ತು ವಾಹನ ಬಿಡಿ ಭಾಗಗಳು

  • ಕರ್ನಾಟಕವು ೭ ಪ್ರಮುಖ ಓಇಎಮ್‌ ಹಾಗೂ ೫೦ಕ್ಕೂ ಹೆಚ್ಚು ವಾಹನ ಬಿಡಿ ಭಾಗಗಳ ಉತ್ಪಾದನಾ ಘಟಕಗಳನ್ನು ಹೊಂದಿದ್ದು ವಾಹನ ಉದ್ಯಮದ ತವರಾಗಿದೆ.
  • ದೇಶದ ವಾಹನ ಮತ್ತು ವಾಹ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಕರ್ನಾಟಕವು ೪ನೇ ಸ್ಥಾನದಲ್ಲಿದ್ದು ರಾಷ್ಟ್ರೀಯ ಉತ್ಪಾದನೆಯಲ್ಲಿ ಪ್ರತಿಶತ ೮.೫ರಷ್ಟು ಕೊಡುಗೆ ನೀಡುತ್ತದೆ.
  • ರಾಜ್ಯದ ೨೦೧೪-೧೯ರ ಕೈಗಾರಿಕಾ ನೀತಿಯಲ್ಲಿ ವಾಹನ ಉದ್ಯಮವು ಮಹತ್ವದ ಸ್ಥಾನ ಪಡೆದುಕೊಂಡಿದೆ. ರಾಜ್ಯವು ಕರ್ನಾಟಕ ವಾಹನ ಸಂಶೋಧನೆ ಮತ್ತು ವಿನೂತನ ಕೇಂದ್ರ ಸ್ಥಾಪನೆಗೆ ಉಪಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ತಾಂತ್ರಿಕ ವಲಯದಲ್ಲಿ ದೇಶದಲ್ಲಿ ಕರ್ನಾಟಕ ಸ್ಥಾನವನ್ನು ಬಲಪಡಿಸಲು ಎಫ್‌.ಟಿ.ಡಬ್ಲ್ಯೂ.ಝಡ್‌ ಸ್ಥಾಪಿಸಲು ಯೋಜಿಸಿದೆ. ಈ ನೀತಿಯ ಅನ್ವಯ ವಾಹನ ಉದ್ಯಮ ವಲಯಕ್ಕೆ ಅಲ್ಟ್ರಾಮೆಗಾ (ರೂ.೫೦೦- ೧೦೦೦ ಕೋಟಿ) ಮತ್ತು ಸೂಪರ್ ಮೆಗಾ (ರೂ. ೧೦೦೦ ಕೋಟಿಗೂ ಹೆಚ್ಚು) ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ನೀಡುತ್ತದೆ.
  • ಕರ್ನಾಟಕವು ೧೪ ಮಿಲಿಯನ್‌ಗೂ ಹೆಚ್ಚು ನೋಂದಾಯಿತ ವಾಹನಗಳನ್ನು ಹೊಂದಿದ್ದು, ವಾಹನ ಮತ್ತು ವಾಹನ ಬಿಡಿ ಭಾಗಗಳ ಉತ್ಪಾದನೆಯಲ್ಲಿ ದೇಶದ ಮೊದಲ ಐದು ವಾಹನ ಉದ್ಯಮ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ.
  • ರಾಜ್ಯದಾದ್ಯಂತ ೧೯೦೦೦ ಎಕರೆ ಜಮೀನಿನ ಲ್ಯಾಂಡ್ ಬ್ಯಾಂಕ್ ಹೊಂದಿದ್ದು ೨೦೧೪-೧೫ರ ಕೈಗಾರಿಕಾ ನೀತಿಯ ಅನ್ವಯ ವಾಹನ ಉದ್ಯಮ ವಲಯಕ್ಕೆ ಹೆಚ್ಚಿನ ಪ್ರಮಾಣದ ಪ್ರೋತ್ಸಾಹ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡುತ್ತದೆ.

 

ಯಂತ್ರೋಪಕರಣಗಳು ಮತ್ತು ಬೃಹತ್ ಉದ್ಯಮಗಳು

  • ವಿಶಿಷ್ಟ ಉದ್ದೇಶಗಳಿಗೆ ಮೀಸಲಾಗಿರುವ ಯಂತ್ರೋಪ ಕರಣಗಳ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
  • ಕರ್ನಾಟಕವು ಬಂಡವಾಳ ಸರಕು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿರುವ ದೇಶದ ಮೊದಲ ಐದು ರಾಜ್ಯಗಳಲ್ಲಿ ಸಾಮಾನ್ಯ ಉದ್ದೇಶಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಹೊರತುಪಡಿಸಿ ವಿಶಿಷ್ಟ ಉದ್ದೇಶಗಳಿಗೆ ಉತ್ಪಾದಿಸುವ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ತೊಡಗಿರುವ ಏಕೈಕ ರಾಜ್ಯವಾಗಿದೆ. ಇದು ರಾಜ್ಯವು ಉನ್ನತ ಮೌಲ್ಯದ ಉತ್ಪಾದನೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಬಿಂಬಿಸುತ್ತದೆ.
  • ಕರ್ನಾಟಕವು ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮೌಲ್ಯವನ್ನು ಆಧರಿಸಿ ಹೇಳುವುದಾದರೆ ದೇಶದ ಪ್ರತಿಶತ ೬೦ರಷ್ಟು ಯಂತ್ರೋಪಕರಣಗಳನ್ನು ಬೆಂಗಳೂರಿನಲ್ಲಿ ಉತ್ಪಾದಿಸಲಾಗುತ್ತದೆ.
  • ಭಾರತೀಯ ಯಂತ್ರೋಪಕರಣಗಳ ಉತ್ಪಾದನಾ ಸಂಘವು ಬೆಂಗಳೂರು ಹತ್ತಿರ ೩೦೦ ಎಕರೆ ಕ್ಷೇತ್ರದಲ್ಲಿ ದೇಶದ ಪ್ರಪ್ರಥಮ ಯಂತ್ರೋಪಕರಣ ಉತ್ಪಾದನಾ ಪಾರ್ಕ್ ಸ್ಥಾಪಿಸಲಾಗುತ್ತಿದೆ.
  • ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯಲ್ಲಿ ಮುಂದುವರೆದ ಯಂತ್ರೋಪಕರಣ ಪರೀಕ್ಷಾ ಸೌಲಭ್ಯವನ್ನು ಯಂತ್ರೋಪಕರಣ ಉದ್ಯಮ, ಡಿಐಪಿಪಿಮತ್ತು ಭಾರತ ಸರ್ಕಾರದ ಸಹಯೋಗದಿಂದ ಒದಗಿಸಲಾಗಿದೆ.
  • ರಾಜ್ಯದಾದ್ಯಂತ ೧೯೦೦೦ ಎಕರೆ ಜಮೀನಿನ ಲ್ಯಾಂಡ್ ಬ್ಯಾಂಕ್ ಹೊಂದಿದ್ದು ಯಂತ್ರೋಪಕರಣವು ವಿಶೇಷ ಉತ್ಪಾದನಾ ವಲಯ ಎಂದು ೨೦೧೪-೧೫ರ ಕೈಗಾರಿಕಾ ನೀತಿಯಲ್ಲಿ ಗುರತಿಸಲಾಗಿದೆ. ಈ ನೀತಿಯ ಅನ್ವಯ ಯಂತ್ರೋಪಕರಣ ವಲಯಕ್ಕೆ ಅಲ್ಟ್ರಾ ಮೆಗಾ (ರೂ.೫೦೦-೧೦೦೦ ಕೋಟಿ) ಮತ್ತು ಸೂಪರ್ ಮೆಗಾ (ರೂ.೧೦೦೦ ಕೋಟಿಗೂ ಹೆಚ್ಚು) ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ನೀಡುತ್ತದೆ.
  • ಚೆನ್ನೈ-ಬೆಂಗಳೂರು ಮತ್ತು ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಿಂದ ಉತ್ಪಾದನಾ ವಲಯದ ಕೈಗಾರಿಕೆಗಳಿಗೆ ಲಾಜಿಸ್ಟಿಕ್‌ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಪೂರಕ ವಾತಾವರಣ ನಿರ್ಮಾಣವಾಗಲಿಗೆ.

 

