ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)

ಈ ಯೋಜನೆಯಡಿ ಬೀಜದಿಂದ ಉತ್ಪನ್ನದವರೆಗೆ ಆರ್ಥಿಕ ಸಹಾಯ ನೀಡುವ ಮೂಲಕ ರೈತ ಗುಂಪುಗಳನ್ನು ಬಲಾಢ್ಯಿಗೊಳಿಸಬಹುದಾಗಿದೆ. ಉತ್ತಮ ಗುಣಮಟ್ಟದ ಬೀಜ, ಗೊಬ್ಬರ, ಕೀಟನಾಶಕಗಳು, ಉತ್ತಮ ಬೇಸಾಯ ಪದ್ಧಿತಿಗಳು ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರಕಿಸಿಕೊಡುವುದಲ್ಲದೆ, ಉತ್ಪಾದಕತೆಯನ್ನು ಸಹ ಹೆಚ್ಚಿಸಬಹುದಾಗಿರುತ್ತದೆ. ಕೊಯ್ಲಿನ ನಂತರ ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಣ, ಕೂಲಿಂಗ್ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳು ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರಕಿಸಿಕೊಡುತ್ತವೆ. ಕೊನೆಯದಾಗಿ ಖಚಿತವಾದ ಉತ್ತಮ ಬೆಲೆಯು ಸಹ ಅಷ್ಟೆ ಮುಖ್ಯವಾಗಿರುತ್ತದೆ. ಈ ಯೋಜನೆಯಡಿ ಕಂಪನಿ ಅಥವಾ ಕಂಪನಿಗಳ ಗುಂಪುಗಳ ಮುಖಾಂತರ ರೈತರಿಗೆ ಬೇಕಾಗುವ ಎಲ್ಲಾ ಬೇಸಾಯ ಸಾಮಗ್ರಿ ಒದಗಿಸಿ ಉತ್ಪನ್ನಗಳನ್ನು ರೈತರ ಗುಂಪುಗಳಿಂದ ಖರೀದಿಸಲು ಉತ್ತೇಜಿಸಲಾಗುತ್ತದೆ. ಕಂಪನಿಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ಇಲಾಖೆಯ ವಿವಿಧ ಯೋಜನೆಗಳ ಮಾರ್ಗಸೂಚಿಗಳನ್ವಯ ವಿವಿಧ ಘಟಕಗಳಿಗೆ ಸಹಾಯ ಧನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು. ಪ್ರಸ್ತಾವನೆಯ ವಿವಿಧ ಘಟಕಗಳಿಗೆ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿ ನೀಡಬಹುದಾದ ಸಹಾಯ ಧನದ ವಿವರಗಳನ್ನು ಇಲಾಖೆಯ ವೆಬ್ ಸೈಟ್(www.horticulture.kar.nic.in) ನಲ್ಲಿ ಲಭ್ಯವಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯಡಿ ಸರ್ಕಾರ, ಕಂಪನಿ ಮತ್ತು ರೈತರು 1:1:1 ಪಾಲುದಾರಿಕೆ ಹೊಂದುವ ಸಾಧ್ಯಾಸಾಧ್ಯತೆಗಳಿರುತ್ತವೆ.

ಮತ್ತಷ್ಟು ಓದು
pppihd image
pppihd image
pppihd image
pppihd image
pppihd image
pppihd image