ವೈದ್ಯಕೀಯ ಶಿಕ್ಷಣ ಇಲಾಖೆ

ಕಳೆದ ಐದು ವರ್ಷಗಳಲ್ಲಿನ ಪ್ರಮುಖ ಸಾಧನೆಗಳು:

 1. ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಒದಗಿಸಲು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಇಲಾಖೆಯು ಪ್ರಯತ್ನಿಸುತ್ತಿದ್ದು, ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಹಾಲಿ ಇರುವ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರವೇಶಮಿತಿಯನ್ನು ಹೆಚ್ಚಿಸಲು ಇಲಾಖೆಯು ಕ್ರಮವಹಿಸಿದೆ. 2013-14 ನೇ ಸಾಲಿಗಿಂತ ಮೊದಲು ವೈದ್ಯಕೀಯ ಶಿಕ್ಷಣದಲ್ಲಿ ಕ್ರಮವಾಗಿ 1350 ಸ್ನಾತಕ ವೈದ್ಯಕೀಯ ಮತ್ತು 430 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಲಭ್ಯವಿದ್ದವು. ಕಳೆದ 05 ವರ್ಷಗಳಲ್ಲಿ ಹೊಸದಾಗಿ 1400 ಸ್ನಾತಕ ವೈದ್ಯಕೀಯ ಸೀಟುಗಳು ಹಾಗೂ 213 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿರುತ್ತವೆ. ಇದರಿಂದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2750 ಸ್ನಾತಕ ವೈದ್ಯಕೀಯ ಸೀಟುಗಳು ಹಾಗೂ 643 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಲಭ್ಯವಾದಂತಾಗಿವೆ.  ಮುಂದಿನ 05 ವರ್ಷಗಳ ಅವಧಿಯಲ್ಲಿ 1000 ಸ್ನಾತಕ ವೈದ್ಯಕೀಯ ಸೀಟುಗಳು ಹಾಗೂ 350 ಸ್ನಾತಕೋತ್ತರ ಸೀಟುಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದ್ದು, ಪೈಕಿ 100 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು 2018-19 ನೇ ಸಾಲಿನಲ್ಲಿ ಸೇರ್ಪಡೆಯಾಗುವ ನಿರೀಕ್ಷೆಯಿದೆ.
 2. ಸರ್ಕಾರಿ ವೈದ್ಯಕೀಯ ಕಾಲೇಜುಗಳು ದ್ವಿತೀಯ ಹಂತದ ಚಿಕಿತ್ಸಾ ಸೌಲಭ್ಯಗಳನ್ನು ಹಾಗೂ ರೆಫೆರಲ್ ಸೌಲಭ್ಯಗಳನ್ನು ಒದಗಿಸುತ್ತಿವೆ. ಕಳೆದ ಒಂದು ವರ್ಷದಲ್ಲಿಯೇ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ 70 ಲಕ್ಷ ಹೊರ-ರೋಗಿಗಳು, 8 ಲಕ್ಷ ಒಳ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದ್ದು, 1.74 ಲಕ್ಷ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಹಾಗೂ 2.45 ಲಕ್ಷ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಕಳೆದ 05 ವರ್ಷಗಳಲ್ಲಿ ಬೋಧಕ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಉಪಕರಣಗಳು, ಆಧುನೀಕೃತ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಟ್ರಾಮಾ ಕೇರ್ ಸೌಲಭ್ಯಗಳ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಬಲವರ್ಧನೆಗೊಳಿಸಲು ರೂ.1487.93 ಕೋಟಿಗಳನ್ನು ಖರ್ಚು ಮಾಡಲಾಗಿದೆ.