ಬಾಹ್ಯಾಕಾಶ ಮತ್ತು ರಕ್ಷಣೆ

  • ಬಾಹ್ಯಾಕಾಶ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕವು ಅವಿವಾದಿತ ನಾಯಕತ್ವ ಹೊಂದಿರುತ್ತದೆ. ಬಾಹ್ಯಾಕಾಶ ಮತ್ತು ಅಂತರಿಕ್ಷ ವಾಹಕಗಳ ಭಾರತದ ಒಟ್ಟಾರೆ ಉತ್ಪಾದನೆಯಲ್ಲಿ ಕರ್ನಾಟಕವು ಪ್ರತಿಶತ ೨೫ರಷ್ಟು ಕೊಡುಗೆ ನೀಡುತ್ತದೆ.
  • ರಕ್ಷಣೆ ಮತ್ತು ಸಾರ್ವಜನಿಕ ರಂಗದಲ್ಲಿ ಉಪ ಗುತ್ತಿಗೆಯನ್ನು ನಿರ್ವಹಿಸುತ್ತಿರುವ ಸುಮಾರು ೨೦೦೦ಕ್ಕೂ ಹೆಚ್ಚು ಪೂರೈಕೆದಾರರು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಹೊಂದಿರುವ ಕರ್ನಾಟಕವು ಬಲಿಷ್ಠ ಬುನಾದಿಯನ್ನು ಹೊಂದಿದೆ.
  • ಕರ್ನಾಟಕವು ದೇಶದ ಬಾಹ್ಯಾಕಾಶದ ರಫ್ತು ವಲಯದಲ್ಲಿ ಪ್ರತಿಶತ ೬೫ರಷ್ಟು ಕೊಡುಗೆ ನೀಡುತ್ತದೆ.
  • ರಾಷ್ಟ್ರದ ರಕ್ಷಣಾ ಬಡ್ಜೆಟ್ ಹೆಚ್ಚಳ ಮತ್ತು ನಾಗರೀಕ ವಿಮಾನಯಾನ ಜಾಗತಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಕರ್ನಾಟಕವು ವಿಶಿಷ್ಟ ಸ್ಥಾನವನ್ನು ಹೊಂದಿದ್ದು ಈ ವಲಯದ ಉತ್ಪಾದನೆಯಲ್ಲಿ ಬೆಳವಣಿಗೆಯನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿದೆ.
  • ರಾಜ್ಯದ ಬೆಳಗಾವಿಯಲ್ಲಿ ದೇಶದ ಪ್ರಥಮ ಬಾಹ್ಯಾಕಾಶ ವಲಯದ ಉತ್ಪಾದನಾ ವಿಶೇಷ ವಿತ್ತ ವಲಯವು ಕಾರ್ಯರಂಭಗೊಂಡಿದೆ.
  • ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ಸುಮಾರು ೯೫೦ ಎಕರೆ ಸ್ಥಳವನ್ನು ಬಾಹ್ಯಾಕಾಶ ರಂಗದ ವಿಶೇಷ ವಿತ್ತ ವಲಯ ಸ್ಥಾಪನೆಗೆ ಗುರುತಿಸಲಾಗಿದೆ.
  • ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದನೆಯ ಅತ್ಯುನ್ನತ ಸಂಸ್ಥೆಗಳನ್ನು ಹೊಂದಿರುವುದು ಕರ್ನಾಟಕದಲ್ಲಿ ಈ ವಲಯದ ಬೆಳವಣಿಗೆಗೆ ಪೂರಕವಾಗಿದೆ.
  • ಕರ್ನಾಟಕವು ಬಾಹ್ಯಾಕಾಶ ವಲಯವನ್ನು ಉತ್ತೇಜಿಸಲು ವಿಶಿಷ್ಟ ಬಾಹ್ಯಾಕಾಶ ನೀತಿಯನ್ನು ಜಾರಿಗೆ ತಂದಿದ್ದು, ಬಾಹ್ಯಾಕಾಶ ವಲಯದ ಬೆಳವಣಿಗೆಗೆ ಹಲವಾರು ನಿರ್ದಿಷ್ಟ ಉಪಕ್ರಮಗಳನ್ನು ಕೈಗೊಂಡಿದೆ.
  • ಮಂಚೂಣಿ ಘಟಕಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯತಿ, ನೋಂದಣಿ ಶುಲ್ಕದಲ್ಲಿ ವಿನಾಯತಿ, ವಿದ್ಯುತ್ ಸುಂಕದಲ್ಲಿ (ಯೋಜನೆಯ ವೆಚ್ಚವನ್ನು ಆಧರಿಸಿ ಸಮಯಾವಕಾಶ ವಿಸ್ತರಣೆ) ವಿನಾಯತಿ ಇತ್ಯಾದಿ.
  • ದೊಡ್ಡ, ಬೃಹತ್ ಮತ್ತು ಅತಿ ಬೃಹತ್ ಉದ್ದಿಮೆಗಳಿಗೆ ಪ್ರೋತ್ಸಾಹ ಮತ್ತು ವಿನಾಯತಿ ಕುರಿತಂತೆ ವಿಶೇಷ ಪ್ಯಾಕೇಜ್ ನೀಡುವುದು.
  • ಬೆಂಗಳೂರು ಬಾಹ್ಯಾಕಾಶ ಪಾರ್ಕ್ ಸ್ಥಾಪನೆ ಮತ್ತು ಬಾಹ್ಯಾಕಾಶ ವಿಶೇಷ ವಿತ್ತ ವಲಯದ ಬೆಳವಣಿಗೆಗಾಗಿ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ, ಪ್ರಯೋಗಾಲಯ ಕೇಂದ್ರಗಳು, ಹಾರ್ಡ್‌ವೇರ್ ತಂತ್ರಜ್ಞಾನ ಕೇಂದ್ರ, ಪ್ರಮಾಣೀಕರಣ ಸೇವೆಯನ್ನು ಹೊಂದಿರುವ ತಂತ್ರಜ್ಞಾನ ಕ್ರಿಯಾಶೀಲ ಕೇಂದ್ರ, ಇತ್ಯಾದಿ ಸೌಲಭ್ಯಗಳನ್ನು ನೀಡುವುದು.
  • ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ರಾಜ್ಯದ ಶಿವಮೊಗ್ಗ, ವಿಜಯಪುರ, ಹಾಸನ ಮತ್ತು ಕಲಬುರಗಿ ನಗರಗಳಲ್ಲಿ ಪರಿಸರ ಸ್ನೇಹಿ ವಿಮಾನ ನಿಲ್ದಾಣಗಳ ಸ್ಥಾಪನೆ.

 

ಜವಳಿ ಮತ್ತು ಸಿದ್ಧ ಉಡುಪು

  • ದೇಶದಲ್ಲಿ ಕರ್ನಾಟಕವು ಸಿದ್ಧ ಉಡುಪುಗಳ ತಯಾರಿಕಾ ರಾಜಧಾನಿಯಾಗಿದ್ದು, ೧.೫೬ ಬಿಲಿಯನ್ ಡಾಲರ್ ಮೌಲ್ಯದ ಸಿದ್ಧ ಉಡುಪುಗಳ ಉತ್ಪಾದನೆಯೊಂದಿಗೆ ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಪ್ರತಿಶತ ೨೦ರಷ್ಟು ಕೊಡುಗೆ ನೀಡುತ್ತದೆ.
  • ರಾಜ್ಯದಲ್ಲಿ ಕಚ್ಚಾ ವಸ್ತುಗಳು ಹೇರಳವಾಗಿದೆ. ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಪ್ರತಿಶತ ೬೫ರಷ್ಟು ರೇಷ್ಮೆ, ಪ್ರತಿಶತ ೧೨ರಷ್ಟು ಉಣ್ಣೆ ಹಾಗೂ ಹತ್ತಿ ಬಟ್ಟೆಯ ಪ್ರತಿಶತ ೬ರಷ್ಟು ಉತ್ಪಾದನೆಯು ಕರ್ನಾಟಕದ ಪಾಲು ಇರುತ್ತದೆ.
  • ಕರ್ನಾಟಕದಲ್ಲಿ ೧೪೪ ರೇಷ್ಮೆ ಅಭಿವೃದ್ಧಿ ಕೇಂದ್ರಗಳಿವೆ. ಖಾಸಗಿ ವಲಯದ ೧೬೮ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಇದುವರೆಗೂ ಸುಮಾರು ೧,೬೦,೦೦೦ ಜನರಿಗೆ ತರಬೇತಿ ನೀಡಲಾಗಿದೆ.
  • ರಾಜ್ಯವು ಅಮೇರಿಕ, ಇಂಗ್ಲೆಂಡ್, ಇಟಲಿ, ಜರ್ಮನಿ, ಪಶ್ಚಿಮ ಯುರೋಪ್, ಹಾಂಗ್‌ಕಾಂಗ್, ಟರ್ಕಿ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಸಿದ್ಧ ಉಡುಪುಗಳನ್ನು ರಫ್ತು ಮಾಡುತ್ತದೆ.
  • ತಾಂತ್ರಿಕ ಜವಳಿ ಉದ್ಯಮ (Builtech, Clothtech, Hometech, Meditech, ಇತ್ಯಾದಿ) ಉತ್ಪಾದನೆ ಯಲ್ಲಿ ರಾಜ್ಯವು ಮೈಸೂರು, ಬೆಂಗಳೂರು ಮತ್ತು ಹಾಸನದಲ್ಲಿ ಬೆಳವಣಿಗೆ ಸಾಮರ್ಥ್ಯವನ್ನು ಗುರುತಿಸಿದ್ದು ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಜವಳಿ ಉದ್ಯಮದ ಮುಂದಾಳತ್ವವನ್ನು ಹೊಂದುವ ನಿರೀಕ್ಷೆಯಿದೆ. ರಾಜ್ಯವು ತಾಂತ್ರಿಕ ಜವಳಿ ಉದ್ಯಮಕೆ ಸಂಬಂಧಿಸಿದಂತೆ ಈಗಾಗಲೇ ರೂ.೧೪೮೦ ಕೋಟಿ ಮೊತ್ತದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ.
  • ಹೊಸ ಜವಳಿ ನೀತಿ ೨೦೧೩-೧೮ರ ಅನುಸಾರ ರಾಜ್ಯವು ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಕೌಶಲ್ಯ ಅಭಿವೃದ್ಧಿ ಯೋಜನೆಗಳೊಂದಿಗೆ ರಾಜ್ಯದಾದ್ಯಂತ ಬಂಡವಾಳ ಹೂಡಿಕೆಯನ್ನು ಬಲಪಡಿಸಲಿದೆ.
  • ವಲಯವನ್ನು ಆಧರಿಸಿ ಆರ್ಥಿಕ ನೆರವಿನ ಮರುಪಾವತಿ.
  • ಹಸಿರು ಜವಳಿ ಪಾರ್ಕ್ ಮತ್ತು ಕಂದು ಜವಳಿ ಪಾರ್ಕ್‌ಗಳಲ್ಲಿ ಸಾಮಾನ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು.
  • ಹಿಂದುಳಿದ ಪ್ರದೇಶಗಳಲ್ಲಿ ಜವಳಿ ಪಾರ್ಕ್‌ಗಳ ಸ್ಥಾಪನೆಯನ್ನು ಉತ್ತೇಜಿಸುವುದು.
  • ಬೃಹತ್ ಯೋಜನೆಗಳಿಗೆ ಮರುಪಾವತಿ ಆಧಾರಿತ ಪ್ರೋತ್ಸಾಹಧನ ಮಂಜೂರಾತಿ.

 

ಔಷಧೀಯ ವಿಜ್ಞಾನ ಕೈಗಾರಿಕೆ

  • ದೇಶದ ಒಟ್ಟಾರೆ ಔಷಧೀಯ ವಿಜ್ಞಾನ ಕೈಗಾರಿಕಾ ವಲಯದ ಉತ್ಪಾದನೆಯ ಪ್ರತಿಶತ ೮ರಷ್ಟು ಕರ್ನಾಟಕ ರಾಜ್ಯದ ಕೊಡುಗೆಯಾಗಿದೆ.
  • ರಾಜ್ಯದ ಹಾಸನ ಮತ್ತು ಯಾದಗಿರಿ ನಗರದಲ್ಲಿ ಔಷಧಿಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಶೇಷ ವಿತ್ತವಲಯ ಸ್ಥಾಪಿಸಲಾಗಿದೆ.
  • ಕರ್ನಾಟಕವು ಔಷಧಿಯ ಉತ್ಪನ್ನಗಳ ರಫ್ತು ಮಾಡುವುದರಲ್ಲಿ ೫ನೇ ಶ್ರೇಯಾಂಕವನ್ನು ಹೊಂದಿದ್ದು ದೇಶದ ಒಟ್ಟಾರೆ ರಫ್ತಿನ ಪ್ರತಿಶತ ೧೨ರಷ್ಟು ಕೊಡುಗೆ ನೀಡುತ್ತದೆ.
  • ೨೦೧೨ರ ಕರ್ನಾಟಕ ಔಷಧೀಯ ವಿಜ್ಞಾನ ನೀತಿಯ ಅನುಸಾರ, ಔಷಧಿಯ ಉತ್ಪನ್ನಗಳ ವಲಯದಲ್ಲಿ ಬೃಹತ್ ಯೋಜನೆಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಲು ಮೂಲ ಸೌಕರ್ಯಗಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿಗಳಿಗೆ ಆದ್ಯತೆ ನೀಡಲಾಗಿದೆ.
  • ಪ್ರತಿಶತ ೨೬ರಷ್ಟು ಸರ್ಕಾರದ ವಂತಿಗೆಯೊಂದಿಗೆ ರೂ.೫೦ ಕೋಟಿ ಮೊತ್ತದ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸಲಾಗಿದ್ದು ಕರ್ನಾಟಕ ವೈದ್ಯಕೀಯ ವಿಜ್ಞಾನ ಪರಿಷತ್ ಸ್ಥಾಪನೆ ಮುಂತಾದ ಉಪಕ್ರಮಗಳನ್ನು ೨೦೧೨ರ ಕರ್ನಾಟಕ ಔಷಧಿಯ ವಿಜ್ಞಾನ ನೀತಿಯಲ್ಲಿ ಅಳವಡಿಸಲಾಗಿದೆ.

