ಪ್ರವಾಸೋದ್ಯಮ

ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಜಾಲತಾಣ

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನುಕಲ್ಪಿಸುವಲ್ಲಿ ಕರ್ನಾಟಕದ ಕೊಡುಗೆ ಅಪಾರ. ಅದರಲ್ಲೂ ರಾಜಧಾನಿಬೆಂಗಳೂರು ಮಾಹಿತಿ ತಂತ್ರಜ್ಞಾನ ರಂಗದಲ್ಲಿ ತನ್ನದೇ ಛಾಪನ್ನುಮೂಡಿಸಿದೆ. ಹೀಗೆ ಹಲವಾರು ವೈಶಿಷ್ಟ್ಯಗ ಆಧಾರವಾಗಿರುವಕರ್ನಾಟಕವನ್ನು ಪ್ರವಾಸಿಗರ ಸ್ವರ್ಗವಾಗಿಸುವಲ್ಲಿ ಪ್ರಕೃತಿ ಮತ್ತು ಮಾನವ ಪ್ರಯತ್ನಗಳೆರಡೂಜೊತೆಗೂಡಿವೆ. ನಿಡಿದಾದಸಮುದ್ರತೀರವು ಸಮತಟ್ಟಾದ ಕಿನಾರೆಗಳಿಂದ ಕೂಡಿದೆ.ಎತ್ತರವಾದ ಪಶ್ಚಿಮ ಘಟ್ಟಗಳು ನಿತ್ಯಹರಿದ್ವರ್ಣದ ಕಾಡು ಹಾಗೂಪ್ರಾಣಿ ಸಂಪತ್ತನ್ನು ಹೊಂದಿರುವುದಲ್ಲದೆ ಅನೇಕ ನದಿಗಳು ಅಲ್ಲಿಹುಟ್ಟಿ ಪೂರ್ವ ಮತ್ತು ಪಶ್ಚಿಮದ ಕಡೆ ಹರಿದು ತಾವು ಸಂಚರಿಸಿದ ನೆಲವನ್ನು ಫಲವತ್ತಾಗಿಸಿ ಕೃಷಿ ಅಭಿವೃದ್ಧಿಗೆ ಕಾರಣವಾಗಿವೆ. ಈ ನದಿಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವಅನೇಕ ಜಲಪಾತಗಳನ್ನು ಉಂಟುಮಾಡಿವೆ. ಸಮತಟ್ಟಾದಬಯಲು ಪ್ರದೇಶ ಸುಂದರವಾದ ನದಿದಂಡೆಗಳಿಂದ ಕೂಡಿದ್ದುಹೆಸರುವಾಸಿಯಾಗಿವೆ.ಕಲ್ಲುಗುಡ್ಡಗಳು ಸಹಜ ಸುಂದರ ಕಲ್ಲಿನವನದಂತೆ ಕಂಗೊಳಿಸುತ್ತವೆ. ಘಟ್ಟ ಪ್ರದೇಶವು ವಿವಿಧ ಪ್ರಾಣಿಗಳಿಗೆಆಶ್ರಯತಾಣವಾಗಿದೆ.

ಈ ನಾಡಿನ ಶಿಲಾಯುಗ ಸಂಸ್ಕೃತಿಯನ್ನು ಬಿಂಬಿಸುವಅಸಂಖ್ಯಾತ ನೆಲೆಗಳು ರಾಜ್ಯದುದ್ದಗಲಕ್ಕೂ ಕಾಣಸಿಗುತ್ತವೆ. ಈನಾಡನ್ನಾಳಿದ ಶಾತವಾಹನರು, ಕದಂಬರು, ಗಂಗರು, ಬಾದಾಮಿಚಾಲುಕ್ಯರು, ಆಲುಪರು,ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು,ಹೊಯ್ಸಳರು, ಸೇವುಣರು, ವಿಜಯನಗರದ ಅರಸರು, ಕಲಬುರ್ಗಿಮತ್ತು ಬೀದರಿನ ಬಹಮನಿಯರು, ವಿಜಯಪುರದ ಆದಿಲ್‌ ಷಾಹಿಗಳು, ಬೀದರಿನ ಬರೀದ್ ಷಾಹಿಗಳು, ಮೈಸೂರಿನಒಡೆಯರು, ಕೆಳದಿ ಅರಸರು, ಚಿತ್ರದುರ್ಗ, ಮಾಗಡಿ, ಸುರಪುರಮಧುಗಿರಿ, ಬಿಜ್ಜಾವರ,ಗುಮ್ಮನಾಯಕನಹಳ್ಳಿ ಮೊದಲಾದಪಾಳೆಪಟ್ಟುಗಳನ್ನಾಳಿದ ಪಾಳೆಯಗಾರರು, ಬೆರಗುಮೂಡಿಸುವಕೋಟೆಕೊತ್ತಲಗಳು, ಕುಸುರಿಕೆಲಸಗಳಿಂದ ಕೂಡಿದವಾಸ್ತುಶಿಲ್ಪಗಳು, ಭವ್ಯ ಮಸೀದಿಗಳು ಹಾಗೂ ಹಿಂದೂ-ಮುಸ್ಲಿಂಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಪೋರ್ಚುಗೀಸ್ಮತ್ತು ಇಂಗ್ಲೀಷರ ಆಗಮನ, ಯೂರೋಪಿನ ಪುನರುತ್ಥಾನವಾಸ್ತುಶಿಲ್ಪವನ್ನು ಪರಿಚಯಿಸುವುದರ ಜೊತೆಗೆ ಆಕರ್ಷಕಚರ್ಚ್‌ಗಳಲ್ಲದೆ ಮನ ಸೆಳೆಯುವ ಸಾರ್ವಜನಿಕ ಕಟ್ಟಡಗಳನಿರ್ಮಾಣಕ್ಕೂ ಕಾರಣವಾಯಿತು. ರಾಷ್ಟ್ರೀಯ ಉದ್ಯಾನ, ವನ್ಯಜೀವಿಪಕ್ಷಿಧಾಮಗಳಲ್ಲಿ ಪ್ರೇಕ್ಷಕರಿಗೆ ಆನೆ, ಹುಲಿ, ಕಾಡುಕೋಣ, ಜಿಂಕೆ,ಹಂಸ, ನವಿಲು ಮೊದಲಾದ ಕಾಡುಪ್ರಾಣಿಗಳು ಸಹಜರೀತಿಯಲ್ಲಿನೋಡಲು ಸಿಗುತ್ತವೆ. ಈ ರಾಷ್ಟ್ರೀಯ ಉದ್ಯಾನಗಳುಸಂದರ್ಶಕರಿಗೆ ಎತ್ತರವಾದ ಮರ, ಪೊದೆ, ಬಳ್ಳಿಗಳೇಮೊದಲಾದ ಸಮೃದ್ಧ ಸಸ್ಯಸಂಪತ್ತನ್ನು ಆದರಪೂರ್ವಕವಾಗಿಪರಿಚಯಿಸುತ್ತವೆ. ಕರ್ನಾಟಕವು ಶ್ರೀಗಂಧದ ಸುಗಂಧಯುಕ್ತವೃಕ್ಷಗಳಿಗೆ, ವಿಶಾಲವಾದ ತಣ್ಣೆರಳಲನ್ನು ನೀಡುವ ಅರಳಿ, ಆಲ,ಅಶ್ವತ್ಥ ಮೊದಲಾದ ಮರಗಳಿಗೆ ಪ್ರಸಿದ್ಧವಾಗಿದೆ.

ಆಧ್ಯಾತ್ಮಿಕ ಆಸಕ್ತಿ ಇರುವವರಿಗೆ ಸ್ಪೂರ್ತಿ ಪಡೆಯಲುಅವಶ್ಯವಾದ ಮನಃಶಾಂತಿ ನೀಡುವಂತಹ ವಿವಿಧ ಧರ್ಮಕ್ಕೆಸೇರಿದ ಸಾಧು ಮುಂತಾದ ಸಂತರು ಇಲ್ಲಿರುವರು. ಹಾಗೆಯೇಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಅಥವಾ ವೀರಶೈವ ಧಾರ್ಮಿಕಗುರುಗಳ ಸಮಾಧಿಗಳಿವೆ. ಯಾತ್ರಿಕರಿಗೆ ಆಧ್ಯಾತ್ಮಿಕ ಪರಿಸರವನ್ನುಈ ಸಮಾಧಿ-ಮಂದಿರಗಳು ಸೃಷ್ಟಿಸಿದ್ದು ಅವಶ್ಯಕವಾದಮನಃಶಾಂತಿಯನ್ನೂ ನೀಡುತ್ತವೆ.

 

ಜಲಪಾತಗಳು

ಕರ್ನಾಟಕವು ಅನೇಕ ಜಲಪಾತಗಳನ್ನುಹೊಂದಿದ್ದು, ಭಾರತದ ಅತಿ ಎತ್ತರವಾದ ಜಲಪಾತವು ಶಿವಮೊಗ್ಗಜಿಲ್ಲೆ, ಸಾಗರ ತಾಲೂಕಿನ ಜೋಗದಲ್ಲಿದೆ. ಅಲ್ಲಿ ಶರಾವತಿ ನದಿಯುಸುಮಾರು ೯೦೦ ಅಡಿ ಎತ್ತರದಿಂದ ನಾಲ್ಕು ಸೀಳುಗಳಾಗಿಧುಮ್ಮಿಕ್ಕುತ್ತಾ ಮರೆಯಲಾಗದ ಚೆಲುವನ್ನು ಮೂಡಿಸುವ ಮೂಲಕಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ಜೋಗವು ಜುಲೈನಿಂದಅಕ್ಟೋಬರ್‌ವರೆಗೆ (ಮಳೆಗಾಲದಲ್ಲಿ) ವಿಶೇಷವಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.

ಕಾವೇರಿನದಿಯು ಮಂಡ್ಯ ಜಿಲ್ಲೆಯ ಶಿವಸಮುದ್ರದಲ್ಲಿ ಒಂದುಕಿಲೋಮೀಟರ್ ಅಂತರದಲ್ಲಿ ಅವಳಿ ಜಲಪಾತವಾಗಿ ಧುಮುಕುತ್ತಿದ್ದು, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಎಂದು ಕರೆಸಿಕೊಂಡಿವೆ.ಈ ಜಲಪಾತವನ್ನು ಬಳಸಿಕೊಂಡು ೧೯೦೨ ರಿಂದಲೇ ವಿದ್ಯುತ್ ಉತ್ಪಾದಿಸಲುಬಳಸಲಾಗುತ್ತಿದೆ. ಶಿವಸಮುದ್ರದ ವಿದ್ಯುದಾಗಾರವಿರುವಬ್ಲಫ್‌ನಿಂದ ೧೪ ಕಿಲೋ ಮೀಟರ್ ದೂರದಲ್ಲಿ ಶಿಂಷಾ ನದಿಯಜಲಪಾತವಿದ್ದು, ಈ ನದಿಯು ಕಾವೇರಿಯ ಉಪನದಿಯಾಗಿದೆ.

ಸರ್ವಋತು ಗಿರಿಧಾಮವೆನಿಸಿದ ಕೊಡಗು ಜಿಲ್ಲೆಯಜಿಲ್ಲಾಕೇಂದ್ರವಾದ ಮಡಿಕೇರಿಯ ಸಮೀಪ (ಐದು ಕಿ.ಮೀ)ಸುಂದರವಾದ ಅಬ್ಬಿ ಜಲಪಾತವಿದೆ. ವೀರರಾಜಪೇಟೆಯಿಂದ೪೫ ಕಿಲೋಮೀಟರ್ ದೂರದಲ್ಲಿ (ಇರ್ಪು) ಜಲಪಾತವಿದ್ದು,ಬಳಿಯಲ್ಲೇ ಪ್ರಾಚೀನ ರಾಮೇಶ್ವರ ದೇವಸ್ಥಾನವಿದೆ. ಚಿಕ್ಕಮಗಳೂರುಜಿಲ್ಲೆಯಲ್ಲೂ ಅನೇಕ ಜಲಪಾತಗಳಿವೆ. ಕೆಮ್ಮಣ್ಣುಗುಂಡಿಗಿರಿಧಾಮದಲ್ಲಿ ಭದ್ರಾನದಿಯನ್ನು ಸೇರುವ ಹಳ್ಳದಿಂದ ಧುಮ್ಮಿಕ್ಕುವ’ಹೆಬೆ’ ಜಲಪಾತವು ೫೦೦ ಅಡಿ ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ.ಪ್ರಸಿದ್ಧ ಯಾತ್ರಾಸ್ಥಳವಾದ ಬಾಬಾಬುಡನ್ ಗಿರಿಯ ದತ್ತಾತ್ರೇಯಪೀಠದ ಬಳಿ ಇರುವ ಜಲಪಾತವೇ ಮಾಣಿಕ್ಯಧಾರಾ. ಇಲ್ಲಿ ನೀರುಹನಿ ಹನಿಯಾಗಿ ಸುರಿಯುತ್ತಿದ್ದು ಪ್ರವಾಸಿಗರಿಗೆ ಮರೆಯಲಾಗದತುಂತುರು ಸ್ನಾನದ ಸವಿಯನ್ನು ಒದಗಿಸುತ್ತದೆ. ಬೆಡ್ತಿಹೊಳೆಯುರೂಪಿಸಿರುವ ಮಾಗೋಡು ಜಲಪಾತವನ್ನು ಸಿದ್ದಾಪುರ ಹಾಗೂಯಲ್ಲಾಪುರಗಳಿಂದ ತಲುಪಬಹುದಾಗಿದೆ.ಕಲಬುರಗಿ ಜಿಲ್ಲೆಯಸುರಪುರ ತಾಲೂಕಿನಲ್ಲಿರುವ ಛಾಯಾಭಗವತಿ ಜಲಪಾತನಾರಾಯಣಪುರ ಅಣೆಕಟ್ಟೆಯಿಂದ ಸುಮಾರುಐದು ಕಿ.ಮೀ ದೂರದಲ್ಲಿದ್ದು ಕರ್ಷಿನೀಯವಾಗಿದೆ.  ಚಿಂಚೋಳಿ ಸಮೀಪದ ಎತ್ತಿಪೋತಜಲಪಾತ, ಯಾದಗಿರಿ ತಾಲೂಕಿನ ಗುರುಮಿಠಕಲ್ ಬಳಿಯಜಲಪಾತ, ಬಾದಾಮಿ ಬಳಿಯ ಕೋಟಿಕಲ್ ಜಲಪಾತ, ಕೊಪ್ಪಳಜಿಲ್ಲೆಯಲ್ಲಿರುವ ಕಬ್ಬರಗಿ ಜಲಪಾತ ಮುಂತಾದವು ಉಲ್ಲೇಖಾರ್ಹವಾಗಿವೆ.ತರೀಕೆರೆ ತಾಲೂಕಿನ ಕಲ್ಲತ್ತಿಪುರದ ಕಲ್ಲತ್ತಿ ಜಲಪಾತವುಕೆಮ್ಮಣ್ಣುಗುಂಡಿಗೆ ೧೦ ಕಿ.ಮೀ. ದೂರದಲ್ಲಿದೆ. ಇಲ್ಲಿ ನೀರುಸುಮಾರು ೪೦೦ ಅಡಿ ಎತ್ತರದಿಂದ ಬೀಳುತ್ತದೆ. ಇದರಹತ್ತಿರದಲ್ಲೇ ವೀರಭದ್ರನ ಪ್ರಾಚೀನ ದೇವಾಲಯವಿದೆ. ಮೈಸೂರುಜಿಲ್ಲೆಯಲ್ಲಿ ಸುಂದರವಾದ ಚುಂಚನಕಟ್ಟೆ ಜಲಪಾತವಿದ್ದು, ಅಲ್ಲೇ ಶ್ರೀರಾಮನ ದೇವಸ್ಥಾನವಿದೆ. ಉತ್ತರ ಕನ್ನಡ ಜಿಲ್ಲೆಯಪ್ರಸಿದ್ಧ ಉಂಚಳ್ಳಿ ಜಲಪಾತವು (ಲುಷಿಂಗ್‌ಟನ್) ೪೫೦ ಅಡಿಎತ್ತರದಿಂದ ಧುಮುಕುತ್ತದೆ. ಆಘನಾಶಿನೀ ನದಿಯ ಈ ಜಲಪಾತವು ಯಲ್ಲಾಪುರದಿಂದ ೧೯ ಕಿ.ಮೀ ದೂರದಲ್ಲಿದೆ. ’ಕೆಪ್ಪಜೋಗ’ಎಂದು ಕರೆಯಲ್ಪಡುವ ಇದನ್ನು ೧೨ ಕಿ.ಮೀ ದೂರದಲ್ಲಿರುವಸಿದ್ಧಾಪುರದಿಂದ ಕೊಲಶಿರಸಿ, ಹೆಗ್ಗರಣೆ ಉಂಚಳ್ಳಿ ಮಾರ್ಗವಾಗಿಯೂತಲುಪಬಹುದಾಗಿದೆ. ಜಲಪಾತದ ಎದುರಲ್ಲೇ ಲೂಷಿಂಗ್‌ಟನ್ಅತಿಥಿ ಗೃಹದ ಕುರುಹನ್ನು ಕಾಣಬಹುದಾಗಿದೆ. ಬೆಳಗಾವಿ ಜಿಲ್ಲೆಯಗೋಕಾಕಿನಿಂದ ಎಂಟು ಕಿ.ಮೀ. ದೂರದಲ್ಲಿ ಪ್ರಸಿದ್ಧ ಗೋಕಾಕ್ಜಲಪಾತವಿದೆ. ಇದು ೧೭೦ ಅಡಿ ಎತ್ತರದಿಂದ ಧುಮುಕುತ್ತಿದ್ದು,ವಿಸ್ತಾರ ಮತ್ತು ನಿಸರ್ಗ ರಮಣೀಯ ಸಾದೃಶ್ಯಗಳಿಂದಾಗಿಇದನ್ನು ’ಮಿನಿ ನಯಾಗರಾ’ ಎಂದೂ ಕರೆಯಲಾಗುತ್ತದೆ. ಈ ಜಲಪಾತದಿಂದ ೧೮೮೭ ರಿಂದಲೇ ಜಲವಿದ್ಯುತ್ತನ್ನುಉತ್ಪಾದಿಸಲಾಗುತ್ತಿದೆ. ಗೋಕಾಕ್ ಜಲಪಾತದ ಎರಡೂ ದಡಗಳಲ್ಲಿಸುಂದರ ವಾದ ಅನೇಕ ಪ್ರಾಚೀನ ದೇವಸ್ಥಾನಗಳಿದ್ದು, ಘಟಪ್ರಭಾನದಿಗೆ ಅಡ್ಡಲಾಗಿ ತೂಗುಸೇತುವೆಯಿದೆ. ಗೋಕಾಕ್ ಜಲಪಾತವುಜುಲೈ-ಆಗಸ್ಟ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಧುಮುಕುತ್ತದೆ. ಖಾನಾಪುರ ತಾಲೂಕಿನ ದಟ್ಟಡವಿ ಜಂಬೋಟಿಯಲ್ಲಿ ಮಹದಾಯಿನದಿಯು ವಜ್ರಪೋಹ ಜಲಪಾತವನ್ನುಂಟು ಮಾಡಿದ್ದು, ನದಿಯುಮುಂದೆ ಗೋವಾದತ್ತ ಸಾಗುತ್ತದೆ. ಅಲ್ಲಿ ಇದನ್ನು ಮಾಂಡೋವಿಎಂದು ಕರೆಯುತ್ತಾರೆ. ಅಲ್ಲಿಯ ದೂಧ್‌ಸಾಗರ್ ಜಲಪಾತರೋಮಾಂಚನವನ್ನುಂಟು ಮಾಡುತ್ತದೆ. ಬೆಂಗಳೂರಿನಿಂದ ೩೦ ಕಿ.ಮೀ. ದೂರದಲ್ಲಿ ಆನೇಕಲ್ಲಿಗೆಅನತಿ ದೂರದಲ್ಲಿ ಮುತ್ಯಾಲಮಡುವಿದೆ. ಈ ಜಲಪಾತವನ್ನುಸಂದರ್ಶಿಸಲು ಸೆಪ್ಟಂಬರ್‌ನಿಂದ ಜನವರಿ ಸಕಾಲವಾಗಿರುತ್ತದೆ.

 

ಮಸೀದಿಗಳು

ಧಾರ್ಮಿಕ ಮನೋಭಾವದವರಿಗೆ, ಎಲ್ಲವಯಸ್ಸಿನ ಭಕ್ತರಿಗೆ ಸಂದರ್ಶನ ಯೋಗ್ಯವಾದ ಸ್ಥಳಗಳುರಾಜ್ಯದಲ್ಲಿವೆ. ಮುಸಲ್ಮಾನರಿಗೆ ಕರ್ನಾಟಕದ ಪ್ರಾಚೀನಮಸೀದಿಯೆಂದರೆ ಕಲಬುರಗಿ ಕೋಟೆಯಲ್ಲಿ ಬಹಮನಿದೊರೆ ಮಹಮ್ಮದ್ ಷಾ ೧೩೬೭ರಲ್ಲಿ ಕಟ್ಟಿಸಿದ ಮಸೀದಿ. ಇದು ಇಡೀಕರ್ನಾಟಕದಲ್ಲಿಯೇ ಬಹಳ ದೊಡ್ಡ ಮಸೀದಿಯಾಗಿದೆ. ಅದು ರಚನೆಮತ್ತು ಆಕಾರದಲ್ಲಿ ಸ್ಪೇನ್‌ನ ಕಾರ್ಡೋವಾದ ಮಸೀದಿಯನ್ನುಹೋಲುತ್ತದೆ. ವಿಜಯಪುರದಲ್ಲಿ ಆಲಿ ಆದಿಲ್ ಷಾ (೧೬ನೇ ಯಶತಮಾನ) ಕಟ್ಟಿಸಿದ ಆಕರ್ಷಕ ಬೃಹತ್ ಸ್ಮಾರಕವೆಂದರೆಜಾಮಿಯಾ ಮಸೀದಿ. ಅದಕ್ಕೆ ಅಷ್ಟೇ ದೊಡ್ಡ ಗುಮ್ಮಟವಿದೆ. ಅದನ್ನು ವೈಭವೋಪೇತವಾಗಿವರ್ಣಮಯಗೊಳಿಸಲಾಗಿದೆ.ವಿಜಯಪುರದಲ್ಲಿರುವ ಕಪ್ಪು ಶಿಲೆಯ ಮಲ್ಲಿಕಾ ಜಹಾನ್ ಮಸೀದಿಇನ್ನೊಂದು ಗಮನಾರ್ಹ ಕಟ್ಟಡವೆನಿಸಿದೆ. ಬೀದರಿನ ಕೋಟೆಯಲ್ಲಿ೧೪೨೩ರಲ್ಲಿ ಕಟ್ಟಿದ ದುಂಡಾಕಾರದ ೧೬ ಕಂಬಗಳುಳ್ಳ ಪ್ರಖ್ಯಾತಸೋಲ್ಹಾಕಂಬ್ ಮಸೀದಿಯಿದೆ. ರಾಯಚೂರಿನಲ್ಲಿ ಏಕ್‌ಮಿನಾರ್ಮಸೀದಿ ಇದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಆದಿಲ್ ಷಾಹಿಕಾಲದ ಹಿಂದೂ ದೇವಸ್ಥಾನದ ಮಾದರಿಯಲ್ಲಿ ಕಲಾತ್ಮಕವಾಗಿನಿರ್ಮಿಸಿರುವ ಮಸೀದಿಯಿದೆ. ಭಟ್ಕಳದ ಭವ್ಯವಾದ ಚಿನ್ನದ ಪಲ್ಲಿಮಸೀದಿ ಮತ್ತು ಮಂಗಳೂರಿನ ಬಂದರ್ ಮಸೀದಿಗಳು ತುಂಬಾಕಲಾತ್ಮಕವಾದ ಮರದ ಕೆತ್ತನೆ ಕೆಲಸದಿಂದ ಕೂಡಿವೆ. ಎತ್ತರವಾದಎರಡು ಮೀನಾರುಗಳಿಂದ ಕೂಡಿದ ಶ್ರೀರಂಗಪಟ್ಟಣದ ಜಾಮಿಯಾಮಸೀದಿಯನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು. ಶಿರಾದಲ್ಲಿ ಮೊಘಲರಕಾಲದ ಮಸೀದಿ ಇದೆ. ಲಕ್ಷ್ಮೇಶ್ವರದಲ್ಲಿರುವ ಜುಮ್ಮಾಮಸೀದಿಅಷ್ಟೇ ಆಕರ್ಷಕವಾಗಿದೆ. ಬೆಂಗಳೂರು ಸಿಟಿ ಮಾರ್ಕೆಟ್ ಬಳಿಯಮಸೀದಿಯು ಅಮೃತಶಿಲೆಯ ಸಾಲುಸಾಲದ ಕುಸುರಿ ಕೆಲಸದಕಮಾನು ಹಾಗೂ ಸ್ತಂಭಗೋಪುರಗಳಿಂದ ಕೂಡಿದ ಆಧುನಿಕಬೃಹತ್ ಕಟ್ಟಡವಾಗಿದ್ದು, ಆಕರ್ಷಕವಾಗಿದೆ. ಸಿಂದಘಟ್ಟದ ಕಲ್ಲುಮಸೀದಿ ಸುಮಾರು ೧೯ನೆ ಶತಮಾನದ ರಚನೆಯಾಗಿದೆ.

 

ದರ್ಗಾಗಳು

ಮುಸ್ಲಿಂ ಸಾಧು-ಸಂತರ ಮತ್ತು ದೊರೆಗಳದರ್ಗಾಗಳೂ ಅಷ್ಟೇ ಪ್ರಸಿದ್ಧವಾಗಿವೆ. ಕಲಬುರಗಿಯಲ್ಲಿರುವ ಬಂದೇನವಾಜ್ ದರ್ಗಾವು ವಿಸ್ತಾರವಾದ ಪ್ರಾಚೀನ ಸಂಕೀರ್ಣವಾಗಿದ್ದುಅಲ್ಲಿ ಮೊಘಲರ ಕಾಲದ ಮಸೀದಿಗಳೂಕಂಡುಬರುತ್ತವೆ.ಬೀದರ್ ಬಳಿಯ, ಅಷ್ಟೂರಿನಲ್ಲಿರುವ ಅಹಮದ್ ಷಾ ವಲಿಯಸಮಾಧಿಯು ಎತ್ತರದ ರಚನೆಯಾಗಿದ್ದು, ಆಕರ್ಷಕ ರೀತಿಯಲ್ಲಿವರ್ಣಲಾಂಕೃತಗೊಂಡಿರುವುದನ್ನು ಕಾಣುತ್ತೇವೆ. ಈತನುಸಂತನೆಂದು ಹಿಂದೂ ಮತ್ತು ಮುಸ್ಲಿಂಮರಿಂದ ಆರಾಧಿಸಲ್ಪಟ್ಟಿದ್ದಾನೆ.ವಿಜಯಪುರದಲ್ಲಿ ಆದಿಲ್ ಷಾ ಹಾಗೂ ಅವನ ರಾಣಿಯಸಮಾಧಿಗಳುಳ್ಳ ಇಬ್ರಾಹಿಂ ರೋಜಾವು ಎತ್ತರದ ವೇದಿಕೆಯ ಮೇಲೆನಿರ್ಮಿಸಲ್ಪಟ್ಟಿರುವ ಅವಳಿ ರಚನೆಯಾಗಿದೆ. ವೇದಿಕೆಯ ಒಂದುಕಡೆ ಗೋರಿಯಿದೆ. ಇನ್ನೊಂದು ತುದಿಯಲ್ಲಿ ಮಸೀದಿಯಿದೆ.ಎರಡೂ ಕಟ್ಟಡಗಳಿಗಿರುವ ಗುಮ್ಮಟಗಳು, ಕಮಲದಳಗಳ ನಡುವೆಮೂಡಿದಂತಿದ್ದು, ತುದಿಯಲ್ಲಿ ಲೋಹದ ಅಲಂಕಾರಿಕ ಕಿರುಗೊಮ್ಮಟಗಳಿವೆ. ಗೋಳಗುಮ್ಮಟವು ಮೂರನೇಯ ಮಹ್ಮದ್ಆದಿಲ್ ಷಾಹಿ ಮತ್ತವನ ಸಂಬಂಧಿಗಳ ಸುಪ್ರಸಿದ್ಧ ಗೋರಿಯಾಗಿದೆ. ವಿಜಯಪುರದಆಸರ್‌ಮಹಲ್ ಅರಮನೆಯಲ್ಲಿ ಪ್ರವಾದಿಯ ಕೂದಲನ್ನು (ಹಜರತ್ಬಾಲ್) ರಕ್ಷಿಸಿಡಲಾಗಿದೆಯೆಂದು ಹೇಳಲಾಗಿದೆ. ಮೊಘಲರರಚನೆಯಾದ ಶಿರಾದ ಪೀರ್ ಮಲಿಕ್ ರಿಹಾನ್ ದರ್ಗಾವುವೈವಧ್ಯಮಯ ವಿನ್ಯಾಸದಿಂದಾಗಿ ಹೆಚ್ಚು ಗಮನಾರ್ಹವೆನಿಸಿದೆ.ಶ್ರೀರಂಗಪಟ್ಟಣದಲ್ಲಿರುವ ಹೈದರ್ ಮತ್ತು ಟಿಪ್ಪು ಅವರ ಸಮಾಧಿರಚನೆಯು ಎತ್ತರದ ಕಟ್ಟಡದ ಮೇಲೆ ಬೃಹತ್ತಾದ ಗುಮ್ಮಟವನ್ನುಹೊಂದಿದೆ. ಅದರ ಬಾಗಿಲುಗಳಲ್ಲಿ ಒಳ್ಳೆಯ ಕುಸುರಿ ಕೆತ್ತನೆಯಿದೆ.

ಮಂಗಳೂರಿನ ಬಳಿಯ ಉಳ್ಳಾಲದಲ್ಲಿರುವ ಸೈಯದ್ ಮದನಿದರ್ಗಾವು ಪುನರ್ ನಿರ್ಮಿತ ಆಧುನಿಕ ಕಟ್ಟಡವಾಗಿದೆ. ಕೆರೆತೊಣ್ಣೂರಿನ ಸಯ್ಯದ್ ಸಾಲಾರ್ ಮಸೂದ್ ದರ್ಗಾಕ್ಕೆ ಹೈದರಾಲಿದತ್ತಿ ನೀಡಿದ್ದಾನೆ. ಯಾದಗಿರಿಯ ಯಾಕುಬ್ ದರ್ಗಾ ಸಾಗರದಸರ್ಮಸ್ಮ ದರ್ಗಾ, ಆಳಂದದ ಎಕ್ಲೆಮುಷಾಕ್ ದರ್ಗಾ, ಇಜೇರಿಯಅಮೀನ್ ಸಾಬ್ ದರ್ಗಾ, ಗೋಗಿಯ, ಚಾಂದ ಹುಸೇನಿನಸಾಬ್ ದರ್ಗಾ, ಹೀಯಾಪುರದ ಸಯ್ಯದ್ ಅಬೀಬ್ ಷಾವಲದರ್ಗಾ, ಚಿಂಚೋಳಿಯ ಖುದಾನ್ಮ ಹುಸೇನಿ ದರ್ಗಾ, ಚಿತ್ತಾಪುರದಚಿತಷಾವಲ್ಲಿ ದರ್ಗಾ, ಕರ್ಜಗಿಯ ಖಾಜಿ ಷಾಬುದ್ದೀನ್ ದರ್ಗಾ,ತಾಳಿಕೋಟೆಯ ಪಂಜೆ ದರ್ಗಾ, ತಿಕೋಟದಾ ಹಾಜಿಸಾಬ್ಮತ್ತು ಬಡಕಲ್ ಸಾಬ್ ದರ್ಗಾ, ಬೀಳಗಿಯ ಹಸನ್ ಡೋಗ್ರಿದರ್ಗಾ ಮುಂತಾದವು ಉಲ್ಲೇರ್ಖಾಹವಾಗಿದೆ. ಬೆಳಗಾವಿಯಲ್ಲಿ ಅಸದ್‌ಖಾನ್ ಲಾಹಿರಿಯು ಕಟ್ಟಿಸಿದ ಕೋಟೆಯಲ್ಲಿ ಆದಿಲ್ ಷಾಹಿಕಾಲದ ಚೆಲುವಾದ ಸಫಾ ಮಸೀದಿಯಿದೆ. ಕೋಟೆಯಲ್ಲಿರುವಇನ್ನೊಂದು ಮಸೀದಿಯೆಂದರೆ ವಿಜಯಪುರದ ಶೇರ್‌ಖಾನ್೧೫೮೬-೮೭ರಲ್ಲಿ ಕಟ್ಟಿಸಿದ ಜಾಮೀಯಾ ಮಸೀದಿ. ಎಲ್ಲಿಮುಸಲ್ಮಾನರ ಜನಸಂಖ್ಯೆ ಹೆಚ್ಚಿರುತ್ತದೋ ಅಲ್ಲಿ ಮೆಹಬೂಬ್ಸುಬಾನಿಯ (ಬಾಗ್‌ದಾದಿನ ಪ್ರಸಿದ್ಧ ಸಂತ) ಮತ್ತು ಚಮನ್ ಷಾವಲಿಯಾ ದರ್ಗಾಗಳನ್ನು (ಚಿಲ್ಲಾ) ನಿರ್ಮಿಸುತ್ತಿದ್ದು, ಆ ಸ್ಥಳಗಳಲ್ಲಿಉರುಸ್ ನಡೆಯುತ್ತವೆ. ಈ ಉರುಸ್‌ಗಳಲ್ಲಿ ಹಿಂದೂಗಳೂಸಹ ಪಾಲ್ಗೊಳ್ಳುತ್ತಿದ್ದು ದೊಡ್ಡ ಜಾತ್ರೆಯಂತೆ ಇರುತ್ತದೆ. ಇವುನವಲಗುಂದದ ಬಳಿಯ ಯಮನೂರಿನ ರಾಜಾಬಾಗ್ ಸವಾರ್ಉರುಸ್, ಬೀದರ್ ಬಳಿಯ ಅಷ್ಟೂರಿನ ಅಹಮದ್ ಷಾವಲಿ ಉರುಸ್‌ಗಳನ್ನು ಹೋಲುತ್ತವೆ. ಅದರಲ್ಲೂ ಅಷ್ಟೂರಿನಉರುಸು, ವೀರಶೈವ ಸಂತ ಅಲ್ಲಮಪ್ರಭುವಿನ ಜಾತ್ರೆಯೆಂದೇಪರಿಗಣಿತವಾಗಿದ್ದು ಓರ್ವ ವೀರಶೈವ ಪೂಜಾರಿಯಿಂದಧರ್ಮಕಾರ್ಯವನ್ನು ಪ್ರಾರಂಭಿಸಲಾಗುತ್ತದೆ.

 

ಚರ್ಚುಗಳು

ಕ್ರಿಶ್ಚಿಯನ್ನರ ಧಾರ್ಮಿಕ ಮಹತ್ವದ ಚರ್ಚುಗಳಿಗೆ ಭೇಟಿ ನೀಡಬೇಕೆನ್ನುವ ಆಸಕ್ತರಿಗೆ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ನೋಡಸಿಗುತ್ತವೆ. ಕೆನರಾದಲ್ಲಿ (ಕರಾವಳಿ ಪ್ರದೇಶ) ಪೋರ್ಚುಗೀಸರು ಕ್ರೈಸ್ತಮತವನ್ನು ಹರಡಲು ಬಹಳ ಹಿಂದೆಯೇ ಯತ್ನಿಸಿದ್ದು, ೧೬ನೇ ಶತಮಾನದಿಂದ ೧೮ನೇಶತಮಾನದವರೆಗೆ ಅನೇಕ ಚರ್ಚ್‌ಗಳನ್ನು ನಿರ್ಮಿಸಿದರು. ಆದರೆ, ೧೭೯೦ರ ದಶಕದಲ್ಲಿ ಅವು ನೆಲಸಮಗೊಂಡವು. ಮಂಗಳೂರಿನಲ್ಲಿ ಉನ್ನತ ಗೋಪುರವುಳ್ಳ ಭವ್ಯ ಸೇಂಟ್ ರೊಜಾರಿಯೋ ಕೆಥೆಡ್ರಲ್ಚರ್ಚ್ ಇದೆ. ಅದರ ಮೂಲ ಕಟ್ಟಡ ನಿರ್ಮಾಣವಾದದ್ದು ೧೫೬೨ ರಲ್ಲಿ. ೧೯೧೦ ರಲ್ಲಿ ಅದನ್ನು ಪುನರ್‌ನಿರ್ಮಿಸಲಾಯಿತು. ಮಿಲಿಗ್ರೇಸ್ ಚರ್ಚ್‌ನ ಮುಂಭಾಗವು ಸುಂದರವಾದ, ಕಲಾತ್ಮಕ ಪ್ರತಿಮೆಗಳನ್ನುಹೊಂದಿದ್ದು, ರೋಮಿನ ಸೇಂಟ್ ಪೀಟರ್‌ನ ಬ್ಯಾಸಲಿಕವನ್ನು ನೆನಪಿಗೆ ತರುತ್ತದೆ. ಕೊಡಿಯಾಲ ಬೈಲಿನಲ್ಲಿ ನಿರ್ಮಿಸಿದ ’ಲೇಡಿ ಆಫ್ ಸಾರೋ’ ಚರ್ಚ್ ಅಷ್ಟೇ ಮಹತ್ವದ್ದು. ಅದರ ಎತ್ತರವಾದಮುಂಭಾಗವನ್ನು ನಾಲ್ಕು ಸಮನಾದ ಆಯಾಕಾರದ ಭಾಗಗಳಾಗಿವಿಭಜಿಸಲಾಗಿದೆ. ಮಂಗಳೂರಿನಲ್ಲಿ ೧೮೬೨ರಲ್ಲಿ ಕಟ್ಟಿದ ಬ್ಯಾಸೆಲ್ಮಿಷನ್‌ನ(ಈಗ ಸಿ.ಎಸ್.ಬಿ) ಶಾಂತಿ ಕೆಥೆಡ್ರಲ್ ಸಂಕೀರ್ಣವುಸಂಯೋಜಿತವಾದ ರೂಪು ರೇಷೆಗಳಿಂದ ಸುಂದರವೆನಿಸಿದೆ.ಕೊಡಗಿನ ವಿರಾಜಪೇಟೆಯಲ್ಲಿರುವ ಕ್ಯಾಥೊಲಿಕ್ ಚರ್ಚ್ ಗಾಥಿಕ್ಶೈಲಿಯಲ್ಲಿದೆ. ಅದು ೧೯೯೩ರಲ್ಲಿ ತನ್ನ ದ್ವಿಶತಮಾನೋತ್ಸವವನ್ನುಆಚರಿಸಿತು. ಕೊಡಗಿನ ಮಡಿಕೇರಿಯಲ್ಲಿರುವ ಚಿಕ್ಕ ಆಂಗ್ಲಿಕನ್ಚರ್ಚ್, ಗಾಜಿನ ಮೇಲೆ ರಚಿಸಿದ ಸುಂದರ ವರ್ಣಚಿತ್ರಗಳನ್ನುಹೊಂದಿದ್ದು, ಈಗ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯವಾಗಿದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರತಾಲೂಕಿನ ದೋರನಹಳ್ಳಿಯಲ್ಲಿರುವ ಸಂತ ಆಂಥೋನಿ ಪ್ರಾಚೀನಇಗರ್ಜಿ (೧೭೮೦) ಅಷ್ಟೇ ಮಹತ್ವದಾಗಿದ್ದು, ಪ್ರತಿ ವರ್ಷ ಜೂನ್ತಿಂಗಳಲ್ಲಿ ನಡೆಯುವ ಮೂರು ದಿನದ ಜಾತ್ರೆಯಲ್ಲಿ ಲಕ್ಷಾಂತರಜನ ಸೇರುತ್ತಾರೆ.

ಬೆಳಗಾವಿಯ ಸೇಂಟ್ ಮೇರಿ ಚರ್ಚ್ ೧೮೬೯ರಲ್ಲಿನಿರ್ಮಿತಗೊಂಡಿರುವ ಬೃಹತ್ ಗ್ರಾನೈಟ್ ಕಟ್ಟಡವಾಗಿದ್ದು,ಪ್ರಾರ್ಥನಾ ಮಂದಿರವು ಸುಂದರ ಕಂಬಗಳು ಮತ್ತು ಉಜ್ವಲ ವರ್ಣದಕಿಟಕಿ ಗಾಜುಗಳಿಂದ ಕೂಡಿದೆ.ಮೈಸೂರಿನ ಸೇಂಟ್ ಫಿಲೋಮಿನಾಚರ್ಚ್ ತನ್ನ ಎತ್ತರವಾದ ಆಕರ್ಷಕ ದ್ವಿಗೋಪುರಗಳಿಂದಾಗಿನಗರವು ಹೆಮ್ಮೆ ಪಟ್ಟುಕೊಳ್ಳಬಹುದಾದ ಕಟ್ಟಡವಾಗಿದೆ.ಈ ಭವ್ಯ ಕಟ್ಟಡಕ್ಕೆ ನೆಲಮಾಳಿಗೆಯಿದೆ. ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಬ್ಯಾಸಲಿಕವು೧೬೦೦ ರಲ್ಲಿ ಕಟ್ಟಲ್ಪಟ್ಟಿದ್ದು ೧೯೩೨ರಲ್ಲಿ ಪುನಾರಚನೆಗೊಂಡಿದೆ.ಅದರ ಪ್ರವೇಶದಲ್ಲಿ ಎತ್ತರವಾದ ಗಾಥಿಕ್ ಶೈಲಿಯ ಗೋಪುರವಿದೆ. ಸೇಂಟ್ ಮಾರ್ಕ್ಸ್ ಕೆಥೆಡ್ರಲ್ ೧೯೨೭ರಲ್ಲಿ ಇಂದಿನ ರೂಪವನ್ನುಪಡೆದು ಚರ್ಚ್ ಆಫ್ ಸೌತ್ ಇಂಡಿಯಾ ಎನಿಸಿದ್ದು ದಂಡುಪ್ರದೇಶದ ಗಮನಾರ್ಹ ಕಟ್ಟಡವೆನಿಸಿದೆ. ಉತ್ತರ-ದಕ್ಷಿಣವಾಗಿರುವಸೆಂಟ್ ಪ್ಯಾಟ್ರಿಕ್ ಚರ್ಚ್ ಗ್ರೀಕೋ-ರೋಮನ್ ಶೈಲಿಯಿಂದಕೂಡಿದ್ದು, ಮೊದಲಿಗೆ ೧೮೪೪ರಲ್ಲಿ ಐರಿಷ್‌ ಸೈನಿಕರಿಗಾಗಿಕಟ್ಟಲ್ಪಟ್ಟಿತ್ತು. ಅದನ್ನು ೧೮೯೮ರಲ್ಲಿ ಪುನರ್ ರಚಿಸಲಾಯಿತು.ಮಹಾತ್ಮಗಾಂಧೀ ರಸ್ತೆಯ ಟ್ರಿನಿಟಿ ಚರ್ಚ್ ಬ್ರಿಟಿಷರ ಕಾಲದನಿವಾಸಿಗಳು ಮತ್ತು ಇತರ ಅಧಿಕಾರಿಗಳು ಹೋಗುತ್ತಿದ್ದ ಅಧಿಕೃತಆಂಗ್ಲಿಕನ್ ಚರ್ಚ್ ಆಗಿತ್ತು. ಅದು ೧೯೦೮ರಲ್ಲಿ ಈಗಿರುವ ಆಕಾರವನ್ನು ಪಡೆಯಿತು. ಅದು ಸುಂದರ ಅಯೋನಿಕ್ ಶೈಲಿಯಕಂಬಗಳಲ್ಲದೆ ಭವ್ಯ ಮುಖಮಂಟಪವನ್ನೂ ಹೊಂದಿದೆ. ಪ್ರಾರ್ಥನಾಮಂದಿರುವು ಸುಮಾರು ೯೦ ಅಡಿ ಉದ್ದವಿದ್ದು, ಹಿಂಭಾಗದಗೋಡೆಯು ಮರದ ಆರ್ಷಕ ಕೆತ್ತನೆಗಳಿಂದ ಕೂಡಿದೆ.

 

ಬೌದ್ಧಕ್ಷೇತ್ರಗಳು

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಬಳಿಯ ಬಳ್ಳಿಗಾವಿ, ಗದಗ ಜಿಲ್ಲೆಯ ಕೋಳಿವಾಡ ಡಂಬಳಗಳಲ್ಲಿ ಹಿಂದೆ ಬೌದ್ಧರ ತಾರಾಭಗವತಿ ವಸ್ಥಾನಗಳಿದ್ದವು. ಕಲಬುರಗಿ ಜಿಲ್ಲೆಯ ಸನ್ನತಿ ಹಾಗೂ ಬಳಿಯ ಕನಗನಹಳ್ಳಿಯಲ್ಲಿ ನೆಲಸಮವಾಗಿರುವ ಬೌದ್ಧ ಸ್ತೂಪಗಳು ಮತ್ತು ಅಲಂಕಾರಿಕ ಫಲಕಗಳು ಇತ್ತೀಚೆಗೆ ಉತ್ಖನನದ ಪರಿಣಾಮವಾಗಿ ಬೆಳಕಿಗೆ ಬಂದಿವೆ ಮಂಗಳೂರಿನ ಕದರಿಯ ಮಂಜುನಾಥ ದೇವಸ್ಥಾನದಲ್ಲಿ ಕಂಚಿನ ಮೂರು ಬೌದ್ಧ ವಿಗ್ರಹಗಳಿವೆ. ಅವುಗಳಲ್ಲಿ ಒಂದಾದ ಅವಲೋಕಿತೇಶ್ವರ ವಿಗ್ರಹವು ಐದು ಅಡಿ ಎತ್ತರವಿದ್ದು, ಒಂಬತ್ತನೇ ಶತಮಾನದ್ದಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿ ಇತ್ತೀಚಿನ ದಶಕದಲ್ಲಿ ನಿರ್ಮಾಣಗೊಂಡಿರುವ ಬೌದ್ಧ ವಿಹಾರವೂ ಚಿತ್ತಾಕರ್ಷಕವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಮತ್ತು ಮೈಸೂರು ಜಿಲ್ಲೆಯ ಬೈಲುಕುಪ್ಪೆಯ ಟಿಬೇಟಿಯನ್ನರ ವಸಾಹತುಗಳು ವರ್ಣಮಯ ಸ್ತೂಪಗಳಿಂದ, ಕಲಾತ್ಮಕ ಪ್ರಾರ್ಥನಾ ಮಂದಿರಗಳಿಂದ ಮಿನಿ ಟಿಬೆಟ್‌ನಂತೆ ಕಾಣುತ್ತವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಒಡೆಯರ ಪಾಳ್ಯದ ಬಳಿಯಿರುವ ಟಿಬೇಟಿಯನ್ವಸಾಹತಿನ ಆಕರ್ಷಕವಾದ ಬೌದ್ಧ ವಿಹಾರವಿದೆ. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ವೈಭವಪೂರ್ಣ ಸ್ತೂಪ ಮತ್ತು ಒಳಗಡೆ ಬುದ್ಧಗಯಾದ ದೇವಸ್ಥಾನವನ್ನು ಹೋಲುವ ದೊಡ್ಡ ದೇವಸ್ಥಾನ ಉಲ್ಲೇಖಾರ್ಹ.

 

ಜೈನಕ್ಷೇತ್ರ

ಜೈನಧರ್ಮವು ಕರ್ನಾಟಕದ ಅತ್ಯಂತ ಪ್ರಾಚೀನಧರ್ಮವಾಗಿದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳವು ಎರಡೂಗುಡ್ಡಗಳ ಮೇಲಿನ ಅನೇಕ ಜೈನ ಬಸದಿ ಹಾಗೂ ಸುಮಾರು೯೮೧-೮೨ರಲ್ಲಿ ಸ್ಥಾಪಿಸಿದ ಸುಮಾರು ೫೮ ಅಡಿ ಎತ್ತರದ ಗೊಮ್ಮಟಮೂರ್ತಿಯಿಂದಾಗಿ ಪ್ರಮುಖ ಜೈನ ಕೇಂದ್ರವೆನಿಸಿದೆ. 12ವರ್ಷಗಳಿಗೊಮ್ಮೆ ಗೊಮ್ಮಟ ಅಥವಾ ಬಾಹುಬಲಿಯ ಮೂರ್ತಿಗೆ ಇಲ್ಲಿ ನಡೆಯುವ ಮಹಾಮಸ್ತಾಭಿಷೇಕವು ವಿಶ್ವವಿಖ್ಯಾತವಾಗಿದೆ.  ಮದ್ದೂರುತಾಲೂಕು ಅರೆತಿಪ್ಪೂರಿನ ಬಳಿಯ ಗುಡ್ಡದಲ್ಲಿ ಸುಮಾರು ೧೦ ಅಡಿಎತ್ತರದ (೯೧೩) ಬಾಹುಬಲಿ ಮೂರ್ತಿ ಇದೆ. ಬಸ್ತಿ ಹೊಸಕೋಟೆ(ಕೃ.ರಾ.ಪೇಟೆ ತಾ.), ಗೊಮ್ಮಟಗಿರಿ(ಹುಣಸೂರು ತಾ.)ಗಳಲ್ಲಿಹೊಯ್ಸಳರ ಕಾಲದ ಗೊಮ್ಮಟ ಮೂರ್ತಿಗಳಿವೆ. ಮೈಸೂರು ಬಳಿಯಗೊಮ್ಮಟಗಿರಿಯಲ್ಲಿರುವ ಏಕಶಿಲಾ ಗೊಮ್ಮಟಮೂರ್ತಿಯು ೨೦ಅಡಿ ಎತ್ತರವಿದೆ.ಯಕ್ಷಿ ಪದ್ಮಾವತಿಯ ಪೂಜೆಗೆ ಪ್ರಸಿದ್ಧವಾದ ಹುಂಚವುಶಿವಮೊಗ್ಗ ಜಿಲ್ಲೆಯಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯನರಸಿಂಹರಾಜಪುರ ತಾಲೂಕಿನ ಸಿಂಹನಗದ್ದೆಯಲ್ಲಿ ಪ್ರಾಚೀನಜೈನಮಠವಿದೆ. ದಕ್ಷಿಣ ಕನ್ನಡ ಜಿಲ್ಲೆಯೂ ಸಹ ಅನೇಕ ಜೈನಕೇಂದ್ರಗಳನ್ನು ಹೊಂದಿದೆ. ಮೂಡಬಿದರೆಯಲ್ಲಿ ಸಾವಿರಕಂಬದ ಬಸದಿ ಎಂದುಕರೆಯಲಾಗುವ ದೊಡ್ಡ ಬಸದಿಯಿದ್ದು,ಅದರಲ್ಲಿ ಲೋಹದ ಮತ್ತು ಮರದ ಉತ್ತಮ ಜಿನಪ್ರತಿಮೆಗಳಿವೆ. ಅದರಲ್ಲೂ ೧೬ನೇ ಶತಮಾನದ ರಚನೆಗಳಾದ ಕಂಬಗಳು ಹೆಚ್ಚುಕಲಾತ್ಮಕವಾಗಿವೆ. ಇಲ್ಲಿ ಇನ್ನೂ ಅನೇಕ ಜೈನ ಸ್ಮಾರಕಗಳಿವೆ. ಪಕ್ಕದಕಾರ್ಕಳದಲ್ಲಿ ಮುಮ್ಮಡಿ ವೀರಪಾಂಡ್ಯ ದೇವನು ೧೪೩೨ರಲ್ಲಿಪ್ರತಿಪ್ಠಾಪಿಸಿದ ೪೨ ಅಡಿ ಎತ್ತರದ ಏಕಶಿಲಾ ಗೊಮ್ಮಟ ಮೂರ್ತಿ,ಮತ್ತು ಸುಂದರ ಚತುರ್ಮುಖ ಬಸದಿಗಳಿವೆ. ಹತ್ತಿರದ ವೇಣೂರಿನಲ್ಲಿಅಜಿಲ ವೀರ ತಿಮ್ಮರಸನು ೧೬೦೪ರಲ್ಲಿ ನಿಲ್ಲಿಸಿದ ೩೫ ಅಡಿಎತ್ತರದ ಏಕಶಿಲಾ ಗೊಮ್ಮಟ ಮೂರ್ತಿ ಹಾಗೂ ಶಾಂತಿನಾಥನಬಸದಿಗಳಿವೆ. ಪ್ರಸಿದ್ಧ ಶೈವಕ್ಷೇತ್ರವಾದ ಧರ್ಮಸ್ಥಳದಲ್ಲಿ ೩೯ ಅಡಿಎತ್ತರದ ಗೊಮ್ಮಟನ ಏಕಶಿಲಾಮೂರ್ತಿಯನ್ನು ೧೯೮೨ರಲ್ಲಿಪ್ರತಿಷ್ಠಾಪಿಸಲಾಗಿದೆ. ಬೆಳಗಾವಿಯ ಕೋಟೆಯಲ್ಲಿರುವ ಕಲ್ಯಾಣದ ಚಾಲುಕ್ಯ ಶೈಲಿಯ ಕಮಲ ಬಸದಿ ಆಕರ್ಷಕವಾಗಿದೆ. ನಿಪ್ಪಾಣಿಬಳಿಯ ’ತವನಿಧಿ’ ಒಂದು ಪ್ರಾಚೀನ ಸ್ಥಳ. ಅದರಂತೆ ಹೊಸದಾಗಿರೂಪುಗೊಂಡ ಶೇಡಬಾಳದಲ್ಲಿ ೨೪ ತೀರ್ಥಂಕರರ ಶಿಲ್ಪವುಅಮೃತಶಿಲೆಯಲ್ಲಿ ಆಕರ್ಷಕವಾಗಿ ರೂಪುಗೊಂಡಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಅತ್ತಿಮಬ್ಬೆ ಕಟ್ಟಿಸಿದ ಚಾಲುಕ್ಯ ಶೈಲಿಯಬೃಹತ್ ಬ್ರಹ್ಮಜಿನಾಲಯವಿದೆ. ಚಾಮರಾಜನಗರ ತಾಲೂಕುಮಲೆಯೂರಿನ ಬೆಟ್ಟದ ತುದಿಯಲ್ಲಿ ಆಕರ್ಷಕ ಪಾರ್ಶ್ವನಾಥ ಬಸದಿಹಾಗೂ ಜೈನ ಸಂತ ಪೂಜ್ಯಪಾದರ ಸಮಾಧಿಗಳು ಪ್ರಶಾಂತವಾತಾವರಣದಲ್ಲಿವೆ.

 

ಶೈವಕ್ಷೇತ್ರ

ಶಂಕರರು ಎತ್ತಿ ಹಿಡಿದ ಅದ್ವೈತಮತದ ಪ್ರಸಿದ್ಧಮೂಲ ಮಠ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿದೆ. ಶಿವಮೊಗ್ಗಜಿಲ್ಲೆ ಕೂಡ್ಲಿಗಿಯಲ್ಲಿ ಇನ್ನೊಂದು ಮಠವಿದೆ. ಕೋಲಾರ ಜಿಲ್ಲೆ ಆವನಿ,ತುಮಕೂರು ಜಿಲ್ಲೆ ಶಿವಗಂಗೆ, ಬೆಳಗಾವಿಯ ಸಂಕೇಶ್ವರಗಳಲ್ಲಿಈ ಸಂಪ್ರದಾಯದ ಮಠಗಳಿವೆ. ಇವುಗಳಲ್ಲಿ ಧಾರವಾಡ ಜಿಲ್ಲೆಯಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠ ಮತ್ತು ಗದುಗಿನ ಶಿವಾನಂದಮಠ ಪ್ರಸಿದ್ಧವಾಗಿವೆ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಅಪೂರ್ವಶಿಲ್ಪಕಲಾಕೃತಿಗಳು. ಕಾವೇರಿ ತಡಿಯಲ್ಲಿರುವ ತಲಕಾಡುಮತ್ತು ಮುಡುಕುತೊರೆಯ ಬೆಟ್ಟದ ಮಲ್ಲಿಕಾರ್ಜುನ ಲಿಂಗವೂಸೇರಿ ಐದು ಪವಿತ್ರ ಲಿಂಗಗಳು ಪ್ರಸಿದ್ಧವಾಗಿವೆ. ಈ ಸ್ಥಳಗಳಲ್ಲಿಶಿವರಾತ್ರಿಯಂದು ಜಾತ್ರೆ ನಡೆಯುತ್ತದೆ. ಗೋಕರ್ಣವು ಅಖಿಲಭಾರತ ಮಟ್ಟದ ಶೈವಕ್ಷೇತ್ರ. ಅಲ್ಲಿ ರಾವಣನು ಕೈಲಾಸದಿಂದ ತಂದಆತ್ಮಲಿಂಗವು ಪ್ರತಿಷ್ಠಾಪನೆಗೊಂಡು ಮಹಾಬಲೇಶ್ವರನೆಂಬ ಹೆಸರುಪಡೆಯಿತೆಂದು ನಂಬಲಾಗಿದೆ. ಸಮೀಪದ ಮುರುಡೇಶ್ವರದಲ್ಲಿದ್ದಹಳೆಯ ದೇವಸ್ಥಾನವನ್ನು ದ್ರಾವಿಡ ಶೈಲಿಯಲ್ಲಿ ಆಧುನೀಕರಿಸಿ,ವಿಸ್ತರಿಸಿ ಪುನಃ ರಚಿಸಲಾಗಿದೆ. ಇವೆರಡೂ ಸಮುದ್ರ ತೀರದ ಉತ್ತರಕನ್ನಡ ಜಿಲ್ಲೆಯಲ್ಲಿವೆ. ಕವಿಗಳು, ವಿದ್ವಾಂಸರು, ದೊರೆಗಳು ಮತ್ತುಜನಸಾಮಾನ್ಯರೂ ಹಾಡಿ ಹೊಗಳಿದ ವಿರೂಪಾಕ್ಷ ದೇವಸ್ಥಾನಹಂಪೆಯಲ್ಲಿದೆ. ಬೆಂಗಳೂರಿನಲ್ಲಿ ೧೬ನೇ ಶತಮಾನದ ಎತ್ತರವಾದಆಕರ್ಷಕ ರಾಯಗೋಪುರವುಳ್ಳ ಅಲಸೂರು ಸೋಮೇಶ್ವರದೇವಸ್ಥಾನವನ್ನು ಕೆಂಪೇಗೌಡ ಕಟ್ಟಿಸಿರುವನು. ಮಡಿಕೇರಿಯಲ್ಲಿಕೊಡಗಿನ ದೊರೆಗಳು ೧೯ನೇ ಶತಮಾನದಲ್ಲಿ ಕಟ್ಟಿಸಿದ ಓಂಕಾರೇಶ್ವರದೇವಸ್ಥಾನವಿದೆ. ಕಮಾನು ಮತ್ತು ಗುಮ್ಮಟಗಳಿಂದಾಗಿ ಅದುಹಿಂದೂ-ಮುಸ್ಲಿಂ ಮಾದರಿ ಕಟ್ಟಡದಂತೆ ಕಾಣುತ್ತದೆ. ದಕ್ಷಿಣಕನ್ನಡದ ಧರ್ಮಸ್ಥಳವು ಕರ್ನಾಟಕದಲ್ಲೇ ಜನಪ್ರಿಯ ಶೈವ ಕೇಂದ್ರ.ಮೈಸೂರು ಜಿಲ್ಲೆಯ ನಂಜನಗೂಡು ದೊಡ್ಡದಾದ, ಸಾವಿರವರ್ಷಕ್ಕೂ ಹಳೆಯ ಶ್ರೀಕಂಠೇಶ್ವರ ದೇವಸ್ಥಾನವನ್ನು ಹೊಂದಿದೆನಂಜನಗೂಡು ದೇವಸ್ಥಾನವು ಸುಂದರ ಶಿಲಾಮೂರ್ತಿಗಳನ್ನೂಹೊಂದಿದ್ದು ಶೈವ ಪ್ರತಿಮಾ ಶಾಸ್ತ್ರದ ಅಧ್ಯಯನಕ್ಕೆ ಒಂದುವಸ್ತುಪ್ರದರ್ಶನದಂತಿದೆ. ಚಾಮರಾಜನಗರದ ಚಾಮರಾಜೇಶ್ವರದೇವಸ್ಥಾನವನ್ನು ೧೯ನೇ ಶತಮಾನದಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ತಮ್ಮ ತಂದೆ ಚಾಮರಾಜರ ನೆನಪಿಗಾಗಿ ಕಟ್ಟಿಸಿದರು. ಈ ಎರಡೂ ಬೃಹತ್ ಕಟ್ಟಡಗಳು ಅಚ್ಚುಗಾರೆಯ ಅನೇಕ ಸುಂದರಮೂರ್ತಿಗಳನ್ನು ಹೊಂದಿದೆ.

 

ವೀರಶೈವ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯಕೂಡಲಸಂಗಮದಲ್ಲಿರುವ ಸಂಗಮೇಶ್ವರ ದೇವಾಲಯವು ಬಸವೇಶ್ವರರಸಂಪರ್ಕದಿಂದಾಗಿ ಪ್ರಖ್ಯಾತವಾಗಿದೆ. ವೀರಶೈವರಿಗೆಬಸವೇಶ್ವರ ಅಥವಾ ಆತನ ಸಮಕಾಲೀನ ಶರಣರ ಸಂಪರ್ಕವಿರುವಅನೇಕ ಪವಿತ್ರ ನೆಲೆಗಳಿವೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಬಸವಣ್ಣ ಹುಟ್ಟಿದ ಸ್ಥಳ. ಸಮೀಪದ ಇಂಗಳೇಶ್ವರಅವನ ತಾಯಿಯ ತವರೂರು, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮವು ಆತನ ಆಧ್ಯಾತ್ಮ ಸಾಧನಾ ಕೇಂದ್ರವಾಗಿದ್ದು, ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳದಲ್ಲಿದೆ. ಇತ್ತೀಚೆಗೆಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವನ್ನು ನಿರ್ಮಿಸುವ ಮೂಲಕಕೂಡಲ ಸಂಗಮವನ್ನು ಪ್ರವಾಸೋಧ್ಯಮ ಕೇಂದ್ರವನ್ನಾಗಿಅಭಿವೃದ್ಧಿಪಡಿಸಲಾಗಿದೆ.ಬೀದರ್ ಜಿಲ್ಲೆಯ ಬಸವ ಕಲ್ಯಾಣ, ನಂತರದ ಚಾಲುಕ್ಯರರಾಜಧಾನಿಯಾಗಿತ್ತು. ಅಲ್ಲಿ ಬಸವಣ್ಣ ಸಮಾಜೋಧಾರ್ಮಿಕಆಂದೋಲನ ನಡೆಸಿದ್ದರು. ಉತ್ತರ ಕನ್ನಡದ ಉಳವಿಯುಅರಣ್ಯದ ನಡುವೆ ಪ್ರಶಾಂತ ಸ್ಥಳದಲ್ಲಿದ್ದು, ಬಸವಣ್ಣನ ಅಕ್ಕನಮಗ ಚನ್ನಬಸವಣ್ಣನ ಸಮಾಧಿ ಅಲ್ಲಿದೆ. ಶಿವಮೊಗ್ಗೆಯ ಬಳ್ಳಿಗಾವಿ,ಕಲ್ಯಾಣದ ಚಾಲುಕ್ಯರ ಕಾಲದ ಪ್ರಸಿದ್ಧ ಕಲಾಕೇಂದ್ರ. ಇದನ್ನುಅಲ್ಲಮಪ್ರಭುವಿನ ಹುಟ್ಟೂರು ಎಂದೂ ಗುರುತಿಸಲಾಗಿದೆ.ಸಮೀಪದ ಉಡುತಡಿಯು ಅಕ್ಕಮಹಾದೇವಿಯ ಊರೆಂದುದಾಖಲೆಗಳಿಂದ ತಿಳಿದು ಬರುತ್ತದೆ. ಆನಂತರದ ವೀರಶೈವಸಂತರಿಗೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ.

ಮೈಸೂರು ಜಿಲ್ಲೆಯ ಮಹದೇಶ್ವರ ಬೆಟ್ಟವು ಪವಾಡಪುರುಷ  ಮಹದೇಶ್ವರನಿಗೆ ಸಂಬಂಧಿಸಿದ ಕ್ಷೇತ್ರ. ತುಮಕೂರು ಜಿಲ್ಲೆಯಎಡೆಯೂರು ಇನ್ನೊಬ್ಬ ಪ್ರಖ್ಯಾತ ಶಿವಯೋಗಿ ತೋಂಟದಸಿದ್ಧಲಿಂಗರ ಗದ್ದುಗೆಯನ್ನು ಹೊಂದಿದೆ. ಚಿಕ್ಕಮಗಳೂರುಜಿಲ್ಲೆಯ ಬಾಳೆಹೊನ್ನೂರು ಮತ್ತು ಬಳ್ಳಾರಿ ಜಿಲ್ಲೆಯ ಉಜ್ಜನಿ,ಭಾರತದ ವೀರಶೈವ ಪಂಚಪೀಠಗಳಲ್ಲಿ ಕರ್ನಾಟಕದಲ್ಲಿರುವಎರಡು ಪೀಠಗಳಾಗಿವೆ. ಅಥಣಿಯಲ್ಲಿ ಶಿವಯೋಗಿ ಸಂತರಸಮಾಧಿಯು ಗಚ್ಚಿನ ಮಠದಲ್ಲಿದೆ. ಬೈಲಹೊಂಗಲದ ಬಳಿಯನಾಗನೂರು ಮಠ, ಬೆಳಗಾವಿಯ ಕಲ್ಮಠ, ಅರಭಾವಿಯದುರುದುಂಡೇಶ್ವರ ಮಠ, ಮುರಗೋಡಿನ ಮಹಾಂತಸ್ವಾಮಿಮಠ,ಸಾವಳಗಿಯ ಶಿವಲಿಂಗೇಶ್ವರಮಠ, ಧಾರವಾಡದ ಮುರುಘಾಮಠ,ಮುಂಡರಗಿಯ ಅನ್ನದಾನೇಶ್ವರಮಠ, ಗದುಗಿನ ಡಂಬಳದ ತೋಂಟದಾರ್ಯಮಠ, ಹುಬ್ಬಳ್ಳಿಯ ಮೂರು ಸಾವಿರಮಠ,ಹಾವೇರಿಯ ಮುರುಘಾಮಠ ಮತ್ತು ಹುಕ್ಕೇರಿಮಠ, ಸಿರಿಗೆರೆಯತರಳಬಾಳು ಮಠ, ಚಿತ್ರದುರ್ಗದ ಮುರುಘರಾಜೇಂದ್ರಮಠ,ಚಡಚಣದ ಬಂಥನಾಳಶಿವಯೋಗಿಮಠ, ಇಳಕಲ್ಲಿನಮಹಾಂತಸ್ವಾಮಿಮಠ ಮೊದಲಾದುವು ಪ್ರಸಿದ್ಧವಾಗಿವೆ. ಕಲಬುರಗಿಯ ಶರಣಬಸಪ್ಪ ಅಪ್ಪಗಳ ಸಮಾಧಿ, ಬೆಂಗಳೂರಿನ ಬೇಲಿಮಠ,ತುಮಕೂರು ಬಳಿಯ ಶಿವಕುಮಾರಸ್ವಾಮಿಗಳ ಸಿದ್ಧಗಂಗಾಮಠ,ಮೈಸೂರಿನ ಸುತ್ತೂರು ದೇಶಿಕೇಂದ್ರ ಜಗದ್ಗುರುಗಳಶಿವರಾತ್ರೇಶ್ವರಮಠ, ಕೋಲಾರ ಜಿಲ್ಲೆಯ ನಿಡುಮಾಮಿಡಿಮಠಮುಂತಾದ ವೀರಶೈವ ಮಠಗಳಿರುವ ಸುಕ್ಷೇತ್ರಗಳಿಗೆ ಸಾವಿರಾರುಪ್ರವಾಸಿಗರು ಭೇಟಿ ಕೊಡುತ್ತಾರೆ. ನಿತ್ಯ ಮೈಸೂರು ಸಮೀಪದಗದ್ದಿಗೆ, ಕೆಂಡಗಣ್ಣಸ್ವಾಮಿಯ ಸಮಾಧಿಯಿಂದಾಗಿ ಖ್ಯಾತಿ ಪಡೆದಿದೆ.

 

 

ದತ್ತಾತ್ರೇಯ ಆರಾಧನೆ

ಕರ್ನಾಟಕದಲ್ಲಿ ದತ್ತಾತ್ರೇಯ ಆರಾಧನೆಯೂ ಜನಪ್ರಿಯವಾಗಿದೆ. ಕಲಬುರ್ಗಿ ಜಿಲ್ಲೆಯ ದೇವಲ ಗಾಣಗಾಪುರದಲ್ಲಿ ಕರ್ನಾಟಕದ ಪ್ರಸಿದ್ಧ ಸಂತ ನರಸಿಂಹ ಸರಸ್ವತಿ ಬಹಳ ಕಾಲ ಇದ್ದರು. ಇಲ್ಲಿಗೆ ದೂರದೂರಿಂದ ದತ್ತಾತ್ರೇಯ‌ ಭಕ್ತರು ಬರುತ್ತಾರೆ. ರಾಯಚೂರು ಜಿಲ್ಲೆಯ ಕೃಷ್ಣ ನದಿಯ ದ್ವೀಪ ಕುರುಗಡ್ಡೆಯಲ್ಲಿ ದತ್ತಾತ್ತೇಯ ಭಕ್ತರೂ, ನರಸಿಂಹಸರಸ್ವತಿಗಳ ಗುರುವೂ ಆದ ಶ್ರೀಪಾದವಲ್ಲಭರ ಸಮಾಧಿಯಿದೆ. ಬೆಳಗಾವಿಯ ಬಳಿಯ ಬಾಳೆಕುಂದ್ರಿಯಲ್ಲಿ ದತ್ತಾತ್ರೇಯ ಭಕ್ತರಾದ ಸಂತಬಾಳೆಕುಂದ್ರಿ ಮಹಾರಾಜರ ಸಮಾಧಿಯಿದೆ. ಬೆಳಗಾವಿ ಮುರಗೋಡ ಮತ್ತು ಹಾವೇರಿ ಜಿಲ್ಲೆಯ ಅಗಡಿಯಲ್ಲಿ ಅಂಥದೇ ಕೇಂದ್ರಗಳಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನಗಿರಿಯಲ್ಲಿದತ್ತಾತ್ರೇಯ ಪೀಠವಿದೆ. ಇದಕ್ಕೆ ಹಿಂದೂ-ಮುಸ್ಲಿಮರಿಬ್ಬರೂ ನಡೆದುಕೊಳ್ಳುತ್ತಾರೆ. ಇಲ್ಲಿ ದತ್ತಾತ್ರೇಯನ ಮುಸ್ಲಿಂ ಭಕ್ತನಾದ ದಾದಾ ಹಯಾತ್ ಖಲಂದರ್ ಇದ್ದು ದತ್ತಾತ್ರೇಯನನ್ನು  ಪೂಜಿಸಿದ್ದು, ಅವರ ಸಮಾಧಿ ಇಲ್ಲಿದೆ. ಹುಮ್ನಾಬಾದ್ ಬಳಿಯ ಮಾಣಿಕನಗರವು ಮತ್ತೊಂದು ದತ್ತಾತ್ರೇಯ ಕ್ಷೇತ್ರ. ಇಲ್ಲಿ ಮಾಣಿಕ್ಯಪ್ರಭು ಎಂಬ ಸಂತರು ಆಗಿ ಹೋಗಿದ್ದಾರೆ.

 

ನಾಥಪಂಥ

ಶೈವರಲ್ಲಿ ನಾಥಪಂಥೀಯರಿದ್ದಾರೆ. ಖಾನಾಪುರ ತಾಲೂಕಿನ ಹಂಡಿ ಬಡಗನಾಥ, ನಿಪ್ಪಾಣಿ ಬಳಿಯ ಅಪ್ಪಚಿವಾಡಿಮತ್ತು ಮಂಗಳೂರಿನ ಕದರಿ-ಇವು ಪ್ರಸಿದ್ಧ ಕೇಂದ್ರಗಳು. ಶಿವನ ಅವತಾರವೆನಿಸಿದ ಭೈರವ ಅನೇಕ ಕಡೆ ಆರಾಧಿಸಲ್ಪಡುತ್ತಾನೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮತ್ತು ಕೋಲಾರ ಜಿಲ್ಲೆಯ ಸೀತಿಬೆಟ್ಟ ಇದಕ್ಕೆ ತುಂಬಾ ಪ್ರಸಿದ್ಧವಾಗಿವೆ. ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಜನಾಂಗದ ಪ್ರಸಿದ್ಧ ಮಠವಿದೆ.

 

ಮೈಲಾರ ಆರಾಧನೆ

ಮೈಲಾರ ಮಾರ್ತಾಂಡ ಅಥವಾಮಾಲತೇಶ ಅಥವಾ ಖಂಡೋಬ ಕೂಡ ಶಿವನ ಅವತಾರವೇ.ಅವನ ದೇವಸ್ಥಾನಗಳು ರಾಣಿಬೆನ್ನೂರು ತಾಲೂಕಿನ ದೇವರಗುಡ್ಡ,ಬಳ್ಳಾರಿ ಜಿಲ್ಲೆಯ ಮಣ್ಣೆತ್ತು ಮೈಲಾರ, ಬೀದರ್ ಜಿಲ್ಲೆಯಖಾನಾಪುರ, ಬೆಳಗಾವಿ ಜಿಲ್ಲೆಯ ಮಂಗಸೂಳಿ ಮತ್ತು ಮಂಡ್ಯಜಿಲ್ಲೆಯ ಬೆಳ್ಳೂರು ಮತ್ತು ಭೈರಾಪಟ್ಟಣಇವೆಲ್ಲವೂ ಯಾತ್ರಿಕರಿಗೆಮೈಲಾರನ ಮುಖ್ಯ ತೀರ್ಥಕ್ಷೇತ್ರಗಳೆನಿಸಿವೆ.

 

ವೀರಭದ್ರ

ವೀರಭದ್ರನು ವೀರಶೈವಧರ್ಮದ ಮತ್ತೊಬ್ಬಜನಪ್ರಿಯ ಮೂರ್ತಸ್ವರೂಪ. ಆತನನ್ನು ಶಿವನಸುಪುತ್ರನೆನ್ನಲಾಗಿದೆ.ಅವನ ಆರಾಧನಾ ಸ್ಥಳಗಳು ವಿಜಯನಗರ ಕಾಲದಿಂದಕರ್ನಾಟಕದಾದ್ಯಂತಜನಪ್ರಿಯವಾಗಿವೆ. ಕೃಷ್ಣಾದಂಡೆಯಯೆಡೂರು ಮತ್ತು ಬೆಳಗಾವಿ ಜಿಲ್ಲೆಯ ಗೊಡಚಿ, ಬೆಂಗಳೂರುಜಿಲ್ಲೆಯ ಮೊಗಬಾಳು ಮತ್ತು ಸಾವನದುರ್ಗ, ಮೈಸೂರುಜಿಲ್ಲೆಯ ಚನ್ನಪ್ಪನಪುರ ಮತ್ತು ಹಂಪೆಯ ಉದ್ಧಾನ ವೀರಭದ್ರದೇವಸ್ಥಾನಗಳು ಈ ದೈವದ ಗಮನಾರ್ಹ ಯಾತ್ರಾಸ್ಥಳಗಳೆನಿಸಿವೆ.

 

ಶಕ್ತಿ ದೇವತಾ ಉಪಾಸನೆ

ಶಕ್ತಿ ದೇವತೆಯ ಉಪಾಸನೆಅನೇಕರಲ್ಲಿದೆ. ಗ್ರಾಮದೇವತೆಯರಾದ ಮಾರಮ್ಮ, ದುರ್ಗಮ್ಮ,ಪಟಾಲಮ್ಮ, ಮಾತಂಗಮ್ಮ ಇತ್ಯಾದಿ ದೇವತೆಗಳನ್ನು ಆಕೆಯೊಡನೆಸಮೀಕರಿಸಲಾಗಿದೆ. ಶಕ್ತಿಕ್ಷೇತ್ರಗಳಲ್ಲಿ ಖ್ಯಾತವಾದುವು, ಸನ್ನತಿಯ(ಕಲಬುರ್ಗಿ) ಚಂದ್ರಲಾಂಬ, ಛಾಯಾಭಗವತಿ, ಬಳ್ಳಾರಿಯಬಳಾರಮ್ಮ, ಚಿಂಚಲಿಯ ಮಾಯವ್ವ, ಸೌದತ್ತಿ ಎಲ್ಲಮ್ಮ, ಬಾದಾಮಿ (ಬಾಗಲಕೋಟೆ) ಬಳಿಯ ಬನಶಂಕರಿ, ಇಟಗಿ ಭೀಮಾಂಬಿಕಾ, ಹಂಪೆಯ ಭುವನೇಶ್ವರಿ, ಸಿರಸಿ (ಉತ್ತರ ಕನ್ನಡ)ಯ ಮಾರಿಕಾಂಬ, ಕುಕ್ಕನೂರಿನ ಮಹಾಮಾಯಿ, ಮೈಸೂರಿನಚಾಮುಂಡೇಶ್ವರಿ, ಮೈಸೂರು ಜಿಲ್ಲೆ ಬನ್ನೂರಿನ ಹೇಮಾದ್ರಮ್ಮ,ಮದ್ದೂರಿನ ಮದ್ದೂರಮ್ಮ, ಹಾಸನ ಬಳಿಯ ದೊಡ್ಡಗದ್ದವಳ್ಳಿಯಮಹಾಲಕ್ಷ್ಮಿ, ಹಾಸನದ ಹಾಸನಾಂಬ, ಶಿವಗಂಗೆಯ ಹೊನ್ನಮ್ಮ,ಬೆಂಗಳೂರಿನ ಅಣ್ಣಮ್ಮ, ಕೊಲ್ಲೂರು ಮೂಕಾಂಬಿಕಾ, ಕಟೀಲುದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಮಂಗಳೂರಿನಮಂಗಳಾದೇವಿ, ಬೆಂಗಳೂರು ಬಳಿಯ ಹುಸ್ಕೂರಿನ ಮರಿಯಮ್ಮ,ಕೋಲಾರದ ಕೋಲಾರಮ್ಮ ಮುಂತಾದ ದೇವಸ್ಥಾನಗಳು ಶಕ್ತಿ  ಉಪಾಸಕರು ಆರಾಧಿಸುವ ಪ್ರಮುಖ ಯಾತ್ರಾಸ್ಥಳಗಳಾಗಿವೆ.

 

ಕರಗ

ಶಕ್ತಿ ಆರಾಧನೆ ನಿದರ್ಶನವಾಗಿ ದೇವಿಯನ್ನುಆರಾಧಿಸುವ ಕರಗೋತ್ಸವವು ಬೆಂಗಳೂರು ನಗರ, ನಗರದ ಕೆಲವುಬಡಾವಣೆ, ಮಾಲೂರು, ಕೋಲಾರ, ಕೆಂಗೇರಿ, ರಾಮನಗರ,ಮೈಸೂರು ಮುಂತಾದೆಡೆ ಬಹಳವಿಜೃಂಭಣೆಯಿಂದ ಮೂರರಿಂದಐದು ದಿನಗಳು ಜರುಗುತ್ತದೆ.

 

ವೈಷ್ಣವ ಕ್ಷೇತ್ರಗಳು

ವೈಷ್ಣವ ಕ್ಷೇತ್ರಗಳಲ್ಲಿ ಉಡುಪಿಮುಂಚೂಣಿಯಲ್ಲಿದೆ. ಉಡುಪಿಯಲ್ಲಿ ಮಧ್ವಚಾರ್ಯರುಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದರು. ಕೃಷ್ಣನ ಸೇವೆಗೆಂದುಅವರು ಎಂಟು(ಅಷ್ಟ) ಮಠಗಳನ್ನು ಸ್ಥಾಪಿಸಿದರು. ಮಾಧ್ವವೈಷ್ಣವರಿಗೆ ವಾದಿರಾಜರ ಬೃಂದಾವನವಿರುವ ಉತ್ತರಕನ್ನಡದ ಸೋಂದಾ ಮೊದಲಾದ ಕ್ಷೇತ್ರಗಳಿವೆ. ಮಳಖೇಡದಲ್ಲಿ(ಕಲಬುರ್ಗಿ ಜಿಲ್ಲೆ) ಜಯತೀರ್ಥ ಯತಿಗಳ ಬೃಂದಾವನವಿದೆ.ಹೊಸಪೇಟೆಯಲ್ಲಿ ಈ ಪರಂಪರೆಯ ಉತ್ತರಾದಿ ಮಠವಿದೆ.ಹಂಪೆಯ ಸಮೀಪ ಆನೆಗೊಂದಿಯ ಬಳಿ ತುಂಗಭದ್ರೆಯನಡುಗಡ್ಡೆಯಲ್ಲಿ ಮಾಧ್ವಸಂಪ್ರದಾಯದ ಒಂಬತ್ತು ದಾರ್ಶನಿಕರನವ ಬೃಂದಾವನಗಳಿವೆ. ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿಶ್ರೀಪಾದರಾಜರ ಬೃಂದಾವನವಿದೆ. ನಂಜನಗೂಡು, ಸೋಸಲೆ,ತಿರುಮಕೂಡಲು, ಹೊಳೆನರಸೀಪುರ, ಅಬ್ಬೂರು ಮತ್ತುಸವಣೂರು ಮಾಧ್ವರ ಇತರ ಪ್ರಮುಖ ತೀರ್ಥಕ್ಷೇತ್ರಗಳು.ಸವಣೂರಿನಲ್ಲಿ ಹೈದರನಿಂದ ಸನ್ಮಾನಿತರಾದ ಉತ್ತರಾಧಿಮಠದಸತ್ಯಬೋಧತೀರ್ಥರ ಬೃಂದಾವನವಿದೆ. ಹಾವೇರಿ ಜಿಲ್ಲೆಕಾಗಿನೆಲೆಯಲ್ಲಿ ವೈಷ್ಣವ ಸಂತ ಕನಕದಾಸರ ಸಮಾಧಿಯಿದ್ದು,ಈಚೆಗೆ ಕನಕಗುರುಪೀಠವೆಂಬ ಹೆಸರಿನ ಮಠ ಸ್ಥಾಪನೆಯಾಗಿದೆ.