 3. ಜಿಲ್ಲಾ ಮಟ್ಟದಲ್ಲಿ ಉತ್ತಮ ಗುಣಮಟ್ಟದ ತೃತೀಯ ಹಂತದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದ್ದು, ಇದಕ್ಕಾಗಿ ಕಳೆದ 05 ವರ್ಷಗಳಲ್ಲಿ ರೂ.773.27 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು 2013-14 ರಿಂದ ಇಲ್ಲಿಯವರೆಗೆ ಅಂದಾಜು 20 ಲಕ್ಷ ಹೊರರೋಗಿಗಳಿಗೆ ಹಾಗೂ 1.85 ಲಕ್ಷ ಒಳರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಶಕ್ತವಾಗಿದ್ದು, 1.40 ಲಕ್ಷ ಆಂಜಿಯೋಗ್ರಾಮ್ / ಆಂಜಿಯೋಪ್ಲಾಸ್ಟಿ ಮತ್ತು 14,505 ಬೈಪಾಸ್ ಸರ್ಜರಿಗಳನ್ನು ನಡೆಸಿರುತ್ತದೆ. ಇದು 2013-14 ಕಾರ್ಯನಿರ್ವಹಣೆಗಿಂತಲೂ ಶೇ.400 ರಷ್ಟು ಹೆಚ್ಚುವರಿಯಾಗಿರುತ್ತದೆ.  ಪೈಕಿ ಕಲಬುರಗಿ ಹಾಗೂ ಮೈಸೂರು ಇಲ್ಲಿ ಹೊಸದಾಗಿ ಪ್ರಾರಂಭಿಸಲಾದ ಶಾಖೆಗಳಲ್ಲಿ 4 ಲಕ್ಷ ಹೊರರೋಗಿಗಳು ಮತ್ತು 33,947 ಒಳರೋಗಿಗಳು ಚಿಕಿತ್ಸೆ ಪಡೆದಿದ್ದು, ಕಲಬುರಗಿ ಶಾಖೆಯಲ್ಲಿ 110 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಸ್ಥಳಗಳಲ್ಲಿ ಹಿಂದೆ ಲಭ್ಯವಿಲ್ಲದಂತಹ ಇಂತಹ ಸೇವೆಗಳನ್ನು ಒದಗಿಸಿರುವುದಲ್ಲದೇ, ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸಹ ಶೇ.25 ರಿಂದ ಶೇ.30 ರಷ್ಟು ಕಡಿಮೆಗೊಳಿಸಲಾಗಿದೆ. ಮೈಸೂರಿನಲ್ಲಿ ಅಂದಾಜು ರೂ. 150.00 ಕೋಟಿಗಳ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡವು ಪೂರ್ಣಗೊಳ್ಳುವ ಹಂತದಲ್ಲಿದೆ. ಸುಸಜ್ಜಿತ ಮೂಲಭೂತ ಸೌಲಭ್ಯಗಳು, ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳಿರುವ ನೂತನ ಕಟ್ಟಡದ ನಿರ್ಮಾಣದಿಂದ ವಾರ್ಷಿಕವಾಗಿ ಅಂದಾಜು 1.2 ರಿಂದ 1.3 ಲಕ್ಷ ಹೊರರೋಗಿಗಳಿಗೆ ಮತ್ತು 10,000 ಒಳರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಮತ್ತು 6,300 ಆಂಜಿಯೋಗ್ರಾಮ್ / ಆಂಜಿಯೋಪ್ಲಾಸ್ಟಿ ಮತ್ತು  800-1000 ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ.
 4. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 2013-14 ರಿಂದ 10.75 ಲಕ್ಷ ಹೊರರೋಗಿಗಳು ಮತ್ತು 64,792 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 2014 ರಲ್ಲಿ ಸ್ಥಾಪಿತವಾದ ಕಲಬುರಗಿಯ ಶಾಖೆಯಲ್ಲಿ, 1784 ಒಳರೋಗಿಗಳು ಮತ್ತು 1342 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು 144 ಶಸ್ತ್ರಚಿಕಿತ್ಸೆಗಳು ಮತ್ತು 1047 ಕೀಮೋಥೆರಪಿ ಚಿಕಿತ್ಸೆ ನಡೆಸಲಾಗಿದೆ. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 04 ಲೀನಿಯರ್ ಆಕ್ಸಿಲರೇಟರ್ ಸೌಲಭ್ಯವನ್ನು ರೂ.53.54 ಕೋಟಿಗಳ ವೆಚ್ಚದಲ್ಲಿ ಒದಗಿಸಲಾಗಿದ್ದು, ಇದರಿಂದಾಗಿ ರೇಡಿಯೋಥೆರಪಿ ಚಿಕಿತ್ಸೆಗಾಗಿ ರೋಗಿಗಳ ಕಾಯುವಿಕೆ ಅವಧಿಯನ್ನು 15 ದಿವಸಗಳಿಂದ ಶೂನ್ಯಕ್ಕೆ ಇಳಿಸಬಹುದಾಗಿದೆ.