 

ಇಂಧನ

  • ಎಸ್‌ಸಿಎಡಿಎ ಪ್ರಸರಣ ವ್ಯವಸ್ಥೆ ಹೊಂದಿರುವುದರಿಂದ ಮತ್ತು ಯಾಂತ್ರೀಕೃತ ವಿತರಣಾ ವ್ಯವಸ್ಥೆಯನ್ನು ಅಳವಡಿಸುವ ಯೋಜನೆ ಪ್ರಗತಿಯಲ್ಲಿ ಇರುವುದರಿಂದ ಬೆಂಗಳೂರು (ಕರ್ನಾಟಕ) ಸ್ಮಾರ್ಟ್ ಗ್ರಿಡ್ ಸ್ಥಾಪನೆಗೆ ದೇಶದಲ್ಲಿಯೇ ಸೂಕ್ತವಾದ ಸ್ಥಳವಾಗಿದೆ. ಸ್ಥಳೀಯವಾಗಿ ದೊರಕುವ ಮಾಹಿತಿ ತಂತ್ರಜ್ಞಾನ ಹಾಗೂ ವೃತ್ತಿಪರ ನೈಪುಣ್ಯತೆಗಳು ಸ್ಮಾರ್ಟ್ ಗ್ರಿಡ್ ಸ್ಥಾಪನೆಗೆ ಅನುಕೂಲಕರವಾಗಲಿವೆ.
  • ಕರ್ನಾಟಕವು ಜಲವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ೭.೯ ಉಘ ಸಂಗ್ರಹಣಾ ಸಾಮರ್ಥ್ಯ ಹೊಂದಿರುತ್ತದೆ.
  • ಕಳೆದ ೫ ವರ್ಷಗಳ ಅವಧಿಯಲ್ಲಿ ಖಾಸಗಿ ವಲಯದಿಂದ ಅಳವಡಿಸಲಾದ ಸಾಮರ್ಥ್ಯದಲ್ಲಿ ಪ್ರತಿಶತ ೧೨ರಷ್ಟು ಏರಿಕೆ ದಾಖಲಾಗಿದೆ. ಖಾಸಗಿ ವಲಯದ ಪಾಲು ರಾಜ್ಯದ ಒಟ್ಟಾರೆ ಉತ್ಪಾದನೆಯ ಪ್ರತಿಶತ ೪೩ರಷ್ಟು (೬೫೮೨ ಮೆ.ವಾ) ಆಗಿರುತ್ತದೆ.
  • ಕರ್ನಾಟಕದಲ್ಲಿ ಹೆಚ್ಚುವರಿಯಾಗಿ ಅನುಕ್ರಮವಾಗಿ ೧೪ ಜಿ.ವಾ ಹಾಗೂ ೨೪.೭ ಜಿ.ವಾ ಪವನ ವಿದ್ಯುತ್ ಹಾಗೂ ಸೋಲಾರ್‌ ವಿದ್ಯುತ್‌ ಸಾಮರ್ಥ್ಯ ಗುರುತಿಸಲಾಗಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಆಕರ್ಷಿಸುವ ದಿಸೆಯಲ್ಲಿ ರಾಜ್ಯವು ನವೀಕರಿಸಬಹುದಾದ ಇಂಧನ ನೀತಿಗೆ ಈ ಕೆಳಗಿನಂತೆ ತಿದ್ದುಪಡಿಗಳನ್ನು ಅಳವಡಿಸಲಾಗಿದೆ.
  • ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೈಗಾರಿಕೆ ಸ್ಥಾನಮಾನ ನೀಡುವುದು. ಪವನ ವಿದ್ಯುತ್, ಸೋಲಾರ್ ವಿದ್ಯುತ್ ಹಾಗೂ ಬಯೋಮಾಸ್ ಯೋಜನೆಗಳನ್ನು ಉತ್ತೇಜಿಸಲು ಆಕರ್ಷಕ ದರಗಳ ಕೊಡುಗೆ, ಸರಳವಾದ ಭೂ ಪರಿವರ್ತನೆ ಮತ್ತು ಅರಣ್ಯ ಇಲಾಖೆಯ ತ್ವರಿತ ಅನುಮತಿ ನೀಡುವುದು.
  • ಡಿ ಕಟ್ಟಡ ನಿರ್ಮಾಣ ನಿಯಮಗಳಲಿ ಮೇಲ್ಛಾವಣಿ ಸೋಲಾರ್ ಉತ್ಪಾದನೆ ಘಟಕಗಳ ಸ್ಥಾಪನೆಗೆ ಫ್ಲೋರ್ ಕ್ಷೇತ್ರ ಅನುಪಾತಕ್ಕೆ ವಿನಾಯತಿ ನೀಡುವುದು.
  • ಸ್ಪರ್ಧಾತ್ಮಕ ದರ ಮತ್ತು ತೆರೆದ ಬಿಡ್ ಪ್ರಕ್ರಿಯೆ ಮೂಲಕ ಸೋಲಾರ್ ಉತ್ಪಾದನೆ ಘಟಕಗಳ ಬೆಳವಣಿಗೆಗೆ ಪ್ರೋತ್ಸಾಹಿಸುವುದು. ಸೋಲಾರ್ ಯೋಜನೆಗಳಿಗೆ ಓಪನ್ ಎಕ್ಸಸ್ ಶುಲ್ಕದಲ್ಲಿ ವಿನಾಯತಿ ಮತ್ತು ಪ್ರತಿಶತ ೧೦೦ರಷ್ಟು ಬ್ಯಾಂಕ್ ಸಾಲ ಮತ್ತು ಕೈಗಾರಿಕಾ ಸ್ನೇಹಿ ನಿಯಮಗಳನ್ನು ರೂಪಿಸುವುದು.
  • ಕೇಂದ್ರಿಯ ಅಬಕಾರಿ ಸುಂಕದಲ್ಲಿ ವಿನಾಯತಿ, ಕಸ್ಟಮ್ಸ್ ತೆರಿಗೆಯಲ್ಲಿ ವಿನಾಯತಿ ಮತ್ತು ಪ್ರತಿಶತ ೫೦ರಷ್ಟು ಮೌಲ್ಯಾಧಾರಿತ ತೆರಿಗೆಯ ಮರುಪಾವತಿ.
  • ಕರ್ನಾಟಕ ಸೋಲಾರ್ ನೀತಿ ೨೦೧೪-೨೧ರ ಅನುಸಾರ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.

 

 

ರಾಜ್ಯದಲ್ಲಿನ ವಿಶೇಷ ಆರ್ಥಿಕ ವಲಯ ನೀತಿ (ಎಸ್.ಇ.ಜೆಡ್):

ಕೇಂದ್ರ ಸರ್ಕಾರದ ಎಸ್‌ಇಜೆಡ್ ಅಭಿವೃದ್ಧಿ ಕಾರ್ಯಕ್ಕೆ ಕೈಗೂಡಿಸಲು ರಾಜ್ಯ ಸರ್ಕಾರದಿಂದ ಎಸ್‌ಇಜೆಡ್ ನೀತಿಯನ್ನು ಹೊರತರಲಾಗಿದ್ದು, ಕೇಂದ್ರ ಸರ್ಕಾರದ ಎಸ್‌ಇಜೆಡ್ ಕಾಯ್ದೆ ೨೦೦೫ ಮತ್ತು ನಿಯಮ ೨೦೦೬ಕ್ಕೆ ಪೂರಕವಾಗಿ ಸದರಿ ಎಸ್‌ಇಜೆಡ್ ನೀತಿಯನ್ನುನ್ನು ಹೊರತರಲಾಗಿದೆ. ಎಸ್‌ಇಜೆಡ್ ನೀತಿಯು ಉತಾ ದನೆ ಹಾಗೂ ಸೇವಾ ಕ್ಷೇತ್ರದಲ್ಲಿ ವಿದೇಶ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ ಉದ್ದಿಮೆಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿದೆ.

  • ಎಸ್‌ಇಜೆಡ್ ಅಭಿವೃದ್ದಿದಾರರು ಹಾಗೂ ಘಟಕಗಳಿಗೆ ಒಂದೇ ಹಂತದಲ್ಲಿ ಅನುಮೋದನೆ ನೀಡುವುದು. ಒಪ್ಪಿಗೆ ಮೇರೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವುದು.
  • ನಿರುಪಯುಕ್ತ, ಒಣ ಭೂಮಿ ಮತ್ತು ಏಕಬೆಳೆ ಬೆಳೆಯುವ ಭೂಮಿಯಲ್ಲಿ ಮಾತ್ರ ಎಸ್‌ಇಜೆಡ್ ಸ್ಥಾಪಿಸುವುದು.
  • ಅಭಿವೃದ್ದಿ ಆಯುಕ್ತರು, ಎಸ್‌ಇಜೆಡ್ ರವರಿಗೆ ಕಾರ್ಮಿಕ ಆಯುಕ್ತರ ಅಧಿಕಾರವನ್ನು ಹಸ್ತಾಂತರಿಸುವುದು.
  • ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಎಸ್‌ಇಜೆಡ್ ಅನುಷ್ಟಾನ ಹಾಗೂ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸುವುದು. ವಿಶೇಷ ಆರ್ಥಿಕ ವಲಯದ ಅಭಿವೃದ್ಧಿದಾರರಿಗೆ ಹಾಗೂ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸಲ್ಪಡುವ ಘಟಕಗಳಿಗೆ ರಿಯಾಯಿತಿ ಮತ್ತು ಸಹಾಯಧನ ಒದಗಿಸುವುದು.
  • ಸ್ಟಾಂಪ್ ಡ್ಯೂಟಿ ಮತ್ತು ವಿದ್ಯುತ್ ತೆರಿಗೆ ವಿನಾಯಿತಿ ನೀಡುವುದು.
  • ಸಾಮಾನ್ಯ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಧನ ಸಹಾಯ ನೀಡುವುದು.