 

ಶ್ರೀವೈಷ್ಣವ ಕ್ಷೇತ್ರಗಳು

ಶ್ರೀವೈಷ್ಣವ ಧರ್ಮವನ್ನು ೧೨ನೇಶತಮಾನದಲ್ಲಿ ರಾಮಾನುಜಾಚಾರ್ಯರು ಪ್ರಚುರಪಡಿಸಿದರು. ಅವರು ಮೈಸೂರು ಜಿಲ್ಲೆಯ ಮಿರ್ಲೆ, ಸಾಲಿಗ್ರಾಮ, ಮಂಡ್ಯಜಿಲ್ಲೆಯ ತೊಣ್ಣೂರು ಮತ್ತು ಮೇಲುಕೋಟೆಗಳಲ್ಲಿ ಸ್ವಲ್ಪ ಕಾಲನೆಲೆಸಿದ್ದರು. ಅವರು ಮೇಲುಕೋಟೆ ಚೆಲುವರಾಯ ಸ್ವಾಮಿಯದೇವಸ್ಥಾನವನ್ನು ನವೀಕರಿಸಿದರೆನ್ನಲಾಗಿದೆ. ಮೈಸೂರಿನಲ್ಲಿಪರಕಾಲ ಮಠವೂ, ಬೆಂಗಳೂರು ಮಲ್ಲೇಶ್ವರಂನಲ್ಲಿ ಜೀಯರ್ಯತಿರಾಜ ಮಠಗಳೂ ಇವೆ. ಶ್ರೀವೈಷ್ಣವರಿಗೆ ಪವಿತ್ರವೆನ್ನಲಾದಮೇಲಿನ ಸ್ಥಳಗಳಲ್ಲದೆ ರಾಜ್ಯದಾದ್ಯಂತ ಶ್ರೀವಿಷ್ಣುವಿನ ೨೪(ಚತುರ್ ವಿಂಶತಿ) ಅವತಾರ ಮೂರ್ತಿಗಳ ದೇವಸ್ಥಾನಗಳೂಇವೆ. ಮೇಲುಕೋಟೆ, ಬಿಳಿಗಿರಿರಂಗನಬೆಟ್ಟ ಮತ್ತು ಹಿಮವತ್ಗೋಪಾಲಸ್ವಾಮಿ ಬೆಟ್ಟಗಳ ಬಗ್ಗೆ ಈಗಾಗಲೇ ಉಲ್ಲೇಖಿಸಲಾಗಿದೆ.

 

 

ನರಸಿಂಹನ ಆರಾಧನೆ

ನರಸಿಂಹನ ಆರಾಧನೆಯ ಪ್ರಸಿದ್ಧಸ್ಥಳಗಳಾದ ಬೆಳಗಾವಿ ಜಿಲ್ಲೆಯ ರಾಯಬಾಗ, ಸತ್ತಿ ಮತ್ತು ಹಲಸಿ;ಹಂಪೆಯ ಲಕ್ಷೀನರಸಿಂಹ; ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತುಮದ್ದೂರು; ಬೀದರ್‌ನ ಬಳಿಯ ಝರಣಿ ನರಸಿಂಹ,ತುಮಕೂರುಜಿಲ್ಲೆಯ ದೇವರಾಯನದುರ್ಗ ಮತ್ತು ರಾಯಚೂರು ಜಿಲ್ಲೆಯಕೊಪ್ರ, ಬಾಗಲಕೋಟೆ ಜಿಲ್ಲೆಯ ಸಾವಳಗಿ, ವಿಜಯಪುರದ ಬಳಿಯತೊರವಿ, ಮೈಸೂರು ಜಿಲ್ಲೆಯ ಟಿ.ನರಸೀಪುರ ಶ್ರೀರಂಗಪಟ್ಟಣದನರಸಿಂಹನ ಪ್ರಮುಖ ಆರಾಧನೆಯ ಪ್ರಸಿದ್ಧ ಕ್ಷೇತ್ರಗಳಾಗಿವೆ.

 

ರಂಗನಾಥನ ಆರಾಧನೆ

ಕರ್ನಾಟಕದಲ್ಲಿರುವ ಕಾವೇರಿಯದ್ವೀಪಗಳಾದ ಶ್ರೀರಂಗಪಟ್ಟಣ ಮತ್ತು ಶಿವಸಮುದ್ರಗಳುರಂಗನಾಥನ ಸುಪ್ರಸಿದ್ಧ ಆರಾಧನಾ ಸ್ಥಳಗಳಾಗಿದ್ದು,ಚಿಕ್ಕಬಳ್ಳಾಪುರ ಜಿಲ್ಲೆಯ ರಂಗಸಲ ಹಾಗೂ ರಾಯಚೂರುಜಿಲ್ಲೆಯ ಆನೆಗೊಂದಿಯ ರಂಗನಾಥ ಸ್ವಾಮಿ ದೇವಸ್ಥಾನವೂಅಷ್ಟೇ ಪ್ರಖ್ಯಾತವಾಗಿದೆ. ಬೇಲೂರಿನ ಚೆನ್ನಕೇಶವ, ತಲಕಾಡಿನಕೀರ್ತಿನಾರಾಯಣ, ಗದುಗಿನ ವೀರನಾರಾಯಣ ದೇವಸ್ಥಾನಗಳುಪ್ರಸಿದ್ಧ ಶ್ರೀವೈಷ್ಣವ ಯಾತ್ರಾ ಸ್ಥಳಗಳು. ಮೈಸೂರು ಜಿಲ್ಲೆಯಚುಂಚನಕಟ್ಟೆ, ಚಿಕ್ಕಮಗಳೂರು ಬಳಿಯ ಹಿರೇಮಗಳೂರು ಮತ್ತುಕೃಷ್ಣರಾಜನಗರಗಳಲ್ಲಿ ಶ್ರೀರಾಮನ ದೇವಸ್ಥಾನಗಳಿವೆ. ವಿಷ್ಣುವನ್ನುವರಾಹ ರೂಪದಲ್ಲಿ ಆರಾಧಿಸುವ ದೇವಾಲಯಗಳು ಹಲಸಿ (ಬೆಳಗಾವಿ ಜಿಲ್ಲೆ), ವರಾಹನಾಥ ಕಲ್ಲಹಳ್ಳಿ (ಮಂಡ್ಯ ಜಿಲ್ಲೆ) ಹಾಗೂಮೈಸೂರು ನಗರದಲ್ಲಿವೆ.

 

ಹನುಮಂತನ ಆರಾಧನೆ

ಇವನು ಜನಪ್ರಿಯ ವೈಷ್ಣವ ದೇವರು.ಹನುಮಂತನ ದೇವಸ್ಥಾನಗಳು ಹಂಪಿ, ಬನ್ನೂರು (ಮೈಸೂರು),ಬಾಣಸವಾಡಿ (ಬೆಂಗಳೂರು), ಯಲಗೂರು (ವಿಜಯಪುರ),ಮುಳಬಾಗಿಲು (ಕೋಲಾರ), ಕದರ ಮಂಡಲಗಿ (ಹಾವೇರಿ ಜಿಲ್ಲೆ),ಕೆಂಗಲ್ ಆಂಜನೇಯ (ಚನ್ನಪಟ್ಟಣ ಬಳಿ) ಮುಂತಾಗಿ ಹತ್ತಾರುಇವೆ. ಮಂಡ್ಯ ಜಿಲ್ಲೆಯ ಕಾವೇರಿ ನದಿ ತಟದ ಮುತ್ತತ್ತಿಯಲ್ಲಿಹನುಮಂತನ (ಮುತ್ತತ್ತಿರಾಯ) ಪ್ರಸಿದ್ಧವಾದ ದೇವಸ್ಥಾನವಿದೆ.

 

ಸುಬ್ರಹ್ಮಣ್ಯನ ಉಪಾಸನೆ

ರಾಜ್ಯದಲ್ಲಿ ಸುಬ್ರಹ್ಮಣ್ಯನ ಹಲವಾರುಉಪಾಸನಾ ಕೇಂದ್ರಗಳಿವೆ. ಬಳ್ಳಾರಿ ಜಿಲ್ಲೆಯ ನೈಸರ್ಗಿಕ ಬೆಟ್ಟಪ್ರದೇಶದ ಸಂಡೂರು, ಬೆಂಗಳೂರು ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ,ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಇಂಥ ಕೆಲವು ಪ್ರಮುಖಕ್ಷೇತ್ರಗಳಾಗಿವೆ. ಕೆಲವು ಕಡೆ ಕಾರ್ತಿಕೇಯನನ್ನು ನಾಗಪೂಜೆಯೊಂದಿಗೆಸಮೀಕರಿಸಲಾಗಿದ್ದು, ವಿಶಾಲವಾದ ಪ್ರದೇಶದಲ್ಲಿ ಹೂ ಹಾಗೂಬಣ್ಣಗಳಿಂದ ನಾಗಮಂಡಲ ರಚಿಸಿ ಆರಾಧಿಸಲಾಗುತ್ತದೆ. ಇದರ

ಸುತ್ತ ನುರಿತ ಪೂಜಾರಿಗಳು ವಿಶೇಷ ನೃತ್ಯಾಚರಣೆಯಲ್ಲಿತೊಡಗುತ್ತಾರೆ. ನಾಗಮಂಡಲ ಪೂಜೆ, ಯಕ್ಷಗಾನಗಳು ಕರಾವಳಿಗೆಬರುವ ಯಾತ್ರಿಕರಿಗೆ ವಿಶಿಷ್ಟ ಅನುಭವವನ್ನು ಒದಗಿಸುತ್ತವೆ.ಜೊತೆಗೆ ಭೂತಾರಾಧನೆಯೂ ಸಹ ವಿನೂತನ ಅನುಭವವನ್ನುನೀಡುತ್ತದೆ. ಇನ್ನೊಂದು ಜನಪದ ಕಲೆಯಾದ ವೀರಗಾಸೆಕುಣಿತ ವೀರಭದ್ರನನ್ನು ಸಂತೃಪ್ತಿಪಡಿಸಲು ಇರುವಂಥದ್ದು.ಇದೂ ಸಹ ವೀಕ್ಷಕರನ್ನುಮಂತ್ರಮುಗ್ಧಗೊಳಿಸುತ್ತದೆ. ಬೀರೆದೇವರನ್ನು ತೃಪ್ತಿಗೊಳಿಸಲು ಡೊಳ್ಳು ಬಾರಿಸುತ್ತಾ ಮಾಡುವಕುಣಿತ ಹಾಗೂ ಮೈಸೂರು ಭಾಗದಲ್ಲಿ ಹೆಸರಾಗಿರುವ ಪಟ್ಟದ ಕುಣಿತವೂ ಸಹ ಮೈನವಿರೇಳಿಸುವ ಕಲೆ. ಮುಖವಾಡ ಧರಿಸಿವಾದ್ಯದ ಗತ್ತಿಗೆ ನರ್ತಿಸುವ ಸೋಮನ ಕುಣಿತವೂ ಕೂಡವಿನೂತನ ಅನುಭವವನ್ನು ಕೊಡುತ್ತದೆ. ಮಹದೇಶ್ವರನ ಭಕ್ತರಾದದೇವರಗುಡ್ಡದವರು ಪ್ರದರ್ಶಿಸುವ ಕಂಸಾಳೆ ನೃತ್ಯವೂ ಸಹ ಅತ್ಯಂತಆಕರ್ಷಕ. ನಾಡಿನ ಇಂಥ ಅನೇಕ ಜನಪದ ಕಲೆಗಳು ಪ್ರೇಕ್ಷಕರನೆನಪಿನಲ್ಲಿ ಬಹುಕಾಲ ಉಳಿಯುವಂಥ ವೈಶಿಷ್ಟ್ಯತೆಯನ್ನುಹೊಂದಿವೆ. ಜಾನಪದ ವಿದ್ವಾಂಸ ಎಚ್.ಎಲ್.ನಾಗೇಗೌಡರ, ಕರ್ನಾಟಕಜಾನಪದ ಪರಿಷತ್ತಿನ ವತಿಯಿಂದ ಮೈಸೂರು-ಬೆಂಗಳೂರು ರಸ್ತೆಯರಾಮನಗರದ ಬಳಿ ಸ್ಥಾಪಿಸಿರುವ ಜಾನಪದ ಲೋಕ, ಉಡುಪಿಯಎಂ.ಜಿ.ಎಂ. ಕಾಲೇಜಿನಲ್ಲಿರುವ ಪ್ರಾಂತೀಯ ಸಂಶೋಧನಾಕೇಂದ್ರಗಳು, ದೃಶ್ಯ-ಶ್ರವಣ ಸುರುಳಿಗಳನ್ನುಒದಗಿಸುತ್ತಿದ್ದು, ಮೈಸೂರು ವಿಶ್ವವಿದ್ಯಾಲಯದಲ್ಲಿಬೃಹತ್ತಾದ ಜಾನಪದ ವಸ್ತು ಸಂಗ್ರಹಾಲಯವಿದೆ. ಇತ್ತೀಚೆಗೆ ಪ್ರತ್ಯೇಕಜಾನಪದ ವಿಶ್ವವಿದ್ಯಾಲಯವನ್ನೂ ರಾಜ್ಯದಲ್ಲಿ ಸ್ಥಾಪಿಸಲಾಗಿದೆ.

ಸಿಖ್ ಪಂಥ

ಸಿಖ್ಖರಿಗೆ ಬೀದರ್‌ನಲ್ಲಿ ಪ್ರಸಿದ್ಧ ನಾನಕ್ಝಿರಾ ಇದ್ದು, ಗುರುನಾನಕರು ಈ ಸ್ಥಳಕ್ಕೆ ಬಂದಿದ್ದರೆನ್ನಲಾಗಿದೆ.ಬೆಂಗಳೂರಿನ ಹಲಸೂರಿನಲ್ಲಿ ಅಮೃತಶಿಲೆಯಲ್ಲಿ ಇತ್ತೀಚೆಗೆಕಟ್ಟಿರುವ ಗುರುದ್ವಾರವಿದೆ. ಬೆಂಗಳೂರಿನ ಪಾರ್ಸಿಗಳು ತಮಗೆಂದೇಅಗ್ನಿದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.

 

 

ರಾಷ್ಟ್ರೀಯ ಉದ್ಯಾನಗಳು

ರಾಜ್ಯದಲ್ಲಿ ಅನೇಕ ರಾಷ್ಟ್ರೀಯಉದ್ಯಾನವನ ಮತ್ತು ವನ್ಯಜೀವಿ ಧಾಮಗಳಿವೆ. ಬೆಂಗಳೂರುಬಳಿಬನ್ನೇರುಘಟ್ಟದಲ್ಲಿರುವ ರಾಷ್ಟ್ರೀಯ ಉದ್ಯಾನವು ೧೦೦ಚ.ಕಿ.ಮೀ. ವಿಸ್ತಾರವಿದ್ದು, ಅಲ್ಲಿ ಪ್ರಾಣಿಗಳ ಸಫಾರಿ ಕೂಡ ಇದೆ.ಮೈಸೂರು ಜಿಲ್ಲೆಯ ಬಂಡಿಪುರ ಅಭಯಾರಣ್ಯ ೮೦೦ ಚ.ಕಿ.ಮೀ.ಪ್ರದೇಶವನ್ನು ಒಳಗೊಂಡಿದ್ದು,ಕಾಡಾನೆಗಳಿಗೆ ಪ್ರಸಿದ್ಧವಾಗಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಪಶ್ವಿಮ ಘಟ್ಟದಲ್ಲಿದ್ದು೬೦೦ ಚ.ಕಿ.ಮೀ. ಪ್ರದೇಶವನ್ನು ಹೊಂದಿದ್ದು ಎಲ್ಲಾ ಬಗೆಯ ಪ್ರಾಣಿಮತ್ತು ಸಸ್ಯವರ್ಗಗಳಿಂದ ಕೂಡಿದೆ. ಕುದುರೆಮುಖ ಕಬ್ಬಿಣ ಕಂಪನಿಈ ಉದ್ಯಾನದ ನಡುವೆ ಮಲ್ಲೇಶ್ವರದಲ್ಲಿದ್ದು, ತನ್ನದೇ ಉಪನಗರಹಾಗೂ ಅತಿಥಿಗೃಹಗಳನ್ನು ಹೊಂದಿದೆ. ಕೊಡಗು ಮತ್ತು ಮೈಸೂರುಜಿಲ್ಲೆಗಳನ್ನು ಒಳಗೊಂಡು ನಾಗರಹೊಳೆ ರಾಷ್ಟ್ರೀಯ ಉದ್ಯಾನವು

ಹುಲಿಗಳ ವಾಸದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರವಾಸಿಗಳಿಗೆಅನುಕೂಲವಾಗುವಂತೆ ವಸತಿ ಸೌಲಭ್ಯವಿದೆ. ಕೊಡಗಿನ ಬ್ರಹ್ಮಗಿರಿ(ಕಾವೇರಿ) ವನ್ಯಜೀವಿ ಧಾಮದಲ್ಲಿ ಪ್ರಾಣಿಗಳು ತಮ್ಮ ಸ್ವೇಚ್ಚಾಚಟುವಟಿಕೆಗಳೊಂದಾಗಿರುವುದನ್ನು ಕಾಣಬಹುದಾಗಿದೆ. ಇದುಸಮುದ್ರಮಟ್ಟಕ್ಕಿಂತ ೨೦೦೦ ದಿಂದ ೩೦೦೦ ಅಡಿ ಎತ್ತರದಲ್ಲಿದೆ.ಧಾರವಾಡ ಜಿಲ್ಲೆಯ ರಾಣಿಬೆನ್ನೂರು ವನ್ಯಜೀವಿ ಧಾಮ ಕೂಡಸುಮಾರು ೧೦೦ ಚ.ಕಿ.ಮೀ. ವಿಸ್ತಾರವಾಗಿದ್ದು ಚಂಚಲತೆಯಿಂದಕೂಡಿದ ಕಪ್ಪು ಸಾರಂಗಗಳ ಬೀಡಾಗಿದೆ. ಆದಿಚುಂಚನಗಿರಿಯಲ್ಲಿನವಿಲುಧಾಮವಿದೆ ಅದೊಂದು ಗುಡ್ಡಪ್ರದೇಶವಾಗಿದ್ದು ಅಲ್ಲಿಭೈರವ ದೇವಸ್ಥಾನ ಮತ್ತು ಒಕ್ಕಲಿಗರ ಮಠವಿದೆ. ಬೆಳಗಿನ ಹೊತ್ತುನಲಿದಾಡುವ ನವಿಲ ಹಿಂಡುಗಳನ್ನು ಅಲ್ಲಿ ಕಾಣಬಹುದು. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ವನ್ಯಜೀವಿ ಧಾಮವು ಕಾಡುಕೋಣ,ಜಿಂಕೆ ಮತ್ತು ಇತರ ಕಾಡು ಪ್ರಾಣಿಗಳಿಗೆ ಪ್ರಸಿದ್ಧವಾಗಿದೆ.ಶ್ರೀರಂಗಪಟ್ಟಣದ ಬಳಿಯ ರಂಗನತಿಟ್ಟು ಕಾವೇರಿ ತೀರದ ಒಂದು ಸಣ್ಣ ದ್ವೀಪವಾಗಿದ್ದು ಪಕ್ಷಿಧಾಮವೆನಿಸಿದೆ. ಎಲ್ಲ ಬಗೆಯ ವಲಸೆಹಕ್ಕಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಮರಗಳ ಮೇಲೆ,ಪೊದೆಗಳಲ್ಲಿ ಗೂಡುಕಟ್ಟಿ ಮೊಟ್ಟೆಯಿಟ್ಟು, ಮರಿ ಮಾಡಿ ಅವಕ್ಕೆಗುಟುಕು ಕೊಡುವುದನ್ನು ಕಾಣಬಹುದು. ಅಲ್ಲೇ ಸಮೀಪವಿರುವಗೆಂಡೆ ಹೊಸಹಳ್ಳಿ ಇನ್ನೊಂದು ಪಕ್ಷಿಧಾಮವಾಗಿ ರೂಪುಗೊಳ್ಳುತ್ತಿದೆ.ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡಿವಿ ಪಕ್ಷಿಧಾಮಹಾಗೂ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಪಕ್ಷಿಧಾಮಗಳುಪ್ರಸಿದ್ಧವಾಗಿವೆ. ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಕೊಕ್ಕರೆಬೆಳ್ಳೂರು ಇನ್ನೊಂದು ಪ್ರಸಿದ್ಧ ಪಕ್ಷಿಧಾಮವಾಗಿದೆ. ಕಾಡುಪ್ರಾಣಿಗಳಜೀವನ ಹಾಗೂ ಕಾಡಿನ ನೈಸರ್ಗಿಕ ಸೊಬಗನ್ನು ಪ್ರೀತಿಸುವಪ್ರವಾಸಿಗಳು, ಘಟ್ಟದಾರಿಯಲ್ಲಿ ಗುಡ್ಡ ಏರಬೇಕೆಂಬ ಉತ್ಸಾಹಿಗಳುಇಂಥ ಸ್ಥಳಗಳನ್ನು ಸಂದರ್ಶಿಸಿ ಕರ್ನಾಟಕದ ನೈಸರ್ಗಿಕಚೆಲುವನ್ನು ನೋಡಿ ಆನಂದಿಸಬಹುದಾಗಿದೆ. ಇಲ್ಲಿನ ಕೆರೆಗಳು,ಹೊಳೆಗಳು ಮತ್ತು ನೀರ್‌ಬಿಲ್‌ಳುಗಳು ಪ್ರವಾಸಿಗರ ಆಯಾಸವನ್ನುಹೋಗಲಾಡಿಸುತ್ತವೆ. ಪಕ್ಷಿಗಳ ಕಲರವ, ಕಾಡಿನಕೀಟಗಳಗುಯ್‌ಕಾರ ಸ್ವಾಭಾವಿಕವಾದ ಸಂಗೀತವನ್ನು ಒದಗಿಸಿಪ್ರವಾಸಿಗರ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಕರ್ನಾಟಕದಲ್ಲಿಯಾಣ, ಕವಲೆದುರ್ಗ, ಗೊಟ್ಮಂಗೊಟಿ, ಬಿಳಿಗಿರಿರಂಗನಬೆಟ್ಟ,ಕಬ್ಬಾಳದುರ್ಗ, ಭೀಮನಬೆಟ್ಟ, ಬಸವನಬೆಟ್ಟ, ಮಹದೇಶ್ವರ ಬೆಟ್ಟ,ಸಿದ್ಧರ ಬೆಟ್ಟ, ಮಧುಗಿರಿ, ನಂದಿ, ಶಿವಗಂಗೆ, ಸಿದ್ಧಗಂಗೆ, ಕೋಲಾರಮುಂತಾದೆಡೆಯ ಬೆಟ್ಟಗಳು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದತಾಣಗಳಾಗಿವೆ.

 

ಗಿರಿಧಾಮಗಳು

ಕರ್ನಾಟಕದಲ್ಲಿ ತಂಪಾದ ಅನೇಕ ಗಿರಿಧಾಮಗಳಿದ್ದು, ಕುದುರೆಮುಖ ಅಂಥದೊಂದಾದರೆ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿಯು ಸುಂದರಕಾಡಿನ ನಡುವೆ ತೋಟಗಾರಿಕೆ ಇಲಾಖೆಯವರು ನಿರ್ಮಿಸಿರುವ ವಸತಿ ಸೌಕರ್ಯ ಹೊಂದಿರುವ ಇನ್ನೊಂದು ಗಿರಿಧಾಮವಾಗಿದೆ. ಮೈಸೂರು ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟವು ಅಲ್ಲಿರುವ ಪ್ರಾಚೀನ ಶ್ರೀನಿವಾಸ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದ್ದು, ಗುಡಿಯ ಸುತ್ತಲೂ ಅಭಯಾರಣ್ಯವಿದೆ. ಈ ಪ್ರದೇಶದ ಸುತ್ತಮುತ್ತ ಕಾಡಾನೆಗಳು ಕಂಡು ಬರುತ್ತವೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಸೋಲಿಗರು ಇಲ್ಲಿ ವಾಸಿಸುತ್ತಾರೆ. ಗುಂಡ್ಲುಪೇಟೆ ಬಳಿಯ (ಚಾಮರಾಜನಗರ ಜಿಲ್ಲೆ) ಹಿಮವತ್ ಗೋಪಾಲಸ್ವಾಮಿಬೆಟ್ಟವು ಮತ್ತೊಂದು ಸುಂದರ ಗಿರಿಧಾಮವಾಗಿದೆ. ಬೆಟ್ಟದ ತುದಿಯಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನವಿದೆ. ಅಲ್ಲಿ ವಿಶ್ರಾಂತಿಗೃಹವಿದ್ದು  ಊಟ ತಿಂಡಿ ಅನುಕೂಲವೂ ಇದೆ. ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಮೇಲೆ ಭೋಗ ಲಕ್ಷ್ಮೀನರಸಿಂಹ ಮತ್ತು ಯೋಗಾನರಸಿಂಹನ ದೇವಸ್ಥಾನಗಳಿವೆ. ಅದೊಂದು ತಂಪಾದ ಗಿರಿಧಾಮ. ಈ ಬೆಟ್ಟವನ್ನು ಕಲ್ಲಿನ ಕೋಟೆ ಬಳಸಿ ನಿಂತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿದುರ್ಗ ಒಂದು ಪ್ರಾಚೀನ ಸ್ಥಳವಾಗಿದ್ದು, ಬೆಟ್ಟದ ಮೇಲೆ ಚೋಳರ ಕಾಲದ ಯೋಗನಂದೀಶ್ವರದೇವಸ್ಥಾನವಿದೆ. ಸುತ್ತಲೂ ಹೈದರ್ ಮತ್ತು ಟಿಪ್ಪು ನಿರ್ಮಿಸಿದಕೋಟೆಯಿದೆ. ಅಲ್ಲಿ ವಸತಿ ಸೌಕರ್ಯವಿದೆ. ತೋಟಗಾರಿಕೆಇಲಾಖೆಯವರು ಬೆಟ್ಟದ ಮೇಲೆ ಉದ್ಯಾನವನ್ನು ನಿರ್ಮಿಸಿದ್ದಾರೆ.ಇಲ್ಲಿಗೆ ಮಹಾತ್ಮಾಗಾಂಧಿಯವರು ತಮ್ಮ ಆರೋಗ್ಯ ಚೇತರಿಕೆಗಾಗಿ ಎರಡೂ ಸಲ ಬಂದು ಕೆಲದಿನದ ಮಟ್ಟಿಗೆ ತಂಗಿದ್ದರು. ಶಿವಮೊಗ್ಗಜಿಲ್ಲೆಯ ಆಗುಂಬೆಯು ಬೆಟ್ಟಪ್ರದೇಶವಲ್ಲದಿದ್ದರೂ ಬೆಟ್ಟದ ದಾರಿಯಲ್ಲಿ ಸೂರ್ಯಾಸ್ತದ ಅವರ್ಣನೀಯ ಸೊಬಗನ್ನುಕಾಣಿಸುವ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತುಮಕೂರುಜಿಲ್ಲೆಯ ಸಿದ್ಧರ ಬೆಟ್ಟ, ಬಳ್ಳಾರಿ ಜಿಲ್ಲೆಯ ರಾಮದುರ್ಗ, ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿಯಲ್ಲೂ ಗಿರಿದುರ್ಗಗಳಿವೆ.

 

ಅಣೆಕಟ್ಟೆಗಳು

ಕೃಷ್ಣ ರಾಜ ಸಾಗರ (ಕನ್ನಂಬಾಡಿ ಕಟ್ಟೆ ಮಂಡ್ಯಜಿಲ್ಲೆ), ನಾರಾಯಣಪುರ ಹಾಗೂ ಆಲಮಟ್ಟಿ (ವಿಜಯಪುರಜಿಲ್ಲೆ), ತುಂಗಭದ್ರ ಜಲಾಶಯ ಹೊಸಪೇಟೆ, ಚಂದ್ರಪಳ್ಳಿ (ಕಲಬುರಗಿ ಜಿಲ್ಲೆ), ನವಿಲು ತೀರ್ಥ (ಬೆಳಗಾವಿಜಿಲ್ಲೆ), , ಲಕ್ಕವಳ್ಳಿ, ಬೀಚನಹಳ್ಳಿ,ಮಾರಿಕಣಿವೆ,ಗಾಜನೂರು, ಹಿಡಕಲ್, ವಾರಂಜಾ, ವಾರಾಹಿ, ಸೂಫಾ,ಮುಂತಾದವು ರಾಜ್ಯದಲ್ಲಿರುವ ಪ್ರಮುಖ ಅಣೆಕಟ್ಟೆಗಳಾಗಿದ್ದು,ಪ್ರವಾಸಿಗರಿಗೆ ಮುದ ನೀಡುತ್ತದೆ.

 

ಕಡಲ ಕಿನಾರೆಗಳು

ಸಮುದ್ರ ತಡಿಯ ಸೂರ್ಯಸ್ನಾನ,ಸಮುದ್ರದ ಅಲೆಯ ಸ್ಪರ್ಶ ಒದಗಿಸುವ ಚೆಲುವಿನ ಕಡಲಕಿನಾರೆಗಳಿವೆ.ಮಂಗಳೂರು ಬಳಿಯ ಒಂದು ದ್ವೀಪದಂತಿರುವ ಬೆಂಗ್ರೆಮತ್ತು ಉಲ್ಲಾಳಗಳು ಗಮನಾರ್ಹ ಕಡಲತೀರಗಳು. ಉಲ್ಲಾಳದಲ್ಲಿಕುಟೀರಗಳಿದ್ದು, ಆಹಾರ ಸೌಕರ್ಯವಿದೆ. ಮಂಗಳೂರಿನಿಂದಅನತಿ ದೂರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ಟೆಕ್ನಾಲಜಿ (ಸೂರತ್ಕಲ್ ರೀಜನಲ್ ಎಂಜಿನಿಯರಿಂಗ್)ಕಾಲೇಜಿನ ಬಳಿಯ ಲೈಟ್‌ಹೌಸ್ ತೀರ, ತಣ್ಣೀರುಬಾವಿಯಕಡಲತೀರ, ಉಡುಪಿಯ ಬಳಿಯ ಮಲ್ಪೆಗಳಲ್ಲಿ ನೀಡಿದಾದಕಡಲಕಿನಾರೆಯಿದೆ,ಸಮೀಪವೇ ದ್ವೀಪವೂ ಇದೆ. ಕರಾವಳಿಕರ್ನಾಟಕದ ಎರಡು ಜಿಲ್ಲೆಗಳ ಗಡಿಯಲ್ಲಿರುವ ಕುಂದಾಪುರತಾಲೂಕಿನ ಮರವಂತೆಯು ಒಂದು ಕಡೆ ಸುಂದರ ಕಡಲಂಚನ್ನುಇನ್ನೊಂದು ಕಡೆ ನದಿಯನ್ನು ಹೊಂದಿದ್ದು, ನಡುವೆ ರಸ್ತೆಯುಸಾಗಿದೆ. ಇಲ್ಲಿಯ ಸೂರ್ಯಾಸ್ತದ ಸುಂದರ ದೃಶ್ಯ ಮನಮೋಹಕ.ಉತ್ತರ ಕನ್ನಡದ ಪಾವನಕ್ಷೇತ್ರ ಗೋಕರ್ಣವೂ ಸಹ ಉದ್ದನೆಯಕಡಲ ತೀರವನ್ನು ಹೊಂದಿದೆ. ಗೋವಾಗೆ ಭೇಟಿ ಕೊಡುವ ಜನರಿಗೆಇದು ಎರಡನೆಯ ತಂಗುದಾಣವಾಗಿದೆ. ಕಾರವಾರವು ತನ್ನ ಸುತ್ತಅನೇಕ ಕಿನಾರೆಗಳನ್ನು ಹೊಂದಿದ್ದು ರವೀಂದ್ರನಾಥ ಠಾಗೋರರುಕಾರವಾರದ ಕಡಲ ತೀರದ ಮರೆಯಲಾಗದ ಅನುಭವಗಳನ್ನು೧೮೮೩ರಲ್ಲಿ ತಮ್ಮ ಅಣ್ಣ ನ್ಯಾಯಾಧೀಶ ಸತ್ಯೇಂದ್ರನಾಥರೊಂದಿಗೆಕಾರವಾರದಲ್ಲಿದ್ದಾಗ ಪಡೆದಿದ್ದು, ಅವರ ಕಾವ್ಯಗಳಲ್ಲಿ ಅದುವ್ಯಕ್ತಗೊಂಡಿದೆ. ಅವರು ತಮ್ಮ ಪ್ರಥಮ ಕವನವನ್ನು ಇಲ್ಲಿಯೇರಚಿಸಿದರೆಂದು ನಂಬಲಾಗುತ್ತದೆ. ಇವು ಇಂಥ ಹಲವಾರುಸ್ಥಳಗಳಲ್ಲಿ ಕೆಲವು ಮಾತ್ರ. ಇವು ಪ್ರವಾಸಿಗಳಿಗೆ ಸಮುದ್ರದನಂಟನ್ನು ಒದಗಿಸುವುದರ ಜೊತೆಗೆ ಸಮುದ್ರ ಆಹಾರದ ರುಚಿನೋಡುವ ಅವಕಾಶವನ್ನೂ ಒದಗಿಸುತ್ತವೆ.

 

 

ದ್ವೀಪಗಳು

ಕಡಲತೀರವು ಮನಮೋಹಕವಾದ ಕೆಲವುದ್ವೀಪಗಳನ್ನು ಹೊಂದಿದೆ. ಅವುಗಳಲ್ಲಿ ಮಲ್ಪೆ ಬಳಿಯ ಸೇಂಟ್ಮೇರಿ ದ್ವೀಪ ಅಥವಾ ತೊನ್ಸೆಪಾರು ವಿಶಿಷ್ಟವಾದ ಕಂಬಮಾದರಿಯ ಸ್ತಂಭಾಕೃತಿಯ ಸಂದುಗಳು ನಿಸರ್ಗದತ್ತವಾದಶಿಲಾರಚನೆಯಾಗಿವೆ. ಮುರುಡೇಶ್ವರದ ಬಳಿಯ ನೇತ್ರಾಣಿದ್ವೀಪಮತ್ತೊಂದು ಆಕರ್ಷಕ ಸ್ಥಳ. ಹೊನ್ನಾವರದ ಬಳಿಯಬಸವರಾಜದುರ್ಗ ಇನ್ನೊಂದು ಜಲದುರ್ಗವಾಗಿದ್ದು ಇದನ್ನುಕಟ್ಟಿಸಿದ್ದು ಕೆಳದಿ ಅರಸರು (ಸುಮಾರು ೧೬ ಮತ್ತು ೧೭ನೇಶತಮಾನ). ಇದು ಬೃಹತ್‌ಶಿಲೆಗಳ ಸುಭದ್ರ ಕೋಟೆಯಿಂದ ಅವೃತವಾಗಿದ್ದು, ಗುಡ್ಡದ ಮೇಲೆ ಸಮತಟ್ಟಾದ ಸ್ಥಳವಿದೆ.ಕಾರವಾರದ ಬಳಿ ದೇವಗಡ ಮತ್ತು ಕೂರ್ಮಗಡ ಎಂಬ ಎರಡುದ್ವೀಪಗಳಿವೆ. ಕೂರ್ಮಗಡದಲ್ಲಿ ನರಸಿಂಹನ ದೇವಾಲಯವಿದೆ.ಇವನ್ನು ಸಂದರ್ಶಿಸುವುದೇ ಒಂದು ಅಪೂರ್ವ ಅನುಭವ.ಪ್ರವಾಸಿಗರು ಸಮುದ್ರವನ್ನು ದಾಟಿ ಹೋಗಲು ತಾವೇಅನುಕೂಲಗಳನ್ನು ಮಾಡಿಕೊಳ್ಳಬೇಕಾಗಿದ್ದು ಹಾಗೆ ಶ್ರಮಪಟ್ಟುಹೋದವರು ವಿಶಿಷ್ಟ ಅನುಭವವನ್ನು ಪಡೆದು ಹಿಂತಿರುಗುತ್ತಾರೆ.

 

 

ಚಿತ್ರಕಲೆ

ಸಂದರ್ಶಕರು ವಿಜಯನಗರ ಕಾಲದಹಳೆಯ ವರ್ಣಚಿತ್ರ, ಭಿತ್ತಿಚಿತ್ರಗಳ ಬಗ್ಗೆ ಆಸಕ್ತಿಯುಳ್ಳವರಾದರೆಹಂಪೆಯ ವಿರೂಪಾಕ್ಷ ದೇವಸ್ಥಾನ ಮತ್ತು ಮೈಸೂರು ಜಿಲ್ಲೆಯಹರದನಹಳ್ಳಿಗಳಲ್ಲಿ ಅಂತಹವನ್ನು ನೋಡಬಹುದಾಗಿದೆ.ಬಾದಾಮಿಯ ಮೂರನೇ ಗವಿಯಲ್ಲಿ ಏಳನೆಯ ಶತಮಾನದವರ್ಣ ಚಿತ್ರಗಳನ್ನು ಕಾಣಬಹುದು. ಆದರೆ ಅವುಗಳ ವರ್ಣ ಈಗಮಸುಕಾಗಿದೆ. ಶ್ರವಣಬೆಳಗೊಳದ ಜೈನ ಮಠದಲ್ಲಿ ಪ್ರಾಚೀನಕಾಲದ ಹಳೆಯ ವರ್ಣ ಚಿತ್ರಗಳಿವೆ. ವಿಜಯಪುರದ ಆಸರ್ಮಹಲ್ ಅರಮನೆಯಲ್ಲಿ ೧೭ನೇ ಶತಮಾನದ ವರ್ಣ ಚಿತ್ರಗಳನ್ನುಕಾಣಬಹುದಾಗಿದೆ. ವಿಜಯಪುರದ ವಸ್ತು ಸಂಗ್ರಹಾಲಯದಲ್ಲಿ ರಾಗಮಾಲಾವರ್ಣಚಿತ್ರಗಳು, ಚಾಂದಬೀಬಿ ಮತ್ತು ರಾಜ-ರಾಣಿಯರಚಿತ್ರಗಳನ್ನು ಸಂರಕ್ಷಿಸಿಡಲಾಗಿದೆ. ವಿಜಯಪುರದ ಕುಮಟಗಿಯಈಜುಕೊಳದ ಸುತ್ತಣ ಗೋಡೆಯಲ್ಲಿ ವರ್ಣಚಿತ್ರಗಳಿವೆ. ಬೀದರ್ಬಳಿಯ ಅಷ್ಟೂರಿನಲ್ಲಿರುವ ಬಹಮನಿ ಅರಸರ ಗುಮ್ಮಟಗಳೂವರ್ಣಾಲಂಕೃತವಾಗಿದೆ. ಶ್ರೀರಂಗಪಟ್ಟಣದ ದರಿಯ ದೌಲತ್ಅರಮನೆಯಲ್ಲಿ ೧೮ನೇ ಶತಮಾನದ ವರ್ಣಚಿತ್ರಗಳುಕಾಣಸಿಗುತ್ತವೆ. ಅವುಗಳಲ್ಲಿ ಕೆಲವು ಯುದ್ಧ ದೃಶ್ಯಗಳಿದ್ದು,ಉಳಿದವು ಭಾವಚಿತ್ರಗಳಾಗಿವೆ. ತುಮಕೂರು ಬಳಿಯ ಸಿಬಿಯನರಸಿಂಹಸ್ವಾಮಿ ದೇವಸ್ಥಾನವು ೧೮ನೇ ಶತಮಾನದ ಕೆಲವುವರ್ಣಚಿತ್ರಗಳನ್ನು ಹೊಂದಿದೆ. ಅದೇ ಶತಮಾನದ ವರ್ಣಚಿತ್ರಗಳನ್ನುಚಾಮರಾಜನಗರದ ದೇವಾಲಯ, ಕೊಳ್ಳೇಗಾಲದ ಹಳೇಪರಿವಾರದವರ ಚಾವಡಿಯಲ್ಲಿ ಮತ್ತು ಕೊಡಗಿನ ನಾಲ್ಕು ನಾಡುಅರಮನೆಗಳಲ್ಲಿ ಕಾಣಬಹುದಾಗಿದೆ. ಕಿತ್ತೂರಿನ ಅರಮನೆಯಮರದ ತೊಲೆಗಳ ಮೇಲಿದ್ದ ವರ್ಣಚಿತ್ರಗಳನ್ನು ಧಾರವಾಡಜಿಲ್ಲೆಯ ಅಮ್ಮಿನಭಾವಿ ಹಿರೇಮಠಕ್ಕೆ ವರ್ಗಾಯಿಸಲಾಗಿದೆ.೧೯ನೇ ಶತಮಾನದ ವರ್ಣಚಿತ್ರಗಳು ನಿಪ್ಪಾಣಿ (ಬೆಳಗಾವಿಜಿಲ್ಲೆ), ನರಗುಂದ (ಧಾರವಾಡ ಜಿಲ್ಲೆ) ಅರಮನೆಗಳಲ್ಲಿ ಮತ್ತುಮೈಸೂರು ಅರಮನೆಯ ಆವರಣದ ಎರಡು ದೇವಸ್ಥಾನಗಳಲ್ಲಿವೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರಿನ ಸಾಂಪ್ರದಾಯಿಕವರ್ಣಚಿತ್ರಗಳನ್ನು ಸಂರಕ್ಷಿಸಿಡಲಾಗಿದೆ. ಅವು ಬಹುಮಟ್ಟಿಗೆಮೈಸೂರು ಶೈಲಿಯ ದೇವಾನುದೇವತಾ ವರ್ಣಮಯಚಿತ್ರಗಳಾಗಿವೆ. ೧೯ನೇ ಶತಮಾನದ ದುಂಡನೆಯ ಸಣ್ಣ ಗಂಜೀಫಕಾರ್ಡುಗಳು ಮತ್ತು ಹಾವು-ಏಣಿ ತರಹದ ಆಟದ ಪಟ್ಟಿಕೆಗಳಲ್ಲಿಒಳ್ಳೆಯ ವರ್ಣಚಿತ್ರಗಳಿವೆ. ಇವು ಮೈಸೂರು ಅರಸರ ಆಸ್ಥಾನದಲ್ಲಿತಯಾರಾದವು. ಕೆಲವು ಕಲಾಶಾಲೆಗಳು ಆಧುನಿಕ ವರ್ಣಚಿತ್ರಗಳಸಂಗ್ರಹವನ್ನು ಹೊಂದಿವೆ. ಅವುಗಳಲ್ಲಿ ಕಲಬುರ್ಗಿದ ಅಂದಾನಿಕಲಾಶಾಲೆ, ಗದಗಿನ ಅಕ್ಕಿ ಕಲಾಶಾಲೆ, ಧಾರವಾಡದ ಹಾಲಭಾವಿಕಲಾಶಾಲೆ, ಹುಬ್ಬಳ್ಳಿಯ ಮಿಣಜಿಗಿ ಕಲಾಶಾಲೆ, ಹಡಪದ್‌ರಬೆಂಗಳೂರಿನ ಕೆನ್ ಕಲಾಶಾಲೆ, ದಾವಣಗೆರೆಯ ವಿಶ್ವವಿದ್ಯಾಲಯಕಲಾಶಾಲೆ, ಚಿತ್ರಕಲಾ ಪರಿಷತ್ತು ಹಾಗೂ ಕಲಾ ಮಂದಿರಗಳನ್ನುವಿಶೇಷವಾಗಿ ಉಲ್ಲೇಖಿಸಬಹುದು. ಸಾಮಾನ್ಯವಾಗಿ ಕಲಾಪ್ರದರ್ಶನಗಳು ಬೆಂಗಳೂರು, ದಾವಣಗೆರೆ, ಉಡುಪಿ ಮತ್ತು ಇತರಸ್ಥಳಗಳಲ್ಲಿ ನಡೆಯುತ್ತವೆ. ಮೈಸೂರಿನಲ್ಲಿರುವ ಚಾಮರಾಜೇಂದ್ರದೃಶ್ಯಕಲಾ ಅಕಾಡೆಮಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿಇಲಾಖೆಯು ನಿರ್ವಹಿಸುತ್ತಿದೆ.

 

ಕರಕುಶಲಕಲೆ

ಕರ್ನಾಟಕದ ಕರಕುಶಲಕಲೆಗಳಲ್ಲಿಕಿಂಕಾಪು ನೇಯ್ಗೆಯನ್ನು ಬೆಂಗಳೂರು, ಹುಬ್ಬಳ್ಳಿ ಮತ್ತು ಇತರಕಡೆಗಳಲ್ಲಿ ನೋಡಬಹುದಾಗಿದೆ. ಮರದ ಕುಸುರಿ ಕೆತ್ತನೆ ಕೆಲಸಮೈಸೂರಿನಲ್ಲಿ ನಡೆದಿದ್ದು, ಇದೊಂದು ಅಪೂರ್ವ ಕಲೆಯಾಗಿದೆ.ಮೆರುಗಿನ ಸಾಮಾನುಗಳ ತಯಾರಿಕೆಯು ಚನ್ನಪಟ್ಟಣ, ಕಿನ್ನಾಳಮತ್ತು ಕಲಘಟಗಿಗಳಲ್ಲಿವೆ. ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿವಿಶೇಷ ರೀತಿಯ ಕರಕುಶಲ ಕೆಲಸಕ್ಕೆ ಹೆಸರಾಗಿದೆ. ಕಲ್ಲಿನಿಂದವಿಗ್ರಹಗಳನ್ನು ಕೆತ್ತುವ ಶಿಲ್ಪಕಾರ್ಯ ಮೈಸೂರು, ಶಿವಾರಪಟ್ಟಣ,ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ನಡೆದಿದೆ. ಗುಡಿಕಾರರು ಶ್ರೀಗಂಧದ ಕೆತ್ತನೆಯನ್ನು ಸಾಗರ, ಸೊರಬ, ಕುಮಟಾಮತ್ತು ಹೊನ್ನಾವರಗಳಲ್ಲಿ ಸಣ್ಣ ಮತ್ತು ದೊಡ್ಡಪ್ರಮಾಣದಲ್ಲಿಮಾಡುತ್ತಿದ್ದಾರೆ. ಶ್ರೀಗಂಧವು ತುಟ್ಟಿಯಾದ್ದರಿಂದ ಅವರು ಇತರಮೃದು ಮತ್ತು ಒರಟು ಮರವನ್ನು ಕೆತ್ತನೆಗೆ ಬಳಸುವುದೂ ಉಂಟು.ಅವರ ಸೂಕ್ಷ್ಮ ಕೆತ್ತನೆಗೆ ಸರಿಸಾಟಿಯಿಲ್ಲ. ಕಪ್ಪು ಲೋಹದ ಮೇಲ್ಮೈಮೇಲೆ ಬೆಳ್ಳಿ ಅಥವಾ ಚಿನ್ನದ ವಿನ್ಯಾಸಗಳನ್ನು ಕಲಾತ್ಮಕವಾಗಿಉಬ್ಬಚ್ಚು ಮಾಡುತ್ತಾರೆ. ಲಂಬಾಣಿಗಳು ತಮ್ಮ ವಿಶೇಷ ಕಸೂತಿಕೆಲಸಕ್ಕೆ ಹೆಸರಾಗಿದ್ದಾರೆ. ಕರ್ನಾಟಕದಲ್ಲಿ ಬೊಂಬೆ ತಯಾರಿಕೆಯೂ ಸಹ ವಿಶೇಷ ಪ್ರತಿಭೆಯದಾಗಿದ್ದು, ಚನ್ನಪಟ್ಟಣವು ಇದಕ್ಕೆ ಪ್ರಸಿದ್ಧವಾಗಿದೆ.ಮಂಡ್ಯ ಜಿಲ್ಲೆಯ ನಾಗಮಂಗಲ, ಬೆಂಗಳೂರು ಜಿಲ್ಲೆ ರಾಮೋಹಳ್ಳಿಬಳಿಯ ಗೊಲ್ಲರದೊಡ್ಡಿ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಯಚಿಕ್ಕೋಡಿಗಳಲ್ಲಿ ಅದ್ಭುತವಾದ ಹಿತ್ತಾಳೆ ಕೆಲಸಗಾರರು ಇದ್ದಾರೆ.ಬೆತ್ತ ಅಥವಾ ಬಿದಿರುಗಳ ಮೇಲೆ ಬೆರಳು ಅಥವಾ ಉಳಿಯಿಂದಕೆಲಸ ಮಾಡುವುದು ರೋಮಾಂಚಕಾರಿ ಅನುಭವ ತರುವಂಥದ್ದು. ಜೋಗರದೊಡ್ಡಿಯಲ್ಲಿ ಕೆನರಾಬ್ಯಾಂಕು ಮತ್ತು ಸಂಡೂರಿನಲ್ಲಿಸಂಡೂರು ಕೈಗಾರಿಕೆಗಳು ಅನೇಕಕುಶಲಕರ್ಮಿಗಳು ಒಂದುಕಡೆ ಕೂಡಿ ಕೆಲಸ ಮಾಡಲು ಕಾರ್ಯಾಗಾರವನ್ನು ತೆರೆದಿದ್ದು,ಅವರು ತಯಾರಿಸಿದ ವಸ್ತುಗಳಿಗೆ ಸರಿಯಾದ ಬೆಲೆ ದೊರಕಿಸಲುಮಾರಾಟ ಮಳಿಗೆಗಳನ್ನೂ ತೆರೆಯಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಕಾವೇರಿ ಎಂಪೋರಿಯಂಮತ್ತು ಇತರ ಕೇಂದ್ರಗಳು ಕರಕುಶಲ ವಸ್ತುಗಳ ಮಾರಾಟಮಳಿಗೆಯನ್ನು ಹೊಂದಿದೆ.

 

 

ವಸ್ತು ಸಂಗ್ರಹಾಲಯ

ರಾಜ್ಯದ ವಸ್ತು ಸಂಗ್ರಹಾಲಯಗಳಲ್ಲಿಮೈಸೂರಿನ ಹಳೆಯ ಭವ್ಯ ಅರಮನೆಯೊಂದರಲ್ಲಿಸಂಯೋಜಿಸಿರುವ ಜಗನ್ಮೋಹನ ಕಲಾಶಾಲೆಯುಕಲಾಪ್ರೇಮಿಗಳಿಗೆ ಮುಖ್ಯವಾದದ್ದಾಗಿದೆ. ಅಲ್ಲಿ ರಾಜಾರವಿವರ್ಮನವೂ ಸೇರಿದಂತೆ ಅನೇಕ ಆಕರ್ಷಕ ವರ್ಣಚಿತ್ರ, ಲೋಹ, ದಂತ ಮತ್ತು ಮರದ ಕೆತ್ತನೆಗಳೇ ಅಲ್ಲದೆ, ವಿವಿಧರಾಜ್ಯಗಳ ಪ್ರಾಚೀನವಾದ ಕಲಾಕೃತಿಗಳ ದೊಡ್ಡ ಸಂಗ್ರಹವೂಇದೆ. ಮೈಸೂರು ಅರಮನೆಯಲ್ಲಿಯೂ ವಿವಿಧ ದೇಶಗಳಕಲಾಕುಶಲ ವಸ್ತುಸಂಗ್ರಹವಿದೆ. ಜೊತೆಗೆ ಸೊಂಟಕ್ಕೆ ಪಟ್ಟಿಯಂತೆಸುತ್ತಿಕೊಳ್ಳಬಹುದಾದ ಖಡ್ಗವೂ ಸೇರಿದಂತೆ ಪೂರ್ವಕಾಲದಆಯುಧಗಳ ಗ್ಯಾಲರಿಯೂ ಇದೆ.ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯ (೧೮೮೦)ಕೂಡ ಪ್ರಾಚೀನ ಕಾಲದ ವೀರಗಲ್ಲು, ಆಯುಧ ಮತ್ತು ಶಿಲ್ಪಗಳಗ್ಯಾಲರಿಯನ್ನು ಹೊಂದಿದೆ. ವಿಶೇಷ ಕೋರಿಕೆಯ ಮೇರೆಗೆ ಹಳೆಯನಾಣ್ಯಗಳ ಸಂಗ್ರಹವನ್ನು ತೋರಿಸುತ್ತಾರೆ. ಕಲಾಶ್ರೇಷ್ಠರಾದಕೆ.ವೆಂಕಟಪ್ಪ,ಕೆ.ಕೆ.ಹೆಬ್ಬಾರ್ ಅವರ ವಿಶೇಷ ಸಂಗ್ರಹಗಳು ಹಾಗೂಕೆ. ವೆಂಕಟಪ್ಪನವರ ಪ್ಲಾಸ್ಟರ್ ಆಫ್ ಪ್ಯಾರಿಸ್ ಸುಡಾ ಮಣ್ಣಿನಪ್ರತಿಮೆ ಶಿಲ್ಪಗಳೂ ಇಲ್ಲಿವೆ. ಶಿವಮೊಗ್ಗ ನಗರದ ಕೆಳದಿ ಶಿವಪ್ಪನಾಯಕನ ಅರಮನೆಯಲ್ಲಿರುವ ಜಿಲ್ಲಾ ವಸ್ತುಸಂಗ್ರಹಾಲಯದಲ್ಲಿಕೆಳದಿರಾಜರ ವಿವಿಧ ವಸ್ತುಗಳನ್ನು ರಕ್ಷಿಸಿಡಲಾಗಿದೆ. ಕಲಬುರಗಿಪ್ರಾಚ್ಯ ವಸ್ತು ಪ್ರದರ್ಶನಾಲಯವು ಬಹಮನಿಗಳ ಕಾಲದವಸ್ತುಗಳನ್ನಷ್ಟೇ ಅಲ್ಲದೇ ಸನ್ನತಿಯಿಂದ ತಂದ ಬೌಧ್ಧ ಶಿಲ್ಪಗಳ(ಅಲಂಕಾರಿಕ ಫಲಕ) ದೊಡ್ಡ ಸಂಗ್ರಹವನ್ನೂ ಹೊಂದಿದೆ.ಚಿತ್ರದುರ್ಗದ ವಸ್ತು ಸಂಗ್ರಹಾಲಯ(೧೯೪೭) ಆ ಪ್ರಾಂತದಪಾಳೆಯಗಾರರಿಗೆ ಸಂಬಂಧಿಸಿದ ವೀರಗಲ್ಲು, ಅಯುಧಗಳೇಮೊದಲಾದ ಪ್ರಾಚೀನ ಅವಶೇಷಗಳನ್ನು ಹೊಂದಿದೆ. ಕಿತ್ತೂರು,ಹಾಸನ, ಕೆಳದಿ, ಶ್ರೀರಂಗಪಟ್ಟಣ, ಶಿವಮೊಗ್ಗ, ಬಾಗಳಿ,ರಾಯಚೂರು,ಹೂವಿನ ಹಡಗಲಿ, ಬಸವಕಲ್ಯಾಣ, ಮಂಗಳೂರು,ಬೀದರ್, ಮೈಸೂರು,ಮಡಕೇರಿ, ಗದಗಗಳಲ್ಲಿ ರಾಜ್ಯ ಸರ್ಕಾರದಪ್ರಾಚ್ಯವಸ್ತು ಸಂಗ್ರಹಾಲಯಗಳಿವೆ.

ಕೇಂದ್ರ ಸರ್ಕಾರ (ಪುರಾತತ್ವ ಸರ್ವೇಕ್ಷಣ)ದ ವಿಜಯಪುರದಗೋಳಗುಮ್ಮಟದ ಬಳಿ ಇರುವ ’ಭಾರತೀಯ ಪುರಾತತ್ವ ಸರ್ವೇಕ್ಷಣಇಲಾಖೆಯ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಆಯುಧಗಳು,ಹಸ್ತಪ್ರತಿಗಳು ಮತ್ತು ವರ್ಣಚಿತ್ರಗಳನ್ನು ವ್ಯವಸ್ಥಿತವಾಗಿಇಡಲಾಗಿದೆ. ಹಂಪಿ(ಕಮಲಾಪುರ)ಯಲ್ಲಿ ಕೂಡ ವಿಜಯನಗರ ಕಾಲದ ಅವಶೇಷಗಳ ಇಂಥದೇ ಪ್ರದರ್ಶನಾಲಯವಿದೆ.ಹಂಪೆಯಲ್ಲಿ ಈಚೆಗೆ ನಡೆದ ಉತ್ಖನನದಲ್ಲಿ ದೊರೆತ ಅನೇಕವಸ್ತುಗಳು ಅದರಲ್ಲಿವೆ. ಶ್ರೀರಂಗಪಟ್ಟಣದ ದರಿಯಾ ದೌಲತ್ಅರಮನೆಯಲ್ಲಿ ಟಿಪ್ಪು ವಸ್ತುಸಂಗ್ರಹಾಲಯವೂ(೧೯೫೯) ಇದ್ದು,ಅದರಲ್ಲಿ ಆತನ ಕಾಲದ ಹಸ್ತಪ್ರತಿ, ವಸ್ತುವಿನ್ಯಾಸ, ನಾಣ್ಯಗಳು,ಆಯುಧಗಳು ಮತ್ತು ವರ್ಣಚಿತ್ರಗಳು ಇವೆ. ಹಳೇಬೀಡು,ಶ್ರೀರಂಗಪಟ್ಟಣ, ಬನವಾಸಿ, ಲಕ್ಕುಂಡಿ, ಬಾದಾಮಿ, ಐಹೊಳೆ,ಪಟ್ಟದಕಲ್ಲು ಮೊದಲಾದ ಸ್ಥಳಗಳಲ್ಲಿ ಕೇಂದ್ರ ಪುರಾತತ್ವ ಇಲಾಖೆಯವಸ್ತುಸಂಗ್ರಹಾಲಯಗಳಿವೆ. ಕರ್ನಾಟಕದಲ್ಲಿರುವ ಅತ್ಯಂತ ಸುಂದರ ಹಾಗೂ ಅತ್ಯುತ್ತಮ ವಸ್ತುಸಂಗ್ರಹಾಲಯವೆಂದರೆ ಪ್ರಸಿದ್ಧ ಯಾತ್ರಾಸ್ಥಳವಾದ ಧರ್ಮಸ್ಥಳದಲ್ಲಿರುವ ’ಶ್ರೀ ಮಂಜುಶಾ’ ಸಂಗ್ರಹಾಲಯ.ಇಲ್ಲಿ ಬಹಳ ಹಿಂದಿನ ಪಾತ್ರೆ, ದಿನಬಳಕೆಯ ವಸ್ತು, ಒಡವೆ, ಕೈಹಾಗೂ ಗೋಡೆ ಗಡಿಯಾರ, ಕಲಾವಸ್ತು, ಟೈಪ್‌ರೈಟರ್‌ಗಳು,ಕಾರು, ನಾಣ್ಯ, ಆಯುಧ, ಪ್ರತಿಮೆ, ಹಸ್ತಪ್ರತಿ, ತಾಮ್ರದ ತಟ್ಟೆ,ಕುತೂಹಲಕಾರಿ ವಸ್ತುಗಳು, ವಸ್ತ್ರ ವಿನ್ಯಾಸಗಳು, ಕಾರು ವಿಮಾನಗಳಿವ.

ರಾಮನಗರ ಬಳಿ ಇರುವ ಜಾನಪದ ಲೋಕಅಷ್ಟೇ ಮಹತ್ವದ್ದಾಗಿದೆ.ಬೆಂಗಳೂರುಎನ್.ಎಂ.ಕೆ.ಆರ್.ವಿ.ಕಾಲೇಜಿನ ’ಶಾಶ್ವತಿ’,ಹೆಣ್ಣುಮಕ್ಕಳ ಅಪರೂಪದ ಒಂದು ವಸ್ತುಸಂಗ್ರಹಾಲಯ. ಅವರುಬಳಸುವ, ರಚಿಸುವ, ಧರಿಸುವ ವಸ್ತುಗಳು ಒಟ್ಟಾರೆ ಅವರಜೀವನದ ಸಂಪೂರ್ಣ ಚಿತ್ರ ಕೊಡುವ ವಸ್ತುಗಳು ಅಲ್ಲುಂಟು. ಭರತಖಂಡದಲ್ಲಿಯೇ ಅತ್ಯುತ್ತಮ ಶಾರೀರಿಕ ಲಕ್ಷಣಾವಿಧಾನ ಶಾಸ್ತ್ರದ ವಸ್ತು ಸಂಗ್ರಹಾಲಯವು ಕರ್ನಾಟಕದಲ್ಲಿದೆಎಂಬುದು ಅಭಿಮಾನದ ಮಾತು. ಅಂಥದ್ದು ಬೆಳಗಾವಿಯಜವಾಹರಲಾಲ್ ನೆಹರು ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿದೆ. ಇದು ಶ್ರೀಸಾಮಾನ್ಯ ಮತ್ತು ವೈದ್ಯಕೀಯ ವ್ಯಕ್ತಿಗಳಿಗೆ ಶೈಕ್ಷಣಿಕಹಾಗೂ ಮನರಂಜಕ ಪ್ರದರ್ಶನವಾಗಿದೆ. ಏಕೆಂದರೆ ಮನುಷ್ಯನದೇಹದ ಎಲ್ಲ ಅಪಸರಣಗಳನ್ನು ಅದರ ಎಲ್ಲಾ ಸಾಧ್ಯತೆಗಳನ್ನು ವಿವರವಾದ ಶೈಕ್ಷಣಿಕ ಟಿಪ್ಪಣೆಯೊಡನೆ ತೆರೆದಿಡುವ ಪ್ರಯತ್ನವನ್ನುಈ ವಸ್ತುಸಂಗ್ರಹಾಲಯದಲ್ಲಿ ಮಾಡಲಾಗಿದೆ.ಕರ್ನಾಟಕವು ದೇಶದಲ್ಲೇ ವೈವಿಧ್ಯತೆಯಿಂದ ಕೂಡಿದಆಕರ್ಷಕವಾದ ಮೃಗಾಲಯವನ್ನು ಮೈಸೂರಿನಲ್ಲಿ ಹೊಂದಿದೆ. ಶ್ರೀಚಾಮರಾಜೇಂದ್ರ ಮೃಗಾಲಯವನ್ನು ನೂರು ಎಕರೆ ಪ್ರದೇಶದಲ್ಲಿ೧೮೯೨ರಲ್ಲಿ ಸ್ಥಾಪಿಸಲಾಗಿದ್ದು, ೧೯೦೨ ರಿಂದ ಸಾರ್ವಜನಿಕವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಈ ಮೃಗಾಲಯವು೨೨೦ ಹೆ. ಪ್ರದೇಶವನ್ನು ವ್ಯಾಪಿಸಿದ್ದು, ಎಲ್ಲಾ ಬಗೆಯ ಸುಮಾರುಒಂದು ಸಾವಿರ ಪ್ರಾಣಿಗಳು ಇಲ್ಲಿವೆ. ಈ ಪೈಕಿ ವಿಶಿಷ್ಟವೆನಿಸಿರುವಹೊರದೇಶದ ಪ್ರಾಣಿಗಳಾದ ಕರಡಿ, ಚಿಂಪಾಂಜಿ ಒರಾಂಗೊಟಾಮುಂತಾದ ಪ್ರಾಣಿಗಳಿದ್ದು ಬಿಳಿ ಹುಲಿಯೂ ಸೇರಿದೆ. ಇತ್ತೀಚೆಗೆ,ಮೃಗಾಲಯದಲ್ಲಿ ಪ್ರಾಣಿವೀಕ್ಷಣೆಗೆ ವಾಹನ ಸೌಕರ್ಯವನ್ನುಕಲ್ಪಿಸಲಾಗಿದೆ. ಬೆಂಗಳೂರು ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯಉದ್ಯಾನವನದಲ್ಲಿ ಪ್ರಾಣಿಗಳ ಅಭಯಾರಣ್ಯ(ಸಫಾರಿ)ವೂ ಇದೆ. ಗದಗ ಜಿಲ್ಲೆಉ ಬಿಂಕದಕಟ್ಟಿಯಲ್ಲೂ ಮೃಗಾಲಯವನ್ನು ನೋಡಬಹುದಾಗಿದೆ.

 

ಕೋಟೆಗಳು

ಕೋಟೆಗಳಪ್ರಾಚೀನತೆಯನ್ನು ನೂತನ ಶಿಲಾಯುಗ-ಬೃಹತ್ ಶಿಲಾಯುಗ ಸಂಸ್ಕೃತಿಯಷ್ಟೇ ಹಿಂದಕ್ಕೆ ಗುರುತಿಸಬಹುದಾದರೂ, ಚಾರಿತ್ರಿಕವಾಗಿಸನ್ನತಿಯು ಅತ್ಯಂತ ಪ್ರಾಚೀನ ಕೋಟೆಯ ಕುರುಹನ್ನುಹೊಂದಿದ್ದರೆ, ಮೈಸೂರಿನ ಕೋಟೆ ಅರ್ವಾಚಿನ ಕಾಲದನಿರ್ಮಾಣವಾಗಿದೆ. ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿಸುಮಾರು ೫೦೦ ಕೋಟೆಗಳಿವೆಯೆಂದು ಅಂದಾಜಿಸಲಾಗಿದೆ.ಪ್ರಾಚೀನ ರಾಜಧಾನಿಗಳಾದ ಬನವಾಸಿ, ಬಾದಾಮಿ, ಐಹೊಳೆ,ತಲಕಾಡು, ಮಳಕೇಡ, ಮಧ್ಯಕಾಲೀನ ರಾಜಧಾನಿಗಳಾದಬಸವಕಲ್ಯಾಣ, ವಿಜಯನಗರ(ಹಂಪೆ), ಕಲಬುರಗಿ, ಬೀದರ್,ವಿಜಯಪುರ, ಶ್ರೀರಂಗಪಟ್ಟಣ, ಕೆಳದಿ, ಚಿತ್ರದುರ್ಗ, ಮೈಸೂರುಇತ್ಯಾದಿ ಸ್ಥಳಗಳಲ್ಲಿ ಕೋಟೆಗಳಿವೆ.

ಆಯಕಟ್ಟಾದ ಸ್ಥಳಗಳಲ್ಲಿಕೋಟೆಗಳನ್ನು ನಿರ್ಮಿಸಲಾಗುತ್ತಿದ್ದು, ಗಿರಿದುರ್ಗ, ವನದುರ್ಗ,ಜಲದುರ್ಗ, ನೆಲದುರ್ಗ ಮುಂತಾದ ಕೋಟೆಗಳನ್ನು ವಿದ್ವಾಂಸರುಈಗಾಗಲೇ ನಾನಾ ರೀತಿಯಲ್ಲಿ ವರ್ಗೀಕರಿಸಿದ್ದಾರೆ. ನಂದಿಬೆಟ್ಟ (ಚಿಕ್ಕಬಳ್ಳಾಪುರ ಜಿಲ್ಲೆ), ಸಾವನದುರ್ಗ (ರಾಮನಗರ ಜಿಲ್ಲೆ), ಮಧುಗಿರಿ, ಪಾವಗಡ, ಮಿಡಿಗೇಶಿ(ತುಮಕೂರು ಜಿಲ್ಲೆ),ದಾವಣಗೆರೆ ಬಳಿಯ ಉಚ್ಚಂಗಿ ಮತ್ತು ಬಳ್ಳಾರಿ ಜಿಲ್ಲೆಯ ಬಳ್ಳಾರಿ,ಸಂಡೂರು, ದಕ್ಷಿಣ ಕನ್ನಡ ಜಿಲ್ಲೆಯ ಜಮಲಾಬಾದ್, ಉತ್ತರಕನ್ನಡ ಜಿಲ್ಲೆಯ ಮಿರ್ಯಾಣ, ಹಾಸನ ಜಿಲ್ಲೆಯ ಸಕಲೇಶಪುರದ ಬಳಿಇರುವ ಮಂಜರಾಬಾದ್, ಶಿವಮೊಗ್ಗ ಜಿಲ್ಲೆಯ ಕವಲೇದುರ್ಗ,ಚಿತ್ರದುರ್ಗ, ರಾಯಚೂರು, ಮಲ್ಲಾಬಾದ್, ಕುಮ್ಮಟದುರ್ಗ,ಕೊಪ್ಪಳ, ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತುಸುರಪುರಗಳಲ್ಲಿ ಗಿರಿದುರ್ಗಗಳಿವೆ. ಗದಗ ಜಿಲ್ಲೆಯ ನರಗುಂದಹಾಗೂ ಗಜೇಂದ್ರಗಢದ ಕೋಟೆಯನ್ನು ಶಿವಾಜಿಯು ಕಟ್ಟಿಸಿದನು. ಬೆಳಗಾವಿ ಜಿಲ್ಲೆಯ ಪರಸಗಡ ಮತ್ತು ಹರಗಾಪುರಕೋಟೆಗಳನ್ನೂ ಸಹ ಶಿವಾಜಿಯೇ ಕಟ್ಟಿಸಿದ್ದಾನೆ. ಬೆಂಗಳೂರು,ದೇವನಹಳ್ಳಿ, ಮಾಗಡಿ, ಐಮಂಗಲ (ಚಿತ್ರದುರ್ಗಜಿಲ್ಲೆ),ಚಿಕ್ಕಬಾಣಾವರ (ಹಾಸನ ಜಿಲ್ಲೆ) ಮತ್ತು ಬೆಳಗಾವಿ ಪಟ್ಟಣದಕೆಲವು ಭಾಗಗಳನ್ನು ಬಳಸಿ ಕೋಟೆಗಳೂ ಇರುವುದನ್ನುಈಗಲೂ ಕಾಣಬಹುದಾಗಿದೆ. ಹಳೆಯ ಕೋಟೆಗಳನ್ನು ಭಾರೀ ಪ್ರಮಾಣದ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಈನಿರ್ಮಾಣದಲ್ಲಿ ಯಾವುದೇ ಪ್ಲಾಸ್ಟರಿಂಗ್ ಸಾಮಗ್ರಿಯನ್ನೂಬಳಸಿಲ್ಲ. ಶ್ರೀರಂಗಪಟ್ಟಣದ ಕೋಟೆಯು ಕಾವೇರಿಯತೋಳುಗಳಿಂದ (ಕವಲಿಂದ) ರಕ್ಷಿಸಲ್ಪಟ್ಟಿದೆ. ಕರಾವಳಿಯ ದ್ವೀಪ ಕೋಟೆಗಳಾದ ಬಹಾದ್ದೂರ್‌ಗಡ್, ಬಸವರಾಜದುರ್ಗ, ದೇವಗಡಮತ್ತು ಕೂರ್ಮಗಡಗಳನ್ನು ಈಗಾಗಲೇ ಹೆಸರಿಸಲಾಗಿದೆ. ಕರ್ನಾಟಕದಲ್ಲಿ ನೂರಾರು ಕೋಟೆಗಳಿನ್ನೂ ಉಳಿದುಕೊಂಡಿವೆ. ಇವುಗಳನ್ನು ಸಂದರ್ಶಿಸಿದರೆ ನಮ್ಮ ಪ್ರಾಚೀನ ವಾಸ್ತುಶಿಲ್ಪಿಗಳ,ನಿರ್ಮಾಣಗಾರರ, ಮಿಲಿಟರಿಯವರ, ತಂತ್ರಜ್ಞರ ಕುಶಲತೆಮತ್ತು ದೂರದೃಷ್ಟಿಯ ಪರಿಚಯ ನಮಗಾಗುತ್ತದೆ. ಇವುಗಳನ್ನುನೋಡುತ್ತಾ ಹೋದಂತೆ ನಮ್ಮ ಮನಸ್ಸು ಗತ ಕಾಲದತ್ತ ಓಡುತ್ತದೆ. ಟ್ರಕ್ಕಿಂಗ್, ಜಲಕ್ರೀಡೆ, ಗಾಲ್ಫ್, ಸ್ನೂಕರ್ ಮತ್ತಿತರಸೂಕ್ಷ್ಮ ಆಟಗಳಿಗೆ ಇಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಬೆಂಗಳೂರುಮತ್ತು ಮೈಸೂರಿನಲ್ಲಿ ಕುದುರೆ ಪಂದ್ಯಗಳೂ ನಡೆಯುತ್ತವೆ.ಮೈಸೂರು ದಸರಾ ಪ್ರಮುಖ ಹಬ್ಬವಾಗಿದೆ. ಮೇಲುಕೋಟೆಯವೈರಮುಡಿ ಉತ್ಸವ ಇನ್ನೊಂದು ಅಪೂರ್ವ ಸಂದರ್ಭವಾಗಿದ್ದು, ಚೆಲುವನಾರಾಯಣನ ಉತ್ಸವ ಮೂರ್ತಿಯನ್ನು ರತ್ನಖಚಿತಕಿರೀಟದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.ಚೈತ್ರ ಪೂರ್ಣಿಮೆ ರಾತ್ರಿ ಜರುಗುವ ಬೆಂಗಳೂರು ಕರಗಕೂಡ ವರ್ಣರಂಜಿತ ಉತ್ಸವವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳನ್ನು ’ಅ’ಕಾರದಿ ಕ್ರಮದಲ್ಲಿ ನೋಡಬಹುದು.

 

ಅಣ್ಣಿಗೇರಿ

ಇದು ಧಾರವಾಡ ಜಿಲ್ಲೆಯ ನವಲಗುಂದತಾಲೂಕಿನಲ್ಲಿದ್ದು ಹುಬ್ಬಳ್ಳಿಯಿಂದ ೩೦ ಕಿ.ಮೀ. ದೂರದಲ್ಲಿ ಹುಬ್ಬಳ್ಳಿ-ಗದಗ ರಸ್ತೆಯಲ್ಲಿದೆ. ಇಲ್ಲಿ ಕಲ್ಯಾಣ ಚಾಲಕ್ಯರ ಕಾಲದ ಪ್ರಸಿದ್ಧಅಮೃತೇಶ್ವರ ದೇವಾಲಯವಿದೆ. ಇದು ಒಂದುಕಾಲದಲ್ಲಿ ಶ್ರೀಮಂತಪ್ರಾಂತವಾಗಿದ್ದು, ಬೆಳ್ವೊಲ-೩೦೦ರ ಆಡಳಿತ ಕೇಂದ್ರವಾಗಿದ್ದು,ಚಾಲುಕ್ಯ ನಾಲ್ಕನೆಯ ಸೋಮೇಶ್ವರನ (೧೧೮೪-೮೯) ಕೊನೆಯರಾಜಧಾನಿ ಆಗಿತ್ತು. ಅಲ್ಲದೆ ಕನ್ನಡದ ಪ್ರಸಿದ್ಧ ಕವಿ ಪಂಪನಜನ್ಮಭೂಮಿ ಆಗಿತ್ತು. ಇಲ್ಲಿ ಪಾರ್ಶ್ವನಾಥ ಬಸದಿ (ತಾಯಿಯತವರೂರ) ಎರಡು ವೀರಶೈವ ಮಠ, ಅರ್ಧಹಾಳುಬಿದ್ದ ಬನಶಂಕರಿದೇವಸ್ಥಾನ ಹಾಗೂ ಏಳು ಮಸೀದಿಗಳೂ ಇವೆ. ರೈಲ್ವೇನಿಲ್ದಾಣದಬಳಿ ವೀರಭದ್ರನ ಪ್ರಾಚೀನ ದೇವಾಲಯವಿದ್ದು, ಇಲ್ಲಿ ಕಂಡುಬರುವಮಿಥುನ ಶಿಲ್ಪಗಳು ಕಲಾತ್ಮಕವಾಗಿ ರೂಪುಗೊಂಡಿವೆ. ಅಮೃತಾಪುರಚಿಕ್ಕಮಗಳೂರು ಜಿಲ್ಲೆಯ ತರೀಕೆರೆತಾಲೂಕಿನಲ್ಲಿರುವ ಅಮೃತಾಪುರವು, ಬೆಂಗಳೂರಿನಿಂದ೨೪೭ ಕಿ.ಮೀ. ದೂರದಲ್ಲಿದೆ. ಕ್ರಿ.ಶ. ೧೨ನೆಯ ಶತಮಾನದಲ್ಲಿಅಮೃತ ದಂಡನಾಯಕನು ಕಟ್ಟಿಸಿರುವ, ಹೊಯ್ಸಳ ಶೈಲಿಯಅಮೃತೇಶ್ವರ ದೇವಸ್ಥಾನದಿಂದಾಗಿ ಈ ಸ್ಥಳವು ಪ್ರಸಿದ್ಧವಾಗಿದೆ.ಇದು ನಕ್ಷತ್ರಾಕಾರದ ತಳವಿನ್ಯಾಸ ಹೊಂದಿದ್ದು, ಇತರ ಅನೇಕಹೊಯ್ಸಳ ದೇವಾಲಯಗಳಂತೆ ಬಳಪದ ಕಲ್ಲಿನ ಅಲಂಕೃತಶಿಲ್ಪಗಳಿಂದ ನೋಡುಗರ ಮನವನ್ನು ಸೂರೆಗೊಳ್ಳುವ ಅತ್ಯಂತಸುಂದರವಾದ ದೇವಾಲಯವಾಗಿದೆ. ೧೧೯೭ರ ಶಾಸನವು ಈದೇವಾಲಯದಲ್ಲಿದ್ದು, ಆಳೆತ್ತರದ ಆಸೀನ ಸರಸ್ವತಿಯ ಆಕರ್ಷಕವಿಗ್ರಹವಿಲ್ಲಿದೆ. ಈ ದೇವಾಲಯದ ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಭೂಮಾಪನಕೋಲಿನ ಪ್ರಾತಿನಿಧಿಕ ರೇಖಾಕೆತ್ತನೆ ಪತ್ತೆಯಾಗಿದೆ.

ಅರಸೀಕೆರೆ

ಹಾಸನ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರಪ್ರಾಚೀನ ವ್ಯಾಪಾರ ಕೇಂದ್ರವಾಗಿದ್ದು, ಪ್ರಮುಖ ರೈಲ್ವೇ ಜಂಕ್ಷನ್ಆಗಿದೆ. ಇದು ಹಾಸನದಿಂದ ೪೧ ಕಿ.ಮೀ. ಹಾಗೂ ಬೆಂಗಳೂರಿನಿಂದ೧೭೬ ಕಿ.ಮೀ. ದೂರದಲ್ಲಿದ್ದು,ತೆಂಗಿನಿಂದಾಗಿ ಪ್ರಸಿದ್ಧವಾಗಿದೆ.ಇಲ್ಲಿರುವ ಕಟ್ಟಮೇಶ್ವರ ದೇವಾಲಯ (ಚಂದ್ರಮೌಳೇಶ್ವರದೇವಾಲಯ) ಕ್ರಿ.ಶ. ೧೨೨೦ರ ಶಾಸನದಲ್ಲಿ ಕಲ್ಮೇಶ್ವರ ಎಂದೂಕರೆಯಲ್ಪಟ್ಟಿದೆ. ಇದು ಸುಂದರ ಹೊಯ್ಸಳ ದೇವಾಲಯವಾಗಿದ್ದು,ಅಪರೂಪದ ವಿಶೇಷ  ವಿನ್ಯಾಸವುಳ್ಳ ಬಹುಕೋನಾಕಾರದಮುಖಮಂಟಪವನ್ನು ಹೊಂದಿದೆ. ಇಲ್ಲಿ ಹೊಯ್ಸಳ ಎರಡನೇಬಲ್ಲಾಳನ ಮಂತ್ರಿ ರಾಚರಸ ೧೨೨೦ ರಲ್ಲಿ ಹೊಯ್ಸಳ ಶೈಲಿಯಲ್ಲಿಕಟ್ಟಿಸಿದ ಸಹಸ್ರಕೂಟ ಜಿನಾಲಯವೂ ಇದೆ. ಇಲ್ಲೇ ಇನ್ನೊಂದುಸುಂದರವಾದ ಹಾಳುವೊಕ್ಲು ದೇವಾಲಯವಿದೆ. ಅರಸೀಕೆರೆಯಬಳಿ ಮೊಳೆಕಲ್ ತಿರುಪತಿಯ ಸಣ್ಣ ಗುಡ್ಡದ ಮೇಲೆ ವೆಂಕಟರಮಣದೇವಸ್ಥಾನವಿದೆ. ಇಲ್ಲಿಗೆ ರಾಜ್ಯದ ಎಲ್ಲಾ ಕಡೆಯಿಂದಲೂ ಭಕ್ತರುಬರುತ್ತಾರೆ.

 

 

ಅರಳಗುಪ್ಪೆ

ಇದು ತುಮಕೂರು ಜಿಲ್ಲೆಯ ತಿಪಟೂರುತಾಲೂಕಿನಲ್ಲಿದ್ದು, ಬಾಣಸಂದ್ರ ರೈಲ್ವೇ ನಿಲ್ದಾಣದಿಂದ ಏಳುಕಿ.ಮಿ ಹಾಗೂ ಕಿಬ್ಬನಹಳ್ಳಿ ನಾಲ್ಕು ಕಿ.ಮೀ.ದೂರದಲ್ಲಿದೆ. ಇಲ್ಲಿಗಂಗ-ನೊಳಂಬ ಶೈಲಿಯ ಸುಮಾರು ೧೦ನೇ ಶತಮಾನದಪ್ರಸಿದ್ಧ ಕಲ್ಲೇಶ್ವರ ಪಂಚಾಂಗ, ದೇವಾಲಯವಿದ್ದು,ಸುಂದರವಾದ ಗರ್ಭಗೃಹ, ನವರಂಗ ಅರ್ಧಮಂಟಪ ಹಾಗೂಮುಖಮಂಟಪಗಳನ್ನು ಹೊಂದಿದೆ. ಇತ್ತೀಚೆಗೆ ಸಂರಕ್ಷಿಸಲ್ಪಟ್ಟಿದೆ.ನವರಂಗದ ಛತ್ತಿನಲ್ಲಿ, ಅದ್ಭುತವಾದ ನಾಟ್ಯಶಿವನ ಮೂರ್ತಿಯಿದ್ದುಸುತ್ತಲೂ ಸಂಗೀತ ವಾದ್ಯಗಳನ್ನು ನುಡಿಸುವ ಗಂಧರ್ವರಶಿಲ್ಪಗಳಿವೆ. ಅಲ್ಲದೇ, ಅಷ್ಟ ದಿಕ್ಪಾಲಕರು ತಮ್ಮ ಎಲ್ಲಾಪರಿಕರಗಳೊಂದಿಗೆ ಇದ್ದಾರೆ. ಅಲ್ಲದೆ ಇಲ್ಲಿಯ ಹೊಯ್ಸಳರಕಾಲದ ಚೆನ್ನಕೇಶವ ಗುಡಿ ಸುಮಾರು ಕ್ರಿಶ ೧೯೫೦ರಲ್ಲಿನಿರ್ಮಾಣಗೊಂಡಿರುವ ಏಕಕೂಟ ದೇವಾಲಯವಾಗಿದೆ. ಗರ್ಭಗುಡಿಯಲ್ಲಿರುವ ವಿಷ್ಣುವಿನ ಮೂರ್ತಿಯು ಅದ್ಭುತವಾಗಿದೆ.ಈ ದೇವಾಲಯವು ಚಿತ್ತಾಕರ್ಷಕವಾಗಿ ಉಬ್ಬು ಶಿಲ್ಪಗಳಿಂದಾಗಿಉಲ್ಲೇಖಾರ್ಹವಾಗಿದ್ದು, ಹೊಯ್ಸಳ ಶಿಲ್ಪಿಗಳ ಹೆಸರನ್ನು ಅಲ್ಲಲ್ಲಿಕಾಣಬಹುದಾಗಿದೆ.