 5. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಧೀನದಲ್ಲಿ ಟ್ರಾಮಾ ಕೇರ್ ಕೇಂದ್ರವನ್ನು 17 ನೇ ಮೇ 2016 ರಿಂದ ಪ್ರಾರಂಭಿಸಲಾಗಿದ್ದು, ಕೇಂದ್ರದಲ್ಲಿ ಏಪ್ರಿಲ್ 2016 ರಿಂದ ಡಿಸೆಂಬರ್ 2017 ರವರೆಗೆ 91,820 ಹೊರರೋಗಿಗಳು ಮತ್ತು 1.22 ಲಕ್ಷ ಒಳರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ. 

2018-19ನೇ ಸಾಲಿನ ಹೊಸ ಕಾರ್ಯಕ್ರಮಗಳು:

 1. ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಮಂಡ್ಯ, ಹಾಸನ, ಶಿವಮೊಗ್ಗ, ಬೀದರ್, ಬೆಳಗಾವಿ ಮತ್ತು ರಾಯಚೂರು ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ರೂ.17.50 ಕೋಟಿಗಳ ಅಂದಾಜು ವೆಚ್ಚದಲ್ಲಿ ಸಿಮ್ಯುಲೇಷನ್ ಕೇಂದ್ರ ಕಮ್ ಸ್ಕಿಲ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು. ಕೇಂದ್ರಗಳ ಸ್ಥಾಪನೆಗಾಗಿ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ವೈದ್ಯಕೀಯ ಸಂಸ್ಥೆಗಳು ತಲಾ ರೂ.5.00 ಕೋಟಿಗಳನ್ನು ಭರಿಸಲಿವೆ ಹಾಗೂ ಉಳಿದ ಮೊತ್ತವನ್ನು ರಾಜ್ಯ ಸರ್ಕಾರವು ಒದಗಿಸಲಿದೆ.
 2. ಮುಂದಿನ ಐದು ವರ್ಷಗಳಲ್ಲಿ ಗದಗ, ಕೊಪ್ಪಳ, ಚಾಮರಾಜನಗರ, ಕಾರವಾರ ಮತ್ತು ಕೊಡಗು ಇಲ್ಲಿ ತಲಾ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯನ್ನು ನಿರ್ಮಿಸಲು ಹಾಗೂ ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿ ಇಲ್ಲಿ ಹಾಲಿ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. 2018-19 ನೇ ಸಾಲಿನಲ್ಲಿ ಗದಗ, ಕೊಪ್ಪಳ ಮತ್ತು ಚಾಮರಾಜನಗರ ಇಲ್ಲಿ ತಲಾ ರೂ.100.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
 3. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 1000 ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್‍ಗಳನ್ನು ನಿರ್ಮಿಸಲಾಗುವುದು.
 4. ಕಲಬುರಗಿಯಲ್ಲಿನ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯನ್ನು ರೂ.10.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.
 5. ಕಿಮ್ಸ್, ಹುಬ್ಬಳ್ಳಿ ಮತ್ತು ವಿಮ್ಸ್, ಬಳ್ಳಾರಿ ಇಲ್ಲಿ ಪಿಎಂಎಸ್‍ಎಸ್‍ವೈ ಯೋಜನೆ ಅಡಿ ತಲಾ ರೂ.150.00 ಕೋಟಿಗಳ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ 06 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳಿಸಲಾಗುವುದು. ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಒಟ್ಟು ರೂ.370.06 ಕೋಟಿಗಳ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದ್ದು, ಕಟ್ಟಡ ಕಾಮಗಾರಿಗಳನ್ನು ಮುಂದಿನ 02 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಒದಗಿಸಲಾಗುವುದು. 2018-19 ನೇ ಸಾಲಿನಲ್ಲಿ ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ಮುಂದಿನ 03 ವರ್ಷಗಳಲ್ಲಿ ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಸಜ್ಜಿತ ಮೂಲಸೌಲಭ್ಯಗಳೊಂದಿಗೆ ಉನ್ನತೀಕರಿಸಲಾಗುವುದು. ಅದರಂತೆ, ಬೆಂಗಳೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸೌಲಭ್ಯಗಳ ಜೊತೆಗೆ 2020-2021 ರಿಂದ ಶಿವಮೊಗ್ಗ, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಇಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಒದಗಿಸಲಾಗುವುದು.
 6. ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೀದರ್ ಹಾಗೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇಲ್ಲಿ ತಲಾ ರೂ.15.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕ್ಯಾಥ್‍ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗುವುದು.
 7. ಹಾಸನ, ಮೈಸೂರು ಮತ್ತು ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ರೂ.15.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು.