ವಿಶೇಷ ಆರ್ಥಿಕ ವಲಯ ಮಂಡಳಿಯು ಎಸ್‌ಇಜೆಡ್ ಕಾಯಿದೆ ೨೦೦೫ರ ಅನ್ವಯ ೭೫ ಎಸ್‌ಇಜೆಡ್‌ಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ೩೫ಎಸ್‌ಇಜೆಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಎಸ್‌ಇಜೆಡ್‌ಗಳಲ್ಲಿ ರೂ.೭೨,೯೦೪ ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ೩,೨೩,೧೧೦ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ೪೫೭ ಎಸ್‌ಇಜೆಡ್ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಎಸ್‌ಇಜೆಡ್ ವಲಯದಿಂದ ೨೦೧೮-೧೯ ರಲ್ಲಿ ೯೭,೮೧೨.೦೦ ಕೋಟಿಗಳಷ್ಟು ರಫ್ತು ಮಾಡಲಾಗಿದೆ.

 

ಕರ್ನಾಟಕ ಪ್ರವಾಸೋದ್ಯಮ

ಕರ್ನಾಟಕ ರಾಜ್ಯವು ಹೊಂದಿರುವ ವಿಭಿನ್ನವಾದ ಪರಂಪರೆ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಆರೋಗ್ಯಯುತ ಪ್ರವಾಸೋದ್ಯಮ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವಿಪುಲ ಅವಕಾಶಗಳನ್ನು ಹೊಂದಿದೆ. ರಾಜ್ಯ ಸರ್ಕಾರವು ೧೯೮೮ ರಲ್ಲಿಯೇ ಪ್ರವಾಸೋದ್ಯಮವನ್ನು ಒಂದು ಉದ್ಯಮ ಎಂದು ಘೋಷಿಸಿರುತ್ತದೆ. ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮವನ್ನು ಬೆಳೆಸುವ ದೃಷ್ಟಿಯಿಂದ ೧೯೯೨ ರಿಂದ ಪ್ರತಿ ೫ ವರ್ಷಗಳ ಅವಧಿಗೆ ಒಂದು ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸುತ್ತಾ ಬಂದಿದೆ. ಈ ಪ್ರವಾಸೋದ್ಯಮ ನೀತಿಯಡಿಯಲ್ಲಿ ಖಾಸಗಿ ಬಂಡವಾಳದಾರರನ್ನು ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡುವಂತೆ ಉತ್ತೇಜಿಸಲು ನಾನಾ ರೀತಿಯ ವಿನಾಯಿತಿ ಮತ್ತು ರಿಯಾಯಿತಿಗಳನ್ನು ಹಾಗೂ ಸಹಾಯಧನ ಇತ್ಯಾದಿಗಳನ್ನು ಒದಗಿಸಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಅತ್ಯಂತ ಮಹತ್ವ ನೀಡಲಾಗಿದ್ದು. ಇದು ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಹಾಗೂ ರಾಜ್ಯದಲ್ಲಿ ಸ್ಥಳೀಯವಾಗಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಲು ಒಂದು ಪ್ರಮುಖ ಸಾಧನವಾಗಿರುತ್ತದೆ. ಮಾನವ ಸಂಪನ್ಮೂಲದ ಅಭಿವೃದ್ಧಿಗೂ ಸಹ ಇಲಾಖೆಯು ಒತ್ತು ನೀಡಿ ಆಸಕ್ತ ಯುವಕರಿಗೆ ಪ್ರವಾಸೋದ್ಯಮದ ವಿವಿಧ ಪ್ರಕಾರಗಳಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಪ್ರವಾಸೋದ್ಯಮ ಬೆಳವಣಿಗೆಯಿಂದ ಅನೇಕ ರೀತಿಯ ಲಾಭಗಳು ಹಾಗೂ ಪರಿಣಾಮಗಳು ಉಂಟಾಗುತ್ತದೆ. ಅವುಗಳೆಂದರೆ ಸ್ಥಳೀಯ ಜನರಿಗೆ ಸಾರಿಗೆ ಸೌಲಭ್ಯ ಔಪಚಾರಿಕ ಸೌಲಭ್ಯ, ತೋಟಗಾರಿಕೆ, ಹೈನುಗಾರಿಕೆ ಅಭಿವೃದ್ಧಿ ಮತ್ತು ಸಣ್ಣ ಪುಟ್ಟ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ಪ್ರವಾಸೋದ್ಯಮದ ಮೂಲಕ ಉತ್ಪತ್ತಿಯಾಗುವ ಆರ್ಥಿಕ ಬೆಳವಣಿಗೆ ಅಷ್ಟಿಷ್ಟಲ್ಲ. ಇದರ ಜೊತೆಗೆ ವಿವಿಧ ವಿಭಾಗಗಳಿಂದ ಉತ್ಪತ್ತಿಯಾಗುವ ಆದಾಯಗಳು ಅಂದರೆ, ಉದ್ಯೋಗಾವಕಾಶ, ಆರ್ಥಿಕ ಸ್ಥಿತಿಯ ಉನ್ನತೀಕರಣ ಮುಂತಾದವು ಗಳಿಂದಾಗಿ ಸ್ಥಳೀಯವಾಗಿ ವೈವಿಧ್ಯಮಯ ಫಲಿತಾಂಶ ಗಳೊಂದಿಗೆ ಸ್ಥಳೀಯ ಜನರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಮಾಡುವ ವೆಚ್ಚಗಳು ಅಧಿಕವಾಗುವುದು, ನೇರವಾಗಿ ಮತ್ತು ಪರೋಕ್ಷವಾಗಿ ಆರ್ಥಿಕ ಲಾಭ ಹಾಗೂ ಉದ್ಯೋಗ ಸೃಷ್ಟಿ, ತನ್ಮೂಲಕ ಪ್ರವಾಸೋದ್ಯಮವು ಬೆಳೆಸುವ ಆರ್ಥಿಕ ಮತ್ತು ಸಾಮಾಜಿಕ ಲಾಭಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಪ್ರವಾಸೋದ್ಯಮ ವಲಯದ ಪ್ರವಾಸಿ ತಾಣಗಳು, ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಸಂಪರ್ಕ ಅಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಂದಾಯ ಲಾಭಾಂಶಗಳು ಹೆಚ್ಚಲಿವೆ.

 

 

ಒಂದು ಪ್ರವಾಸಿ ತಾಣದ ಬೆಳವಣಿಗೆಯು ಆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿರುತ್ತದೆ. ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳು ಹೆಚ್ಚು ಮೂಲಭೂತ ಸೌಕರ್ಯಗಳನ್ನು ಪಡೆಯಲಿದ್ದು, ಆರ್ಥಿಕ ಚಟುವಟಿಕೆಗಳು, ಉದ್ಯೋಗವಕಾಶಗಳು ಹಾಗೂ ಸಾಮಾಜಿಕ ಲಾಭಗಳು ಹೆಚ್ಚುತ್ತವೆ. ಇದರ ಪರಿಣಾಮಗಳನ್ನು ಅಳೆಯಬೇಕಾದರೆ ಸದರಿ ತಾಣದ ಮೊದಲ ಸ್ಥಿತಿಗೂ ಪ್ರವಾಸೋದ್ಯಮ ಬೆಳವಣಿಗೆಯಾದ ನಂತರ ಇರುವ ಸ್ಥಿತಿಗೂ ಹೋಲಿಕೆ ಮಾಡುವ ಮೂಲಕ ತಿಳಿಯಬಹುದಾಗಿರುತ್ತದೆ. ಪ್ರವಾಸಿ ತಾಣದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ನೀರು ಸರಬರಾಜು, ಹೈನುಗಾರಿಕೆ, ಕರಕುಶಲ ವಸ್ತುಗಳು ಹಾಗೂ ಸಂಬಂಧಪಟ್ಟ ಅನೇಕ ವಿಭಾಗಗಳು ಪ್ರವಾಸೋದ್ಯಮದ ಅಭಿವೃದ್ಧಿ ಮೂಲಕ ವೃದ್ಧಿಗೊಳ್ಳುತ್ತವೆ. ಹೀಗಾಗಿ ಸ್ಥಳೀಯರ ಒಟ್ಟಾರೆ ಸಾಮಾಜಿಕ ಸ್ಥಿತಿ ಇದರ ಪರಿಣಾಮವಾಗಿ ಬೆಳವಣಿಗೆಯಾಗುತ್ತದೆ.