 

ಆವನಿ

ಇದು ಕೋಲಾರ ಜಿಲ್ಲೆಯಲ್ಲಿದ್ದು ತಾಲೂಕು ಕೇಂದ್ರಮುಳಬಾಗಿಲಿನಿಂದ ಸುಮಾರು ೧೩ ಕಿ.ಮಿ ದೂರದಲ್ಲಿದೆ. ಇಲ್ಲಿಶೃಂಗೇರಿ ಸಂಪ್ರದಾಯದ ಶಂಕರಮಠವಿದೆ. ಅಲ್ಲದೆ, ನೊಳಂಬರಕಾಲದ ದೇವಾಲಯಗಳ ಸುಂದರಸಂಕೀರ್ಣವಿದೆ. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಹೇಮಾವತಿ ಅಥವಾಹೆಂಜೇರು ನೊಳಂಬರು ರಾಜಧಾನಿಯಾಗಿತ್ತು. ಶಾಸನವೊಂದುಈ ಸ್ಥಳವನ್ನು ’ದಕ್ಷಿಣದ ಗಯಾ’ ಎಂದೇ ಹೆಸರಿಸಿದೆ. ಇಲ್ಲೊಂದು ಆಶ್ರಮವಿದ್ದು, ಸೀತೆಯು ಅವಳಿ ಮಕ್ಕಳಿಗೆ ಇಲ್ಲೇ ಜನ್ಮನೀಡಿದಳೆಂದು ಹೇಳಲಾಗುತ್ತದೆ. ಇಲ್ಲಿ ರಾಮೇಶ್ವರ, ಲಕ್ಷಣೇಶ್ವರ,ಭರತೇಶ್ವರ, ಶತ್ರುಘ್ನೇಶ್ವರ ಹಾಗೂ ಸೀತಾ ಮತ್ತು ಸುಬ್ರಹ್ಮಣ್ಯದೇವಸ್ಥಾನಗಳಿವೆ. ಅದರಲ್ಲೂ ಲಕ್ಷ್ಮಣೇಶ್ವರ ದೇವಸ್ಥಾನ ಶಿಲ್ಪಗಳಿಂದತುಂಬಿದೆ. ಇಲ್ಲಿರುವ, ಸಣ್ಣ ಬೆಟ್ಟದ ಮೇಲೆ ಅಗ್ನಿತೀರ್ಥ ಎಂಬ ಕೆರೆಹಾಗೂ ಏಕಾಂತ ರಾಮಸ್ವಾಮಿ ದೇವಾಲಯವೂ ಇದೆ.

 

ಆದಿಚುಂಚನಗಿರಿ

ಇದು ಮಂಡ್ಯಜಿಲ್ಲೆಯತಾಲೂಕುಕೇಂದ್ರ, ನಾಗಮಂಗಲದಿಂದ ೨೧ ಕಿ.ಮೀ ಹಾಗೂ ಮಂಡ್ಯದಿಂದ೬೬ ಕಿ.ಮೀ. ದೂರದಲ್ಲಿದ್ದು, ಗುಡ್ಡದ ಮೇಲಿರುವ ಭೈರವದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಈ ಸ್ಥಳವು ರಾಮಾಯಣಕಾಲದಿಂದಲೂಅಸ್ತಿತ್ವದಲ್ಲಿದೆಯೆಂದು ಸ್ಥಳೀಯವಾಗಿ ಹೇಳಲಾಗುತ್ತದೆ.ಶಾಸನಗಳಲ್ಲಿ ಈ ಸ್ಥಳವನ್ನು ಚುಂಚನ ಕೋಟೆ (ಕ್ರಿ.ಶ.೧೨೦೫),ಚುಂಚನಹಳ್ಳಿ (ಕ್ರಿ.ಶ.೧೪೮೪), ಆದಿಚುಂಚನಗಿರಿ (ಕ್ರಿ.ಶ.೧೮೯೬)ಎಂದು ಹೆಸರಿಸಲಾಗಿದ್ದು, ಈ ಸ್ಥಳವು ಹಿಂದೆ ಕಲ್ಕುಣಿ ನಾಡಿನಸರಹದ್ದಿನಲ್ಲಿತ್ತೆಂದು, ಶಾಸನಗಳಿಂದ ವೇದ್ಯವಾಗುತ್ತದೆ. ದ್ರಾವಿಡಶೈಲಿಯ ಬೃಹದಾಕಾರದ ಕಾಲಭೈರವ ದೇವಾಲಯವನ್ನುಆದಿಚುಂಚನಗಿರಿ ಮಠವು ಸುಮಾರು ೩೦ ಕೋಟಿರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಇತ್ತೀಚೆಗೆ ನಿರ್ಮಿಸಿರುತ್ತದೆ. ಈದೇವಾಲಯವು ವಿಶಾಲವಾದ ಒಳ ಮತ್ತು ಹೊರ ಪ್ರಾಕಾರಗಳನ್ನುಹೊಂದಿದ್ದು. ಈ ದೇವಾಲಯದ ಪ್ರಾಕಾರದಲ್ಲಿ ಹಲವು ಸಣ್ಣ ಪುಟ್ಟ ಶೈವ ದೇವಾಲಯಗಳನ್ನು ನಿರ್ಮಿಸಲಾಗಿದ್ದು, ಈ ದೇವಾಲಯಸಂಕೀರ್ಣವು ಚಿತ್ತಾಕರ್ಷಕವಾಗಿ ಮೂಡಿಬಂದಿದೆ. ಮಠದಆವರಣದಲ್ಲಿ ಕಂಡು ಬರುವ ಇತರೆ ದೇವಾಲಯಗಳೆಂದರೆಚಂದ್ರಮೌಳೇಶ್ವರ, ಅನ್ನಪೂರ್ಣೇಶ್ವರಿ ಮತ್ತು ಭೈರವ. ಮಠದದಕ್ಷಿಣ ಭಾಗದಲ್ಲಿ ವಿಶಾಲವಾದ ಕಲ್ಯಾಣಿ ಇದ್ದು ಇದನ್ನುಸ್ಥಳೀಯವಾಗಿ ಬಿಂದು ಸರೋವರ ಎಂದು ಕರೆಯಲಾಗುತ್ತದೆ.ಇದರ ಬಳಿಯಲ್ಲಿರುವ ಜ್ವಾಲಾಪೀಠವನ್ನು ಹೊಂದಿರುವ ಅನ್ನದಾನಿಮಠವು ವಿಶೇಷ ಆಕರ್ಷಣೆಯಾಗಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿಮೇದರ ಮಂಟಪ, ಒಕ್ಕಲ್ಲು ಬಸವ, ಗಂಗಾಧರೇಶ್ವರ ಮೊದಲಾದದೇವಾಲಯಗಳು ಕಂಡು ಬರುತ್ತವೆ. ಆದಿಚುಂಚನಗಿರಿಯಲ್ಲಿತೆಪ್ಪೋತ್ಸವ, ಮಾಸೋತ್ಸವ ಜರುಗುತ್ತವೆ. ಇಲ್ಲಿರುವ ಗಂಗಾಧರೇಶ್ವರದೇವಸ್ಥಾನ ಜಾತ್ರೆಯ ಸಮಯದಲ್ಲಿ ಸಾವಿರಾರು ಜನರನ್ನುಆಕರ್ಷಿಸುತ್ತದೆ. ಇಲ್ಲಿ ನವಿಲಿನ ಅಭಯಾರಣ್ಯವಿದೆ. ಮಠದಅತಿಥಿಗೃಹದಲ್ಲಿ ಪ್ರವಾಸಿಗರಿಗೆ ಇರಲು ವ್ಯವಸ್ಥೆಯನ್ನುಕಲ್ಪಿಸಲಾಗಿದ್ದು, ಈ ಸ್ಥಳವು ಉತ್ತಮ ಸಾರಿಗೆ ಸಂಪರ್ಕವನ್ನೂಹೊಂದಿದೆ.

 

ಆನೆಗುಂದಿ

ಕೋಟೆಯಿಂದ ಆವೃತ್ತವಾಗಿರುವ ಇದುಹಂಪೆಯ ಉತ್ತರಕ್ಕಿದ್ದು, ವಿಜಯನಗರ ಸಾಮ್ರಾಜ್ಯ ಸ್ಥಾಪಕರಮೂಲ ಕೇಂದ್ರವೆಂದು ಪ್ರಸಿದ್ಧವಾಗಿದೆ. ಇದನ್ನು ಸುಲಭವಾಗಿತಲುಪಲು ತುಂಗಭದ್ರಾ ನದಿಯನ್ನು ತಳವಾರ ಘಟ್ಟದಿಂದ ತೆಪ್ಪದಲ್ಲಿ ದಾಟಬೇಕಾಗುತ್ತದೆ. ಅಲ್ಲದೆ ತಾಲೂಕು ಕೇಂದ್ರಗಂಗಾವತಿಯಿಂದ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು.ಇಲ್ಲಿ ಈಗ ಹಾಳುಬಿದ್ದಿರುವ ಪ್ರಸಿದ್ಧವಾದ ಹುಚ್ಚಪ್ಪಯ್ಯನ ಮಠವಿದೆ.ಈ ಮಠದಲ್ಲಿ ಚಾಲುಕ್ಯಶೈಲಿಯ ನುಣುಪಾದ ಕಂಬಗಳಿದ್ದು,ಛತ್ತಿನಲ್ಲಿ ಮಸುಕು ಮಸುಕಾದ ಚಿತ್ರಗಳಿವೆ. ಅರವೀಡುರಾಜವಂಶದ ಅರಸರ ಪಾಳುಬಿದ್ದ ಅರಮನೆಯೂ ಇಲ್ಲಿದ್ದು,ಅವರ ವಂಶಸ್ಥರು ಈಗಲೂ ಆನೆಗುಂದಿಯಲ್ಲಿ ನೆಲೆಸಿದ್ದಾರೆ. ಇಲ್ಲಿತುಂಗಭದ್ರಾ ನದಿಯ ನಡುಗಡ್ಡೆಯಾದ ಕುರುಗಡ್ಡೆಯಲ್ಲಿ ಮಾಧ್ವಸಂಪ್ರದಾಯದ ಒಂಬತ್ತು ಯತಿಗಳ ನವಬೃಂದಾವನಗಳು(ಸಮಾಧಿಗಳು) ಕಂಡುಬರುತ್ತವೆ. ಈ ಬೃಂದಾವನಗಳನ್ನುಪದ್ಮನಾಭತೀರ್ಥ, ವ್ಯಾಸರಾಜತೀರ್ಥ, ಕತೇಂದ್ರತೀರ್ಥ,ವಾಗೀಶತೀರ್ಥ, ರಘುವರ್ಯತೀರ್ಥ, ರಾಮಚಂದ್ರತೀರ್ಥ, ಸುಧೀಂದ್ರತೀರ್ಥ, ಶ್ರೀನಿವಾಸ ಒಡೆಯರು ಹಾಗೂ ಗೋವಿಂದಒಡೆಯರದೆಂದು ಗುರುತಿಸಲಾಗಿದೆ. ಇವಲ್ಲದೇ ಇಲ್ಲಿ ಶೇಷಶಾಯಿಗುಹಾ ದೇವಾಲಯ, ರಂಗನಾಥ ದೇವಾಲಯ, ಗಗನ ಮಹಲ್(ಹವಾ ಮಹಲ್),ಕುತೂಹಲಕಾರಿಯಾದ ಇಂಡೋ-ಸಾರ್ಸೆನಿಕ್ಕಟ್ಟಡ, ಹಾಗೂ ಕಲ್ಯಾಣದ ಚಾಳುಕ್ಯರ ಶೈಲಿಯ ಸುಂದರವಾದಅಲಂಕೃತ ಬಾಗಿಲು ಚೌಕಟ್ಟುಳ್ಳ ಜೈನಬಸದಿಗಳಿವೆ. ೧೯೪೯ರವರೆಗೆ ಆನೆಗೊಂದಿ ಸಂಸ್ಥಾನವನ್ನು ಅರವೀಡು ವಂಶದ ಅರಸರುಆಳುತ್ತಿದ್ದರು. ಇಂದಿಗೂ ಇಲ್ಲಿ ಅವರಿಗೆ ಸಂಬಂಧಿಸಿದ, ಹಳೆಯವಾಡೆ ಇದ್ದು ಈಗಲೂ ಅವರ ವಂಶಸ್ಥರು ವಾಸಿಸುತ್ತಿದ್ದಾರೆ.

 

ಇಕ್ಕೇರಿ

ಇಕ್ಕೇರಿಯು ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕುಕೇಂದ್ರ ಸಾಗರದ ಸಮೀಪವಿದ್ದು ೧೫೧೨ರಿಂದ ಕೆಳದಿ ನಾಯಕರರಾಜಧಾನಿಯಾಗಿತ್ತು. ಇಲ್ಲಿರುವ ಅಘೋರೇಶ್ವರ ದೇವಾಲಯವುಕಾಳಾಮುಖ ಸಂಪ್ರದಾಯದ ಕ್ರಿ.ಶ.೧೬ನೇ ಶತಮಾನದ  ಆಕರ್ಷಕ ಸ್ಮಾರಕವಾಗಿದೆ. ಸಮೀಪದಲ್ಲಿಯೇ ಪಾರ್ವತೀದೇವಾಲಯವೂ ಇದೆ. ೧೬೨೩ರಲ್ಲಿ ಭೇಟಿಕೊಟ್ಟ ಇಟಲಿಯಪ್ರವಾಸಿ ಪಿಯತ್ರೊ ಡೆಲ್ಲಾವೆಲಿಯು ಈ ಊರಿನ ಬಗ್ಗೆ ಬಹಳಷ್ಟು ವಿವರಗಳನ್ನು ಬರೆದಿದ್ದಾನೆ. ಕೆಳದಿಯು ಮೂಲ ರಾಜಧಾನಿಗೆಸಮೀಪದಲ್ಲಿರುವ ನಾಯಕರಇನ್ನೊಂದು ಪ್ರಮುಖ ರಾಜಧಾನಿಪಟ್ಟಣ. ಇಲ್ಲಿ ರಾಮೇಶ್ವರ ಮತ್ತು ವೀರಭದ್ರ ದೇವಾಲಯಗಳಿವೆ.ಇದಲ್ಲದೆ ಅನೇಕ ಶಿಲ್ಪ ಮತ್ತು ಹಸ್ತಪ್ರತಿಗಳ ಸಂಗ್ರಹವಿರುವ ವಸ್ತುಸಂಗ್ರಹಾಲಯವಿದ್ದು, ಐತಿಹಾಸಿಕ ಮಹತ್ವದ ವಿವಿಧ ವಿಷಯಗಳಕುರಿತಾಗಿ ಅನೇಕ ಅಮೂಲ್ಯ ಪುಸ್ತಕಗಳನ್ನು ಇದು ಪ್ರಕಟಿಸಿದೆ.

 

 

ಇಟಗಿ

ಯಲಬುರ್ಗಾ ತಾಲೂಕಿನಲ್ಲಿರುವ ಇಟಗಿಯನ್ನುಗದಗಿನಿಂದ (ಸುಮಾರು ೪೦ ಕಿ.ಮೀ.) ಸುಲಭವಾಗಿತಲುಪಬಹುದು. ಗದಗ-ಹೊಸಪೇಟೆ ರೈಲು ಮಾರ್ಗದಲ್ಲಿಬಾಣಾಪುರ ರೈಲ್ವೇ ಸ್ಟೇಶನ್‌ಗೆ ಬಲು ಹತ್ತಿರದಲ್ಲಿದೆ. ಇಲ್ಲಿಕಲ್ಯಾಣ ಚಾಳುಕ್ಯರ ಕಾಲದ ಬಹು ಸುಂದರವಾದ ಮಹಾದೇವದೇವಾಲಯವಿದೆ. ಶಾಸನದಲ್ಲಿ’ದೇವಾಲಯ ಚಕ್ರವರ್ತಿ’ ಎಂದುವರ್ಣಿಸಲ್ಪಟ್ಟಿರುವ ಈ ದೇವಾಲಯವನ್ನು ೧೧೧೨ ರಲ್ಲಿ ಚಾಲುಕ್ಯಆರನೇ ವಿಕ್ರಮಾದಿತ್ಯನ ಸೇನಾಧಿಪತಿಯಾಗಿದ್ದ ಮಹಾದೇವದಂಡನಾಯಕನು ನಿರ್ಮಿಸಿದನು. ಈ ಬೃಹತ್ ದೇವಾಲಯದಲ್ಲಿಹೊಳಪುಳ್ಳ ಕಂಬಗಳು, ಕುಶಲ ಕೆತ್ತನೆಯು ವಿಶಾಲ ದ್ವಾರಬಂಧಗಹಾಗೂ ಸೂಕ್ಷ್ಮ ಕೆತ್ತನೆಯು ಆಳವಾದ ಛತ್ತಿನ ಕೆತ್ತನೆಗಳು ಇದನ್ನುಭವ್ಯ ದೇವಾಲಯವನ್ನಾಗಿಸಿವೆ. ಇದರ ಸುತ್ತಲೂ ಇನ್ನಿತರದೇವಾಲಯಲ್ಲಿದ್ದು ಹಾಗೂ ಎದುರುಗಡೆ ವಿಶಾಲವಾದ ಪುಷ್ಕರಣಿಇದೆ. ವಿದ್ಯಾರ್ಥಿಗಳಿಗಾಗಿ ಸರಸ್ವತಿ ಮಠವಿದೆ.ಪರ್ಸಿಬ್ರೌನ್ ಈದೇವಾಲಯವನ್ನು ವರ್ಣಿಸುತ್ತಾ ಹಳೇಬಿಡು ದೇವಾಲಯವನ್ನುಬಿಟ್ಟರೆ ಅತ್ಯುತ್ತಮವಾದವುಗಳಲ್ಲಿ ಇದೂ ಒಂದೆಂದು ಹೇಳಿದ್ದಾನೆ. ಇಲ್ಲಿಂದ ೧೦ ಕಿ,ಮೀ ದೂರದಲ್ಲಿರುವ ಕುಕ್ಕನೂರಿನಲ್ಲಿ ರಾಷ್ಟ್ರಕೂಟರಕಾಲದ ನವಲಿಂಗೇಶ್ವರ ದೇವಾಲಯ ಸಂಕೀರ್ಣ ಹಾಗೂಕಲ್ಯಾಣ ಚಾಳುಕ್ಯರ ಕಾಲದ ಮಹಾಮಾಯಾ, ಕಲ್ಲೇಶ್ವರ ಮತ್ತುಮಲ್ಲಿಕಾರ್ಜುನ ದೇವಾಲಯಗಳಿವೆ.

 

ಉಡುಪಿ

ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರಿನಿಂದ೪೧೫ ಕಿ.ಮೀ. ದೂರದಲ್ಲಿರುವ ಪವಿತ್ರ ಸ್ಥಳ. ಇಲ್ಲಿಯ ಶ್ರೀಕೃಷ್ಣ ದೇವಾಲಯವು ೧೩ನೇ ಶತಮಾನದ್ದಾಗಿದ್ದು, ಅಲ್ಲಿರುವ ಶ್ರೀಕೃಷ್ಣ ವಿಗ್ರಹವು ಆಚಾರ್ಯ ಮಧ್ವರಿಂದ (ಕ್ರಿ.ಶ. ೧೨೦೦-೧೨೮೦)ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ಸ್ಥಳೀಯವಾಗಿ ನಂಬಲಾಗುತ್ತದೆ.ಆಚಾರ್ಯ ಮಧ್ವರು ಶ್ರೀ ಕೃ಼ಷ್ಣನ ಪೂಜೆ ನಡೆಸುವುದಕ್ಕಾಗಿಅಷ್ಠ ಮಠಗಳನ್ನು ಸ್ಥಾಪಿಸಿದರು. ನಂತರ ಸೋದೇಮಠದವಾದಿರಾಜತೀರ್ಥರ ಕಾಲದಲ್ಲಿ ಎರಡು ವರ್ಷಗಳಿಗೊಮ್ಮೆ ಜನವರಿತಿಂಗಳಲ್ಲಿ ನಡೆಯುವ ಪರ್ಯಾಯ ಉತ್ಸವದಲ್ಲಿ ಅನುಕ್ರಮವಾಗಿಒಂದೊಂದು ಮಠದ ಯತಿಗಳು ಶ್ರೀಕೃಷ್ಣನ ಪೂಜೆಯಜವಾಬ್ದಾರಿಯನ್ನು ಎರಡು ‍ವರ್ಷಗಳವರೆಗೆವಹಿಸಿಕೊಳ್ಳುವುದುರೂಢಿಗೆ ಬಂದಿತು. ಕೃಷ್ಣಮಠದ ಎದುರು ಭಾಗದಲ್ಲಿರುವಅನಂತೇಶ್ವರ ದೇವಾಲಯ ಅಥವಾ ಮಠವು ಮಧ್ವಾಚಾರ್ಯರಕಾಲಕ್ಕೂ ಹಿಂದೆಯೇ ನಿರ್ಮಿತವಾಗಿದ್ದು, ಆಚಾರ್ಯರಿಗೆ ಧಾರ್ಮಿಕಶಿಕ್ಷಣ ನೀಡಿದ ಅಚ್ಯುತಪ್ರೇಕ್ಷಾಚಾರ್ಯರು ಅಲ್ಲೇ ನೆಲಸಿದ್ದರೆಂಬವಿಚಾರವು ಧಾರ್ಮಿಕ ಗ್ರಂಥಗಳಿಂದ ವ್ಯಕ್ತವಾಗುತ್ತದೆ. ಅಂತಿಮವಾಗಿ ಮಧ್ವಾಚಾರ್ಯರು ಬದರಿಗೆ ಅದೃಶ್ಯರಾಗಿ ಹೋದ ಗುಹೆಯ ದ್ವಾರವನ್ನು ಈಗಲೂತೋರಿಸುತ್ತಾರೆ. ಕಡಿಯಾಳಿಯದುರ್ಗಾ ದೇವಾಲಯ, ಅಂಬಲಪಾಡಿಯ ಶಕ್ತಿ ದೇವಾಲಯ,ರಾಘವೇಂದ್ರ ಮಠ, ವೆಂಕಟರಮಣಸ್ವಾಮಿ ದೇವಾಲಯ,ಇವು ಇಲ್ಲಿರುವ ಇತರ ದೇವಾಲಯಗಳು. ಸಮೀಪದಲ್ಲಿರುವಮಲ್ಪೆ ಬಂದರಿನಲ್ಲಿ ಆಕರ್ಷಕ ಹಾಗೂ ಮನೋಲ್ಲಾಸ ನೀಡುವಕಡಲತೀರವಿದ್ದು, ವಡಭಂಡೇಶ್ವರ ಹಾಗೂ ಬಲರಾಮನ ದೇವಾಲಯಗಳಿವೆ. ಉಡುಪಿಯ ಸಮೀಪದಲ್ಲಿರುವ ಮಣಿಪಾಲಖ್ಯಾತ ವಿದ್ಯಾಕೇಂದ್ರವಾಗಿದ್ದು, ನವೀನಅನುಕೂಲತೆಗಳುಳ್ಳ,ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಆಸ್ಪತ್ರೆ ಹಾಗೂಪೆಥಾಲಾಜಿಕಲ್ ವಸ್ತು ಸಂಗ್ರಹಾಲಯವನ್ನೂ ಹೊಂದಿದೆ.ಇಲ್ಲಿ ’ಮಣಿಪಾಲ ಉನ್ನತಶಿಕ್ಷಣ ಅಕಾಡೆಮಿ’ ಅಥವಾಮಾಹೆಎಂಬ ಹೆಸರಿನ ಪ್ರಸಿದ್ಧ ಸ್ವತಂತ್ರ ವಿಶ್ವವಿದ್ಯಾಲಯವಿದೆ.

 

ಉಳವಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಲೂಕು ಕೇಂದ್ರಯಲ್ಲಾಪುರದಿಂದ ೩೨ ಕಿ.ಮೀ. ದೂರದಲ್ಲಿರುವ ಈ ಸ್ಥಳವನ್ನುಹಳಿಯಾಳದಿಂದಲೂ ತಲುಪಬಹುದು. ದಟ್ಟ ಅರಣ್ಯದಮಧ್ಯದಲ್ಲಿರುವ ಈ ಸ್ಥಳದಲ್ಲಿ ಶರಣ ಬಸವೇಶ್ವರನ ಸೋದರಳಿಯಚನ್ನಬಸವಣ್ಣನ ಸಮಾಧಿ ಇದೆ. ಬಿಜ್ಜಳನ ಮರಣದ ತರುವಾಯಆತನ ಸೇನೆಯು ಚನ್ನಬಸವಣ್ಣನನ್ನು ಬೆನ್ನಟ್ಟಿದಾಗ ಕಲ್ಯಾಣವನ್ನುತೊರೆದು ಇಲ್ಲಿಗೆ ಬಂದು ಆಶ್ರಯ ಪಡೆದಿದ್ದರು. ಇಲ್ಲಿಯಗವಿಮಠದಲ್ಲಿರುವ ಗುಹೆಗಳಲ್ಲಿ ಶರಣರು ವಾಸಿಸುತ್ತಿದ್ದರೆಂಬನಂಬಿಕೆಯಿದೆ. ಒಂದು ಗುಹೆಯನ್ನು ಚನ್ನಬಸವಣ್ಣನ ತಾಯಿಅಕ್ಕನಾಗಮ್ಮನ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿರುವ ಅತಿದೊಡ್ಡ ಕಟ್ಟಡದ ಗರ್ಭಗೃಹದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದ್ದು,ಚನ್ನಬಸವಣ್ಣನ ಸಮಾಧಿ ಇದೆ. ಗರ್ಭಗೃಹದ ಶಿಖರದಲ್ಲಿ ಶರಣರಗಾರೆಯ ಶಿಲ್ಪಗಳಿವೆ. ಈ ದೇವಾಲಯವನ್ನು ನಂತರದಲ್ಲಿ ಸೋದೆಅರಸರು ವಿಸ್ತರಿಸಿದರು. ಪ್ರತೀ ತಿಂಗಳಹುಣ್ಣಿಮೆಯಂದು ಇಲ್ಲಿ ಜಾತ್ರೆನಡೆಯತ್ತಿದ್ದು, ವಾರ್ಷಿಕ ಜಾತ್ರೆಯು ಶಿವರಾತ್ರಿಯ ಸಂದರ್ಭದಲ್ಲಿನಡೆಯುತ್ತದೆ. ನೂರಾರು ಜನರು ಪ್ರತಿದಿನವು ಈ ಸ್ಥಳವನ್ನುಸಂದರ್ಶಿಸುತ್ತಾರೆ. ಯಾತ್ರಾರ್ಥಿಗಳಿಗೆ ಅನುಕೂಲ ಒದಗಿಸುವವಿಶ್ರಾಂತಿಗೃಹಗಳೂ ಇಲ್ಲಿವೆ. ಇದಲ್ಲದೇ ಜೀರ್ಣಾವಸ್ಥೆಯಲ್ಲಿರುವಬಾಬುರಾಯನ ಕೋಟೆಯೂ ಇಲ್ಲಿದೆ.

 

ಐಹೊಳೆ

ಬಾಗಲಕೋಟೆ ಜಿಲ್ಲೆಯ ಹುನಗುಂದತಾಲೂಕಿನಲ್ಲಿರುವ ಇದು ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕಲಾಕೇಂದ್ರವಾಗಿದೆ. ಕ್ರಿ.ಶ. ಆರರಿಂದ ೧೨ನೇ ಶತಮಾನದವರೆಗೆಇಲ್ಲಿ ವಿಭಿನ್ನ ಶೈಲಿಯ ೧೦೦ಕ್ಕೂ ಅಧಿಕ ದೇವಸ್ಥಾನಗಳನ್ನುನಿರ್ಮಿಸಲಾಗಿದ್ದು, ದೇವಾಲಯ ನಿರ್ಮಾಣದಲ್ಲಿ ವಿಧವಿಧವಾದವಾಸ್ತುಪ್ರಯೋಗಗಳನ್ನು ಮಾಡಿದ್ದಾರೆ. ಹಾಗಾಗಿ ಪರ್ಸಿಬ್ರೌನ್ಐಹೊಳೆಯನ್ನು ’ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು’ ಎಂದುಕರೆದಿದ್ದಾನೆ. ಐಹೊಳೆಯನ್ನು ’ಅಯ್ಯಾಹೊಳೆ’, ಅಯ್ಯಪುರ,ಆರ್ಯಪುರ, ಅಯ್ಯಪೊಳಲ್ (ಅಗ್ರಹಾರ) ಎಂದು ವಿವಿಧಶಾಸನಗಳಲ್ಲಿ ಬಣ್ಣಿಸಲಾಗಿದೆ. ಪುರಾಣ ಕಥೆಯ ಪ್ರಕಾರಪರಶುರಾಮ ತನ್ನ ತಂದೆಯ ಕೊಲೆಯ ಪ್ರತೀಕಾರ ಮುಗಿಸಿದಮೇಲೆ ಮಲಪ್ರಭಾ ನದಿಯಲ್ಲಿ ಕೊಡಲಿಯನ್ನು ತೊಳೆದಾಗ ನೀರುಕೆಂಪಾಗಿದ್ದನ್ನು ಕಂಡು ಜನ ’ಅಯ್ ಅಯ್ ಹೊಳೆ’ ಎಂದುಉದ್ಗರಿಸಿದರೆಂದು ಹೇಳಲಾಗಿದೆ. ಇದೇ ಮುಂದೆ ಅಯ್ಯಾಹೊಳೆಎಂದಾಗಿದೆ ಎಂದು ಸ್ಥಳೀಯವಾಗಿ ಭಾವಿಸಲಾಗುತ್ತದೆ. ಇನ್ನೊಂದುಕಥೆಯ ಪ್ರಕಾರ ಅಗಸ್ತ್ಯಮುನಿಯು, ವಾತಾಪಿಯ ಸೋದರಇಲ್ವಲನನ್ನು ಇಲ್ಲಿ ಕೊಂದದ್ದರಿಂದ ಇಲ್ವಲಪುರ ಎಂದು ಹೆಸರುಬಂತೆಂದು ಹೇಳಲಾಗಿದೆ. ಐಹೊಳೆ ಬೆಂಗಳೂರಿನಿಂದ ೫೧೦ಕಿ.ಮೀ. ದೂರದಲ್ಲಿ ಹಾಗೂ ತಾಲೂಕು ಕೇಂದ್ರ ಹುನಗುಂದದಿಂದ೨೪ ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಬಾಗಲಕೋಟೆಯಿಂದಲೂತಲುಪಬಹುದು. ಇಲ್ಲಿ ಆರನೇ ಶತಮಾನಕ್ಕೆ ಸೇರಿದ ಜೈನಹಾಗೂ ಹಿಂದೂ ಗುಹಾಲಯಗಳಿವೆ. ಜೈನಗುಹಾಲಯದಲ್ಲಿ ಜೈನತೀರ್ಥಂಕರರ ಸುಂದರ ಮೂರ್ತಿಗಳಿವೆ. ಶೈವ ಗುಹಾಲಯದಲ್ಲಿನಾಟ್ಯಭಂಗಿಯಲ್ಲಿರುವ ಸಪ್ತಮಾತೃಕೆಯರ ಸಹಿತ ನಟರಾಜಮೂರ್ತಿ ಇದೆ. ಇಲ್ಲಿ ಗಜಪೃಷ್ಟಾಕಾರದ ಪ್ರಸಿದ್ಧ ದುರ್ಗಾದೇವಾಲಯ ಹಾಗೂ ಚೌಕಾಕಾರದ ತಳವಿನ್ಯಾಸ ಇರುವಲಾಡಖಾನದೇವಾಲಯಗಳಿವೆ. ಹುಚ್ಚಿಮಲ್ಲಿ ಗುಡಿ, ಗೌಡರಗುಡಿ,ಚಕ್ರಗುಡಿ ಮುಂತಾದವು ಇಲ್ಲಿರುವ ವಿಭಿನ್ನ ಶೈಲಿಯ ಇತರ ದೇವಾಲಯಗಳು. ಗುಡ್ಡದ ಮೇಲೆ ಮೇಗುತಿ ಜೈನಬಸದಿ ಇದ್ದು,ಇಲ್ಲಿ ಎರಡನೇಯ ಪುಲಿಕೇಶಿಯ ಪ್ರಸಿದ್ಧ ಐಹೊಳೆ ಪ್ರಶಸ್ತಿಶಾಸನವಿದೆ. ಇಲ್ಲೇ ಕೆಳಗಡೆ ಎರಡು ಅಂತಸ್ತಿನ ಬಂಡೆಯಲ್ಲಿಕೊರೆದ ಬೌದ್ಧ ಚೈತ್ಯಾಲಯವಿದೆ. ಈ ದೇವಾಲಯಗಳುಸುಂದರವಾದ ಶಿಲ್ಪಗಳನ್ನು ಹೊಂದಿವೆ. ದೇವಾಲಯಗಳಶಿಲ್ಪಕಲೆಯನ್ನು ಅಭ್ಯಸಿಸುವ ವಿದ್ಯಾರ್ಥಿಗಳು ಐಹೊಳೆಯನ್ನುಕಡ್ಡಾಯವಾಗಿ ಸಂದರ್ಶಿಸಬೇಕು. ಅಲ್ಲಿಯೇ ಸಮೀಪದಲ್ಲಿರುವಸಿದ್ಧನಕೊಳ್ಳದಲ್ಲಿ ಲಜ್ಜಾಗೌರಿಯ ಮೂರ್ತಿ ಇದ್ದು ಬಳಿಯಲ್ಲಿಯೇಬಾದಾಮಿ ಚಾಲುಕ್ಯರ ಕಾಲದ ಸಿದ್ಧೇಶ್ವರ ದೇವಾಲಯವಿದೆ.

 

ಕಂಬದಹಳ್ಳಿ

ಪ್ರಮುಖ ಜೈನ ಕೇಂದ್ರವಾದ ಕಂಬದಹಳ್ಳಿ,ಶ್ರವಣಬೆಳಗೊಳ ರಸ್ತೆಯಲ್ಲಿ ನಾಗಮಂಗಲದಿಂದ ೧೬ ಕಿ. ಮೀ.ಪಶ್ಚಿಮಕ್ಕಿದೆ. ಇಲ್ಲಿ ಗಂಗರ ಕಾಲದ ಬಸದಿಯ ಸಂಕೀರ್ಣವಿದೆ.ಶಾಸನಗಳಲ್ಲಿ ಈ ಸ್ಥಳವನ್ನು ಬಿಂಡಿಗನವಿಲೆಯ ತೀರ್ಥಬಸದಿ ಎಂದುಉಲ್ಲೇಖಿಸಲಾಗಿದೆ. ಇಲ್ಲಿರುವ ಎತ್ತರದ ಮಾನಸ್ತಂಭದಿಂದಾಗಿಇದನ್ನು ಕಂಬದಹಳ್ಳಿ ಎಂದು ಕರೆಯಲಾಗುತ್ತಿದೆ. ಇಲ್ಲಿ ಮೂರುವಿವಿಧ ಹಂತಗಳಲ್ಲಿ ಕಟ್ಟಲ್ಪಟ್ಟಿರುವ ಅದ್ಭುತವಾದ ಏಳು ಬಸದಿಗಳಸಂಕೀರ್ಣವಿದೆ. ಅದರಲ್ಲಿ ಆದಿನಾಥ ತ್ರಿಕೂಟ ಹಾಗೂ ದ್ವಿಕೂಟಬಸದಿಗಳ ಉತ್ತರಕ್ಕೆ ಇನ್ನೊಂದು ದ್ವಿಕೂಟ (ಶಾಂತಿನಾಥ) ಬಸದಿಇದೆ. ಆದಿನಾಥ ತ್ರಿಕೂಟ ಬಸದಿಯಲ್ಲಿ ಆದಿನಾಥ ತೀರ್ಥಂಕರನಮೂರ್ತಿ ಉತ್ತರಕ್ಕೆ ಮುಖಮಾಡಿ ಇದ್ದು, ಇಕ್ಕೆಲಗಳಲ್ಲಿ ಪೂರ್ವಹಾಗೂ ಪಶ್ಚಿಮಕ್ಕೆ ಮುಖಮಾಡಿರುವ ನೇಮಿನಾಥ ಹಾಗೂ ಶಾಂತಿನಾಥರ ವಿಗ್ರಹಗಳಿವೆ. ಮಧ್ಯದ ಗರ್ಭಗುಡಿಯಅಂತರಾಳದಲ್ಲಿ ಎರಡು ಮೀಟರ್ ಎತ್ತರದ ಪಾರ್ಶ್ವನಾಥಹಾಗೂ ಯಕ್ಷ-ಯಕ್ಷಿ ವಿಗ್ರಹಗಳಿವೆ. ನವರಂಗದ ವಾಯವ್ಯಮೂಲೆಯಲ್ಲಿ ಶಾಂತಿನಾಥನ ಯಕ್ಷ-ಯಕ್ಷಿಯರ ವಿಗ್ರಹಗಳಿವೆ.ಇದಲ್ಲದೇ ಧರಣೇಂದ್ರ, ಗೋಮುಖ, ಕೂಷ್ಮಾಂಡಿನಿ, ಪದ್ಮಾವತಿಹಾಗೂ ಜ್ವಾಲಾಮಾಲಿನಿಯರ ವಿಗ್ರಹಗಳಿವೆ. ನವರಂಗದ ಮಧ್ಯದಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರಿಂದ ಹಾಗೂ ಕ್ಷೇತ್ರಪಾಲರಿಂದಸುತ್ತುವರಿಯಲ್ಪಟ್ಟ ಪಾರ್ಶ್ವನಾಥನ ಸುಂದರ ಕೆತ್ತನೆಯಿದೆ.ನವರಂಗದ ಮುಂಭಾಗದಲ್ಲಿರುವ ಮಂಟಪವು ನಂತರದಸೇರ್ಪಡೆಯಾಗಿದೆ. ಇಲ್ಲಿ ಅಷ್ಟದಿಕ್ಪಾಲಕರಿರುವ ಅಷ್ಟಕೋನಾಕೃತಿಯಪೀಠವಿದೆ. ನಾಲ್ಕು ಹಂತಗಳಿರುವ ಅಧಿಷ್ಠಾನದ ಅರೆಗಂಬಗಳಮೇಲಿರುವ ಅಲಂಕೃತ ಬೋದಿಗೆ ಹಾಗೂ ದೇವಕೋಷ್ಠಗಳಲ್ಲಿತೀರ್ಥಂಕರರ ಶಿಲ್ಪಗಳಿವೆ. ಕಪೋತವನ್ನು ಹಂಸಗಳ ಸಾಲಿನಿಂದಅಲಂಕರಿಸಲಾಗಿದೆ. ಗರ್ಭಗುಡಿಗಳ ಮೇಲೆ ಮೂರು ತಳಗಳಿರುವದ್ರಾವಿಡ ವಿಮಾನಗಳಿವೆ. ಪೂರ್ವದ ಶಿಖರದ ಸ್ತೂಪಿಯುಗೋಲಾಕಾರವಾಗಿದ್ದು, ಪಶ್ಚಿಮ ಹಾಗೂ ದಕ್ಷಿಣದ ಶಿಖರಗಳಸ್ತೂಪಿಯು ಚೌಕಾಕಾರ ಹಾಗೂ ಅಷ್ಟಕೋನಾಕಾರವಾಗಿವೆ.ಇದು ಎಲ್ಲಿಯೂ ಕಾಣಸಿಗದ ವಿಶಿಷ್ಟ ಲಕ್ಷಣವಾಗಿದೆ. ತ್ರಿಕೂಟಬಸದಿಯಿಂದ ಸುಮಾರು ೧೦ ಅಡಿ ಉತ್ತರಕ್ಕೆ ಒಂದಕ್ಕೊಂದುಮುಖಮಾಡಿರುವ ಎರಡು ಗರ್ಭಗೃಹಗಳಿದ್ದು, ಅವುಗಳಿಗೆಪ್ರತ್ಯೇಕವಾದ ಶುಕನಾಸಿ ಹಾಗೂ ನವರಂಗಗಳಿವೆ. ಈ ಎರಡುಗರ್ಭಗೃಹಗಳ ನಡುವಿನ ಜಾಗದಲ್ಲಿ ತೆರೆದ ಮಂಟಪವಿದೆ.ಈ ಗರ್ಭಗೃಹಗಳಲ್ಲಿ ಆಸೀನ ತೀರ್ಥಂಕರರ ವಿಗ್ರಹಗಳಿವೆ.ಪಂಚಕೂಟ ಬಸದಿಯ ಉತ್ತರಕ್ಕಿರುವ ಶಾಂತಿನಾಥ ಬಸದಿಯನ್ನುನೂರು ೧೨ನೇ ಶತಮಾನದಲ್ಲಿ ಹೊಯ್ಸಳ ಸೇನಾಪತಿಗಂಗರಾಜನ ಮಗ ಬೊಪ್ಪನು ಕಟ್ಟಿಸಿದ್ದನು. ಈ ಬಸದಿಯಅಧಿಷ್ಠನದಲ್ಲಿ ಸುಂದರವಾದ ಆನೆ, ಸಿಂಹ, ಕುದುರೆ, ಯಾಳಿ,ಎತ್ತು ಮುಂತಾದ ಶಿಲ್ಪಗಳಿವೆ. ನವರಂಗದಲ್ಲಿ ನೇಮಿನಾಥ,ಧರಣೇಂದ್ರ, ಗೋಮುಖ ಹಾಗು ಪದ್ಮಾವತಿ ಯಕ್ಷಿಯ ಶಿಲ್ಪಗಳಿವೆ.ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿಯಲ್ಪಟ್ಟಿರುವಆಸೀನ ತೀರ್ಥಂಕರ ವಿಗ್ರಹವಿದೆ. ಪಶ್ಚಿಮದ ಗರ್ಭಗೃಹದಲ್ಲಿಶಾಂತಿನಾಥ ತೀರ್ಥಂಕರನ ವಿಗ್ರಹವಿದ್ದು, ಇದು ೩.೫ ಮೀಟರ್ಎತ್ತರವಿದೆ. ಪೂರ್ವದ ಗರ್ಭಗೃಹವನ್ನು ಈಗ ಪ್ರವೇಶದ್ವಾರವನ್ನಾಗಿಉಪಯೋಗಿಸಲಾಗುತ್ತಿದೆ. ಪಂಚಕೂಟ ಬಸದಿಯ ಮುಂಭಾಗದಲ್ಲಿಸ್ವಲ್ಪ ಉತ್ತರಕ್ಕೆ ೧೫ ಮೀಟರ್ ಎತ್ತರದ ಬ್ರಹ್ಮಸ್ತಂಭವಿದ್ದು, ಇದನ್ನುಕರ್ನಾಟಕದಲ್ಲಿಯೇ ಅತ್ಯಂತ ಸುಂದರವಾದ ಬ್ರಹ್ಮಸ್ತಂಭವೆಂದುಪರಿಗಣಿಸಲಾಗಿದೆ. ಈ ಬ್ರಹ್ಮಸ್ತಂಭದಿಂದಾಗಿಯೇ ಈ ಸ್ಥಳಕ್ಕೆಕಂಬದಹಳ್ಳಿ ಎಂದು ಹೆಸರು ಬಂದಿದೆ.

 

ಕನ್ನಂಬಾಡಿ

ಕನ್ನಂಬಾಡಿಯು ಕಾವೇರಿ ನದಿಗೆ ಕಟ್ಟಿರುವಕೃ಼ಷ್ಣರಾಜಸಾಗರ ಅಣೆಕಟ್ಟಿನ ಹಿನ್ನೀರಿನಲ್ಲಿರುವ ಬೇಚಿರಾಕ್ ಗ್ರಾಮ.ಇಲ್ಲಿ ಕ್ರಮವಾಗಿ ಗಂಗ ಮತ್ತು ಹೊಯ್ಸಳರ ಕಾಲದ ಹತ್ತು ಮತ್ತುಹದಿಮೂರನೇ ಶತಮಾನದ ಕನ್ನೇಶ್ವರಹಾಗೂ ಗೋಪಾಲಕೃಷ್ಣ ದೇವಾಲಯಗಳು ಹಿಂದೆ ಇದ್ದವು. ಈಗ ಹಿನ್ನೀರಿನಲ್ಲಿ ಅವುಮುಳುಗಡೆಯಾಗಿವೆ. ಈಚೆಗೆಗೋಪಾಲಕೃಷ್ಣ ದೇವಾಲಯವನ್ನುಬೆಂಗಳೂರಿನ ಲೋಕೋಪಕಾರಿಯೊಬ್ಬರ ಪ್ರಯತ್ನದಿಂದಾಗಿಸಮೀಪದ ಹೊಸಕನ್ನಂಬಾಡಿ ಗ್ರಾಮದ ವ್ಯಾಪ್ತಿಯಲ್ಲಿರುವಎತ್ತರದ ಸ್ಥಳಕ್ಕೆ ಸ್ಥಳಾಂತರಿಸಿ ಪುನರ್ ನಿರ್ಮಿಸಲಾಗಿದ್ದು,ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಿಂದೆ,ಈ ದೇವಾಲಯಗಳ ಶಿಲ್ಪಗಳನ್ನು ಕೃಷ್ಣರಾಜಸಾಗರ ಆಣೆಕಟ್ಟಿನಉತ್ತರ ಪಾರ್ಶ್ವದ ನಾರ್ತ್‌ಬ್ಯಾಂಕ್ ಗ್ರಾಮದಲ್ಲಿ ನಿರ್ಮಿಸಲಾದಹೊಸ ದೇವಾಲಯಗಳಲ್ಲಿ ರಕ್ಷಿಸಿಡಲಾಗಿತ್ತು. ಈಗ ಅವುಗಳನ್ನುಪುನರ್ ನಿರ್ಮಿತ ದೇವಾಲಯ ಪರಿಸರಕ್ಕೆ ಸಾಗಿಸಲಾಗುತ್ತಿದೆ.ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರದ ಆಕರ್ಷಕದೀಪಾಲಂಕಾರವಿರುವ ’ಬೃಂದಾವನ ಉದ್ಯಾನವನ’ಗಳಿರುವಅಣೆಕಟ್ಟು, ಸಂಗೀತ ಕಾರಂಜಿಗಳುಳ್ಳ ಉದ್ಯಾನವನವನ್ನು ಸಂಜೆಯಸಮಯದಲ್ಲಿ ನೋಡಿದಾಗ ಆಹ್ಲಾದಕರ ಅನುಭವವಾಗುತ್ತದೆ.

 

ಕಾರ್ಕಳ

ಜಿಲ್ಲಾಕೇಂದ್ರ ಉಡುಪಿಯಿಂದ ೩೦ ಕಿ.ಮೀದೂರದಲ್ಲಿರುವ ತಾಲೂಕು ಕೇಂದ್ರ ಕಾರ್ಕಳವು ಗಮನಾರ್ಹ ಜೈನ ಕೇಂದ್ರವಾಗಿದೆ. ಇದು ಭೈರರಸರು ಅಥವಾ ಶಾಂತರಸರು ಎಂದುಕರೆಯಲಾಗುತ್ತಿದ್ದ ಜೈನ ವಂಶೀಯರ ರಾಜಧಾನಿಯಾಗಿದ್ದು,ಇಲ್ಲಿರುವ ಗೊಮ್ಮಟ ವಿಗ್ರಹದ ಪ್ರತಿಸ್ಥಾಪನೆಯನ್ನು ೧೪೩೨ರಲ್ಲಿ ಆವಂಶದ ವೀರಪಾಂಡ್ಯನು ಮಾಡಿಸಿದನು. ಇಮ್ಮಡಿ ಭೈರವರಾಯನುಇಲ್ಲಿ ಬಹು ಸುಂದರವಾದ ಚತುರ್ಮುಖಬಸದಿ, ತ್ರಿಭುವನ ತಿಲಕಜಿನ ಚೈತ್ಯಾಲಯವನ್ನು ೧೫೮೬ರಲ್ಲಿ ನಿರ್ಮಿಸಿದ್ದಾನೆ. ನಾಲ್ಕುಪ್ರವೇಶದ್ವಾರಗಳುಳ್ಳ ಈ ಬಸದಿಯ ಗರ್ಭಗೃಹದ ಪೀಠದ ಮೇಲೆನಾಲ್ಕು ದಿಕ್ಕಲ್ಲಿ ಅರನಾಥ, ಮಲ್ಲಿನಾಥ ಮತ್ತು ಮುನಿ ಸುವೃತನಾಥತೀರ್ಥಂಕರರ ಮೂರ್ತಿಗಳಿರುವಂತೆ ಸಂಯೋಜಿಸಲಾಗಿದೆ.ಇಲ್ಲಿರುವ ಅನಂತಶಯನ ಹಾಗೂ ವೆಂಕಟರಮಣದೇವಾಲಯಗಳು ಸಾಕಷ್ಟು ಹಳೆಯದವಾಗಿದ್ದು, ರಾಮಸಮುದ್ರಹೊಂಡದ ಮೇಲೆ ಇನ್ನೊಂದು ಪ್ರಾಚೀನ ಬಸದಿ ಇದೆ. ಇಲ್ಲಿಯಸಂತ ಲಾರೆನ್ಸ್ ಚರ್ಚ್ ಬಹಳಷ್ಟ ಪೂಜನೀಯವೆನಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವಮೂಡಬಿದರೆಯು ದಕ್ಷಿಣಭಾರತದ ಪ್ರಸಿದ್ಧ ಜೈನ ಕೇಂದ್ರಗಳಲ್ಲಿಒಂದಾಗಿದೆ. ಇಲ್ಲಿರುವ ೧೮ ಬಸದಿಗಳಲ್ಲಿ ತ್ರಿಭುವನತಿಲಕಚೂಡಾಮಣಿ ಬಸದಿ ಅಥವಾ ಸಾವಿರ ಕಂಬದ ಬಸದಿಯು ಅತೀದೊಡ್ಡದು. ಉಳಿದ ಬಸದಿಗಳು ಆಕರ್ಷಕವಾಗಿವೆ. ಜೈನಮಠದಲ್ಲಿಅಪರೂಪದ ಜೈನ ಕೃತಿಗಳು, ಹಸ್ತಪ್ರತಿಗಳು ಹಾಗು ಗಮನಾರ್ಹಲೋಹದ ವಿಗ್ರಹಗಳೂ ಇವೆ. ಮೂಡಬಿದರೆಯು ಹಿಂದೆ ಚೌಟರಸರರಾಜಧಾನಿಯಾಗಿತ್ತು. ಈ ವಂಶದ ಹಳೆಯ ಅರಮನೆಯಲ್ಲಿನವನಾರೀ ಕುಂಜರ ಹಾಗೂ ಪಂಚನಾರೀ ತುರಗ ಕೆತ್ತನೆಗಳುಳ್ಳಮರದ ಆಕರ್ಷಕ ಕಂಬಗಳಿವೆ.

 

ಕಾರವಾರ

ಉತ್ತರಕನ್ನಡದ ಜಿಲ್ಲಾ ಕೇಂದ್ರವಾಗಿರುವಕಾರವಾರವು ಗೋವಾ ರಾಜ್ಯಕ್ಕೆ ಹೊಂದಿಕೊಂಡಂತಿದ್ದುಬೆಂಗಳೂರಿನಿಂದ ೬೦೦ ಕಿ.ಮೀ. ದೂರದಲ್ಲಿದೆ. ೧೮೬೩ರಲ್ಲಿಬ್ರಿಟಿಷರಿಂದ ಸ್ಥಾಪಿತವಾದ ಈ ಪಟ್ಟಣವು ಕಡವಾಳ ಗ್ರಾಮದಿಂದತನ್ನ ಹೆಸರು ಪಡೆದಿದೆ. ಕಡವಾಳವು ಕಾಳೀ ನದಿ ದಂಡೆಯ ಮೇಲೆ

ಸ್ವಲ್ಪ ಒಳಗಾದಂತೆ, ಇದ್ದು ಇಲ್ಲಿ ಬ್ರಿಟಿಷರು ೧೮೩೮ರಲ್ಲಿ ಫ್ಯಾಕ್ಟರಿನಿರ್ಮಿಸಿದ್ದರು. ಕಾರವಾರವು ಸಾರ್ವಕಾಲಿಕ ಅನುಕೂಲತೆಗಳುಳ್ಳಬಂದರಾಗಿದ್ದು, ಅಂಜದೀವ್, ಕೂರ್ಮಗಡ, ದೇವಗಡ,ಮುಂತಾದ ದ್ವೀಪಗಳ ಸಾಲಿನಿಂದಾಗಿ ಬಿರುಗಾಳಿಯಿಂದರಕ್ಷಿತವಾಗಿದೆ. ಇಲ್ಲಿ ಬಹು ಉತ್ಕೃಷ್ಟ ದರ್ಜೆಯ ಕಡಲ ತಾಣಗಳಿವೆ.ಭಾರತದಿಂದ ಹಿಡಿದು ಶ್ರೀಲಂಕಾ, ಆಸ್ಟ್ರೇಲಿಯವರೆಗೆ ಇರುವಬಂದರುಗಳ ಪೈಕಿ ಕಾರವಾರ ಬಂದರನ್ನು ಅತ್ಯಂತ ಸುರಕ್ಷಿತಬಂದರೆಂದು ಸೈನಿಕವಾಗಿ ಪರಿಗಣಿಸಲಾಗಿದೆ. ಆದ ಕಾರಣಭಾರತೀಯ ನೌಕಾಪಡೆಯು ಇಲ್ಲಿ  ನೌಕಾನೆಲೆಯನ್ನುಹಲವು ವರ್ಷಗಳ ಹಿಂದೆಯೇ ಸ್ಥಾಪಿಸಿದೆ.ಕಾಳೀನದಿಗೆಹೊಸದಾಗಿ ಕಟ್ಟಲಾಗಿರುವ ಸೇತುವೆಯನ್ನು ದಾಟಿದರೆ,ಸೋಂದಾ ಸದಾಶಿವನಾಯಕನಿಂದ ನಿರ್ಮಿತವಾದ ಸದಾಶಿವಗಡಎಂಬ ಗಿರಿದುರ್ಗವಿದೆ. ಸದಾಶಿವಗಡದಲ್ಲಿ ದುರ್ಗಾ ದೇವಾಲಯಹಾಗೂ ಪೀರ್ ಕಮರುದ್ದೀನ್ ದರ್ಗಾ ಇವೆ. ಕಾರವಾರದ ದಕ್ಷಿಣಕ್ಕೆಬಿನಗಾ ಎಂಬ ಊರಿದೆ. ಇಲ್ಲಿ ಕಾಸ್ಟಿಕ್ ಸೋಡಾ ಕಾರ್ಖಾನೆ ಇದೆ.ಕಾಳೀನದಿಯ ಮುಖಜ ಪ್ರದೇಶದಿಂದ ನದಿಯ ಹರವಿನವರೆಗೂಸರಕುಗಳು ಕದ್ರಾವನ್ನು ತಲುಪಿ ಅಲ್ಲಿಂದ ಮುಂದೆ ಭೂಮಾರ್ಗದಮೂಲಕ ಮಧ್ಯಯುಗೀನ ಕಾಲದಲ್ಲಿ ಮಲೆನಾಡನ್ನುತಲುಪುತ್ತಿದ್ದವು. ಗೋವಾದಆಡಳಿತದಲ್ಲಿರುವ ಅಂಜದೀವ ದ್ವೀಪವು ಬಿನಗದ ಸಮೀಪವಿದೆ. ಇಲ್ಲಿ ಪೋರ್ಚುಗೀಸ್ ಯಾತ್ರಿಕವಾಸ್ಕೋಡಗಾಮನು ಸ್ವಲ್ಪ ಕಾಲ ನೆಲಸಿದ್ದನೆಂದು ಪ್ರತೀತಿಯಿದೆ.

 

ಕಾಳಗಿ

ಚಿತ್ತಾಪುರ ತಾಲೂಕಿನಲ್ಲಿರುವ ಕಾಳಗಿ ಕಲಬುರಗಿಯ೬೦ ಕಿ.ಮೀ. ದೂರದಲ್ಲಿದೆ. ಕಲ್ಯಾಣದ ಚಾಳುಕ್ಯರಕಾಲದಲ್ಲಿ ಇದುಮನ್ನೆದಡಿ-೧೦೦೦ ಎಂಬ ಆಡಳಿತ ವಿಭಾಗದ ಕೇಂದ್ರವಾಗಿತ್ತು.ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಐದು ದೇವಾಲಯಗಳಿವೆ.ಇವುಗಳಲ್ಲಿ ಊರಿನ ಹೃದಯ ಭಾಗದಲ್ಲಿರುವ ಮಲ್ಲಿಕಾರ್ಜುನದೇವಾಲಯವು ೧೧೬೩ರಲ್ಲಿ ಬಾಣ ಮಹಾಮಂಡಲೇಶ್ವರವೀರಗೊಂಕರಸನಿಂದ ನಿರ್ಮಿಸಲ್ಪಟ್ಟ ಸುಂದರ ವಾಸ್ತುವಿನಉದಾಹರಣೆಯಾಗಿದೆ. ರಾಮೋಜನೆಂಬ ಸ್ಥಪತಿಯ ನೇತೃತ್ವದಲ್ಲಿಹನ್ನೆರಡು ಜನ ಶಿಲ್ಪಿಗಳು ಇದನ್ನು ನಿರ್ಮಿಸಿದರು. ಬನಶಂಕರಿದೇವಾಲಯದ ಸಮೀಪದಲ್ಲಿರುವ ಪಾರ್ಶ್ವನಾಥ ಬಸದಿಯುಹನ್ನೊಂದನೇ ಶತಮಾನದ ತ್ರಿಕೂಟ ದೇವಾಲಯವಾಗಿದ್ದುಮುಖ್ಯ ಗರ್ಭಗೃಹದಲ್ಲಿ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವಿದೆ. ಊರಿಂದ ದಕ್ಷಿಣ ಒಂದು ಕಿ.ಮೀ. ದೂರದಲ್ಲಿ ಕಾಳಿಂಗದೇವಾಲಯ ಸಂಕೀರ್ಣವಿದ್ದು ಇವುಗಳಲ್ಲಿ ಕೆಲವು ದೇವಾಲಯಗಳುವಿವಿಧ ದೇವತಾ ಶಿಲ್ಪಗಳಿಂದ ಸಮೃದ್ಧವಾಗಿ ಅಲಂಕೃತವಾಗಿವೆ.ಇಲ್ಲಿಯ ಕರಿ ದೇವರು (ಸೂರ್ಯನಾರಾಯಣ) ದೇವಾಲಯಜೀರ್ಣವಾಗಿದ್ದರೂ ವಿಷ್ಣು, ಬ್ರಹ್ಮ, ಮಹೇಶ್ವರ, ಭೈರವ, ನಟರಾಜ,ಉಮಾಮಹೇಶ್ವರ, ಮಹಿಷಮರ್ದಿನಿ, ಗಣಪತಿ, ಮದನಿಕೆಯರೇಮುಂತಾದ ಅನೇಕ ಉಬ್ಬು ಶಿಲ್ಪಗಳನ್ನು ಹೊಂದಿರುವ ತ್ರಿಕೂಟದೇವಾಲಯವಾಗಿದೆ. ಹದಿಮೂರನೇ ಶತಮಾನದ ಶಾಸನದಲ್ಲಿಉಲ್ಲೇಖಿತವಾಗಿರುವ ಜಯಲಿಂಗೇಶ್ವರ ದೇವಾಲಯಇದಾಗಿರಬಹುದು ಎಂಬ ಅಭಿಪ್ರಾಯವಿದೆ. ಇಲ್ಲಿರುವ ಕಾಳೇಶ್ವರದೇವಾಲಯ ಪ್ರಾಚೀನತಮವಾದುದಾಗಿದ್ದು, ೧೧೦೩ರ ಶಾಸನಒಂದರಲ್ಲಿ ಸ್ವಯಂಭು ಕಾಳೇಶ್ವರ ಎಂದು ಹೆಸರಿಸಲ್ಪಟ್ಟಿದೆ. ಸಭಾಮಂಟಪದ ಇಕ್ಕೆಲಗಳಲ್ಲಿ ನೀಲಕಂಠ, ರೇವಣ ಸಿದ್ಧೇಶ್ವರ,ಈಶ್ವರ, ಸೋಮೇಶ್ವರ ಬಿಬ್ಬೇಶ್ವರ ಲಿಂಗಗಳು ಪ್ರತಿಷ್ಠಾಪಿತವಾಗಿವೆ.ದೇವಾಲಯದ ಪಾರ್ಶ್ವದಲ್ಲಿ ಕಾಶಿ ವಿಶ್ವನಾಥ, ರಾಮಲಿಂಗ ಮತ್ತುನಂದಿಯ ಗುಡಿಗಳಿವೆ. ಕಾಳಗಿ ಹೊಳೆಯ ಉತ್ತರದಂಡೆಯಮೇಲೆ ಪುಷ್ಕರಿಣಿಯ ಪರಿಸರದಲ್ಲಿ ಈಶ್ವರ ಮತ್ತು ನರಸಿಂಹದೇವಾಲಯಗಳಿವೆ.

 

ಕಿತ್ತೂರು

ಧಾರವಾಡ-ಬೆಳಗಾವಿ ರಸ್ತೆಯಲ್ಲಿ ಧಾರವಾಡದಿಂದ೩೩ ಕಿ.ಮೀ. ದೂರವಿರುವ, ಕಿತ್ತೂರು ಹಿಂದೆದೇಶಗತಿಯೊಂದರರಾಜಧಾನಿಯಾಗಿತ್ತು. ೧೮೨೪ರಲ್ಲಿ ಬ್ರಿಟಿಷರ ವಿರುದ್ದ ದಂಗೆ ಎದ್ದದೇಸಾಯಿನಿ ಚೆನ್ನಮ್ಮಾಜಿಯಿಂದಾಗಿ ಈ ಸ್ಥಳವು ಪ್ರಸಿದ್ಧವಾಯಿತು.ಊರಲ್ಲಿ ಜೀರ್ಣವಾಗಿರುವ ವಾಡೆ, ಬುರುಜು,ಇತ್ಯಾದಿಗಳಿದ್ದು,ಇವು ಕೋಟೆಯ ಒಂದು ಭಾಗದಲ್ಲಿವೆ. ಇಲ್ಲಿರುವ ಕರ್ನಾಟಕರಾಜ್ಯ ಸರ್ಕಾರ ವಸ್ತುಸಂಗ್ರಹಾಲಯದಲ್ಲಿ ದೇಸಾಯಿ ವಾಡೆಯಿಂದಸಂಗ್ರಹಿಸಲಾದ ಅನೇಕ ಪ್ರಾಚ್ಯವಸ್ತುಗಳಿವೆ. ಕೋಟೆಯೊಳಗೆ ಕಲ್ಮೇಶ್ವರ ದೇವಾಲಯವಿದ್ದು, ಊರಲ್ಲಿ ಚೌಕಿಮಠ ಹಾಗೂಹಿರೇಮಠ ಎಂದು ಕರೆಯಲಾಗುವ ವೀರಶೈವ ಮಠಗಳಿವೆ.ಕಿತ್ತೂರಿನಲ್ಲಿ ಬಾಲಕಿಯರ ಸೈನಿಕ ಶಾಲೆಯಿದೆ. ತಾಲೂಕುಕೇಂದ್ರಬೈಲಹೊಂಗಲದಲ್ಲಿ ಚೆನ್ನಮ್ಮಾಜಿಯ ಸಮಾಧಿ ಇದ್ದು, ಅದರ ಮೇಲೆಆಕೆಯ ಕಂಚಿನ ವಿಗ್ರಹವನ್ನು ಪ್ರತಿಸ್ಠಾಪಿಸಲಾಗಿದೆ. ಕಿತ್ತೂರಿನಿಂದಐದು ಕಿ.ಮೀ. ದೂರವಿರುವ ದೇಗಾಂವೆಯಲ್ಲಿ ಚಾಲುಕ್ಯರ ಶೈಲಿಯಲ್ಲಿರುವ ೧೨ನೇ ಶತಮಾನದ ಕಮಲನಾರಾಯಣದೇವಾಲಯವಿದೆ. ಇದನ್ನು ಗೋವೆಯ ಕದಂಬರು ನಿರ್ಮಿಸಿದರು.ಉತ್ಕೃಷ್ಟ ಕಲಾಪ್ರತಿಭೆಗಾಗಿ ಈ ಸುಂದರ ದೇಗುಲ ಪ್ರಸಿದ್ಧವಾಗಿದೆ.ಬೈಲಹೊಂಗಲದಿಂದ ೧೦ ಕಿ.ಮೀ ದೂರದಲ್ಲಿರುವ ಒಕ್ಕುಂದವುರಾಷ್ಟ್ರಕೂಟರ ಕಾಲದಲ್ಲಿ (ಕ್ರಿ.ಶ. ೮೫೦) ಪ್ರಮುಖ ಪಟ್ಟಣವಾಗಿದ್ದುಕವಿರಾಜ ಮಾರ್ಗದ ಕರ್ತೃ ಶ್ರೀವಿಜಯ ಹೆಸರಿಸಿರುವ ತಿರುಳಕನ್ನಡ ಪ್ರದೇಶ ನಾಲ್ಕು ಗಡಿಸ್ಥಳಗಳಲ್ಲಿ ಇದೊಂದಾಗಿದ್ದು,ಫಲಿಗೆರೆ ಪಟ್ಟದ ಕಿಸುವೊಳಲು ಹಾಗೂ ಕೊಪ್ಪಣ ನಗರ ಉಳಿದೆಮೂರ್ತಿ ಸ್ಥಳಗಳಾಗಿವೆ. ಈಗ ನವಿಲುತೀರ್ಥ ಅಣೆಕಟ್ಟಿನಲ್ಲಿಮುಳುಗಡೆಯಾಗಿದೆ. ಇಲ್ಲಿ ಕಲ್ಯಾಣದ ಚಾಲುಕ್ಯರ ಕಾಲದ ಜೈನ,ಶೈವ ಸಂಪ್ರದಾಯ ದೇವಾಲಯಗಳಿದ್ದು, ಕೇವಲ ಬೇಸಿಗೆಯಲ್ಲಿಮಾತ್ರ ನೋಡಲು ದೊರೆಯತ್ತದೆ.

 

ಕೈದಾಳ

ಜಿಲ್ಲಾ ಕೇಂದ್ರ ತುಮಕೂರಿನಿಂದ ಐದು ಕಿ.ಮೀದಕ್ಷಿಣಕ್ಕಿರುವ ಚಾರಿತ್ರಿಕ ಮಹತ್ವದ ಸ್ಥಳ. ಇಲ್ಲಿಯಶಾಸನವೊಂದುಹೊಯ್ಸಳ ಒಂದನೆಯ ನರಸಿಂಹನ ಸಾಮಂತ ಗೂಚಿಬಾಚಿಯುಕೈದಾಳದಲ್ಲಿ ಶಿವು ವಿಷ್ಣ ಜಿನ ದೇವಾಲಯವನ್ನು ನಿರ್ಮಿಸಿದಅಂಶವನ್ನು ದಾಖಲಿಸಿದೆ. ಇಲ್ಲಿ ಚನ್ನಕೇಶವು, ಗಂಗಾಧರೇಶ್ವರ,ರಾಮೇಶ್ವರ ಗೌರಿಶ್ವರ ಹಾಗೂ ಶೂಲಗಂಬದ ಆಂಜನೆಯಗುಡಿಗಳಿವೆ. ಚನ್ನಕೇಶವ ಮೂರ್ತಿಯನ್ನು ಕೆತ್ತಿದ ಜಕಣಾಚಾರಿಯದೋಷವನ್ನು ಮಗ ಡಕಣಾಚಾರಿಯ ತೋರಿಸಿದಾಗ, ತಂದೆ ತನ್ನಕೈಗಳನ್ನು ಕತ್ತರಿಸಿಕೊಂಡನೆಂಬ ಐತಿಹ್ಯವಿದೆ.

 

ಕೊಕ್ಕರೆ ಬೆಳ್ಳೂರು

ತಾಲೂಕು ಕೇಂದ್ರ ಮದ್ದೂರಿನಿಂದ೧೮ ಕಿ.ಮೀ ವಾಯವ್ಯಕ್ಕಿರುವ ಕೊಕ್ಕರೆ ಬೆಳ್ಳೂರು ಗ್ರಾಮವುಅಪರೂಪದ ನೈಸರ್ಗಿಕ ಪಕ್ಷಿಧಾಮ. ಜನವರಿಯಿಂದ-ಜುಲೈತಿಂಗಳವರೆಗೆ ಬೇರೆ ಬೇರೆ ದೇಶಗಳಿಂದ ವಲಸೆ ಬರುವಪೆಲಿಕನ್ ಹಕ್ಕಿಗಳು ಇಲ್ಲಿಯ ವೃಕ್ಷಗಳ ಮೇಲೆ ಗೂಡುಕಟ್ಟಿತತ್ತಿಗಳನ್ನಿಟ್ಟು ಮರಿಮಾಡಿ ಚಳಿಗಾಲದ ತರುವಾಯ ತಮ್ಮ ತಮ್ಮಮೂಲಸ್ಥಳಗಳಿಗೆ ಮರಳುತ್ತವೆ. ಹೆಜ್ಜರ್ಲೆ ತಳಿಯ ಪೆಲಿಕನ್ ಹಕ್ಕಿಗಳುದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತವೆ. ಇವುಗಳಲ್ಲಿ ಕೆಲವುನಸುಗೆಂಪು ಬಣ್ಣದವು. ಇನ್ನೂ ಕೆಲವು ನಸುಕಪ್ಪು ಬಣ್ಣದವುಹಾಗು ಹೆಚ್ಚಿನವು ಬಿಳಿ ಬಣ್ಣದವು ಆಗಿರುತ್ತವೆ. ಇವು ಗ್ರಾಮದಸಮೀಪದ ಕೆರೆಯಲ್ಲಿರುವ ಮೀನುಗಳನ್ನು ತಿಂದು ಜೀವಿಸುತ್ತವೆ.ಗ್ರಾಮಸ್ಥರು ಈ ಹಕ್ಕಿಗಳ ಚಟುವಟಿಕೆಗೆ ಧಕ್ಕೆ ಬಾರದಂತೆ ಕಾಳಜಿವಹಿಸುತ್ತಾರೆ. ಈ ಸ್ಥಳವನ್ನು ರಾಷ್ಟ್ರೀಯ ರಕ್ಷಿತ ಪಕ್ಷಿಧಾಮ ಎಂದುಘೋಷಿಸಲಾಗಿದೆ.

 

 

ಕೊಪ್ಪಳ

ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳ ಪ್ರಾಚೀನಕಾಲದಲ್ಲಿ ’ಕೊಪಣ’ ಎಂದು ಕರೆಯಲ್ಪಟ್ಟಿದ್ದು ಕವಿರಾಜಮಾರ್ಗಗ್ರಂಥದಲ್ಲಿ ಈ ಊರು ಉಲ್ಲೇಖಿತಗೊಂಡಿದ್ದು ಹಿಂದೆ ಇದೊಂದುಜೈನರ ಪವಿತ್ರ ಕೇಂದ್ರವಾಗಿತ್ತು. ಇಲ್ಲಿರುವ ಪಾಲ್ಕಿಗುಂಡು ಮತ್ತುಗವಿಮಠ ಎಂಬಲ್ಲಿ ಅಶೋಕನ ಶಿಲಾಶಾಸನಗಳಿವೆ. ಗಿರಿದುರ್ಗವೂಇಲ್ಲಿದೆ. ಕಲ್ಯಾಣದ ಚಾಳುಕ್ಯರ ಮಾಂಡಲೀಕರಾಗಿದ್ದ ಶಿಲಾಹಾರವಂಶದ ಕುಡಿಯೊಂದಕ್ಕೆ ಕೊಪ್ಪಳವು ರಾಜಧಾನಿಯಾಗಿತ್ತು. ಜೂನ್೧೮೫೮ರಲ್ಲಿ (೧೮೫೭ರ ದಂಗೆಯ ಸರಮಾಲೆಯಲ್ಲಿ) ಮುಂಡರಗಿಭೀಮರಾವ್ ಮತ್ತು ಹಮ್ಮಿಗೆ ಕೆಂಚನಗೌಡ ಅವರು ಬ್ರಿಟಿಷರ ವಿರುದ್ದ ಹೋರಾಡಿ ಸತ್ತದ್ದು ಇಲ್ಲಿಯೇ. ಇಲ್ಲಿಯ ಪಾಲ್ಕಿಗುಂಡುತಾಣವನ್ನು ಮಹಾಭಾರತ ಖ್ಯಾತಿಯ ಇಂದ್ರಕೀಲ ಪರ್ವತವೆಂದು  ಹೇಳಲಾಗಿದ್ದು, ಮಳೆಮಲ್ಲೇಶ್ವರ ಎಂಬ ಪ್ರಾಚೀನ ಶಿವದೇವಾಲಯವಿಲ್ಲಿದೆ. ಕೊಪ್ಪಳದಿಂದ ೧೩ ಕಿ.ಮೀ. ದೂರದಲ್ಲಿರುವಕಿನ್ನಾಳವು ಸಾಂಪ್ರದಾಯಿಕ ವರ್ಣಮಯ ’ಲ್ಯಾಕರ್‌ವೇರ್’ಕಲೆಗೆ ಪ್ರಸಿದ್ಧವಾಗಿದೆ. ಇಲ್ಲಿಯ ಗವಿಸಿದ್ದೇಶ್ವರ ಮಠ ವಿಶೇಷ ಆಕರ್ಷಣೆಯಾಗಿದ್ದು ಪ್ರತೀ ವರ್ಷ ಜಾತ್ರೆಯಾಗುತ್ತದೆ.

 

ಕೊಲ್ಲೂರು

ಕರ್ನಾಟಕದ ಶಕ್ತಿ ಆರಾಧನಾ ಕೇಂದ್ರಗಳಲ್ಲಿಒಂದಾಗಿರುವ ಕೊಲ್ಲೂರು ಉಡುಪಿ ಜಿಲ್ಲೆಯ ತಾಲೂಕುಕೇಂದ್ರ ಕುಂದಾಪುರದಿಂದ ೪೨ ಕಿ.ಮೀ ದೂರದಲ್ಲಿದ್ದು,ಆದಿ ಶಂಕರಾಚಾರ್ಯರಿಗೆ ಅನ್ವಯಿಸಲಾಗಿರುವಮೂಕಾಂಬಿಕಾ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ.ಇಲ್ಲಿರುವ ಚಂದ್ರಮೌಳೇಶ್ವರ ದೇವರೊಂದಿಗೆ ಶ್ರೀಚಕ್ರದ ಮೇಲೆಆದಿಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದೆಂದು ಹೇಳಲಾದದೇವಿಯ ದೇಗುಲವು ಮಧ್ಯಯುಗದಲ್ಲಿ ಕೆಳದಿ ಅರಸರಿಂದ ಮರುಜೀರ್ಣೋದ್ದಾರಗೊಂಡು ಆರಾಧಿಸಲ್ಪಟ್ಟಿತ್ತು. ಈ ದೇವಾಲಯವುಕೊಡಚಾದ್ರಿಯ ಬುಡದಲ್ಲಿ ಸುಂದರ ನೈಸರ್ಗಿಕ ಪರಿಸರದಲ್ಲಿದೆ.

 

ಕೋಟಿಲಿಂಗೇಶ್ವರ

ಕೋಲಾರ ಜಿಲ್ಲೆಯ ಬಂಗಾರಪೇಟೆತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರುವ ಕೋಟಿಲಿಂಗೇಶ್ವರದೇವಾಲಯ ಸಂಕೀರ್ಣವು ದಕ್ಷಿಣ ಭಾರತದಿಂದ ಹೆಚ್ಚಾಗಿಯಾತ್ರಿಗಳನ್ನು ಆಕರ್ಷಿಸುತ್ತಿದೆ. ಇದು ಬಂಗಾರ ಪೇಟೆ-ಕೆ.ಜಿ.ಎಫ್. ರಸ್ತೆಯಲ್ಲಿದೆ. ಕೋಟಿಲಿಂಗೇಶ್ವರ ದೇವಾಲಯದ ಯೋಜನೆಯನ್ನುಸ್ಥಳೀಯ ಸಂತ ಸಾಂಬಶಿವಮೂರ್ತಿ ಪ್ರಾರಂಭಿಸಿದರು. ಇವರಮೂಲ ಆಶ್ರಮವು ಕಮ್ಮಸಂದ್ರದಲ್ಲಿದ್ದು, ವಾಲ್ಮೀಕಿ ಆಶ್ರಮವೆಂದುಕರೆಯಲಾಗುವ ಇಲ್ಲಿ ೧೯೪೭ರ ಆಗಸ್ಟ್ ೨೩ರಂದು ಅವರುಜನಿಸಿದರು. ಈ ಪವಿತ್ರ ಸ್ಥಾನಕ್ಕೆ ಬರುವ ಭಕ್ತರ ಸಹಾಯದಿಂದಒಂದು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂಬಆಕಾಂಕ್ಷೆ ಅವರದಾಗಿತ್ತು. ಹೀಗಾಗಿ ಇದಕ್ಕೆ ಕೋಟಿಲಿಂಗಎಂಬ ಹೆಸರು ಬಂದಿದೆ. ಈ ದೇವಾಲಯ ಸಂಕೀರ್ಣದಲ್ಲಿಈಗಾಗಲೇ ಭಕ್ತರ ಧನಸಹಾಯದಿಂದ ೭೦ ಲಕ್ಷಕ್ಕೂ ಹೆಚ್ಚು ಕಿರುಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೇ ಮಂಜುನಾಥ,ಬ್ರಹ್ಮ, ವಿಷ್ಣು ಮತ್ತು ಮಹೇಶ್ವರದೇವಾಲಯಗಳು ಇಲ್ಲಿವೆ.ದೇವಾಲಯ ಸಂಕೀರ್ಣದ ಪ್ರದೇಶದಲ್ಲಿ ದ್ರಾವಿಡ ಶೈಲಿಯಲ್ಲಿನಿರ್ಮಿಸಿರುವ ಎತ್ತರವಾದ ರಾಯಗೋಪುರವಿದೆ. ಮಂಜುನಾಥದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ತೆರೆದಮುಖಮಂಟಪವನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಎತ್ತರವಾದಶಿವಲಿಂಗವಿದ್ದು ಶಿಖರವು ಚಿಕ್ಕದಾಗಿದೆ. ಶಿವಪುರಾಣವನ್ನುಚಿತ್ರಿಸುವ ಕೆಲವು ಶಿಲ್ಪಗಳಿಲ್ಲಿವೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರದೇವಾಲಯವು ಒಂದೇ ಸಾಲಿನಲ್ಲಿ ಮೂರು ಗರ್ಭಗೃಹಗಳನ್ನುಹಾಗೂ ಅಂತರಾಳ ಮತ್ತು ನವೀನ ನವರಂಗವನ್ನು ಹೊಂದಿದೆ. ದೇವಾಲಯದ ಎದುರುಗಡೆ ದೊಡ್ಡ ಬಿಲ್ವ ವೃಕ್ಷವಿದೆ,. ತರುಣದಂಪತಿಗಳು ಈ ವೃಕ್ಷದ ಕೆಳಗೆ ಬೊಡ್ಡೆಗೆ ಚಿಕ್ಕ ತೊಟ್ಟಿಲುಗಳನ್ನುಕಟ್ಟುವ ಪರಂಪರೆಯಿದ್ದು, ಅನೇಕ ಕಿರು ತೊಟ್ಟಿಲುಗಳು ಅದರಸುತ್ತಲೂ ಇರುವುದನ್ನು ಕಾಣಬಹುದು. ೧೦೮ ಅಡಿ ಎತ್ತರದಬ್ರಹತ್ ಶಿವಲಿಂಗವು ಇಲ್ಲಿದ್ದು, ಅದರ ಮುಂದುಗಡೆ ೩೫ ಅಡಿಎತ್ತರದ ಕಲ್ಲಿನ ನಂದಿ ವಿಗ್ರಹವಿದೆ. ಶಿವರಾತ್ರಿಯಂದು ನಡೆಯುವವಾರ್ಷಿಕ ಜಾತ್ರೆಗೆ ಸಾವಿರಾರು ಜನರು ಇಲ್ಲಿ ಸೇರುತ್ತಾರೆ.ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೇವಾಲಯದ ಆಡಳಿತ ವರ್ಗಧರ್ಮಶಾಲೆಗಳನ್ನು ನಿರ್ಮಿಸಿದೆ.