 8. 2018-19 ನೇ ಸಾಲಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಪೆಟ್ ಸಿ.ಟಿ.ಸ್ಕ್ಯಾನ್ ಸೌಲಭ್ಯವನ್ನು ಸ್ಥಾಪಿಸಲಾಗುವುದು.
 9. ಮುಂದಿನ 05 ವರ್ಷಗಳಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಟ್ರಾಮಾಕೇರ್ ಸೌಲಭ್ಯಗಳನ್ನು ಬಲವರ್ಧನೆಗೊಳಿಸಲಾಗುವುದು. ಕಲಬುರಗಿ, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ಇಲ್ಲಿ ಟ್ರಾಮಾಕೇರ್ ಕೇಂದ್ರಗಳ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೇಂದ್ರಗಳನ್ನು 2018-19 ನೇ ಸಾಲಿನಿಂದ ಕಾರ್ಯಾರಂಭಗೊಳಿಸಲಾಗುವುದು. 2018-19 ನೇ ಸಾಲಿನಲ್ಲಿ ಅಂದಾಜು ರೂ.2.50 ಕೋಟಿಗಳ ವೆಚ್ಚದಲ್ಲಿ ಮಂಡ್ಯದಲ್ಲಿ ಟ್ರಾಮಾ ಕೇರ್ ಸೌಲಭ್ಯಗಳನ್ನು ಬಲವರ್ಧನೆಗೊಳಿಸಲಾಗುವುದು. ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಒಂದು ಭಾಗವಾಗಿ ತಜ್ಞರು, ಉಪಕರಣಗಳು ಮತ್ತು ಮೂಲಭೂತ ಸೌಲಭ್ಯಗಳೊಂದಿಗೆ ಟ್ರಾಮಾ ಕೇರ್ ಸೌಲಭ್ಯಗಳನ್ನು 24x7 ಮಾದರಿಯಲ್ಲಿ ಒದಗಿಸಲು ಉದ್ದೇಶಿಸಲಾಗಿದೆ.
 10. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ತನ್ನದೇ ಆದ ಸ್ವಸಾಮಥ್ರ್ಯದಿಂದ ಮೇಲುಸ್ತುವಾರಿ ಮತ್ತು ಸಮನ್ವಯತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಬಲಗೊಳಿಸಲಾಗುವುದು. ಉದ್ದೇಶಕ್ಕಾಗಿ ವಿವಿಧ ವೃಂದದ 80 ಹುದ್ದೆಗಳನ್ನು ಸೃಜಿಸಲು ಉದ್ದೇಶಿಸಲಾಗಿದೆ.
 11. ಎಲ್ಲಾ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ -ಆಸ್ಪತ್ರೆ ಸೌಲಭ್ಯ ಅಳವಡಿಸುವುದನ್ನು ಪೂರ್ಣಗೊಳಿಸಲಾಗುವುದು ಮತ್ತು 2018-19 ನೇ ಸಾಲಿನಲ್ಲಿ ಸೂಪರ್ ಸ್ಪೆಷಾಲಿಟಿ ಮತ್ತು ಎಲ್ಲಾ ಬೋಧಕ ಆಸ್ಪತ್ರೆಗಳಲ್ಲಿನ ಸಂಬಂಧಿತ ಅಂಕಿ-ಅಂಶಗಳನ್ನೊಳಗೊಂಡ ವೈದ್ಯಕೀಯ ಶಿಕ್ಷಣ ಇಲಾಖೆಯ ಪೋರ್ಟಲ್ ಅನ್ನು ಸಿದ್ಧಪಡಿಸಲಾಗುವುದು.
 12. ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಶುಶ್ರೂಷಾ ಶಾಲೆಗಳು ಹಾಗೂ ಕಾಲೇಜುಗಳಲ್ಲಿನ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕರ್ನಾಟಕ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸಸ್ ಎಜುಕೇಷನ್ (ರೆಗ್ಯುಲೇಷನ್) ಅಥಾರಿಟಿಯ ಕಾರ್ಪಸ್ ನಿಧಿಯಲ್ಲಿ ರೂ.30.00 ಕೋಟಿಗಳನ್ನು ಮೀಸಲಿಡಲಾಗುವುದು.
 13. 2018-19 ನೇ ಸಾಲಿನಲ್ಲಿ ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಯಾದಗಿರಿ ಮತ್ತು ಹಾವೇರಿ ಇಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top