ಕರ್ನಾಟಕವು ವೈಶಿಷ್ಟ ಪೂರ್ಣವಾದ ಪ್ರವಾಸಿ ತಾಣಗಳ ನಿಧಿಯನ್ನು ಹೊಂದಿದ್ದು, ಪ್ರವಾಸಿಗರ ಅನ್ವೇಷಣೆಗಾಗಿ ಕಾದಿದೆ. ರಾಜ್ಯದ ಗಿರಿಶಿಖರಗಳ, ಬೆಳ್ಳನೆಯ ನೊರೆಮರಳುಗಳ ಕರಾವಳಿ ಪ್ರದೇಶ, ಅತ್ಯುತ್ತಮವಾದ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು ಹಾಗೂ ಅರಮನೆಗಳು ಜೊತೆಗೆ ಪ್ರವಾಸಿ ಪ್ರೇಮಿ ವಾತಾವರಣ, ಇದರ ಜೊತೆಗೆ ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು, ಎಲ್ಲದಕ್ಕಿಂತ ಹೆಚ್ಚಾಗಿ ಔದಾರ್ಯತೆ ಮೆರೆಯುವ ಇಲ್ಲಿನ ಜನ, ಭವ್ಯ ಪರಂಪರೆ ಮತ್ತು ಸಂಸ್ಕೃತಿ ಇವೆಲ್ಲವೂ ಒಟ್ಟುಗೂಡಿರುವ ಈ ರಾಜ್ಯವು ಪ್ರವಾಸಿಗರಿಗೆ ಸ್ವರ್ಗವಾಗಿದೆ. ರಾಜ್ಯದ ಗಂಧದ ಸುವಾಸನೆಯುಕ ಗಂಧದ ಕಡ್ಡಿಗಳು, ಮಧುರವಾದ ವಾಸನೆಯುಳ್ಳ ಕಾಫಿ ತೋಟ, ಮೈಸೂರು ಮಲ್ಲಿಗೆ, ನಾನಾ ಬಗೆಯ ಗುಲಾಬಿಗಳ ಸುವಾಸನೆ ರಾಜ್ಯದ ಉದ್ದಗಲಕ್ಕೂ ಹರಡಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರವಾಸಿಗರು ತಮ್ಮ ರಜೆಯನ್ನು ಸುಖಮಯವಾಗಿ ಅನುಭವಿಸಲು ಮತ್ತು ವಿಶ್ರಾಂತಿ ಪಡೆಯಲು ಅರಬ್ಬೀ ಸುಮುದ್ರದ ತೀರಗಳು, ಒಳನಾಡಿನ ಗಿರಿಶಿಖರಗಳು, ಪಶ್ಚಿಮ ಘಟ್ಟದ ಗಿರಿ ಕಂದಕಗಳು ಹಾಗೂ ಇದರಲ್ಲಿರುವ ನಾನಾ ಬಗೆಯ ಮರ ಗಿಡಗಳು, ಹೂಬನಗಳು, ಪ್ರಾಣಿ ಪಕ್ಷಿಗಳು, ಒಂದು ಬಗೆಯ ವಿನೂತನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ಆನೆ ಸವಾರಿಗೆ ಈ ರಾಜ್ಯವು ದೇಶದಲ್ಲೇ ಹೆಸರುವಾಸಿ ಹಾಗೂ ಪ್ರಥಮವಾಗಿರುತ್ತದೆ. ನೀಲಿ ನೀರಿನ ಕಡಲ ತೀರಗಳು, ಬೆಳ್ಳನೆಯ ನೊರೆ ತುಂಬಿದ ಅಲೆಗಳು, ಸಾಹಸ ಪ್ರಿಯರಿಗೆ ಔತಣ ನೀಡಲಿವೆ, ಇಲ್ಲಿನ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಳೆಯುಳಿಕೆಗಳು, ಅನೇಕ ರಾಜರುಗಳ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಇಲ್ಲಿನ ಭವ್ಯ ದೇವಾಲಯಗಳು, ಚರ್ಚುಗಳು, ಮಸೀದಿಗಳು, ಗುರುದ್ವಾರಗಳು ಹಾಗೂ ಜೈನ ಬಸದಿಗಳು ಧಾರ್ಮಿಕ ಸಾಮರಸ್ಯಕ್ಕೆ ಹಾಗೂ ಸುಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಧಾರಾಕಾರವಾಗಿ ಬೀಳುವ ಮುಂಗಾರು ಮಳೆ ಪ್ರವಾಸಿಗರ ಗಮನ ಸೆಳೆಯಲಿದೆ. ಒಟ್ಟಿನಲ್ಲಿ ಕರ್ನಾಟಕವು ಔದಾರ್ಯ ಪೂರ್ಣ, ಔಚಿತ್ಯಮಯ, ಪುರಾತನ ಪಾರಂಪರಿಕ ಸಂಸ್ಕೃತಿ ಹಾಗೂ ಆಧುನಿಕ ಸಂಸ್ಕೃತಿಗಳ ಬೆಸುಗೆಗೆ ಮಾದರಿಯಾಗಿದೆ. ಜನನಿಬಿಡವಾದ ನಗರ ಪ್ರದೇಶಗಳಲ್ಲೂ ಸುಖಮಯವಾದ ಹಾಗೂ ಆರಾಮದಾಯಕ ಜೀವನ ನಡೆಸಲು ಯೋಗ್ಯವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಎಂದೂ ಮರೆಯಲಾಗದ ಅನುಭವ, ಸಂಸ್ಕೃತಿ ಪರಿಚಯ ಹಾಗೂ ಪರಿಣಾಮಕಾರಿಯಾದ ಪ್ರವಾಸಿ ತಾಣಗಳ ಪ್ರಭಾವವನ್ನು, ನೆನಪುಗಳನ್ನು ತಮ್ಮೊಡನೆ ಒಯ್ಯಬಹುದಾಗಿದೆ. ಹೀಗಾಗಿ, “ಕರ್ನಾಟಕವನ್ನು ಒಂದು ರಾಜ್ಯ ಹಲವು ಜಗತ್ತುಗಳು”ಎಂದು ಕರೆಯಲಾಗುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಡಳಿತ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪ್ರಚಾರ ಮುಂತಾದ ಚಟುವಟಿಕೆಗಳು ನಿರ್ದೇಶನಾಲಯದ ವ್ಯಾಪ್ತಿಯಲಿ  ಬರುತ್ತವೆ. ಈ ನಿರ್ದೇಶನಾಲಯದ ಜೊತೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗಳಿರುತ್ತವೆ. ಪ್ರವಾಸೋದ್ಯಮ ನಿರ್ದೇಶನಾಲಯವು ಮೂಲಸೌಲಭ್ಯಗಳ ಅಭಿವೃದ್ಧಿ ಮತ್ತು ಪ್ರಚಾರ ಕಾರ್ಯಕಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುತ್ತಿದೆ. ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾತ್ರ ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ನಿರ್ವಹಿಸುತ್ತದೆ. ಇದಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಈ ಸಮಿತಿಯು ಜಿಲ್ಲೆಯಲ್ಲಿನ ಪ್ರವಾಸೋದ್ಯವ  ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಾಣಿಜ್ಯ ಚಟುವಟಿಕೆಗಳಾದ ಉಪಹಾರ ಗೃಹಗಳು, ವಸತಿ ಗೃಹಗಳು ಮತ್ತು ಕೆಫೆಟಿರಿಯಗಳ ನಿರ್ವಹಣೆ ಹಾಗೂ ರಾಜ್ಯದ ಒಳಗೂ ಹಾಗೂ ಹೊರಗು ವ್ಯವಸ್ಥಿತ ಪ್ರವಾಸಗಳನ್ನು ಏರ್ಪಡಿಸುವುದು ಮುಂತಾದವುಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಪ್ರವಾಸಿ ರೈಲು ಗೋಲ್ಡನ್ ಚಾರಿಯೇಟ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆಯು ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು ಸುಮಾರು ೧೮ ಪರಿಸರ ಪ್ರವಾಸೋದ್ಯಮ ಕೇಂದ್ರಗಳು ರಾಜ್ಯದ ಉದ್ದಗಲಕ್ಕೂ ಇದ್ದು ಇವು ದೇಶದಲ್ಲೇ ಅತ್ಯಂತ ಉತ್ತಮ ಪ್ರವಾಸಿ ಸೌಲಭ್ಯಗಳಾಗಿರುತ್ತವೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸುಮಾರು ೪ ಸ್ಥಳಗಳಲ್ಲಿ ಜಂಗಲ್ ಕ್ಯಾಂಪ್ಸ್‌ಗಳನ್ನು ಸದರಿ ಸಂಸ್ಥೆಯು ನಿರ್ವಹಿಸುತ್ತದೆ.

 

ಪ್ರವಾಸೋದ್ಯಮ ಮೂಲಸೌಲಭ್ಯ ಅಭಿವೃದ್ಧಿ

  • ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ.
  • ವಸತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಪ್ರಚಾರ ಸಾಮಗ್ರಿಗಳನ್ನು ಒದಗಿಸುವುದು.
  • ಸ್ವಚ್ಛ ಶೌಚಾಲಯ ಒದಗಿಸುವುದು.
  • ಪ್ರವಾಸಿಗರ ರಕ್ಷಣೆ.
  • ಕುಡಿಯುವ ನೀರಿನ ಸೌಲಭ್ಯ.
  • ಸೈನೇಜಸ್ ಅಂಡ್ ಹೋರ್ಡಿಂಗ್ಸ್ ಅಳವಡಿಸುವುದು.

 

ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಟ್ರಾವೆಲ್ ಮಾರ್ಟ್‌ಗಳಲ್ಲಿ ಇಲಾಖೆಯು ಸಕ್ರಿಯವಾಗಿ ಭಾಗವಹಿಸುತ್ತಿದೆ. ರೀಡರ್ಸ್ ಆಫ್ ಲೋನ್ಲಿ ಪ್ಲಾನೇಟ್ ಮ್ಯಾಗ್‌ಜೈನ್ ಇಂಡಿಯಾ ರವರಿಂದ ಕರ್ನಾಟಕವು ಬೆಸ್ಟ್ ಡೆಸ್ಟಿನೇಷನ್ ಫಾರ್ ಇಂಡಿಯನ್ ಕಲ್ಚರ್ ೨೦೧೭ ಎಂಬ ಪ್ರಶಸ್ತಿಯು ಇಲಾಖೆಗೆ ಲಭಿಸಿರುತ್ತದೆ.

 

ರಾಜ್ಯದಲ್ಲಿರುವ ಪ್ರವಾಸಿ ತಾಣಗಳಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಹಾಗೂ ಪ್ರಚಾರ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಇಲಾಖೆಯು ತನ್ನ ಮೊದಲ ಆದ್ಯತೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ದೃಢವಾದ ಕ್ರಮಗಳನ್ನು ತೆಗೆದುಕೊಂಡು ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಇದರ ಜೊತೆಗೆ ಪ್ರವಾಸೋದ್ಯಮ ಪ್ರಚಾರ ಹಾಗೂ ಉತ್ತಮ ಮಾರುಕಟ್ಟೆ ದೊರಕಿಸಿಕೊಡಲು ತನ್ನ ಎಲ್ಲಾ ಪ್ರಯತ್ನಗಳನ್ನು ಒಟ್ಟುಗೂಡಿಸಿ ಕ್ರಮವಹಿಸುತ್ತಿದೆ. ದೇಶ ಹಾಗೂ ವಿದೇಶಗಳ ಮಾರುಕಟ್ಟೆಗಳಲ್ಲಿ ನಡೆಯುವ ಪ್ರವಾಸಿ ಮೇಳಗಳಲ್ಲಿ ಇಲಾಖೆಯು ನೇರವಾಗಿ ಭಾಗವಹಿಸಿ, ರೋಡ್ ಶೋಗಳನ್ನು ನಡೆಸಿ ಪ್ರಚಾರ ನೀಡುವ ಮೂಲಕ ರಾಜ್ಯದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಕ್ರಮವಹಿಸಲಾಗುತ್ತಿದೆ.

ಇಡೀ ರಾಷ್ಟ್ರದಲ್ಲಿ ದೇಶಿಯ ಪ್ರವಾಸಿಗರ ಭೇಟಿಯಲ್ಲಿ ಕರ್ನಾಟಕ ರಾಜ್ಯವು ಐದನೇ ಸ್ಥಾನದಲ್ಲಿರುತ್ತದೆ.

 

ವಸತಿ ಸೌಲಭ್ಯಗಳು

ಪರಿಣಾಮಕಾರಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಚಾರ ಚಟುವಟಿಕೆಗಳ ಹಿನ್ನೆಲೆಯಲ್ಲಿ ರಾಜ್ಯವು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದ್ದು ಇದರ ಫಲವಾಗಿ ಹಾಲಿ ಇರುವ ಹೋಟೆಲ್ ಕೊಠಡಿಗಳ ಜೊತೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿರುತ್ತದೆ. ಪ್ರವಾಸಿಗರ ಬೇಡಿಕೆಗ ನುಗುಣವಾಗಿ ಹೋಟೆಲ್ ಕೊಠಡಿಗಳ ಸಂಖ್ಯೆಯನ್ನು ಏರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ಈಗಾಗಲೇ ಪ್ರಕಟಿಸಲಾಗಿರುವ ನೂತನ ಪ್ರವಾಸೋದ್ಯಮ ನೀತಿ (೨೦೧೫-೨೦) ಅಡಿಯಲ್ಲಿ ಹೋಟೆಲ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ ಅತಿಥಿ ಯೋಜನೆಯಡಿ ಹೋಂ ಸ್ಟೇ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅನೇಕ ಕುಟುಂಬಗಳು ಈ ಹೋಂ ಸ್ಟೇ ಯೋಜನೆಯನ್ನು ಅಳವಡಿಸಿಕೊಂಡು ತಮ್ಮ ಮನೆಯ ಒಂದು ಭಾಗವನ್ನು ಪ್ರವಾಸಿಗರಿಗಾಗಿ ನೀಡಲು ಮುಂದೆ ಬಂದಿರುತ್ತವೆ. ಇವುಗಳ ಪೈಕಿ ಕೆಲವು ಹೋಂ ಸ್ಟೇಗಳು ರಾಜ್ಯದಲ್ಲಿ ಅತ್ಯುತ್ತಮ ಹೋಂ ಸ್ಟೇಗಳಾಗಿರುತ್ತವೆ. ರಾಜ್ಯ ಸರ್ಕಾರವು ಈ ಅತಿಥಿ ಯೋಜನೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿರುತ್ತದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಾಗತಿಕ ಮಟ್ಟದ ಹೋಟೆಲ್ ಹಾಗೂ ಇತರ ಸೌಲಭ್ಯಗಳನ್ನು ಹೆಚ್ಚಿಸಲು ಇಲಾಖೆಯು ಕ್ರಮ ವಹಿಸಿರುತ್ತದೆ. ಉನ್ನತ ಮಟ್ಟದ ವಸತಿ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸುವಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತಿರುವ ಪರಿಸರ ಪ್ರವಾಸೋದ್ಯಮ ಸೌಲಭ್ಯsಗಳು ಸಹ ಸಹಕಾರಿಯಾಗಿವೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಮಯೂರ ಬ್ರಾಂಡ್ ಹೋಟೆಲ್‌ಗಳನ್ನು ಪ್ರವಾಸಿಗರ ಸೇವೆಗಾಗಿ ನಿರ್ವಹಿಸುತ್ತಿದೆ. ಇದಲ್ಲದೆ ಇಲಾಖೆಯು ಪ್ರಮುಖ ಹಾಗೂ ಮಧ್ಯಮ ವರ್ಗದ ಪ್ರವಾಸಿ ಸ್ಥಳಗಳಲ್ಲಿ ಯಾತ್ರಿನಿವಾಸ, ಡಾರ್ಮಿಟರಿ ವಸತಿ ಇತ್ಯಾದಿಗಳನ್ನು ಹೆಚ್ಚಿಸುವಲ್ಲಿ ಕ್ರಮ ವಹಿಸಿರುತ್ತದೆ.

ಆರ್ಥಿಕ ಚಟುವಟಿಕೆಯಾಗಿ ಪ್ರವಾಸೋದ್ಯಮ:

ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈಗಾಗಲೇ ಪ್ರವಾಸೋದ್ಯಮ ನೀತಿಯನ್ನು ೨೦೧೫-೨೦ ಪ್ರಕಟಿಸಲಾಗಿದೆ. ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಮೆಗಾ ಯೋಜನೆಗಳ ಅನುಷ್ಠಾನಕ್ಕಾಗಿ ಪಿ.ಪಿ.ಪಿ ಯೋಜನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗವಕಾಶಗಳು ಸರಳ ರೀತಿಯಲ್ಲಿದ್ದು ಇದು ಗ್ರಾಮೀಣ ಪ್ರದೇಶದ ಜನರಿಗೆ ಲಾಭದಾಯಕವಾಗಿದ್ದು ಕೌಶಲ್ಯ ಹೊಂದಿದ ಹಾಗೂ ಕೌಶಲ್ಯ ಹೊಂದಿಲ್ಲದ ಮಂದಿಗೆ ಉದ್ಯೋಗಗಳು ಲಭ್ಯವಾಗುತ್ತವೆ. ಒಂದು ಅಂದಾಜಿನಂತೆ ಜಾಗತಿಕ ಮಟ್ಟದಲ್ಲಿ ಜನಸಂಖ್ಯೆಯ ಪ್ರತಿಶತ ೮ ರಿಂದ ೧೧ ರಷ್ಟು ಜನರು ಪ್ರವಾಸೋದ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಉದ್ಯೊಗದಲ್ಲಿದ್ದಾರೆ ಎಂದ  ಅಂದಾಜಿಸಲಾಗಿದೆ. ಪ್ರವಾಸೋದ್ಯಮ ಆಕರ್ಷಣೆಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲೇ ಇರುವುದರಿಂದ ಸ್ಥಳೀಯರಿಗೆ ಹೇರಳ ಉದ್ಯೋಗವಕಾಶ ದೊರೆಯಲಿದೆ ಮತ್ತು ಸಮುದಾಯ ಅಭಿವೃದ್ಧಿಯಾಗಲಿದೆ. ಇಡೀ ರಾಷ್ಟ್ರದಲ್ಲಿ ಕರ್ನಾಟಕವು ಅತ್ಯಂತ ಹೆಚ್ಚು ಭರವಸೆಯ ಪ್ರವಾಸಿ ತಾಣವಾಗಿರುತ್ತದೆ. ರಾಜ್ಯದಲ್ಲಿ ಸೃಷ್ಠಿಯಾಗುವ ಪ್ರತಿ ಹತ್ತು ಉದ್ಯೋಗಾವಕಾಶಗಳಲ್ಲಿ ಒಂದು ಉದ್ಯೋಗವು ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯಾಗಿರುತ್ತದೆ.

 

ಆರ್ಥಿಕ ವಿನಿಮಯದಿಂದ ಆದಾಯ:

ಪ್ರವಾಸೋದ್ಯಮದ ವಹಿವಾಟಿನಿಂದ ಗಳಿಕೆಯಾಗುವ ವಿದೇಶಿ ವಿನಿಮಯವು ಇತರ ಕ್ಷೇತ್ರಗಳ ವಹಿವಾಟುಗಳಿಂದ ಗಳಿಕೆಯಾಗುವ ವಿನಿಮಯಕ್ಕೆ ಹೋಲಿಸಿದಾಗ ಹೆಚ್ಚಿನ ಪ್ರಮಾಣವಾಗಿದ್ದು ಹಾಗೂ ಆದಾಯವೂ ಹೆಚ್ಚು ಲಾಭದಾಯಕವಾಗಿದೆ. ಪ್ರವಾಸೋದ್ಯಮದಿಂದ ನೇರವಾಗಿ ಹಾಗೂ ಪರೋಕ್ಷವಾಗಿ ನಾನಾ ವಿಭಾಗಗಳಿಂದ ಆದಾಯವು ಗಳಿಕೆಯಾಗುತ್ತದೆ. ೨೦೧೬ ರ ವರ್ಲ್ಡ ಟ್ರಾವೆಲ್ ಅಂಡ್ ಟೂರಿಸಂ ಕೌನ್ಸಿಲ್ ವರದಿಯ ಪ್ರಕಾರ ಭಾರತದಲ್ಲಿ ಪ ವಾಸೋದ್ಯಮವು ಒಟ್ಟಾರೆ ಜಿ.ಡಿ.ಪಿ.ಯ ಶೇ.೯.೬ರಷ್ಟು ಕೊಡುಗೆ ನೀಡಿರುತ್ತೆ. ಇದರ ಜೊತೆಗೆ ಪ್ರವಾಸೋದ್ಯಮದಿಂದ ೪೦.೩೦ ಮಿಲಿಯನ್ ಉದ್ಯೋಗವಕಾಶಗಳು ೨೦೧೬ ನೇ ಸಾಲಿನಲ್ಲಿ ಲಭಿಸಿರುತ್ತವೆ. ಇದರಿಂದಾಗಿ ವಿಶ್ವದಲ್ಲಿ ಪ್ರವಾಸೋದ್ಯಮವು ಉದ್ಯೋಗ ಒದಗಿಸುವಲ್ಲಿ ೨ನೇ ಸ್ಥಾನದಲ್ಲಿರುತ್ತದೆ ಹಾಗೂ ಒಟ್ಟು ಲಭಿಸುವ ಉದ್ಯೋಗಾವಕಾಶಗಳಲಿ  ಶೇ.೯.೩ ರಷ್ಟು ಉದ್ಯೋಗಗಳು ಪ್ರವಾಸೋದ್ಯಮದಿಂದ ಲಭಿಸುತ್ತಿವೆ.

 

ಇಲಾಖೆಯು ಕೈಗೊಂಡಿರುವ ವಿನೂತನ ಯೋಜನೆಗಳು:

ಹೆಚ್ಚು ಪರಿಣಾಮಕಾರಿಯಾಗಿ ಪ್ರವಾಸೋದ್ಯಮ ಬೆಳೆಯಲು ಇಲಾಖೆಯು ಹಲವು ವಿನೂತನ ಯೋಜನೆಗಳನ್ನು ಕೈಗೊಳ್ಳುತ್ತಿದ್ದು ಇದರ ಅನುಷ್ಠಾನಕ್ಕಾಗಿ ೪ ಪ್ರಮುಖ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಇಲಾಖೆಯು ಪ್ರವಾಸೋದ್ಯವ  ಅಭಿವೃದ್ಧಿ ದೃಷ್ಠಿಯೊಂದ ಹಮ್ಮಿಕೊಂಡಿರುವ ೪ ಮಾರ್ಗಗಳು ಹೀಗಿವೆ. ಪ್ರವಾಸೋದ್ಯಮ ನೀತಿ ಮತ್ತು ಅನುಷ್ಠಾನ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಪ್ರಚಾರ ಮತ್ತು ಕ್ರಿಯಾತ್ಮಕ ಸಂರಕ್ಷಣೆ.