 

ಕೋಲಾರ

ಬೆಂಗಳೂರಿನಿಂದ ೭೫ ಕಿ.ಮೀ. ದೂರದಲ್ಲಿಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೋಲಾರ ಒಂದುಜಿಲ್ಲಾ ಕೇಂದ್ರ. ಕುವಳಾಲಪುರ ಎಂದೂ ಕರೆಯಲ್ಪಡುತ್ತಿದ್ದಈ ಊರು ಗಂಗರ ಮೊದಲ ರಾಜಧಾನಿಯಾಗಿತ್ತು. ಅವರಿಂದ ನಿರ್ಮಿತಗೊಂಡು ತದನಂತರ ಚೋಳರಿಂದಜೀರ್ಣೋದ್ಧಾರಗೊಂಡಿರುವ ಮರು ಕೋಲಾರಮ್ಮ ದೇವಾಲಯಕ್ಕೆಈ ಊರು ಪ್ರಸಿದ್ಧವಾಗಿದೆ. ಕೋಲಾರಮ್ಮ ದೇವಿಯು ಮಹಿಷ ಮರ್ಧಿನಿಯ ರೂಪದಲ್ಲಿದ್ದು, ಇಲ್ಲಿ ಪ್ರತಷ್ಠಾಪಿತವಾಗಿರುವಸಪ್ತಮಾತೃಕೆಯರಲ್ಲಿ ಒಬ್ಬಳಾಗಿದ್ದಾಳೆ. ಈ ಗುಡಿಯ ಪಕ್ಕದಲ್ಲಿರುವಇನ್ನೊಂದು ಗುಡಿಯಲ್ಲಿ ಸಪ್ತಮಾತೃಕೆಯರ ಆಕರ್ಷಕ ಗಾರೆಯಬಿಡಿ ಬಿಂಬಗಳಿವೆ. ಅಲ್ಲದೆ ಸೋಮೇಶ್ವರ, ವೆಂಕಟರಮಣ ಮತ್ತುಕೋದಂಡರಾಮ ಎಂಬ ಇತರ ಪ್ರಧಾನ ದೇವಾಲಯಗಳೂಊರಲ್ಲಿವೆ. ಸೋಮೇಶ್ವರ ದೇವಾಲಯವು ಹೊಯ್ಸಳರ ಕಾಲದಲ್ಲಿನಿರ್ಮಾಣವಾಗಿದ್ದು, ರಾಜ್ಯ ಸರ್ಕಾರದಿಂದ ರಕ್ಷಿತವಾಗಿರುವಸ್ಮಾರಕವಾಗಿದೆ. ಕೋಲಾರದಲ್ಲಿರುವ ಮಕಬರಾದಲ್ಲಿ ಹೈದರಾಲಿಯಸಂಬಂಧಿಕರ ಗೋರಿಗಳಿವೆ. ಕೋಲಾರವು ಹಿಂದೆ ಸ್ಥಳೀಯ ಕಂಬಳಿತಯಾರಿಕೆಗಾಗಿ ಪ್ರಸಿದ್ಧವಾಗಿತ್ತು. ಕೋಲಾರದಿಂದ ಮೂರುಕಿ.ಮೀ. ದೂರದಲ್ಲಿರುವ ಕೋಲಾರ ಬೆಟ್ಟದ ಮೇಲಿನ ನಂದಿಯಬಾಯಿಂದ ಹೊರಡುವ ನಿರಂತರ ಜಲ ಅಂತರಗಂಗೆ ಎಂದುಪ್ರಸಿದ್ಧವಾಗಿದ್ದು ಪವಿತ್ರ ಸ್ಥಳವೆನಿಸಿದೆ. ಬೆಟ್ಟದ ಮೇಲೆ ತೇರುಹಳ್ಳಿ(ವಿಜಯನಗರ ಪೂರ್ವ ಕಾಲದ ಹಳೆಯ ದೇವಾಲಯ),ಪಾಪರಾಜನ ಹಳ್ಳಿ ಮತ್ತು ಇತರ ಏಳು ಹಳ್ಳಿಗಳಿವೆ. ಪಟ್ಟಣದಸಮೀಪದಲ್ಲಿರುವ ಈ ಬೆಟ್ಟವು ಪರ್ವತ ಚಾರಣಕ್ಕೆ ತಕ್ಕುದಾಗಿದೆ.

 

ಗದಗ-ಬೆಟಗೇರಿ

ಇದು ಹುಬ್ಬಳ್ಳಿ-ಗುಂತಕಲ್ ರೈಲ್ವೇಮಾರ್ಗದಲ್ಲಿರುವ ಅವಳಿನಗರ. ಮುನಿಸಿಪಾಲಿಟಿಯನ್ನುಹೊಂದಿದ್ದು, ಧಾರವಾಡದಿಂದ ೮೦ ಕಿ.ಮೀ. ದೂರದಲ್ಲಿದೆ.೧೯೯೭ರಿಂದ ಗದಗ ಜಿಲ್ಲಾ ಕೇಂದ್ರವಾಗಿದೆ. ಇದು ಕಲ್ಯಾಣಚಾಲುಕ್ಯರ ಶಿಲ್ಪಕಲೆಯ ಪ್ರಸಿದ್ಧ ಕೇಂದ್ರವಾಗಿದ್ದು, ತ್ರಿಕೂಟೇಶ್ವರದೇವಾಲಯವು ಅದಕ್ಕೆ ಉತ್ತಮಉದಾಹರಣೆಯಾಗಿದೆ.ಮೂಲತಃ  ರಾಷ್ಟ್ರಕೂಟ ದೇವಾಲಯವಾಗಿದ್ದ ಇದು, ಕಲ್ಯಾಣದಚಾಳುಕ್ಯರ ಕಾಲದಲ್ಲಿ ವಿಶಾಲ ಸಂಕೀರ್ಣವಾಗಿ ಅಭಿವೃದ್ದಿಹೊಂದಿತು. ಇಲ್ಲಿರುವ ತ್ರಿಕೂಟೇಶ್ವರ ದೇವಾಲಯದಲ್ಲಿ ಮೂರುಗರ್ಭಗೃಹಗಳಿದ್ದು, ಇವುಗಳಲ್ಲಿ ಶಿವ, ಬ್ರಹ್ಮ ಮತ್ತು ಸೂರ್ಯನನ್ನುಆರಾಧಿಸಲಾಗುತ್ತಿತ್ತು. ಇಲ್ಲಿಯೇ ಇರುವ ಸರಸ್ವತಿ ದೇವಾಲಯದಲ್ಲಿಸುಂದರವಾದ ಹೊಳೆಯುವ ಆಕರ್ಷಕ ಕಂಬಗಳಿವೆ. ಇಲ್ಲಿರುವಸರಸ್ವತಿ ವಿಗ್ರಹವು ಈಗ ಭಗ್ನವಾಗಿದ್ದರೂ ಚಾಲುಕ್ಯಕಲೆಯಅತ್ಯುತ್ತಮ ಉದಾಹರಣೆಯಾಗಿದೆ. ಇತ್ತೀಚೆಗೆ ಚಾಲುಕ್ಯಶೈಲಿಯಲ್ಲಿಯೇ ಹೊಸದಾಗಿ ಸರಸ್ವತಿ ವಿಗ್ರಹವನ್ನು ಕೆತ್ತಿಸಿಹಳೆಯ ವಿಗ್ರಹದ ಜಾಗದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೇ ಇಲ್ಲಿಚಾಲುಕ್ಯಶೈಲಿಯಲ್ಲಿಯ ಸೋಮೇಶ್ವರ ಹಾಗೂ ರಾಮಲಿಂಗೇಶ್ವರದೇವಾಲಯಗಳಿವೆ. ಇಲ್ಲಿರುವವೀರನಾರಾಯಣ ದೇವಾಲಯವುಚಾಲುಕ್ಯರ ಕಾಲದ್ದಾದರೂ, ವಿಜಯನಗರ ಅರಸರ ಕಾಲದಲ್ಲಿನಾರಾಯಣನ ವಿಗ್ರಹಸಹಿತ ಸಂಪೂರ್ಣವಾಗಿ ಪುನರುತ್ಥಾನಮಾಡಲಾಗಿತ್ತು. ಪ್ರಸಿದ್ಧ ಕನ್ನಡ ಕವಿ ಕುಮಾರವ್ಯಾಸನು ’ಕರ್ನಾಟಕಭಾರತ ಕಥಾಮಂಜರಿ’ ಕೃತಿಯನ್ನು ಈ ದೇವಾಲಯದಲ್ಲಿಕುಳಿತು ಬರೆದಿದ್ದನೆನ್ನಲಾಗಿದೆ. 

ಇಲ್ಲಿ ಆದಿಲ್‌ಶಾಹಿ ಕಾಲದಕಲಾತ್ಮಕವಾದ ಮಸೀದಿಯೂ ಇದೆ. ಅಲ್ಲದೆ ಬ್ಯಾಸೆಲ್‌ಮಿಶನ್  ಚರ್ಚ್ ಇದೆ. ಬೆಟಗೇರಿಯಲ್ಲಿ ಸುಂದರವಾಗಿ ಕೆತ್ತಲಾದಬಹಳಷ್ಟು ವೀರಗಲ್ಲುಗಳಿದ್ದು, ಕೆಲವು ೯-೧೦ನೇ ಶತಮಾನದಷ್ಟು ಹಳೆಯವಾಗಿದೆ. (’ಕಳ್ದುಗು’ ಗದಗಿನ ಹಳೆಯ ಹೆಸರಾಗಿತ್ತು ಹಾಗೂ’ಬಟ್ಟಕೆರೆ’ ಬೆಟಗೇರಿಯ ಹಿಂದಿನ ಹೆಸರಾಗಿತ್ತು.) ಗದಗ-ಬೆಟಗೇರಿನೇಯ್ಗೆಗೆ ಪ್ರಸಿದ್ಧ್ದವಾಗಿದೆ. ಇತ್ತೀಚೆಗೆ ಮುದ್ರಣದಲ್ಲಿಯೂ ಗದಗ ಮುಂದುವರೆದಿದೆ. ಇತಿಹಾಸ ಪ್ರಸಿದ್ದ ಲಕ್ಕುಂಡಿ, ಡಂಬಳ, ಇಟಗಿ,ಹಾಗೂ ಕುಕನೂರುಗಳಿಗೆ ಗದಗನಿಂದ ಹೋಗಬಹುದಾಗಿದೆ.

 

 

ಕಲಬುರಗಿ

ಇದು ಜಿಲ್ಲಾ ಹಾಗೂ ಪ್ರಾಂತೀಯಕೇಂದ್ರವಾಗಿದ್ದು, ಬೆಂಗಳೂರಿನಿಂದ ೬೨೩ ಕಿ.ಮೀ ದೂರದಲ್ಲಿದೆ.ಸ್ವಾತಂತ್ರ ಪೂರ್ವದಲ್ಲಿ ನಿಜಾಮರ ರಾಜ್ಯಕ್ಕೆ ಸೇರಿತ್ತು,೧೩೪೭ರಿಂದ ಬಹಮನಿಗಳ ಮೊದಲಿನ ರಾಜಧಾನಿಯಾಗಿತ್ತು.ಕನ್ನಡ ಶಾಸನಗಳಲ್ಲಿ ಇದನ್ನು ’ಕಲುಂಬರಿಗೆ’ ಅಥವಾ’ಕಲುಬರಿಗೆ’ಎಂದು ಕರೆಯಲಾಗಿದ್ದು, ನಂತರ ಮುಸ್ಲಿಮರು ಅದಕ್ಕೆ ಸಸ್ಯದಕಂಪು ಸೇರಿಸಿ ಕಲಬುರಗಿ (ಹೂವಿನ ತೋಟ) ಎಂದುಕರೆದರು. ಕನ್ನಡದಲ್ಲಿ ’ಕಲ್ಬುರ್ಗಿ’ ಎಂದರೆ ಕಲ್ಲುಗಳ ನಾಡುಅಥವಾ ಕಲ್ಲಿನ ಛಾವಣಿ ಎಂದರ್ಥ. ಇಲ್ಲಿರುವ ಕೋಟೆಯನ್ನುಮೂಲತಃ ವಾರಂಗಲ್ ಕಾಕತೀಯರ ಸಾಮಂತ ರಾಜಾಗುಲಚಂದ ಎಂಬಾತನು ಕಟ್ಟಿಸಿದ್ದನೆಂಬ ಅಭಿಪ್ರಾಯವಿದೆ. ಇದನ್ನುಅಲ್ಲಾವುದ್ದೀನ್ ಬಹಮನಿ ಪುನಃ ೧೫ ಭವ್ಯವಾದ ಗೋಪುರಗಳಿಂದಪುನರ್ ನಿರ್ಮಿಸಿದನು. ಕೋಟೆಯೊಳಗೆ ೧೩೬೭ರಲ್ಲಿ ಮುಹಮದ್ಬಹಮನಿ ೩೮೦೦೦ ಚದರ ಅಡಿ ಪ್ರದೇಶದಲ್ಲಿ ಕಟ್ಟಿಸಿದ ಬೃಹತ್ತಾದಹಾಗೂ ಸುಂದರವಾದ ಮಸೀದಿ ಇದೆ. ಇಲ್ಲಿಯ ಬಂದೇ ನವಾಜ್ಸಂಕೀರ್ಣದಲ್ಲಿ ೧೪೧೩ರಲ್ಲಿ ಕಲಬುರಗಿಗೆ ಬಂದ ಸೂಫಿ ಸಂತಬಂದೇನವಾಜ್‌ರ ಗೋರಿ ಇದೆ. ಈ ಗೋರಿಯ ಗೋಡೆಗಳಲ್ಲಿ ವರ್ಣಚಿತ್ರಗಳಿದ್ದು, ಸನಿಹದಲ್ಲಿಯೇ ಮುಘಲರು ಕಟ್ಟಿಸಿದ ಮಸೀದಿಇದೆ. ಚಾಂದಬೀಬಿ ಕಟ್ಟಿಸಿದ ಕಂದಾಲ್‌ಖಾನ ಮಸೀದಿ ಹಾಗೂಹೀರಾಪುರ್ ಮಸೀದಿ (೧೫೮೫) ಇತರ ಸ್ಮಾರಕಗಳಾಗಿದ್ದು,ಸುಲ್ತಾನ್ ಹಸನ್ ಹಾಗೂ ಫಿರೋಜ್ ಶಾಹರ ಗೋರಿಗಳು ಇಲ್ಲಿರುವಇತರ ಪ್ರಮುಖ ಕಟ್ಟಡಗಳು. ಎಲ್ಲಾ ಸೇರಿ ಕಲಬುರಗಿಯಲ್ಲಿಬಹಮನಿ ಸುಲ್ತಾನರ ಏಳು ಸಮಾಧಿ ಸ್ಮಾರಕಗಳಿವೆ. ಇಲ್ಲಿರುವಶರಣಬಸಪ್ಪ ಅಪ್ಪನ ಸಮಾಧಿ ಬಹಳ ಪವಿತ್ರ ಸ್ಥಳವಾಗಿದೆ.ಇದಲ್ಲದೇ ಇಲ್ಲಿ ಸಾಕಷ್ಟು ಆಧುನಿಕ ದೇವಾಲಯಗಳಿವೆ. ಇಲ್ಲಿರುವರಾಜ್ಯ ಪುರಾತತ್ವವಸ್ತುಸಂಗ್ರಹಾಲಯದಲ್ಲಿ ಸನ್ನತಿಯಿಂದ ತಂದಬೌದ್ಧಶಿಲ್ಪ ಫಲಕಗಳಿವೆ. ಈ ಪಟ್ಟಣ ಮಹಾನಗರ ಪಾಲಿಕೆಯನಿಮಂತ್ರಣಕ್ಕೆ ಒಳಪಟ್ಟಿದೆ ಈ ನಗರದ ಹೊರವಲಯದಲ್ಲಿರುವಕಲಬುರಗಿ ವಿಶ್ವವಿದ್ಯಾಲಯವು ಉತ್ತಮ ಗ್ರಂಥಾಲಯಹಾಗೂ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಇತ್ತೀಚೆಗೆಆಕರ್ಷಕವಾದ ಬೌದ್ಧವಿಹಾರವನ್ನು ನಿರ್ಮಿಸಲಾಗಿದೆ.

 

ಗುಬ್ಬಿ

ತುಮಕೂರು ಜಿಲ್ಲೆಯ ಒಂದು ತಾಲೂಕುಕೇಂದ್ರವಾದ ಗುಬ್ಬಿಯು ತುಮಕೂರಿನಿಂದ ೨೦ ಕಿ.ಮೀ.ದೂರದಲ್ಲಿದೆ ಇಲ್ಲಿಯ ಗುಬ್ಬಿಯಪ್ಪನ ಗುಡಿಯು ವೀರಶೈವಯತಿ ಗೋಸಲ ಚೆನ್ನಬಸವೇಶ್ವರರ ಗದ್ದುಗೆಯಾಗಿದಲ್ಲಿ ಮಾರ್ಚ್‌ ತಿಂಗಳಲ್ಲಿ ೧೫ ದಿನಗಳ ಜಾತ್ರೆ ಆಗುತ್ತದೆ. ಗದ್ದೆಮಲೇಶ್ವರ ಇಲ್ಲಿಯಪ್ರಾಚೀನ ದೇವಾಲಯವಾಗಿದ್ದು ಅಮರಗೊಂಡ ಮಲ್ಲಿಕಾರ್ಜುನಎಂಬ ವೀರಶೈವ ಯತಿ ಇಲ್ಲಿ ನೆಲೆಸಿದನೆಂದು ಹೇಳಲಾಗುತ್ತದೆ.ಇಲ್ಲಿ ಬೇಟೆಯ ಸ್ವಾಮಿ ಜನಾರ್ಧನ ಆಂಜನೇಯ ಮುಂತಾದದೇವಾಲಯಗಳಿವೆ.

 

ಗೋಕರ್ಣ

ಬೆಂಗಳೂರಿನಿಂದ ೪೫೩ ಕಿ.ಮೀ. ಕಲಬುರಗಿನಗರದ ಹೊರವಲಯದಲ್ಲಿ ಹಾಗೂ ಜಿಲ್ಲಾ ಕೇಂದ್ರಕಾರವಾರದಿಂದ೫೫ ಕಿ.ಮೀ. ದೂರದಲ್ಲಿರುವ ಇದನ್ನು ಕಾಶಿ ಮತ್ತು ದಕ್ಷಿಣದರಾಮೇಶ್ವರದ? ಪ್ರಮುಖವಾದ ಪವಿತ್ರ ಶೈವ ಕ್ಷೇತ್ರವೆಂದುಪರಿಗಣಿಸಲಾಗಿದೆ. ಇಲ್ಲಿರುವ ಮಹಾಬಲೇಶ್ವರ ದೇವಾಲಯವುಮೂಲತಃ ಸುಮಾರು ೧೧-೧೨ನೇ ಶತಮಾನದಲ್ಲಿಯೇಕಟ್ಟಲ್ಪಟ್ಟಿತ್ತು ಎಂಬುದಕ್ಕೆ ಪುರಾವೆಗಳಿವೆ. ಈ ದೇವಾಲಯವನ್ನುಪೋರ್ಚುಗೀಸರು ೧೮ನೇ ಶತಮಾನದಲ್ಲಿ ಹಾಳು ಮಾಡಿದ್ದರಿಂದಅದನ್ನು ನರುತ್ಥಾನಗೊಳಿಸಲಾಯಿತೆಂದು ಹೇಳಲಾಗಿದೆ.ಇಲ್ಲಿಯ ಪ್ರಸಿದ್ಧ ಗಣಪತಿ ದೇವಾಲಯದಲ್ಲಿರುವ ಗಣಪತಿಯವಿಗ್ರಹವು ೧೫೦೦ ವರ್ಷಗಳಷ್ಟು ಹಳೆಯದಾಗಿದೆ. ಇದುಸಮಭಂಗಿಯಲ್ಲಿ ನಿಂತಿರುವ ಕದಂಬರ ಕಾಲದ ದ್ವಿಬಾಹು ಗಣಪತಿವಿಗ್ರಹವಾಗಿದೆ. ಇಲ್ಲಿ ತಾಮ್ರಗೌರಿಯ ಇನ್ನೊಂದು ದೇವಾಲಯವಿದೆ.ಭದ್ರಕಾಳಿ ಹಾಗೂ ವೆಂಕಟರಮಣ ದೇವಾಲಯಗಳು ಮತ್ತುಜಟಾಯುತೀರ್ಥ ಹಾಗೂ ಕೋಟಿತೀರ್ಥಗಳು ಇಲ್ಲಿರುವಇತರ ಪವಿತ್ರ ಸ್ಥಳಗಳಾಗಿವೆ. ಗೋಕರ್ಣದಲ್ಲಿ ಬಹು ನಿಡಿದಾದ ಆಕರ್ಷಕ ಸಮುದ್ರತೀರವಿದ್ದು, ಪೂರ್ವಕ್ಕಿರುವ ಪಶ್ಚಿಮಘಟ್ಟಗಳುಬಹಳ ಸುಂದರವಾದ ನೈಸರ್ಗಿಕ ಪರಿಸರವೊದಗಿಸಿದ್ದು,ಒಂದು ಕಡೆ ಸಮುದ್ರ ಮತ್ತೊಂದು ಕಡೆ ಅಘನಾಶಿನಿ ಮತ್ತುಗಂಗಾವಳಿ ನದಿಗಳು ಕರ್ಣದ(ಕಿವಿ) ರೂಪವನ್ನು ಭೂಭಾಗದಲ್ಲಿನೈಸರ್ಗಿಕವಾಗಿ ಹೊಮ್ಮಿಸಿರುವ ಕಾರಣ ಗೋವಿನ ಕರ್ಣ (ಕಿವಿ)ದ ಆಕಾರದಲ್ಲಿರುವುದರಿಂದ ಈ ಸ್ಥಳಕ್ಕೆ, ’ಗೋಕರ್ಣ’ ಎಂದುಕರೆಯಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ ರಾವಣನುತಂದ ಆತ್ಮಲಿಂಗವು ಇಲ್ಲಿ ಸ್ಥಿರವಾದ ನಂತರ ರಾವಣನುಅದನ್ನು ಹೊರ ತೆಗೆಯಲು ಮಾಡಿದ ಪ್ರಯತ್ನದಲ್ಲಿ ಲಿಂಗದಮೇಲಿನ ಭಾಗಗಳನ್ನು ಕಿತ್ತು ಎಸೆದನೆಂದೂ ಅವೇ ಧಾರೇಶ್ವರ,ಗುಣವಂತೇಶ್ವರ, ಮುರುಡೇಶ್ವರ, ಸೆಜ್ಜೇಶ್ವರ (ಕಾರವಾರದ ಬಳಿ)ಲಿಂಗಗಳಾಗಿವೆಯೆಂದೂ ಹೇಳಲಾಗಿದ್ದು. ಈ ಎಲ್ಲಾ ಸ್ಥಳಗಳೂಉತ್ತರ ಕನ್ನಡ ಜಿಲ್ಲೆಯಲ್ಲಿವೆ.

 

 

ಚಾಮರಾಜನಗರ

ಇದು ಇತ್ತೀಚೆಗೆ(೧೯೯೭) ಮೈಸೂರುಜಿಲ್ಲೆಯಿಂದ ಬೇರ್ಪಡಿಸಲ್ಪಟ್ಟು ಮಾಡಿದ ನೂತನ ಜಿಲ್ಲೆಯ ಜಿಲ್ಲಾಕೇಂದ್ರವಾಗಿದ್ದು, ಮೈಸೂರಿನಿಂದ ೫೬ ಕಿ.ಮೀ. ದೂರದಲ್ಲಿದೆ.ಗಂಗರ ಕಾಲದಲ್ಲಿ ಪುನ್ನಾಟ ನಾಡಿಗೆ ಸೇರಿದ್ದಇದನ್ನು ’ಅರಿಕುಟಾರ’ಎಂದು ಕರೆಯುತ್ತಿದ್ದರು. ಇದು ಎಂಟನೇ ಚಾಮರಾಜ ಒಡೆಯರಜನ್ಮಸ್ಥಳವಾಗಿದ್ದು, ಅವರ ಸ್ಮರಣಾರ್ಥ ಇಲ್ಲಿ ಚಾಮರಾಜೇಶ್ವರದೇವಾಲಯವನ್ನು (೧೮೨೫)ಅವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರು ನಿರ್ಮಿಸಿದರು. ಇದಲ್ಲದೇ ಪ್ರಾಚೀನ ಪಾರ್ಶ್ವನಾಥಬಸದಿ, ಲಕ್ಷ್ಮೀಕಾಂತ ಹಾಗೂ ವೀರಭದ್ರ ದೇವಾಲಯಗಳು ಇಲ್ಲಿವೆ.ಸನಿಹದಲ್ಲಿರುವ ನರಸಮಂಗಲ ಪ್ರಾಚೀನ ಸ್ಥಳದವಾಗಿದ್ದು ಗಂಗರಕಾಲಕ್ಕೆ ಸೇರಿದ ಪ್ರಾಚ್ಯವಸ್ತುಗಳಲ್ಲದೆ ಗಂಗ ವಾಸ್ತುಶೈಲಿಯರಾಮೇಶ್ವರ ದೇವಾಲಯವಿದೆ. ಪ್ರವಾಸಿಗರು ಸಂರಕ್ಷಣೆಗೆಒಳಪಟ್ಟಿರುವ ಇಲ್ಲಿಗೆ ಅವಶ್ಯವಾಗಿ ಸಂದರ್ಶಿಸಬೇಕಾಗಿದೆ. ಈದೇವಾಲಯದಲ್ಲಿ ಬೃಹದಾಕಾರದ ಸಪ್ತಮಾತೃಕೆಯರ ಬಿಡಿಶಿಲ್ಪಾಕೃತಿಗಳಿವೆ.

 

ಚಿಕ್ಕಮಗಳೂರು

ಇದು ಕಾಫಿ ಬೆಳೆಯುವ ಮಲೆನಾಡುಪ್ರದೇಶದ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರಿನಿಂದ ೨೫೧ ಕಿ.ಮೀ ದೂರದಲ್ಲಿದೆ. ಶಾಸನಗಳಲ್ಲಿ ಇದನ್ನು ’ಕಿರಿಯಮುಗಳಿ’ ಎಂದುಕರೆಯಲಾಗಿದ್ದು, ಈ ಪಟ್ಟಣದ ಭಾಗವಾದ ಹಿರೇಮಗಳೂರನ್ನು’ಪಿರಿಯಮುಗಳಿ’ ಎಂದು ಕರೆಯಲಾಗಿದೆ. ಇದನ್ನು ಮಗಳುಎಂದು ತಪ್ಪಾಗಿ ತಿಳಿದಿದ್ದು ಶಾಸನೋಕ್ತ ’ಮುಗಳಿ’ ಒಂದುಜಾತಿಯ ಸಸ್ಯದ ಹೆಸರು. ಹಿರೇಮಗಳೂರಿನಲ್ಲಿ ಹೊಯ್ಸಳರಕಾಲದ ಕೋದಂಡರಾಮ ದೇವಾಲಯವಿದೆ. ಇಲ್ಲಿರುವ ಸಂಗೀನಮಸೀದಿ ಪ್ರಾಚೀನ ಕಟ್ಟಡವಾಗಿದೆ. ೧೯ನೇ ಶತಮಾನದಲ್ಲಿಕಟ್ಟಲಾದ ಝರಣಿ ಮಸೀದಿ ಜಿಲ್ಲೆಗೇ ದೊಡ್ಡ ಮಸೀದಿಯಾಗಿದೆ.ಸಂತ ಜೋಸೆಫ್ ಕ್ಯಾಥಡ್ರಲ್ ಹಾಗೂ ಸಂತ ಆಂಡ್ರೂ ಚರ್ಚು(೧೮೮೦) ಇತರ ಗಮನಾರ್ಹ ಕಟ್ಟಡಗಳಾಗಿವೆ. ಇಲ್ಲಿರುವಕಟ್ಟೀರಮ್ಮ ದೇವಾಲಯವು ಇನ್ನೊಂದು ಪ್ರಮುಖ ಆಧುನಿಕಗುಡಿಯಾಗಿದೆ. ಇಲ್ಲಿನ ಕನ್ನಿಕಾ ಪರಮೇಶ್ವರಿ ಹಾಗೂ ರುಕ್ಮಿಣಿ-ಪಾಂಡುರಂಗ ದೇವಾಲಯಗಳು ಆಧುನಿಕ ಕಟ್ಟಡಗಳಾಗಿವೆ.ಈ ಪಟ್ಟಣವು ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಅಥವಾಬಾಬಾಬುಡನ್ ಬೆಟ್ಟದ ಹಿನ್ನೆಲೆಯಲ್ಲಿದ್ದು ಇನಾಮ್ ದತ್ತಾತ್ರೇಯ ಪೀಠ ಇಲ್ಲಿಂದ ೩೫ ಕಿ.ಮೀ ದೂರದಲ್ಲಿದೆ.

 

ಚಿತ್ರದುರ್ಗ

ಪ್ರಸಿದ್ಧವಾದ ಈ ಕೋಟೆ ಪಟ್ಟಣವು ಜಿಲ್ಲಾಕೇಂದ್ರವಾಗಿದ್ದು, ಬೆಂಗಳೂರಿನಿಂದ ೨೦೨ ಕಿ.ಮೀ. ದೂರದಲ್ಲಿಪುಣೆ-ಬೆಂಗಳೂರು ರಸ್ತೆಯಲ್ಲಿದೆ. ಇಲ್ಲಿ ಮದಕರಿ ನಾಯಕರುಎಂಬ ವಿಜಯನಗರ ಅರಸರ ಸಾಮಂತರು ಆಳುತ್ತಿದ್ದರು. ಈನಾಯಕರು ತಮ್ಮ ವೀರಗಾಥೆಗೆ ಪ್ರಸಿದ್ದಿ ಪಡೆದಿದ್ದರು. ಇಲ್ಲಿಯಕೋಟೆಯನ್ನು ಕಟ್ಟಿಸಿದವರು ಇವರೇ. ಈ ಕೋಟೆಯನ್ನುಏಳು ಸುತ್ತಿನಲ್ಲಿ ಕಟ್ಟಿದ್ದು, ರಮಣೀಯವಾಗಿದೆ. ಎತ್ತರವಾದಕೋಟೆಯೊಳಗೆ ಸಂಪಿಗೆ ಸಿದ್ದೇಶ್ವರ, ಹಿಡಿಂಬೇಶ್ವರ (ಗುಹಾಲಯ),ಏಕನಾಥೇಶ್ವರಿ, ಫಲ್ಗುಣೇಶ್ವರಿ, ಗೋಪಾಲಕೃಷ್ಣ ಮುಂತಾದದೇವಾಲಯಗಳಿವೆ. ಚಿತ್ರದುರ್ಗ ನಾಯಕರ ವೀರಗಾಥೆಯನ್ನುತಿಳಿದವರು ಈ ಕೋಟೆಯ ಎತ್ತರವಾದ ಬರುಜು, ದ್ವಾರಗಳನ್ನುನೋಡಿ ಮಂತ್ರಮುಗ್ಧರಾಗುತ್ತಾರೆ. ಹಿಡಿಂಬೇಶ್ವರ ದೇವಾಲಯದಎದುರಿಗೆ ಇರುವ ’ಗಾಳಿಮಂಟಪ’ಎತ್ತರದ ವಿಶಿಷ್ಟವಾದ ಕಲ್ಲಿನಕಟ್ಟಡವಾಗಿದೆ. ರಂಗಯ್ಯನ ಬಾಗಿಲ ಬಳಿ ಪುರಾತ್ತತ್ವವಸ್ತುಸಂಗ್ರಹಾಲಯವಿದೆ. ಪಟ್ಟಣದ ಒಳಗೆ ಚೆನ್ನಕೇಶವ, ವೆಂಕಟರಮಣ,ಆಂಜನೇಯ ಇತ್ಯಾದಿ ದೇವಾಲಯಗಳಿವೆ. ಇಲ್ಲಿರುವಮುರುಘರಾಜೇಂದ್ರ ಬೃಹನ್ಮಠ ವೀರಶೈವರ ಪವಿತ್ರ ಸ್ಥಳವಾಗಿದೆ.

 

ಡಂಬಳ

ಇದು ಗದಗ ಜಿಲ್ಲೆಯ ಕಸಬಾ ದಿಂದ ೨೦ಕಿ.,ಮೀ ದೂರದಲ್ಲಿದೆ. ಪುರಾತನ ಶಾಸನಗಳಲ್ಲಿ ಇದನ್ನು’ಧರ್ಮಪೊಳಲು’ ಎಂದು ಕರೆಯಲಾಗಿದೆ. ಪ್ರಾಚೀನ ಕಾಲದಲ್ಲಿಇದು ಬೌದ್ಧ ಕೇಂದ್ರವಾಗಿತ್ತು. ಇಲ್ಲಿರುವ ದೊಡ್ಡಬಸಪ್ಪ ಹಾಗೂಸೋಮೇಶ್ವರ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದಸುಂದರ ಶಿಲ್ಪಕಲಾಕೃತಿಗಳಾಗಿವೆ. ದೊಡ್ಡಬಸಪ್ಪ ದೇವಾಲಯಕ್ಕೆಬಹು ಕೋನಾಕಾರದ ಗರ್ಭಗೃಹವಿದ್ದು, ಈ ರೀತಿಯ ಮುಂದಿನಹೊಯ್ಸಳ ಶೈಲಿಗೆ ಇದು ಮುನ್ನುಡಿ ಬರೆದಿದೆಯೆಂದು ವಿದ್ವಾಂಸರುಅಭಿಪ್ರಾಯ ಪಡುತ್ತಾರೆ. ಇಲ್ಲಿ ಅತ್ಯಂತ ಸುಂದರವಾದ ಶಿಲ್ಪಗಳಜೊತೆಗೆ ಬೃಹದಾಕಾರದ ನಂದಿಯ ವಿಗ್ರಹವಿದೆ. ಸೋಮೇಶ್ವರಹಳೆಯ ಬಸದಿಯಾಗಿದ್ದಿರಬಹುದು. ಇಲ್ಲಿ ಪಾಳು ಬಿದ್ದಿರುವ ಹಳೆಯಕೋಟೆಯಲ್ಲಿ ದೊಡ್ಡದಾದ ಗಣಪತಿ ವಿಗ್ರಹವಿರುವ ಸಣ್ಣಗುಡಿಇದೆ. ಇಲ್ಲಿ ೪೦೦ವರ್ಷ ಪುರಾತನವಾದ ವಿಶಾಲವಾದ ಕೆರೆಯಿದೆ.ಇದಲ್ಲದೇ ಇಲ್ಲಿ ತೋಂಟದ ಸಿದ್ಧಲಿಂಗಮಠವೂ ಇದೆ.

 

ತಲಕಾಡು

ಕಾವೇರಿ ನದಿಯ ದಂಡೆಯ ಮೇಲಿನಈ ಪವಿತ್ರ ಸ್ಥಳ, ಹಿಂದೊಂದು ತಾಲೂಕು ಕೇಂದ್ರವಾಗಿದ್ದುಪ್ರಸ್ತುತ ತಾಲೂಕು ಕೇಂದ್ರ ತಿ. ನರಸೀಪುರದಿಂದ ೨೯ ಕಿ.ಮೀ.ದೂರದಲ್ಲಿದೆ. ಇದು ಗಂಗರ ರಾಜಧಾನಿಯಾಗಿತ್ತು. ಗಂಗರುಇಲ್ಲಿ ಪಾತಾಳೇಶ್ವರ ಹಾಗೂ ಮರುಳೇಶ್ವರ ದೇವಾಲಯಗಳನ್ನುಕಟ್ಟಿಸಿದ್ದರು. ಚೋಳರಿಂದತಲಕಾಡನ್ನು ಗೆದ್ದ ಮೇಲೆ ಹೊಯ್ಸಳವಿಷ್ಣುವರ್ಧನನು ಇಲ್ಲಿ ಕೀರ್ತಿನಾರಾಯಣ ದೇವಾಲಯವನ್ನುಕಟ್ಟಿಸಿದನು. ವೈದ್ಯನಾಥೇಶ್ವರವು ಇಲ್ಲಿಯ ಇನ್ನೊಂದು ಶೈವದೇವಾಲಯ. ಇಲ್ಲಿಯ ಮೂರು ಶೈವ ದೇವಾಲಯಗಳು,ಸಮೀಪದಲ್ಲಿರುವ ವಿಜಯಪುರದ ಅರ್ಕೇಶ್ವರ ದೇವಾಲಯಹಾಗೂ ಮುಡುಕುತೊರೆ ಬೆಟ್ಟದ ಮಲ್ಲಿಕಾರ್ಜುನ ದೇವಾಲಯಗಳುಸೇರಿ ಒಟ್ಟಿಗೆ ಪಂಚಲಿಂಗೇಶ್ವರ ದೇವಾಲಯಗಳೆಂದುಪರಿಗಣಿಸಲ್ಪಡುತ್ತಿದ್ದು, ಪ್ರತೀ ೧೨ ‍ವರ್ಷಗಳಿಗೊಮ್ಮೆ ಜರಗುವಪಂಚಲಿಂಗದರ್ಶನ ಆಚರಣೆಯು ಬೃಹತ್ ಜಾತ್ರೆಯೇಆಗಿಬಿಟ್ಟಿದೆ. ಆ ಸಮಯದಲ್ಲಿ ಲಕ್ಷಾಂತರ ಜನರು ಇಲ್ಲಿಗೆಭೇಟಿ ನೀಡುತ್ತಾರೆ. ತಲಕಾಡು ಕ್ರಿ.ಶ. ೧೪ನೇ ಶತಮಾನದಲ್ಲಿವಿಜಯನಗರದ ದಂಡನಾಯಕ ಮಾಧವ ಮಂತ್ರಿಯು ಕಟ್ಟಿಸಿದಅಣೆಕಟ್ಟಿನಿಂದಾಗಿ ಬರಿದಾದ ನದಿಪಾತ್ರದಿಂದ ಗಾಳಿಗೆ ಸಾಗಿಬರುವಮರಳರಾಶಿಯಿಂದ ತುಂಬಿಕೊಂಡಿದೆ. ಬೇಸಿಗೆಯಲ್ಲಿ ನದಿಯಒಣಗಿದ ಪಾತ್ರದಿಂದ ಮರಳು ದೊರೆಯುತ್ತದೆ. ಇತ್ತೀಚಿನಉತ್ಖನನಗಳ ಪರಿಣಾಮವಾಗಿ ಕ್ರಿಸ್ತಶಕ ಆರಂಭಕಾಲದ ಮಣಿಗಳು,ಬಂಗಾರ ಕರಗಿಸುವ ಕುಲುಮೆ, ಮುಂತಾದವು, ಗಂಗರ ಕಾಲದಬಸದಿಯ ಅವಶೇಷಗಳು ಹಾಗೂ ಸುಟ್ಟಮಣ್ಣಿನ ಬಳೆಯಾಕಾರದಎರಡು ಬಾವಿಗಳಂತಹ ರಚನೆಗಳು ಬೆಳಕಿಗೆ ಬಂದಿವೆ. ನದಿಯಪ್ರವಾಹವನ್ನು ನಿಯಂತ್ರಿಸುವ ಪ್ರಾಚೀನ ರಕ್ಷಣಾ ಗೋಡೆಯನ್ನುಉತ್ಖನನ ಸಂದರ್ಭದಲ್ಲಿ ಪತ್ತೆಹಚ್ಚಲಾಗಿದೆ.

 

ತಲಕಾವೇರಿ

ಕೊಡಗು ಜಿಲ್ಲೆಯಲ್ಲಿ ತಾಲೂಕು ಕೇಂದ್ರಮಡಿಕೇರಿಯಿಂದ ೨೮ ಕಿ.ಮೀ. ದೂರದಲ್ಲಿ ಬ್ರಹ್ಮಗಿರಿ ಬೆಟ್ಟದಮೇಲಿರುವ ಕಾವೇರಿ ನದಿಯ ಉಗಮಸ್ಥಾನವಿದು. ಇಲ್ಲಿರುವಚಿಕ್ಕ ಹೊಂಡದಲ್ಲಿ ಕಾವೇರಿ ಹುಟ್ಟಿ ತುಸು ದೂರ ಭೂಗತವಾಗಿಹರಿಯುತ್ತಾಳೆಂದು ನಂಬುಗೆ. ಈಶ್ವರ ಮತ್ತು ಗಣಪತಿಗೆಮುಡುಪಾಗಿರುವ ಎರಡು ಗುಡಿಗಳು ಇಲ್ಲಿವೆ. ತುಲಾಸಂಕ್ರಮಣದಂದು ಕಾವೇರಿಯು ಇಲ್ಲಿಯ ಚೌಕ ಹೊಂಡದಿಂದಉಗಮಸಿ ಹರಿಯಲಾರಂಭಿಸುವಳೆಂದು ನಂಬುಗೆ ಇದ್ದು,ಅಂದು ಬೃಹತ್ ಜಾತ್ರೆ ನಡೆಯುತ್ತದೆ. ಬ್ರಹ್ಮಗಿರಿಗೆ ಇಲ್ಲಿಂದಮೆಟ್ಟಿಲುಗಳಿದ್ದು, ಬೆಟ್ಟದ ಮೇಲೆ ಯಜ್ಞಕುಂಡಗಳ ಅವಶೇಷಗಳಿವೆ.ಈ ಶಾಂತಿಧಾಮವು ಬೆಟ್ಟ-ಅರಣ್ಯಗಳ ಪರಿಸರದಲ್ಲಿದೆ.

 

ತಿಂಥಿಣಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿಕೃಷ್ಣ ನದಿಯ ದಂಡೆಯ ಮೇಲಿರುವ ಈ ಸ್ಥಳ ಧಾರ್ಮಿಕಸಮನ್ವಯಕ್ಕೆ ಪ್ರಸಿದ್ಧವಾಗಿದೆ. ಇಲ್ಲಿರುವ ಮೌನಪ್ಪಯ್ಯ ಸಂತನಸಮಾಧಿಯನ್ನು ಹಿಂದೂಗಳೂ ಮುಸ್ಲಿಮರೂ ಸಮಾನಗೌರವದಿಂದ ಪೂಜಿಸುತ್ತಾರೆ.

 

ತಿರುಮಕೂಡಲು ನರಸೀಪುರ

ಮೈಸೂರು ಜಿಲ್ಲೆಯಲ್ಲಿರು ಒಂದುತಾಲೂಕು ಕೇಂದ್ರವಾದ ಇದು, ೧೮೬೮ರಿಂದ ಆಗಿನ ತಲಕಾಡುತಾಲೂಕಿನ ಆಡಳಿತ ಕೇಂದ್ರವಾಗಿದ್ದು, ಮುಂದೆ ೧೮೮೨ರಲ್ಲಿತಾಲೂಕಿಗೂ ಇದೇ ಹೆಸರನ್ನು ನೀಡಲಾಯಿತು. ನರಸೀಪುರವು ಕಪಿಲ ಹಾಗೂ ಕಾವೇರಿ ನದಿಗಳ ಬಲದಂಡೆಯ ಮೇಲಿರುವಪಟ್ಟಣವಾಗಿದ್ದು, ಕಾವೇರಿ-ಕಪಿಲ ಸಂಗಮ ಸ್ಥಳದ ಇಕ್ಕೆಲದಲ್ಲಿಆಚೀಚೆ ದಡದಲ್ಲಿ ಅಗಸ್ತೇಶ್ವರ ಹಾಗೂ ಗುಂಜಾ ನರಸಿಂಹಸ್ವಾಮಿದೇವಾಲಯಗಳನ್ನು ಪ್ರಮುಖವಾಗಿ ಹೊಂದಿದೆ. ಅಲ್ಲದೆ ಈಪರಿಸರವು ನೂತನ ಶಿಲಾಯುಗ ಹಾಗೂ ಬೃಹತ್ ಶಿಲಾಯುಗಜನರ ಬದುಕನ್ನು ಬಿಂಬಿಸುವ ಕುರುಹುಗಳನ್ನು ಹೊಂದಿರುವುದುಉಲ್ಲೇಖಾರ್ಹ. ಪ್ರಾಚೀನ ಶಾಸನಗಳಲ್ಲಿ ತಿರುಮಕೂಡಲಿನಉಲ್ಲೇಖ ಆರಂಭದಿಂದಲೂ ಕಂಡುಬರುತ್ತಿದ್ದು, ಸುಮಾರು೧೩ನೆಯ ಶತಮಾನಕ್ಕೆ ಸೇರಿದ ಹೊಯ್ಸಳ ಬಲ್ಲಾಳನ ಹುಣಸೂರುಶಾಸನದಲ್ಲಿ ಪುಣಿಶೆಯೂರಾದ ನರ ಸಿಂಹದೇವಚತುರ್ವೇದಿಮಂಗಲ ಮಹಾಸಭೆಯಉಲ್ಲೇಖವಿದ್ದು, ಸಾಂದರ್ಭಿಕ ಆಧಾರದಮೇಲೆ ಇದನ್ನು ಹೊಯ್ಸಳ ಮುಮ್ಮಡಿ ನರಸಿಂಹನ ಕಾಲದಷ್ಟು ಹಿಂದಕ್ಕೆ ಗುರುತಿಸಬಹುದೆಂದು ತೋರುತ್ತದೆ. ತಿರುಮಕೂಡಲುನರಸೀಪುರದಿಂದ ೧೭ ಶಾಸನಗಳು ವರದಿಯಾಗಿದ್ದು,ನರಸೀಪುರದ ೧೬೨೨ರ ತಾಮ್ರಶಾಸನ ರಾಜ್ಯದಲ್ಲಿ ಈವರೆಗೆಲಭಿಸಿರುವ ಅತ್ಯಂತಸುದೀರ್ಘ ಶಾಸನವಾಗಿದೆ.

ಮೂಗೂರು ರಸ್ತೆಯಲ್ಲಿ ಹೊಳೆ ದಂಡೆಯ ಮೇಲೆಉತ್ತರಾಭಿಮುಖವಾಗಿರುವ ಗುಂಜಾ ನರಸಿಂಹಸ್ವಾಮಿಯಗುಡಿಯು ವಿಜಯನಗರ ಕಾಲದ ವಿಶಾಲ ರಚನೆಯಾಗಿದ್ದು,ಪ್ರಾಕಾರದ ಮಹಾದ್ವಾರಕ್ಕೆ ಎತ್ತರವಾದ ಗೋಪುರವಿದ್ದು,ಮೇಲೆ ಸುತ್ತಲೂ, ಇಟ್ಟಿಗೆ ಗಾರೆಗಳಿಂದ ಮಾಡಿದ ಕಿರುದೇವಕೋಷಗಳಿವೆ. ಮಹಾದ್ವಾರದ ಬಳಿಯಿರುವ ಭಕ್ತವಿಗ್ರಹವನ್ನುಮೂಗೂರು ಪಾಳೇಗಾರನ ಶಿಲ್ಪವೆಂದು ಹೇಳಲಾಗುತ್ತದೆ. ಒಳಗೆಪ್ರಧಾನ ಗರ್ಭಗೃಹದಲ್ಲಿ ಬಲಗೈಯಲ್ಲಿ ಗುಲಗಂಜಿಮರದರೆಂಬೆಯನ್ನಿಡಿದಿರುವ ನರಸಿಂಹನ ಶಿಲ್ಪವಿದೆ.ಅದರಿಂದಾಗಿಈ ಕ್ಷೇತ್ರವು ವಾರಣಾಸಿಗಿಂತ ಒಂದು ಗುಲಗಂಜಿಯಷ್ಟು ಹೆಚ್ಚು ಪವಿತ್ರವೆಂದುಸಾಂಪ್ರದಾಯಕವಾಗಿ ಹೇಳಲಾಗುತ್ತದೆ.ಗರ್ಭಗೃಹ-ಅಂತರಾಳಗಳ ಮುಂದೆ ವಿಶಾಲವಾದ ನವರಂಗಹಾಗೂ ವಿಜಯನಗರ ಶೈಲಿಯ ಎತ್ತರದ ಕಂಬಗಳನ್ನು ಹೊಂದಿದರಂಗಮಂಟಪವಿದೆ. ಅದರ ಕಂಬಗಳ ಮೇಲೆ ರಾಮಾಯಣ ಹಾಗೂಭಾಗವತಗಳಿಗೆ ಸಂಬಂಧಿಸಿದ ಕಥನ ಶಿಲ್ಪಗಳಿವೆ. ಈ ಕಂಬಗಳಮೇಲಿರುವ ಭಕ್ತ ವಿಗ್ರಹಗಳನ್ನು ಮೂಗೂರು ಪಾಳೇಗಾರರಶಿಲ್ಪಗಳೆಂದು ಹೇಳಲಾಗುತ್ತದೆ. ಈ ದೇವಾಲಯದ ಹಿಂಬದಿಯಲ್ಲಿಆಂಡಾಲಮ್ಮ, ಚೆಲುವನಾರಾಯಣ, ಸೀತಾರಾಮ, ಶ್ರೀನಿವಾಸ,ಬೆಣ್ಣೆಕೃಷ್ಣ, ವರದರಾಜಸ್ವಾಮಿ, ವೇದಾಂತ ದೇಶಿಕಾ ಹಾಗೂಮಹಾಲಕ್ಷ್ಮೀಯರ ಕಿರುಗುಡಿಗಳಿವೆ. ಅಲ್ಲೇ ವ್ಯಾಸ ಪ್ರತಿಷ್ಠಿತವೆಂದುಹೇಳಲಾಗುವ ಹನುಮ ಶಿಲ್ಪವೂ ಸೇರಿದಂತೆ ಹನುಮಂತನಎರಡು ಶಿಲ್ಪಗಳಿವೆ. ಇದರ ಎಡಭಾಗದ ಗುಡಿಯಲ್ಲಿ ಜನಾರ್ಧನನಸುಂದರ ಶಿಲ್ಪವಿದೆ. ಗುಂಜಾ ನರಸಿಂಹಸ್ವಾಮಿಯ ರಥೋತ್ಸವವುಜನವರಿ ತಿಂಗಳಲ್ಲಿ ವಿಜೃಂಭಣೆಯಿಂದ ಜರುಗುತ್ತದೆ.ಊರಾಚೆ ಹೆಮ್ಮಿಗೆ ರಸ್ತೆಯಲ್ಲಿ ಎಡಕ್ಕಾದಂತೆ ಕಾವೇರಿಯಬಲದಂಡೆಯ ಮೇಲಿರುವ ಮೂಲಸ್ಥಾನೇಶ್ವರ ಗುಡಿಯುವಿಜಯನಗರ ಕಾಲದ ರಚನೆಯಾಗಿದ್ದು, ಅನಂತರದಲ್ಲಿಲಕ್ಷ್ಮೀನಾರಾಯಣ,ದಕ್ಷಿಣಾಮೂರ್ತಿ, ಸಚ್ಚಿದಾನಂದೇಶ್ವರಿ,ಶಿವಕಾಮೇಶ್ವರಿ ಹಾಗೂ ಚಂಡಿಕೇಶ್ವರಿ ಗುಡಿಗಳನ್ನು ಸೇರಿಸುವಮೂಲಕ ಅದನ್ನು ವಿಸ್ತರಿಸಲಾಗಿದೆ. ಮೂಲಸ್ಥಾನಗುಡಿಯ ಹಿಂಬದಿಯಲ್ಲಿ ಮರವೊಂದರ ಬುಡಕ್ಕೆ ಒರಗಿಸಿರುವ ಪಾಶ್ವನಾಥತೀರ್ಥಂಕರ ಶಿಲ್ಪದ (ಇದು ಹಿಂದಿನ ತಾಲೂಕು ಕಚೇರಿ ಬಳಿಇತ್ತೆಂದು ವರದಿಯಾಗಿದೆ)ಲ್ಲಿರುವ ಶಾಸನದಲ್ಲಿ ಮೂಲಸಂಘದೇಶಿಗಣ, ಪುಷ್ಟಕಗಚ್ಚ ಕೊಂಡಕುಂದಾನ್ವಯದ ಉಲ್ಲೇಖವಷ್ಟೇ ಇದೆ. ಕಪಿಲ ಹೊಳೆ ದಂಡೆಯಲ್ಲಿರುವ ಬಲ್ಲೇಶ್ವರ ಎಂಬ ಇನ್ನೊಂದುದೇವಾಲಯವೂ ಜೀರ್ಣೋದ್ಧಾರಗೊಂಡಿದೆ. ಉಳಿದಂತೆ, ಇತರನವೀನ ಗುಡಿಗಳಷ್ಟೇ ಅಲ್ಲದೇ ಇಗರ್ಜಿ ಹಾಗೂ ಮಸೀದಿಗಳೂಇಲ್ಲಿವೆ.

 

 

ತಿರುಮಕೂಡಲು

ಕಾವೇರಿ-ಕಪಿಲ ಸಂಗಮ ಸ್ಥಳದಲ್ಲಿತಾಲೂಕು ಕೇಂದ್ರ ನರಸೀಪುರದಿಂದ ಆಚೆ ದಡದಲ್ಲಿರುವತೀರ್ಥಸ್ಥಳ. ಕಾವೇರಿ-ಕಪಿಲ ನದಿಗಳು ಕೂಡುವ (ತಿರುಮಹಾಕೂಡಲು) ಸಂಗಮ ಸ್ಥಳ ಇದಾಗಿದ್ದು, ಈ ಎರಡು ನದಿಗಳು ಅಲ್ಲಿರುವ ಸ್ಪಟಿಕ ಸರೋವರದೊಂದಿಗೆ ಸಂಗಮಿಸುವುದರಿಂದಇದಕ್ಕೆ ’ತಿರುಮಕೂಡಲು’ ಎಂಬ ಹೆಸರು ಬಂದಿದೆಎಂದೂ ಹೇಳಲಾಗುತ್ತದೆ. ಇದನ್ನು ಸ್ಥಳೀಯ ಶಾಸನಗಳೂಮಾರ್ದನಿಸುತ್ತವೆ. ನೆರೆಯ ತುಂಬಲದ ೧೧೮೦ರ ಎರಡುಶಾಸನಗಳಲ್ಲಿ ತಿರುಮಕೂಡಲಿನ ಮೊದಲ ಉಲ್ಲೇಖವಿ ಇದಾಗಿದ್ದು,ಪ್ರಾಚೀನ ಶಾಸನಗಳಲ್ಲಿ ದಕ್ಷಿಣ ಪ್ರಯಾಗ, ದಕ್ಷಿಣ ವಾರಣಾಸಿ,ಭೂಕೈಲಾಸವಾದ ಶ್ರೀರುದ್ರಪಾದ ಸಾನಿಧ್ಯವಾದ ಕಾವೇರಿ-ಕಪಿಲಸಂಗಮ ’ತಿರುಮಕೂಡಲು’ ಎಂದೇ ಉಲ್ಲೇಖಿತಗೊಂಡಿದ್ದು,ಹಿಂದೆ ಇದು ಅಗಸ್ತ್ಯಮುನಿಗಳ ಆಶ್ರಮವಾಗಿದ್ದು, ಅವರಆದೇಶದಂತೆ ಉತ್ತರದಿಂದ ಶಿವಲಿಂಗವನ್ನು ತರಲು ಹೋದಹನುಮಂತನು ಸಕಾಲಕ್ಕೆ ಬರುವಲ್ಲಿ ವಿಫಲನಾದಾಗ ತಾವೇಮರಳಿನಿಂದ ಸಿದ್ಧಪಡಿಸಿದ್ದ ಲಿಂಗವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿಪೂಜಿಸಿದರಂತೆ. ಆನಂತರ ಶಿವಲಿಂಗದೊಂದಿಗೆ ಉತ್ತರದಿಂದಬಂದ ಹನುಮಂತನು ಇದನ್ನು ಕಂಡು ಸಿಟ್ಟಿನಿಂದ ಈ ಲಿಂಗವನ್ನು ಕೀಳಲು ಯತ್ನಿಸಿದಾಗ ಆದ ಗುರುತನ್ನು ಹನುಮಲಿಂಗದ ಮೇಲೆಈಗಲೂ ನೋಡಬಹುದೆಂಬ ಐತಿಹ್ಯವಿದೆ. ಅಗಸ್ತ್ಯಲಿಂಗವಿರುವಈ ಕ್ಷೇತ್ರದಲ್ಲೇ ಹನುಮಂತನು ತಂದಿದ್ದ ಹನುಮಂತೇಶ್ವರಶಿವಲಿಂಗವನ್ನು ನಂತರದಲ್ಲಿ ಪ್ರತಿಷ್ಠಾಪಿಸಲಾಯಿತಂತೆ. ಇಲ್ಲಿಯಹನುಮಂತೇಶ್ವರನ ಗುಡಿಯು ಪೂರ್ವಾಭಿಮುಖವಾಗಿದ್ದು,ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ.ಗರ್ಭಗೃಹದಲ್ಲಿ, ಹನುಮ ಪ್ರತಿಷ್ಠಿತ ಹನುಮಂತೇಶ್ವರ ಲಿಂಗವಿದ್ದು,ಗುಡಿಯ ಛಾವಣಿಯು ಇಳಿಜಾರಾಗಿದೆ. ನೆರೆಯ ಮೂಗೂರು ಸಹಜೈನಬಸದಿ ಹಾಗೂ ತ್ರಿಪುರ ಸುಂದರಮಣಿ ದೇವಾಲಯಗಳಿಂದಾಗಿಪ್ರಸಿದ್ಧವಾಗಿದೆ. ಸ್ಥಳೀಯ ಪಾಳೇಗಾರರ ಆಡಳಿತದೊಳಪಟ್ಟಿದ್ದುಉಲ್ಲೇಖಾರ್ಹ ಸ್ಥಳವಾಗಿದೆ.ಇಲ್ಲಿರುವ ಅಗಸ್ತೇಶ್ವರ ದೇವಾಲಯವು ವಿಶಾಲಸಂಕೀರ್ಣವಾಗಿದ್ದು,ಪ್ರಧಾನದ್ವಾರವು ಉತ್ತರಕ್ಕಿದ್ದರೆ, ಅಗಸ್ತೇಶ್ವರಗುಡಿಯು ಪೂರ್ವಾಭಿಮುಖವಾಗಿದೆ. ಮೂಲತಃ ೧೦-೧೧ನೆಯಶತಮಾನದ್ದೆಂದು ಊಹಿಸಲಾಗಿರುವ ಈ ಗುಡಿಯು ನಂತರದಲ್ಲಿಹೊಯ್ಸಳ, ವಿಜಯನಗರ, ಮೈಸೂರರಸರು ಹಾಗೂ ಸ್ಥಳೀಯಪಾಳೇಗಾರರ ಆಡಳಿತಾವಧಿಯಲ್ಲಿ ಹಲವಾರು ಸೇರ್ಪಡೆಮಾರ್ಪಾಡುಗಳೊಂದಿಗೆ ವಿಸ್ತಾರಗೊಂಡು ಇಂದಿನ ರೂಪು ಪಡೆದಿದೆ.ಮೂಲಗರ್ಭಗೃಹದಲ್ಲಿ ಅಗಸ್ತೇಶ್ವರ ಲಿಂಗವಿದ್ದು, ನವರಂಗದ

ಕಂಬಗಳು ದುಂಡಾಗಿದ್ದು, ಬಾಗಿಲುವಾಡ ಸರಳವಾಗಿದೆ. ಕಚ್ಚು ಬಿದ್ದಿರುವ ಅಗಸ್ತೇಶ್ವರ ಲಿಂಗದಲ್ಲಿನ ಗುಳಿಯ ನೀರನ್ನು ಭಕ್ತರುಪ್ರಸಾದವೆಂದು ಈಗಲೂ ಪರಿಗಣಿಸಿ ಸ್ವೀಕರಿಸುತ್ತಾರೆ. ಅಗಸ್ತೇಶ್ವರದೇವಾಲಯದ ಹೊರಪ್ರಾಕಾರದ ಸಭಾಮಂಟಪದ ಕಂಬವೊಂದರಮೇಲೆ ಪಿಟೀಲನ್ನು ನುಡಿಸುತ್ತಿರುವ ಸುಂದರಿಯೋರ್ವಳಉಬ್ಬುಕೆತ್ತನೆ ಆಕರ್ಷಕವಾಗಿದೆ. ಅಗಸ್ತೇಶ್ವರನ ಸನ್ನಿಧಿಯಲ್ಲಿಮೂರು ವರ್ಷಕ್ಕೊಮ್ಮೆ ಮಾಘ ಶುದ್ಧಪೌರ್ಣಿಮೆಯಲ್ಲಿಕುಂಭಮೇಳ ಜರುಗುತ್ತದೆ. ಪ್ರವೇಶದ್ವಾರದ ಬಳಿಯಿರುವಆಕರ್ಷಕ ತೋರಣಕಲ್ಲನ್ನು ದೀಪಸ್ತಂಭಗಳು ಹೊತ್ತುನಿಂತಿದ್ದು,ಅಲ್ಲೇ ಬಲಿಪೀಠವಿದೆ. ಈ ಗುಡಿಯ ಅಗಸ್ತೇಶ್ವರ ದೇವಾಲಯದಆವರಣದಲ್ಲಿ ಮಾರ್ಕಂಡೇಶ್ವರ, ಸೋಮೇಶ್ವರ, ಗರ್ಗೇಶ್ವರಮುಂತಾದವಲ್ಲದೆ ೨೧ ಬಿಡಿ ಶಿವಲಿಂಗಗಳನ್ನುಳ್ಳ ಕಿರುಗುಡಿಗಳೂಪ್ರಾಕಾರದಂಚಿನಲ್ಲಿವೆ. ಈ ಗುಡಿಗೆ ಹೊಂದಿಕೊಂಡಂತೆ ಇರುವಅಶ್ವತ್ಥಕಟ್ಟೆಯು ಬ್ರಹ್ಮಪೂಜಿತವೆಂಬ ಹೇಳಿಕೆಇದ್ದು, ಅಲ್ಲಿಆರ್ಷಕವಾದ ನೂರಾರು ನಾಗಕಲ್ಲುಗಳಿವೆ. ಸನಿಹದಲ್ಲೇ ಇರುವಬ್ರಹ್ಮೇಶ್ವರ ಗುಡಿಯ ಬದಿಯಲ್ಲಿ ಸುಮಾರು ೧೮ನೇ ಶತಮಾನದಲ್ಲಿದ್ದಮಾಧ್ವಯತಿ ರಘುನಾಥತೀರ್ಥ ಶೇಷಚಂದ್ರಿಕಾಚಾರ್ಯರವೃಂದಾವನವೂ ಸೇರಿದಂತೆ ಹತ್ತು ವೃಂದಾವನಗಳಿವೆ.ಸೋಸಲೆಯ ವ್ಯಾಸರಾಜ ಮಠದ ಶಾಖಾಮಠವಿದಾಗಿದ್ದು, ಅನತಿದೂರದಲ್ಲೇ ಶೃಂಗೇರಿ ಶಾಖಾಮಠವೂ ಇದೆ.ಇಲ್ಲಿಯ ವೀರಭದ್ರ ಗುಡಿಯು ಹಿಂದೆ ಇಲ್ಲಿದ್ದಿರಬಹುದಾದಜೈನ ಬಸದಿಯನ್ನು ಸೂಚಿಸುವಂತಿದೆ. ಅಗಸ್ತೇಶ್ವರ ಗುಡಿಯಿಂದಪೂರ್ವಕ್ಕೆ ಆಚೆ ದಡದಲ್ಲಿರುವ ಆನಂದೇಶ್ವರ ದೇವಾಲಯವನ್ನುಚಿದಾನಂದ ಎಂಬ ಸನ್ಯಾಸಿಯು ೨೦೦ ವರ್ಷಗಳ ಹಿಂದೆನಿರ್ಮಿಸಿದ್ದು, ಬದಿಯಲ್ಲೇ ಭಿಕ್ಷೇಶ್ವರ ಎಂದು ಕರೆಯಲ್ಪಡುವಇನ್ನೊಂದು ದೇವಾಲಯವಿದೆ. ಶ್ರೇಷ್ಠ  ಪಿಟೀಲುವಾದಕರಾದಚೌಡಯ್ಯ ಮತ್ತವರ ತಾಯಿ ಭರತನಾಟ್ಯ ವಿಶಾರದೆ ಖ್ಯಾತಿಯರಾಜನರ್ತಕಿ ಸುಂದರಮ್ಮ ತಿರುಮಕೂಡಲಿನವರಾಗಿದ್ದು,ರಾಜಾಶ್ರಯದಲ್ಲಿದ್ದ ಕಲಾಕೋವಿದರಾಗಿದ್ದು, ಅವರ ವಂಶಸ್ಥರುಈಗಲೂ ಇಲ್ಲಿದ್ದಾರೆ. ತಿರುಮಕೂಡಲಿನ ೧೫೫೬ರ ಶಾಸನದಿಂದ,ತಿರುಮಕೂಡಲು ಕೂಡ ಆ ವೇಳೆಗೆ ಪಂಚಲಿಂಗ ಕ್ಷೇತ್ರವಾಗಿದ್ದಅಂಶ ವೇದ್ಯವಾಗುತ್ತದೆ. ತಿರುಮಕೂಡಲಿನ ಬಳಿ ಕಾವೇರಿ-ಕಪಿಲ ನದಿಗಳಿಗೆ ೧೯೩೨-೩೪ರಲ್ಲಿ ನಿರ್ಮಿಸಿರುವ ಸೇತುವೆಗಳುತಾಲೂಕಿನ ಪ್ರಾಚೀನ ಸೇತುವೆಗಳಾಗಿದ್ದು, ಶಿಥಿಲಗೊಳ್ಳುತ್ತಿರುವಹಿನ್ನೆಲೆಯಲ್ಲಿ ಪರ್ಯಾಯ ಸೇತುವೆಗಳನ್ನು ನಿರ್ಮಿಸಲಾಗಿದೆ.ಪಟ್ಟಣ ಪ್ರವೇಶಕ್ಕೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ೧೪೯೪ರ ಶಾಸನ ಪ್ರಸ್ಥಾಪಿಸಿರುವ ಗರ್ಗೇಶ್ವರ ಸನ್ನಿಧಿ ನೆರೆಯ ಗರ್ಗೇಶ್ವರಿಯೇ ಆಗಿದ್ದು, ಅಲ್ಲಿ ಗರ್ಗೇಶ್ವರ ಹಾಗೂಉಮಾಹರದೇವರ ಆಲಯಗಳಿವೆ. ಅಲ್ಲಿಯಗಣಪತಿಗೆ ಶ್ರೀಚಕ್ರಯಂತ್ರವನ್ನು ಬರೆದವರು ಆದಿಶಂಕರರೆಂಬ ಪ್ರತೀತಿ ಇದ್ದು,ಭಕ್ತರ ಕೋರಿಕೆ ಪೂರೈಸುವ ಗಣಪನೆಂದೇ ಪ್ರಸಿದ್ಧನಾಗಿದ್ದಾನೆ.

 

 

ತುಮಕೂರು

ಇದೊಂದು ಜಿಲ್ಲಾ ಕೇಂದ್ರವಾಗಿದ್ದು,ಬೆಂಗಳೂರಿನಿಂದ ಉತ್ತರಕ್ಕೆ ೬೦ ಕಿ.ಮೀ. ದೂರದಲ್ಲಿದೆ.ಸುಮಾರು ೧೦ನೇ ಶತಮಾನದ ಶಾಸನವೊಂದರಲ್ಲಿ ಇದನ್ನು’ತುಮ್ಮುಗೆರೆ’ ಅಥವಾ ’ತುಂಬೆಊರು’ ಎಂದು ಕರೆಯಲಾಗಿದೆ.ಬಹುಶಃ ಈ ಪರಿಸರದಲ್ಲಿ ಹೇರಳವಾಗಿ ಕಂಡುಬರುವ ತುಂಬೆಹೂವಿನ ಗಿಡಗಳಿಂದಾಗಿ ಇದಕ್ಕೆ ತುಂಬೆಕೂರು ಎಂಬ ಹೆಸರು ರೂಢಿಗೆ ಬಂದಿದ್ದು ಕಾಲಾನಂತರ ತುಮಕೂರು ಆಗಿದೆಎಂದು ಹೇಳಬಹುದಾಗಿದೆ. ಇಲ್ಲಿರುವ ಸುಮಾರು ೧೫೬೦ ರಲ್ಲಿನಿರ್ಮಾಣಗೊಂಡ ಲಕ್ಷ್ಮೀನಾರಾಯಣ ದೇವಾಲಯ ಪ್ರಾಚೀನದೇವಾಲಯವಾಗಿದೆ. ತುಮಕೂರು ೧೭ ನೇ ಶತಮಾನದಲ್ಲಿಮೈಸೂರು ರಾಜ್ಯದಲ್ಲಿ ಸೇರಿದಾಗ ಮಾರುತಿ ದೇವಾಲಯವುನಿರ್ಮಾಣವಾಯಿತು. ಈ ನಗರದ ಹೊರಗೆ ಕೆರೆಯ ಬಳಿಯಿರುವಕೋಡಿಬಸವಣ್ಣನ ಗುಡಿ ಮತ್ತು ಬಯಲು ಆಂಜನೇಯದೇವಾಲಯಗಳು ಬಹಳ ಪುರಾತನದ್ದಾಗಿವೆ. ಆಂಜನೇಯನಿಗೆಆರು ತೋಳುಗಳಿರುವುದು ಈ ವಿಗ್ರಹದ ವೈಶಿಷ್ಠ್ಯವಾಗಿದೆ.ಹನುಮಂತಪುರದ ಕೊಲ್ಲಾಪುರದಮ್ಮನ ದೇವಾಲಯವುಉಲ್ಲೇಖಾರ್ಹ. ತುಮಕೂರು-ಮಧುಗಿರಿ ರಸ್ತೆಯಲ್ಲಿರುವಯಲ್ಲಾಪುರದಿಂದ ಐದು ಕಿ.ಮೀ. ದೂರದ ಅಜ್ಜಪ್ಪನಹಳ್ಳಿಯಲ್ಲಿಸುಂದರವಾದ ನೈಸರ್ಗಿಕ ಬಂಡೆಗಳಿಂದ ಆವೃತವಾದ ಚಿನಗರಂಗನಾಥಸ್ವಾಮಿ ಬೆಟ್ಟ ಸಾಲುಗಳ ತಪ್ಪಲಲ್ಲಿ ವಿಜಯನಗರೋತ್ತರಶೈಲಿಯ ಸ್ವಯಂವ್ಯಕ್ತ ಅರೆ ಆಂಜನೇಯ ದೇವಾಲಯವು ಅತ್ಯಂತಆಕರ್ಷಕಪರಿಸರದಲ್ಲಿದೆ. ಈ ದೇವಾಲಯದ ಮೂಲ ವಿಗ್ರಹವುವ್ಯಾಸತೀರ್ಥ ಪ್ರತಿಷ್ಠಿತವೆಂದು ಸ್ಥಳೀಯವಾಗಿ ನಂಬಲಾಗುತ್ತದೆ.ಚೈತ್ರ ಶುದ್ಧ ದಶಮಿಯಂದು (ಶ್ರೀರಾಮನವಮಿಯ ಮೂರನೆಯದಿನ) ವಾರ್ಷಿಕವಾಗಿರಥೋತ್ಸವ ಹಾಗೂ ಮೂರು ದಿನಗಳಜಾತ್ರೆ ನಡೆಯುತ್ತದೆ. ಕ್ಯಾತಸಂದ್ರದ ಹತ್ತಿರ ಬೆಟ್ಟದ ಮೇಲೆಸಿದ್ದಗಂಗಾ ಕ್ಷೇತ್ರವಿದೆ. ಸಿದ್ಧಗಂಗಾದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವಕೊಡುಗೆ ನೀಡಿರುವ ವೀರಶೈವ ಮಠ ಹಾಗೂ ಪ್ರಾಚೀನ ಸಂಸ್ಕೃತಪಾಠಶಾಲೆಯಿದೆ. ಅದರಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಸತಿ ನಿಲಯವಿದೆ.ಅನ್ನದಾನಕ್ಕೆ ಶಿಕ್ಷಣ ದಾಸೋಹ ಈಕ್ಷೇತ್ರವು ಪ್ರಸಿದ್ಧವಾಗಿದೆ.

 

ದಾವಣಗೆರೆ

ದಾವಣಗೆರೆ ೧೯೯೭ರಿಂದೀಚೆಗೆ ಜಿಲ್ಲಾಕೇಂದ್ರವಾಗಿದ್ದು, ಪುಣೆ-ಬೆಂಗಳೂರು ರಸ್ತೆಯಲ್ಲಿ, ಬೆಂಗಳೂರಿನಿಂದ೨೬೭ ಕಿ.ಮೀ ದೂರದಲ್ಲಿರುವ ಆಧುನಿಕ ಕೈಗಾರಿಕಾ ಕೇಂದ್ರ.ಇದು ’ದಾವಣಿಕೆರೆ’ ಎಂಬ ಕೆರೆಯ ಸುತ್ತ ಬೆಳೆದಿದೆ. ’ದಾವಣಿ’ಪದಕ್ಕೆ ದನಗಳನ್ನು ಕಟ್ಟುವಹಗ್ಗ ಎಂಬ ಅರ್ಥವಿದೆ. ಹಿಂದೆ ಇದುಸೇವುಣರ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ, ಬೇತೂರಿನ ಭಾಗವಾಗಿತ್ತು.ಹೈದರಾಲಿಯು ಇದನ್ನು ತನ್ನ ಕೈಕೆಳಗೆ ಅಧಿಕಾರಿಯಾಗಿದ್ದಅಪ್ಪಾಜಿರಾಮ ಎಂಬವನಿಗೆ ಜಹಗೀರಾಗಿ ಉಡುಗೊರೆಯನ್ನಿತ್ತಿದ್ದ.ಇದರಿಂದಾಗಿ ದಾವಣಿಕೆರೆಯು ಪ್ರಮುಖ ವಾಣಿಜ್ಯ ಹಾಗೂಕೈಗಾರಿಕಾ ಕೇಂದ್ರವಾಗಿ ಬೆಳೆಯಿತು. ದಾವಣಗೆರೆಯು ಬಟ್ಟೆಕಾರ್ಖಾನೆಗಳ ಕೇಂದ್ರವಾಗಿ ಬೆಳೆದಿದೆ. ಇದಲ್ಲದೇ, ಮೆಡಿಕಲ್ ಹಾಗೂಎಂಜಿನಿಯರಿಂಗ್ ಕಾಲೇಜುಗಳಿಂದಾಗಿ ವಿದ್ಯಾಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ನೆರೆಯ ಆನೆಕೊಂಡ ಗ್ರಾಮದಲ್ಲಿರುವ ಈಶ್ವರದೆವಾಲಯವೂ ಪ್ರಸಿದ್ಧವಾಗಿದೆ. ಸಮೀಪದ ಎಲೆಬೇತೂರು ಹಿಂದೆಪ್ರಮುಖ ಜೈನ ಕೇಂದ್ರವಾಗಿದ್ದು, ಇಂದು ಅವಶೇಷಗಳಲ್ಲದೆ,ಪ್ರಾಚೀನ ಈಶ್ವರದೇವಾಲಯವೂ ಇದೆ.

 

ದೇವ(ರ)ಗಾಣಗಾಪುರ

ಇದು ಕಲಬುರಗಿ ಜಿಲ್ಲೆಯಅಫಜಲ್‌ಪುರ ತಾಲೂಕಿನಲ್ಲಿ ಬೆಂಗಳೂರಿನಿಂದ ೬೫೧ಕಿ.ಮೀ. ದೂರದಲ್ಲಿದ್ದು, ಗಾಣಗಾಪುರ ರೈಲ್ವೆ ನಿಲ್ದಾಣದಿಂದಲೂಹೋಗಬಹುದು. ಶ್ರೀನರಸಿಂಹ ಸರಸ್ವತಿಯವರು ಇಲ್ಲಿ ಬಹಳ ಕಾಲ ನೆಲೆಸಿದ್ದರು. ಈ ಸಂತರು ಸುಲ್ತಾನನ ಗುಣಪಡಿಸಲಾರದಯಾವುದೋ ವ್ಯಾಧಿಯನ್ನು ಗುಣಪಡಿಸಿದ್ದರಿಂದ ಬಹಮನಿಸುಲ್ತಾನನು ಇವರಿಗೆ ಜಹಗೀರನ್ನು ನೀಡಿದ್ದನು. ಇವರನ್ನುದತ್ತಾತ್ರೇಯನ ಅವತಾರವೆಂದು ಭಕ್ತರು ನಂಬಿದ್ದು, ಪ್ರತಿದಿನಅಪಾರ ಸಂಖ್ಯೆಯಲ್ಲಿ ಭಕ್ತರು ಮಹಾರಾಷ್ಟ್ರ ಹಾಗೂ ಕರ್ನಾಟಕದವಿವಿಧೆಡೆಗಳಿಂದ ಇಲ್ಲಿಗೆ ಬರುತ್ತಾರೆ.

 

ದೊಡ್ಡಗದ್ದವಳ್ಳಿ

ಇದು ಹಾಸನದಿಂದ ೧೪ ಕಿ.ಮೀ.ದೂರದಲ್ಲಿರುವ ಚಾರಿತ್ರಿಕ ಮಹತ್ವದ ಸ್ಥಳವಾಗಿದ್ದು, ಇಲ್ಲಿರುವಲಕ್ಷ್ಮೀ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ೧೧೧೪ರಲ್ಲಿ ಕಲ್ಹಣರಾಹುತ ಎಂಬ ವ್ಯಾಪಾರಿಯಿಂದ ಕಟ್ಟಿಸಲ್ಪಟ್ಟ ಈ ದೇವಾಲಯವುಹೊಯ್ಸಳ ಶೈಲಿಯಲ್ಲಿದ್ದು ಐದು ಗರ್ಭಗೃಹಗಳನ್ನು ಹೊಂದಿದ್ದು,ಆರಂಭಿಕ ಶೈಲಿಯ ದೇವಾಲಯಗಳಲ್ಲಿ ಪ್ರಮುಖದ್ದಾಗಿದೆ. ಇದನ್ನುದಕ್ಷಿಣದ ಕೊಲ್ಲಾಪುರ ಎಂದೂ ಕರೆಯಲಾಗುತ್ತದೆ. ಇಲ್ಲಿರುವಲಕ್ಷ್ಮೀಯು ಶಾಕ್ತ ಲಕ್ಷ್ಮಿಯನ್ನು ಪ್ರತಿನಿಧಿಸುತ್ತಾಳೆ. ಭೈರವ ಹಾಗೂ ಇತರ ದೇವಾನು ದೇವತೆಗಳನ್ನು ಇಲ್ಲಿ ಪೂಜಿಸಲಾಗುತ್ತದೆ.

 

ಧರ್ಮಸ್ಥಳ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿತಾಲೂಕಿನಲ್ಲಿರುವ ಇದೊಂದು ಪ್ರಸಿದ್ಧ ಶೈವ ಕೇಂದ್ರವಾಗಿದ್ದು,ಇಲ್ಲಿರುವಕುಡುಮ ಮಂಜುನಾಥನನ್ನು (ಶಿವ) ಶಿವಳ್ಳಿಯಮಾಧ್ವವೈಷ್ಣವ ಅರ್ಚಕರು ಪೂಜೆ ಮಾಡುತ್ತಾರೆ. ಈದೇವಾಲಯದಲ್ಲಿ ಕಾರಣಾಂತರಗಳಿಂದ ಸ್ವಲ್ಪ ಕಾಲ ಪೂಜೆಯುಸ್ಥಗಿತಗೊಂಡಿದ್ದಾಗ ಸೋದೆಯವಾದಿರಾಜತೀರ್ಥರು ಇಲ್ಲಿ ಪೂಜಾಕೈಂಕರ್ಯಗಳು ಅವಿರತವಾಗಿ ನಡೆಯುವಂತೆ ಮಾಡಿದರೆಂಬಸ್ಥಳೀಯ ನಂಬಿಕೆಯಿದೆ. ಈ ದೇವಾಲಯದ ಆಡಳಿತ ವರ್ಗಅಥವಾ ಧರ್ಮದರ್ಶಿಗಳು ಜೈನರಾಗಿದ್ದಾರೆ, ಹಾಗಾಗಿ ಇದೊಂದುಸರ್ವಧರ್ಮ ಸಮನ್ವಯ ಕ್ಷೇತ್ರವೆಂದು ಜನಪ್ರಿಯವಾಗಿದೆ. ಈದೇವಾಲಯದಲ್ಲಿ ಭೂತಗಳನ್ನು (ಸತ್ತವರನ್ನು ದೈವೀಕರಿಸಿ)ಶಿವನ ಗಣಗಳನ್ನಾಗಿ ಪೂಜಿಸುತ್ತಾರೆ. ಇದು ಮಂಗಳೂರಿನಿಂದ೭೫ ಕಿ.ಮೀ ದೂರದಲ್ಲಿದ್ದು, ಸುತ್ತಲೂ ಹಸಿರು ಗುಡ್ಡಗಳಿವೆ. ಈದೇವಾಲಯದಲ್ಲಿ ಮುಖ್ಯವಾಗಿ ಮಂಜುನಾಥನ ಲಿಂಗ ಹಾಗೂದೇವಿ ಇದ್ದಾರೆ. ಇದಲ್ಲದೇ ಇಲ್ಲಿ ಚಂದ್ರನಾಥ ಬಸದಿ ಹಾಗೂ ೧೧.೯ಮೀಟರ್ ಎತ್ತರದ, ೧೯೮೨ರಲ್ಲಿ ಪ್ರತಿಸ್ಥಾಪಿಸಿರುವ ಗೊಮ್ಮಟವಿಗ್ರಹವಿದೆ. ಇಲ್ಲಿರುವ ಮಂಜುಷಾ ವಸ್ತುಸಂಗ್ರಹಾಲಯವಿಶಿಷ್ಟವಾಗಿದ್ದು ಹಲವಾರು ಪ್ರಾಚೀನ ಹಾಗೂ ಸಮಕಾಲೀನಅವಶೇಷಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದೇ ರೀತಿ ಕಾರುವಸ್ತುಸಂಗ್ರಹಾಲಯದಲ್ಲಿ ದೇಶವಿದೇಶಗಳ ವಿಶಿಷ್ಟವಾದ ಹಳೆಯಕಾರುಗಳನ್ನುಪ್ರದರ್ಶಿಸಿರುವುದು ಉಲ್ಲೇಖಾರ್ಹ.ಇಲ್ಲಿಗೆ ಕರ್ನಾಟಕದ ಎಲ್ಲಾ ಭಾಗಗಳಿಂದಲೂ ಬಸ್ಸುಗಳಿದ್ದು,ತಂಗಲು ಧರ್ಮಛತ್ರಗಳಿವೆ. ಇಲ್ಲಿಗೆ ಬರುವ ಭಕ್ತರಿಗೆ ಜಾತಿ-ಮತಬೇಧಗಳಿಲ್ಲದೇ ಊಟವನ್ನು ಒದಗಿಸಲಾಗುತ್ತದೆ. ದೇವಸ್ಥಾನದಆಡಳಿತವರ್ಗ ಅನೇಕ ವಿದ್ಯಾಕೇಂದ್ರಗಳನ್ನು ನಡೆಸುತ್ತಿದ್ದುಧರ್ಮಸ್ಥಳವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕಕೇಂದ್ರವಾಗಿ ಜನಪ್ರಿಯವಾಗಿದೆ.

 

ಧಾರವಾಡ

ಇದು ಪುಣೆ-ಬೆಂಗಳೂರು ರಾಷ್ಟ್ರೀಯಹೆದ್ದಾರಿಯಲ್ಲಿರುವ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರಿನಿಂದ೪೩೭ ಕಿ.ಮೀ ದೂರದಲ್ಲಿದೆ. ಇದನ್ನು ಉತ್ತರಕರ್ನಾಟಕದಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವೆಂದು ಕರೆಯಲಾಗುತ್ತದೆ.ಕರ್ನಾಟಕ ಏಕೀಕರಣ ಹೋರಾಟದ ಪಿತಾಮಹರಾದ ಆಲೂರುವೆಂಕಟರಾವ್ ಅವರು ಇಲ್ಲಿಯವರಾಗಿದ್ದರು. ಅದಲ್ಲದೇ ಪ್ರಸಿದ್ಧವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹಾಗೂ ಹಿಂದೂಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರು ಇಲ್ಲಿಯವರು.ಈಗ ಹುಬ್ಬಳ್ಳಿ-ಧಾರವಾಡ ಕಾರ್ಪೋರೇಶನ್ ಭಾಗವಾಗಿರುವಧಾರವಾಡ, ೧೮೧೮ರಲ್ಲಿ ಮರಾಠರಿಂದ ಬ್ರಿಟೀಷರ ನಿಯಂತ್ರಣಕ್ಕೆಬಂದಮೇಲೆ ಜಿಲ್ಲಾ ಕೇಂದ್ರವಾಯಿತು. ಇಲ್ಲಿರುವ ೧೮೪೮ರಲ್ಲಿಸ್ಥಾಪಿತವಾದ ಇಂಗ್ಲೀಷ್‌ ಶಾಲೆ, ೧೮೬೮ ರಲ್ಲಿ ಸ್ಥಾಪಿಸಲಾದಬಾಸೆಲ್ ಮಿಶನ್ ಶಾಲೆ, ೧೮೬೭ರಲ್ಲಿ ಸ್ಥಾಪಿತವಾದ ತರಬೇತಿಕಾಲೇಜುಗಳಿಂದಾಗಿ ಇದು ವಿದ್ಯಾಕೇಂದ್ರವಾಗಿ ಬೆಳೆಯಿತು.ಈ ತರಬೇತಿ ಕಾಲೇಜು ಮುಂದೆ ಕನ್ನಡ ಚಳವಳಿಯಕೇಂದ್ರವಾಯಿತು. ಕರ್ನಾಟಕ ವಿದ್ಯಾವರ್ಧಕ ಸಂಘ (೧೮೯೦)ವುಕನ್ನಡ ಪುನರುತ್ಥಾನದ ಬೀಜವನ್ನು ಬಿತ್ತಿತು. ಕಲ್ಯಾಣ ಚಾಳುಕ್ಯರಕ್ರಿ.ಶ.೧೨ನೇ ಶತಮಾನದ ಶಾಸನದಲ್ಲಿ ’ಧಾರವಾಡ’ ಎಂದುಕರೆಯಲ್ಪಟ್ಟಿರುವ ಈ ಸ್ಥಳವು, ಸೇವುಣರು, ವಿಜಯನಗರ ಅರಸರು,ವಿಜಾಪುರ ಅರಸರು, ಮುಘಲರು, ಮರಾಠರು, ಹೈದರಾಲಿ, ಟಿಪ್ಪು,ಮುಂತಾದವರ ಆಡಳಿತಕ್ಕೆ ಒಳಪಟ್ಟಿತ್ತು. ವಿಜಯನಗರ ಅರಸರುಇಲ್ಲಿ ಕೋಟೆಯನ್ನು ಕಟ್ಟಿಸಿದ್ದರು. ಅದನ್ನು ವಿಜಯಪುರದ ಅರಸರು ಬಲಪಡಿಸಿದರು. ಆಗ ಕೋಟೆಯ ಕಲ್ಲಿನ ದ್ವಾರವಷ್ಟೇ ಉಳಿದಿದೆ.ಇಲ್ಲಿರುವ ದುರ್ಗಾದೇವಿ ದೇವಾಲಯವನ್ನು ಪುನರ್ ನಿರ್ಮಾಣಮಾಡಲಾಗಿದೆ. ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರದಲ್ಲಿಕಲ್ಯಾಣ ಚಾಲುಕ್ಯರ ಕಾಲದ ದೇವಾಲಯ ಹಾಗೂ ಕೆರೆಗಳಿವೆ.

ವಿದ್ಯಾಗಿರಿಯಲ್ಲಿರುವ ಮೈಲಾರಲಿಂಗ ದೇವಾಲಯವು ಕಲ್ಯಾಣದಚಾಳುಕ್ಯರ ಕಾಲಕ್ಕೆ ಸೇರಿದ್ದಾಗಿದ್ದು, ಇದನ್ನು ವಿಜಾಪುರದ ಸೈನ್ಯವುಮಸೀದಿಯನ್ನಾಗಿ ಪರಿವರ್ತಿಸಿದ್ದು.ನಂತರ ಪೇಶ್ವಾಗಳ ಕಾಲದಲ್ಲಿ ಪುನಃ ದೇವಾಲಯವಾಗಿಮಾಡಲಾಯಿತೆಂದು ಹೇಳಲಾಗುತ್ತದೆ. ಇವಲ್ಲದೇ ಇಲ್ಲಿವೆಂಕಟರಮಣ, ನಂದಿಕೋಲು ಬಸವಣ್ಣ, ದತ್ತಾತ್ರೇಯ,ಉಳವಿ ಬಸವಣ್ಣ, ಮುಂತಾದ ದೇವಾಲಯಗಳಿವೆ. ಮುರುಘಾಮಠವು ಧಾರ್ಮಿಕ ಕಾರ್ಯಗಳ ಕೇಂದ್ರವಾಗಿದೆ. ಇಲ್ಲಿರುವಸಂಸ್ಕೃತ ಕಾಲೇಜು ಇಲ್ಲಿಯ ಸುಮಾರು ೧೯ನೇ ಶತಮಾನಕ್ಕೆಸೇರಿದ ನಾಲ್ಕು ಅಂತಸ್ತಿನ ಕಟ್ಟಡವಾಗಿದೆ. ಇಲ್ಲಿರುವ ಕರ್ನಾಟಕವಿಶ್ವವಿದ್ಯಾಲಯ (೧೯೪೯), ಕೃಷಿ ವಿಶ್ವವಿದ್ಯಾಲಯ (೧೯೮೬)ಹಾಗೂ ಆಕಾಶವಾಣಿ ಕೇಂದ್ರಗಳು ಶೈಕ್ಷಣಿಕವಾಗಿ ಹಾಗೂಸಾಂಸ್ಕೃತಿಕವಾಗಿ ಧಾರವಾಡವು ಶೈಕ್ಷಣಿಕವಾಗಿ ಮಹತ್ವಪಡೆಯಲುಸಹಾಯ ಮಾಡಿದವು. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಏಕೀಕರಣಚಳವಳಿಯಲ್ಲೂ ಧಾರವಾಡವು ಪ್ರಮುಖ ಭೂಮಿಕೆಯನ್ನುಒದಗಿಸಿತ್ತು. ಧಾರವಾಡದಲ್ಲಿ ಬ್ಯಾಸೆಲ್ ಮಿಶನ್ ಹಾಗೂ ಕ್ಯಾಥೋಲಿಕರ ಚರ್ಚುಗಳಿವೆ. ಇಂದು ಶೈಕ್ಷಣಿಕಕೇಂದ್ರವಾಗಿ ಪ್ರಾಮುಖ್ಯತೆ ಪಡೆದಿರುವ ಇದು ಹುಬ್ಬಳ್ಳಿ-ಧಾರವಾಡಅವಳಿ ನಗರವೆಂದೇ ಚಿತಪರಿಚಿತವಾಗಿದೆ.

 

ನಂಜನಗೂಡು

ಮೈಸೂರು ಜಿಲ್ಲೆಯಲ್ಲಿರುವ ತಾಲೂಕುಕೇಂದ್ರ, ನಂಜನಗೂಡು ಮೈಸೂರಿನಿಂದ ೨೦ ಕಿ.ಮೀ ದೂರದಲ್ಲಿದೆ.ಕಪಿಲಾ ನದಿಯ ದಂಡೆಯಲ್ಲಿರುವ ಇದು ಸುಮಾರು ೧೦೦೦ವರ್ಷ ಹಳೆಯದಾದ ನಂಜುಂಡೇಶ್ವರದೇವಾಲಯದಿಂದಾಗಿಪ್ರಸಿದ್ಧವಾಗಿದೆ. ಇದು ಹೊರ ಪ್ರಾಕಾರದಿಂದ ಸುತ್ತುವರಿಯಲ್ಲಟ್ಟನಂಜುಂಡೇಶ್ವರ ಮತ್ತು ಪಾರ್ವತಿ ದೇವಾಲಯಗಳನ್ನುಹೊಂದಿದ್ದು, ಪ್ರಾಕಾರದ ಮೇಲ್ತುದಿಯ ಹಾರದಮೇಲೆ ದೇವಾನುದೇವತೆಗಳ ಬಹು ಸುಂದರವಾದ ಗಾರೆಯ ಶಿಲ್ಪಸಾಲುಗಳಿವೆ.ಹೈದರಾಲಿಯ ಆನೆಗೆ ಚರ್ಮರೋಗ ಬಂದಿದ್ದಾಗ ನಂಜುಂಡೇಶ್ವರನ ದೇವಾಲಯದ ತೀರ್ಥ ಪ್ರೋಕ್ಷಣೆಯಿಂದನಿವಾರಣೆಯಾಯಿತೆಂದು ನಂಬಲಾಗುತ್ತದೆ. ಈ ಕಾರಣ ಆತನುನಂಜುಂಡೇಶ್ವರನನ್ನು ’ಫಕೀರ್ (ಹಕಿಮ್) ನಂಜುಂಡ’ ಎಂದುಕರೆದು ಅತ್ಯಂತ ಅಮೂಲ್ಯವಾದ ಹಸಿರು ಪಚ್ಚೆಕಲ್ಲಿನ ಆಭರಣವನ್ನುದಾನವಾಗಿ ನೀಡಿದನೆಂದು ಪ್ರತೀತಿ ಇದೆ. ಇಲ್ಲಿರುವ ರಾಘವೇಂದ್ರಸ್ವಾಮಿ ಮಠವು ಪುರಾತನದ್ದಾಗಿದ್ದು ಅಲ್ಲಿ ಬೃಂದಾವನಕ್ಕೆ ಬದಲಾಗಿರಾಘವೇಂದ್ರ ಸ್ವಾಮಿಗಳ ಪ್ರತಿಮೆಗೆ ಪೂಜೆಸಲ್ಲಿಸಲಾಗುತ್ತದೆ.ಈ ಮೂಲ ಪ್ರತಿಮೆಯು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿಮುಮ್ಮಡಿಕೃಷ್ಣರಾಜರ ಕಾಲದಲ್ಲಿ ದೊರೆತ ಕಾರಣ ಇದನ್ನುಪ್ರತಿಕಾ ಸಂಸ್ಥಾನವೆಂದು ಕರೆದು ರಾಘವೇಂದ್ರ ಮಠದಲ್ಲಿಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯವಾಗಿ ಹೇಳಲಾಗುತ್ತದೆ. ಈಮಠಕ್ಕೆ ಸೇರಿದ ಪರಿಮಳ ಸಂಶೋಧನಾ ಕೇಂದ್ರವು (೧೯೫೬)ದ್ವೈತ ವೇದಾಂತಕ್ಕೆ ಸಂಬಂಧಿಸಿದ ಪಾಂಡಿತ್ಯ ಪೂರ್ಣ ಗ್ರಂಥಗಳಪ್ರಕಟಣೆ ಹಾಗೂ ಪ್ರಾಚೀನ ತಾಳೆಗರಿ ಗ್ರಂಥಗಳ ಸಂಗ್ರಹಣೆ ಹಾಗೂಪ್ರಕಟಣೆಯಲ್ಲಿ ತೊಡಗಿದೆ. ರಾಜಾ ಎಸ್. ಗುರುರಾಜಾಚಾರ್ಯರುಈ ಸಂಶೋಧನಾ ಮಂಡಳಿಯ ಪ್ರಮುಖ ಪ್ರವರ್ತಕರು. ಸುತ್ತೂರುಮಠ ಹಾಗೂ ಮಂಟೆಸ್ವಾಮಿ ಸಂಪ್ರದಾಯದ ಸಿದ್ದಪ್ಪಾಜಿಯಗುಡಿಗಳು ಈ ಊರಿನಲ್ಲಿವೆ.

 

 

ನಾಗಮಂಗಲ

ತಾಲೂಕು ಕೇಂದ್ರವಾದ ಇದುಮಂಡ್ಯದಿಂದ ೩೦ಕಿ.ಮೀ. ಪಶ್ಚಿಮಕ್ಕಿದೆ. ಪ್ರಾಚೀನ ಶಾಸನಗಳಲ್ಲೂ‘ನಾಗಮಂಗಲ”(ನಾಗವಂಗಲ ಕ್ರಿ.ಶ.೧೧೩೪)) ಎಂದೇಉಲ್ಲೇಖಿತಗೊಂಡಿದ್ದು, ತಲಕಾಡಿನ ಗಂಗರ ಕಾಲದಷ್ಟೇ ಪ್ರಾಚೀನನೆಲೆಯಾಗಿದೆ. ಅನಾದಿ ಅಗ್ರಹಾರ ವೀರಬಲ್ಲಾಳ ಚತುರ್ವೇದಿಭಟ್ಟರತ್ನಾಕರ ಎಂಬ ಆಭಿದಾನವನ್ನೂ ಹೊಂದಿದ್ದ ಇದಕ್ಕೆ ಫಣಿಪುರ,ಮಣಿಪುರ, ನಾಗಪುರ, ನಾಗಮಂಡಲ ಎಂಬ ಹೆಸರುಗಳೂಇದ್ದು, ಬಭ್ರುವಾಹನನ ಮಣಿಪುರ ಇದೆಂಬ ಐತಿಹ್ಯವೂ ಇದೆ.ಹಿಂದೆ ಎರಡು ಸುತ್ತಿನ ಕೋಟೆ ಹಾಗೂ ಅರಮನೆ ಇದ್ದುದ್ದಕ್ಕೆಕುರುಹುಗಳು ಅಲ್ಲಲ್ಲಿ ಈಗಲೂ ಉಳಿದಿವೆ. ಇಲ್ಲಿಯ ಭುವನೇಶ್ವರದೇವಾಲಯವು ಅತ್ಯಂತ ಪ್ರಾಚೀನದ್ದಾಗಿದ್ದು, ಗರ್ಭಗೃಹ,ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದು, ಮರುಜೀರ್ಣೋದ್ಧಾರಗೊಂಡಿದೆ. ಇಲ್ಲಿಯ ಸೌಮ್ಯಕೇಶವ (ಶಾಸನೋಕ್ತಚನ್ನಕೇಶವ) ಗುಡಿಯು ಹೊಯ್ಸಳರ ಕಾಲದ್ದಾಗಿದ್ದು ಮೂಲತಃ  ಪ್ರಧಾನ ಗರ್ಭಗೃಹ, ಅಂತರಾಳ ಮತ್ತು ನವರಂಗದ ಉತ್ತರದಕ್ಷಿಣಗಳಲ್ಲಿ ಒಂದೊಂದಂಕಣದ ಗರ್ಭಗೃಹ ಹಾಗೂ ನವರಂಗದಮುಂಭಾಗದಲ್ಲಿ ಅರ್ಧಮಂಟಪವನ್ನು ಹೊಂದಿದ್ದು, ನಂತರದಲ್ಲಿನವರಂಗಕ್ಕೆ ಮೂರು ಅಂಕಣದ ಮುಖಮಂಟಪವನ್ನೂಸೇರಿಸಲಾಗಿದ್ದು, ಜಗತಿ ಇದೆ. ವಿಜಯನಗರ ಕಾಲದಲ್ಲಿಪಾತಾಳಾಂಕಣ, ಪ್ರಾಕಾರಕ್ಕೆ ಹೊಂದಿಕೊಂಡಂತಿರುವ ಸುತ್ತಾಲಯ ಮಂಟಪ, ಮಹಾದ್ವಾರಗೋಪುರ, ಬಲಕ್ಕಿರುವ ಎರಡಂಕಣದಕೈಸಾಲೆ ಮಂಟಪ ಮತ್ತುಎದುರಿಗಿರುವ ೫೫ ಅಡಿ ಎತ್ತರದಗರುಡಗಂಬಗಳನ್ನು ಸೇರಿಸುವ ಮೂಲಕ ದೇವಾಲಯವನ್ನುಗಣನೀಯ ಪ್ರಮಾಣದಲ್ಲಿ ವಿಸ್ತರಿಸಲಾಗಿದೆ. ಶಿಲ್ಪದಮುಖದಲ್ಲಿಯ ಶಾಂತಿ, ಕಾಂತಿ ಮಂದಹಾಸಗಳಿಂದಾಗಿ ಅದನ್ನುಸೌಮ್ಯಕೇಶವನೆಂದೂ ಕರೆಯುತ್ತಾರೆ. ನವರಂಗದ ದಕ್ಷಿಣ ಹಾಗೂಉತ್ತರ ಗರ್ಭಗೃಹಗಳಲ್ಲಿರುವ ಆಳೆತ್ತರದ ವೇಣುಗೋಪಾಲಹಾಗೂ ಲಕ್ಷ್ಮೀನರಸಿಂಹನ ಸುಂದರ ಶಿಲ್ಪಗಳು ವಿಜಯನಗರಕಾಲದ ಲಕ್ಷಣವನ್ನು ಹೊಂದಿದ್ದು, ಬಾಗಿಲಲ್ಲಿ ದ್ವಾರಪಾಲಕರಿದ್ದಾರೆ.ಈ ದೇವಾಲಯದ ಪಶ್ಚಿಮಕ್ಕೆ ೧೦೦ ಗಜ ಅಂತರದಲ್ಲಿರುವಯೋಗಾನರಸಿಂಹನ ದೇವಾಲಯವು ಸುಮಾರು ೧೩ನೆಯಶತಮಾನದ ಮಧ್ಯಭಾಗದ ರಚನೆಯಾಗಿದ್ದು, ಗರ್ಭಗೃಹ,ಪ್ರದಕ್ಷಿಣಾಪಥ, ಅಂತರಾಳ, ನವರಂಗ, ಮುಖಮಂಟಪ,ಪಾತಾಳಾಂಕಣ, ಒಳ ಕೈಸಾಲೆಮಂಟಪವಿರುವ ಪ್ರಾಕಾರಹಾಗೂ ಮಹಾದ್ವಾರಗಳನ್ನು ಹೊಂದಿದೆ. ಗರ್ಭಗೃಹದಲ್ಲಿಯೋಗಾನರಸಿಂಹ, ನವರಂಗದಲ್ಲಿ ಆದಿಶೇಷ ಮತ್ತು ವಿಶ್ವಕಸೇನಶಿಲ್ಪಗಳಿವೆ. ಆದಿಶೇಷನ ಶಿಲ್ಪದ ಬಳಿಯಿರುವ ಪೊಟರೆಯುಅನಂತತೀರ್ಥ ನಾಗರಾಜನ ವಾಸಸ್ಥಾನವಾಗಿದ್ದು, ಹಿಂದೆ ಅಲ್ಲಿದ್ದಹಂಗರ ಮರದ ೪೦ ಅಡಿ ಉದ್ದದ ಖಾಂಡವಿಂದು ಪ್ರಾಕಾರದಲ್ಲಿದ್ದು,ನರಸಿಂಹನ ಪ್ರಾಚೀನ ಶಿಲ್ಪವಿದ್ದ ಸ್ಥಳ ಇದೆಂಬ ಅಭಿಪ್ರಾಯವಿದೆ.ದ್ರಾವಿಡ ಶೈಲಿಯ ವೀರಭದ್ರನ ಗುಡಿಯು ವಿಜಯನಗರಕಾಲದ್ದಾಗಿದ್ದು, ಗರ್ಭಗೃಹದಲ್ಲಿ ವೀರಭದ್ರನ ಕಿರುಮೂರ್ತಿ ಮತ್ತುದಕ್ಷಿಣಾಮೂರ್ತಿಯ ಲೋಹದ ಶಿಲ್ಪಗಳಿವೆ. ಎಡಭಾಗದ ಪ್ರತ್ಯೇಕಗರ್ಭಗೃಹದಲ್ಲಿ ಭದ್ರಕಾಳಿಯ ಶಿಲ್ಪವಿದೆ. ಕಳೆದ ಶತಮಾನದಆರಂಭದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀರಾಮಮಂದಿರದಲ್ಲಿರಾಮ, ಲಕ್ಷ್ಮಣ, ಸೀತೆಯರ ಸುಂದರ ಶಿಲ್ಪಗಳಿವೆ. ಗ್ರಾಮದೇವತೆಬಡಗೋಡಮ್ಮನ ಗುಡಿಯು ಹಿರಿಕೆರೆಯ ಉತ್ತರ ಕೋಡಿಯಬಳಿಯಿದ್ದು, ಅದರಿಂದಾಗಿ ಆ ಹೆಸರು ಬಂದಿದೆ. ಈ ದೇವಿಯಉತ್ಸವ ಮೂರ್ತಿಯು ಅರಸಮ್ಮನ ಗುಡಿಯಲ್ಲಿದ್ದು, ಅಲ್ಲೇಇರುವ ಸುಮಾರು ೧೬ನೆಯ ಶತಮಾನದ ಶಾಸನವು,ಅಂಕುಶರಾಯನು ವೀರಾಂಬುದಿಯೂರಾದ ನಾಗಮಂಗಲದಲ್ಲಿಸಿಂಗಾರಿಕೆರೆಯನ್ನು ನಿರ್ಮಿಸಿದ್ದನ್ನು ದಾಖಲಿಸುತ್ತದೆ. ಪಟ್ಟಣದಒಳಕೋಟೆಯ ದಿಡ್ಡಿಬಾಗಿಲ ಬಳಿಯಿರುವ, ಅಕ್ಕಸಾಲಿಗರಿಂದಆರಾಧಿಸಲ್ಪಡುವ ಕಾಳಮ್ಮ-ಕಮ್ಮಟೇಶ್ವರ ಗುಡಿಯು ದ್ರಾವಿಡಶೈಲಿಯಲ್ಲಿದ್ದು, ಬೃಹತ್ ಗೋಪುರವನ್ನು ಹೊಂದಿದೆ.

ನಾಗಮಂಗಲದ ಛಲವಾದಿಗಳ ಬಳಿ ಇರುವ ‘ದೇಶಿಸ್’ ಸೌಟಿನ(ಛಲವಾದಿ ಗಂಟೆ ಬಟ್ಟಲು) ಮೇಲೆ ಹದಿನೆಂಟು ಜಾತಿಯವರವೃತ್ತಿ ಚಿಹ್ನೆಗಳಿದ್ದು, ಆ ಬಟ್ಟಲನ್ನು ಉಪಯೋಗಿಸಿ ಧಾನ್ಯದರಾಶಿಯಿಂದ ಪಡಿ ತೆಗೆಯುವ ಹಕ್ಕು (ಛಲವಾದಿ ಸಂಪ್ರದಾಯ)ಹಿಂದೆ ಇತ್ತೆಂದು ತಿಳಿದು ಬರುತ್ತದೆ. ಊರಾಚೆ ಸುಮಾರು ೬೦ ಅಡಿವ್ಯಾಸ, ಮೂರ್ನಾಲ್ಕಡಿ ಆಳದ ಚಕ್ರಕೊಳದ ನಡುವಿರುವ ಕಲ್ಲಿನಮಂಟಪವನ್ನು ಚನ್ನಪಟ್ಟಣದ ಪಾಳೇಗಾರ ಜಗದೇವರಾಯನಸೋದರ ಅಂಕುಶರಾಯನು ಜಲಕ್ರೀಡೆಗಾಗಿ ಕಟ್ಟಿಸಿದ್ದು, ಅವನಪ್ರೇಯಸಿಯಾದ ತರಂಗಿಣಿಯನ್ನು ಜಲಕ್ರೀಡೆ ಸಮಯದಲ್ಲಿ ಇಲ್ಲಿಕೊಲ್ಲಲಾಯಿತೆಂಬ ಸ್ಥಳೀಯ ಅಭಿಪ್ರಾಯವಿದೆ. ಅಂಕುಶರಾಯನುಕಟ್ಟಿಸಿದ ಸೂಳೆಕೆರೆ, ಸೂಳೆಮಂಟಪ ಮತ್ತು ಕೆರೆಗೆ ಹಾರವಾದ ಅವನ ಸೂಳೆಯ ತ್ಯಾಗ ಜನಪದ ಕಥೆಯಾಗಿದೆ. ಉಳಿದಂತೆಊರಲ್ಲಿ ನಗರೇಶ್ವರ, ಕನ್ನಿಕಾ ಪರಮೇಶ್ವರಿ, ಆಂಜನೇಯಮುಂತಾದ ನವೀನ ಗುಡಿಗಳಿದ್ದು,ಮಸೀದಿ ಹಾಗೂ ದರ್ಗಾಕೂಡ ಇವೆ. ಹಿಂದಿನಿಂದಲೂ ನಾಗಮಂಗಲ ಪಂಚಲೋಹದಕಲಾಕುಸುರಿ ಕೆಲಸಕ್ಕೆ ಹೆಸರಾಗಿದೆ.

 

ನರಸಮಂಗಲ

ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ೨೪ಕಿ.ಮೀ ದೂರದಲ್ಲಿ ಸ್ವಲ್ಪ ಒಳಗಾದಂತಿರುವ ನರಸಮಂಗಲವುಕಸಬಾ ತಾಲೂಕಿನಲ್ಲಿದ್ದು, ಅಮಚವಾಡಿ ಮಾರ್ಗವಾಗಿ ಇದನ್ನುತಲುಪಬಹುದು. ವೇದಾಧ್ಯಯನ ಮಾಡುತ್ತಿದ್ದ ಅಗ್ರಹಾರದಪಂಡಿತರು ನೆಲೆಸಿದ್ದ ಕಾರಣ ನರಸಿಂಹಮಂಗಲವು ಎಂಬಅಗ್ರಹಾರವಾಗಿತ್ತೆಂದು ಶಾಸನಗಳಿಂದ ವ್ಯಕ್ತವಾಗುತ್ತದೆ. ಇದನ್ನುಪ್ರಾಯಶಃ ಗಂಗ ನರಸಿಂಹನು (ಕ್ರಿ.ಶ.೯೨೧-೩೩) ಸ್ಥಾಪಿಸಿದನೆಂದುತೋರುತ್ತದೆ. ಇಲ್ಲಿ ಗಂಗರ ಕಾಲದ ಅತ್ಯಂತ ಅಕರ್ಷಕವಾದ ವಾಸ್ತುರಚನೆಯುಳ್ಳ ರಾಮೇಶ್ವರ ದೇವಾಲಯವಿದೆ. ಇದು ಸುಮಾರು೯-೧೦ನೇ ಶತಮಾನದ್ದು. ಈ ಚಿಕ್ಕದೇವಾಲಯವು ಆಕರ್ಷಕಹಾಗೂ ಭದ್ರವಾದ ಶಿಖರವನ್ನು ಹೊಂದಿದ್ದು, ೧೦೦೦ ವರ್ಷಗಳಿಗೂಮಿಕ್ಕಿ ಮೂಲರೂಪದಲ್ಲಿ ಉಳಿದು ಬಂದಿರುವ ಗಾರೆಯ ಶಿಲ್ಪಗಳಿವೆ.ನಂದಿಯ ತಲೆಯಮೇಲೆ ನಿಂತಿರುವ ಶಿವ ತಾಂಡವೇಶ್ವರ, ಉಮಾ,ದಕ್ಷಿಣಾಮೂರ್ತಿ, ವಿಷ್ಣು, ಗರುಡ,ಉಗ್ರನರಸಿಂಹ ಮುಂತಾದಪ್ರಮಾಣಬದ್ಧ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಒಂದು ಮೀಟರ್ಎತ್ತರದ ಚೌಕಪೀಠದಲ್ಲಿ ದೊಡ್ಡ ಶಿವಲಿಂಗವಿದೆ. ದೇವಾಲಯದವಾಯವ್ಯ ದಿಕ್ಕಿಗೆ ಸಪ್ತಮಾತೃಕೆಯರ ಗುಡಿಯಿದೆ. ಗಂಗವಾಸ್ತುಶಿಲ್ಪದ ಬಗ್ಗೆ ಅಧ್ಯಯನಾ ಮಾಡುವವರು ನೋಡಲೇಬೇಕಾದದೇವಾಲಯವಿದು. ವಾಹನಗಳು ಹೋಗಬಹುದಾದ ರಸ್ತೆಇದೆಯಾದರೂ, ನಿಯತವಾಗಿ ಬಸ್ಸಿನ ಸೌಕರ್ಯವಿಲ್ಲ. ಇಲ್ಲಿಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಶಿಲ್ಪಗಳನ್ನುಸಂಗ್ರಹಿಸಿಡಲು ನಿರ್ಮಿಸಿರುವ ಶೆಡ್‌ನಲ್ಲಿ ಸಪ್ತಮಾತೃಕೆಯರಬೃಹದಾಕಾರದ ಸುಂದರ ಬಿಡಿ ಶಿಲ್ಪಗಳಿವೆ.

 

ಪಟ್ಟದಕಲ್ಲು

ತಾಲೂಕು ಕೇಂದ್ರ ಬಾದಾಮಿಯಿಂದ ೨೨ಕಿ.ಮೀ ಹಾಗೂ ಬೆಂಗಳೂರಿನಿಂದ ೫೧೪ ಕಿ.ಮೀ. ದೂರದಲ್ಲಿರುವಪಟ್ಟದಕಲ್ಲು ಬಾದಾಮಿಯ ಚಾಲುಕ್ಯರ ವಾಸ್ತುಶಿಲ್ಪಕಲೆಯು ಪೂರ್ತಿಅರಳಿರುವ ಸ್ಥಳ. ಇಲ್ಲಿರುವ ಉತ್ಕೃಷ್ಟ ವಿರೂಪಾಕ್ಷ (ಲೋಕೇಶ್ವರ)ಹಾಗೂ ಮಲ್ಲಿಕಾರ್ಜುನ (ತ್ರೈಲೋಕ್ಯೇಶ್ವರ) ದೇವಾಲಯಗಳನ್ನುಇಮ್ಮಡಿ ವಿಕ್ರಮಾದಿತ್ಯನು (ಕ್ರಿ.ಶ. ೭೩೩-೪೪) ಪಲ್ಲವರ ರಾಜಧಾನಿಕಾಂಚಿಯನ್ನು ಮೂರು ಬಾರಿ ಗೆದ್ದುದರ ಸ್ಮರಣಾರ್ಥವಾಗಿ ಅವನರಾಣಿಯರು ಕಟ್ಟಿಸಿದರು. ಬಹುಸುಂದರವಾದ ಶಿಲ್ಪಗಳನ್ನು ಭಿತ್ತಿಮತ್ತು ಚೌಕ ಕಂಬಗಳ ಮೇಲೆ ಹೊಂದಿರುವ ಈ ದೇವಾಲಯಗಳುಕೆಂಪು ಮರಳುಶಿಲೆಯಿಂದ ನಿರ್ಮಿಸಲ್ಪಟ್ಟಿವೆ. ಇಲ್ಲಿಯ ಮಣ್ಣುಮತ್ತು ಮರಳು ಶಿಲೆಯ ಬೆಟ್ಟಗಳು ಕೆಂಪು ಬಣ್ಣದ್ದಾಗಿರುವುದರಿಂದಪಟ್ಟದಕಲ್ಲನ್ನು ಮೂಲತಃ ’ಕಿಸುವೊಳಲ್’(ಕೆಂಪುಪಟ್ಟಣ) ಎಂದುಕರೆಯಲಾಗುತ್ತಿತ್ತು. 

ಸಂಗಮೇಶ್ವರ, (ಶಾಸನೋಕ್ತ ವಿಜಯೇಶ್ವರ)ಪಾಪನಾಥ, ಚಂದ್ರಶೇಖರ, ಜಂಬುಲಿಂಗ, ಕಾಡಸಿದ್ಧೇಶ್ವರಮತ್ತು ಗಳಗನಾಥ ಇಲ್ಲಿಯ ಇತರ ಪ್ರಮುಖ ದೇವಾಲಯಗಳು.ಸುಂದರ ಆನೆಯ ಶಿಲ್ಪಗಳನ್ನು ಒಳಗೊಂಡಿರುವ ರಾಷ್ಟ್ರಕೂಟರಕಾಲದ ಜೈನಬಸದಿಯು ಪಟ್ಟದಕಲ್ಲಿನ ಅಂಜಿನಲ್ಲಿದೆ. ಗಳಗನಾಥದೇವಾಲಯವು, ಭಾಗಶಃ ಜೀರ್ಣವಾಗಿದ್ದು, ರೇಖಾನಾಗರ ಶಿಖರವನ್ನು ಹೊಂದಿದೆ.ಪಟ್ಟದಕಲ್ಲು ಯುನೆಸ್ಕೊದ ವಿಶ್ವಪರಂಪರಾ ನೆಲೆಗಳಪಟ್ಟಿಗೆ ೧೯೮೭ರಲ್ಲಿ ಸೇರಿರುವುದು ಉಲ್ಲೇಖಾರ್ಹ. ಪಶ್ಚಿಮಘಟ್ಟ ಶ್ರೇಣಿ ೨೦೧೨ರಲ್ಲಿ ಈ ಪಟ್ಟಿಗೆ ಸೇರಿದೆ.

 

ಬನವಾಸಿ:

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವಬನವಾಸಿಯು, ಹಿಂದೆ ಕದಂಬರ ರಾಜಧಾನಿಯಾಗಿದ್ದು,ವನವಾಸಿ, ವೈಜಯಂತಿ, ಬನವಸೆ, ಎಂದು ಹಲವು ಶಾಸನಗಳಲ್ಲಿಉಲ್ಲೇಖಿಸಲ್ಪಟ್ಟಿದೆ. ಇದು ಒಂದು ಪುರಾತನ ರಾಜಧಾನಿ. ಅಶೋಕನುಬೌದ್ಧ ಧರ್ಮಪ್ರಚಾರಕರನ್ನು ವನವಾಸಿ ನಾಡಿಗೆ ಕಳಿಸಿದ್ದನೆಂದುಶ್ರೀಲಂಕಾದ ಬೌದ್ಧ ಗ್ರಂಥಗಳು ಉಲ್ಲೇಖಿಸಿವೆ. ಶಾತವಾಹನರಸಾಮಂತರಾದ ಚುಟುಗಳು ಇಲ್ಲಿಂದ ಆಡಳಿತ ಮಾಡುತ್ತಿದ್ದರೆಂದುಹೇಳಲಾಗಿದೆ. ಈ ಸ್ಥಳವು ವರದಾ ನದಿಯ ದಂಡೆಯ ಮೇಲಿದ್ದು,ಇಲ್ಲಿಯ ಜಂಬಿಟ್ಟಿಗೆ ಕಲ್ಲಿನಿಂದ ಕಟ್ಟಲ್ಪಟ್ಟ ಕೋಟೆಯಮೂರು ಬದಿಗಳು ನದಿಯಿಂದ ಸುತ್ತುವರೆಯಲ್ಪಟ್ಟಿದೆ. ಇತ್ತಿಚೀನಉತ್ಖನನದಲ್ಲಿ ಇಟ್ಟಿಗೆಯಿಂದ ಕಟ್ಟಲ್ಪಟ್ಟ ಕೆಲವು ಬೌದ್ಧರ ಕಟ್ಟಡಗಳ ಅವಶೇಷ0ಗಳು ದೊರೆತಿವೆ. ಇಲ್ಲಿರುವ ಒಂದು ಪ್ರಾಕೃತ ಶಾಸನದಪ್ರಕಾರ ಚುಟು ರಾಜಪುತ್ರ ನಾಗಶ್ರೀ ಇಲ್ಲಿ ಬೌದ್ಧ ವಿಹಾರಹಾಗೂ ಕೆರೆಯನ್ನು ಕಟ್ಟಿಸಿ ಒಂದು ನಾಗಮೂರ್ತಿಯನ್ನೂಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ಇಲ್ಲಿಯ ಕದಂಬೇಶ್ವರಗುಡಿಯಲ್ಲಿರುವ ಶಿವಲಿಂಗ ಕದಂಬರ ಕಾಲದ್ದಾಗಿದೆ. ಇಲ್ಲಿರುವಅತ್ಯಂತ ಸುಂದರವಾದ ಮಧುಕೇಶ್ವರ ದೇವಾಲಯವನ್ನುಕಲ್ಯಾಣದ ಚಾಳುಕ್ಯ, ವಿಜಯನಗರ ಹಾಗೂ ಸೋದೆ ಅರಸರಕಾಲದಲ್ಲಿ ಪುನಶ್ಚೇತನಗೊಳಿಸಿ ಇನ್ನೂ ವಿಸ್ತಾರಗೊಳಿಸಲಾಗಿದೆ.ಗರ್ಭಗೃಹದ ಮೇಲೆ ಕದಂಬನಾಗರಶಿಖರವಿದೆ. ಈಮುಖ್ಯ ದೇವಾಲಯದ ಸುತ್ತ ವಿಠೋಬ, ಗಣಪತಿ,ರಾಮ ಮುಂತಾದ ದೇವರುಗಳ ಸಣ್ಣಪುಟ್ಟ ಗುಡಿಗಳಿವೆ. ಇದರಎಡಬದಿ ಹಾಗೂ ಬಲಬದಿಗೆ ವಿಜಯನಗರ ಕಾಲದ ಪಾರ್ವತಿಹಾಗು ನರಸಿಂಹ ದೇವಾಲಯಗಳಿವೆ. ಈ ದೇವಾಲಯದಲ್ಲಿಸೋಂದೆಯ ರಘುನಾಥನಾಯಕನು ದಾನವಾಗಿ ನೀಡಿರುವಅತ್ಯಂತ ಸುಂದರವಾಗಿ ಹಾಗೂ ನಾಜೂಕಾಗಿ ಕೆತ್ತನೆ ಮಾಡಿರುವಆಕರ್ಷಕ ಶಿಲಾಮಂಚವಿದೆ. ಶಾಸನಗಳ ಪ್ರಕಾರ ಬೌದ್ಧ ಹಾಗುಜೈನ ಮತಗಳು ಇಲ್ಲಿ ಪ್ರಖ್ಯಾತಿಯಲ್ಲಿದ್ದವು. ಬನವಾಸಿ ಸಮೀಪದಗುಡ್ನಾಪುರದಲ್ಲಿ ವಿಶಾಲವಾದ ಕೆರೆ ಹಾಗೂ ಈಗ ವೀರಭದ್ರನನ್ನುಪ್ರತಿಷ್ಠಾಪಿಸಿರುವ ಪ್ರಾಚೀನ ಜೈನ ದೇವಾಲಯವಿದೆ. ಇತ್ತೀಚೆಗೆಸಿಕ್ಕಿದ ಕದಂಬ ರವಿವರ್ಮನ ಗುಡ್ನಾಪುರ ಶಾಸನದಿಂದ ಇಲ್ಲಿಮನ್ಮಥ ದೇವಾಲಯವಿದ್ದ ಸುಳಿಹು ದೊರೆತ್ತಿದ್ದು, ಉತ್ಖನನಗಳುಅನೇಕ ಮಹತ್ವದ ಅಂಶಗಳನ್ನು ಬೆಳಕಿಗೆ ತಂದಿವೆ.

 

ಬನ್ನೂರು

ತಾಲೂಕು ಕೇಂದ್ರ ತಿ. ನರಸೀಪುರದಿಂದ ೧೮ಕಿ.ಮೀ ದೂರದಲ್ಲಿರುವ ಹೋಬಳಿ ಕೇಂದ್ರ ತಲಕಾಡಿನ ಗಂಗರಷ್ಟೇ ಪ್ರಾಚೀನ ಸ್ಥಳ, ಗಂಗ, ಚೋಳ ವಿಜಯನಗರ ಹಾಗೂ ಮೈಸೂರುಅರಸರ ಆಡಳಿತಕ್ಕೊಳಪಟ್ಟಿದ್ದ ಸ್ಥಳ.

 

ಬಸರಾಳು

ತಾಲೂಕು ಕೇಂದ್ರ ಮಂಡ್ಯದಿಂದ ಉತ್ತರಕ್ಕೆನಾಗಮಂಗಲ ರಸ್ತೆಯಲ್ಲಿ ೨೪ಕಿ.ಮೀ. ದೂರದಲ್ಲಿದ್ದು, ಹೊಯ್ಸಳರಕಾಲದಲ್ಲಿ ಇದು ’ಬಸುರಿವಾಳ’ ಅಗ್ರಹಾರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯವನ್ನುಹೊಯ್ಸಳ ರಾಜ ಎರಡನೇ ನರಸಿಂಹನ ಕಾಲದಲ್ಲಿ ಹರಿಹರದಂಡನಾಯಕನು ತನ್ನ ತಂದೆಯ ಹೆಸರಿನಲ್ಲಿ ಕಟ್ಟಿಸಿದ್ದನು.ಶಾಸನಗಳ ಪ್ರಕಾರ, ಈ ದೇವಾಲಯಕ್ಕೆ ಎರಡನೆಯ ನರಸಿಂಹ,ವೀರಸೋಮೇಶ್ವರ, ಮೂರನೆಯ ನರಸಿಂಹ ಹಾಗೂ ಪಾಳೇಗಾರಕೆಂಪಭೈರರಸರಿಂದ ದತ್ತಿಗಳು ದೊರೆತಿದ್ದವು. ಮಲ್ಲಿಕಾರ್ಜುನ ದೇವಾಲಯವು ಹೊಯ್ಸಳ ಕಲೆಯ ಒಂದುಅತ್ಯುತ್ತಮ ಉದಾಹರಣೆಯಾಗಿದೆ. ಈ ದೇವಾಲಯವನ್ನು ಒಂದುಮೀಟರ್ ಎತ್ತರದ ನಕ್ಷತ್ರಾಕಾರದ ಜಗುಲಿಯ ಮೇಲೆ ಕಟ್ಟಲಾಗಿದೆ.ಇದು ತ್ರಿಕೂಟಾಚಲ ಕಟ್ಟಡವಾಗಿದೆ. ಪಶ್ಚಿಮಕ್ಕಿರುವ ಗರ್ಭಗೃಹದಎದುರಿಗೆ ಸುಖನಾಸಿ ಇದ್ದು, ಉತ್ತರ ಹಾಗೂ ದಕ್ಷಿಣದ ಗರ್ಭಗೃಹಗಳಎದುರಿಗೆ ಪೂರ್ವಕ್ಕೆ ಹಬ್ಬಿಕೊಂಡಿರುವ ನವರಂಗವಿದೆ. ದಕ್ಷಿಣದಗರ್ಭಗೃಹದ ಮುಂದೆ ವೈಷ್ಣವದ್ವಾರಪಾಲಕರಿದ್ದಾರೆ. ವಿಷ್ಣುವಿನಮೂರ್ತಿಯಿದ್ದ ಜಾಗದಲ್ಲಿ ಈಗ ಸೂರ್ಯನ ವಿಗ್ರಹವನ್ನುಇರಿಸಲಾಗಿದೆ. ನವರಂಗದ ಜಂತಿಯ ಮಧ್ಯದಲ್ಲಿ ತಾಂಡವೇಶ್ವರಮತ್ತು ಅವನ ಇಬ್ಬದಿಗಳಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ.ನವರಂಗದ ಗೋಡೆಯಲ್ಲಿ ಕಲಾತ್ಮಕವಾದ ಜಾಲಂಧ್ರಗಳಿವೆ.ಗೋಡೆಯ ಹೊರ ಮೈಯಲ್ಲಿರುವ ಕೋಷಗಳಲ್ಲಿ ಸರಸ್ವತಿ, ಗಣೇಶಹಾಗೂ ಮಹಿಷಾಸುರಮರ್ಧಿನಿಯ ಮೂರ್ತಿಗಳಿವೆ. ಅಧಿಷ್ಠಾನದಲ್ಲಿಆನೆ, ಕುದುರೆ, ಸಿಂಹ, ಪುರಾಣದ ದೃಶ್ಯ, ಮೊಸಳೆ, ಹಂಸಗಳನೆಮುಂತಾದ ಆರು ಸಾಲು ಅಲಂಕಾರಿಕ ಪಟ್ಟಿಗಳಿವೆ. ದಕ್ಷಿಣದದ್ವಾರದಲ್ಲಿ ರಾಮಾಯಣ, ಮಹಾಭಾರತ ಹಾಗೂ ಭಾಗವತದ ಕಥನಚಿತ್ರಣವಿದೆ. ಗೋಡೆಯಲ್ಲಿರುವ ದುರ್ಗಾ, ಯೋಗಾನರಸಿಂಹ,ಭೈರವ, ಹಲಾಯುಧ, ಮನ್ಮಥ-ರತಿ, ಬಲಿ-ವಾಮನ ಮೂರ್ತಿಗಳುವೀಕ್ಷಕರಕಣ್ಸೆಳೆಯುತ್ತವೆ. ಈ ದೇವಾಲಯದ ಬಳಿಯೇಹೊಯ್ಸಳರ ಕಾಲದ ವಿಶೇಷ ದೇವಾಲಯವಿದೆ.

 

ಬಸವ ಕಲ್ಯಾಣ

ಬೀದರಿನಿಂದ ೮೦ ಕಿ.ಮೀ ದೂರದಲ್ಲಿರುವತಾಲೂಕು ಕೇಂದ್ರವಾಗಿದ್ದು, ಇದು ಹಿಂದೆ ಕಲ್ಯಾಣ ಚಾಳುಕ್ಯರರಾಜಧಾನಿಯಾಗಿತ್ತು. ಇಲ್ಲಿರುವ ಪ್ರಾಚೀನ ಕೋಟೆಯನ್ನುಬಹಮನಿ ಸುಲ್ತಾನರ ಕಾಲದಲ್ಲಿ ಪುನರುತ್ಥಾನ ಮಾಡಲಾಗಿತ್ತು.ಕೋಟೆಯೊಳಗೆ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯವಿದೆ.ಇಲ್ಲಿ ಊರಹೊರಗೆ ಇರುವ ಪಾಳುಬಿದ್ದ ನಾರಾಯಣದೇವಾಲಯವನ್ನು ಹೊರತುಪಡಿಸಿದರೆ, ಚಾಳುಕ್ಯ ಹಾಗುಕಳಚೂರಿಗಳ ಕಾಲಕ್ಕೆ ಸೇರಿದ ಅಂತಹ ಮಹತ್ವದ ಕಟ್ಟಡಗಳೇನೂಉಳಿದಿಲ್ಲ. ಈಗ ಬಸವೇಶ್ವರರ ಆಧುನಿಕ ದೇವಾಲಯ, ಕಲ್ಯಾಣಚಾಲುಕ್ಯರ ಕಾಲದ ಪ್ರಸಿದ್ಧ ನ್ಯಾಯವಾದಿ ವಿಜ್ಞಾನೇಶ್ವರಗುಹೆ, ಪ್ರಭುದೇವರ ಗದ್ದುಗೆ, ಮಡಿವಾಳ ಮಾಚಯ್ಯನ ಕೆರೆ,ಅಕ್ಕನಾಗಮ್ಮನ ಗುಹೆ, ಪನರುತ್ಥಾನ ಮಾಡಿದ ಸಿದ್ದೇಶ್ವರದೇವಾಲಯ ಹಾಗೂ ಅನುಭವ ಮಂಟಪಗಳಿವೆ. ಇಲ್ಲಿರುವ ಖಾಜಿಮಸೀದಿಯು ಸುಂದರವಾದ ಕಟ್ಟಡವಾಗಿದ್ದು, ಅಲಿ ರಾಜಾಬಾಗ್ಸವಾರ್ ದರ್ಗಾ ಇಲ್ಲಿದೆ. ಬಸವೇಶ್ವರರು ಹುಟ್ಟಿದ ಎಂಟನೇಶತಮಾನೋತ್ಸವದ ಅಂಗವಾಗಿ ’ಬಸವ ವನ’ವನ್ನೂ ಇತ್ತೀಚೆಗೆ ಇಲ್ಲಿ ರೂಪಿಸಲಾಗಿದೆ.

 

ಬಸವನ ಬಾಗೇವಾಡಿ

ಇದು ಜಿಲ್ಲಾಕೇಂದ್ರ ವಿಜಯಪುರದಿಂದ೪೩ ಕಿ.ಮೀ ಪೂರ್ವಕ್ಕಿರುವ, ತಾಲೂಕು ಕೇಂದ್ರ. ಇಲ್ಲಿ ಶರಣಬಸವೇಶ್ವರ ಜನಿಸಿದ ಸ್ಥಳ ೧೨ ನೇ ಶತಮಾನದ ಆರಂಭದ ದಶಕದಲ್ಲಿ ಹುಟ್ಟಿದ್ದ ಸಮೀಪದ ಇಂಗಳೇಶ್ವರ ಇವರ ತಾಯಿಯ ತವರೂರು. ಹಿಂದೆ ಇದೊಂದು ಅಗ್ರಹಾರವಾಗಿತ್ತು. ಬಸವೇಶ್ವರರು,ಈ ಅಗ್ರಹಾರದ ಮುಖ್ಯಸ್ಥನ ಮಗನಾಗಿದ್ದು. ಇಲ್ಲಿರುವ ಮುಖ್ಯದೇವಾಲಯವು ಬಸವೇಶ್ವರನದು. ಇದು ಚಾಳುಕ್ಯ ಶೈಲಿಯಲ್ಲಿದ್ದು,ದಾಖಲೆಗಳಲ್ಲಿ ಇದನ್ನು ಸಂಗಮನಾಥ ಎಂದು ಹೆಸರಿಸಲಾಗಿದೆ.ಇಂಚಿಗೇರಿಯ ಆಧ್ಯಾತ್ಮಿಕ ಸಾಧಕರಾದ ಸಿದ್ಧರಾಮೇಶ್ವರ ಹಾಗೂಗುರುಪಾದೇಶ್ವರರ ಸಮಾಧಿಗಳು ಇಲ್ಲಿವೆ. ಇಲ್ಲಿದ್ದ ಬಸವೇಶ್ವರರಪೂರ್ವಜರ ಮನೆಯ ನಿವೇಶನ ಎಂದು ಹೇಳಲಾಗುವ ಸ್ಥಳವನ್ನುರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದು ಸ್ಮಾರಕವನ್ನೂನಿರ್ಮಿಸಲಾಗಿದೆ.

 

 

ಬಳ್ಳಾರಿ

ಬಳ್ಳಾರಿಯು ಜಿಲ್ಲಾಕೇಂದ್ರವಾಗಿದ್ದು, ಬೆಂಗಳೂರಿನಿಂದ೩೦೬ ಕಿ.ಮೀ. ವಾಯವ್ಯಕ್ಕಿದೆ. ಇದು ಎರಡು ಬೆಟ್ಟಗಳ ಸುತ್ತಹರಡಿದ್ದು, ಅದರಲ್ಲಿ ಬಲಹರಿ ಬೆಟ್ಟದಲ್ಲಿ ಒಂದು ದೇವಾಲಯವಿದೆ.ಈ ಗುಡ್ಡದ ಸುತ್ತ ಕಟ್ಟಿದ್ದ ವಿಜಯನಗರ ಕಾಲದ ಕೋಟೆಯುಇನ್ನೂ ಸುಸ್ಥಿತಿಯಲ್ಲಿದೆ. ಹಿಂದೆ ಇದು ವಿಜಯಪುರ, ಮರಾಠಾ,ನಿಜಾಮ ಹಾಗೂ ಹೈದರನಿಗೆ ಹಸ್ತಾಂತರಗೊಂಡಿತ್ತು. ಟಿಪ್ಪುವಿನಪರಾಜಯದ ಬಳಿಕ ನಿಜಾಮನು ಇದನ್ನು ಬ್ರಿಟಿಷರಿಗೆ ಒಪ್ಪಿಸಿದನು.ಇಲ್ಲಿರುವ ದುರ್ಗಮ್ಮ (ಬಳ್ಳಾರಮ್ಮ) ದೇವಾಲಯದಲ್ಲಿ ಮಣ್ಣಿನಹುತ್ತವನ್ನೇ ದೇವರೆಂದು ಪೂಜಿಸಲಾಗುತ್ತದೆ. ಇಲ್ಲಿ ಎರಡುದೊಡ್ಡ ಮಸೀದಿಗಳಿವೆ.ಬಳ್ಳಾರಿಯು ಈಗ ಆಧುನಿಕಯಂತ್ರೋಪಕೃತ ಉಡುಪು ತಯಾರಿಕೆಯ ದೊಡ್ಡ ಕೇಂದ್ರವಾಗಿಬೆಳೆದಿದೆ.

 

ಬಂಕಾಪುರ

ಜಿಲ್ಲಾಕೇಂದ್ರ ಹಾವೇರಿಯಿಂದ ೨೨ ಕಿ.ಮೀದೂರದಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿದೆ. ಈ ಪಟ್ಟಣವನ್ನುಅಮೋಘವರ್ಷ ನೃಪತುಂಗನ (ಒಂಬತ್ತನೇ ಶತಮಾನ)ದಳಪತಿ ಬಂಕೇಯ ನಿರ್ಮಿಸಿದ್ದು, ನಂತರ ಚಾಲುಕ್ಯರ ಕಾಲದಲ್ಲಿಸುಂದರವಾದ ದೇವಾಲಯಗಳನ್ನು ಇಲ್ಲಿ ಕಟ್ಟಿಸಲಾಯಿತು.ಅವುಗಳಲ್ಲಿ ಕೋಟೆಯಲ್ಲಿರುವಅದ್ಬುತವಾದ ನಗರೇಶ್ವರದೇವಾಲಯ ಉತ್ತಮ ಉದಾಹರಣೆಯಾಗಿದೆ. ಊರೊಳಗೆಚಾಲುಕ್ಯರ ಕಾಲದ ಆರ್ಷಕ ಸಿದ್ಧೇಶ್ವರ ದೇವಾಲಯವಿದೆ.೧೫೬೭ ರಲ್ಲಿ ಅಲಿ ಆದಿಲ್‌ಶಾಹನು ಬಂಕಾಪುರವನ್ನುವಶಪಡಿಸಿಕೊಂಡ ಮೇಲೆ ಇಲ್ಲಿದ್ದ ಬಹಳಷ್ಟು ದೇವಾಲಯಗಳನ್ನುತಾನೇ ನಾಶಪಡಿಸಿದ್ದನ್ನು ದಾಖಲಿಸಿದ್ದಾನೆ. ಆದರೂ ನಗರೇಶ್ವರದೇವಾಲಯವು ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ.ಕೋಟೆಯಲ್ಲಿ ಸುಂದರವಾದ ಮಸೀದಿ ಇದೆ. ಪಂಚರಬಾವಿಎಂಬ ಈಜುಗೊಳದಂತಹ ರಚನೆಯು ವಿಶಿಷ್ಟ ರಚನೆಯಾಗಿದೆ.ಬಂಕಾಪುರದಲ್ಲಿ ಕಿಲಾರಿ ತಳಿಯ ದನ ಹಾಗೂ ಮೊಲಗಳಿದ್ದುಸಂತಾನೋತ್ಪತ್ತಿ ಕೇಂದ್ರ ಕಚೇರಿಗಳೂಕೋಟೆಯೊಳಗೆ ಇವೆ. ವಿಜಯಪುರದ ದಳಪತಿಗಳು ಆರಂಭದಲ್ಲಿಇದನ್ನು ತಮ್ಮ ಕೇಂದ್ರವನ್ನಾಗಿ ಹೊಂದಿದ್ದರು. ನಂತರ ಸವಣೂರಿಗೆಸ್ಥಳಾಂತರಿಸಿ ಸವಣೂರು ನವಾಬರೆಂದೇ ಪ್ರಸಿದ್ಧಿ ಪಡೆದಿದ್ದರು.

 

ಬಾಗಳಿ

ದಾವಣಗೆರೆ ಜಿಲ್ಲೆ ಹರಪನ ಹಳ್ಳಿಯಿಂದ ಒಂಬತ್ತುಕಿ.ಮೀ. ದೂರದಲ್ಲಿದೆ. ಇದು ಹಿಂದೆ ’ಬಾಗುಳಿ’ ಎಂದುಕರೆಯಲ್ಪಡುತ್ತಿತ್ತು. ಇಲ್ಲಿ ೧೧೧೩ರ ಶಾಸನದಲ್ಲಿ ಉಲ್ಲಿಖಿತ ಕಲ್ಲೇಶ್ವರದೇವಸ್ಥಾನ ಸಂಕೀರ್ಣವಿದೆ. ಇಲ್ಲಿನಂತರದ ಚಾಲಕ್ಯರ ಅವಳಿ ದೇವಾಲಯಗಳಿದ್ದು, ಅವುಗಳ ಗೋಡೆಯ ಹೊರಮೈಯಲ್ಲಿಅತ್ಯಂತ ಸುಂದರವಾದ ಹಾಗೂ ನಾಜೂಕಾದ ಮಿಥುನ ಶಿಲ್ಪಗಳಿವೆ.ಇಲ್ಲಿರುವ ನುಣುಪಾದ ೫೯ ಕಂಬಗಳ ಕಪೋತದಲ್ಲಿ ವಿಶಿಷ್ಟವಾದಕಾಮಕೇಳಿಯ ಶಿಲ್ಪಗಳಿವೆ. ರಾಜ್ಯ ಪುರಾತತ್ವ ಇಲಾಖೆಯು ಇಲ್ಲಿಪುರತಾತ್ವ ವಸ್ತುಸಂಗ್ರಹಾಲಯವನ್ನು ಆರಂಭಿಸಿದ್ದು, ವಿಶಿಷ್ಟ ಶಿಲ್ಪಸಂಗ್ರಹದಿಂದಾಗಿ ಗಮನಾರ್ಹವಾಗಿದೆ.

 

ಬಾಗಲಕೋಟೆ

ಹಿಂದೆ ಇದು ಬಾದಾಮಿ ಚಾಲುಕ್ಯರಕಾಲದಲ್ಲಿ ಪ್ರಮುಖ ನಗರವೂ ವ್ಯಾಪಾರ ಕೇಂದ್ರವೂ ಆಗಿದ್ದುವಿಜಯಪುರ ಜಿಲ್ಲೆಯಲ್ಲಿತ್ತು. ಆದರೆ ೧೯೯೭ರಲ್ಲಿ ಹೊಸಜಿಲ್ಲೆಯಾಗಿ ರೂಪುಗೊಂಡಿತು. ಈ ಜಿಲ್ಲೆಯಲ್ಲಿತೇರದಾಳ,ಗೊಂಬಿಗುಡ್ಡ, ಪಟ್ಟದಕಲ್, ಎಲಹಟ್ಟಿ ಮುಂತಾದಪ್ರಾಗೈತಿಹಾಸಿಕ ನೆಲೆಗಳಿವೆ. ಈ ನಗರವಿಂದು ಆಲಮಟ್ಟಿಅಣೆಕಟ್ಟಿನ ಹಿನ್ನೀರಿನಿಂದಾಗಿ ಮುಳುಗಡೆಯಾಗಿ ನವನಗರ ಎಂಬಜಾಗಕ್ಕೆ ಭಾಗಶಃ ಸ್ಥಳಾಂತರಿಸಲ್ಪಟ್ಟಿದೆ. ಈ ನಗರವು ಕಲ್ಯಾಣದಚಾಲುಕ್ಯರ ಕಾಲದಲ್ಲಿ ಬಾಗಡೆಗೆ-೭೦ರ ರಾಜಧಾನಿಯಾಗಿದ್ದುಮುಂದೆ ಆದಿಲ್‌ಶಾಹಿ ಹಾಗೂ ಮರಾಠರ ಆಳ್ವಿಕೆಗೂ ಒಳಪಟ್ಟಿತ್ತು.ಈಗ ಇದು ಸಿಮೆಂಟು ತಯಾರಿಕೆಗೆ ಪ್ರಸಿದ್ಧವಾಗಿದೆ.

 

ಬಾದಾಮಿ

ಹಿಂದೆ ಇದು ಬಾದಾಮಿ ಚಾಲುಕ್ಯರ ರಾಜಧಾನಿಪಟ್ಟಣವಾಗಿತ್ತು. ಬೆಂಗಳೂರಿನಿಂದ ೫೦೦ ಕಿ.ಮೀ. ಜಿಲ್ಲಾಕೇಂದ್ರಬಾಗಲಕೋಟೆಯಿಂದ ೩೦ ಕಿ.ಮೀ ದೂರದಲ್ಲಿರುವ ಇದುಹಿಂದೆ ವಾತಾಪಿ ಎಂದು ಕರೆಯಲ್ಪಡುತ್ತಿತ್ತು. ಕ್ರಿ.ಶ. ೫೪೩ರಲ್ಲಿಒಂದನೇ ಪುಲಕೇಶಿಯು ಇಲ್ಲಿ ಕೋಟೆಯನ್ನು ಕಟ್ಟಿಸಿ ಅದನ್ನುತನ್ನ ರಾಜಧಾನಿಯನ್ನಾಗಿಮಾಡಿಕೊಂಡಿದ್ದನ್ನು ಅಲ್ಲೇ ಇರುವಶಿಲಾಶಾಸನ ದಾಖಲಿಸಿದೆ. ಕ್ರಿ.ಶ. ೭೫೭ರವರೆಗೂ ಇದುಅವರ ರಾಜಧಾನಿಯಾಗಿತ್ತು. ವಿಶಿಷ್ಟವಾದ ಬಂಡೆಕಲ್ಲುಗಳಲ್ಲಿಕೊರೆಯಲಾಗಿರುವ ಗುಹಾಲಯಗಳಿಂದಾಗಿ ಇದೊಂದುಪ್ರಸಿದ್ಧವಾಗಿದೆ. ಇಲ್ಲಿರುವ ಕೋಟೆಯನ್ನು ಹೈದರಾಲಿಪುನಶ್ಚೇತನಗೊಳಿಸಿದ್ದು. ಟಿಪ್ಪು ಇಲ್ಲಿ ಸುಂದರವಾದ ಮಸೀದಿಯನ್ನುಕಟ್ಟಿಸಿದ್ದಾನೆ. ಇಲ್ಲಿರುವ ಒಂದನೇ ಗುಹಾಲಯದಲ್ಲಿ ೧೮ ಕೈಗಳುಳ್ಳವಿಶಿಷ್ಟ ಹಾಗೂಸುಂದರವಾದ ನಟರಾಜನ ತಾಂಡವನೃತ್ಯಶಿಲ್ಪವಿದೆ.ಈ ಶಿಲ್ಪದಲ್ಲಿ ಭರತ ನಾಟ್ಯದ ವಿವಿಧ ಭಂಗಿಗಳನ್ನುಒಳಗೊಂಡಿದ್ದು ಶಿಲ್ಪಿಯ ಚತುರತೆಗೆ ಸಾಕ್ಷಿಯಾಗಿದೆ. ಈ ಗುಹೆಯಛತ್ತಿನಲ್ಲಿ ನಾಗರಾಜ ಹಾಗೂ ವಿದ್ಯಾಧರ ದಂಪತಿಗಳ ಶಿಲ್ಪವಿದೆ.ಇಲ್ಲಿ ವಿವಿಧ ಭಂಗಿಯಲ್ಲಿರುವ ಕುಬ್ಜರ ಶಿಲ್ಪಗಳು ನೋಡಲುಸಿಗುತ್ತವೆ. ಎರಡನೆಯ ಗುಹಾಲಯದಲ್ಲಿಆಳೆತ್ತರಕ್ಕಿಂತಲೂದೊಡ್ಡದಾದ ಭೂವರಾಹ ಹಾಗೂ ತ್ರಿವಿಕ್ರಮ ಶಿಲ್ಪಗಳನ್ನುಕಾಣಬಹುದು. ಮೂರನೆಯ ಗುಹಾಲಯವು ಮಹತ್ವದ್ದಾಗಿದ್ದುಇದನ್ನು ಮಂಗಳೇಶನು ಕ್ರಿ.ಶ. ೫೭೮ರಲ್ಲಿ ಕೊರೆಯಿಸಿದನು.ಇದು ವೈಷ್ಣವ ಗುಹೆ ಎಂದೂ ಪ್ರಖ್ಯಾತಿ ಪಡೆದಿದೆ. ಇಲ್ಲಿ ಶೇಷನಮೇಲೆ ಕುಳಿತ ಪರವಾಸುದೇವ, ಭೂವರಾಹ, ನರಸಿಂಹ ಹಾಗೂಹರಿಹರರ ಆಳೆತ್ತರಕ್ಕಿಂತಲೂ ದೊಡ್ಡ ಹಾಗೂ ಸುಂದರವಾಗಿಕೆತ್ತಿರುವ ವಿವಿಧ ಭಂಗಿಯ ಶಿಲ್ಪಗಳನ್ನು ಕಾಣಬಹುದು. ಲೌಕಿಕದೃಶ್ಯಗಳನ್ನು ನೀರೂಪಿಸುವ ಮದನಿಕಾ ಶಿಲ್ಪಗಳು ಗುಹೆಯ ಕಂಬಗಳಲ್ಲಿವೆ. ಗುಡ್ಡದ ತುದಿಯಲ್ಲಿರುವ ಜೈನ ಗುಹಾಲಯದಲ್ಲಿಜೈನ ತೀರ್ಥಂಕರರ, ಯಕ್ಷಯಕ್ಷಿಯರ ಸಾಕಷ್ಟು ಶಿಲ್ಪಗಳಿವೆ.ಇಲ್ಲಿರುವ ಗೊಮ್ಮಟ ಶಿಲ್ಪಕ್ಕೆ ನೀಟಾದ ಕೇಶವಿದೆ. ಅಗಸ್ತ್ಯ ತೀರ್ಥದಆಚೇ ಬದಿಯ ಬೆಟ್ಟದ ಮೇಲಿನಕೋಟೆಯಲ್ಲಿರುವ ’ಮೇಲಣಶಿವಾಲಯವನ್ನು’ ಅತ್ಯಂತ ಪ್ರಾಚೀನ ಕಟ್ಟಡ ಮಾದರಿಯವೈಷ್ಣವದೇವಾಲಯವೆಂದು ಗುರುತಿಸಲಾಗಿದೆ. ಮಾಲಗಿತ್ತಿಶಿವಾಲಯವನ್ನು ಸೂರ್ಯದೇವಾಲಯವೆಂದೂ, ಕೆಳಗಿನಶಿವಾಲಯವನ್ನು ಗಣಪತಿ ದೇವಾಲಯವೆಂದೂ ಗುರುತಿಸಲಾಗಿದೆ.ತ್ರಿಕೂಟ ಸ್ಥಾನಗಳಿಂದ ಕೂಡಿದ ದೇವಾಲಯವಾಗಿದೆ. ಊರನಡುವೆ ಇರುವ ಜಂಬುಲಿಂಗ ದೇವಾಲಯವನ್ನು ಒಂದುಪ್ರಮುಖವಾದ ಕಟ್ಟವಾಗಿದೆ. ಇದನ್ನು ರಾಣಿ ವಿನಯವತಿ ಕ್ರಿ.ಶ.೬೯೯ ರಲ್ಲಿ ಕಟ್ಟಿಸಿದಳು. ಬಾದಾಮಿಯ ಗುಹಾಲಯಗಳು ಕೆಂಪುಮರಳುಶಿಲೆಯವಾಗಿದ್ದು ಶಿಲ್ಪಗಳು ಅಪೂರ್ವವೂ ಸುಂದರವೂಆಗಿವೆ. ಸಮೀಪದಲ್ಲಿರುವ ಬನಶಂಕರಿಯಲ್ಲಿ ರಾಷ್ಟ್ರಕೂಟರ ಕಾಲದಬನಶಂಕರಿಯ ದೇವಾಲಯವಿದ್ದು, ತೀರ್ಥಹೊಂಡವು ಕಲ್ಲಿನಕಂಬಗಳ ಮಂಟಪದಿಂದ ಸುತ್ತುವರೆಯಲ್ಪಟ್ಟಿದೆ. ಜನವರಿಯಲ್ಲಿಬನದ ಹುಣ್ಣಿಮೆಯಂದು ಇಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.

 

ಬೀದರ್

ಮಹಾಭಾರತ ಕಾಲದ ವಿದುರ ನಗರ ಇದೆಂಬಐತಿಹ್ಯವನ್ನು ಹೊಂದಿರುವ ಇದು ಜಿಲ್ಲಾ ಕೇಂದ್ರವಾಗಿದ್ದುಬೆಂಗಳೂರಿನಿಂದ ೭೪೦ ಕಿ.ಮೀ. ದೂರದಲ್ಲಿ, ಸಮುದ್ರಮಟ್ಟದಿಂದ೬೬೪ ಮೀ. ಎತ್ತರದಲ್ಲಿರುವ ಉತ್ತಮ ಹವಾಗುಣವನ್ನುಹೊಂದಿರುವ ಚಾರಿತ್ರಿಕ ಮಹತ್ವದ ಸ್ಥಳ. ೧೪೨೬ರಲ್ಲಿಬಹಮನ್‌ಶಾಹಿ ಸುಲ್ತಾನ ರಾಜರು ಇದನ್ನು ರಾಜಧಾನಿಯನ್ನಾಗಿಮಾಡಿಕೊಂಡು ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯುಇಂದಿಗೂ ಸುಸ್ಥಿತಿಯಲ್ಲಿದೆ. ಕೋಟೆಯ ಒಳಗೆ ಸೋಲಾಕಂಬ್ಮಸೀದಿ (೧೪೨೩), ತಖ್ತ್ ಮಹಲ್, ಚಿನ್ನಿ ಮಹಲ್ ಹಾಗೂ ರಂಗೀನ ಮಹಲ್ ಎಂಬ ಅರಮನೆಗಳಿವೆ. ಈ ಮಹಲುಗಳನ್ನುಬಹು ಸುಂದರವಾಗಿ ಮೊಸಾಯಿಕ್ ಹಾಗೂ ಮರಗಳಿಂದಸಿಂಗರಿಸಲಾಗಿದೆ.

ಕೋಟೆಗೆ ದೊಡ್ಡದಾದ ದ್ವಾರಗಳಿದ್ದು, ಬೃಹತ್ತಾದಬುರುಜುಗಳಿವೆ. ಪೇಟೆಯಲ್ಲಿರುವ ಮಹಮ್ಮದ್ ಗವಾನನ ಮದ್ರಸಾಬಹು ಸುಂದರವಾದ ಕಟ್ಟಡವಾಗಿದ್ದು, ಇಂಡೋ-ಸಾರಸೆನಿಕ್ಶೈಲಿಯಲ್ಲಿದೆ. ಬಹುಮನಿಗಳ ಅವನತಿಯ ನಂತರ ಬರೀದ್ಶಾಹಿಗಳು ಇದನ್ನು ಆಳಿದರು. ನಂತರ ಬೀದರನ್ನು ವಿಜಯಪುರದಅರಸರು ೧೬೧೯ರಲ್ಲಿ ವಶಪಡಿಸಿಕೊಂಡರು. ಆ ನಂತರಇದು ಔರಂಗಜೇಬನ ಆಳ್ವಿಕೆಗೆ ಒಳಪಟ್ಟು ಕೊನೆಗೆ ನಿಜಾಮರಕೈಸೇರಿತು. ಇಲ್ಲಿರುವ ಝರಣೀ ನರಸಿಂಹ(ನರಸಿಂಹಝರ)ದೇವಾಲಯವು ಪ್ರಸಿದ್ಧವಾಗಿದೆ. ಬೀದರಿನ ಬಳಿ ಇರುವಅಷ್ಟೂರಿನಲ್ಲಿ ಬಹುಮನಿ ಸುಲ್ತಾನರ ಬೃಹತ್ತಾದ ಸಮಾಧಿಗೋರಿಗಳಿದ್ದು, ಒಳಗೆವರ್ಣಚಿತ್ರಗಳೂ ಇವೆ.ಬೀದರನಲ್ಲಿ ನಾನಕ್ಝರ ಎಂಬಲ್ಲಿ ಗುರುದ್ವಾರ ಇದ್ದು, ಇಲ್ಲಿ ಗುರುನಾನಕ್ ಅವರುನೀರಿನ ಕಾರಂಜಿಯನ್ನು ಸೃಷ್ಟಿಸಿರೆಂದು ಹೇಳಲಾಗಿದೆ.

 

ಬೆಳವಾಡಿ

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಹೊಯ್ಸಳರಕಾಲದ ವೀರನಾರಾಯಣ ದೇವಾಲಯ ತ್ರಿಕೂಟದೇವಾಲಯದಿಂದಾಗಿ ಪ್ರಸಿದ್ಧಿವಾಗಿದ್ದು. ಇಲ್ಲಿ ಸುಂದರವಾದ ವೀರನಾರಾಯಣ,ವೇಣುಗೋಪಾಲ ಹಾಗೂ ಯೋಗಾನರಸಿಂಹ ವಿಗ್ರಹಗಳಿವೆ.ಚಿಕ್ಕಮಗಳೂರಿನಿಂದ ೨೯ ಕಿ.ಮೀ. ದೂರದಲ್ಲಿರುವ ಈ ಸ್ಥಳದಲ್ಲಿ ೧೨೦೬ರ ಶಾಸನವಿದ್ದು ಈದೇವಾಲಯವು ಅದಕ್ಕಿಂತಲೂಮೊದಲಿನದು ಇಲ್ಲಿಯ ಜನರ ಪ್ರಕಾರ, ಈ ಊರು ಮಹಾಭಾರತಕಾಲದಲ್ಲಿ ಏಕಚಕ್ರ ನಗರವಾಗಿತ್ತು. ಇಲ್ಲಿ ಹುತ್ತದ ಗಣಪತಿ ಎಂದುಕರೆಯಲ್ಪಡುವ ಗಣಪತಿಯ ಪ್ರಾಚೀನ ದೇವಾಲಯವಿದೆ.

 

ಬೆಳಗಾವಿ

ಪ್ರಾಚೀನ ಕಾಲದಲ್ಲಿ ’ವೇಣುಗ್ರಾಮ’ (ಬಿದಿರಿನಊರು) ಎಂದು ಕರೆಯಲ್ಪಟ್ಟಿದ್ದ ಬೆಳಗಾವಿ ಇಂದು ಜಿಲ್ಲಾಕೇಂದ್ರವಾಗಿದ್ದು, ಪ್ರಾದೇಶಿಕ ಆಯುಕ್ತರ ಕೇಂದ್ರಸ್ಥಳವೂಆಗಿದೆ. ಇದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಬೆಂಗಳೂರಿನಿಂದ ೫೦೨ ಕಿ.ಮೀ ದೂರದಲ್ಲಿದೆ. ೧೨ನೇಶತಮಾನದಲ್ಲಿ ಸೌದತ್ತಿಯಿಂದ ರಟ್ಟರು ತಮ್ಮ ರಾಜಧಾನಿಯನ್ನುಇಲ್ಲಿಗೆ ಸ್ಥಳಾಂತರ ಮಾಡಿದರು. ಇಲ್ಲಿಯ ಕೋಟೆಯ ಒಳಗೆ,೧೨೦೪ರಲ್ಲಿ ರಟ್ಟರ ಅಧಿಕಾರಿ ಬೀಚಿರಾಜ ಕಲಾತ್ಮಕವಾಗಿ ಕಟ್ಟಿಸಿದಬಹು ಸುಂದರವಾದ ಹಾಗೂ ಅದ್ಭುತವಾದ ಕಮಲ ಬಸದಿಇದೆ. ಇದರ ಛತ್ತಿನಲ್ಲಿ ಹೊರಕ್ಕೆ ಚಾಚಿದಂತೆ ಕೆತ್ತಿರುವ ಕಮಲದದಳಗಳಿವೆ. ಈ ಸುಂದರ ಕಟ್ಟಡವು ಚಾಲುಕ್ಯ ಶೈಲಿಯಲ್ಲಿದ್ದುಒಳಗೆ ನೇಮಿನಾಥ ತೀರ್ಥಂಕರನ ಮೂರ್ತಿಯಿದೆ. ಈ ಪಟ್ಟಣವುಸೇವುಣರು (ದೇವಗಿರಿಯಯಾದವರು) ಹಾಗೂ ವಿಜಯನಗರಅರಸರಿಗೆ ಸೇರಿದ್ದು ನಂತರ ೧೪೭೪ರಲ್ಲಿ ಬಹಮನಿಯ ಅರಸರಪರವಾಗಿ ಮಹಮೂದ ಗವಾನನು ಇದನ್ನು ವಶಪಡಿಸಿಕೊಂಡನು.

ಆನಂತರ ಈ ಕೋಟೆಯನ್ನು ಆದಿಲ್ ಶಾಹಿಗಳು ಇನ್ನಷ್ಟು ಬಲಪಡಿಸಿದರು. ಇಲ್ಲಿ ಆಕರ್ಷಕವಾದ ಮೂರುದ್ವಾರಗಳಿರುವಸಾಫಾ ಮಸೀದಿ ಇದೆ. ಈ ಮಸೀದಿಯನ್ನು ಸುಂದರವಾದ ಹೂವುಹಾಗೂ ಅಲಂಕಾರಿಕಬರಹಗಳಿಂದ ಅಲಂಕರಿಸಲಾಗಿದೆ. ಇಲ್ಲಿಯಎರಡು ಕಂಬಗಳ ಮೇಲ್ಮೈ ನಾಗರಿ ಲಿಪಿಯಲ್ಲಿರುವ ಕನ್ನಡಶಾಸನಗಳಿವೆ. ಒಂದು ರಟ್ಟರ ರಾಜ ನಾಲ್ಕನೇ ಕಾರ್ತವೀರ್ಯನ೧೧೯೯ ಶಾಸನವಾದರೆ, ಇನ್ನೊಂದು ಸೇವುಣ (ಯಾದವ)ಕೃಷ್ಣನ ೧೨೬೧ರ ಶಾಸನವಾಗಿದೆ. ಅಲ್ಲೇ ಇರುವ ಪರ್ಷಿಯನ್ಶಾಸನದ ಪ್ರಕಾರ, ಈಮಸೀದಿಯನ್ನು ಅಸದ್ ಖಾನ್ ಎಂಬವಿಜಾಪುರದ ಸೇನಾಪತಿಯು ಕಟ್ಟಿಸಿದ್ದನು. ಕೋಟೆಯಲ್ಲಿರುವಜಾಮಿಯಾ ಮಸೀದಿಯನ್ನು ಶೇರ್‌ಖಾನನು ೧೫೮೫-೮೬ರಲ್ಲಿಕಟ್ಟಿಸಿದನು. ಇದರ ಸನಿಹದಲ್ಲಿಯೇ ಕಂಜರ್ ವಲಿಯ ದರ್ಗಾಇದೆ. ನಂತರದ ದಿನಗಳಲ್ಲಿ ಬೆಳಗಾವಿಯು ಮೊಗಲರ (ಇದನ್ನುಅವರು ಅಝಮ್‌ನಗರ ಎಂದು ಕರೆದರು)ಹಾಗೂ ಆಮೇಲೆಮರಾಠರ ಆಳ್ವಿಕೆಗೆ ಒಳಪಟ್ಟಿತ್ತು. ೧೮೧೮ರಲ್ಲಿ ಇದನ್ನು ಬ್ರಿಟಿಷರುವಶಪಡಿಸಿಕೊಂಡರು. ಬ್ರಿಟಿಷರು ಇಲ್ಲಿ ಕಂಟೋನ್ಮೆಂಟನ್ನು ಮಾಡಿಇದನ್ನು ಮರಾಠಾ ಲೈಟ್ ಇನ್‌ಫ್ಯಾಂಟ್ರಿಯ ಕೇಂದ್ರವನ್ನಾಗಿಸಿದರು.ಇಲ್ಲಿರುವ ಸೆಂಟ್ ಮೇರಿಸ್ ಚರ್ಚನ್ನು, ೧೮೬೯ರಲ್ಲಿ ಕಟ್ಟಲಾಯಿತು.ಇಲ್ಲಿಯ ಮಾರುತಿ ದೇವಾಲಯವು ಬಹಳ ವಿಸ್ತಾರವಾಗಿದ್ದುಅದರಲ್ಲಿ ಚಾಳುಕ್ಯರ ಕಾಲದ ಪ್ರಾಚ್ಯವಸ್ತುಗಳಿವೆ. ಕೋಟೆಯತುಂಬ ಚಾಳುಕ್ಯಶೈಲಿಯಕಂಬಗಳಿವೆ.

ಶಾಹಪುರದಲ್ಲಿರುವಚಾಲುಕ್ಯರ ಕಾಲದ ಕಪಿಲೇಶ್ವರ ದೇವಾಲಯವನ್ನು ಈಗಸಂಪೂರ್ಣ ಪುನರುತ್ಥಾನಗೊಳಿಸಲಾಗಿದೆ. ಇಲ್ಲಿ ೧೯೨೪ರಲ್ಲಿನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಗಾಂಧೀಜಿ ವಹಿಸಿದ್ದು, ಅದರ ನೆನಪಾಗಿ ಆಗ ನಿರ್ಮಿಸಿದ್ದಭಾವಿ ಹಾಗೂ ಸಮಾವೇಶ ನಡೆದ ಸ್ಥಳವನ್ನು ಸ್ಮಾರಕವನ್ನಾಗಿಸಂರಕ್ಷಿಸಲಾಗುತ್ತಿದ್ದು, ಗಾಂಧೀಜಿ ಬದುಕನ್ನು ಬಿಂಬಿಸುವ ಚಿತ್ರಕಲಾಸಂಗ್ರಹಾಲಯವಿಲ್ಲದೆ. ಬೆಳಗಾವಿಯ ಹೊರವಲಯದಲ್ಲಿರುವ ವಡಗಾಂವ-ಮಾಧವಪುರವು ಜೂನಿಯರ್ ಕುರಂದವಾಡ ಎಂಬಇನ್ನೊಂದು ರಾಜ್ಯಕ್ಕೆ ಸೇರಿತ್ತು. ವಡಗಾಂವ-ಮಾಧವಪುರದಉತ್ಖನನದಲ್ಲಿ ದೊರೆತಿರುವ ಪ್ರಾಚೀನ ನಗರದಅವಶೇಷಗಳಆಧಾರದ ಮೇಲೆ ಇದು ಶಾತವಾಹನರ ಕಾಲದಲ್ಲಿ ಪ್ರಾಚೀನಪಟ್ಟಣವಾಗಿತ್ತು ಎಂದು ಗುರುತಿಸಲಾಗಿದೆ. ಬುದ್ಧನ ಗಾರೆಯಮೂರ್ತಿಯೂ ಇಲ್ಲಿ ದೊರೆತಿದೆ. ಈ ಪಟ್ಟಣವುಸ್ವಾತ್ರಂತ್ಯ ಹೋರಾಟದಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.ಇಲ್ಲಿರುವ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನಲ್ಲಿರೋಗಗಳ ಬಗ್ಗೆ ಜ್ಞಾನ ನೀಡುವ ವಸ್ತುಸಂಗ್ರಹಾಲಯವಿದೆ

 

ಬಳ್ಳಿಗಾವಿ

ಪುರಾತನ ಬನವಾಸಿ-೧೨,೦೦೦ ಆಡಳಿತವಿಭಾಗದ ರಾಜಧಾನಿಯಾಗಿದ್ದ ಪ್ರಾಚೀನ ’ಬಳ್ಳಿಗಾಂವೆ’, ’ಬಳ್ಳಿಗಾವೆ’ಅಥವಾ’ಬಲಿಗ್ರಾಮ’ವು ತಾಲೂಕು ಕೇಂದ್ರ ಶಿಕಾರಿಪುರದಿಂದ೧೨ ಕಿ.ಮೀ. ಹಾಗೂ ಶಿರಾಳಕೊಪ್ಪದಿಂದ ಮೂರುಕಿ.ಮೀದೂರದಲ್ಲಿದೆ. ಇದು ಅಲ್ಲಮಪ್ರಭುವಿನ ಜನ್ಮಸ್ಥಳವಾಗಿದ್ದು, ಇಲ್ಲಿಯೇಚಾಲುಕ್ಯ ರಾಜ್ಯಪಾಲ ಕೌಶಿಕಅಥವಾ ಕೇಶಿಮಯ್ಯನ ಜೊತೆಅಕ್ಕಮಹಾದೇವಿಯ ವಿವಾಹವಾಯಿತೆಂಬ ಅಭಿಪ್ರಾಯವಿದೆ. ಇಲ್ಲಿಕೋಡಿಮಠ ಅಥವಾ ವಿದ್ಯೆಗೆ ಪ್ರಸಿದ್ಧರಾದ ಕಾಳಾಮುಖ ಶೈವರಕೇದಾರೇಶ್ವರ ಮಠವಿದೆ. ಅವರು ಇಲ್ಲಿ ವಿದ್ಯಾ ಕೇಂದ್ರವಾದಘಟಿಕಾಸ್ಥಾನ ಅಥವಾ ವಿಶ್ವವಿದ್ಯಾಲಯವನ್ನು ನಡೆಸುತ್ತಿದ್ದರು.ಈ ಸುಂದರ ಮಠವು ಮೂರು ಗುಡಿಗಳನ್ನು ಹೊಂದಿದ್ದು,ಸರೋವರದ ದಂಡೆಯ ಮೇಲಿದೆ. ಪಂಚತಂತ್ರ ಕಥನಶಿಲ್ಪಹಾಗೂ ಮಿಥುನಶಿಲ್ಪಗಳಿರುವ ತ್ರಿಪುರಾಂತಕ ದೇವಾಲಯವುಚಾಲುಕ್ಯರ ಇನ್ನೊಂದು ದೇವಾಲಯವಾಗಿದೆ. ಅಲ್ಲಮಪ್ರಭುವುಈ ದೇವಾಲಯಕ್ಕೆ ಸಂಬಂಧಿಸಿದ್ದವನೆಂದು ಹೇಳಲಾಗಿದೆ. ಕಾಲದಹಿಂದೆ ಇದು ಐದು ವಿವಿಧ ಮತಗಳ ಮಠಗಳನ್ನೊಳಗೊಂಡಿದ್ದಸಮದರ್ಶಿ ಪಟ್ಟಣವಾಗಿತ್ತು.

ಬಳ್ಳಿಗಾವಿಯಲ್ಲಿ ಬೌದ್ಧರ ತಾರಾಭಗವತಿ ಮೂರ್ತಿಯೂದೊರೆತಿದೆ. ಇಲ್ಲಿ ಬೌದ್ಧ ವಿಹಾರವೂ ಹಿಂದೆ ಇತ್ತು.ಚಾಲುಕ್ಯರಕಾಲದ ನಗರೇಶ್ವರ ದೇವಾಲಯ, ಪಂಚಲಿಂಗೇಶ್ವರ ದೇವಾಲಯಹಾಗೂ ವೀರಭದ್ರೇಶ್ವರ ದೇವಾಲಯಗಳು ಇಲ್ಲಿವೆ. ಇಲ್ಲಿಯಕಾಳಿಕಾ ದೇವಾಲಯವು ವಿಜಯನಗರ ಕಾಲದ್ದು. ಹೊಯ್ಸಳವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ಹಾಗೂ ದೇವಾಲಯವನ್ನುಕಟ್ಟಿದ ದಾಸೋಜ ಮತ್ತು ಚಾವಣ ಇಲ್ಲಿಯವರಾಗಿದ್ದರು. ಚಾಲುಕ್ಯಸೇನಾಧಿಪತಿಯೊಬ್ಬನು ತನ್ನ ವಿಜಯವನ್ನು ಸಾರಲು ಇಲ್ಲಿ’ಭೇರುಂಡ’ ಸ್ತಂಭವನ್ನು ಸ್ಥಾಪಿಸಿದನು. ಇಲ್ಲಿ ಪುರಾತ್ತತ್ವ ಇಲಾಖೆಯವಸ್ತುಸಂಗ್ರಹಾಲಯವಿದೆ. ಹಿಂದೆ ಬಳ್ಳಿಗಾವಿಯು ವಿದ್ಯಾರ್ಜನೆಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳ ಕೇಂದ್ರವಾಗಿತ್ತು.

 

ಬೆಂಗಳೂರು

೧೯೫೬ರಿಂದ ಬೆಂಗಳೂರು ಕರ್ನಾಟಕದರಾಜಧಾನಿಯಾಗಿದೆ. ಆದರೆ ಅದಕ್ಕೂ ಮೊದಲು ೧೮೩೧ರಲ್ಲಿಬ್ರಿಟಿಷ್‌ ಕಮಿಷನರರು ಮೈಸೂರು ರಾಜ್ಯದ ಆಡಳಿತವನ್ನುಮೈಸೂರು ರಾಜರಿಂದ ವಹಿಸಿಕೊಂಡ ಮೇಲೆ ಬೆಂಗಳೂರುರಾಜಧಾನಿಯಾಗಿತ್ತು. ಹಳೆಯ ಬೆಂಗಳೂರು ನಗರವು’ವೃಷಾಭಾವತಿ’ ನದಿಯ ದಂಡೆಯಮೇಲೆ ಇಮ್ಮಡಿಕೆಂಪೇಗೌಡನಿಂದಕಟ್ಟಲ್ಪಟ್ಟಿತ್ತು. ಇಲ್ಲಿರುವ ಒಂದು ಶಾಸನದ ಪ್ರಕಾರ ಈ ನದಿಯು ಬಸವನಗುಡಿಯಲ್ಲಿರುವದೊಡ್ಡಬಸವಣ್ಣನ ಪಾದದಲ್ಲಿ ಹುಟ್ಟುತ್ತದೆ.ಬೇಗೂರಿನ ಕ್ರಿ.ಶ. ಒಂಬತ್ತನೇ ಶತಮಾನದ ಒಂದು ಶಾಸನದಲ್ಲಿ ಬೆಂಗಳೂರು ಎಂಬ ಉಲ್ಲೇಖವಿದೆ. ಒಂಬತ್ತನೇ ಶತಮಾನದಈ ಶಾಸನದಲ್ಲಿ ನಾಗತ್ತರನ ಮನೆಮಗನ್ ತಿಪ್ಪ ಓರ್ವಣ ಸೆಟ್ಟಿ’ಬೆಂಗುಳೂರ’ ಕಾಳಗದೊಳ್ ಸತ್ತನ್ ಎಂದು ಉಲ್ಲೇಖಿಸಿದೆ.’ಬೆಂಗು’ ಎಂದರೆ ’ರಕ್ತಹೊನ್ನೆ’(ಬೆಂಗೆ ಮರ) ಎಂಬ ಸಸ್ಯ. ಎರಡನೇಕೆಂಪೇಗೌಡ ತಾನು ಸ್ಥಾಪಿಸಿದ ಹೊಸ ನಗರಕ್ಕೆ ಬೆಂಗಳೂರುಎಂದೇ ಹೆಸರಿಸಿದ. ನಂತರ ಆಂಗ್ಲರ ಪ್ರಭಾವದಿಂದಾಗಿ ಇದುಬ್ಯಾಂಗಳೂರ್ ಎಂದು ರೂಢಿಗೆ ಬಂದಿತು ಎಂಬ ಅಭಿಪ್ರಾಯವಿದೆ.

ಮೊದಲು ಇದು ವಿಜಯನಗರ ಅರಸರ ಸಾಮಂತರಾದಯಲಹಂಕ ನಾಡಪ್ರಭುಗಳ ರಾಜ್ಯಭಾರಕೇಂದ್ರವಾಗಿತ್ತು. ಇಲ್ಲಿಇವರು ಕಟ್ಟಿದ ಕೋಟೆ ಇದೆ. ಎರಡನೇ ಕೆಂಪೇಗೌಡನು ೧೫೩೭ರಲ್ಲಿವಿಜಯನಗರದಅರಸ ಅಚ್ಯುತರಾಯನ ಆದೇಶದ ಮೇರೆಗೆ ಇಲ್ಲಿಕೋಟೆ ಕಟ್ಟಿಸಿದನೆಂದು ಹೇಳಲಾಗಿದೆ.ಗವಿಪುರದಲ್ಲಿರುವ ಗಂಗಾಧರ ಗುಹಾಲಯವನ್ನು ಗಂಗರಕಾಲದಲ್ಲಿ ನಿರ್ಮಿಸಲಾಗಿದ್ದು, ಇದನ್ನು ವಿಜಯನಗರ ಅರಸರಕಾಲದಲ್ಲಿ ವಿಸ್ತಾರಗೊಳಿಸಲಾಗಿತ್ತು. ಬಸವನಗುಡಿಯಲ್ಲಿರುವಬೃಹತ್ತಾದ ಏಕಶಿಲಾ ಬಸವಣ್ಣನನ್ನು ಈ ಅರಸರೇಕೆತ್ತಿಸಿದರೆಂದುತಿಳಿದುಬರುತ್ತದೆ. ಪ್ರತೀ ವರ್ಷ ಕೊನೇ ಕಾರ್ತಿಕ ಸೋಮವಾರದೊಡ್ಡ ಬಸವಣ್ಣನ ಸನ್ನಿಧಿಯಲ್ಲಿ ’ಕಡಲೇಕಾಯಿ ಪರಿಷೆ’ ಎಂಬಬೃಹತ್ ಜಾತ್ರೆಯು ಮೂರು ದಿನಗಳ ಕಾಲ ಜರುಗುತ್ತದೆ. ಆಸಂದರ್ಭದಲ್ಲಿಸುಮಾರು ಒಂದು ಲಕ್ಷ ಜನ ಸೇರುತ್ತಾರೆ. ಇದೇಅರಸರ ಕಾಲದಲ್ಲಿ ಅಲಸೂರಿನ ಬಳಿ ಇರುವ ಸುಂದರವಾದಸೋಮೇಶ್ವರ ದೇವಾಲಯವನ್ನು ಕಟ್ಟಲಾಗಿದೆ. ವಿಜಯನಗರದಅರಸರು ಬೆಂಗಳೂರಿನಲ್ಲಿ ಬಹಳಷ್ಟು ಕೆರೆಗಳನ್ನು ಕಟ್ಟಿಸಿದ್ದು,ಹಲಸೂರು ಕೆರೆ, ಧರ್ಮಾಂಬುಧಿ ಕೆರೆ (ಈಗಿರುವ ಬಸ್ ನಿಲ್ದಾಣ),ಚೆನ್ನಾಂಬಾ ಕೆರೆ (ಈಗಿನ ಚೆನ್ನಮ್ಮನ ಕೆರೆ, ಬನಶಂಕರಿ ೨ ಹಂತ)ಮತ್ತು ಕೆಂಪಾಂಬುಧಿ ಕೆರೆ ಅವುಗಳಲ್ಲಿ ಕೆಲವು. ೧೬೩೭ರಲ್ಲಿವಿಜಯಪುರದ ಸೈನ್ಯ ಬೆಂಗಳೂರನ್ನು ಗೆದ್ದು, ಅದನ್ನು ಶಿವಾಜಿಯತಂದೆಯಾದ ಶಾಹಜಿಗೆ ಜಾಗೀರಾಗಿಕೊಟ್ಟಿತು. ೧೬೮೭ರವರೆಗೆಬೆಂಗಳೂರು ಶಾಹಜಿ ಹಾಗೂ ಅವನ ಮಗ ಏಕೋಜಿಯಅಧಿಪತ್ಯದಲ್ಲಿತ್ತು.೧೬೮೭ರಲ್ಲಿ ಮೊಗಲರ ಸೈನ್ಯ ಮೊಗಲ್ ಚಕ್ರವರ್ತಿಜಹಂಗೀರನ ಕಾಲದಲ್ಲಿ ಇದನ್ನು ವಶಪಡಿಸಿಕೊಂಡು ಚಿಕ್ಕದೇವರಾಯನಿಗೆ ಗೇಣಿಗೆಕೊಟ್ಟಿತು. ಚಿಕ್ಕದೇವರಾಯನುಇಲ್ಲಿ ವೆಂಕಟರಮಣ ದೇವಸ್ಥಾನ ಹಾಗೂ ಹಳೆಯಕೋಟೆಯಬಳಿಯಲ್ಲಿ ಇನ್ನೊಂದು ಹೊಸ ಕೋಟೆಯನ್ನು ಕಟ್ಟಸಿದನು.

ಕೆಂಪೇಗೌಡನ ಪರಿವಾರ ಹಾಗೂ ಮರಾಠರ ಕೈಯಲ್ಲಿ ವ್ಯಾಪಾರಹಾಗೂ ಕೈಗಾರಿಕೆಯಲ್ಲಿ ಸಾಕಷ್ಟು ಉನ್ನತಿಕಂಡಿದ್ದ ಬೆಂಗಳೂರು,ಚಿಕ್ಕದೇವರಾಯನ ಕಾಲದಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿತು.ಇವನು ತಮಿಳು ನಾಡಿನ ಬಾರಾಮಹಲಿನಿಂದ ನೇಯ್ಗೆಯವರನ್ನುಕರೆಸಿ ಇಲ್ಲಿಯೇ ಉಳಿಯುವಂತೆ ಮಾಡಿದ. ನಂತರದಲ್ಲಿಬೆಂಗಳೂರನ್ನು ಹೈದರ್‌ನಿಗೆ ಜಹಗೀರಾಗಿ ಕೊಡಲಾಯಿತು.ಮುಂದೆ ಹೈದರನು ಒಡೆಯರುಗಳಿಂದ ಅಧಿಕಾರವನ್ನುಕಸಿದುಕೊಂಡು, ಕೋಟೆಯನ್ನು ಗ್ರಾನೈಟ್ ಕಲ್ಲುಗಳಿಂದ ಇನ್ನಷ್ಟು ಬಲಪಡಿಸಿ ವಿಸ್ತರಿಸಿದನು. ಹೈದರನು ಅರಮನೆಯ ಹತ್ತಿರ ಪ್ರಸಿದ್ಧವಾದ ಸಸ್ಯಗಳಉದ್ಯಾನ ಲಾಲಬಾಗ್ ಅನ್ನು ರೂಪಿಸಿದನು. ನಂತರ ೧೮೯೮ರಲ್ಲಿ ಇಲ್ಲಿ ತೋಟಗಾರಿಕೆ ಇಲಾಖೆಯವರು ಇಂಗ್ಲೆಂಡಿನ ಕ್ರಿಸ್ಟಲ್ಪ್ಯಾಲೇಸ್‌ನ ಮಾದರಿಯಲ್ಲಿ ಆಕರ್ಷಕವಾದ ಗಾಜಿನ ಮನೆಯನ್ನುಕಟ್ಟಿಸಿದರು. ಇತ್ತೀಚೆಗೆ ಈ ಗಾಜಿನ ಮನೆಯನ್ನು ದುರಸ್ತಿಗೊಳಿಸಿಆಧುನೀಕರಿಸಿ ಫ್ರಾನ್ಸ್ ಮತ್ತು ಬೆಲ್ಜಿಯಂನಿಂದ ಆಮದುಮಾಡಿದ ವರ್ಣರಂಜಿತ ಗಾಜುಗಳಿಂದ ಅಲಂಕರಿಸಲಾಯಿತು.

ಈಗಲೂ (ನಿರ್ದೇಶಕರಾಗಿದ್ದ ಕ್ರುಂಬಿಗಲ್ ಕಾಲದಿಂದಲೂ)ವರ್ಷಕ್ಕೊಮ್ಮೆ ಗಣರಾಜ್ಯೋತ್ಸವ ಸಂದರ್ಭದಲ್ಲಿಹಾಗೂವಿಶೇಷ ಸಂದರ್ಭಗಳಲ್ಲಿ ಈ ಗಾಜಿನ ಮನೆಯಲ್ಲಿ ಆಕರ್ಷಕಹೂ ಮತ್ತು ಸಸ್ಯ ಸಂಪತ್ತಿನ ಪ್ರದರ್ಶನಜರುಗುತ್ತದೆ. ಆವೇಳೆಯಲ್ಲಿ ಸಹಸ್ರಾರು ಜನ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ.೧೭೯೧ರಲ್ಲಿ ಲಾರ್ಡ್ಕಾರ್ನವಾಲಿಸ್‌ನ ನೇತೃತ್ವದಲ್ಲಿ ಬ್ರಿಟೀಷ ಸೈನ್ಯ ಬೆಂಗಳೂರನ್ನು ವಶಪಡಿಸಿಕೊಂಡು, ಟಿಪ್ಪುವಿನೊಂದಿಗೆಒಪ್ಪಂದಕ್ಕೆ ಸಹಿ ಮಾಡಿಕೊಂಡು, ಅವನಿಗೆ ಹಿಂದಿರುಗಿಸಿತು. ಟಿಪ್ಪುಮೊದಲು ಕೋಟೆಯನ್ನು ಕೆಡವಿಸಿದನು.ಯಾಕೆಂದರೆ, ಅದುಅವನಿಗಿಂತ ವೈರಿಗಳಿಗೇ ಹೆಚ್ಚು ಅನುಕೂಲಕರವಾಗಿತ್ತು. ಹೈದರನಕಾಲದಲ್ಲಿ ಬೆಂಗಳೂರು ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಗಿಬೆಳೆದು ಶ್ರೀರಂಗಪಟ್ಟಣ ಆಸ್ಥಾನದ ಶ್ರೀಮಂತಿಕೆಯ ಐಶಾರಾಮು ಅಗತ್ಯಗಳನ್ನು ಪೂರೈಸುತ್ತಿತ್ತು. ಆದರೆ ಟಿಪ್ಪುವಿನ ಕಾಲಕ್ಕೆ ಇದರವ್ಯಾಪಾರವೂ ಕುಗ್ಗಿತು. ಟಿಪ್ಪುವನ್ನು ಸೋಲಿಸಿದ ಬ್ರಿಟೀಷರು೧೭೯೯ರಲ್ಲಿ ಇದನ್ನು ಮೈಸೂರಿನ ಯುವರಾಜನಿಗೆ ಒಪ್ಪಿಸಿದರು.

ದಿವಾನ ಪೂರ್ಣಯ್ಯನವರು ಹಾಳು ಬಿದ್ದ ಕೋಟೆಯನ್ನುಪುನಃ ಕಟ್ಟಿಸಿದರು. ೧೮೦೯ರಲ್ಲಿ ಬ್ರಿಟಿಷರುಹಲಸೂರಿನಲ್ಲಿತಮ್ಮ ಸೈನ್ಯವನ್ನು ಇರಿಸಿದರು. ಐರೋಪ್ಯರ ಜೀವನ ಶೈಲಿಹಾಗೂ ಅವರ ಆಧುನಿಕ ಚಿಂತನೆಗಳಿಂದಾಗಿ ಬೆಂಗಳೂರುಕಂಟೋನ್ಮೆಂಟ್ ತಲೆಎತ್ತಿತು. ಅಠಾರಾ ಕಚೇರಿ, ಹೈಕೋರ್ಟ್,ಸೆಂಟ್ರಲ್ ಕಾಲೇಜ್ ಹಾಗೂ ವಸ್ತುಸಂಗ್ರಹಾಲಯ ಕಟ್ಟಡಗಳನ್ನುಐರೋಪ್ಯ ಪುನರುಜ್ಜೀವನ ಯುಗದ ಓರಿಯಂಟಲ್ ಶೈಲಿಯಲ್ಲಿಕಟ್ಟಲಾಯಿತು. ಇಂಗ್ಲೀಷ್‌ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಜಾರಿಗೆ ತರಲಾಯಿತು. ಈಅವಧಿಯಲ್ಲಿ ಬೆಂಗಳೂರಿನಲ್ಲಿ ಬಹಳಷ್ಟು ಚರ್ಚ್‌ಗಳನ್ನು ಯೂರೋಪಿನ ಪುನರುಜ್ಜೀವನ ಯುಗದಶೈಲಿಯಲ್ಲಿ ಕಟ್ಟಲಾಯಿತು. ಬಿನ್ನಿಮಿಲ್, ಹತ್ತಿಗಿರಣಿ, ಇತರೆಆಧುನಿಕ ಬಟ್ಟೆ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ೮೬೨ರಲ್ಲಿಮುನಿಸಿಪಾಲಿಟಿಯನ್ನು ಜಾರಿಗೆ ತರಲಾಯಿತು. ಬೆಂಗಳೂರುಹಾಗೂ ಕಂಟೋನ್ಮೆಂಟ್ ಪ್ರದೇಶಗಳಿಗೆ ಸಿವಿಲ್ ಹಾಗೂಮಿಲಟಿರಿ ಸ್ಟೇಷನ್ ಎಂಬ ಪ್ರತ್ಯೇಕ ಮುನಿಸಿಪಾಲಿಟಿಗಳಿದ್ದವು.ಆದರೆ ೧೯೪೯ರಲ್ಲಿ ಎರಡನ್ನು ಒಂದುಗೂಡಿಸಿ ಬೆಂಗಳೂರು ಸಿಟಿಕಾರ್ಪೋರೇಷನ್ನಾಗಿ ಮಾಡಲಾಯಿತು. ಸ್ವಾತಂತ್ರ್ಯಾನಂತರಕೇಂದ್ರ ಸರ್ಕಾರವು ಹಲವು ಕಾರ್ಖಾನೆಗಳನ್ನು ಇಲ್ಲಿ ತೆರೆಯಿತು.ಇಂದು ಬೆಂಗಳೂರು ನಗರದ ಭಾಗವೇ ಆಗಿರುವ ಬೇಗೂರು,ಮಡಿವಾಳ (ತಾವರೆಕೆರೆ), ಕಾಡುಗೋಡಿ, ಹೆಸರುಘಟ್ಟ ಹಾಗೂದೊಮ್ಮಲೂರುಗಳಲ್ಲಿ ಹಲವು ಪ್ರಾಚೀನ ದೇವಾಲಯಗಳಿವೆ.

ಇವುಗಳ ಪೈಕಿ ಕಾಡುಗೋಡಿಯ ಶೈವ ದೇವಾಲಯವು ಗಂಗರಕಾಲದಲ್ಲಿ ರಚನೆಯಾಗಿದ್ದು ವೃತ್ತಾಕಾರದನಾಲ್ಕು ಸ್ಥಂಭಗಳನ್ನುನವರಂಗದಲ್ಲಿ ಹೊಂದಿದೆ. ಅದೇರೀತಿ ದೊಮ್ಮಲೂರಿನಚೊಕ್ಕನಾಥ ದೇವಾಲಯವೂ ಸಹಇದೇ ಕಾಲಕ್ಕೆ ಸೇರಿದ್ದು ನಂತರ ಚೋಳರ ಆಳ್ವಿಕೆಯಲ್ಲಿ ದುರಸ್ತಿಗೊಂಡಿರುವುದು ವ್ಯಕ್ತವಾಗುತ್ತದೆ.ಗಂಗರ ಕಾಲದಲ್ಲಿ ನಿರ್ಮಿತವಾದ ಗವಿಗಂಗಾಧರ ಗುಹಾಲಯಮತ್ತು ಬಸವನಗುಡಿಯಲ್ಲಿರುವ ಏಕಶಿಲಾ ನಂದಿ ಹಾಗೂ೧೬೦೦ರಲ್ಲಿ ಕಟ್ಟಿದ ಅವೆನ್ಯೂ ರಸ್ತೆಯಲ್ಲಿರುವ ರಂಗನಾಥಸ್ವಾಮಿದೇವಾಲಯ, ಹಲಸೂರಿನಲ್ಲಿರುವಸೋಮೇಶ್ವರ ದೇವಾಲಯ,ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಗಳುನಗರದ ಇತರೇ ಕೆಲವು ಗಮನಾರ್ಹ ದೇವಾಲಯಗಳು. ಇದರಜೊತೆಗೆ ಹಲವು ಆಧುನಿಕ ದೇವಾಲಯಗಳು ನಂತರ ಕಟ್ಟಲ್ಪಟ್ಟವು. ಮೂರು ಪಂಗಡದವರ, ಧರ್ಮರಾಯ ದೇವಸ್ಥಾನದಲ್ಲಿಚೈತ್ರಹುಣ್ಣಿಮೆಯಂದು ಕರಗ ಉತ್ಸವವನ್ನುಆಚರಿಸಲಾಗುತ್ತದೆ.

ಕಾಡುಗೋಡಿಯಲ್ಲಿರುವ ಸತ್ಯಸಾಯಿಬಾಬಾ ಆಶ್ರಮ (ಬೃಂದಾವನಎಂದು ಕರೆಯಲ್ಪಡುವ) ಎರಡು ದಶಕಗಳ ಹಿಂದೆಯೇ ಕಟ್ಟಲ್ಪಟ್ಟಿತು.ಇಲ್ಲಿ, ಬಹಳ ದೊಡ್ಡದಾದ ಪ್ರಾರ್ಥನಾ ಮಂದಿರವಿದೆ. ಈ ಆಶ್ರಮಸಾಕಷ್ಟು ಶಿಕ್ಷಣಸಂಸ್ಥೆಗಳನ್ನು ನಡೆಸುತ್ತಿದ್ದು. ಬೆಂಗಳೂರಿನ ಹೊರವಲಯದ ಕೆಂಚೇನಹಳ್ಳಿ ಬಳಿ ಇರುವ’ಓಂಕಾರಬೆಟ್ಟ’ದಲ್ಲಿ,ದ್ವಾದಶ ಜ್ಯೋತಿರ್ಲಿಂಗ ದೇವಾಲಯಗಳಮಾದರಿಯಲ್ಲಿಯೇ ಸುಂದರ ದೇವಾಲಯಗಳನ್ನು ನಿರ್ಮಿಸಲಾಗಿದ್ದು ಸಾಕಷ್ಟು ಯಾತ್ರಿಕರನ್ನು ಆಕರ್ಷಿಸುತ್ತಿದೆ. ಇಲ್ಲಿಯಗುಡ್ಡದ ಮೇಲೆ ಬೃಹತ್ತಾದ ಆಲದಮರವಿದ್ದು ಸುತ್ತಲೂಸರ್ವಧರ್ಮ ಮಂಟಪಗಳನ್ನು ನಿರ್ಮಿಸಲಾಗಿದೆ. ಇವನ್ನುಅವರವರ ಧರ್ಮಕ್ಕೆ ಅನುಸಾರವಾಗಿ ಕಟ್ಟಲಾಗಿದೆ. ಪ್ರತೀ ವರ್ಷವು ಸ್ವಾಮೀಜಿಯ ಹುಟ್ಟಿದ ದಿನದಂದು, ಸಾವಿರಾರು ಭಕ್ತರು ಇಲ್ಲಿಗೆಬರುತ್ತಾರೆ.

ಎಚ್.ಎಮ್.ಟಿ.ಕಂಪನಿಯವರು ಇಲ್ಲಿ ಬೃಹತ್ತಾದ,ತಾಸಿಗೊಮ್ಮೆ ದೇವಸ್ಥಾನದ ಗಂಟೆ ಹಾಗೂ ಶಂಖವನ್ನು ಊದುವಎಲೆಕ್ಟ್ರಾನಿಕ್ ಗಡಿಯಾರವನ್ನು ಸ್ಥಾಪಿಸಿದ್ದಾರೆ. ಇದರ ಶಬ್ದ ೧-೫ಕಿ.ಮೀ. ದೂರದವರೆಗೂ ಕೇಳಿಸುತ್ತದೆ. ನಗರದಿಂದ ಕೇವಲ, ೧೩ಕಿ.ಮೀ. ದೂರವಿರುವ ಇದು, ಪ್ರಶಾಂತತೆಯನ್ನು ಬಯಸುವಜನರಿಗೆ ಮೆಚ್ಚಿನ ತಾಣವಾಗಿದೆ. ಕನಕಪುರ ರಸ್ತೆಯಲ್ಲಿರುವ’ಆರ್ಟ್ ಆಫ್ ಲಿವಿಂಗ್’ ಆಶ್ರಮವನ್ನು ರವಿಶಂಕರ್ ಗುರೂಜಿಅವರು ಇತ್ತೀಚೆಗೆ ಕಟ್ಟಿಸಿದ್ದಾರೆ. ಇಲ್ಲಿ ಭಜನೆ ಹಾಗೂ ಆರ್ಟಆಫ್ ಲಿವಿಂಗ್‌ನ ಕೋರ್ಸುಗಳು ವಾರದಶಿಬಿರಗಳಲ್ಲಿನಡೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಭಾರತದ ಇತರಭಾಗಗಳಿಂದಲೂ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.

ಮೈಸೂರು ರಸ್ತೆಯಲ್ಲಿರುವ ಕೆಂಚೇನಹಳ್ಳಿಯಲ್ಲಿ ಬೃಹತ್ತಾದದ್ರಾವಿಡ ಶೈಲಿಯ ರಾಜರಾಜೇಶ್ವರಿ ದೇವಸ್ಥಾನ ಹಾಗೂಬನ್ನೇರುಘಟ್ಟ ರಸ್ತೆಯಲ್ಲಿರುವ ಮೀನಾಕ್ಷಿ ದೇವಸ್ಥಾನಗಳುದಶಕಗಳ ಹಿಂದೆಯೇ ಕಟ್ಟಲ್ಪಟ್ಟಿದ್ದು, ಸಾಕಷ್ಟು ಜನರನ್ನುಆಕರ್ಷಿಸುತ್ತಿವೆ. ಅಮೃತಾನಂದಮಯಿ ಆಶ್ರಮವು ತನ್ನ ಒಂದುಶಾಖೆಯನ್ನು ಕೆಂಗೇರಿ ಉಪನಗರದ ಸ್ಥಾಪಿಸಿದ್ದು ಸಾವಿರಾರುಭಕ್ತರು ಇಲ್ಲಿಗೂ ಬರುತ್ತಾರೆ.ನಗರದ ಸಿದ್ಧಯ್ಯ ರಸ್ತೆಯಲ್ಲಿರುವಶ್ರೀ ಕೊಳದಮಠ ಸಾಕಷ್ಟು ಜನಹಿತ ಕಾರ್ಯಗಳನ್ನು ಹಲವುದಶಕಗಳಿಂದಲೇ ಮಾಡುತ್ತಾ ಬಂದಿದೆ. ಸಣ್ಣ ಗುಡ್ಡದ ಮೇಲಿರುವ ’ಇಸ್ಕಾನ್’ ದೇವಾಲಯವು ತುಂಬಾ ಆಕರ್ಷನೀಯವಾಗಿದೆ. ಇದುರಾಜಾಜಿನಗರದ ಪಶ್ಚಿಮ ಕಾರ್ಡ್‌ರಸ್ತೆಯಲ್ಲಿಏಳು ಎಕರೆಗಿಂತಲೂವಿಸ್ತಾರವಾದ ಜಾಗದಲ್ಲಿದ್ದು, ಉದ್ಯಾನನಗರಿಯ ಪ್ರಮುಖ ಪ್ರವಾಸಿಕೇಂದ್ರವಾಗಿದೆ. ಈ ದೇವಾಲಯ ಸಂಕೀರ್ಣವನ್ನು ಎಷ್ಟು ಚೆನ್ನಾಗಿರೂಪಿಸಿದ್ದಾರೆಂದರೆ ರಾತ್ರಿ ಹೊತ್ತು ಇಡೀ ಗುಡ್ಡವೇ ಬೆಳಗುತ್ತಿರುವ ಹಾಗೆ ಕಾಣುತ್ತದೆ. ಇದು ನೈಸರ್ಗಿಕವಾಗಿ ಎತ್ತರದಪ್ರದೇಶದಲ್ಲಿ ಇರುವುದರಿಂದ, ಇದನ್ನು ಬಹಳ ಸುಂದರವಾಗಿಹಾಗೂ ಆರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಬೆಳಿಗ್ಗೆ,ಮಧ್ಯಾಹ್ನ ಹಾಗೂ ಸಂಜೆ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಕೆಂಗೇರಿ ಗ್ರಾಮದ ಪಕ್ಕದಲ್ಲಿರುವ ರಾಮೋಹಳ್ಳಿಯಲ್ಲಿದೊಡ್ಡ ಆಲದಮರದ ಸಮೀಪ ಇರುವ ಬೃಹತ್’ಮುಕ್ತಿನಾಗ’ದೇವಾಲಯವು ಚಿಕ್ಕಬೆಟ್ಟದ ಮೇಲೆ ಸುಂದರ ಪರಿಸರದಲ್ಲಿನಿರ್ಮಾಣಗೊಂಡಿದೆ. ಪಾರಂಪರಿಕವಾಗಿ ಈ ಸ್ಥಳವನ್ನುಜುಂಜಪ್ಪನ ಬಯಲು, ಎಂದು ಕರೆಯಲಾಗುತ್ತಿದ್ದು, ಹಾವುಗಳುಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದವೆಂದು ನಂಬಲಾಗಿದೆ.ರಾಮೋಹಳ್ಳಿಯು ಬೆಂಗಳೂರು-ಮೈಸೂರು ಹಾದಿಯಲ್ಲಿಬೆಂಗಳೂರಿನಿಂದ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಈಸ್ಥಳವನ್ನು ತಲುಪಲು (ಹೆದ್ದಾರಿಯಿಂದ ಐದು ಕಿ.ಮಿ ದೂರದಲ್ಲಿ)ಕೆಂಗೇರಿ ದಾಟಿದ ತರುವಾಯ ಕುಂಬಳಗೋಡು ಗ್ರಾಮದಸಮೀಪ ಕವಲು ಹಾದಿ ಹಿಡಿಯ ಬೇಕಾಗುತ್ತದೆ. ರಾಮೋಹಳ್ಳಿಬಸ್ ನಿಲ್ದಾಣದಿಂದ ಇದು ಕೇವಲ ಒಂದು ಕಿ.ಮೀ ದೂರದಲ್ಲಿದೆ.ಸ್ಥಳದ ಪಾವಿತ್ರ್ಯಕ್ಕೆ ತಕ್ಕಂತೆ ಮುಕ್ತಿನಾಗ ದೇವಾಲಯದ ನಿರ್ಮಾಣನಡೆದಿದೆ. ಗರ್ಭಗೃಹದಲ್ಲಿ ಈಗ ಏಳು ಹೆಡೆಗಳುಳ್ಳ, ಎತ್ತರವಾದನಾಗಪ್ರತಿಮೆಯನ್ನು ಪ್ರತಿಷ್ಟಾಪಿಸಲಾಗಿದೆ. ಗರ್ಭಗೃಹದ ಎದುರಿಗೆಇರುವ ನವರಂಗವು ನಿರ್ಮಾಣ ಹಂತದಲ್ಲಿದೆ. ಇದನ್ನು ಶುದ್ಧದ್ರಾವಿಡ ಶೈಲಿಯಲ್ಲಿ ಗ್ರಾನೈಟ್ ಶಿಲೆಯನ್ನು ಬಳಸಿ ನಿರ್ಮಿಸಿದ ೨೪ಕಂಭಗಳೊಂದಿಗೆನಿರ್ಮಿಸಲು ಯೋಜಿಸಲಾಗಿದೆ. ದೇವಾಲಯದಸುತ್ತ ಪಾರ್ವತಿದೇವಿ, ತ್ರಯಂಬಕೇಶ್ವರ, ಲಕ್ಷ್ಮೀನರಸಿಂಹ,ಪಟ್ಲದಮ್ಮಮುಂತಾದ ಚಿಕ್ಕ ಗುಡಿಗಳಿವೆ.

ಮುಸಲ್ಮಾನರಿಗೆ ೧೬೮೭ರಲ್ಲಿ ಮೊಘಲ ಅಧಿಕಾರಿಯೊಬ್ಬಕಟ್ಟಿಸಿದ ಪ್ರಾಚೀನವೆನಿಸಿದ ತಾರಾಮಂಡಲ ಸಂಗೀನ ಜಾಮಿಯಾಮಸೀದಿ ಈ ನಗರದಲ್ಲಿದೆ. ಕುಂಬಾರಪೇಟೆಯಲ್ಲಿರುವ ಇಬ್ರಾಹಿಂಶಾಹ ಸಾಹಿಬ್ ಮಸೀದಿಯನ್ನು ೧೭೬೧ರಲ್ಲಿ ಕಟ್ಟಲಾಯಿತು. ಸಿಟಿಮಾರ್ಕೆಟ್‌ನಲ್ಲಿರುವ ಜಾಮಿಯಾ ಮಸೀದಿಯನ್ನು, ೧೯೪೦ರಲ್ಲಿಬಿಳಿ ಮಾರ್ಬಲ್‌ನಿಂದ ಕಟ್ಟಲಾಗಿದೆ. ಇದು, ಬಹಳ ದೊಡ್ಡದಿದ್ದುಹಾಗೂ ಕುತೂಹಲಕಾರಿಯಾದ ಆಧುನಿಕ ಕಟ್ಟಡವಾಗಿದೆ. ಕಾಟನ್ಪೇಟೆಯಲ್ಲಿರುವ ಮಸ್ತಾನಸಾಬ್-ವಲಿ ದರ್ಗಾವನ್ನು ಹಿಂದೂಹಾಗೂ ಮುಸ್ಲಿಮರು ಗೌರವಿಸುತ್ತಾರೆ. ಶಿವಾಜಿನಗರದಲ್ಲಿರುವ ಸೈಂಟ್ ಮೇರಿ ಬ್ಯಾಸೆಲಿಕಾಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಚರ್ಚ್ ಮೂಲತಃಇದನ್ನು ೧೬ನೇ ಶತಮಾನದಲ್ಲಿಯೇ ಕಟ್ಟಲಾಗಿತ್ತು, ಅದು ಈಗಿನಆಕಾರವನ್ನು ೧೮೩೨ರಲ್ಲಿ ಪಡೆಯಿತು.ಮಹಾತ್ಮಗಾಂಧಿ ರಸ್ತೆಯಲ್ಲಿಆಂಗ್ಲರ ಟ್ರಿನಿಟಿ ಚರ್ಚ್ ಇದೆ. ಅದೇ ರಸ್ತೆಯಲ್ಲಿ ಸೇಂಟ್ ಮಾರ್ಕ್ಸ್ಕ್ಯಾಥೆಡ್ರಲ್ ಇದೆ. ಸೈಂಟ್ ಪ್ಯಾಟ್ರಿಕ್ ಇಗರ್ಜಿಯು ಮೊದಲಿಗೆಐರಿಶ್ ಕ್ಯಾಥೊಲಿಕ್ ಸೈನಿಕರಿಗಾಗಿ ನಿರ್ಮಾಣವಾಗಿತ್ತು. ಕಬ್ಬನ್ ರಸ್ತೆಯಲ್ಲಿರುವ ಸೈಂಟ್ ಜ಼್ಸೇವಿಯರರ್ಸ್‌ ಕ್ಯಾಥೋಲಿಕ್ ಕ್ಯಾಥೆಡ್ರೆಲ್ದೊಡ್ಡದಾದ ಗ್ರಾನೈಟ್ ಕಟ್ಟಡವಾಗಿದೆ. ಹಡ್ಸನ್ ಮೆಮೋರಿಯಲ್ಚರ್ಚನ್ನು ಲಂಡನ್ ಮಿಶನ್ ಕಟ್ಟಿಸಿತು.ನಗರದಲ್ಲಿ ಸಾಕಷ್ಟು ಜೈನಬಸದಿಗಳಿವೆ.ಅವುಗಳಲ್ಲಿಗಾಂಧಿನಗರ ಹಾಗೂ ಜಯನಗರದಲ್ಲಿರುವ ಬಸದಿಗಳುಆಧುನಿಕ ಕಟ್ಟಡಗಳಾದರೂಕುತೂಹಲಕಾರಿಯಾಗಿವೆ. ಸಿಖ್ಖರಿಗೆಹಲಸೂರಿನಲ್ಲಿ ಗುರುದ್ವಾರವಿದೆ. ಹಾಗೂ ಪಾರ್ಸಿಗಳಿಗೆ ಅಗ್ನಿದೇವಾಲಯವಿದೆ.

ಲಾಲ್‌ಬಾಗ್ ಹಾಗೂ ಕಬ್ಬನ್‌ಪಾರ್ಕ್ಬೆಂಗಳೂರಿನ ಸುಂದರವಾದ ಉದ್ಯಾನವನಗಳು ಮಾತ್ರವಲ್ಲದೇಬೆಂಗಳೂರಿನ ಹೆಮ್ಮೆಯೂ ಆಗಿವೆ. ವಿಧಾನ ಸೌಧವು ದ್ರಾವಿಡಶೈಲಿಯಲ್ಲಿ ಗ್ರಾನೈಟಿನಿಂದ ಕಟ್ಟಿದ ಸುಂದರವಾದ ಬೃಹತ್ಕಟ್ಟಡವಾಗಿದೆ. ಇದರ ಪಕ್ಕದಲ್ಲಿ ’ವಿಕಾಸ ಸೌಧ’ ಎಂಬ ದ್ರಾವಿಡಶೈಲಿಯನ್ನೇ ಹೋಲುವ ಕಲ್ಲಿನ ಕಟ್ಟಡವನ್ನು ಸರಕಾರವು ಇತ್ತೀಚೆಗೆನಿರ್ಮಿಸಿದೆ. ಟಿಪ್ಪುವಿನ ಅರಮನೆಯು ಮರದ ಕಟ್ಟಡವಾಗಿದ್ದುಬೆಂಗಳೂರು ಅರಮನೆಯ ಮಾದರಿಯಲ್ಲಿ ಕಟ್ಟಲಾಗಿದೆ.ಇದಲ್ಲದೇ ಬೆಂಗಳೂರಿನಲ್ಲಿ ಸರಕಾರಿ ವಸ್ತುಸಂಗ್ರಹಾಲಯ,ಸರ್ ಎಮ್. ವಿಶ್ವೇಶ್ವರಯ್ಯ ಕೈಗಾರಿಕಾ ವಸ್ತುಸಂಗ್ರಹಾಲಯಮತ್ತು ಜವಾಹರಲಾಲ್ ಪ್ಲಾನೆಟೋರಿಯಮ್ ಇದೆ. ಬೆಂಗಳೂರುನಗರವು ರಸ್ತೆಗಳಿಂದ, ರೈಲುಗಳಿಂದ ಹಾಗು ವಿಮಾನಗಳಿಂದಸಮರ್ಪಕವಾಗಿ ಸಂಪರ್ಕಹೊಂದಿದ್ದು ಪ್ರವಾಸಿಗರು ಇಲ್ಲಿಗೆದೇಶವಿದೇಶಗಳಿಂದ ಬರುತ್ತಾರೆ. ಬೆಂಗಳೂರು ಅತ್ಯುತ್ತಮವಾದವಿದ್ಯಾಸಂಸ್ಥೆಗಳನ್ನು ಹೊಂದಿದ್ದು ದೇಶದ ಅತ್ಯುನ್ನತವಾದಕಾಲೇಜುಗಳು, ವಿಶ್ವವಿದ್ಯಾಲಯಗಳು ಇಲ್ಲಿವೆ. ಬೆಂಗಳೂರುವಿಶ್ವವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಕ್ಷಿಣವಲಯ ಕಛೇರಿ, ಜ್ಞಾನಭಾರತಿ, ಕೃಷಿವಿಶ್ವವಿದ್ಯಾಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಇನ್‌ಸ್ಟಿಟ್ಯೂಟ್ ಫಾರ್ ಆಸ್ಟ್ರೋಫಿಸಿಕ್ಸ್,ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಇನ್‌ಸ್ಟಿಟ್ಯೂಟ್ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್,

ನ್ಯಾಷನಲ್ ಲಾ ಸ್ಕೂಲ್, ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ಇಂಗ್ಲೀಷ್‌, ನ್ಯಾಷನಲ್ ಏರೋನಿಟಿಕಲ್ಲ್ಯಾಬೋರೇಟರಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ಇನ್‌ಫರ್ಮೇಶನ್ ಟೆಕ್ನಾಲಜಿ, ಭಾರತೀಯ ಬಾಹ್ಯಕಾಶಸಂಸ್ಥೆ ಮತ್ತು ಇನಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ಇವು ಕೆಲವು ಪ್ರಮುಖವಾದವುಗಳು. ಇಲ್ಲಿ ಟ್ರ್ಯಾಕ್ಟರ್,ರೈಲ್ವೆ ಕೋಚ್, ಏರೋಪ್ಲೇನ್, ರೇಷ್ಮೆ ಸೀರೆ ಹಾಗೂ ಗಂಧದಮೂರ್ತಿಗಳನ್ನು ತಯಾರಿಸುವಕಾರ್ಖಾನೆಗಳೂ ಇವೆ. ಕಂಪ್ಯೂಟರ್ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲ್ಲಿ ಮಾಡಿರುವ ಅದ್ವಿತೀಯ ಸಾಧನೆಗಾಗಿ ಇದನ್ನುಇಲೆಕ್ಟ್ರಾನಿಕ್ ಸಿಟಿ ಹಾಗೂ ಸಿಲಿಕಾನ್ ಸಿಟಿ ಎಂದು ವಿಶೇಷವಾಗಿಕರೆಯಲಾಗುತ್ತದೆ. ಇಂಟರ್‌ನ್ಯಾಷನಲ್‌ ಟೆಕ್ನಲಾಜಿಕಲ್ ಪಾರ್ಕ್ಬೆಂಗಳೂರು ನಗರದಿಂದ ೧೮ ಕಿ.ಮೀ. ಹಾಗೂವಿಮಾನ ನಿಲ್ದಾಣದಿಂದ ೧೨ ಕಿ.ಮಿ. ದೂರದ ವೈಟ್‌ಫೀಲ್ಡ್‌ನಲ್ಲಿ೨೮ ಹೆಕ್ಟೇರ್ ಪ್ರದೇಶದಲ್ಲಿ ಇಂಟರ್‌ನ್ಯಾಶನಲ್ ಟೆಕ್ಪಾರ್ಕ್ಇದೆ. ಇಲ್ಲಿ ಪ್ರಮುಖವಾದ ನಾಲ್ಕು ಕಟ್ಟಡಗಳಿವೆ. ’ಡಿಸ್ಕವರರ್’,’ಇನೋವೇಟರ್’, ’ಕ್ರೀಯೇಟರ್’ ಹಾಗು’ಎಕ್ಸ್‌ಪ್ಲೋರರ್’ ಇವು೧.೬ ಮಿಲಿಯ ಚದರ ಅಡಿಯಷ್ಟು ವಿಸ್ತೀರ್ಣವಿದ್ದು, ಕಚೇರಿ, ಉತ್ಪನ್ನ,ವಾಣಿಜ್ಯ ಮತ್ತು ಸಾಮಾನ್ಯ ವಹಿವಾಟುಗಳಿಗಾಗಿ ನಿಗದಿತವಾಗಿದೆ.ಬೆಂಗಳೂರಿನ ಐಟಿಕಾರಿಡಾರ್ ಇಲೆಕ್ಟ್ರಾನಿಕ್ ಸಿಟಿಯಿಂದ ಹಳೆಮದ್ರಾಸ್ ರಸ್ತೆಯವರೆಗೆಹರಡಿದ್ದು, ನೂರಾರುಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ಕಂಪನಿಗಳಿವೆ. ಜಗತ್ತಿನ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆಇದೊಂದು ಉತ್ತಮ ಪ್ರವಾಸೀ ಕೇಂದ್ರವಾಗಿದೆ. ಪ್ರಸ್ತುತ ಈ ಮಹಾನಗರವು ಅಂತರಾಷ್ಟ್ರೀಯ ಮಟ್ಟದಲ್ಲಿ’ಸಿಲಿಕಾನ್‌ನಗರ’ವೆಂದು ಜನಪ್ರಿಯತೆಯನ್ನು ಪಡೆದಿದೆ,ಜೊತೆಗೆಹಲವಾರು ಮೂಲಭೂತ ಸೌಕರ್ಯಗಳನ್ನು ವಿಶ್ವಮಟ್ಟದತಾಂತ್ರಿಕತೆಯೊಂದಿಗೆ ತೀವ್ರಗತಿಯಲ್ಲಿ ಒದಗಿಸಲಾಗುತ್ತಿದೆ.ಮಂಗಳಯಾನ’ಯೋಜನೆಯಡಿ ನವೆಂಬರ್ ಐದು ೨೦೧೩ರಲ್ಲಿ ಇಸ್ರೊ ಉಡಾವಣೆಮಾಡಿದ ಕೃತಕಉಪಗ್ರಹವು ೨೪-೯-೧೪ ರಿಂದ ಮಂಗಳ ಗೃಹದಸುತ್ತ ಪ್ರದಕ್ಷಿಣೆ ಹಾಕುತ್ತಿದ್ದು, ವಿಶ್ವದಲ್ಲಿ ಈ ಸಾಧನೆಗೈದ ರಾಷ್ಟ್ರಗಳಲ್ಲಿನಾಲ್ಕನೆಯದಾಗಿದೆ. ಈ ಯೋಜನೆ ಮಾಡಿದ ೪೫೦ ಕೋಟಿ ರೂ.ಅತ್ಯಂತ ಕಡಿಮೆ ವೆಚ್ಚ ಇದು ಒಂದು ಮೈಲಿಗಲ್ಲು ಆಗಿದೆ. ಇದನ್ನುಬೆಂಗಳೂರು ಇಸ್ರೋ ಕೇಂದ್ರದಿಂದ ನಿರ್ವಹಿಸಲಾಗುತ್ತಿದೆ.

 

 

ಬೇಲೂರು

ಹಾಸನ ಜಿಲ್ಲೆಯಲ್ಲಿರುವ ಬೇಲೂರು (ಬೆಂಗಳೂರಿನಿಂದ ೨೨೨ ಕಿ.ಮೀ.) ತಾಲೂಕು ಕೇಂದ್ರವಾಗಿದ್ದು ಹೊಯ್ಸಳರ ಕಾಲದ ದೇವಾಲಯ ಸಂಕೀರ್ಣದಿಂದಾಗಿ ಪ್ರಸಿದ್ಧಿ ಪಡೆದಿದೆ. ಹೊಯ್ಸಳ ವಿಷ್ಣುವರ್ಧನನು ಚೋಳರ ಮೇಲೆ ವಿಜಯವನ್ನು ಸಾಧಿಸಿದ ನೆನಪಾಗಿ ಕ್ರಿ.ಶ. ೧೧೧೬ರಲ್ಲಿ ಇಲ್ಲಿ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿ, ದೇವರನ್ನು ವಿಜಯನಾರಾಯಣ ಎಂದು ಕರೆದನು. ಈ ಅದ್ಭುತವಾದ ಮೂರ್ತಿಯು ೩.೭ ಮೀಟರ್ ಎತ್ತರವಿದೆ. ಜಗತಿಯ ಮೇಲೆ ನಿಂತಿರುವ ಈ ದೇವಾಲಯದ ಹೊರಗೋಡೆಗಳಲ್ಲಿ ಚಿತ್ತಾಕರ್ಷಕ ಶಿಲ್ಪಕಲಾಕೃತಿಗಳಲ್ಲದೇ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಿರುವ ಮದನಿಕೆಯರ ಪ್ರಮಾಣಬದ್ಧ ಶಿಲ್ಪಗಳು. ಕಪ್ಪೆಚೆನ್ನಿಗ, ಆಂಡಾಳ್, ಸೌಮ್ಯನಾಯಕಿ ಮುಂತಾದವರ ಸಣ್ಣ ಗುಡಿಗಳು ಈ ದೇವಾಲಯದ ವಿಶಾಲವಾದ ಆವರಣದಲ್ಲಿದ್ದು ಅದನ್ನು ಪ್ರಾಕಾರವು ಸುತ್ತುವರೆದಿದೆ. ಮುಂದೆ ವಿಜಯನಗರದ ಸಾಮಂತರಾಗಿದ್ದ ಬೇಲೂರು ನಾಯಕರು ಕಟ್ಟಿಸಿದ ಗೋಪುರವಿದೆ. ಬೇಲೂರು, ಹೊಯ್ಸಳ ಅರಸರ ರಾಜಧಾನಿಯಾಗಿದ್ದು ಹೊಯ್ಸಳಕಲೆಗೆ ಅತ್ಯುತ್ತಮ ಉದಾಹರಣೆಯನ್ನೊದಗಿಸಿದೆ.

 

ಭದ್ರಾವತಿ

ತಾಲೂಕು ಕೇಂದ್ರವಾದ ಇದು ಕೈಗಾರಿಕಾನಗರವಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಸೇರಿದೆ. ಬೆಂಗಳೂರಿನಿಂದ೨೫೬ ಕಿ.ಮೀ. ದೂರದಲ್ಲಿದೆ. ಹಿಂದೆ ’ಬೆಂಕಿಪುರ’ ಎಂದುಕರೆಯಲ್ಪಡುತ್ತಿತ್ತು. ಇಲ್ಲಿ ಹೊಯ್ಸಳ ಶೈಲಿಯ ಸುಮಾರು ೧೩ನೇಶತಮಾನದ ಲಕ್ಷ್ಮೀನರಸಿಂಹ ದೇವಾಲಯವಿದೆ. ಭದ್ರಾ ನದಿಯದಂಡೆಯಲ್ಲಿ ವಿಶ್ವೇಶ್ವರಯ್ಯ ಕಬ್ಬಿಣಮತ್ತು ಉಕ್ಕಿನ ಕಾರ್ಖಾನೆ,ಸಿಮೆಂಟು ಕಾರ್ಖಾನೆ (೧೯೩೮) ಹಾಗೂ ಮೈಸೂರು ಕಾಗದಕಾರ್ಖಾನೆಗಳು (೧೯೩೫) ಕೆಲಸ ಮಾಡುತ್ತಿವೆ.

 

ಭಾಗಮಂಡಲ

ಕೊಡಗು ಜಿಲ್ಲೆಯಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು ಬೆಂಗಳೂರಿನಿಂದ ೨೮೮ ಕಿ.ಮೀ. ತಾಲೂಕು ಕೇಂದ್ರ ಹಾಗೂ ಮಡಿಕೇರಿಯಿಂದ ೩೫ ಕಿ.ಮೀ ದೂರದಲ್ಲಿ, ಕಾವೇರಿ ನದಿಯ ದಂಡೆಯ ಮೇಲಿದೆ. ಇಲ್ಲಿ ಭಗಂಡೇಶ್ವರನೆಂಬ ಪ್ರಾಚೀನ ಶಿವಾಲಯವಿದೆ. ಇದಕ್ಕೆ ಇಳಿಜಾರಾದ ಚಾವಣಿ ಇದ್ದು, ತಾಮ್ರದ ತಗಡನ್ನು ಹೊದಿಸಲಾಗಿದೆ. ಶಿವಪುರಾಣದಿಂದಾಯ್ದ ಕಥಾನಕಗಳನ್ನು ಒಳಗೊಂಡ ಬಣ್ಣ ಹಚ್ಚಲಾಗಿರುವ ನೈಪುಣ್ಯತೆಯಿಂದ ಕೆತ್ತಲಾದ ಆಕರ್ಷಕವಾದ ಕಾಷ್ಟ ಶಿಲ್ಪಗಳು ಇದರಲ್ಲಿವೆ. ಆಕರ್ಷಕವಾದ ದೊಡ್ಡ ಹಾಗೂ ಸಣ್ಣ ಕಾಷ್ಟ ಮೂರ್ತಿಗಳು ನೋಡುಗರ ಕಣ್ಮನಗಳನ್ನು ಸೆಳೆಯುತ್ತವೆ. ಇಲ್ಲಿ ಗಣಪತಿ, ವಿಷ್ಣು ಹಾಗೂ ಸುಬ್ರಹ್ಮಣ್ಯ ದೇವಾಲಯಗಳು ಇವೆ. ಶಾಂತವಾದ ಹಾಗೂ ನಿಸರ್ಗ ಸುಂದರವಾದ ಈ ತಾಣದಲ್ಲಿ ತುಲಾ ಸಂಕ್ರಮಣದಲ್ಲಿ ದೊಡ್ಡ ಜಾತ್ರೆ ಡೆಯುತ್ತದೆ. ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಗೆ ಇಲ್ಲಿಂದಲೇ ತೆರಳಬೇಕು.

 

ಮಡಿಕೇರಿ

ಬೆಂಗಳೂರಿನಿಂದ ೨೫೦ ಕಿ.ಮೀ. ದೂರದಲ್ಲಿರುವ ಮಡಿಕೇರಿಯು ಪಶ್ಚಿಮ ಘಟ್ಟದ ಸಾಲಿನಲ್ಲಿದ್ದು, ಕೊಡಗು ಜಿಲ್ಲೆಯ ಕೇಂದ್ರಸ್ಥಾನವಾಗಿದೆ. ಇದು ಹಾಲೇರಿ ರಾಜವಂಶದವರ ರಾಜಧಾನಿಯಾಗಿದ್ದು, ಇವರ ಆಡಳಿತವನ್ನು ಬ್ರಿಟಿಷರು ೧೮೩೪ರಲ್ಲಿ ಅಂತ್ಯಗೊಳಿಸಿದರು. ಇಲ್ಲಿ ಕೋಟೆ ಹಾಗೂ ಅರಮನೆಯ ಕಟ್ಟಡಗಳಿದ್ದು ಅದರಲ್ಲಿ ಈಗ ಜಿಲ್ಲಾ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಗೋಡೆಗಳಲ್ಲಿ ಕೆಲವು ವರ್ಣಚಿತ್ರಗಳಿವೆ. ಕೋಟೆಯೊಳಗೆ ಒಂದು ಹಳೆಯ ಚರ್ಚ್ ಇದ್ದು, ಇದರಲ್ಲಿ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯವಿದೆ. ಇಲ್ಲಿರುವ ಓಂಕಾರೇಶ್ವರ ದೇವಾಲಯ ಹಾಗು ಕೊಡಗು ರಾಜರಾದ ದೊಡ್ಡ ವೀರರಾಜೇಂದ್ರ ಮತ್ತು ಲಿಂಗರಾಜೇಂದ್ರರ ಗೋರಿಗಳು ಇಂಡೋ-ಸಾರಸೆನಿಕ್ ಶೈಲಿಯಲ್ಲಿವೆ. ರಾಜಾಸೀಟ್ ಎಂದು ಕರೆಯಲಾಗುವ ನಿಸರ್ಗ ರಮಣೀಯ ಪ್ರವಾಸಿ ತಾಣದಲ್ಲಿ ಪ್ರಕೃತಿಯ ವಿಹಂಗಮ ದೃಶ್ಯಗಳನ್ನು ರಾಜಾ-ರಾಣಿ ಕುಳಿತು ವೀಕ್ಷಿಸಲು ನಿರ್ಮಿಸಿರುವ ಆಸನವು ಕೊಳ್ಳಕ್ಕೆ ಮುಖಮಾಡಿದ್ದು, ಸುತ್ತಲಿನ ಕಾಫಿ ಮತ್ತು ಭತ್ತದ ಬೆಳೆಯುಳ್ಳ ದಟ್ಟ ಹಸಿರು ಭೂಮಿಯ ವಿಶಾಲ ಅಮೋಘ ದೃಶ್ಯವು ಕಣ್ಣೆದುರಿಗೆ ಗೋಚರಿಸುತ್ತದೆ. ಕೊಡವರಿಗೆ ತಮ್ಮದೇ ಆದ ವಿಶಿಷ್ಟವಾದ ಸಂಸ್ಕೃತಿ ಹಾಗೂ  ಜಾನಪದ ಕಲೆಗಳಿವೆ. ಇವರು ಆತಿಥ್ಯಕ್ಕೆ ಹಾಗೂ ಶೌರ್ಯಕ್ಕೆ ಪ್ರಸಿದ್ಧರಾಗಿದ್ದಾರೆ. ಮಡಿಕೇರಿಯ ಬಳಿ ಇರುವ ದಿವಂಗತ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರಿಯಪ್ಪ ಅವರ ಮನೆ ’ರೋಶನಾರ’ ಸುಸ್ಥಿತಿಯಲ್ಲಿದ್ದು  ಸಂರಕ್ಷಿಸಲಾಗಿದೆ. ಅಬ್ಬಿ ಜಲಪಾತವು ಇಲ್ಲಿಗೆ ಅನತಿ ದೂರದಲ್ಲಿದೆ.

 

ಮದ್ದೂರು

ಜಿಲ್ಲಾ ಕೇಂದ್ರ ಮಂಡ್ಯದಿಂದ ೨೦ ಕಿ.ಮೀ ದೂರದಲ್ಲಿರುವ ಮದ್ದೂರು ಒಂದು ತಾಲೂಕು ಕೇಂದ್ರ. ಪ್ರಾಚೀನ ತಮಿಳು ಶಾಸನಗಳಲ್ಲಿ ಇದನ್ನು ’ಮರಂದೂರು’(ತಮಿಳಿನಲ್ಲಿ ’ಮರಂದು’ಎಂದರೆ ಔಷಧ ಎಂದರ್ಥ) ಕರೆಯಲಾಗಿದೆ. ಅಲ್ಲಿರುವ ದೇವಾಲಯದ ದೇವರನ್ನು ’ವೈಜನಾಥ ಅಥವಾ ವೈದ್ಯನಾಥ’ (ಔಷಧ ದೇವತೆ) ಎಂದು ಉಲ್ಲೇಖಿಸಲಾಗಿದೆ. ಸಂಪ್ರದಾಯದ ಪ್ರಕಾರ ಕದಂಬಮುನಿ ಮತ್ತು ಅರ್ಜುನರಿಗೆ ಅನ್ವಯಿಸಲಾಗುವ ಈ ಊರನ್ನು ಹೊಯ್ಸಳರ ಶಾಸನಗಳಲ್ಲಿ ’ನರಸಿಂಹ ಚತುರ್ವೇದಿ ಮಂಗಲಂ’ ಎಂಬ ಅಭಿದಾನದೊಂದಿಗೆ ಕರೆಯಲಾಗಿದೆ. ಮದ್ದೂರಮ್ಮ ಇಲ್ಲಿಯ ಗ್ರಾಮದೇವತೆ. ಇಲ್ಲಿರುವ ಹೊಯ್ಸಳರ ಕಾಲದ ನರಸಿಂಹ ದೇವಾಲಯದಲ್ಲಿ ಏಳು ಅಡಿ ಎತ್ತರದ ನರಸಿಂಹ ವಿಗ್ರಹವಿದೆ. ವರದರಾಜ ದೇವಾಲಯವು ಚೋಳರ ಕಾಲದ ರಚನೆಯಾಗಿದ್ದು, ಗರ್ಭಗೃಹದಲ್ಲಿ ೧೨ ಅಡಿ ಎತ್ತರದ ವರದರಾಜ ವಿಗ್ರಹವಿದೆ. ಮದ್ದೂರಿನಿಂದ ಐದು ಕಿ.ಮೀ ದೂರದಲ್ಲಿ ಶಿಂಷಾನದಿಯ ತೀರದಲ್ಲಿರುವ ವೈದ್ಯನಾಥಪುರವು ಚೋಳರ ಕಾಲದ ವೈದ್ಯನಾಥ ದೇವಾಲಯದಿಂದ ಪ್ರಸಿದ್ಧವಾಗಿದೆ. ಮದ್ದೂರಿಗೆ ರೈಲು ನಿಲ್ದಾಣವನ್ನು ಒದಗಿಸಿರುವ ಶಿವಪುರವು ೧೯೩೮ರಲ್ಲಿ ಮೈಸೂರು ಕಾಂಗ್ರೆಸ್ ನ ಮೊದಲನೇ ಸಮ್ಮೇಳನ ಹಾಗೂ ಧ್ವಜ ಸತ್ಯಾಗ್ರಹ ನಡೆದ ಸ್ಥಳವಾಗಿದೆ. ಅದರ ನೆನಪಿಗಾಗಿ ಧ್ವಜ ಸತ್ಯಾಗ್ರಹಸೌಧವೆಂಬ ಸ್ಮಾರಕ ಕಟ್ಟಡವನ್ನು ನಿರ್ಮಿಸಲಾಗಿದೆ.

 

ಮಧುಗಿರಿ

ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯುತುಮಕೂರಿನಿಂದ ೪೩ ಕಿ.ಮೀ ದೂರದಲ್ಲಿರುವ ತಾಲೂಕುಕೇಂದ್ರ ಇದು ಬೃಹತ್ತಾದ ಗಿರಿದುರ್ಗಕ್ಕೆ ಪ್ರಸಿದ್ಧವಾಗಿದೆ. ಇದರಪ್ರಾಚೀನ ಹೆಸರು ಮದ್ದಗಿರಿಯಾಗಿದ್ದು, ಇಲ್ಲಿವಿಜಯನಗರದಸಾಮಂತರಸರು ಕಟ್ಟಿಸಿದ ವೆಂಕರಮಣ ಹಾಗೂ ಮಲ್ಲೇಶ್ವರದೇವಾಲಯಳಲ್ಲದೇ ಇಲ್ಲಿ ಮಲ್ಲಿನಾಥ ಬಸದಿಯೂ ಇದೆ. ಕೆಳದಿಯರಾಣಿ ವೀರಮ್ಮಾಜಿಯನ್ನು ಹೈದರ್‌ಅಲಿಯು ಇಲ್ಲಿ ಬಂಧಿಯಾಗಿಇರಿಸಿದ್ದ. ನಂತರ ಮರಾಠರು ಅವಳನ್ನು ಬಿಡುಗಡೆ ಮಾಡಿದರು.ಆದರೆ ಪುಣೆಗೆ ಹೋಗುವಾಗ ದಾರಿಯಲ್ಲಿ ಅವಳುಮೃತಪಟ್ಟಳು.ಇಲ್ಲಿಯ ಕೋಟೆಗೆ ಭವ್ಯವಾದ ಪ್ರವೇಶ ದ್ವಾರಗಳಿದ್ದು, ಅಂತರಾಳದಬಾಗಿಲು, ದಿಡ್ಡಿಬಾಗಿಲು,ಮೈಸೂರು ಗೇಟ್ ಇತ್ಯಾದಿಯಾಗಿಕರೆಯಲ್ಪಡುತ್ತವೆ. ಇಲ್ಲಿಂದ ೧೯ ಕಿ.ಮೀ. ದೂರದಲ್ಲಿರುವಮಿಡಿಗೇಶಿಯಲ್ಲಿ ಎತ್ತರವಾದ ಮಧ್ಯಕಾಲೀನ ಗಿರಿದುರ್ಗವಿದೆ.

 

ಮಹದೇಶ್ವರ ಬೆಟ್ಟ

ಪೂರ್ವದ ಘಟ್ಟಗಳಿಗೆ ಸಮೀಪದಲ್ಲಿರುವಮಹದೇಶ್ವರ ಬೆಟ್ಟವು ಬೆಂಗಳೂರಿನಿಂದ ೨೨೦ ಕಿ.ಮೀ. ಹಾಗೂಮೈಸೂರಿನಿಂದ ೧೪೨ ಕಿ.ಮೀ. ದೂರದಲ್ಲಿ ಚಾಮರಾಜನಗರಜಿಲ್ಲೆಯಲ್ಲಿದೆ. ಹುಲಿಯನ್ನು ಸವಾರಿಮಾಡಬಲ್ಲವನಾಗಿದ್ದಮಹದೇಶ್ವರನೆಂಬ ಸುಮಾರು ೧೪-೧೫ನೇ ಶತಮಾನದ ಯತಿಯಗದ್ದುಗೆ ಇಲ್ಲಿದೆ. ಬೆಟ್ಟವು ದಟ್ಟ ಅರಣ್ಯಗಳಿಂದ ಆವೃತವಾಗಿದ್ದು,ಅತಿಥಿ ಗೃಹಗಳು ಮುಂತಾದ ಅನೂಕೂಲತೆಗಳು ಇರುವ ಈ ಸ್ಥಳವನ್ನು ಸಾವಿರಾರು ಯಾತ್ರಿಗಳು ಸಂದರ್ಶಿಸುತ್ತಾರೆ.ಇದು ನಿಸರ್ಗ ರಮಣೀಯ ಆಕರ್ಷಕ ತಾಣವಾಗಿದೆ. ಅನತಿದೂರದಲ್ಲಿರುವ ನಾಗಮಲೈ, ಇನ್ನೊಂದು ಪ್ರಮುಖ ಯಾತ್ರಾಸ್ಥಳವಾಗಿದೆ. ತಮಿಳುನಾಡಿನಲ್ಲಿರುವ ಮೆಟ್ಟೂರು ಜಲಾಶಯವನ್ನುನೋಡಲಿಚ್ಚಿಸುವವರು ಇಲ್ಲಿಂದ ಸುಲಭವಾಗಿ ಹೋಗಬಹುದು.

 

ಮಂಗಳೂರು

ಹಿಂದೆʼಮಂಗಳಾಪುರ’ ಎಂದುಕರೆಯಲಾಗುತ್ತಿದ್ದ ಪ್ರಾಚೀನ ಪಟ್ಟಣ ಇದಾಗಿದ್ದು, ಕರಾವಳಿಕರ್ನಾಟಕದ ಹಳೇ ಮತ್ತು ಹೊಸ ಬಂದರುಗಳು ಇಲ್ಲಿವೆ. ಇದುದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ. ಬಹುಕಾಲದವರೆಗೆಆಳುಪರ ರಾಜಧಾನಿಯಾಗಿತ್ತು. ವಿಜಯನಗರದ ಅರಸರುಇಲ್ಲಿ ಅಧಿಕಾರಿಯನ್ನು ನೇಮಿಸಿದ್ದರು. ನಂತರ ಇದುಬಂದ ಸಾಮಂತರಸರ ಕೈಗೆ ಬಂದಿತು. ಪೋರ್ಚುಗೀಸರುಇಲ್ಲಿ ವ್ಯಾಪಾರಕ್ಕಾಗಿ ಫ್ಯಾಕ್ಟರಿಯನ್ನು ಸ್ಥಾಪಿಸಿ ರೋಮನ್ಕ್ಯಾಥೋಲಿಕ್ ಧರ್ಮವನ್ನು ಪರಿಚಯಿಸಿದರು. ಹೈದರನುಇದನ್ನು ಗೆದ್ದ ಮೇಲೆ ಅದು ಮೈಸೂರಿನ ಮುಖ್ಯ ಬಂದರಾಯಿತು.ಬಂದರಿನ ಸಮೀಪದಲ್ಲಿರುವ ಸುಲ್ತಾನಬತೇರಿ ಅವನ ಆಳ್ವಿಕೆಯನ್ನುನೆನಪಿಸುತ್ತದೆ. ೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದ ಮೇಲೆಅವರು ಇದನ್ನು ಕೆನರಾ ಜಿಲ್ಲೆಯ ಕೇಂದ್ರವನ್ನಾಗಿಸಿದರು.

೧೮೩೪ರಲ್ಲಿ ಇಲ್ಲಿಗೆ ಬಂದ ಬ್ಯಾಸೆಲ್ ಮಿಶನ್, ಇಂಗ್ಲೀಷ ಶಾಲೆ,ಮುದ್ರಣಯಂತ್ರ, ಹೆಂಚಿನ ಕಾರ್ಖಾನೆ ಹಾಗೂ ನೇಯ್ಗೆಯನ್ನುಪ್ರಾರಂಭಿಸಿ ಸ್ಥಳದ ನವೀಕರಣಕ್ಕೆ ಸಹಾಯ ಮಾಡಿತು.ಮೊದಲನೆಯ ಕನ್ನಡ ವೃತ್ತಪ್ರತಿಕೆ ಎನಿಸಿದ ’ಮಂಗಳೂರುಸಮಾಚಾರ’ (೧೮೩೪) ಪ್ರಕಟಿಸಿದ್ದು ಈ ಕ್ರೈಸ್ತಸಂಸ್ಥೆಯ ಪ್ರಮುಖಸಾಧನೆಯಾಗಿದೆ.ಮಂಗಳೂರಿನಲ್ಲಿ ಪ್ರಾಚೀನ ಮಂಗಳಾ ದೇವಿ ದೇವಾಲಯಹಾಗೂ ಒಂದು ಕಾಲಕ್ಕೆ ಬೌದ್ಧರು ವಾಸಿಸಿದ್ದ ಕದ್ರಿ ಮಂಜುನಾಥದೇವಾಲಯಗಳಿವೆ. ಕದ್ರಿ ದೇವಾಲಯದಲ್ಲಿ ಅವಲೋಕಿತೇಶ್ವರಮತ್ತು ಧ್ಯಾನಿ ಬುದ್ಧನ ಕಂಚಿನ ಉತ್ಕೃಷ್ಟ ವಿಗ್ರಹಗಳಿವೆ. ಸುತ್ತಲೂಕೆಲವು ಜಂಬಿಟ್ಟಿಗೆ ಕಲ್ಲಿನ ಗುಹೆಗಳಿವೆ. ವೆಂಕಟರಮಣ ದೇವಾಲಯ,ಮಹಾಮಾಯಿ ದೇವಾಲಯ ಹಾಗೂ ಬೃಹತ್ತಾಕಾರದ ಆಧುನಿಕಗೋಕರ್ಣನಾಥ ದೇವಾಲಯ ಮಂಗಳೂರಿನ ಕೆಲವು ಪ್ರಮುಖದೇವಾಲಯಗಳು. ಮಂಗಳೂರಿನ ಸಮೀಪದ ಕುದ್ರೋಳಿಯಲ್ಲಿಸುಂದರವಾದ ಗೋಕರ್ಣನಾಥ ದೇವಾಲಯವಿದ್ದು ನವರಾತ್ರಿಸಮಯದಲ್ಲಿ ವಿಜೃಂಭಣೆಯಿಂದ ಪೂಜೆಗಳು ಜರುಗುತ್ತವೆ.ಇದೊಂದು ಆಕರ್ಷನ ಉತ್ಸವವಾಗಿದೆ. ಬೆಂಗ್ರೆಯಲ್ಲಿ ಸುಂದರವಾದಕಡಲತೀರ ತಾಣವಿದೆ. ಲೈಟ್ ಹೌಸ್ ಬೆಟ್ಟದಲ್ಲಿ ಈದ್ಗಾ ಇದೆ.  ಞಟ್ಅಲೋಸಿಯಸ್ ಕಾಲೇಜಿನಲ್ಲಿ ಸುಂದರವಾದ ವರ್ಣಚಿತ್ರಗಳುಳ್ಳಚಾಪೆಲ್ ಇದೆ. ಸೈಂಟ್ ರೋಜಾರಿಯೋ ಚರ್ಚ್, ಚರ್ಚ್ಆಫ್ ಮೋಸ್ಟ್ ಹೋಲಿ ರೊಸರಿ ಹಾಗೂ ಮಿಲಾಗ್ರೆಸ್ ಚರ್ಚ್ಇಲ್ಲಿರುವ ಕ್ರಿಶ್ಚಿಯನ್ ಕಟ್ಟಡಗಳು. ಬ್ಯಾಸೆಲ್ ಮಿಶನ್ ಅವರಕ್ಯಾಥೆಡ್ರಲ್ ಕೂಡಾ ಪ್ರಸಿದ್ಧವಾಗಿದೆ.ಬಂದರು ಪ್ರದೇಶದಲ್ಲಿ ಕಾಷ್ಠದ ಕೆತ್ತನೆಯಿರುವ ಸುಂದರವಾದ ಮಸೀದಿ ಇದೆ. ಡೊಂಗರಕೇರಿಯಲ್ಲಿಶಮೀರ್ ಮಸೀದಿ ಇದೆ. ಮಂಗಳೂರು ಸಮುದ್ರ ಆಹಾರಹಾಗೂವಿಶಿಷ್ಟವಾದ ಸುವಾಸನೆಯುಳ್ಳ ಮಲ್ಲಿಗೆಗಾಗಿಯೂ ಪ್ರಸಿದ್ಧವಾಗಿದೆ.ಮದ್ರಾಸ್ ಸರಕಾರವು ೧೮೬೯ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಿದಸೆಕೆಂಡ್ ಗ್ರೇಡ್ ಕಾಲೇಜ್ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ.ಈಗ ಮಂಗಳೂರಿನಲ್ಲಿವಿಶ್ವವಿದ್ಯಾಲಯವೂ ಇದೆ. ಇಲ್ಲಿವಿಶಿಷ್ಟವಾದ ಹಾಗೂ ಜನಪ್ರಿಯತೆ ಗಳಿಸಿರುವ ಹೆಂಚುಗಳನ್ನುತಯಾರಿಸಲಾಗುತ್ತದೆ. ಕಾಫಿ, ಮೀನು ಮತ್ತು ಗೋಡಂಬಿ ಪರಿಷ್ಕರಣಘಟಕಗಳಲ್ಲಿವೆ. ಬೀಡಿ ತಯಾರಿಕೆಯುಇಲ್ಲಿಯ ಪ್ರಮುಖ ಗೃಹಉದ್ಯಮವಾಗಿದೆ. ಮಂಗಳೂರು ಫರ್ಟಿಲೈಜರ್ಸ್‌ ಹಾಗೂ ಪೆಟ್ರೊಕೆಮಿಕಲ್ಸ್ ಇಲ್ಲಿಯ ಪ್ರಧಾನ ಸಾರ್ವಜನಿಕ ಉದ್ಯಮಗಳಾಗಿವೆ.ಇಲ್ಲಿರುವಹಳೆಯ ಮಂಗಳೂರು ಬಂದರು ಹಾಗೂ ಅನತಿದೂರದಲ್ಲಿರುವಪಣಂಬೂರಿನ ನವಮಂಗಳೂರು ಬಂದರುಗಳು ಅಂತರಾಷ್ಟ್ರೀಯವ್ಯಾಪಾರ ವಹಿವಾಟಿಗೆ ಹೆಸರಾಗಿವೆ.

 

ಮಂಡ್ಯ

ಮಂಡ್ಯ ಜಿಲ್ಲಾ ಕೇಂದ್ರವಾಗಿರುವ ಈ ಸ್ಥಳವುಬೆಂಗಳೂರಿನಿಂದ ನೈಋತ್ಯಕ್ಕೆ ೧೦೦ ಕಿ.ಮೀ. ಹಾಗೂಮೈಸೂರಿನ ವಾಯವ್ಯಕ್ಕೆ ೪೨ ಕಿ.ಮೀ ದೂರದಲ್ಲಿ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿದೆ. ರೈಲುಮಾರ್ಗದಿಂದಲೂಇದಕ್ಕೆ ಸಂಪರ್ಕವಿದೆ. ಪ್ರಾಚೀನ ಶಾಸನದಲ್ಲಿ ಈ ಸ್ಥಳವನ್ನು’ಮಂಟೆಯ’ ಎಂದುಹೆಸರಿಸಲಾಗಿದ್ದು, ಹಿಂದೆ ಇದೊಂದುಅಗ್ರಹಾರವಾಗಿತ್ತು. ಮಂಡ್ಯವು ಪ್ರಮುಖ ಔದ್ಯಮಿಕ ಮತ್ತುವಾಣಿಜ್ಯ ಕೇಂದ್ರವಾಗಿದೆ. ಮಂಡ್ಯದ ಮೈಸೂರು ಸಕ್ಕರೆಕಂಪನಿಯು(೧೯೩೩) ಭಾರತದಲ್ಲಿಯೇ ಮೊದಲನೆಯದೆನಿಸಿದೆ. ಮಂಡ್ಯ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳು, ಕೆ.ಆರ್. ಸಾಗರಆಣೆಕಟ್ಟೆಯ ನಿರ್ಮಾಣದ ನಂತರಹಸಿರುಮಯವಾದವು. ರೈತರುಉತ್ತಮ ಸಹಕಾರಿ ಸಂಸ್ಥೆಗಳನ್ನು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನುಕಟ್ಟಿದರು. ಇಂದು ಮಾತ್ಯ ನಗರದ ಬಡಾವಣೆಯೇ ಆಗಿರುವಗುತ್ತಲು (ಅಕ್ವೇಶ್ವರ ನಗರ) ಹೋಯ್ಸಳರ ಕಾಲದಷ್ಟು ಪ್ರಾಚೀನನೆಲೆಯಾಗಿದೆ. ಅಲ್ಲಿರುವ ದೇವಿರಮ್ಮನ ಗುಡಿ ಗಂಗರ ಕಾಲದಸಪ್ತಮಾತೃಕಾ ಶಿಲ್ಪಗಳನ್ನು ಹೊಂದಿದೆ.ಜಿಲ್ಲೆಯು ಬನ್ನೂರು(ಕುರಿ) ಮಾಂಸಕ್ಕಾಗಿ ಪ್ರಸಿದ್ಧವಾಗಿದ್ದು, ವಿಶಿಷ್ಟ ರುಚಿಯುಳ್ಳ ಇದನ್ನುಸ್ಥಳೀಯ ಹೊಟೇಲ್‌ಗಳಲ್ಲಿ ನೀಡಲಾಗುತ್ತದೆ. ಇಲ್ಲಿಯ ಜನಾರ್ದನಸ್ವಾಮಿಯ ದೇವಾಲಯವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು,ಬೇಸಿಗೆಯಲ್ಲಿ ನಡೆಯುವ ಇದರ ಜಾತ್ರೆಗೆ ಸಾವಿರಾರು ಜನರುಸೇರುತ್ತಾರೆ. ಸ್ಥಳೀಯ ಸಂಪ್ರದಾಯದ ಪ್ರಕಾರ ಈ ಊರನ್ನುಪೌರಾಣಿಕವಾಗಿ ಮಾಂಡವ್ಯ ಋಷಿಗಳು ಜೀವಿಸಿದ್ದ ವೇದಾರಣ್ಯಎಂದು ಭಾವಿಸಲಾಗುತ್ತದೆ.

 

ಮಾಗಡಿ

ರಾಮನಗರ ಜಿಲ್ಲೆಯ ತಾಲೂಕು ಕೇಂದ್ರರುವ ನಗರಇದು ಬೆಂಗಳೂರಿನಿಂದ ೪೧ ಕಿ.ಮೀ. ದೂರದಲ್ಲಿದೆ. ೧೬೩೮ರಲ್ಲಿಕೆಂಪೇಗೌಡ ಬೆಂಗಳೂರನ್ನು ಬಲವಂತದಿಂದ ಬಿಡಲೇಬೇಕಾಗಿಬಂದಾಗ ಅವನು ಮಾಗಡಿಯನ್ನು ತನ್ನ ಕೇಂದ್ರವನ್ನಾಗಿಮಾಡಿಕೊಂಡನು. ಇಲ್ಲಿ ಅವನ ಕುಟುಂಬದವರು ಕಟ್ಟಿದ ಕೋಟೆಹಾಗೂ ರಾಮೇಶ್ವರದೇವಾಲಯವಿದೆ. ೧೭೧೨ರಲ್ಲಿ ಕಟ್ಟಿದಸೋಮೇಶ್ವರ ದೇವಾಲಯದ ಬಳಿ ಕೆಂಪೇಗೌಡನ ಹಜಾರವಿದೆ.ಇದರ ಗೋಡೆಯಲ್ಲಿರುವ ವರ್ಣಚಿತ್ರಗಳು ಮಾಸಿವೆ. ಪಟ್ಟಣದಬಳಿಯಿರುವ ತಿರುಮಲ ಬೆಟ್ಟದಲ್ಲಿ ವಿಶಾಲವಾದರಂಗನಾಥದೇವಾಲಯ ಇದೆ. ಆದರೆ ಇಲ್ಲಿ ಪೂಜಿಸಲ್ಪಡುವ ದೇವರುಶ್ರೀನಿವಾಸ. ಶ್ರೀನಿವಾಸನುಸಮಭಂಗಿಯಲ್ಲಿ ನಿಂತಿದ್ದು, ಶಿಲ್ಪಶಾಸ್ತ್ರದಪ್ರಕಾರ ಕೈಗಳಲ್ಲಿ ಶಂಖ, ಚಕ್ರ, ವರದ ಹಾಗೂ ಕಟಿಹಸ್ತವಿದೆ. ಇತ್ತೀಚೆಗೆ ಹಿರಿಯ ಕೊದೇಗೌಡನ ಸಮಾಧಿಯು ಪಟ್ಟಣದಿಂದಅನತಿ ದೂರದಲ್ಲಿದೆ.

 

ಮೇಲುಕೋಟೆ

ಮಂಡ್ಯ ಜಿಲ್ಲೆಯ ಮೇಲುಕೋಟೆಯು ಪ್ರಸಿದ್ಧ ಶ್ರೀವೈಷ್ಣವಯಾತ್ರಾ ಸ್ಥಳವಾಗಿದೆ. ಇಲ್ಲಿರುವ ಚೆಲುವರಾಯಸ್ವಾಮಿಯನ್ನುಆಚಾರ್ಯ ರಾಮಾನುಜರು (ಸುಮಾರು ೧೨ನೇ ಶತಮಾನ)ಬಹು ಕಾಲದವರೆಗೆ ಪೂಜಿಸುತ್ತಿದ್ದರು ಎಂದು ನಂಬಲಾಗುತ್ತದೆ.ಈ ದೇವಾಲಯವನ್ನು ವಿಜಯನಗರ ಹಾಗೂ ಮೈಸೂರುಅರಸರ ಕಾಲದಲ್ಲಿ ವಿಸ್ತರಿಸಲಾಗಿದೆ. ಮೈಸೂರು ಅರಸರು ಈದೇವಾಲಯಕ್ಕೆ ವಜ್ರಖಚಿತ ವೈರಮುಡಿ ಹಾಗೂ ಇತರಅಮೂಲ್ಯಆಭರಣಗಳನ್ನು ನೀಡಿದ್ದರು. ಇಲ್ಲಿಯ ಗುಡ್ಡದ ಮೇಲೆ ನರಸಿಂಹದೇವಾಲಯವಿದೆ. ಮೇಲುಕೋಟೆಯುಸಾಂಪ್ರಾದಾಯಿಕಸಂಸ್ಕೃತ ಅಧ್ಯಯನದ ಮಹತ್ವದ ಕೇಂದ್ರವಾಗಿದ್ದು, ಇಲ್ಲಿ ಇತ್ತೀಚೆಗೆಸಂಸ್ಕೃತ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಈ ಅಕಾಡೆಮಿಯಲ್ಲಿಆಧುನಿಕ ಕಂಪ್ಯೂಟರ್ ತಂತ್ರಾಂಶ ಬಳಸಿಸಂರಕ್ಷಿಸಲಾದಪ್ರಾಚೀನ ತಾಳೆಗರಿ ಹಸ್ತಪ್ರತಿಗಳ ದೊಡ್ಡ ಸಂಗ್ರಹವೇ ಇದೆ. ಇಲ್ಲಿವರ್ಷಕ್ಕೊಮ್ಮೆ ನಡೆಯುವವೈರಮುಡಿ ಉತ್ಸವ ವಿಶ್ವಖ್ಯಾತಿಪಡೆದಿದೆ.

 

ಮೈಸೂರು

ಜಿಲ್ಲಾ ಹಾಗೂ ಪ್ರಾಂತೀಯ ಕೇಂದ್ರವಾದಮೈಸೂರು, ಪ್ರಾಚೀನ ಒಡೆಯರ್ ಅರಸರ ರಾಜಧಾನಿಯಾಗಿದ್ದು,ಉದ್ಯಾನ ನಗರಿಯೂ ಆಗಿದ್ದು ಬೆಂಗಳೂರಿನಿಂದ ೧೩೯ ಕಿ.ಮೀ. ಪಶ್ಚಿಮಕ್ಕೆ ಇದೆ. ಹಿಂದೆ ’ಮಹಿಷಪುರ’ ಎಂದುಕರೆಯಲ್ಪಟ್ಟಿರುವ,ಈ ಊರಿಗೂ ಮಹಿಷಿ ಅಥವಾ ಮಹಿಷಾಸುರನಿಗೆ ಏನೂಸಂಬಂಧವಿದ್ದ ಹಾಗಿಲ್ಲ. ಇಲ್ಲಿ ಹಾಗೂಇತರ ಕಡೆಗಳಲ್ಲಿ ದೊರೆತಿರುವಪ್ರಾಚೀನ ಶಾಸನಗಳಲ್ಲಿ ಈ ಸ್ಥಳವನ್ನು ಮಯಿಸೂರು ಎಂದುಕರೆಯಲಾಗಿದೆ. ಮಯು ಎಂದರೆ ಜಿಂಕೆ ಹಾಗೂ ಊರುಎಂದರೆ ಸ್ಥಳ. ಈ ನಗರದ ಹಿನ್ನೆಲೆಯಲ್ಲಿ ಕಾಣುವ ಚಾಮುಂಡಿಬೆಟ್ಟವು ಗಂಗ ಹಾಗೂ ಹೊಯ್ಸಳ ಶಾಸನಗಳಲ್ಲಿ ’ಮಾರ್ಬಾಲಬೆಟ್ಟ’ಅಥವಾ ’ಮಹಾಬಲಬೆಟ್ಟ’ ವೆಂದುಉಲ್ಲೇಖಿಸಲ್ಪಟ್ಟಿದೆ. ಬೆಟ್ಟವನ್ನುಹತ್ತಿಕೊಂಡು ಹೋಗುವ ಮಾರ್ಗದ ಮಧ್ಯದಲ್ಲಿ ಗಂಗರ (ಕ್ರಿ.ಶ.೯ನೇ ಶತಮಾನದಲ್ಲಿ) ಕಾಲದಲ್ಲಿ ನಿರ್ಮಿತವಾದ ಮಹಾಬಲೇಶ್ವರದೇವಾಲಯದ ಅವಶೇಷಗಳು ಇಂದಿಗೂಕಾಣಸಿಗುತ್ತವೆ.ಆದರೆ, ಇತಿಹಾಸದಲ್ಲಿ ಬರುವ ಮೈಸೂರು ಅರಸ ಚಾಮರಾಜ(ಬೋಳ) ಒಡೆಯನಿಗೆಬೇಟೆಗಾಗಿ ಈ ಬೆಟ್ಟಕ್ಕೆ ಬಂದಿದ್ದಾಗತಲೆಯ ಹಿಂಭಾಗಕ್ಕೆ ಸಿಡಿಲು ಹೊಡೆದ ಕಾರಣ ಮನೆದೇವಿಯಾದಚಾಮುಂಡಿ ದೇವಾಲಯವನ್ನು ನಿರ್ಮಿಸಿದನೆಂದು ಪ್ರತೀತಿಯಿದೆ.ಕಾಲಕ್ರಮೇಣ ಮಾರ್ಬಾಲ ಬೆಟ್ಟವು ಚಾಮುಂಡಿಬೆಟ್ಟವೆಂದುಮೈಸೂರು ಅರಸರ ಕಾಲದಲ್ಲಿ ರೂಢಿಗೆ ಬಂದಿತೆಂದುಅಭಿಪ್ರಾಯಪಡಲಾಗುತ್ತದೆ. ಮೈಸೂರು ನಗರದ ಹೃದಯಭಾಗದಲ್ಲಿರುವ ಅಂಬಾವಿಲಾಸ ಅರಮನೆಯು ಇಂಡೋ-ಸಾರಸೆನಿಕ್ ಶೈಲಿಯಲ್ಲಿದ್ದು, ಒಳಗಡೆ ಹೊಯ್ಸಳ ಶೈಲಿಯಲ್ಲಿದೆ.ಇದು ಇಲ್ಲಿಯ ಪ್ರಮುಖ ಆಕರ್ಷಣ ಕೇಂದ್ರವಾಗಿದ್ದು, ೧೮೯೭ರಲ್ಲಿಹಳೆಯ ಅರಮನೆಯು ಬೆಂಕಿ ಆಕಸ್ಮಿಕದಿಂದಾಗಿ ನಾಶವಾದನಂತರ ಅದೇ ಸ್ಥಳದಲ್ಲಿ ನಿರ್ಮಿಸಲ್ಪಟ್ಟ ಈ ಅರಮನೆಯಕೆಲಸವು೧೯೧೨ರಲ್ಲಿ ಪೂರ್ಣಗೊಂಡಿತಾದರೂ ಸೇತುವೆ ವಿಸ್ತರಣೆಗಳು೧೯೪೦ರವರೆಗೆ ನಡೆದಿದೆ. ೧೯೨೫ರಲ್ಲಿಅರಮನೆಗೆ ದೀಪಾಲಂಕೃತಮೆರುಗನ್ನು ನೀಡಲಾಯಿತು. ಮುಂದೆ ೧೯೪೦ರಲ್ಲಿ ಅರಮನೆಯಮುಂಭಾಗಕ್ಕೆ ಗ್ಯಾಲರಿಯನ್ನು ಸೇರಿಸಲಾಯಿತು. ಆನಂತರದಲ್ಲಿಪೋರ್ಟಿಕೊ ಮೊಗಸಾಲೆಯ ಸೇರ್ಪಡೆಯಾಯಿತು.ಸಾರ್ವತ್ರಿಕರಜಾದಿನಗಳಲ್ಲಿ ಸಂಜೆಯ ಹೊತ್ತು ಇದನ್ನು ದೀಪಾಲಂಕೃತಗೊಳಿಸಲಾಗುತ್ತದೆ. ಅರಮನೆಯಕಲ್ಯಾಣ ಮಂಟಪದಲ್ಲಿ೧೯೩೦ ಹಾಗೂ ೧೯೪೦ರಲ್ಲಿ ಅರಮನೆಯ ಕಲಾಕಾರರು ರಚಿಸಿದಸುಂದರವಾದದಸರಾ ಮೆರವಣಿಗೆ ಹಾಗೂ ದರ್ಬಾರಿನ ದೃಶ್ಯದವರ್ಣಚಿತ್ರಗಳಿವೆ.

ಇತ್ತೀಚೆಗೆ, ಮೈಸೂರು ಅರಮನೆಯಆವರಣದಲ್ಲಿಮೈಸೂರು ಅರಸರ ಇತಿಹಾಸವನ್ನು ಅರಹುವ ಒಂದು ಗಂಟೆಅವಧಿಯ ಲೈಟ್ ಅಂಡ್ ಸೌಂಡ್ ಕಾರ್ಕಕ್ರಮವನ್ನು ಎರಡನೆಶನಿವಾರ ರವಿವಾರ ಹಾಗೂ ಸಾರ್ವತ್ರಿಕ ರಜಾದಿನಗಳನ್ನುಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಯೋಜಿಸಲಾಗಿದ್ದುಪ್ರೇಕ್ಷಕರಿಗೆ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ. ಅರಮನೆಯಆವರಣದಲ್ಲಿರುವ ದೇವಾಲಯಗಳಲ್ಲದೇ ಕೋಟೆ ಆಂಜನೇಯ,ಕೋಟೆ ಮಾರಮ್ಮ, ಪಾರ್ಶ್ವನಾಥ(ಕಾರ್ಪೊರೇಶನ್ ಬಳಿ)ಕನ್ಯಕಾ ಪರಮೇಶ್ವರಿ (ದೊಡ್ಡ ಪೇಟೆ ಮತ್ತು ಶಿವರಾಮಪೇಟೆ),ಇಟ್ಟಿಗೇಗೂಡಿನ ರೇಣುಕಾ ಎಲ್ಲಮ್ಮ (ಮೈಸೂರು ಕರಗಕ್ಕೆ ಪ್ರಸಿದ್ಧ),ಸತ್ಯನಾರಾಯಣ (ಒಂಟಿಕೊಪ್ಪಲು) ರಾಘವೇಂದ್ರಮಠಇತ್ಯಾದಿನಗರದಲ್ಲಿರುವ ಇತರ ಪ್ರಮುಖ ದೇವಾಲಯಗಳು. ಚಾಮುಂಡಿಬೆಟ್ಟದಲ್ಲಿ ಸಿಮೆಂಟಿನಿಂದ ಮಾಡಲಾದ ಮಹಿಷಾಸುರ ಮೂರ್ತಿಇದೆ.

ಇಲ್ಲಿಯ ಚಾಮುಂಡಿ ದೇವಾಲಯಕ್ಕೆ ಬೃಹತ್ತಾದದ್ವಾರಗೋಪುರವಿದೆ. ಈದೇವಾಲಯವಲ್ಲದೇ ಇಲ್ಲಿ ಸುಮಾರು೧೦ನೇ ಶತಮಾನದ ಮಹಾಬಲ ದೇವಾಲಯವಿದ್ದು, ಶಾಸನಗಳಲ್ಲಿಈ ಬೆಟ್ಟವನ್ನು ’ಮಾರ್ಬಲ ಬೆಟ್ಟ’ ಎಂದು ಕರೆಯಲಾಗಿದೆ.ಗುಡ್ಡ ಹತ್ತಲು ಮೆಟ್ಟಿಲುಗಳು ಇದ್ದು, ದಾರಿಯಲ್ಲಿದೊಡ್ಡದಾದಏಕಶಿಲಾ ನಂದಿ ವಿಗ್ರಹವಿದೆ. ಇದಕ್ಕೆ ಇತ್ತೀಚೆಗೆ ವರ್ಷದಾನೇತುಜನಾಭಿಷೇಕವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಬೆಟ್ಟದ ಮೇಲೆ ರಾಜೇಂದ್ರ ವಿಲಾಸ ಅರಮನೆ ಇದೆ. ಲಲಿತ ಮಹಲ್ಅರಮನೆಯನ್ನು ಈಗ ಹೊಟೇಲ್ ಮಾಡಲಾಗಿದೆ.ಚೆಲುವಾಂಬಅರಮನೆಯು ಪಾರಂಪರಿಕ ಕಟ್ಟಡವಾಗಿದ್ದು, ಈಗ ಅದರಲ್ಲಿಸಿ.ಎಫ್.ಟಿ.ಆರ್.ಐ. ಕೆಲಸನಿರ್ವಹಿಸುತ್ತಿದೆ. ಜಗಮೋಹನಆರ್ಟ್‌ಗ್ಯಾಲರಿಯೂ ಹಿಂದೆ ಅರಮನೆ ಆಗಿತ್ತು. ಇದರ ಬಳಿಇರುವ ಪರಕಾಲಮಠವು ಆಕರ್ಷಕ ಕಟ್ಟಡವಾಗಿದೆ. ಮೈಸೂರಿನಲ್ಲಿಪ್ರಸಿದ್ಧವಾದ ಚಾಮರಾಜೇಂದ್ರ ಪ್ರಾಣಿಸಂಗ್ರಹಾಲಯವೂ ಇದೆ.ಪ್ರಾಚ್ಯ ಸಂಶೋಧನಾ (ಸುಮಾರು ೭೦,೦೦೦ ತಾಡೋಲೆಹಸ್ತಪ್ರತಿಗಳು) ಸಂಸ್ಥೆಯುಆಕರ್ಷಕ ಕಟ್ಟಡದಲ್ಲಿದೆ. ಇಲ್ಲಿಯವಿಶ್ವವಿದ್ಯಾಲಯವನ್ನು ೧೯೧೬ರಲ್ಲಿ ಸ್ಥಾಪಿಸಲಾಯಿತು. ಸುತ್ತೂರುಮಠ,ರೈಲ್ವೇ ವಸ್ತುಸಂಗ್ರಹಾಲಯ, ಪ್ರೀಮಿಯರ್ ಸ್ಟುಡಿಯೋ,ರಾಮಕೃಷ್ಣ ಆಶ್ರಮಹಾಗೂ ಸಚ್ಚಿದಾನಂದ ಗಣಪತಿ(ದತ್ತಾತ್ರೆಯ)ನಗರದ ಇತರೇ ಆಕರ್ಷಣೆಗಳು. ಎನ್.ಆರ್. ಮೊಹಲ್ಲಾದಲ್ಲಿರುವಸೈಂಟ್ ಫಿಲೋಮಿನಾ ಚರ್ಚ್ಸುಂದರವಾದ ಗೋಥಿಕ್ಶೈಲಿಯಲ್ಲಿದ್ದು, ಎತ್ತರವಾದ ಗೋಪುರಗಳಿವೆ. ಮೈಸೂರುಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು, ಇಲ್ಲಿ ನಡೆಯುವದಸರಾ ಉತ್ಸವವು ಆಕರ್ಷಕವಾದ ಮೆರವಣಿಗೆಯಾಗಿದೆ.ಮೈಸೂರಿನ ಇಟ್ಟಿಗೆಗೂಡು ಕರಗ ಅಷ್ಟು ಪ್ರಮುಖವಾದುದು. ಸಂಗೀತಕಾರಂಜಿಯಿರುವ ಬೃಂದಾವನ ಉದ್ಯಾನ ಮೈಸೂರು ಪಟ್ಟಣಕ್ಕೆಸಮೀಪದಲ್ಲಿಯೇ ಇದೆ. ರೈಲ್ವೇ ವರ್ಕ್‌ಶಾಪ್, ಬಿ.ಇ.ಎಮ್.ಎಲ್. ಘಟಕ, ವಿಕ್ರಾಂತ್ಟಯರ್ಸ್‌ ಮುಂತಾದವುಗಳಿಂದಾಗಿಮೈಸೂರು ಕೈಗಾರಿಕಾ ಕೇಂದ್ರವಾಗಿಯೂ ಬೆಳೆದಿದೆ. ಇತ್ತೀಚೆಗೆಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದ ಎರಡನೇಯ ಮಾಹಿತಿತಂತ್ರಜ್ಞಾನ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿಇನ್‌ಫೋಸಿಸ್ ಸಂಸ್ಥೆಯು ಹೊರವಲಯದಲ್ಲಿ ವಿಶಾಲವಾದಹಾಗೂ ಆಕರ್ಷಕವಾದ ಸಂಕಿರ್ಣವನ್ನು ನಿರ್ಮಿಸಿದೆ. ಇದಲ್ಲದೇವಿಪ್ರೊ ಮುಂತಾದ ಅನೇಕ ಸಾಫ್ಟ್‌ವೇರ್ ಸಂಸ್ಥೆಗಳು ಅಭಿವೃದ್ಧಿಹೊಂದುತ್ತಿವೆ. ಸಿದ್ದಾರ್ಥ ಬಡಾವಣೆಯ ಡಿ.ಎಫ್.ಆರ್.ಎಲ್.ಬಳಿಯಿರುವ ನೈಸರ್ಗಿಕವಸ್ತುಸಂಗ್ರಹಾಲಯ ಹಾಗೂ ಬೆಂಗಳೂರುರಸ್ತೆಯಲ್ಲಿರುವ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್ ಇತ್ತಿಚೀನಸೇರ್ಪಡೆಗಳಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿ ನಗರಮುನಿಸಿಪಲ್ ಕಾರ್ಪೋರೇಶನ್ ಇದೆ. ಇತ್ತೀಚೆಗೆ ಮೈಸೂರನ್ನುರಾಜ್ಯ ಪರಂಪರಾ ನಗರವೆಂದು ಘೋಷಿಸಲಾಗಿದ್ದು ಆ ಪ್ರಕಾರಎಲ್ಲಾ ಪ್ರಾಚೀನ ಕಟ್ಟಡ ಹಾಗೂ ಅರಮನೆಗಳ ರಕ್ಷಣೆಯೊಂದಿಗೆಅತಿಕ್ರಮಣ ತಡೆಯುವುದು ಪರಂಪರೆ ಇಲಾಖೆಯ ಪ್ರಮುಖಕರ್ತವ್ಯವಾಗಿರುತ್ತದೆ.

 

ಎಡೆಯೂರು

ತುಮಕೂರು ಜಿಲ್ಲೆಯ ೧೪ ಕಿ.ಮೀ ದೂರದಇಸ್ಕಾಸ್‌ಧಾರ್ಮಿಕ ಕೇಂದ್ರ ಕುಣಿಗಲ್ ತಾಲೂಕಿನಲ್ಲಿರುವ ಈಸ್ಥಳದಲ್ಲಿ ೧೬ ನೇ ಶತಮಾನದ ಪ್ರಸಿದ್ಧ ವೀರಶೈವ ಯತಿ ತೋಂಟದಸಿದ್ಧಲಿಂಗೇಶ್ವರಂ ಸಮಾಧಿ (ಮಠ) ಇದೆ.ನೂರಾರು ಸಂಖ್ಯೆಯಲ್ಲಿ ಪ್ರತೀ ದಿನವೂ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಉಚಿತಪ್ರಸಾದ ಹಾಗೂ ವಿಶ್ರಾಂತಿ ಗೃಹಗಳಿವೆ. ಈ ಮಠದ ಸುಂದರವಾದಮರದ ರಥದಲ್ಲಿ ಕುತೂಹಲಕಾರಿ ಶಿಲ್ಪಗಳಿವೆ. ಇದಲ್ಲದೇವರದರಾಜದೇವಾಲಯ ಮತ್ತು ಎರಡು ವೀರಶೈವ ಮಠಗಳೂ ಇಲ್ಲಿವೆ. ಮಠದಭಿತ್ತಿಗಳಲ್ಲಿ ಹಳೆಯವರ್ಣಚಿತ್ರಗಳಿವೆ. ಎಡೆಯೂರಿಗೆ ಎಂಟುಕಿ.ಮೀ ದೂರದಲ್ಲಿರುವ ಕಗ್ಗೆರೆ ಸಿದ್ಧಲಿಂಗೇಶ್ವರ ಮೂರ್ತಿಗಳತಪೋವನ ಹಾಗೂ ದೇವಾಲಯಗಳಿಂದಾಗಿ ಪ್ರಸಿದ್ದವಾಗಿದೆ.

 

ಯಾಣ

ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ೨೪ ಕಿ.ಮೀ. ಹಾಗೂ ಶಿರಸಿಯಿಂದ ೪೫ಕಿ.ಮೀ. ದೂರದಲ್ಲಿರುವ ಈ ಕಂದಾಯ ಗ್ರಾಮವನ್ನು ಕುಮಟಾಶಿರಸಿ ರಸ್ತೆಯಲ್ಲಿರುವ ಕತಗಾಲ್-ಹರಿಟಾ ಮೂಲಕ ಹರಿಟಾದಸಮೀಪ ಎಡಕ್ಕೆ ಸಾಗಿ ತಲುಪಬಹುದು. ಬೇಸಿಗೆಯಲ್ಲಿಮಾತ್ರ ತೆರೆದಿರುವ ಸಂರಕ್ಷಿತ ಅರಣ್ಯ ಹಾದಿಯಲ್ಲಿ ಒಂಬತ್ತುಕಿ.ಮೀ. ಯಷ್ಟು ಹಿಂದೆ ನಡೆಯಬೇಗಿತ್ತು ಪ್ರಸ್ತುತ ಸುಮಾರು ಒಂದುಕಿ.ಮೀ ನಡೆಯಬೇಕಾಗುತ್ತದೆ. ಇದುಆಳವಾದ ಕೊಳ್ಳಕ್ಕೆ ಹಾದಿಮಾಡಿದ್ದು, ಅಲ್ಲಿಂದ ವಡ್ಡಿಕೊಳ್ಳವನ್ನು ದಾಟಿ, ಯಾಣವನ್ನುತಲುಪಬಹುದು. ಅಲ್ಲದೆಶಿರಸಿಯಿಂದ ದೇವಿಮನೆ ಘಾಟ್ಮತ್ತು ಹರಿಟಾದ ಮೂಲಕ ಹಾಗೂ ಹೆಗಡೆಘಟ್ಟಾದಿಂದ ಒಂಬತ್ತುಕಿ.ಮೀ.ಘಟ್ಟದಲ್ಲಿ ನಡೆದು ಸಹ ಇದನ್ನು ತಲುಪಬಹುದು. ಬೆಟ್ಟದಪಾದದಲ್ಲಿ ನಿಂತು ೯೦ ರಿಂದ ೧೨೦ ಮೀ.ಎತ್ತರವಿರುವ ಬಹುಸುಂದರವಾದ ಎರಡು ಶಿಲಾಬೆಟ್ಟಗಳನ್ನು ನೋಡಬಹುದು.ಸ್ಥಳೀಯವಾಗಿ ಇವುಗಳನ್ನು ಮೋಹಿನಿ ಶಿಖರ ಮತ್ತು ಭೈರವೇಶ್ವರಶಿಖರ ಎಂದು ಕರೆಯಲಾಗುತ್ತದೆ. ಈ ಬಂಡೆಗಳು ಕಪ್ಪು ಬಣ್ಣದಸ್ಫಟಿಕ ರೂಪದ ಸುಣ್ಣಶಿಲೆಯ ಘನ ರಚನೆಗಳಾಗಿದ್ದು, ಅವುಗಳಪಾರ್ಶ್ವವು ಹವೆಯಿಂದಾಗಿ ಒರಟಾಗಿವೆ. ಒಂದುಕಾಲುದಾರಿಯಮೂಲಕ ಅರ್ಧದಷ್ಟು ದೊಡ್ಡ ಬಂಡೆಯ ಪಾರ್ಶ್ವದಲ್ಲಿ ಹತ್ತಿಹೋದರೆ, ಸುಮಾರು ಮೂರು ಮೀ. ಅಗಲ ಪ್ರವೇಶವಿರುವಆಳವಾದ ಗುಹೆ ಇದೆ. ಬಂಡೆಯ ಮೂತಿಗಳಲ್ಲಿ ಎತ್ತರದಲ್ಲಿಹತ್ತಿರ ಹತ್ತಿರವಾಗಿ ಜೇನುಗೂಡುಗಳು ಜೋತು ಬಿದ್ದಿರುತ್ತವೆ.ಗುಹೆಯ ಮಧ್ಯದಲ್ಲಿ ಭೈರವೇಶ್ವರ ಎಂದು ಕರೆಯಲಾಗುವಎರಡು ಮೀ. ಎತ್ತರದ ಶಿವಲಿಂಗವಿದ್ದು, ಅದರ ಮೇಲಿರುವಬಂಡೆಯ ಚಾಚಿನಿಂದ ನೀರು ಲಿಂಗದ ಮೇಲೆ ಬೀಳುತ್ತದೆ.

ಇದನ್ನು ಗಂಗೋದ್ಭವ ಎಂದು ಕರೆಯುತ್ತಾರೆ. ಇದರ ದಕ್ಷಿಣಕ್ಕೆಸಣ್ಣ ಗುಹೆಯಲ್ಲಿ ಚಂಡಿಕಾ ಮತ್ತು ದುರ್ಗೆಯಕಂಚಿನ ಪ್ರತಿಮೆಇದೆ. ಬಂಡೆಗಳ ಮಧ್ಯದಿಂದ ಚಂಡಿಹೊಳೆ ಅಥವಾ ಬೆಳ್ಳಿಹಳ್ಳಎಂದು ಕರೆಯಲಾಗುವಹೊಳೆಯು ಹರಿದು ಉಪ್ಪಿನ ಪಟ್ಟಣದಹತ್ತಿರ ಅಘನಾಶಿನಿ ನದಿಯನ್ನು ಸೇರುತ್ತದೆ. ಪರಂಪರೆಯಪ್ರಕಾರ ಭಸ್ಮಾಸುರನು ತಾನು ಮುಟ್ಟಿದ್ದೆ ಬೂದಿಯಾಗಬೇಕೆಂಬವರವನ್ನು ಶಿವನಿಂದ ಪಡೆದ ಮೇಲೆ ಈ ವರವನ್ನು ಶಿವನಮೇಲೆಯೇ ಪ್ರಯೋಗಿಸಲು ಹೊರಟಾಗ ಶಿವನು ಈ ಬೆಟ್ಟಗಳಲ್ಲಿಆಶ್ರಯ ಪಡೆದನೆಂದು ಪ್ರತೀತಿ. ನಂತರಮೋಹಿನಿಯ ರೂಪದಲ್ಲಿವಿಷ್ಣನು ಭಸ್ಮಾಸುರನು ಬೂದಿಯಾಗುವಂತೆ ಮಾಡಿದನು. ಈಸ್ಥಳದ ಸುತ್ತಲೂ ದೊರೆಯುವ ಬಿಳಿ ಬೂದಿಯಂತಿರುವ ಮಣ್ಣುಆ ಅಸುರನು ಸುಟ್ಟು ಹೋದುದರಿಂದ ಉಂಟಾಯಿತೆಂದುಹೇಳಲಾಗುತ್ತದೆ. ಶಿವರಾತ್ರಿಯಲ್ಲಿ ನಡೆಯುವ ವಾರ್ಷಿಕ ಜಾತ್ರೆಯುಸಾವಿರಾರು ಜನರನ್ನು ಆಕರ್ಷಿಸುತ್ತದೆ. ಇಲ್ಲಿಯ ದಂಡೀತೀರ್ಥಹೊಳೆಯಲ್ಲಿ ಸ್ನಾನ ಮಾಡಿ ಪವಿತ್ರ ನೀರನ್ನು ಕೊಂಡೊಯ್ದುಗೋಕರ್ಣದಮಹಾಬಲೇಶ್ವರ ದೇವರನ್ನು ಪೂಜಿಸುವುದು ಭಕ್ತರಮುಖ್ಯ ಆಚರಣೆಯಾಗಿದೆ.

 

ಯಾದಗಿರಿ

ಕಲ್ಯಾಣದ ಚಾಳುಕ್ಯರಕಾಲದಲ್ಲಿ ರಾಜಧಾನಿಯಾಗಿದ್ದ ಇದನ್ನು ಶಾಸನಗಳಲ್ಲಿ ಏತಗಿರಿಎಂದು ಹೆಸರಿಸಲಾಗಿದೆ. ಯಾದಗಿರಿಯೇ ಕೋಟೆಯು ಮೂರುಸುತ್ತಿನದಾಗಿದ್ದು ಇಂದು ಶಿಧಿಲಾವಸ್ಥೆಯಲ್ಲಿದೆ.

 

ರಾಯಚೂರು

ಜಿಲ್ಲಾಕೇಂದ್ರವೂ ಆಗಿರುವ ರಾಯಚೂರು,ರಾಜಧಾನಿ ಬೆಂಗಳೂರಿನಿಂದ ೪೭೫ ಕಿ.ಮೀ. ದೂರದಲ್ಲಿದೆ.ಇಲ್ಲಿರುವ ಗಿರಿದುರ್ಗವು ವಾರಂಗಲ್ಲಿನ ಕಾಕತೀಯರಅಧಿಕಾರಿಯೊಬ್ಬನಿಂದ ೧೨೯೪ರಲ್ಲಿ ನಿರ್ಮಿಸಲ್ಪಟ್ಟು, ಮುಂದೆಬಹಮನಿ ಅರಸರಿಂದ ವಿಸ್ತೃತಗೊಂಡಿತು. ರಾಯಚೂರುಬಸ್‌ನಿಲ್ದಾಣದ ಸಮೀಪ ಕೋಟೆಯ ಗೋಡೆಯಲ್ಲಿಸೇರಿಸಲ್ಪಟ್ಟಿರುವ ೪೧ ಅಡಿ ಉದ್ದದ ಕಲ್ಲು ಫಲಕದ ಮೇಲಿರುವತೆಲುಗು ಶಾಸನ ಹಾಗೂ ದೊಡ್ಡ ದೊಡ್ಡಕಲ್ಲುಗಳನ್ನುಕೋಣಗಳಿಂದ ಎಳೆಯಲ್ಪಡುವ ಬಂಡಿಗಳ ಸಹಾಯದಿಂದ ಹೇಗೆಗುಡ್ಡದ ಮೇಲಕ್ಕೆಕೊಂಡೊಯಲ್ಪಟ್ಟವೆಂಬುದನ್ನು ತೋರಿಸುವಶಿಲ್ಪಗಳನ್ನೊಳಗೊಂಡಿದೆ. ಕೋಟೆಯ ಹೊರ ಸುತ್ತಿಗೆ ಐದುಭವ್ಯ ಪ್ರವೇಶ ದ್ವಾರಗಳಿದ್ದು, ಸಿಕಂದರಿ ದರವಾಜಾ ಹಾಗೂಸೈಲಾ ದರವಾಜಾ ಆಕರ್ಷವಾಗಿವೆ. ನವರಂಗಿದರವಾಜಾವನ್ನುವಿಜಯನಗರದ ಅರಸರು ನಿರ್ಮಿಸಿದ್ದು, ವಿಜಯನಗರದದರ್ಬಾರಿನ ಹಲವು ದೃಶ್ಯಗಳ ಶಿಲ್ಪಗಳನ್ನೊಳಗೊಂಡಿದೆ. ಊರಲ್ಲಿಮಹಮದ್ ಶಾ ಬಹುಮನಿಯ ಕಾಲದ ಭವ್ಯ ಏಕ್ ಮಿನಾರ್ಮಸೀದಿ ಇದೆ.ಇದರ ಮಿನಾರ್ ಸುಮಾರು ೬೫ ಅಡಿ ಎತ್ತರವಿದೆ.ಇಲ್ಲಿಯ ಜಾಮೀಯಾ ಮಸೀದಿ ಬಹು ದೊಡ್ಡದು. ಈಚೀನಅನೇಕ ದೇವಾಲಯಗಳು ಇಲ್ಲಿದ್ದು ಮಾಣಿಕಪ್ರಭು ಹಾಗೂರಾಮಲಿಂಗೇಶ್ವರ ದೇವಾಲಯಗಳುಗಮನಾರ್ಹವಾಗಿವೆ.

 

ಲಕ್ಕುಂಡಿ

ಲಕ್ಕುಂಡಿಯು ಜಿಲ್ಲಾ ಕೇಂದ್ರ ಗದಗದಿಂದ ೧೨ಕಿ.ಮೀ. ದೂರದಲ್ಲಿದ್ದು, ಕಲ್ಯಾಣದ ಚಾಳುಕ್ಯರ ಕಾಲದಿಂದಲೂಚಾರಿತ್ರಿಕ ಮಹತ್ವದ ವಾಸ್ತುಶಿಲ್ಪ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.ಇಲ್ಲಿ ಚಿತ್ತಾಕರ್ಷಕವಾದ ಕಾಶೀ ವಿಶ್ವೇಶ್ವರದೇವಾಲಯವಿದೆ. ತುಸುಹಾಳಾಗಿರುವ ಇದು, ದ್ವಿಕೂಟವಾಗಿದ್ದು, ಮುಖ್ಯ ಗರ್ಭಗೃಹದಲ್ಲಿಶಿವಲಿಂಗವಿದೆ. ಅದರಎದುರುಗಡೆ ಇರುವ ಚಿಕ್ಕ ಗರ್ಭಗೃಹದಲ್ಲಿಮೂಲತಃ ಸೂರ್ಯನ ವಿಗ್ರಹವಿತ್ತು. ಇಲ್ಲಿರುವ ಇನ್ನೊಂದುಗಮನಾರ್ಹ ಸ್ಮಾರಕವೆಂದರೆ ಬೃಹತ್ ಬ್ರಹ್ಮಜಿನಾಲಯ. ಇದನ್ನು’ದಾನಚಿಂತಾಮಣಿ’ ಬಿರುದಾಂಕಿತಅತ್ತಿಮಬ್ಬೆಯು ನಿರ್ಮಿಸಿದಳು.ಈ ಚಿಕ್ಕ ಊರು ಮಲ್ಲಿಕಾರ್ಜುನ, ಲಕ್ಷ್ಮೀನಾರಾಯಣ, ಮಾಣಿಕೇಶ್ವರ,ವೀರಭದ್ರ, ನನ್ನೇಶ್ವರ, ಸೋಮೇಶ್ವರ, ನೀಲಕಂಠೇಶ್ವರ ಇತ್ಯಾದಿದೇವಾಲಯಗಳಿಂದ ತುಂಬಿಕೊಂಡಿದೆ. ಭಾರತೀಯಪುರಾತತ್ವಸರ್ವೇಕ್ಷಣ ಇಲಾಖೆಯ ಪ್ರಾಚ್ಯವಸ್ತು ಸಂಗ್ರಹಾಲಯವುಲಕ್ಕುಂಡಿಯಲ್ಲಿದೆ. ಜಿಂದೇಶಾವಲಿ ದರ್ಗಾಕೂಡಾ ಇಲ್ಲಿದೆ. ಈಸ್ಥಳದಲ್ಲಿರುವ ಕಲ್ಯಾಣಚಾಳುಕ್ಯ ಶೈಲಿಯ ದೇವಾಲಯಗಳು ಕಲಾಪರಿಪೂರ್ಣತೆಯ ಅತ್ಯುತ್ತಮ ಪ್ರತೀಕವಾಗಿದ್ದು, ಇಲ್ಲಿ ದುಡಿದ ಶಿಲ್ಪಿಗಳ ಒಕ್ಕೂಟವೇ ನಂತರ ಹೊಯ್ಸಳ ಶೈಲಿಯ ದೇವಾಲಯಗಳನಿರ್ಮಾಣದಲ್ಲೂ ಶ್ರಮಿಸಿದುದು ಪ್ರಶಂಸನೀಯವಾಗಿದೆ.

 

 

ಲಕ್ಷ್ಮೇಶ್ವರ

ಧಾರವಾಡದಿಂದ ೭೨ ಕಿ.ಮೀ ದೂರದಲ್ಲಿ, ಶಿರಹಟ್ಟಿತಾಲ್ಲೂಕಿನಲ್ಲಿರುವ ಲಕ್ಷ್ಮೇಶ್ವರ ಪ್ರಾಚೀನ ಕಾಲದಲ್ಲಿ’ಹುಲಿಗೆರೆ’ಅಥವಾ ’ಪುಲಿಗೆರೆ’ ಎಂದು ಪ್ರಸಿದ್ಧವಾಗಿದ್ದು, ಪುಲಿಗೆರೆ-೩೦೦ಆಡಳಿತ ವಿಭಾಗದಕೇಂದ್ರಸ್ಥಳವಾಗಿತ್ತು. ಇಲ್ಲಿಯ ಸೋಮನಾಥಮತ್ತು ಲಕ್ಷ್ಮಣೇಶ್ವರ ದೇವಾಲಯಗಳು ಪ್ರಸಿದ್ಧವಾಗಿದ್ದು, ೫೦ಕ್ಕೂಹೆಚ್ಚು ಸಂಖ್ಯೆಯಲ್ಲಿರುವ ಶಾಸನಗಳು ಊರಿನ ಸಾಂಸ್ಕೃತಿಕಮಹತ್ವವನ್ನು ಸಾರುತ್ತವೆ. ಇದು ಬಾದಾಮಿಯಚಾಲುಕ್ಯರಕಾಲದಲ್ಲಿ ಜೈನ ಕೇಂದ್ರವಾಗಿತ್ತು. ಇಲ್ಲಿರುವ ಅದೇ ಕಾಲದಶಂಖಬಸದಿಯು ಕಾಲಕಾಲಕ್ಕೆ ಜೀರ್ಣೋದ್ಧಾರಗೊಂಡಿದೆ.ವಿಜಯಪುರದ ದಂಡನಾಯಕ ಅಂಕುಶಖಾನನು ನಿರ್ಮಿಸಿದಖಾಲಿ ಮಸೀದಿಯು ಅಲಂಕಾರಪೂರಿತ ರಚನೆಯಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಈ ಊರು ಮಿರಜ್‌ನ ಪಟವರ್ಧನರಸಂಸ್ಥಾನಕ್ಕೆ ಸೇರಿತ್ತು.

 

ವಜ್ರಪೋಹ ಜಲಪಾತ

ಬೆಳಗಾವಿ ಜಿಲ್ಲೆಯ ಖಾನಾಪುರದಿಂದ೨೩ ಕಿ.ಮೀ. ದೂರದಲ್ಲಿರುವ ಈ ಮನಮೋಹಕ ಸ್ಥಳ ಜಾಂಬೋಟಿಅರಣ್ಯದ ಬೆಟ್ಟಗಳ ಪರಿಸರದಲ್ಲಿದ್ದು, ಸರಳವಾಗಿ ತಲುಪುವುದುಕಷ್ಟ. ಜಾಂಬೋಟಿಯಿಂದ ಚಾಪೋಲಿ ತಲುಪಿನಾಲ್ಕು ಕಿ.ಮೀ.ಮುಂದೆ ಸಾಗಿದ ಮೇಲೆ ಮಹಾದಾಯಿ ನದಿಯನ್ನು ದಾಟಿದರೆಎತ್ತರವಾದ ಸಮತಟ್ಟಾದ ಬೆಟ್ಟವನ್ನು ತಲುಪಬಹುದು. ಹಾವಿನಂತೆಹರಿಯುವ ನದಿಯು ಮೊದಲು ೬೦ ಮೀಟರ್ ಎತ್ತರದಿಂದಧವಳಮಯವಾಗಿ ಧುಮ್ಮಿಕಿ ನಂತರ ಬಂಡೆಗಳಿಂದ ಆವೃತವಾದಕೊಳ್ಳಕ್ಕೆ ಗುಡುಗುಟ್ಟುತ್ತಾ ಧುಮುಕುತ್ತದೆ.ಇಲ್ಲಿಂದ ಮತ್ತೆ ೫೦ಮೀಟರ್‌ನಷ್ಟು ಆಳಕ್ಕೆ ಎರಡು ಬಾರಿ ಧುಮುಕುತ್ತದೆ. ಆದರೆಎರಡನೆಯ ಧುಮುಕು ಇಲ್ಲಿಂದ ಕಾಣುವುದಿಲ್ಲ. ಖಾನಾಪೂರಸಮೀಪದಲ್ಲಿರುವ ಆಸೋಗ ಗ್ರಾಮದಿಂದ ಆರು ಕಿ.ಮೀ. ನಡೆದರೆ,ಎರಡನೆಯ ಜಲಪಾತವನ್ನು ಕಾಣಬಹುದು. ನವೆಂಬರ್ ಮತ್ತುಜನವರಿ ತಿಂಗಳುಗಳ ನಡುವೆ ಈ ಸ್ಥಳವು ಭೇಟಿಕೊಡುವುದುಸೂಕ್ತ.

 

ವರಕೋಡು

ಮೈಸೂರು ಜಿಲ್ಲೆಯ ಕಸಬಾದಿಂದ ೧೨ಕಿ.ಮೀ ದೂರದಲ್ಲಿರುವ ಚಾರಿತ್ರಿಕ ಮಹತ್ವದ ಸ್ಥಳವನ್ನುಮೈಸೂರಿನಿಂದ ಬನ್ನೂರು ಹಾಗೂ ನರಸೀಪುರ ರಸ್ತೆ ಮೂಲಕತಲುಪಬಹುದಾಗಿದೆ. ಹಿಂದೆ ಇದೊಂದು ಹೋಬಳಿ ಕೇಂದ್ರವಾಗಿತ್ತು. ತಾಲೂಕಿನ ಕುಮಾರಿಬೇಡಿನಲ್ಲಿರುವ ಹೊಯ್ಸಳವಿಷ್ಣುವರ್ಧನನ ಕಾಲದ ಶಾಸನದಲ್ಲಿ ಈ ಊರು’ಓರೆಕೊಡು’ಎಂದು ಉಲ್ಲೇಖಿತಗೊಂಡಿದೆ. ವಿಶಾಲವಾದ ಪ್ರಾಕಾರದಿಂದ ನಡುವೆಇರುವ ಅವೃತ್ತವಾಗಿರುವ ಇಲ್ಲಿಯ ವರದರಾಜ ದೇವಾಲಯವುಅಂತಾರಾಳ, ದ್ವಿದ್ವಾಶ ನವರಂಗ ಹಾಗೂ ಮುಖಮಂಟಪಗಳನ್ನುಹೊಂದಿದೆ. ಪುಷ್ಕರಣಿಯಿಂದಾಗಿಯೂ ಪ್ರಸಿದ್ಧವಾಗಿದೆ. ಇತ್ತೀಚೆಗೆರಾಜ್ಯ ಪುರಾತತ್ವ ಇಲಾಖೆಯು ಇವುಗಳ ಜೀರ್ಣೋದ್ಧಾರಕಾರ್ಯವನ್ನು ಮುಗಿಸಿದ್ದು ಗದುಹಳ್ಳಿ ಮೂಲಮೂರ್ತಿಗಳಪ್ರತಿಷ್ಠಾಪನೆ ಆಗಬೇಕಿದೆ.ಸಾರ್ವಜನಿಕ ಪ್ರವೇಶಕ್ಕೆ ಅವಕಾಶಕಲ್ಪಿಸಬೇಕಿದೆ.

 

 

ವರುಣ

ಮೈಸೂರು ಜಿಲ್ಲೆಯ ಕಸಬಾದಿಂದ ೧೦ ಕಿ.ಮೀದೂರದಲ್ಲಿ, ನರಸಿಂಹಪುರ ರಸ್ತೆಯಲ್ಲಿರುವ ಇದೊಂದುಚಾರಿತ್ರಿಕ ಮಹತ್ವದ ಸ್ಥಳವಾಗಿದ್ದು ತಲಕಾಡಿನ ಗಂಗರಕಾಲದಷ್ಟು ಪ್ರಾಚೀನವಾಗಿದೆ. ಚಾಲುಕ್ಯರ ಶಾಖೆಯೊಂದರರಾಜಧಾನಿಯಾಗಿದ್ದ ಇದ್ದು ಹಿಂದೆ ಜೈನಕೇಂದ್ರವಾಗಿತ್ತು. ಅಲ್ಲಿರುವಮಹಾಲಿಂಗೇಶ್ವರ ಹಾಗೂ ದೇವರಮ್ಮಗುಡಿಗಳಿಂದಾಗಿ ಇಂದುಪ್ರಸಿದ್ಧವಾಗಿದೆ. ಇಲ್ಲಿಯ ಮಹಾದೇವಮ್ಮ ಗುಡಿಯು ಬಾಗಿಲನ್ನು ವರ್ಷದಲ್ಲೊಮ್ಮೆ  ಶಿವರಾತ್ರಿ ಸಂದರ್ಭದಂದು ಮಂಗಳವಾರಮಾತ್ರತೆರೆದು ಪೂಜಿಸಲಾಗಿದೆ.

 

 

ವಿಜಯಪುರ

ಜಿಲ್ಲಾ ಕೇಂದ್ರವಾದ ವಿಜಾಪುರವುಬೆಂಗಳೂರಿನಿಂದ ೫೭೯ ಕಿ.ಮೀ ದೂರದಲ್ಲಿದ್ದು ಇಂಡೋ-ಸಾರ್ಸೆನಿಕ್ ಕಲಾ ಶೈಲಿಯ ಮುಖ್ಯ ಕೇಂದ್ರವಾಗಿದೆ. ಇದುಆದಿಲ್‌ಶಾಹಿಗಳ (೧೪೮೯-೧೬೮೬) ರಾಜಧಾನಿಯಾಗಿತ್ತು.೧೨ನೇ ಶತಮಾನದ ಒಂದು ಶಾಸನದಲ್ಲಿ ಈ ಊರನ್ನು’ವಿಜಯಪುರ’ ಎಂದು ಕರೆಯಲಾಗಿದ್ದು ಹಿಂದೆ ಇದೊಂದುರಾಜಧಾನಿಪಟ್ಟಣವಾಗಿದ್ದು ಅಂಶ ಶಾಸನಗಳಿಂದ ವೇದ್ಯವಾಗುತ್ತದೆ.ಇಲ್ಲಿರುವ ಗೋಳಗುಮ್ಮಟವುಭಾರತದಲ್ಲಿಯೇ ಅತಿದೊಡ್ಡದಾದ೧೨೬ ಅಡಿ ವ್ಯಾಸವುಳ್ಳ ಗುಮ್ಮಟವನ್ನು ಹೊಂದಿದೆ. ಇದರಲ್ಲಿಮಹಮದ್ ಆದಿಲ್‌ಶಾಹನ(೧೬೨೬-೫೬) ಗೋರಿಯಿದೆ.ಅತೀ ಆಶ್ಚರ್ಯಕರ ಪಿಸುಗುಟ್ಟುವ ಗ್ಯಾಲರಿ ಇದರಲ್ಲಿದೆ.ಗೋಳಗುಮ್ಮಟವು ೧೫,೦೦೦ ಚದುರ ಅಡಿಯಷ್ಟು ಪ್ರದೇಶವನ್ನುವ್ಯಾಪಿಸಿದೆ. ಇಬ್ರಾಹಿಂ ರೋಜಾವುಎರಡನೇಯ ಇಬ್ರಾಹಿಂನ(೧೫೮೦-೧೬೨೬) ಸಮಾಧಿಯಾಗಿದ್ದು, ಕಮಾನುಗಳ ಆಧಾರದಮೇಲೆ ನಿಂತಿದೆ. ಇದರ ಒಂದು ಅಂಚಿನಲ್ಲಿ ಮಸೀದಿ ಇದ್ದು,ಇನ್ನೊಂದು ಅಂಚಿನಲ್ಲಿ ಗೋರಿಯಿದೆ. ಹೆನ್ರಿ ಕಸಿನ್ಸ್ ಇದನ್ನು ದಕ್ಷಿಣದ ತಾಜಮಹಲ್ ಎಂದು ಕರೆದಿದ್ದಾನೆ. ಆನಂದ ಮಹಲ್,ಗಗನ ಮಹಲ್, ಅಸರ್ ಮಹಲ್ ಮುಂತಾದವುಇಲ್ಲಿರುವಇತರ ಪ್ರಮುಖ ಕಟ್ಟಡಗಳು. 

ಇಲ್ಲಿ ಸುಂದರವಾದ ತಾಜ್ ಬಾವಡಿಹಾಗೂ ಚಾಂದ್ ಬಾವಡಿ ಎಂಬ ಬಾವಿ(ಕಲ್ಯಾಣಿ)ಗಳಿವೆ. ಅಸರ್ಮಹಲಿನಲ್ಲಿ ಸುಂದರವಾದ ವರ್ಣಚಿತ್ರಗಳಿವೆ. ಆದರೆ ಇಂದುಅವು ಮಸುಕಾಗಿವೆ. ಪಟ್ಟಣದ ಸುತ್ತ ಇರುವ ಕೋಟೆಯಲ್ಲಿ೯೬ಬುರುಜುಗಳಿದ್ದು ಆರು ಪ್ರವೇಶ ದ್ವಾರಗಳಿವೆ. ಮಾಲಿಕ್-ಎಮೈದಾನ್ ಎಂಬ ಬೃಹತ್ತಾದ ೫೫ ಟನ್ ತೂಕದತೋಪುಇದೆ. ಗೋಲ್‌ಗುಂಬಜ್ ಸಮೀಪ ವಸ್ತುಸಂಗ್ರಹಾಲಯವಿದೆ.ಈ ಪಟ್ಟಣವು ಪುರಸಭೆಯಆಡಳಿತಕ್ಕೊಳಪಟ್ಟಿದ್ದು ಇಲ್ಲಿ ಕಾಲೀಮಸೀದಿ, ಮಕ್ಕಾ ಮಸೀದಿ, ಮಲಿಕ್ ಜಹಾನ್ ಮಸೀದಿ,ಜುಮ್ಮಾ ಮಸೀದಿ ಮುಂತಾದ ಕಲಾತ್ಮಕವಾದ ಮಸೀದಿಗಳಿವೆ. ಇವುಗಳಲ್ಲಿ ಜಾಮಿಯಾ ಮಸೀದಿಯು ದೊಡ್ಡದಾಗಿದ್ದು,ಇದಕ್ಕೆ ಪ್ರಮಾಣಬದ್ಧವಾದ ದೊಡ್ಡ ಗುಮ್ಮಟವಿದೆ. ಇದರಪ್ರವೇಶದಲ್ಲಿರುವ ಮಹತರ್ ಮಹಲ್‌ನಲ್ಲಿ ಸೂಕ್ಷ್ಮ ಕೆತ್ತನೆಯುಳ್ಳಕಲ್ಲಿನ ಕಲಾಡುಗಳಿವೆ. ಕೋಟೆಯ ಪಶ್ಚಿಮಕ್ಕಿರುವದತ್ತಾತ್ರೇಯಗುಡಿಯನ್ನು ಎರಡನೆಯ ಇಬ್ರಾಹಿಂನು ಕಟ್ಟಿಸಿದನು. ಈದೇವಾಲಯದಲ್ಲಿ ನೃಸಿಂಹ ಸರಸ್ವತಿಯಪಾದುಕೆಗಳನ್ನು ಪೂಜೆಮಾಡಲಾಗುತ್ತದೆ. ಪಟ್ಟಣದಲ್ಲಿ ಪಾರ್ಶ್ವನಾಥ ಬಸದಿ(೧೯೨೭) ಇದೆ.ಅಲ್ಲದೇ ಸಾಕಷ್ಟು ಆಧುನಿಕ ದೇವಾಲಯಗಳು ಇವೆ. ಅವುಗಳಲ್ಲಿ೭೦ ಶಿವಲಿಂಗಗಳುಳ್ಳ ದೇವಾಲಯ(೧೯೫೪)ಗಮನಾರ್ಹವಾಗಿದೆ.ವಿಜಾಪುರವು ಉತ್ತುಂಗದಲ್ಲಿದ್ದಾಗ ೧೦ ಲಕ್ಷದಷ್ಟು ಜನಸಂಖ್ಯೆಇತ್ತು. ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಇದನ್ನು ’ದಕ್ಷಿಣದರಾಣಿ’ ಎಂದು ಕರೆಯತ್ತಿದ್ದರು. ಔರಂಗಜೇಬನು ವಶಪಡಿಸಿಕೊಂಡ ಮೇಲೆ ಇದರ ಪ್ರಾಮುಖ್ಯತೆ ಕುಂದಿತು. ೧೮೭೦ರ ದಶಕದಲ್ಲಿಬ್ರಿಟಿಷರು ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ ಮೇಲೆ ಇದರ ಪ್ರಾಮುಖ್ಯತೆ ಮರಳಿತು.

 

ಶ್ರವಣಬೆಳಗೊಳ

ಬೆಂಗಳೂರಿನಿಂದ ೧೫೭ ಕಿ.ಮೀದೂರದಲ್ಲಿರುವ ಶ್ರವಣಬೆಳಗೊಳ ಹಾಸನ ಜಿಲ್ಲೆಯ ಮಹತ್ವದಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಹಾಗೂ ಪ್ರಾಚೀನಜೈನಕೇಂದ್ರ. ಇಲ್ಲಿ ವಿಶಾಲವಾದ ಪುಷ್ಕರಿಣಿ, ಚಂದ್ರಗಿರಿಮತ್ತುಇಂದ್ರಗಿರಿ ಎಂದು ಕರೆಯಲಾಗುವ ಎರಡು ಶಿಲಾಬೆಟ್ಟಗಳಿವೆ.ಚಂದ್ರಗಿರಿಯಲ್ಲಿ ಗಂಗರ ಕಾಲದ ಚಂದ್ರಗುಪ್ತ ಬಸದಿ ಇದ್ದು,ಪಾರ್ಶ್ವನಾಥ ಬಸದಿಯು ಬಹು ದೊಡ್ಡದಾಗಿದೆ. ಬೆಟ್ಟದಬುಡದಲ್ಲಿರುವ ಜೈನಮಠದ ಗೋಡೆಗಳಲ್ಲಿ ಪ್ರಾಚೀನ ಭಿತ್ತಿಚಿತ್ರಗಳಿವೆ.ಇಂದ್ರಗಿರಿಯ ಮೇಲಿರುವ ೫೮ ಅಡಿ ಎತ್ತರದ ಏಕಶಿಲಾ ಗೊಮ್ಮಟಮೂರ್ತಿಯನ್ನು ಗಂಗ ದಂಡನಾಯಕನೂ ವಿದ್ವಾಂಸನೂಆಗಿದ್ದ ಚಾವುಂಡರಾಯನು ಕ್ರಿ.ಶ. ೯೮೨ರಲ್ಲಿ ಪ್ರತಿಷ್ಠಾಪಿಸಿದನು.ಇದಲ್ಲದೇ ಸಿದ್ಧರ ಬಸದಿ, ಒದೆಗಲ್ ಬಸದಿ, ಚೆನ್ನಮ್ಮ ಬಸದಿ,ಚೌವೀಸ ತೀರ್ಥಂಕರ ಬಸದಿ ಹಾಗೂ ಸುಂದರ ಬಳ್ಳಿಗಳಿಂದಅಲಂಕೃತವಾಗಿರುವ ತ್ಯಾಗದ ಬ್ರಹ್ಮದೇವನ ಕಂಬಗಳಿವೆ.ಊರಿನ ಉತ್ತರಕ್ಕೆ ಇರುವ ಜಿನನಾಥಪುರದಲ್ಲಿ ಹೊಯ್ಸಳರಕಾಲದ ಅರೆಗಲ್ ಬಸದಿ ಮತ್ತು ಶಾಂತಿನಾಥ ಬಸದಿಗಳಿವೆ.ಶ್ರವಣಬೆಳಗೊಳದಲ್ಲಿ ೫೦೦ಕ್ಕೂ ಹೆಚ್ಚು ಶಾಸನಗಳಿದ್ದು, ಅವುಗಳಲ್ಲಿಕೆಲವು ಜೈನ ಮುನಿಗಳ ಹಾಗೂ ಶ್ರಾವಕರ ಸಮಾಧಿ ಮರಣವನ್ನುದಾಖಲಿಸುತ್ತವೆ. ಇಲ್ಲಿಯ ಗೊಮ್ಮಟ ವಿಗ್ರಹವು ಬಹುಸುಂದರವಾದಅನನ್ಯ ಶಿಲ್ಪ. ೧೨ ವರ್ಷಗಳಿಗೊಮ್ಮೆ ಇದರ ಮಹಾಮಸ್ತಕಾಭಿಷೇಕಅದ್ದೂರಿಯಿಂದ ನಡೆಯುತ್ತದೆ. ಅನತಿ ದೂರದಲ್ಲಿರುವಜೈನಬಸದಿಗಳಿವೆ.

 

ಶಿರಸಿ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ತಾಲೂಕುಕೇಂದ್ರ ಕಾರವಾರದಿಂದ ೯೦ ಕಿ.ಮೀ. ದೂರದಲ್ಲಿದೆ. ಕ್ರಿ.ಶ.೧೧೫೦ರ ತಮ್ಮಡಿ ಕಲ್ಹಾಳದ (ಸಿದ್ದಾಪುರ ತಾಲೂಕು) ಶಾಸನದಲ್ಲಿಇದನ್ನು ಸಿರಸೆ ಎಂದು ಹೆಸರಿಸಲಾಗಿದೆ.ಊರಲ್ಲಿ ಶಂಕರ,ಗಣಪತಿ ಮತ್ತು ವೀರಭದ್ರ ದೇವರ ಪ್ರಾಚೀನ ಗುಡಿ ಹಾಗೂತ್ರೈಯಂಬಕೇಶ್ವರ ಮತ್ತು ಗೋಪಾಲಕೃಷ್ಣ ದೇವರ ಇತ್ತೀಚಿನಗುಡಿಗಳೂ ಇವೆ. ೧೬೮೯ರಲ್ಲಿ ನಿರ್ಮಿಸಿದ್ದರೆಂದು ಹೇಳಲಾಗುವಮಾರಿಕಾಂಬಾ ದೇವಾಲಯ ಗಮನಾರ್ಹವಾದುದು. ಅದರವಾಸ್ತುಶಿಲ್ಪವು ಅದ್ಭುತವಾಗಿದೆ. ಎರಡು ವರ್ಷಕ್ಕೊಮ್ಮೆಮಾಘಮಾಸದಲ್ಲಿ ನಡೆಯುವ ರಥೋತ್ಸವದಲ್ಲಿ ಸಾವಿರಾರುಭಕ್ತರು ಪಾಲ್ಗೊಳ್ಳುತ್ತಾರೆ. ಸ್ವಾತಂತ್ರ್ಯ ಚಳವಳಿಯ ಮುಖ್ಯಕೇಂದ್ರವಾಗಿದ್ದರಿಂದ ಮಹಾತ್ಮಗಾಂಧಿಯವರು ೧೯೩೪ರಲ್ಲಿಇಲ್ಲಿಗೆ ಬಂದಿದ್ದರು. ಈ ಊರಿನ ಮಾರಿಕಾಂಬ ದೇವಾಲಯದಲ್ಲಿಕೋಣವನ್ನು ಬಲಿಕೊಡುವ ಕ್ರೂರ ಪದ್ಧತಿಯು ಹಲವಾರುವರ್ಷಗಳಿಂದರೂಢಿಯಲ್ಲಿತ್ತು. ಇದನ್ನು ತಕ್ಷಣ ನಿಲ್ಲಿಸುವಂತೆಮನವಿ ಮಾಡಿ ಮಹಾತ್ಮ ಗಾಂಧೀಜಿಯವರು ಉಪವಾಸಸತ್ಯಾಗ್ರಹ ಹೂಡಿದರು. ಇವರ ಒತ್ತಾಯಕ್ಕೆ ಮಣಿದು ಸ್ಥಳೀಯರುಕೋಣವನ್ನು ಬಲಿಕೊಡುವ ಪದ್ದತಿಯನ್ನು ಅಂದಿನಿಂದಕೈಬಿಟ್ಟರೆಂದು ಪ್ರತೀತಿಯಿದೆ.

 

ಶಿವಗಂಗೆ

ಬೆಂಗಳೂರಿನಿಂದ ೬೦ ಕಿ.ಮೀ ದೂರದಲ್ಲಿರುವಶಿವಗಂಗೆ ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರಜಿಲ್ಲೆಯಲ್ಲಿರುವ ಪ್ರಧಾನ ಯಾತ್ರಾಸ್ಥಳ. ಇದೊಂದು ಶಂಖುವಿನಆಕಾರದ ಬೆಟ್ಟ. ಇಲ್ಲಿರುವ ಒಂದು ಗುಹೆಯಲ್ಲಿಶಿವಗಂಗಾಧರ ಗುಡಿಇದೆ. ಇನ್ನೊಂದು ಗುಹೆಯಲ್ಲಿ ಹೊನ್ನಾದೇವಿ ಇದ್ದು, ಇದು ಮೂಲತಃಗಂಗರ ಕಾಲದನೈಸರ್ಗಿಕ ಗುಹೆಯಾಗಿದ್ದು, ಮುಂದೆ ಹೊಯ್ಸಳರುಮತ್ತು ಬೆಂಗಳೂರಿನ ಕೆಂಪೇಗೌಡರೂ ಸೇರಿದಂತೆ ಇತರರಾಜವಂಶಗಳ ಆಳ್ವಿಕೆಯಲ್ಲಿ ವಿಸ್ತಾರವಾಗಲು ಕಾರಣರಾಗಿದ್ದಾರೆ.ಪರಂಪರೆಯ ಪ್ರಕಾರ ಇದು ಕಕುದ್ಗಿರಿ ಎಂದು ಕರೆಯಲ್ಪಡುತ್ತಿತ್ತು.ಇನ್ನೂ ಮೇಲಕ್ಕೆ ಬೆಟ್ಟವನ್ನು ಹತ್ತಿದರೆ ವಿಜಯನಗರ ಶೈಲಿಯಕಂಬಗಳುಳ್ಳ ಕೆಂಪೇಗೌಡನ ಹಜಾರ ಹಾಗೂ ಬೆಟ್ಟದ ತುದಿಯಲ್ಲಿಕುಂಭಿಬಸವ ವಿಗ್ರಹ ಇವೆ. ಬೆಟ್ಟದ ಪಾದದಲ್ಲಿ ಶಾಂತೇಶ್ವರ (ಶಿವ)ದೇವಾಲಯ, ಶೃಂಗೇರಿ ಸಂಪ್ರದಾಯದ ಶಂಕರಮಠ ಹಾಗೂಮಹಾಭಾರತ ರಾಮಾಯಣ ದೃಶ್ಯಗಳಉಬ್ಬುಶಿಲ್ಪಗಳುಳ್ಳ ಬೃಹತ್ಪುಷ್ಕರಿಣಿ ಇವೆ. ಬೆಟ್ಟದ ಮೇಲೆ ವೀರಶೈವರ ಮಹಾಂತ ಮಠವಿದ್ದುಮುಂಚೆ ೬೪ ಲಿಂಗಾಯತ ಮಠಗಳು ಇಲ್ಲಿದ್ದವೆಂದು ಹೇಳಲಾಗಿದೆ.ಶಿವದೇವಾಲಯದಲ್ಲಿರುವ ಅನೇಕ ವಿಗ್ರಹಗಳಲ್ಲಿಕೆಂಪೇಗೌಡನಭಕ್ತ ಶಿಲ್ಪ ಗಮನಾರ್ಹವಾದುದು.

 

ಶಿವಮೊಗ್ಗ

ಜಿಲ್ಲಾ ಕೇಂದ್ರವಾಗಿರುವ ಶಿವಮೊಗ್ಗವುತುಂಗಾನದಿಯ ದಂಡೆಯ ಮೇಲಿದ್ದು, ಬೆಂಗಳೂರಿನಿಂದ ೨೭೪ಕಿ.ಮೀ. ದೂರದಲ್ಲಿದೆ. ಇದು ಕೆಳದಿ ನಾಯಕರ ಕಾಲದಲ್ಲಿಗಮನಾರ್ಹ ಕೇಂದ್ರವಾಗಿತ್ತು. ಅವರ ಅರಮನೆಯು ಈಗ ರಾಜ್ಯ ಸರಕಾರದ ಪ್ರಾಚ್ಯವಸ್ತು ಇಲಾಖೆಯ ವಸ್ತುಸಂಗ್ರಹಾಲಯವಾಗಿಬಳಕೆಯಾಗುತ್ತಿದೆ. ಕೋಟೆಸೀತಾರಾಮಾಂಜನೇಯ ಗುಡಿಹಾಗೂ ರಾಘವೇಂದ್ರ ಮಠ ಊರಿನ ಹಳೆಯ ಸ್ಮಾರಕಗಳಾಗಿವೆ.ಶಿವಮೊಗ್ಗವು ಭತ್ತ ಮತ್ತು ಅಡಿಕೆಯ ವ್ಯಾಪಾರ ಕೇಂದ್ರವಾಗಿದ್ದು,ಸರಕಾರಿ ಗಂಧದ ಎಣ್ಣೆಯ ಕಾರಖಾನೆಯೂ ಅಲ್ಲಿದೆ. ಪಶ್ಚಿಮಘಟ್ಟಗಳ ಸಮೀಪದಲ್ಲಿರುವ ಈ ಸ್ಥಳ ತಂಪಾಗಿದೆ. ಇಲ್ಲಿ ಭೀಮೇಶ್ವರ,ಲಕ್ಷ್ಮೀನಾರಾಯಣ, ಗುಡ್ಡೆಕಲ್ ಸಿದ್ದೇಶ್ವರದೇವಾಲಯಗಳು ಮತ್ತುಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಪ್ರದಾಯದ ಸೇಕ್ರೆಡ್ ಹಾರ್ಟ್ಚರ್ಚ್ ಹಾಗೂ ಮಸೀದಿಗಳು ಇವೆ.

 

ಶಿರಾ

ತುಮಕೂರು ಜಿಲ್ಲೆಯ ಶಿರಾ ಒಂದು ತಾಲೂಕುಕೇಂದ್ರವಾಗಿದ್ದು, ತುಮಕೂರಿನಿಂದ ೫೨ ಕಿ.ಮೀ. ದೂರದಲ್ಲಿದೆ.ವಿಜಯನಗರದ ಸಾಮಂತ ರತ್ನಗಿರಿಯ ರಂಗಪ್ಪನಾಯಕನುಸಿರಿಯ ಎಂಬ ಪಟ್ಟಣವನ್ನು ಸ್ಥಾಪಿಸಿದನು. ಮುಂದೆ೧೬೮೬ ರಲ್ಲಿಮೊಘಲರು ಅದನ್ನು ಗೆದ್ದುಕೊಂಡು ಖಾನ್‌ಬಾಗ್ ಎಂಬ ಸುಂದರಉದ್ಯಾನವನ್ನು ರೂಪಿಸಿದರು. ಇಲ್ಲಿರುವ ಜುಮ್ಮಾ ಮಸೀದಿಯು೧೬೮೯ರಲ್ಲಿ ಕಟ್ಟಲ್ಪಟ್ಟ ಆಕರ್ಷಕ ಸ್ಮಾರಕ. ಮಲಿಕ್ ರಿಹಾನ್‌ನಗೋರಿಯು ಕೂಡ ಸುಂದರ ಕಟ್ಟಡವಾಗಿದೆ. ಮೊಘಲರಿಂದವಿಸ್ತರಿಸಲ್ಪಟ್ಟ ಈ ಕೋಟೆಯ ಭಾಗಗಳು ಅಲ್ಲಲ್ಲಿ ಇಂದಿಗೂ ಉಳಿದಿವೆ.ಇಲ್ಲಿರುವ ಗೋಪಾಲಕೃಷ್ಣ ದೇವಾಲಯದಲ್ಲಿ ಈಗ ವಿಗ್ರಹವಿಲ್ಲ.ಅದನ್ನು ನಾರಾಯಣ ದೇವಾಲಯದಲ್ಲಿ ಇರಿಸಲಾಗಿದೆಯೆಂದುಹೇಳಲಾಗಿದೆ. ಈ ಊರು ಮೊಘಲರ ಫೌಜುದಾರಿ ಕೇಂದ್ರವಾಗಿದ್ದು,ಖಾಸೀಮ ಖಾನನು ಮೊದಲ ಫೌಜುದಾರನಾಗಿದ್ದನು. ಮುಂದೆಇದು ಹೈದರನಿಗೆ ಕಾಣಿಕೆಯಾಗಿ ಬಂತು. ಶಿರಾದ ದಕ್ಷಿಣಕ್ಕೆ೨೪ ಕಿ.ಮೀ. ದೂರಲ್ಲಿರುವ ಸಿಬಿ (ಶಿರಾ ತಾಲೂಕು) ಮೊದಲುಸಿಬ್ಬೂರು ಎಂದು ಕರೆಯಲ್ಪಟ್ಟಿದ್ದು, ಇಲ್ಲಿ ೧೮ನೇಶತಮಾನದಲ್ಲಿಹೈದರನ ಕರಣಿಕನಾಗಿದ್ದ ನಲ್ಲಪ್ಪನು ಕಟ್ಟಿಸಿದ ನರಸಿಂಹ ಸ್ವಾಮಿಯದೇವಾಲಯವಿದೆ.ನಲ್ಲಪ್ಪನು ಕನ್ನಡದಲ್ಲಿ ಹೈದರನಾಮೆಯನ್ನು ಬರೆದಿದ್ದಾನೆ. ಈ ದೇವಾಲಯವು ರಾಮಾಯಣ, ಮಹಾಭಾರತ,ದಶಾವತಾರ ಮುಂತಾದ ಸುಂದರ ಪೌರಾಣಿಕ ಭಿತ್ತಿಚಿತ್ರಗಳಿಂದಅಲಂಕೃತವಾಗಿದೆ. ಇದಲ್ಲದೆ ಆಕರ್ಷಕಮಿಥುನ ಚಿತ್ರಗಳೂಸೇರಿದಂತೆ ಅನೇಕ ಲೌಕಿಕ ಚಿತ್ರಗಳೂ ಇವೆ. ಸಿಬಿ ನರಸಿಂಹಸ್ವಾಮಿದೇವಾಲಯದ ಮಹಾದ್ವಾರದಮೇಲ್ಛಾವಣಿಯಲ್ಲಿ ಅರಣ್ಯವೊಂದರದೃಶ್ಯವಿದ್ದು ಅದರಲ್ಲಿ ಬೇಟೆಗೆ ಸಂಬಂಧಿಸಿದ ಕೆಲವು ಸುಂದರದೃಶ್ಯಗಳಿವೆ.ಅವುಗಳಲ್ಲೊಂಡರಲ್ಲಿ ಬಂಡೆಗಳ ಮರೆಯಿಂದಪ್ರಾಣಿಗಳಿಗೆ ಗುರಿ ಇಡುತ್ತಿರುವ ಬೇಟೆಗಾರರನ್ನು ಚಿತ್ರಿಸಲಾಗಿದೆ.

 

ಶ್ರೀರಂಗಪಟ್ಟಣ

ಮಂಡ್ಯ ಜಿಲ್ಲೆಯಲ್ಲಿರುವ ಚಾರಿತ್ರಿಕಮಹತ್ವದ ತಾಲೂಕುಕೇಂದ್ರ. ಇದು ಹಿಂದೆ ಮೈಸೂರು ಅರಸರರಾಜಧಾನಿಯಾಗಿತ್ತು. ಹೈದರ್ ಮತ್ತು ಟಿಪ್ಪು ಕಾಲದಲ್ಲಿ೧.೫೦ ಲಕ್ಷ ಜನಸಂಖ್ಯೆ ಇಲ್ಲಿತ್ತು. ಇದು ಮೈಸೂರಿನಿಂದ೧೪ಕಿ.ಮೀ. ದೂರದಲ್ಲಿರುವ ಕಾವೇರಿ ನದಿಯ ಎರಡು ಕವಲುಗಳನಡುವಣ ನಡುಗಡ್ಡೆ. ಇಲ್ಲಿಯ ರಂಗನಾಥದೇವಾಲಯವನ್ನುಸುಮಾರು ಒಂಬತ್ತನೇ ಶತಮಾನದಲ್ಲಿ ತಲಕಾಡು ಗಂಗರದಂಡನಾಯಕನೊಬ್ಬನು ಕಟ್ಟಿಸಿದನೆಂದು ಪ್ರತೀತಿ. ಮುಂದೆ ೧೨ನೇಶತಮಾನದಲ್ಲಿ ಹೊಯ್ಸಳ ವಿನಯಾದಿತ್ಯನು ಈ ದೇವಾಲಯವನ್ನು ವಿಸ್ತರಿಸಿದನು. ಇಲ್ಲಿಯ ಕೋಟೆ ೧೪೫೪ರಲ್ಲಿ ನಿರ್ಮಾಣವಾದುದು.೧೬೧೦ರಲ್ಲಿ ವಿಜಯನಗರದಅಧಿಕಾರಿಯಿಂದ ಇದನ್ನುಕಸಿದುಕೊಂಡು ರಾಜಒಡೆಯರ ಕಾಲದಲ್ಲಿ ಮೈಸೂರು ಅರಸರುಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಕಾವೇರಿ ನದಿಯು ತನ್ನ ಪಾತ್ರದಲ್ಲಿ ಮೂರು ದ್ವೀಪಗಳನ್ನು(ನಡುಗಡ್ಡೆ) ಸೃಜಿಸಿದ್ದು ಮೊದಲನೆಯದುಶ್ರೀರಂಗಪಟ್ಟಣವಾಗಿದ್ದುಇಲ್ಲಿಯ ರಂಗನಾಥ ಸ್ವಾಮಿ ’ಆದಿರಂಗ’ವೆಂದು, ಶಿವನಸಮುದ್ರದಲ್ಲಿಎರಡನೆಯ ದ್ವೀಪವಿದ್ದು ರಂಗನಾಥಸ್ವಾಮಿಯ ’ಮಧ್ಯರಂಗ’ವೆಂದುಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಮೂರನೇ ದ್ವೀಪದಲ್ಲಿರಂಗನಾಥಸ್ವಾಮಿಯ ದೇವಾಲಯವಿದ್ದು ’ಅಂತ್ಯರಂಗ’ವೆಂದುಕರೆಯಲಾಗುತ್ತದೆ. ಶ್ರೀರಂಗಪಟ್ಟಣದರಂಗನಾಥನ ದೇವಾಲಯವುಹೊಯ್ಸಳ, ವಿಜಯನಗರ ಮತ್ತು ನಂತರದ ಲಕ್ಷಣಗಳನ್ನುವ್ಯಕ್ತಪಡಿಸುತ್ತಿದ್ದು,ಗೋಪುರವು ವಿಜಯನಗರ ಶೈಲಿಯಲ್ಲಿದೆಇಲ್ಲಿ ಗಂಗಾಧರೇಶ್ವರ ಜ್ಯೋತಿಮಹೇಶ್ವರ ಲಕ್ಷ್ಮಿ ನಾರಾಯಣಗುಡಿಗಳಲ್ಲಿದೆ ಪಾರ್ಶ್ವನಾಥನ ಬಸದಿಂದಲೂ ಇದೆ. ಇಲ್ಲಿ ಜೋಡಿಬಹುಮುಖಿ ಮಿನರೆಟ್ಟುಗಳಿರುವ ಸುಂದರ ಮಸೀದಿ ಇದೆ. ಊರಹೊರ ವಲಯದಲ್ಲಿರುವ ಗಂಜಾಂನಲ್ಲಿ ಟಿಪ್ಪುವಿನ ದರಿಯಾದೌಲತ್ ಅರಮನೆ ಹಾಗೂ ಹೈದರನ ಸಮಾಧಿಯಿರುವ ಗುಂಬಜ್ಇದ್ದು, ಇವೆರಡೂ ಸಹ ಇಂಡೋ-ಸಾರ್ಸೆನಿಕ್ ಶೈಲಿಯ ಆಕರ್ಷಕಕಟ್ಟಡಗಳಾಗಿವೆ. ಅರಮನೆಯಲ್ಲಿ ವರ್ಣಚಿತ್ರಗಳು, ಸುಂದರಮರಗೆಲಸವಿದ್ದು, ವಸ್ತು ಸಂಗ್ರಹಾಲಯವಿದೆ. ನದಿಯ ಪಶ್ಚಿಮವಾಹಿನಿಯ ದಂಡೆಯಲ್ಲಿ ಅನೇಕ ದೇವಾಲಯಗಳು ಹಾಗೂಹಳೆಯ ವಿಶ್ರಾಂತಿ ಗೃಹಗಳಿದ್ದು, ಮನಮೋಹಕ ಸ್ಥಳವಾಗಿದೆ.ಅಬ್ಬೆ ದುಬೇ ಚರ್ಚ್ ಹಾಗೂ ನರಸಿಂಹ ದೇವಸ್ಥಾನಗಳುನೋಡಲು ಯೋಗ್ಯವಾಗಿವೆ. ಅನತಿದೂರದಲ್ಲಿರುವ ನಿಮಿಷಾಂಬದೇವಾಲಯ, ಗೋಸಾಯಿಘಾಟ್ಹಾಗೂ ಸಂಗಮಗಳುಉಲ್ಲೇಖಾರ್ಹ ಸ್ಥಳಗಳಾಗಿವೆ.

 

ಶೃಂಗೇರಿ

ಬೆಂಗಳೂರಿನಿಂದ ೩೩೪ ಕಿ.ಮೀ. ದೂರದಲ್ಲಿರುವಈ ಸ್ಥಳ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರಮುಖ ತಾಲೂಕುಕೇಂದ್ರ. ಆಚಾರ್ಯ ಶಂಕರರು ಪ್ರಾರಂಭಿಸಿದ ಮಠಗಳಿರುವನಾಲ್ಕು ಕೇಂದ್ರಗಳಲ್ಲಿ ಶೃಂಗೇರಿಯೂ ಒಂದು.ಶೃಂಗೇರಿಯಲ್ಲಿಪ್ರಾಚೀನ ಪಾರ್ಶ್ವನಾಥ ಬಸದಿಯಿದೆ. ಆದಿಶಂಕರಾಚಾರ್ಯರುಸ್ಥಾಪಿಸಿದರೆಂದು ಹೇಳಲಾಗುವ ಶಾರದಾಂಬಾ ದೇವಾಲಯಇಲ್ಲಿದೆ. ಅಲ್ಲದೆ ತುಂಗಾನದಿಯ ದಂಡೆಯಮೇಲೆ ಸುಮಾರು೧೪ನೇ ಶತಮಾನದಲ್ಲಿ ನಿರ್ಮಿಸಲಾದ ಬಹು ಸುಂದರವಾದವಿದ್ಯಾಶಂಕರ ದೇವಾಲಯವಿದೆ. ಇದರಲ್ಲಿ ರಾಶಿ ಕಂಬಗಳೆಂದುಕರೆಯಲಾಗುವ ೧೨ ಕಂಬಗಳಿದ್ದು, ಚಾಂದ್ರಮಾನ ಮಾಸದಬೆಳಿಗ್ಗೆ ಒಂದೊಂದು ಕಂಬದ ಮೇಲೆಸೂರ್ಯಕಿರಣಗಳುಬೀಳುತ್ತವೆ. ಈ ರಾಶಿ ಕಂಬಗಳ (ದ್ವಾದಶ ಕಂಬಗಳು) ರಚನೆಯುವಾಸ್ತುಶಿಲ್ಪ ರಚನೆಯ ಚಾಕಚಕ್ಯತೆಯನ್ನು ಹಾಗೂ ವೈಜ್ಞಾನಿಕಪರಿಪೂರ್ಣತೆಯನ್ನು ಬಿಂಬಿಸುತ್ತದೆ. ಸಚ್ಚಿದಾನಂದ ವಿಲಾಸಆಶ್ರಮ, ಕಾಲಭೈರವ ದೇವಾಲಯ, ನರಸಿಂಹಭಾರತಿ ಮತ್ತುಚಂದ್ರಶೇಖರ ಭಾರತಿ ಯತಿಗಳ ಸ್ಮರಣಾರ್ಥ ನಿರ್ಮಿಸಿದದೇವಾಲಯಗಳು ಇಲ್ಲಿವೆ. ವಿಜಯನಗರ ಮತ್ತು ಮೈಸೂರುಸಂಸ್ಥಾನಗಳು ಹಾಗೂ ಇತರ ವಂಶಜರು ನೀಡಿದ ಸಮೃದ್ಧದಾನ-ದತ್ತಿಗಳಿಂದಾಗಿ ಶೃಂಗೇರಿಮಠವು ಜಹಗೀರಾಗಿ ಅಭಿವೃದ್ಧಿ  ಹೊಂದಿತು. ಟಿಪ್ಪು ಕೂಡ ಈ ಮಠಕ್ಕೆಧಾರಾಳವಾಗಿ ದಾನನೀಡಿದ್ದನು. ಶೃಂಗೇರಿಯು ಶಾಂತ ಸುಂದರ ಸ್ಥಳವಾಗಿದ್ದು,ಅತಿಥಿಗೃಹಗಳಅನುಕೂಲವನ್ನೂ ಹೊಂದಿದೆ. ಶೃಂಗೇರಿಮಠದಲ್ಲಿ ಉತ್ತಮವಾದ ಹಸ್ತಪ್ರತಿ ಸಂಗ್ರಹಾಲಯವಿದೆ. ಇದುಸಂಸ್ಕೃತ ಅಧ್ಯಯನ ಕೇಂದ್ರವೂ ಹೌದು. ಅನತಿ ದೂರದಲ್ಲಿಕಿಗ್ಗಪ್ರವಾಸಯೋಗ್ಯ ಕ್ಷೇತ್ರವಾಗಿದೆ.

 

ಸನ್ನತಿ

ಕಲಬುರಗಿ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರಚಿತ್ತಾಪೂರದಿಂದ ೪೮ ಕಿ.ಮೀ. ಹಾಗೂ ನಾಲವಾರ ರೈಲ್ವೇನಿಲ್ದಾಣದಿಂದ ೧೮ ಕಿ.ಮೀ ದೂರದಲ್ಲಿರುವ ಸನ್ನತಿಯುಭೀಮಾನದಿಯ ಎಡದಂಡೆಯ ಮೇಲಿರುವ ಕರ್ನಾಟಕದಪ್ರಮುಖ ಪ್ರಾಗೈತಿಹಾಸಿಕ ಮತ್ತು ಇತಿಹಾಸ ಕಾಲದ ನೆಲೆಯಾಗಿದೆ.ಮೌರ್ಯ ಮತ್ತು ಶಾತವಾಹನರ ಕಾಲದಲ್ಲಿ ಇದು ಪ್ರಮುಖಬೌದ್ಧ ಕೇಂದ್ರವಾಗಿತ್ತು. ಈ ಸ್ಥಳದಲ್ಲಿ ಅಶೋಕನ ನಾಲ್ಕುಪ್ರಧಾನ ಶಾಸನಗಳು ಸಿಕ್ಕಿವೆ.ಹತ್ತಿರದಲ್ಲಿರುವ ಕನಗನಹಳ್ಳಿಯಲ್ಲಿಮೌರ್ಯ-ಶಾತವಾಹನರ ಕಾಲದ ಬೌಧ್ಧ ಸ್ತೂಪಗಳಅವಶೇಷಗಳುಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿವೆ. ಇವುಅಶೋಕನ ಕಾಲದ ಸ್ತೂಪಗಳಾಗಿರಬಹುದೆಂಬ ಅಭಿಪ್ರಾಯಪುರಾತತ್ವಜ್ಞರಲ್ಲಿದೆ. ಇಲ್ಲಿಯ ಉತ್ಖನನದಿಂದ ಶಾತವಾಹನರಕಾಲದಲ್ಲಿ ಇದು ದೊಡ್ಡ ನಗರವಾಗಿತ್ತೆಂದು ಸಿದ್ಧವಾಗಿದೆ. ಇಲ್ಲಿಯಕೆಲವು ಶೋಧಗಳಿಂದ ರೋಮ್‌ನೊಂದಿಗೆ ಸಂಪರ್ಕವಿದ್ದುದುಬೆಳಕಿಗೆ ಬಂದಿದೆ. ಮರೆತುಹೋಗಿದ್ದ ಈ ನೆಲೆಯ ವೈಭವವನ್ನುಈಗ ಚಂದ್ರಲಾಂಬ ದೇವಾಲಯ ಮರಳಿಸಿದಂತಿದೆ. ಮೌರ್ಯರಕಾಲದ ಅವಶೇಷಗಳ ಮೇಲೆ ನಿಂತಿರುವ ಈ ದೇವಾಲಯವುರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲ್ಪಟ್ಟುಕಲ್ಯಾಣದ ಚಾಳುಕ್ಯರಕಾಲದಲ್ಲಿ ವಿಸ್ತೃತಗೊಂಡಿತು. ಸಂಕ್ರಮಣ, ಶ್ರಾವಣ ಮತ್ತುನವರಾತ್ರಿಯಲ್ಲಿ ವಿವಿಧ ಸ್ಥಳಗಳಿಂದ ಜನರು ಇಲ್ಲಿಗೆ ಬಂದುನಡೆದುಕೊಳ್ಳುತ್ತಾರೆ.

 

ಸಂಡೂರು

ಬಳ್ಳಾರಿ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರಸಂಡೂರು, ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿರುವ ಕೊಳ್ಳದಲ್ಲಿದ್ದು,ಈ ಬೆಟ್ಟಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರುಸಮೃದ್ಧವಾಗಿದೆ. ಸಂಡೂರಿನ ಹೆಸರು ಕನ್ನಡ ’ಸಂದು’ ಎಂಬಪದದಿಂದ ಹುಟ್ಟಿದ್ದು. ’ಸಂದು’ ಎಂದರೆ ಇಕ್ಕಟ್ಟಾದ ಹಾದಿಎಂದರ್ಥ. ೧೯೪೭ರವರೆಗೆ ಇದು ಘೋರ್ಪಡೆ ಎಂಬ ಮರಾಠಅರಸರ ಕೈಯಲ್ಲಿದ್ದು, ಕೋಟೆಯಿಂದ ಸುತ್ತುವರೆಯಲ್ಪಟ್ಟಿರುವಅರಮನೆಯು ಆಕರ್ಷಕ ಕಟ್ಟಡವಾಗಿದೆ. ಊರಲ್ಲಿ ಆಕರ್ಷಕ ಕಂಬಗಳಿರುವ ವಿಠೋಬಾ ಗುಡಿ ಇದೆ. ಅನತಿ ದೂರದಲ್ಲಿರುವಬೆಟ್ಟದ ಸಾಲಿನಲ್ಲಿಕುಮಾರಸ್ವಾಮಿ ಮತ್ತು ಪಾರ್ವತಿಯ ಸುಂದರಗುಡಿಗಳಿವೆ. ಪಾರ್ವತಿ ದೇವಾಲಯವು ಪ್ರಾಯಶಃ ಬಾದಾಮಿಯಚಾಲುಕ್ಯರ ಕಾಲದ ಕುಮಾರಸ್ವಾಮಿಯ ಮೂಲ ದೇಗುಲವಾಗಿದ್ದು,ನಂತರದಲ್ಲಿ ಇತ್ತೀಚಿನ ಪಾರ್ವತಿಯ ವಿಗ್ರಹವನ್ನೊಳಗೊಂಡಿದೆ.ನೆರೆಯ ಕುಮಾರಸ್ವಾಮಿ ದೇವಾಲಯವು ಷಣ್ಮುಖನ ಆಧುನಿಕವಿಗ್ರಹವಿರುವರಾಷ್ಟ್ರಕೂಟರ ಕಾಲದ ದೇವಾಲಯವಾಗಿದೆ.

ಈ ಜೋಡಿ ದೇವಾಲಯಗಳು ಅತ್ಯಂತ ಮನಮೋಹಕಪರಿಸರದಲ್ಲಿದ್ದು, ಉದ್ಯಾನದಿಂದ ಸುತ್ತುವರಿಯಲ್ಪಟ್ಟಿವೆ.ಈಸ್ಥಳ ಸಂಡೂರಿನಿಂದ ೧೨ ಕಿ.ಮೀ ದೂರದಲ್ಲಿದೆ. ಹತ್ತಿರದಲ್ಲಿಯೇಕಲಬುರಗಿ ವಿಶ್ವವಿದ್ಯಾಲಯದ ನಂದೀಹಳ್ಳಿಸ್ನಾತಕೋತ್ತರಕೇಂದ್ರವಿದೆ. ಸಂಡೂರಿನಿಂದ ೧೬ ಕಿ.ಮೀ. ದೂರದಲ್ಲಿ ರಾಮನದುರ್ಗಅಥವಾ ರಾಮಗಡವಿದೆ. ದೆಹಲಿಯ ಸುಲ್ತಾನನ ಸೈನ್ಯದೊಂದಿಗೆಹೋರಾಡಿ ವೀರಮರಣವನ್ನಪ್ಪಿದ ಕುಮಾರರಾಮನಸ್ಮರಣಾರ್ಥವಾಗಿ ನಿರ್ಮಿಸಿರುವ ರಾಮದೇವಾಲಯವು ಈತಂಪಾದ ಗಿರಿಧಾಮದಲ್ಲಿದೆ.

 

ಸಿರವಾಳ

ತಾಲೂಕು ಕೇಂದ್ರ ಶಹಾಪುರದಿಂದ ೧೫ ಕಿ.ಮೀ.ದೂರದಲ್ಲಿರುವ ಸಿರವಾಳವು ಭೀಮಾ ನದಿಯ ದಂಡೆಯಮೇಲಿರುವ ಚಾರಿತ್ರಿಕ ಸ್ಥಳವಾಗಿದ್ದು, ೨೦ಕ್ಕೂ ಹೆಚ್ಚು ಪ್ರಾಚೀನದೇವಾಲಯಗಳು ಇಲ್ಲಿ ಇವುಗಳಲ್ಲಿ ಒಟ್ಟು ೧೦ ದೇವಾಲಯಗಳುಊರಲ್ಲಿವೆ. ಅವುಗಳಲ್ಲಿ ಏಳು ಅಣಬಿ ರಸ್ತೆಯಲ್ಲಿದ್ದು, ಉಳಿದಮೂರು ದೇಗುಲಗಳು ಸುಜ್ಞಾನೇಶ್ವರ, ನನ್ನಯ್ಯ ಹಾಗೂನಾಗಯ್ಯ ದೇಗುಲಗಳೆಂದು ಹೆಸರು ಹೊತ್ತಿವೆ. ನನ್ನಯ್ಯಹಾಗೂ ನಾಗಯ್ಯ ದೇವಾಲಯಗಳು ರಾಷ್ಟ್ರಕೂಟರ ಕಾಲದವು.ಅಣಬಿ ರಸ್ತೆಯಲ್ಲಿ ಹರಡಿರುವ ದೇವಾಲಯಗಳಲ್ಲಿ ಐದುಏಕಕೂಟ ಮತ್ತು ಎರಡು ದ್ವಿಕೂಟ ದೇವಾಲಯಗಳಾಗಿದ್ದು,ಇವು ಜೀರ್ಣಾವಸ್ಥೆಯಲ್ಲಿವೆ. ಸುಜ್ಞಾನೇಶ್ವರ ಹಾಗೂ ಅಣಬಿರಸ್ತೆಯಲ್ಲಿರುವ ದೇವಾಲಯಗಳ ಪುಷ್ಕರಣಿಗಳು ಪಂಚತಂತ್ರದಸುಂದರ ಕಥಾನಿರೂಪಕ ಶಿಲ್ಪಗಳನ್ನು ಹೊಂದಿವೆ.ಊರಲ್ಲಿರುವ ೧೦ದೇವಾಲಯಗಳಲ್ಲಿ ಸಿದ್ಧಲಿಂಗೇಶ್ವರ ದೇವಾಲಯವು ಅಪರೂಪದಸರ್ವತೋಭದ್ರತಲವಿನ್ಯಾಸವನ್ನು ಹೊಂದಿದೆ. ಇದು ಪಂಚಕೂಟದೇವಾಲಯವಾಗಿದ್ದು, ಮಧ್ಯದಲ್ಲಿ ಮುಖ್ಯ ಗರ್ಭಗೃಹ ಹಾಗೂಅದರ ನಾಲ್ಕು ದಿಕ್ಕುಗಳಲ್ಲಿ ಉಳಿದ ನಾಲ್ಕು ಗರ್ಭಗೃಹಗಳಿವೆ.ಇವುಗಳನ್ನು ಬಹಳ ಸುಂದರ ವಿನ್ಯಾಸಗಳಿಂದ ಅಲಂಕರಿಸಲಾಗಿದೆ.ಇಲ್ಲಿರುವ ಒಂದು ಶಾಸನದಲ್ಲಿ ಶರಣ ರೇವಣಸಿದ್ಧಯ್ಯ ಹಾಗೂಅವನ ತಂದೆ ಶಿವಯೋಗಿ ಶಾಂತಿಮಯ್ಯನ ಉಲ್ಲೇಖವಿದ್ದು, ಈಸ್ಥಳದೊಂದಿಗೆ ಅವರಿಗಿದ್ದ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಪ್ರಸಿದ್ಧಶರಣ ಸಿರಿಯಾಳಸೆಟ್ಟಿಯು ಇಲ್ಲಿಯವನೆಂದು ಸ್ಥಳೀಯ ಪರಂಪರೆನಂಬುತ್ತದೆ. ಇದಲ್ಲದೇ ಬಲಭೀಮೇಶ್ವರ,ಮಲ್ಲಿಕಾರ್ಜುನ,ನೆಲದಡಿಯ ದೇವಾಲಯ, ಹನುಮಂತ ದೇವಾಲಯ ಹಾಗೂನಿರ್ದಿಷ್ಟ ಹೆಸರಿರದ ಇನ್ನೊಂದು ದೇವಾಲಯ ಇದ್ದು, ಅವೆಲ್ಲಈಗ ಜೀರ್ಣಾವಸ್ಥೆಯಲ್ಲಿದ್ದರೂ ಗಮನಾರ್ಹವಾಗಿವೆ. ಇಲ್ಲಿಯಕಲ್ಯಾಣಿಯೊಂದರಲ್ಲಿರುವ ಪಂಚತಂತ್ರ ಕಥಾನಕ ಶಿಲ್ಪಗಳುಉಲ್ಲೇಖಾರ್ಹವಾಗಿವೆ. ಇಲ್ಲಿಂದು ಹೊಳೆದಾಟಿಸನ್ನತಿಯನ್ನುಸುಲಭವಾಗಿ ತಲುಪಬಹುದಾಗಿದೆ.

 

ಸುರಪುರ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯಾದಗಿರಿಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಬೆಂಗಳೂರಿನಿಂದ೫೨೦ ಕಿ.ಮೀ. ದೂರದಲ್ಲಿದೆ. ಅದರ ಶಾಸನೋಕ್ತ ಹೆಸರುಸುರಪುರ ಎಂದಿದ್ದು, ಸಾಮಂತ ನಾಯಕರಕೇಂದ್ರವಾಗಿಸಗರ ನಾಡಿನ ಹೃದಯ ಭಾಗದಲ್ಲಿತ್ತು. ಊರಿಗೆ ಉತ್ತಮಕೋಟೆಯಿದ್ದು, ಅರಮನೆಯ ಭಾಗಗಳನ್ನು ತೆಗೆದುಹಾಕಲಾಗುತ್ತಿದೆ. ಅದರ ಅರಸ ವೆಂಕಟಪ್ಪನಾಯಕನು೧೮೫೮ರಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದಿದ್ದನು. ಮೆಡೋಸ್ಟೇಲರ್ ಇಲ್ಲಿ ಬ್ರಿಟಿಷ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದನು.‌ ಅವನು ವಾಸವಾಗಿದ್ದಟೇಲರ್‌ಮಂಜಿಲ್’ಮನೆ ಚಿಕ್ಕಗುಡ್ಡದಮೇಲಿದ್ದು, ಈಗ ಅತಿಥಿಗೃಹವಾಗಿ ಬಳಕೆಯಾಗುತ್ತಲಿದೆ. ಊರಲ್ಲಿಗೋಪಾಲಸ್ವಾಮಿಯಸುಂದರ ದೇವಾಲಯವಿದೆ.

 

ಸೋಮನಾಥಪುರ

ಜಿಲ್ಲಾ ಕೇಂದ್ರ ಮೈಸೂರಿನಿಂದ ೪೦ ಕಿ.ಮೀ.ಹಾಗೂ ತಾಲೂಕು ಕೇಂದ್ರ ಟಿ.ನರಸೀಪುರದಿಂದ ೧೦ ಕಿ.ಮೀ.ದೂರದಲ್ಲಿ ಬನ್ನೂರು ರಸ್ತೆಯ ಬದಿಯಲ್ಲಿರುವ ಸೋಮನಾಥಪುರವುಹೊಯ್ಸಳರ ದೇವಾಲಯ ವಾಸ್ತುಕಲೆ ಉತ್ತುಂಗದಲ್ಲಿದ್ದಾಗನಿರ್ಮಾಣಗೊಂಡ ಆಕರ್ಷಕ ದೇವಾಲಯವನ್ನು ಹೊಂದಿದೆ.ಇಲ್ಲಿಯ ಪ್ರಸಿದ್ಧ ಕೇಶವ ದೇವಾಲಯದ ಮೂರೂ ವೇಸರಶಿಖರಗಳು ಸುಸ್ಥಿತಿಯಲ್ಲಿವೆ. ಸೋಮನಾಥಪುರವು ವಿದ್ಯಾನಿಧಿಅಗ್ರಹಾರವೆಂದು ಕರೆಯಲ್ಪಟ್ಟಿದ್ದು, ಹೊಯ್ಸಳ ಮುಮ್ಮಡಿನರಸಿಂಹನ ದಂಡನಾಯಕ ಸೋಮನಾಥ ದಂಡನಾಯಕನುಇಲ್ಲಿ ತ್ರಿಕೂಟ ವಿಷ್ಣು ದೇವಾಲಯವನ್ನು ಕಟ್ಟಿಸಿ, ಊರಿಗೆ ತನ್ನಹೆಸರನ್ನಿಟ್ಟನು. ಪಂಚಲಿಂಗೇಶ್ವರ, ಲಕ್ಷ್ಮೀನಾರಾಯಣ ಹಾಗೂನರಸಿಂಹೇಶ್ವರ ದೇವಾಲಯಗಳು ಇಲ್ಲಿರುವ ಇತರ ಹೊಯ್ಸಳದೇವಾಲಯಗಳು. ಕೇಶವ ದೇವಾಲಯವು ೨೧೫ ಅಡಿ ಉದ್ದ೧೭೭ ಅಡಿ ಅಗಲವುಳ್ಳ ಪ್ರಾಕಾರದೊಳಗೆ ನಿರ್ಮಿತವಾಗಿದೆ. ಎತ್ತರದಜಗತಿಯ ಮೇಲೆ ಮೂರು ಗರ್ಭಗೃಹಗಳನ್ನು ಹೊಂದಿರುವ ಈದೇಗುಲಕ್ಕೆ ಮೂರು ಭವ್ಯ ಶಿಖರಗಳಿವೆ. ಮೂರೂ ಗರ್ಭಗೃಹಗಳುಒಂದೇ ನವರಂಗದಲ್ಲಿ ತೆರೆದುಕೊಂಡಿದ್ದು, ಇದಕ್ಕೆ ಒಂದೇಪ್ರವೇಶವಿದೆ. ದೇವಾಲಯದ ಗೋಡೆಯ ತುಂಬ ಕುಶಲಪೂರ್ಣಕೆತ್ತನೆಯ ಅಲಂಕಾರವಿದ್ದು, ನಾಟ್ಯಸರಸ್ವತಿ, ನಾಟ್ಯ ಗಣಪತಿ,ಮಹಿಷಮರ್ದಿನಿ, ವರಾಹ, ಈಶ್ವರ, ಇಂದ್ರ, ಇತ್ಯಾದಿ ಪ್ರತಿಮೆಗಳಸಾಲುಗಳು ಹಾಗೂ ವೈಷ್ಣವ ಪುರಾಣಗಳಕಥಾನಿರೂಪಕ ಚಿಕಣಿಶಿಲ್ಪಗಳೂ ಇವೆ. ನವರಂಗದಲ್ಲಿ ಬಹು ಸುಂದರ ಬಳ್ಳಿ ಮತ್ತುವಿವಿಧ ಕೋನಾಕಾರದಚಿತ್ರಗಳುಳ್ಳ ಅಲಂಕಾರಪೂರಿತ ೧೬ಅಂಕಣಗಳಿವೆ. ಮುಖ್ಯಗರ್ಭಗೃಹದಲ್ಲಿದ್ದ ಮೂಲ ಕೇಶವ ವಿಗ್ರಹವುಈಗ ಇಲ್ಲ. ಆದರೆ ಉಳಿದೆರಡು ಗರ್ಭಗೃಹಗಳಲ್ಲಿರುವ ಜನಾರ್ಧನಮತ್ತು ವೇಣುಗೋಪಾಲ ವಿಗ್ರಹಗಳು ಮನಮೋಹಕವಾಗಿವೆ.ಶಿಖರಗಳು ಅಲಂಕಾರ ಪೂರಿತ ರಥಗಳಂತೆ ಕಂಗೊಳಿಸುತ್ತವೆ.ಕೇಶವ ದೇವಾಲಯದ ಗೋಡೆಯ ಶಿಲ್ಪ ಪಟ್ಟಿಕೆಗಳಲ್ಲಿ ಮಲ್ಲಿತಮ,ಬಲಯ್ಯ, ಚೌಡಯ್ಯ, ಚಾಮಯ್ಯ, ಬರ್ಮಯ್ಯ, ನಂಜಯ್ಯಎಲಸಮಯ್ಯ ಮುಂತಾದ ಓಜರ ಹೆಸರುಗಳಿರುವುದು ದಾಖಲಾರ್ಹ.

ಅತಿ ಆಕರ್ಷಕ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಈತ್ರಿಕೂಟಾಚಲ ಕೇಶವ ದೇವಾಲಯವು ಹೊಯ್ಸಳ ಕಲಾಪ್ರಿಯರಿಗೆ ನೋಡಲೇಬೇಕಾದ ದೇವಾಲಯವಾಗಿದೆ. ಪಂಚಲಿಂಗದೇವಾಲಯವು ಹೆಚ್ಚು ಅಲಂಕೃತವಲ್ಲದ ದೇವಾಲಯವಾಗಿದ್ದರೂನಾಲ್ಕು ಗರ್ಭಗುಡಿಗಳನ್ನು ಒಂದೇ ಸಾಲಿನಲ್ಲಿ ಹೊಂದಿದೆ.

 

ಸೋಂದಾ

ಇದು ಉತ್ತರ ಕನ್ನಡ ಜಿಲ್ಲೆಯ ತಾಲೂಕುಕೇಂದ್ರ ಶಿರಸಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಇದುಹಿಂದೆ ವಿಜಯನಗರದ ಸಾಮಂತರಾಗಿದ್ದ ಸೋಂದೆ ಅರಸರರಾಜಧಾನಿಯಾಗಿತ್ತು. ೧೭೬೩ ರಲ್ಲಿ ಹೈದರನುಆಕ್ರಮಿಸಿದಮೇಲೆ, ಹಿಂದೆ ಪ್ರಮುಖ ಪಟ್ಟಣವಾಗಿದ್ದ ಈ ಊರು ತನ್ನಮಹತ್ವವನ್ನು ಕಳೆದುಕೊಂಡಿತು. ಇಲ್ಲಿಯಅನೇಕ ಹಳೆಯಸ್ಮಾರಕ ಅರಣ್ಯದಲ್ಲಿ ಅಲ್ಲಲ್ಲಿ ಹರಡಿಕೊಂಡಿವೆ. ಹಿಂದೆ ಇದೊಂದುಜೈನ ಕೇಂದ್ರವಾಗಿದ್ದು,೧೬೦೪ ರಲ್ಲಿ ತೀರಿಕೊಂಡ ಭಟ್ಟಾಕಳಂಕನಸಮಾಧಿ ಹಾಗೂ ಜೈನ ಮಠಗಳು ಇಲ್ಲಿವೆ. ಸಮೀಪದಲ್ಲಿರುವಸ್ವರ್ಣವಲ್ಲಿ ಮಠವು ಸ್ಮಾರ್ತ ಹವ್ಯಕ ಸಂಪ್ರದಾಯದ್ದು. ಅರಸಪ್ಪನಾಯಕನು ಮಾಧ್ವಪರಂಪರೆಯ ಪ್ರಸಿದ್ಧ ಯತಿವಾದಿರಾಜತೀರ್ಥರ ಭಕ್ತನಾಗಿದ್ದನು. ವಾದಿರಾಜತೀರ್ಥರು (೧೪೮೦-೧೬೦೦)ಅಷ್ಟಮಠಗಳಲ್ಲಿ ಒಂದಾದ ತಮ್ಮ ಮಠವನ್ನು ಉಡುಪಿಯಿಂದಇಲ್ಲಿಗೆ ಸ್ಥಳಾಂತರಿಸಿದರು. ಅವರ ಸಜೀವ ಬೃಂದಾವನವೂ ಇಲ್ಲಿದೆ.ವಾದಿರಾಜರನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಿಗಿಂತಬಹಳ ಮುಂಚೆಯೇ ಬೃಂದಾವನವನ್ನುಸಜೀವವಾಗಿ ಪ್ರವೇಶಿಸಿದಮೊದಲ ಯತಿಯೆಂದು ಭಾವಿಸಲಾಗಿದೆ. ಈ ರೀತಿ ಜೀವಂತವಾಗಿಬೃಂದಾವನ ಪ್ರವೇಶ ಮಾಡುವ ಕ್ರಿಯೆಗೆ ’ಪ್ರಾಯೋಪ್ರವೇಶ’ವೆಂದು ಕರೆಯಲಾಗುತ್ತದೆ. ವಾದಿರಾಜರು ನಿರ್ಮಿಸಿದ ತ್ರಿವಿಕ್ರಮದೇವಾಲಯವಿಲ್ಲಿದೆ. ಸೋಂದೆಯ ಸಮೀಪದಲ್ಲಿರುವ ಹವ್ಯಕಬ್ರಾಹ್ಮಣರ ಸ್ವರ್ಣವಲ್ಲಿ ಮಠವು ಸಾಂಪ್ರದಾಯಿಕತಾಳೆಯೋಲೆ(ತಾಡೋಲೆ) ಹಸ್ತಪ್ರತಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ.ಇವಲ್ಲದೇ ಶಂಕರನಾರಾಯಣ ದೇವಾಲಯ ಮತ್ತು ಗದ್ದುಗೆಮಠಕೂಡ ಇಲ್ಲಿವೆ. ಸುಮಾರು ೯೧ ಅಡಿ ಎತ್ತರದಿಂದ ಧುಮುಕುವಶಿವಗಂಗಾ ಜಲಪಾತವನ್ನು ಶಾಲ್ಮಲಾ ನದಿಯು ರೂಪಿಸಿದ್ದು,ಸೋಂದಾದಿಂದ ಇದು ಐದು ಕಿ.ಮೀ. ದೂರದಲ್ಲಿದೆ.ಶಿಲಾಪಥದಲ್ಲಿಹರಿಯುವ ಈ ನದಿಯ ತೀರದುದ್ದಕ್ಕೂ ಸಹಸ್ರಲಿಂಗಗಳನ್ನುಕಟೆದಿದ್ದು, ಇದರ ಪರಿಸರವುಮನಮೋಹಕವಾಗಿದೆ. ಸೋದೆಗೆಭೇಟಿ ನೀಡುವ ಸಾವಿರಾರು ಜನ ಭಕ್ತಿಯಿಂದ ಇದಕ್ಕೂನಡೆದುಕೊಳ್ಳುತ್ತಾರೆ.

 

ಸೌಂದತ್ತಿ

ಬೆಳಗಾವಿ ಜಿಲ್ಲೆಯ ಸೌಂದತ್ತಿ ಒಂದು ತಾಲೂಕುಕೇಂದ್ರವಾಗಿದ್ದು, ಬೆಳಗಾವಿಯಿಂದ ೭೪ ಕಿ.ಮೀ. ದೂರದಲ್ಲಿದೆ.ಊರ ಬೆಟ್ಟದಲ್ಲಿ ಸುಮಾರು ೧೮ ನೇ ಶತಮಾನದಲ್ಲಿ ಸಿರಸಂಗಿದೇಸಾಯಿ ನಿರ್ಮಿಸಿದ ಎಂಟು ಬುರುಜುಗಳುಳ್ಳ ಕೋಟೆಯಿದೆ.ಹಿಂದೆ ಅದು ರಟ್ಟರ ರಾಜಧಾನಿಯೂ ಆಗಿತ್ತು. ನಂತರಅವರು ಬೆಳಗಾವಿಗೆ ರಾಜಧಾನಿಯನ್ನುಸ್ಥಳಾಂತರಿಸಿದರು.ಸೌಂದತ್ತಿಯಲ್ಲಿ ರಟ್ಟರ ಕಾಲದ ಎರಡು ಬಸದಿಗಳು, ಅಂಕೇಶ್ವರ,ಪುರದೇಶ್ವರ,ಮಲ್ಲಿಕಾರ್ಜುನ, ವೆಂಕಟೇಶ್ವರ, ಮತ್ತು ವೀರಭದ್ರದೇವಾಲಯಗಳಿವೆ. ಪುರದೇಶ್ವರ ಗುಡಿಯು ಕಲ್ಯಾಣದಚಾಲುಕ್ಯರಕಾಲದ ದೇವಾಲಯವಾಗಿದ್ದು ಈಗ ಶಿಥಿಲವಾಗಿದೆ. ಅಂಕೇಶ್ವರದೇವಾಲಯವು ೧೦೪೮ ರಲ್ಲಿರಟ್ಟರಿಂದ ನಿರ್ಮಿತವಾಗಿದ್ದು,ಕಲ್ಯಾಣದ ಚಾಳುಕ್ಯರ ಶೈಲಿಯಲ್ಲಿದೆ. ಮಲಪ್ರಭಾನದಿಗೆ ಕಟ್ಟಲಾದನವಿಲುತೀರ್ಥ ಅಣೆಕಟ್ಟಿನಿಂದಾಗಿ ಮೂಡಿರುವ ರೇಣುಕಾಸಾಗರದನೀರು ಸೌಂದತ್ತಿಯ ಹೊರವಲಯವನ್ನು ಸ್ಪರ್ಶಿಸುತ್ತಿದೆ.ಸೌಂದತ್ತಿಯಿಂದ ೧೨ ಕಿ.ಮೀ ದೂರದಲ್ಲಿರುವ ಎಲ್ಲಮ್ಮನಗುಡ್ಡವು ಬೆಟ್ಟದ ಮೇಲಿದೆ. ಇಲ್ಲಿರುವ ರಾಷ್ಟ್ರಕೂಟರಕಾಲದಬಸದಿಯು ಈಗ ಎಲ್ಲಮ್ಮ ಅಥವಾ ರೇಣುಕಾ ದೇವಾಲಯವಾಗಿಪರಿವರ್ತಿತವಾಗಿದ್ದು, ದಿನನಿತ್ಯವೂ ನೂರಾರು ಭಕ್ತರುಸಂದರ್ಶಿಸುತ್ತಾರೆ. ಎರಡು ಕಿ.ಮೀ. ದೂರದಲ್ಲಿರುವ ಪರಸಗಡವುಅದ್ಭುತ ಗಿರಿದುರ್ಗವಾಗಿದ್ದು,ಶಿವಾಜಿಯಿಂದ ವಿಸ್ತೃತಗೊಂಡಿತು.ಈಗ ಅದು ಶಿಥಿಲವಾಗತೊಡಗಿದೆ.

 

ಹರಿಹರ

ತುಂಗಭದ್ರಾ ನದಿಯದಂಡೆಯಲ್ಲಿರುವ ಇದುಚಿತ್ರದುರ್ಗ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರವಾಗಿದ್ದು,ಬೆಂಗಳೂರಿನಿಂದ ೨೭೭ ಕಿ.ಮೀ. (ಪುಣೆ-ಬೆಂಗಳೂರು ರಾಷ್ಟ್ರೀಯಹೆದ್ದಾರಿ) ದೂರದಲ್ಲಿದೆ. ಹರಿದ್ರಾ ಉಪನದಿಇಲ್ಲಿ ಸೇರುವುದರಿಂದಇದನ್ನು ಕೂಡಲೂರು ಎಂದೂ ಕರೆಯುತ್ತಿದ್ದು, ೧೨೩೩ರಲ್ಲಿಹೊಯ್ಸಳ ನರಸಿಂಹನಕಾಲದಲ್ಲಿ ಪೊಳಾಲ್ವ ದಂಡನಾಯಕನುತುಂಗಭದ್ರಾ ನದಿದಂಡೆ ಮೇಲೆ ಕಟ್ಟಿಸಿದ ಹರಿಹರೇಶ್ವರದೇವಾಲಯದಿಂದಾಗಿ ಇದು ಹರಿಹರ ಎಂದೇ ಕರೆಯಲ್ಪಡುತ್ತದೆ.ಕಲಾತ್ಮಕವಾದ ಹೊಯ್ಸಳ ಶೈಲಿಯವಾಸ್ತುರಚನೆಯನ್ನು ಇದುಹೊಂದಿದ್ದು, ಉತ್ಕೃಷ್ಟ ಮಟ್ಟದ ವಾಸ್ತು ಶಿಲ್ಪಕ್ಕೆ ಪ್ರತಿನಿಧಿಯಾಗಿದೆ.ಇದಲ್ಲದೇ ಇಲ್ಲಿ ಶ್ರೀರಾಮ, ದತ್ತಾತ್ರೇಯ ಹಾಗೂ ಈಶ್ವರದೇವಾಲಯಗಳೂ ಇವೆ. ಕಿರ್ಲೋಸ್ಕರ್ ಕಾರ್ಖಾನೆ ಪ್ರಾರಂಭವಾದಮೇಲೆ ಇದು ಕೈಗಾರಿಕಾ ಕೇಂದ್ರವಾಗಿಯೂ ಬೆಳೆಯಿತು.ಸನಿಹದಲ್ಲಿಯೇ ಇರುವ ಕುಮಾರಪಟ್ಟಣದಲ್ಲಿ ಹರಿಹರಪಾಲಿಫೈಬರ್ಸ್‌ ಕಾರ್ಖಾನೆಯೂ ಕಾರ್ಯ ನಿರ್ವಹಿಸುತ್ತಿದೆ.

 

ಹಲಸಿ

ಇದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿದ್ದುಖಾನಾಪುರ ರೇಲ್ವೆ ನಿಲ್ದಾಣದಿಂದ ೧೪ ಕಿ.ಮೀದೂರದಲ್ಲಿದೆ.ಹಲಸಿಯು ಬನವಾಸಿ ಕದಂಬರ ಎರಡನೇಯ ರಾಜಧಾನಿಯಾಗಿತ್ತು. ಜೈನ ಧರ್ಮಕ್ಕೆ ಪ್ರೋತ್ಸಾಹನೀಡಿದ ಆದಿ ಕದಂಬರು ಇಲ್ಲಿಕಟ್ಟಿಸಿದ ಪ್ರಾಚೀನ ಜೈನ ಬಸದಿಯಿಂದು ಹಾಳು ಬಿದ್ದಿದೆ. ಇಲ್ಲಿರುವಬೃಹತ್ತಾದ ಭೂವರಾಹ ನರಸಿಂಹ ದೇವಾಲಯವನ್ನು ಗೋವೆಯಕದಂಬರು ಸುಮಾರು ೧೨ನೆಯ ಶತಮಾನದಲ್ಲಿಕಟ್ಟಿಸಿದರು.ಈ ದೇವಾಲಯದಲ್ಲಿ ಸುಂದರವೂಎತ್ತರವೂ ಆದ ವರಾಹ,ದ್ವಿಬಾಹು ನರಸಿಂಹ (ಪ್ರಾಚೀನಶೈಲಿಯ), ಯೋಗನಾರಾಯಣಹಾಗು ಸೂರ್ಯ ವಿಗ್ರಹಗಳಿವೆ. ಕಲ್ಯಾಣದ ಚಾಲುಕ್ಯರಆಳ್ವಿಕೆಯಲ್ಲಿ ಹಲಸಿಯು,ಹಲಸಿಗೆ-೧೨೦೦೦ ಆಡಳಿತ ವಿಭಾಗದಕೇಂದ್ರವಾಗಿತ್ತು. ಇಲ್ಲಿ ಕೋಟೆ ಗೋಕರ್ಣೇಶ್ವರ, ಕಪಿಲೇಶ್ವರ,ಸ್ವರ್ಣೇಶ್ವರ, ಹಾಗೂ ಹಾಟಕೇಶ್ವರ, ದೇವಾಲಯಗಳಿವೆ. ಪಶ್ಚಿಮಘಟ್ಟದ ಹಿನ್ನೆಲೆಯಲ್ಲಿರುವ ಇದು ಎಲ್ಲೆಡೆಹಸಿರಿನಿಂದ ಕೂಡಿದೆ.

 

ಹಳೆಬೀಡು

ಬೇಲೂರು ತಾಲೂಕಿನ ಹಳೆಬೀಡು (ಶಾಸನೊಕ್ತದೋರಸಮುದ್ರ) ಜಿಲ್ಲಾ ಕೇಂದ್ರ ಹಾಸನದಿಂದ ೨೭ ಕಿ.ಮೀದೂರದಲ್ಲಿದೆ. ಇದು ಬೇಲೂರಿನ ನಂತರ ಹೊಯ್ಸಳರರಾಜಧಾನಿಯಾಗಿತ್ತು. ಇಲ್ಲಿ ವಿಷ್ಣುವರ್ಧನನ ಸೇನಾಪತಿಕೇತಮಲ್ಲಕ್ರಿ.ಶ. ೧೧೨೧ರಲ್ಲಿ ಕಟ್ಟಿಸಿದ ಸುಂದರವಾದ ದೇವಾಲಯವಿದೆ.ಇಲ್ಲಿರುವ ಅವಳಿ ಶಿವದೇವಾಲಯದಲ್ಲಿ ಒಂದೇ ಜಗತಿಯಮೇಲೆ ಎರಡು ಗರ್ಭಗೃಹಗಳಿದ್ದು, ವಿಶಾಲವಾದ ಒಂದೇಸಭಾಮಂಟಪವಿದೆ. ಒಂದರಲ್ಲಿವಿಷ್ಣುವರ್ಧನ ಹೊಯ್ಸಳೇಶ್ವರಲಿಂಗವೂ ಇನ್ನೊಂದರಲ್ಲಿ ಶಾಂತಲೇಶ್ವರ ಲಿಂಗವೂ ಇವೆ.ಹೊಯ್ಸಳೇಶ್ವರದಎದುರು ನಂದಿಮಂಟಪವಿದ್ದು, ಅದರ ಹಿಂದೆ ಎರಡು ಮೀಟರ್ ಎತ್ತರದ ಸೂರ್ಯ ವಿಗ್ರಹವಿರುವ ಸೂರ್ಯನಗುಡಿಯಿದೆ. ದೇವಾಲಯದ ದ್ವಾರಬಂಧಗಳು ಬಹಳಷ್ಟು ಅಲಂಕಾರಯುಕ್ತವಾಗಿವೆ. ಹೊರಗಿನ ಗೋಡೆಯಲ್ಲಿಸಾಲಾಗಿರಾಮಾಯಣ, ಮಹಾಭಾರತ ಹಾಗೂ ಭಾಗವತದ ಕಥೆಗಳನ್ನುಆಧರಿಸಿದ ಸುಂದರ ಉಬ್ಬುಶಿಲ್ಪ ಕೆತ್ತನೆಗಳಿವೆ. ಇಲ್ಲಿರುವ ಪಾರ್ಶ್ವನಾಥಬಸದಿಯಲ್ಲಿ ಚೆನ್ನಾಗಿ ಹೊಳಪು ನೀಡಿರುವ ಕಂಬಗಳಿದ್ದು,ವೀಕ್ಷಕರುಪ್ರತಿಬಿಂಬವು ಕಾಣಿಸುತ್ತದೆ. ಇಲ್ಲಿ ಕೇಂದ್ರ ಪ್ರಾಚ್ಯವಸ್ತುಇಲಾಖೆಯ ವಸ್ತುಸಂಗ್ರಹಾಲಯವಿದೆ. ಇಲ್ಲಿರುವಕೇದಾರೇಶ್ವರದೇವಾಲಯವನ್ನು ಎರಡನೇ ಬಲ್ಲಾಳನ ರಾಣಿ ಕೇತಲದೇವಿಕಟ್ಟಿಸಿದಳು. ಸಮೀಪದಲ್ಲಿಯೇಇರುವ ಚಟಚಟ್ನಹಳ್ಳಿಯಲ್ಲಿಆಕರ್ಷಕವೂ ಕಲಾತ್ಮಕವೂ ಆದಲೂ ತ್ರಿಕೂಟ ದೇವಾಲಯವಿದ್ದು,ಇದನ್ನು ಚಟ್ಟದಂಡನಾಯಕನು ಕ್ರಿ.ಶ. ೧೨೨೦ರಲ್ಲಿ ಕಟ್ಟಿಸಿದನು.

 

ಹಂಪಿ

ವಿಜಯನಗರದ ಅರಸರ ರಾಜಧಾನಿಯಾಗಿದ್ದ(೧೩೩೬) ಇದು ಬಳ್ಳಾರಿ ಜಿಲ್ಲೆ(ಈಗ ವಿಜಯನಗರ ಜಿಲ್ಲೆ )ಯಲ್ಲಿದ್ದು ತಾಲೂಕು ಕೇಂದ್ರಹೊಸಪೇಟೆಯಿಂದ ೧೦ ಕಿ.ಮೀ. ದೂರದಲ್ಲಿದೆ. ಇದು ಪುರಾತನನಗರವಾಗಿದ್ದು, ಹಿಂದೆಶಿಲಾಯುಗ ಮಾನವರ ನೆಲೆಯಾಗಿದ್ದಕ್ಕೆಕುರುಹುಗಳಿದ್ದು ಇಲ್ಲಿ ಕ್ರಿಸ್ತಶಕದ ಪ್ರಾರಂಭಕ್ಕೆ ಸೇರಿದ ಬೌದ್ಧಅವಶೇಷಗಳಿವೆ. ಇಲ್ಲಿರುವ ಪಂಪಾದೇವಿ ದೇವಾಲಯದಿಂದಾಗಿಪಂಪಾಕ್ಷೇತ್ರವೆಂದೂ ಕರೆಯಲ್ಪಡುವ ಇದುತುಂಗಭದ್ರಾನದಿಯ ದಂಡೆಯ ಮೇಲಿದೆ. ಇಲ್ಲಿಯ ಕಲ್ಯಾಣದ ಚಾಳುಕ್ಯರಕಾಲದ ವಿರೂಪಾಕ್ಷ ದೇವಾಲಯದ ಹಿಂಬದಿಯಲ್ಲಿರುವಹೇಮಕೂಟ ಬೆಟ್ಟದ ಮೇಲೆ ಬಾದಾಮಿ ಚಾಲುಕ್ಯರ ಕಾಲದಪ್ರಾಚೀನ ದೇವಾಲಯವಿದೆ. ಕನ್ನಡದ ಕವಿ ಹರಿಹರ ೧೨ನೆಯಶತಮಾನದಲ್ಲಿ ವಿರೂಪಾಕ್ಷ ದೇವರನ್ನು ಹೊಗಳಿ ಬರೆದಿದ್ದಾನೆ.ಈ ಕಲ್ಲುಗುಡ್ಡಗಳ ಪ್ರದೇಶವನ್ನು ರಾಮಾಯಣದ ಕಿಷ್ಕಿಂಧೆಎಂದು ಗುರುತಿಸಲಾಗಿದೆ. ನದಿಯ ಉತ್ತರಕ್ಕೆಆನೆಗೊಂದಿಇದೆ. ಕೃಷ್ಣದೇವರಾಯನು (೧೫೦೯-೧೫೨೯) ವಿಜಾಪುರದಸುಲ್ತಾನರನ್ನು ಹಾಗೂ ಗಜಪತಿಗಳನ್ನು ಸೋಲಿಸಿವಿಜಯಗಳಿಸಿದಖುಷಿಯಲ್ಲಿ ವಿರೂಪಾಕ್ಷ ದೇವಾಲಯಕ್ಕೆ ವಿಶಾಲವಾದಕಲ್ಯಾಣ ಮಂಟಪವನ್ನು ಕಟ್ಟಿಸಿದನು. ಈ ಮಂಟಪದಲ್ಲಿಸುಂದರವಾಗಿ ಕೆತ್ತಿದ ಏಕಶಿಲಾ ಕಂಬಗಳಿವೆ. ಭಿಷ್ಟಪ್ಪಯ್ಯನಗೋಪುರವೆಂದು ಕರೆಯಲ್ಪಡುವ ಈದೇವಾಲಯದ ದ್ವಾರವುಮುಂದೆ ರಾಯಗೋಪುರವೆಂದು ಕರೆಯಲ್ಪಟ್ಟು ದಕ್ಷಿಣಭಾರತದವಿಜಯನಗರದೇವಾಲಯಗಳಿಗೆ ಮಾದರಿಯಾಗಿದೆ. ’ಬಯಲುವಸ್ತು ಸಂಗ್ರಹಾಲಯ’ ಎಂದೂ ಕರೆಯಲ್ಪಡುವ ಹಂಪೆಯಲ್ಲಿಕೃಷ್ಣಸ್ವಾಮಿ ದೇವಾಲಯ, ಹಜಾರರಾಮಸ್ವಾಮಿ ದೇವಾಲಯ,ರಂಗನಾಥನಿರುವ ತಿರುಮಲ ದೇವಾಲಯವನ್ನುಹೋಲುವಅಚ್ಯುತರಾಯ ದೇವಾಲಯ ಗುಂಪು, ಕೋದಂಡರಾಮಸ್ವಾಮಿದೇವಾಲಯ, ವಿಜಯ ವಿಠಲಸ್ವಾಮಿದೇವಾಲಯ, ಇರುಗಪ್ಪಬಸದಿ (ಗಾಣಗಿತ್ತಿ ಜಿನಾಲಯ, ೧೩೮೫) ಉದ್ದಾನ ವೀರಭದ್ರದೇವಾಲಯ, ಏಕಶಿಲಾ ಲಕ್ಷ್ಮೀ ನರಸಿಂಹ (೨೯ ಅಡಿ ಉಳ್ಳ ಇದನ್ನುಕೃಷ್ಣದೇವರಾಯನು ೧೫೨೯ ರಲ್ಲಿ ಸ್ಥಾಪಿಸಿದನು) ಬೃಹತ್ತಾದಬಡವಿಲಿಂಗ, ಕಮಲ ಮಹಲ್, ಆನೆಗಳ ಲಾಯ, ಮಹಾನವಮಿದಿಬ್ಬ, ಏಕಶಿಲಾ ಕಡಲೆ ಕಾಳು ಗಣೇಶ, ಸಾಸಿವೆ ಕಾಳು ಗಣೇಶವಿಗ್ರಹಗಳೇ ಮುಂತಾದ ಅನೇಕ ಸ್ಮಾರಕಗಳಿವೆ. ವಿಜಯ ವಿಠಲದೇವಾಲಯವು ಕರ್ನಾಟಕ ಶಾಸ್ತ್ರೀಯ ಸಂಗೀತದ ಶೈಲಿಯನ್ನುಶಿಲೆಗಳಲ್ಲಿ ಅಳವಡಿಸಿದ ದೇವಾಲಯವಾಗಿದ್ದು, ಇದರ ವೈಜ್ಞಾನಿಕವಾಸ್ತು ರಚನೆಯು ವಿಶ್ವದ ಕಲಾತಜ್ಞರನ್ನು ಬೆರಗುಗೊಳಿಸಿರುವುದುವಿಜಯನಗರ ವಾಸ್ತುಶೈಲಿಯ ಉತ್ತಮಸಾಧನೆಯಾಗಿದೆ.

ಇತ್ತೀಚೆಗೆ ನಡೆದ ಉತ್ಖನನದಲ್ಲಿ ಅರಮನೆಗಳ ಅಡಿಪಾಯ,ಸುಂದರವಾದ ಮೆಟ್ಟಿಲುಗಳುಳ್ಳ ಪುಷ್ಕರಿಣಿ ಹಾಗೂ ಅರಮನೆಯಆವರಣ, ಮಂತ್ರಿ ವರ್ಗದವರ ವಾಸಸ್ಥಾನ, ಜೈನ ಬಸದಿ ಹಾಗೂಬೌದ್ಧ ಶಿಲ್ಪಫಲಕಗಳು ಬೆಳಕಿಗೆಬಂದಿವೆ. ಮುಸ್ಲಿಮರ ವಸತಿಯಲ್ಲಿಮಸೀದಿಯೂ ಇದೆ. ೧೫-೧೬ನೇ ಶತಮಾನದಲ್ಲಿ ಇಲ್ಲಿಗೆಬಂದ ವಿದೇಶಿ ಪ್ರವಾಸಿಗರು ಇದನ್ನು ರೋಮ್ ನಗರಕ್ಕಿಂತಲೂದೊಡ್ಡದಾಗಿದೆ ಎಂದು ಬಣ್ಣಿಸಿದ್ದಾರೆ. ಇಲ್ಲಿ ನಡೆಯವಮಹಾನವಮಿಉತ್ಸವದ ವೈಭವವನ್ನು ಹಾಗೂ ಈ ಪಟ್ಟಣದ ವ್ಯಾಪಾರವನ್ನುನೋಡಿ ಅವರುಮಂತ್ರಮುಗ್ದರಾಗಿದ್ದರು. ಪೂರ್ವ ಪಶ್ಷಿಮದಜನರು ಇಲ್ಲಿದ್ದರು. ೧೫೬೫ರಲ್ಲಿ ಈ ಪಟ್ಟಣ ಧ್ವಂಸಗೊಂಡಿತಾದರೂಇಲ್ಲಿರುವ ಕಟ್ಟಡಗಳ ಅವಶೇಷಗಳು ೨೫ ಚದರ ಕಿ.ಮೀ.ಪ್ರದೇಶದಲ್ಲಿ ಇಂದಿಗೂ ಉಳಿದಿವೆ. ಕಮಲಾಪುರದಲ್ಲಿ ಕೇಂದ್ರಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯವಿದೆ. ಕಮಲಾಪುರಕ್ಕೆಅನತಿ ದೂರದ ’ವಿದ್ಯಾರಣ್ಯ’ದಲ್ಲಿಕನ್ನಡ ವಿಶ್ವವಿದ್ಯಾಲಯವುಕಾರ್ಯನಿರ್ವಹಿಸುತ್ತಿದೆ. ಹಂಪೆಯನ್ನು ಯುನೆಸ್ಕೋದವರುವಿಶ್ವಪರಂಪರೆಯನೆಲೆಯಾಗಿ ೧೯೮೬ರಲ್ಲಿ ಘೋಷಿಸಿದ್ದಾರೆ. ಹೊಸ ಪೇಟೆಯಿಂದ ಕಮಲಾಪುರಕ್ಕೆ ಹೊಗುವ ಮಾರ್ಗದಲ್ಲಿರುವಅನಂತಶಯನ ದೇವಾಲಯ ವಿಜಯನಗರ ಕಾಲದಾಗಿದ್ದುಗಮನಾರ್ಹ ರಚನೆಯಾಗಿದೆ.

 

ಹಾನಗಲ್ಲು

ಹಾವೇರಿ ಜಿಲ್ಲೆಯಲ್ಲಿರುವ ಇದು ತಾಲ್ಲೂಕುಕೇಂದ್ರವಾಗಿದೆ. ಹಿಂದೆ, ಇದು ಕಲ್ಯಾಣದ ಚಾಲುಕ್ಯರಸಾಮಂತರಾದ ಹಾನಗಲ್ಲು ಕದಂಬರ ರಾಜಧಾನಿ ಆಗಿತ್ತು. ಪ್ರಾಚೀನಶಾಸನಗಳಲ್ಲಿ ಇದನ್ನು ’ಪಾನುಂಗಲ್’ ಎಂದುಕರೆಯಲಾಗಿದೆ.ಸ್ಥಳೀಯ ಪರಂಪರೆಯ ಪ್ರಕಾರ ಇದು ಮಹಾಭಾರತ ಕಾಲದವಿರಾಟನಗರ. ಜಿಲ್ಲಾ ಕೇಂದ್ರಹಾವೇರಿಯಿಂದ ಸುಮಾರು ೩೦ಕಿ.ಮೀ. ದೂರದಲ್ಲಿರುವ ಇದು ಹಿಂದೆ ಪಾನುಂಗಲ್-೫೦೦ ಎಂದುಕರೆಯಲ್ಪಡುತ್ತಿದ್ದ ಆಡಳಿತ ವಿಭಾಗದ ಕೇಂದ್ರವಾಗಿತ್ತು. ಇಲ್ಲಿರುವತಾರಕೇಶ್ವರ ದೇವಾಲಯವು ಬೃಹತ್ರಚನೆಯಾಗಿದ್ದು, ಒಳಗೆಸುಂದರವಾದ ಮೂರ್ತಿಗಳನ್ನೂ ಚಾಲುಕ್ಯ ಶೈಲಿಯ ನುಣುಪಾದಕಂಬಗಳನ್ನೂ ಹೊಂದಿದೆ. ವೀರಭದ್ರ, ಬಿಲ್ಲೇಶ್ವರ, ರಾಮಲಿಂಗ,ಮುಂತಾದವು ಇಲ್ಲಿರುವ ಇತರ ದೇವಾಲಯಗಳು. ತಾರಕೇಶ್ವರದೇವಾಲಯದ ಬಳಿ ಇರುವ ಗಣೇಶ ದೇವಾಲಯಕ್ಕೆ ಔತ್ತರೇಯರೇಖಾನಾಗರ ಶಿಖರವಿದೆ. ಈ ಪಟ್ಟಣವುಧರ್ಮಾನದಿಯಎಡದಂಡೆಯ ಮೇಲಿದ್ದು, ನದಿಯ ದಂಡೆಯ ಮೇಲೆ ಕೋಟೆಯಅವಶೇಷಗಳಿವೆ. ಇಲ್ಲಿಪ್ರಸಿದ್ಧವಾದ ವೀರಶೈವರ ಕುಮಾರಸ್ವಾಮಿಮಠವೂ ಇದೆ.

 

ಹಾವೇರಿ

ಈಗ ಜಿಲ್ಲಾ ಕೇಂದ್ರವಾಗಿರುವ ಹಾವೇರಿಯುರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿದ್ದು ಬೆಂಗಳೂರಿನಿಂದ ಸುಮಾರು೩೪೦ ಕಿ.ಮೀ ದೂರದಲ್ಲಿದೆ. ಊರಿನಿಂದ ೨.೫ ಕಿ.ಮೀದೂರದಲ್ಲಿರುವ ಸುಮಾರು ೧೦-೧೧ನೇ ಶತಮಾನದಲ್ಲಿನಿರ್ಮಿತವಾದ ಕೆರೆಯಿಂದಾಗಿ ಹಾವೇರಿ ಎಂಬ ಹೆಸರುಇದಕ್ಕೆ ಬಂದಿದೆ. ಇಲ್ಲಿ ಕೆಲವು ಪ್ರಾಚೀನದೇವಾಲಯಗಳಿದ್ದು,ಕಲ್ಯಾಣಚಾಳುಕ್ಯರ ಕಾಲದ ಸಿದ್ಧೇಶ್ವರ ದೇವಾಲಯ ಸಂಕೀರ್ಣವುಶಿಲ್ಪಾಲಂಕಾರಗಳಿಗಾಗಿ ಪ್ರಸಿದ್ಧವಾಗಿದ್ದು, ಉಗ್ರನರಸಿಂಹಹಾಗೂ ಕಲ್ಲೇಶ್ವರ ದೇವಾಲಯಗಳು ಇತರ ಪ್ರಮುಖ ಪ್ರಾಚೀನದೇವಾಲಯಗಳೆನಿಸಿವೆ. ಇಲ್ಲಿ ವಿರಕ್ತ ಮಠ, ಹುಕ್ಕೇರಿಮಠ, ಹೊಸಮಠ, ಮುರುಘಾಸ್ವಾಮಿ ಮಠ ಹಾಗೂ ಮಾಧ್ವಸಂಪ್ರದಾಯದ ರಾಘವೇಂದ್ರ ಮಠಗಳಿವೆ. ಹುಕ್ಕೇರಿಮಠದ ವಾರ್ಷಿಕಜಾತ್ರೆಯು ಜನವರಿ ತಿಂಗಳಲ್ಲಿಯೂ, ಸಿದ್ಧೇಶ್ವರ ಜಾತ್ರೆಯು ದಸರಾಸಂದರ್ಭದಲ್ಲಿಯೂ ನಡೆಯುತ್ತದೆ. ಇತ್ತೀಚಿನವರೆಗೆ ಯಾಲಕ್ಕಿಪರಿಷ್ಕರಣೆಗಾಗಿಪ್ರಸಿದ್ಧವಾಗಿದ್ದ ಈ ಊರು ಈಗ ಸುಂದರವಾದಯಾಲಕ್ಕಿ ಹಾರಗಳಿಗೆ ಪ್ರಸಿದ್ಧಿ ಪಡೆದಿದೆ.

 

ಹಾಸನ

ಜಿಲ್ಲಾ ಕೇಂದ್ರವಾಗಿರುವ ಇದು ಬೆಂಗಳೂರಿನಿಂದ೧೫೦ ಕಿ.ಮೀ. ದೂರದಲ್ಲಿ ಮಲೆನಾಡಿನ ಸೆರಗಿನಲ್ಲಿ ರಾಷ್ಟ್ರೀಯಹೆದ್ದಾರಿಯ ಮೇಲಿದ್ದು ಬಸ್ಸು ಹಾಗೂ ರೈಲು ಸೌಲಭ್ಯಗಳಿವೆ.ಇಲ್ಲಿ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳಿದ್ದು,ತಂಗಲುಹೊಟೇಲುಗಳೂ ಇವೆ. ಮೂಲತಃ ಹನ್ನೊಂದನೇ ಶತಮಾನದಲ್ಲಿಮುಕ್ಕಣ್ಣನಾಯಕನೆಂಬ ಚೋಳಅಧಿಕಾರಿಯಿಂದ ಸ್ಥಾಪಿಸಲ್ಪಟ್ಟಈ ಊರಿಗೆ ಹಿಂದೆ ಚನ್ನಪಟ್ಟಣ ಎಂದು ಹೆಸರಿತ್ತು. ಅವನು ತನ್ನಶಿಬಿರವಿದ್ದ ಸ್ಥಳದಲ್ಲಿ ಒಂದು ಕೋಟೆಯನ್ನು ಮತ್ತು ಪೇಟೆಯನ್ನುನಿರ್ಮಿಸಿದನು. ಚನ್ನಪಟ್ಟಣ ಎಂದರೆ, ಸುಂದರನಗರ ಎಂದುಅರ್ಥ. ಅಲ್ಲದೆ ಒಂದು ದೊಡ್ಡ ಕೆರೆಯನ್ನು ಅವನು ಇಲ್ಲಿ ಕಟ್ಟಿಸಿದನು.ಪರಂಪರೆಯ ಪ್ರಕಾರ ಹೊಯ್ಸಳರು ಈ ಸ್ಥಳವನ್ನು ಸಂಜೀವಕೃಷ್ಣಪ್ಪನಾಯಕನಿಗೆ ಕೊಟ್ಟಿದ್ದರು. ಅವನಿಗೆ ಕೋಟೆಯೊಂದನ್ನುಕಟ್ಟಿಸುವಂತೆ ಹಸನ್ಮುಖಿಹಾಸನಮ್ಮ ದೇವತೆ ಆದೇಶಿಸಿದಳಂತೆ.ನಾಯಕನು ಆ ಆದೇಶವನ್ನು ಪಾಲಿಸಿ ಕೋಟೆ ಪ್ರದೇಶಕ್ಕೆ ಹಾಸನಎಂದೇ ಹೆಸರಿಟ್ಟನಂತೆ. ಹೀಗೆ ಹನ್ನೆರಡನೇ ಶತಮಾನದ ಅಂತ್ಯದಹೊತ್ತಿಗೆ ಈ ಸ್ಥಳ ಅಸ್ತಿತ್ವಕ್ಕೆ ಬಂದಿತು.ಸ್ಥಳಪುರಾಣದ ಪ್ರಕಾರಈ ಸ್ಥಳವು ಸಿಂಹಾಸನವೆಂದು ಕರೆಯಲ್ಪಟ್ಟಿದ್ದು ಕುರುವಂಶದಜನಮೇಜಯನಿಗೆ ಸಂಬಂಧಿಸಿತ್ತೆಂಬ ಐತಿಹ್ಯವಿದೆ. ಹೊಯ್ಸಳರಪ್ರಮುಖ ಕೇಂದ್ರಗಳಲ್ಲಿ ಇದು ಒಂದಾಗಿತ್ತು. ಗಂಗರ ಕಾಲದಿಂದಲೂಅನೇಕ ವಂಶದವರಿಂದ ಆಳಲ್ಪಟ್ಟಿತ್ತು. ಕ್ರಿ.ಶ. ೧೬೯೦ರಲ್ಲಿಚಿಕ್ಕದೇವರಾಜನು ಇದನ್ನು ಗೆದ್ದುಕೊಂಡನು. ಇಲ್ಲಿರುವ ಎರಡುಹೊಯ್ಸಳ ದೇವಾಲಯಗಳು ಚನ್ನಕೇಶವ ಮತ್ತು ವಿರೂಪಾಕ್ಷೇಶ್ವರದೇವರಿಗೆ ಮುಡಿಪಾಗಿವೆ. ಚನ್ನಕೇಶವದೇವಾಲಯವನ್ನುಮೊದಲನೇಯ ನರಸಿಂಹನ ಅಧಿಕಾರಿ ಪ್ರಧಾನ ಹೆಗ್ಗಡೆಲಕುಮಯ್ಯನು ಕಟ್ಟಿಸಿದನು.

ವಿರೂಪಾಕ್ಷೇಶ್ವರ ದೇವಾಲಯವನ್ನುಶೃಂಗೇರಿ ಮಠಾಧಿಪತಿಗಳಾಗಿದ್ದ, ವಿದ್ಯಾರಣ್ಯರು ಜೀರ್ಣೋದ್ಧಾರಮಾಡಿಸಿದರೆಂದು ನಂಬಲಾಗಿದೆ. ಹಾಸನಾಂಬ ದೇವಾಲಯವುವಿಜಯನಗರೋತ್ತರ ಕಾಲದ ರಚನೆಯಾಗಿದೆ.ಇದರ ಅಧಿದೇವತೆಒಂದು ಹುತ್ತದ ರೂಪದಲ್ಲಿದೆ. ದೇವಾಲಯವು ವಾಸ್ತುದೃಷ್ಟಿಯಿಂದತೀರ ಸರಳವಿದೆ. ಈದೇವಾಲಯ ಸಂಕೀರ್ಣದಲ್ಲಿ ಒಂದುಗುಡಿಯನ್ನು ಸಿದ್ಧೇಶ್ವರ ದೇವರಿಗಾಗಿ ನಿರ್ಮಿಸಲಾಗಿದೆ.ದೇವಾಲಯವು ವರ್ಷಕ್ಕೊಂದು ಬಾರಿ ಮಾತ್ರ ಅಶ್ವಯುಜಬಹುಳ ಬಿದಿಗೆಯಿಂದ ಒಂದು ವಾರದವರೆಗೆ ತೆರೆದಿರುತ್ತದೆ.ಈ ದೇವಾಲಯಗಳೊಂದಿಗೆ ಕೊಳಲು ಗೋಪಾಲಕೃಷ್ಣ ಮತ್ತುಗಂಗಾಧರೇಶ್ವರ ಗುಡಿಗಳು ದೇವಿಗೆರೆ ಎಂಬ ಕೆರೆಯದಂಡೆಯಮೇಲಿವೆ. ಸುಮಾರು ೯೦೦ವರ್ಷ ಹಳೆಯದಾದ ಒಂದು ಜೈನಬಸದಿಯೂ ಇದೆ. ’ಬಡವರ ಊಟಿ’ಎಂದು ಪ್ರಸಿದ್ಧವಾಗಿರುವಈ ಊರು ಪ್ರವಾಸಿ ಮಹತ್ವವನ್ನು ಪಡೆಯುತ್ತಿದ್ದು ಸರಕಾರಿಅತಿಥಿಗೃಹ ಮತ್ತುಹೋಟೆಲುಗಳು ಪ್ರವಾಸಿಗರಿಗೆ ಅನುಕೂಲಒದಗಿಸಿವೆ. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು,ಹುಬ್ಬಳ್ಳಿ ಮತ್ತು ಶಿವಮೊಗ್ಗಗಳಿಂದ ನಿಯತಕಾಲಿಕವಾಗಿ ಬಸ್ಸುಸೌಲಭ್ಯವಿದೆ. ಇಲ್ಲಿಂದ ಬೇಲೂರು, ಹಳೆಬೀಡುಮತ್ತಿತರ ಹೊಯ್ಸಳಕಲಾಕೇಂದ್ರಗಳನ್ನು ತಲುಪುವುದು ಸರಳ. ಇಲ್ಲಿ ನಿರ್ಮಿಸಿರುವರಾಜ್ಯಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಏಷ್ಯಾದೇಶಲ್ಲಿ ಎರಡನೇ ದೊಡ್ಡದಾಗಿದೆ.

 

ಹುಬ್ಬಳ್ಳಿ

ಇದು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಭಾಗವಾಗಿದ್ದು ಬೆಂಗಳೂರು-ಪುಣೆ ಹೆದ್ದಾರಿಯ ಮೇಲೆ,ಬೆಂಗಳೂರಿನಿಂದ ೪೦೮ ಕಿ.ಮೀ ದೂರದಲ್ಲಿದೆ. ಈ ಪಟ್ಟಣವುಪ್ರಮುಖ ರೈಲು ಜಂಕ್ಷನ್ ಹಾಗೂ ಉದ್ಯಮನಗರವೂ ಆಗಿದೆ.ರಾಯರ ಹುಬ್ಬಳ್ಳಿ ಹಳೆಯ ಹುಬ್ಬಳ್ಳಿ ಪ್ರದೇಶವಾಗಿದ್ದು, ಇದನ್ನುಶಾಸನಗಳಲ್ಲಿ ’ಎಲೆಯಪೂರ್ವದ ಹಳ್ಳಿ,’ ’ಪೂರ್ಬಳ್ಳಿ’ ಮುಂತಾಗಿಕರೆಯಲಾಗಿದೆ. ಇಲ್ಲಿ ಭವಾನಿ ಶಂಕರ ಮತ್ತು ಜೈನ ಬಸದಿಗಳಿವೆ.ವಿಜಯನಗರದ ಅರಸರ ಕಾಲದಲ್ಲಿ ಹುಬ್ಬಳ್ಳಿಯು ವಾಣಿಜ್ಯಕೇಂದ್ರ ವಾಗಿ ಬೆಳೆದು ಹತ್ತಿ, ಸಾಲ್ಟ್ ಪೀಟರ್ ಮತ್ತುಕಬ್ಬಿಣದವ್ಯಾಪಾರಕ್ಕಾಗಿ ಪ್ರಸಿದ್ಧ ವಾಗಿತ್ತು. ಈ ಪ್ರದೇಶವು ಆದಿಲ್ ಶಾಹಿಗಳಹಿಡಿತಕ್ಕೆ ಬಂದಿತು ಮುಂದೆಬ್ರಿಟಿಷರು ಇಲ್ಲೊಂದು ಫ್ಯಾಕ್ಟರಿಯನ್ನುತೆರೆದರು. ೧೬೭೩ ರಲ್ಲಿ ಈ ಫ್ಯಾಕ್ಟರಿಯನ್ನು ಶಿವಾಜಿಯು ಲೂಟಿಮಾಡಿದನು. ಮೊಗಲರು ಇದನ್ನು ಗೆದ್ದುಕೊಂಡ ತರುವಾಯ ಈಊರು ಸವಣೂರ ನವಾಬನಿಗೆ ಸೇರಿತು.ನವಾಬನು ಮಜೀದ್ಪುರಎಂಬ ಹೊಸ ಬಡಾವಣೆಯನ್ನು ಕಟ್ಟಿಸಿದನು. ಬಸಪ್ಪಶೆಟ್ಟಿ ಎಂಬವ್ಯಾಪಾರಿಯು ದುರ್ಗದಬೈಲಿನ ಸುತ್ತ ಹೊಸಹುಬ್ಬಳ್ಳಿಯನ್ನುನಿರ್ಮಿಸಿದನು. ೧೭೫೫-೫೬ರಲ್ಲಿ ಸವಣೂರಿನ ನವಾಬನಿಂದಮರಾಠರು ಹುಬ್ಬಳ್ಳಿಯನ್ನು ಗೆದ್ದುಕೊಂಡರು. ನಂತರ ಹೈದರನುಇದನ್ನು ಗೆದ್ದುಕೊಂಡನಾದರೂ ೧೭೯೦ರಲ್ಲಿ ಮರಾಠರು ಮತ್ತೆಅದನ್ನು ಮರಳಿ ಗೆದ್ದುಕೊಂಡರು. ಪೇಶ್ವೆಗಳ ಕಾಲದಲ್ಲಿ ಹಳೆಯಊರನ್ನು ಫಡಕೆ ಎಂಬವನು ಹಾಗೂ ಹೊಸ ಊರನ್ನುಸಾಂಗ್ಲಿಯ ಪಟವರ್ಧನನು ನೋಡಿ ಕೊಳ್ಳುತ್ತಿದ್ದರು. ೧೮೧೭ರಲ್ಲಿಬ್ರಿಟಿಷರು ಹಳೆಯ ಹುಬ್ಬಳ್ಳಿಯನ್ನು ಹಿಡಿದುಕೊಂಡರು.

೧೮೨೦ರಲ್ಲಿ ಹೊಸ ಪಟ್ಟಣವನ್ನು ಇತರ ೪೭ ಗ್ರಾಮಗಳೊಂದಿಗೆಸಾಂಗ್ಲಿಯ ಪಟವರ್ಧನನು ಅವರಿಗೆ ಸಹಾಯಧನಕ್ಕೆಬದಲಾಗಿ ಹಸ್ತಾಂತರಿಸಿದನು. ಹುಬ್ಬಳ್ಳಿಯು ಕೈಮಗ್ಗದ ಸಮೃದ್ಧಕೇಂದ್ರವಾಗಿದ್ದು ಬಟ್ಟೆತಯಾರಿಸುವ ಘಟಕವನ್ನು ಹೊಂದಿದೆ.೧೮೮೦ ರಲ್ಲಿ ಇಲ್ಲಿ ರೈಲ್ವೇ ಕಾರ್ಯಗಾರ ಪ್ರಾರಂಭವಾಗಿಹುಬ್ಬಳ್ಳಿಯನ್ನು ಪ್ರಮುಖ ಔದ್ಯಮಿಕ ಕೇಂದ್ರವನ್ನಾಗಿಸಿತು. ಹಳೇಹುಬ್ಬಳ್ಳಿಯ ಬನಶಂಕರಿ ದೇವಾಲಯ ಹಾಗೂ ಉಣಕಲ್ಲಿನಆಕರ್ಷಕ ಚಂದ್ರಮೌಳೇಶ್ವರ ದೇವಾಲಯ ಕಲ್ಯಾಣದ ಚಾಳುಕ್ಯರಕಾಲದ ಉತ್ಕೃಷ್ಟಕಲಾಕೃತಿಯಾಗಿದೆ. ಸಿದ್ಧಾರೂಢ ಸ್ವಾಮಿ(೧೮೩೭-೧೯೨೯) ಮಠವು ಹಳೆಯ ಹುಬ್ಬಳ್ಳಿಯಲ್ಲಿದ್ದು, ನೂರಾರುಜನ ಭಕ್ತರು ಅಲ್ಲಿಗೆ ಬರುತ್ತಾರೆ. ಆಕರ್ಷಕವಾದ ಮೂರುಸಾವಿರಮಠದ ಜೊತೆಗೆ ರುದ್ರಾಕ್ಷಿ ಮಠ, ಹನ್ನೆರಡು ಎತ್ತಿನಮಠಗಳೂಇಲ್ಲಿವೆ. ಬಂಡಿವಾಡ ಅಗಸಿಯಲ್ಲಿ ಮಹದೀ ಮಸೀದಿ ಹಾಗೂಹಳೇಹುಬ್ಬಳ್ಳಿಯಲ್ಲಿ ಮಸ್ತಾನ್ ಸೋಫಾಮಸೀದಿಗಳಿವೆ. ಇಲ್ಲಿಯಚರ್ಚ್ ಆಫ್ ಅಸೆನ್ಶನ್ (೧೯೦೫) ಚರ್ಚ್ ಆಫ್ ಹೋಲಿ ನೇಮ್(೧೯೨೮), ಸೇಂಟ್ ಜೊಸೆಫ್ಸ್ (೧೮೫೮)ಇಗರ್ಜಿ, ಸೇಂಟ್ಆಂಡ್ರೋಸ್ (೧೮೯೦) ಚರ್ಚ್‌ಗಳು ಗಮನಾರ್ಹವಾಗಿವೆ.ಉಣಕಲ್ಲಿನಲ್ಲಿ ಬಾಸೆಲ್ ಮಿಶನ್ ಚರ್ಚ್ ಇದೆ. ವಿದ್ಯಾನಗರದಲ್ಲಿಸಿಖ್ಖರ ಗುರುದ್ವಾರಾ ಇದೆ. ಎಲ್ಲಾ ಶಿಕ್ಷಣ ಸೌಲಭ್ಯವಿರುವಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇತರಮಹಾವಿದ್ಯಾಲಯಗಳು ಇಲ್ಲಿವೆ. ಇಂದಿರಾ ಗಾಂಧಿಸ್ಮಾರಕಗಾಜಿನ ಮನೆ ಇದೆ ಹಾಗೂ ನೆರೆಯ ಉಣಕಲ್ ಬೆಟ್ಟದ ಮೇಲೆನೃಪತುಂಗ ಉದ್ಯಾನವನ ಇದೆ.ಹುಬ್ಬಳ್ಳಿಯ ದಕ್ಷಿಣಕ್ಕೆ ೧೫ ಕಿ.ಮೀ.ದೂರದಲ್ಲಿರುವ ಕುಂದಗೋಳದಲ್ಲಿ ಕಲ್ಯಾಣದ ಚಾಳುಕ್ಯರಕಾಲದ ಆಕರ್ಷಕಶಂಭುಲಿಂಗ ದೇವಾಲಯವಿದೆ.

 

ಹೊರನಾಡು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆತಾಲೂಕಿನಲ್ಲಿರುವ ಹೊರನಾಡು, ಕಳಸದಿಂದ ೧೫ ಕಿ.ಮೀ.ದೂರದಲ್ಲಿದೆ. ಈ ಸ್ಥಳವುಇತಿಹಾಸಕ್ಕಷ್ಟೆ ಅಲ್ಲದೆ ಇದುಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಪ್ರಕೃತಿ ಸೌಂದರ್ಯಕ್ಕಾಗಿಪ್ರಸಿದ್ಧವಾಗಿದೆ. ದೇಶದ ವಿವಿಧ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿವರ್ಷದುದ್ದಕ್ಕೂ ಯಾತ್ರಾರ್ಥಿಗಳು ಇಲ್ಲಿಗೆಬರುತ್ತಾರೆ. ಈದೇವಾಲಯಕ್ಕೆ ಬರುವ ಭಕ್ತರಿಗೆ ಊಟ ವಸತಿ ವ್ಯವಸ್ಥೆ ಲಭ್ಯವಿದೆ.ಇದು ದೇವಾಲಯದಅಧಿದೈವದ ಹೆಸರಿಗೆ ಅನ್ವರ್ಥಕವಾಗಿದೆ.

 

ಹೊಸಹೊಳಲು

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದಪೂರ್ವಕ್ಕೆ ಹೊಳಲು ವೃತ್ತದಿಂದ ಎರಡು ಕಿ.ಮಿ. ದೂರದಲ್ಲಿರುವಇದು ಹೊಯ್ಸಳರ ಕಾಲದಲ್ಲಿ ಪ್ರಸಿದ್ಧ ಅಗ್ರಹಾರವಾಗಿತ್ತು.ಲಕ್ಷ್ಮೀನಾರಾಯಣ ದೇವಾಲಯ, ಹರಿಹರೇಶ್ವರ ದೇವಾಲಯ, ವೀರಾಂಜನೇಯ ದೇವಾಲಯ, ಪಾರ್ಶ್ವನಾಥ ಬಸದಿಹಾಗೂ ಊರ ಸುತ್ತಲಿನ ಕೋಟೆಯ ಅವಶೇಷಗಳು ಇಲ್ಲಿನೋಡಬಹುದಾದಂತಹ ತಾಣಗಳು. ಇಲ್ಲಿಯ ಲಕ್ಷ್ಮೀನಾರಾಯಣದೇವಾಲಯವು ತ್ರಿಕೂಟಾಚಲವಾಗಿದ್ದು ಮಧ್ಯದಗರ್ಭಗೃಹದಲ್ಲಿಲಕ್ಷ್ಮೀನಾರಾಯಣದ ಪ್ರತಿಮೆ ಇದೆ. ಬಲಗಡೆಯ ಗರ್ಭಗೃಹದಲ್ಲಿಲಕ್ಷ್ಮೀನರಸಿಂಹ ಹಾಗೂಎಡಗಡೆಯ ಗರ್ಭಗೃಹದಲ್ಲಿ ಮೂಲತಃ ವೇಣುಗೋಪಾಲನ ವಿಗ್ರಹವಿತ್ತು. ಈಗ ಅದರಲ್ಲಿ ಯಾವವಿಗ್ರಹವೂ ಇಲ್ಲ. ಮೂರೂ ಗರ್ಭಗೃಹಗಳಿಗೂ ಸೇರಿದಂತೆ ಒಂದೇನವರಂಗವಿದೆ. ನವರಂಗದ ದೇವಕೋಷ್ಟಗಳಲ್ಲಿ ಗಣಪತಿ ಮತ್ತುಮಹಿಷಾಸುರ ಮರ್ಧಿನಿಯ ಶಿಲ್ಪಗಳಿವೆ. ಕಂಬಗಳು ಹೊಯ್ಸಳಶೈಲಿಯಲ್ಲಿದ್ದು ಬಹಳಷ್ಟು ಹೊಳಪುನೀಡಲಾಗಿದೆ. ಕಂಬಗಳಮೇಲ್ಗಡೆ ಹೊಯ್ಸಳ ಕಲೆಯ ವಿಶಿಷ್ಟ ಲಕ್ಷಣವೆನಿಸಿದ ಮದನಿಕೆಯರಸುಂದರ ವಿಗ್ರಹಗಳಿವೆ. ನವರಂಗದ ಮುಂದುಗಡೆ ಸಭಾಮಂಟಪಮತ್ತು ಮುಖಮಂಟಪಗಳಿವೆ. ದೇವಾಲಯವು ಎತ್ತರದಜಗತಿಯಮೇಲೆ ನಿಂತಿದ್ದು ಅಧಿಷ್ಟಾನದ ಪಟ್ಟಿಕೆಗಳಲ್ಲಿ ಸಮೃದ್ಧ ಕುಸುರಿನಕೆತ್ತನೆಗಳುಳ್ಳ ಆನೆ, ಕುದುರೆ, ಬಳ್ಳಿ,ಮಕರ, ಹಂಸ, ಪೌರಾಣಿಕದೃಶ್ಯಗಳೇ ಮುಂತಾದ ಸಾಲುಪಟ್ಟಿಕೆಗಳಿವೆ. ಭಿತ್ತಿಯನ್ನುಎರಡು ಹಂತಗಳಲ್ಲಿವರ್ಗಿಕರಿಸಿದ್ದು ಕೆಳಹಂತವು ಬ್ರಹ್ಮ, ವಿಷ್ಣು,ಲಕ್ಷ್ಮೀನಾರಾಯಣ, ಕೇಶವ, ಚತುರ್ವಿಂಶತಿ ಮೂರ್ತಿಗಳು,ಪರವಾಸುದೇವ, ಯೋಗಾನರಸಿಂಹ, ಲಕ್ಷ್ಮೀನರಸಿಂಹ, ಇಂದ್ರ,ರಾಮಲಕ್ಷ್ಮಣ, ಹರಿಹರ, ಭೈರವ, ಭೈರವಿ, ಕಾಳಿಆದಿಶಕ್ತಿ,ಗೋವರ್ಧನಧಾರಿ ಕೃಷ್ಣ, ಕಾಳಿಂಗಮರ್ದನ, ಲಕ್ಷ್ಮೀ, ನಾಟ್ಯಸರಸ್ವತಿಮುಂತಾದ ದೇವಾನುದೇವತಾ ಶಿಲ್ಪಗಳಿಂದ ಅಲಂಕೃತವಾಗಿದೆ.

ಭಿತ್ತಿಯ ಮೇಲಿನ ಹಂತದಲ್ಲಿ ಸ್ತಂಭಪಂಜರ, ಕೋಷ್ಟಪಂಜರ,ದೇವಕೋಷ್ಟಗಳು, ರಾಮಾಯಣಮಹಾಭಾರತಗಳ ಘಟನೆಗಳುಕಾಣುತ್ತವೆ. ಕೆಲವು ದೇವಕೋಷ್ಟಗಳಲ್ಲಿ ದೇವತೆಗಳ ವಿಗ್ರಹಗಳಿವೆ.ಇತ್ತೀಚೆಗೆದೇವಾಲಯದ ಎಡಪಾರ್ಶ್ವದಲ್ಲಿ ದೇವಿಯ ಗುಡಿಯನ್ನುನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಯಾವುದೇಶಾಸನಗಳಿಲ್ಲ. ಆದರೆ ಶೈಲಿಯ ಆಧಾರದ ಮೇಲೆ ಅದನ್ನುಸುಮಾರು ಕ್ರಿ.ಶ.೧೩ ನೇ ಶತಮಾನಕ್ಕೆ ಅನ್ವಯಿಸಬಹುದು. ಈದೇವಾಲಯದ ಎಡಬದಿಗೆ ಕೋಟೆಯ ಮುಖ್ಯ ಪ್ರವೇಶದ್ವಾರಕ್ಕೆಹೋಗುವ ಹಾದಿಯಲ್ಲಿ ಪಾರ್ಶ್ವನಾಥ ಬಸದಿ ಇದೆ. ಇದನ್ನುಇತ್ತೀಚೆಗೆ ಜೀರ್ಣೋದ್ದಾರ ಮಾಡಲಾಗಿದೆ. ಗರ್ಭಗೃಹದಲ್ಲಿಪಾರ್ಶ್ವನಾಥ, ಅನಂತನಾಥ ಹಾಗೂ ಪದ್ಮಾವತಿ ಯಕ್ಷಿಯವಿಗ್ರಹಗಳಿವೆ. ನವರಂಗದಲ್ಲಿ ಧರಣೇಂದ್ರ ಯಕ್ಷ ಹಾಗೂ ಪದ್ಮಾವತಿ ಯಕ್ಷಿಯ ಸುಂದರ ಶಿಲ್ಪಗಳು ಹಾಗೂ ಭಿನ್ನಗೊಂಡಿರುವಬಾಹುಬಲಿಯ ಶಿಲ್ಪಗಳಿದ್ದು ಇವುಗಳನ್ನು ಸನಿಹದ ಬಿಳಿಬೆಟ್ಟದಿಂದತಂದವುಗಳೆಂದು ಹೇಳಲಾಗುತ್ತದೆ.

 

(*ಮಾಹಿತಿ ಮೂಲ: ಕರ್ನಾಟಕ ಕೈಪಿಡಿ-2017, ಕರ್ನಾಟಕ ರಾಜ್ಯ ಗೆಜೆಟಿಯರ್‌)

ಇತ್ತೀಚಿನ ನವೀಕರಣ​ : 29-08-2023 02:57 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn