ಆರನೇ ರಾಜ್ಯ ವೇತನ ಆಯೋಗ, ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಅಧಿಕೃತ ಅಂತರ್ಜಾಲ

H.D. Kumaraswamy
GOK > ಆರನೇ ರಾಜ್ಯ ವೇತನ ಆಯೋಗ
Last modified at 24/07/2018 13:10 by System Account

​​​​​​​​ಆರನೇ ರಾಜ್ಯ ವೇತನ ಆಯೋಗ


ನಮ್ಮ ಬಗ್ಗೆ

ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ವೇತನ ಆಯೋಗವನ್ನು ರಚಿಸುವುದಾಗಿ ಸರ್ಕಾರದ ನಿರ್ಧಾರವನ್ನು ಘೋಷಿಸಿರುತ್ತಾರೆ.  ಅದರಂತೆ, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸರ್ಕಾರವು ಈ ಕೆಳಕಂಡ ಸದಸ್ಯರನ್ನೊಳಗೊಂಡ 6ನೇ ರಾಜ್ಯ ವೇತನ ಆಯೋಗವನ್ನು ಸರ್ಕಾರಿ ಆದೇಶ ಸಂ. ಆಇ 22 ಎಸ್.ಆರ್.ಪಿ. 2017 ದಿನಾಂಕ 1ನೇ ಜೂ​ನ್ 2017 ರಂದು ರಚಿಸಿರುತ್ತದೆ:

(1)  ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿ, ಭಾ.ಆ.ಸೇ. (ನಿವೃತ್ತ)   - ಅಧ್ಯಕ್ಷರು
(2)  ಶ್ರೀ ಮೊಹಮದ್ ಸನಾವುಲ್ಲ, ಭಾ.ಆ.ಸೇ. (ನಿವೃತ್ತ)            - ಸದಸ್ಯರು
(3)  ಶ್ರೀ  ಆರ್.ಎಸ್. ಪೋಂಡೆ, ನಿಯಂತ್ರಕರು (ನಿವೃತ್ತ)           - ಸದಸ್ಯರು
            ರಾಜ್ಯ ಲೆಕ್ಕಪತ್ರ ಇಲಾಖೆ
(4)  ಶ್ರೀ ಎಂ. ಮಂಜುನಾಥ ನಾಯ್ಕ, ಭಾ.ಆ.ಸೇ,                      - ಕಾರ್ಯದರ್ಶಿ
            ಅಬಕಾರಿ ಆಯುಕ್ತರು
ಈ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀ​ಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ವೇತನ ಮತ್ತು ಇತರೆ ಭತ್ಯೆಗಳ ಪರಿಷ್ಕರಣೆ ಕುರಿತಂತೆ ಪರಿಶೀಲಿಸುತ್ತದೆ.  ಪ್ರಸ್ತುತ ಜಾರಿಯಲ್ಲಿರುವ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸುವುದು.  

          ಈ ​ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ನೌಕರರ ಸಂಘ/ಸಂಸ್ಥೆಗಳಿಂದ, ಅಧಿಕಾರಿಗಳಿಂದ, ನೌ​ಕರರುಗಳಿಂದ ನಿಗದಿತ ಪ್ರಶ್ನಾವಳಿಗಳಲ್ಲಿ ಮಾಹಿತಿಯೊಂದಿಗೆ ಆಯೋಗಕ್ಕೆ                  ಮನವಿಗಳನ್ನು ಸಲ್ಲಿಸಬಹುದಾಗಿದೆ.   ಪ್ರಶ್ನಾವಳಿಗಳು ಈ ಅಂತರ್ಜಾಲದಲ್ಲಿ ಲಭ್ಯವಿರುತ್ತವೆ.   

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಆರನೇ ರಾಜ್ಯ ವೇತನ ಆಯೋಗ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ :ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top