 

ಉತ್ತೇಜನ ಮತ್ತು ಪ್ರಚಾರ:

೨೦೧೮ನೇ ವರ್ಷವನ್ನು ಸಾಹಸಮಯ ವರ್ಷವಾಗಿ ನಿಮ್ಮ ಸಾಹಸಗಾಥೇಯನ್ನು ನಿವೇ ರೂಪಿಸಿಕೊಳ್ಳಿ (Scrpit Your Adventure-೨೦೧೮) ಎಂಬುದಾಗಿ ಆಚರಿಸಲಾಗಿದೆ. ಈ ಸಂಬಂಧ ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರ್ಷಪೂರ್ತಿ ಆಕರ್ಷಕ ಜಾಹೀರಾತುಗಳನ್ನು ನೀಡಲಾಗಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇಲಾಖೆಯು ಭಾಗವಹಿಸಿದ್ದ ಮೇಳಗಳಲ್ಲಿಯೂ ಸಹ ಸಾಹಸಮಯ ವರ್ಷಾಚರಣೆ ಕುರಿತಂತೆ ಪ್ರಚಾರ ನೀಡಲಾಗಿದೆ ಹಾಗೂ ಇಲಾಖೆಯಿಂದ ತಯಾರಿಸಲಾದ ವೀಡಿಯೋಗೆ ಬಿಗ್‌ಬ್ಯಾಂಗ್ ಅವಾರ್ಡ್‌ಗಳನ್ನು ನೀಡಲಾಗಿರುತ್ತದೆ. ಇಲಾಖೆಯಿಂದ ಹಲವಾರು ಪ್ರವಾಸೋದ್ಯಮ ಉತ್ತೇಜನ ಹಾಗೂ ಪ್ರಚಾರ ಕಾರ್ಯಕಮಗಳನ್ನು ಕೈಗೊಂಡಿದ್ದು, ಬ್ರ್ಯಾಂಡ್‌ ಕ್ಯಾಂಪೇನ್ ಅಡಿಯಲ್ಲಿ  ದಿನಪತ್ರಿಕೆಗಳು, ಮಾಸ ಪತ್ರಿಕೆಗಳು, ಮ್ಯಾಗಜೈನ್‌ಗಳು, ಟಿವಿ, ಸಿನಿಮಾ ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಜಾಹೀರಾತು ಹಾಗೂ ಪ್ರಚಾರವನ್ನು ಕೈಗೊಳ್ಳಲಾಗಿರುತ್ತದೆ. ಟ್ಯಾಕ್ಟಿಕಲ್‌ ಕಾಂಪೇನ್‌ ಅಡಿಯಲ್ಲಿ ಯೋಗ ದಿನಾಚರಣೆ, ವಿಶ್ವ ಪ್ರವಾಸೋದ್ಯಮ ದಿನಾಚರಣೆ, ಅದ್ದೂರಿ ದಸರಾ ಆಚರಣೆ, ಹಂಪಿ ಹಾಗೂ ಇತರೆ ಉತ್ಸವಗಳ ಆಚರಣೆ ಹಾಗೂ ವಿವಿಧ ಜಾಹೀರಾತು, ರಚನಾತ್ಮಕ ವೀಡಿಯೋಗಳನ್ನು ತಯಾರಿಸುವುದು, ಕಾಫಿ ಟೇಬಲ್ ಬುಕ್ ತಯಾರಿಕೆ, ಔಟ್‌ಲುಕ್ ಮೂಲಕ ಕರ್ನಾಟಕ ಗೈಡ್ ತಯಾರಿಕೆ, ಲೋನ್ಲಿ ಪ್ಲಾನೇಟ್ ಗೈಡ್ ಬುಕ್‌ ತಯಾರಿಕೆ ಇತರೆ ಚಟುವಟಿಕೆಗಳನ್ನು ಕೈಗೊಳ್ಳಲಾಗಿರುತ್ತದೆ. ಹೊರಾಂಗಣ ಮಾಧ್ಯಮಗಳಲ್ಲಿ ಹೋರ್ಡಿಂಗ್ಸ್‌ಗಳು, ರೈಲ್ವೇ ಹಾಗೂ ಬಸ್ ನಿಲ್ಧಾಣಗಳಲ್ಲಿ ಪ್ರಚಾರ, ವಿಮಾನ ನಿಲ್ದಾಣಗಳಲ್ಲಿನ ಹೋರ್ಡಿಂಗ್ಸ್‌ಗಳಲ್ಲಿ ಪ್ರಚಾರ ಹಾಗೂ ಇತರೆ ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ. ಹಾಗೂ ಇಲಾಖೆಯ ವೆಬ್‌ಸೈಟ್ ಅನ್ನು ನವೀಕರಣ/ ಉನ್ನತೀಕರಣಗೊಳಿಸಲು ಕ್ರಮ ವಹಿಸಲಾಗಿರುತ್ತದೆ.  ಸಾಹಸಮಯ ಚಟುವಟಿಕೆಗಳಾದ ಮಂಗಳೂರಿನಲ್ಲಿ ರಿವರ್ ಫೆಸ್ಟಿವಲ್, ಸರ್ಫಿಂಗ್ ಫೆಸ್ಟಿವಲ್, ಕರಾವಳಿ ಉತ್ಸವ, ಅಟ್ಟಕಲರಿ ಉತ್ಸವ, ಎಟಿಪಿ ಚಾಲೆಂಚರ್  ಟೆನ್ನೀಸ್ ಪಂದ್ಯಾವಳಿಗಳು, ಗಾಲ್ಫ್ ಫೆಸ್ಟಿವಲ್, ಕ್ರಿಕೆಟ್ ಪಂದ್ಯಾವಳಿಯಾದ ಕರ್ನಾಟಕ ಚಲನಚಿತ್ರ ಕಪ್ ಹಾಗೂ ಗಾಲ್ಫ್‌ ಪಂದ್ಯಾವಳಿಗಳನ್ನು ಉತ್ತೇಜಿಸಿ, ಪ್ರಾಯೋಜಕತ್ವ ನೀಡಲಾಗಿದೆ.

 

ನಮ್ಮ ಬೆಂಗಳೂರು ಹಬ್ಬ

ಬೆಂಗಳೂರಿನ ಸ್ಯಾಂಕಿ ಕೆರೆ, ರಾಚೇನಹಳ್ಳಿ ಕೆರೆ ಹಾಗೂ ವಿಧಾನಸೌಧದ ಮುಂಭಾಗ ನಮ್ಮ ಬೆಂಗಳೂರು ಹಬ್ಬವನ್ನು ಆಚರಿಸಲಾಯಿತು.

ಅಂತರರಾಷ್ಟ್ರೀಯ ಯೋಗಾ ದಿನಾಚಾರಣೆ:- ೨೦೧೮-೧೯ ನೇ ಸಾಲಿನಲ್ಲಿ ಮೈಸೂರಿನ ರೇಸ್‌ಕೋರ್ಸ್ ಮೈದಾನದಲ್ಲಿ ದಿನಾಂಕ:೨೧.೦೬.೨೦೧೮ ರಂದು ನಡೆದ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಸಂದರ್ಭದಲ್ಲಿ ಏಕದಿನದ ಬೃಹತ್ ಯೋಗ ತರಗತಿ ಆಯೋಜಿಸಲಾಗಿತ್ತು. ಇದರಿಂದಾಗಿ ಜಿಲ್ಲಾಡಿಳತಕ್ಕೆ ಗಿನ್ನೀಸ್ ದಾಖಲೆ ಲಭ್ಯವಾಗಿರುತ್ತದೆ.

ಪ್ರವಾಸೋದ್ಯಮ ನೀತಿ:- ಸಹಾಯಧನ, ವಿನಾಯಿತಿ ಹಾಗೂ ರಿಯಾಯಿತಿಗಳು ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಮಂಜೂರಾಗಿರುವ ೨೧ ಹೋಟೆಲ್ ಯೋಜನೆಗಳಿಗೆ ರೂ.೧೫.೧೬ ಕೋಟಿಗಳ ಮೊತ್ತವನ್ನು ಸಹಾಯಧನವಾಗಿ ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಆತಿಥ್ಯ ಕ್ಷೇತ್ರದಲ್ಲಿ ಫುಡ್ ಪ್ರೊಡಕ್ಷನ್, ಫುಡ್ & ಬಿವಿರೇಜಸ್, ಬೇಕರಿ & ಕನ್‌ಫೆಕ್ಷನರಿ, ಫ್ರಂಟ್ ಆಫೀಸ್ ಮತ್ತು ಹೌಸ್ ಕೀಪಿಂಗ್‌ಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ರೂ.೨.೦೦ ಕೋಟಿ ಅನುದಾನವನ್ನು ನೋಡೆಲ್ ಸಂಸ್ಥೆಯಾದ ಕೆ.ಎಸ್.ಟಿ.ಡಿ.ಸಿ ಸಂಸ್ಥೆ, ಬೆಂಗಳೂರು ರವರಿಗೆ ಬಿಡುಗಡೆ ಮಾಡಲಾಗಿದೆ.

ಪ್ರವಾಸೋದ್ಯಮ ಮೂಲ ಸೌಲಭ್ಯ :- ಈ ಯೋಜನೆಯಡಿ ಕಳೆದ ಸಾಲುಗಳಲ್ಲಿ ಮಂಜೂರಾಗಿದ್ದ ೧೦೧೭ ವಿವಿಧ ಪ್ರವಾಸಿ ಮೂಲ ಸೌಲಭ್ಯ ಕಾಮಗಾರಿಗಳನ್ನು ಮುಂದುವರೆಸಲಾಯಿತು. ಇದರ ಜೊತೆಗೆ ೨೪೯ ನೂತನ ಕಾಮಗಾರಿಗಳನ್ನು ಮಂಜೂರು ಮಾಡಲಾಯಿತು. ಮುಂದುವರೆದ ಹಾಗೂ ನೂತನ ಕಾಮಗಾರಿಗಳ ಬಾಬ್ತು ಒಟ್ಟು ರೂ.೬೩.೬೦ ಕೋಟಿಗಳನ್ನು ಅನುಷ್ಟಾನ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳು ವಿವಿಧ ಹಂತದಲ್ಲಿರುತ್ತವೆ.

ನಬಾರ್ಡ್ ಕಾಮಗಾರಿಗಳು:- ಈ ಯೋಜನೆ ಅಡಿ ಈವರೆಗೆ ಆರ್.ಐ.ಡಿ.ಎಫ್‌ ಯೋಜನೆಯಡಿ ಮಂಜೂರಾಗಿದ್ದ ೩೨ ಕಾಮಗಾರಿಗಳನ್ನು ೨೦೧೮-೧೯ನೇ ಸಾಲಿಗೆ ಮುಂದುವರೆಸಲಾಗಿದೆ ಹಾಗೂ ಈ ಸಂಬಂಧ ಒದಗಿಸಲಾಗಿದ್ದ ರೂ.೧೦.೫೨ ಕೋಟಿಗಳ ಪೈಕಿ ರೂ . ೨ .೦ ೬ ಕೋಟಿಗಳನ್ನು ಮುಂದುವರೆದ ಕಾಮಗಾರಿಗಳನ್ನು ಪೂರ್ಣಗೊಳಿಸಲು ವೆಚ್ಚ ಮಾಡಲಾಗಿದೆ.

ಕರ್ನಾಟಕ ಟೂರಿಸಂ ವಿಷನ್ ಗ್ರೂಪ್:- ಕರ್ನಾಟಕ ಟೂರಿಸಂ ವಿಷನ್ ಗ್ರೂಪ್ ಶಿಫಾರಸ್ಸು ಅಡಿ ಕಳೆದ ಸಾಲುಗಳಲ್ಲಿ ಮಂಜೂರಾಗಿದ  ೪೮ ವಿವಿಧ ಪ್ರವಾಸಿ ಸೌಲಭ್ಯಗಳ ಕಾಮಗಾರಿಗಳನ್ನು ಮುಂದುವರೆಸಲಾಗಿರುತ್ತದೆ. ಮುಂದುವರೆದ ಹಾಗೂ ನೂತನ ಕಾಮಗಾರಿಗಳ ಬಾಬ್ತು ಈವರೆಗೆ ಒಟ್ಟು ರೂ.೮.೧೮ ಕೋಟಿಗಳನ್ನು ಕಿತ್ತೂರು ಕೋಟೆ ಅಭಿವೃದ್ಧಿ, ಹಳಿಯಾಳ ನಿಸರ್ಗಧಾಮ ಕೋಟೆ ಅಭಿವೃದ್ಧಿ, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಬೇಲೂರಿನ ವಿಷ್ಣುಸಮುದ್ರ ಕೆರೆ ಹಾಗೂ ಮಂಟಪ ದುರಸ್ಥಿ ಅಭಿವೃದ್ಧಿ, ಚಿಕ್ಕಮಗಳೂರಿನ ರತ್ನಗಿರಿ ಬೋರೆ (ಮಹಾತ್ಮಗಾಂದಿ ಉದ್ಯಾನವನ) ಹಾಗೂ ಚಿಕ್ಕಮಗಳೂರಿನ ಮಾಣಿಕ್ಯಧಾರ ಜಲಪಾತ ಪ್ರದೇಶಾಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ.

೨೦ ಪರಂಪರಾ ಪ್ರವಾಸಿ ತಾಣಗಳ ಅಭಿವೃದ್ಧಿ ಸ್ಮಾರಕಗಳ ಸಂರಕ್ಷಣೆಯೂ ಸೇರಿದಂತೆ ಕೆಳಕಂಡ ೨೦ ಪರಂಪರಾ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಆದೇಶಿಸಲಾಗಿದೆ.

ಮೇಲ್ಕಂಡ ಪ್ರವಾಸಿ ತಾಣಗಳ ಹಾಗೂ ಇತರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಆರಂಭಿಕ ವರದಿ ಹಾಗೂ ಮಾಸ್ಟರ್ ಪ್ಲಾನ್‌ಗಳನ್ನು ಮೆ|| ಇಂಟ್ಯಾಕ್ ಸಂಸ್ಥೆ ಹಾಗೂ ಮೆ||ಐ.ಹೆಚ್.ಸಿ.ಎನ್.ಎಫ್‌  ಸಂಸ್ಥೆ ಗಳಿಂದ ತಯಾರಿಸಿಕೊಳ್ಳಲಾಗಿದೆ. ಅದರಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಲಾಖೆಯಿಂದ ಕ್ರಮ ವಹಿಸಲಾಗಿದೆ.

ಇತರೆ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನ

೧. ವಿಶ್ವ ವಿಖ್ಯಾತ ಹಂಪಿ ಮತ್ತು ಮೈಸೂರಿನ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್‌ಬಸ್ ಮಾದರಿಯ ಆರು ಡಬ್ಬಲ್ ಡೆಕ್ಕರ್ ತೆರದ ಬಸ್ಸುಗಳನ್ನು ಕೆ.ಎಸ್.ಟಿ.ಡಿ.ಸಿ ವತಿಯಿಂದ ಪ್ರಾರಂಭಿಸಲು ರೂ.೫೦೦.೦೦ ಲಕ್ಷಗಳನ್ನು ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ.

  • ವಿಶೇಷ ಘಟಕ ಉಪ ಯೋಜನೆ(ಎಸ್.ಸಿ.ಎಸ್.ಪಿ) ಗಿರಿಜನ ಉಪಯೋಜನೆ (ಟಿ.ಎಸ್.ಪಿ): ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ತಲಾ ರೂ.೩.೦೦ ಲಕ್ಷಗಳ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗುತ್ತಿದೆ. ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ೮ನೇ ತರಗತಿಯಲ್ಲಿ ಕಲಿಯುತ್ತಿರುವ ೧೪೪೦೦ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ ಮವನ್ನು ಹಮ್ಮಿಕೊಳಲಾಗುತ್ತದೆ.
  • ಹಿಂದುಳಿದ ವರ್ಗಗಳು ಹಾಗೂ ಇತರೆ ವರ್ಗದ ಯೋಜನೆಗಳು: ಇಲಾಖೆಯ ಸಾಮಾನ್ಯ ಯೋಜನೆಯಡಿಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ನಿರುದ್ಯೋಗಿ ಅಭ್ಯರ್ಥಿಗಳಿಗೆ ೩೦೦ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲು ಅನುಧಾನವನ್ನು ಅನುಷ್ಠಾನಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಸಾಮಾನ್ಯ ಯೋಜನೆಯಡಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಇತರೆ ವರ್ಗಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ೩೦ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ೧೦,೦೦೦ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ ಸಂಸ್ಥೆಯ ಮೂಲಕ ಹಮ್ಮಿಕೊಂಡು ಪೂರ್ಣಗೊಳಿಸಲಾಗಿದೆ.
  • ಭಾರತ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯದ ಧನಸಹಾಯದಲ್ಲಿ ಪ್ರವಾಸಿ ಮೂಲ ಸೌಲಭ್ಯಗಳ ಅಭಿವೃದ್ಧಿ:

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸ್ವದೇಶ ದರ್ಶನ ಯೋಜನೆಯಡಿ ಚಿತ್ರದುರ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿರುವ ಪ್ರಮುಖ ಪಾರಂಪರಿಕ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಪಾರಂಪರಿಕ ವೃತ್ತವನ್ನು ಗುರುತಿಸಿ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಮೂಲಭೂತ ಪ್ರವಾಸಿ ಸೌಲಭ್ಯಗಳನ್ನು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲು ಇಲಾಖೆಯಿಂದ ಕಾನ್ಸೆಪ್ಟ್ ಪ್ರೆಸೆಂಟೇಶನ್ ಅನ್ನು ಸಿದ್ದಪಡಿಸಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಅನುಮೋದನೆಗಾಗಿ ಸಲ್ಲಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇರುತ್ತದೆ. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಸಾದ್ ಯೋಜನೆ ಅಡಿ ಮೈಸೂರು ಜಿಲ್ಲೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಹಾಗೂ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಮಂತ್ರಾಲಯವು ನಿಗಧಿಪಡಿಸುವ ಮಾರ್ಗಸೂಚಿಗಳನ್ನು ಇಲಾಖೆಯಿಂದ ಕಾನ್ಸೆಫ್ಟ್‌ ಪ್ರೆಸೆಂಟೇಶನ್ ಅನ್ನು ಸಿದ್ದಪಡಿಸಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಅನುಮೋದನೆಗಾಗಿ ಸಲ್ಲಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇರುತ್ತದೆ.

 

ಪ್ರವಾಸಿ ಮಿತ್ರ ಯೋಜನೆ

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ರಕ್ಷಣೆಯ ದೃಷ್ಟಿಯಿಂದಾಗಿ ಇಲಾಖೆಯಿಂದ ೨೦೧೬ ನೇ ಸಾಲಿನಲ್ಲಿಯೇ ಎರಡನೇ ಹಂತದಲ್ಲಿ ೭೫ ಮಂದಿ ಮಹಿಳೆಯರು ಸೇರಿದಂತೆ ಒಟ್ಟು ೪೫೮ ಮಂದಿ ಗೃಹ ರಕ್ಷರಿಗೆ ತರಬೇತಿ ನೀಡಿ, ಇವರನ್ನು ಹಾಗೂ ಒಂದನೇ ಹಂತದಲ್ಲಿ ಒಟ್ಟು ೪೭೨ ಮಂದಿ ತರಬೇತಿ ಪಡೆದ ಗೃಹರಕ್ಷದಳದ ಸಿಬ್ಬಂದಿಗಳ ಪೈಕಿ ಒಟ್ಟು ೫೦೦ ಸಿಬ್ಬಂದಿಯನ್ನು ಇದುವರೆಗೂ ರಾಜ್ಯದ ಪ್ರಮುಖ ಪ್ರವಾಸಿ ಣಗಳಿಗೆ "ಪ್ರವಾಸಿ ಮಿತ್ರ" (ಟೂರಿಸ್ಟ್ ಪೊಲೀಸ್) ರಾಗಿ ಗೃಹರಕ್ಷಕ ದಳದ ಸೂಚನೆಯಂತೆ ಎರಡು ತಿಂಗಳಿಗೊಮ್ಮೆ ಬದಲಾಯಿಸುವ ಷರತ್ತಿಗೊಳಪಟ್ಟು ಸರದಿ ಆಧಾರದ ಮೇಲೆ ಸೇವೆ ಸಲ್ಲಿಸಲು ನಿಯೋಜಿಸಲಾಗಿದೆ. ವಿಶ್ವಪರಂಪರಾ ಕೇಂದ್ರವಾದ ಹಂಪಿಯಲ್ಲಿ ಆಚರಿಸುವ ಹಂಪಿ ಉತ್ಸವ ಆಚರಣೆಗಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

 

(*ಮಾಹಿತಿ: ಕರ್ನಾಟಕ ಆರ್ಥಿಕ ಸಮೀಕ್ಷೆ)

ಇತ್ತೀಚಿನ ನವೀಕರಣ​ : 06-09-2021 04:08 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn