ಕಾಯ್ದೆ ಮತ್ತು ನಿಯಮ

1. ಕರ್ನಾಟಕ ವಿವಾಹ ಕಾಯ್ದೆ, 1976: (ರಾಜ್ಯ ಕಾಯ್ದೆ)

ಕಾಯ್ದೆಯನ್ನು ದಿನಾಂಕ: 1-4-2004 ರಂದು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಹಾಗೂ ಕಾಯ್ದೆಗೆ ರಾಜ್ಯದ ನಿಯಮಗಳನ್ನು 18-4-2006 ಅಧಿಸೂಚನೆಯನ್ವಯ ಹೊರಡಿಸಲಾಗಿದೆ. ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಕಮಿಷನರ್ ಆಫ್ ಸ್ಟ್ಯಾಂಪರ್ಸ್ ರವರನ್ನು ಮುಖ್ಯ ವಿವಾಹ ನೋಂದಣಾಧಿಕಾರಿಗಳಾಗಿ ನೇಮಿಸಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಉಪ ನೋಂದಣಾಧಿಕಾರಿಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ಗ್ರಾಮಾಂತರ ಮಟ್ಟದಲ್ಲಿ ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ಧರ್ಮೀಯ ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಆದೇಶಿಸಿರುವುದರಿಂದ, ಪರಿಷ್ಕೃತ ಕರಡು ನಿಯಮಗಳನ್ನು ರಚಿಸಲಾಗಿದೆ.

 2.  ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006

ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಾಗ, ನ್ಯಾಯಾಲಯದ ಮುಖಾಂತರ  ಮಹಿಳೆಯರಿಗೆ ಆರ್ಥಿಕ ಪರಿಹಾರ, ರಕ್ಷಣಾ ಆದೇಶ, ವಾಸದ ಆದೇಶ, ಮಕ್ಕಳ ವಶ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ಹಾಗೂ ಕಾನೂನು ನೆರವನ್ನು ಒದಗಿಸಲು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಹಾಗೂ ನಿಯಮ 2006 ನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2012-13ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ದಾಖಲಾದ ಪ್ರಕರಣಗಳ ಸಂಖ್ಯೆ- 5509, ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ-1971.

3.  ಬಾಲ್ಯ ವಿವಾಹ ನಿಷೇಧ ಕಾಯ್ದೆ -2006 (ಕೇಂದ್ರ ಕಾಯ್ದೆ – 2006)

ಎಲ್ಲಾ ಮಕ್ಕಳು ಆರೈಕೆ ಹಾಗೂ ರಕ್ಷಣೆಯ ಮೂಲಕ ಅಭಿವೃದ್ಧಿ ಯೊಂದಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯುವ ಹಕ್ಕನ್ನು ಹೊಂದಿರುತ್ತಾರೆ. ಬಾಲ್ಯ ವಿವಾಹವು ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಬಾಲ್ಯ ವಿವಾಹದಿಂದ ಉಂಟಾಗುವ ಅಪ್ರಾಪ್ತ ವಯಸ್ಸಿನ ತಾಯ್ತನವು ತಾಯಿ ಹಾಗೂ ಮಗುವನ್ನು ಅಪಾಯದ ಅಂಚಿನಲ್ಲಿ ತಳ್ಳುವಂತಾಗುತ್ತದೆ. ಇದರಿಂದಾಗಿ ಶಿಶು ಮರಣ ಹಾಗೂ ತಾಯಂದಿರ ಮರಣ ಹೆಚ್ಚಾಗಲು ಕಾರಣವಾಗುತ್ತದೆ.

 ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1154/2006ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್.ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ: 30.06.2011ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ. ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 501 ಎಸ್.ಜೆ.ಡಿ 2011, ದಿನಾಂಕ:  16.11.2011ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ  1 ಉಪ ನಿರ್ದೇಶಕರು,  1 ಸಹಾಯಕ ನಿರ್ದೇಶಕರು,  02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ. 2012-13ನೇ ಸಾಲಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.

ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು ಮೂಡಿಸಲು "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/- ನಗದು ಬಹುಮಾನ ನೀಡಲಾಗುತ್ತಿದೆ. ರಾಜ್ಯದಲ್ಲಿ 300 ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 10 ಜಿಲ್ಲೆಗಳಲ್ಲಿ 10 ಕಡೆ ಬಾಲ್ಯ ವಿವಾಹ ನಿಷೇಧದ ಬಗ್ಗೆ ಗೋಡೆ ಬರಹ ಬರೆಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆಕರಪತ್ರಗಳು, ಬ್ರೋಷರ್, ಎಫ್..ಕ್ಯೂ.ಗಳು, ಸ್ಟಿಕ್ಕರ್ ಗಳನ್ನು ಮತ್ತು 5 ಬಗೆಯ ಪೋಸ್ಟರ್ ಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗಿದೆ. ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ತರಬೇತಿ ಮೂಲಕ ಅರಿವು ಮೂಡಿಸಲಾಗಿರುತ್ತದೆ. ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ. ಕಲಾ ಜಾಥಾಗಳ ಮೂಲ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ.

 4. ವರದಕ್ಷಿಣೆ ನಿಷೇದ ಕಾಯ್ದೆ 1961 (2007-08)

 ವರದಕ್ಷಿಣೆಯ ವ್ಯವಸ್ಥೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ವರದಕ್ಷಿಣೆ ನಿಷೇದ ಕಾಯ್ದೆ  1961 ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಕಾಯ್ದೆಗೆ 1984 ಹಾಗೂ 1986 ರಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆರಾಜ್ಯದಲ್ಲಿ ಇದಕ್ಕೆ ನಿಯಮಾವಳಿಗಳನ್ನು ದಿನಾಂಕ: 31-3-2004 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಮುಖ್ಯ ವರದಕ್ಷಿಣೆ ನಿಷೇದ ಅಧಿಕಾರಿಗಳನ್ನಾಗಿ ದಿನಾಂಕ: 17-6-2004 ಅಧಿಸೂಚನೆಯ ಪ್ರಕಾರ ನೇಮಿಸಲಾಗಿರುತ್ತದೆ. 2012-13ನೇ ಸಾಲಿನಲ್ಲಿ ಮಾರ್ಚ್-2013 ಅಂತ್ಯಕ್ಕೆ ಒಟ್ಟು 1071 ಪ್ರಕರಣಗಳು ಕಾಯ್ದೆಯಡಿ ನೊಂದಣಿಯಾಗಿರುತ್ತದೆ

ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ, 2000 ಮತ್ತು ತಿದ್ದುಪಡಿ ಕಾಯ್ದೆ 2006 ಮತ್ತು 2011.  ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕರ್ನಾಟಕ ನಿಯಮಗಳು, 2010.

ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2000 ಕೇಂದ್ರ ಕಾಯ್ದೆಯಾಗಿದ್ದು ಏಪ್ರಿಲ್ 1, 2001ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಕಾಯ್ದೆಗೆ ಭಾರತ ಸರ್ಕಾರವು (ಮಕ್ಕಳ ಪಾಲನೆ ಹಾಗೂ ರಕ್ಷಣೆ) ನಿಯಮಾವಳಿ 2007 ರೂಪಿಸಿದ್ದು ನಿಯಮಾವಳಿಗಳು 25 ಸೆಪ್ಟೆಂಬರ್ 2008ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುತ್ತದೆ. ರಾಜ್ಯ ಸರ್ಕಾರದಿಂದ ಬಗ್ಗೆ   ರಾಜ್ಯ ನಿಯಮಾವಳಿಗಳನ್ನು  ರಚಿಸಿ ರಾಜ್ಯ ಪತ್ರದಲ್ಲಿ ದಿನಾಂಕ 30.12.2010ರಂದು  ಪ್ರಕಟಿಸಲಾಗಿದೆ

5. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ 2012 ಮತ್ತು ನಿಯಮಗಳು 2012:  (POCSO Act)

ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಿಸುವ ಕಾಯ್ದೆ, 2012  ಕೇಂದ್ರ ಕಾಯ್ದೆಯಾಗಿದ್ದು ಜೂನ್ 20, 2012ರಂದು ಕೇಂದ್ರ ಗೆಜೆಟ್ನಲ್ಲಿ ಪ್ರಕಟಗೊಂಡಿದ್ದುದಿನಾಂಕ: 14.11.2012ರಿಂದ ದೇಶಾದ್ಯಂತ ಕಾನೂನನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾಯ್ದೆಯು ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಹಿಕ ಹಿಂಸೆಗಳಿಂದ ರಕ್ಷಿಸುತ್ತದೆ. ಇಂತಹ ಪ್ರಾಸಂಗಿಕ ಪ್ರಕರಣಗಳ ನ್ಯಾಯ ವಿಚಾರಣೆ ಮಾಡಲು ಖವಿಶೇಷ ನ್ಯಾಯಾಲಯಗಳನ್ನುಖ ಸ್ಥಾಪಿಸಲು ಅವಕಾಶಮಾಡಿದೆ ಹಾಗೂ ರಾಜ್ಯದಲ್ಲಿ ನ್ಯಾಯಾಲಯಗಳು ಸ್ಥಾಪಿತಗೊಂಡಿದೆ.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಬರುವ ಕಾಯ್ದೆಗಳು

ಅಂಗವಿಕಲರ ಅಧಿನಿಯಮ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಹಾಗೂ ಸಂಪೂರ್ಣ ಭಾಗವಹಿಸುವಿಕೆ) 1995.

ಮಾನಸಿಕ ಆರೋಗ್ಯ ಕಾಯಿದೆ 1987

ನ್ಯಾಷನಲ್ ಟ್ರಸ್ಟ್ ಆಕ್ಟ್ (ಮನೋವಿಕಾರ, ಮಿದುಳಿನ ಪಾರ್ಶ್ವ ವಾಯು, ಬುದ್ಧಿಮಾಂದ್ಯತೆ ಹಾ ಬಹುವಿಧ ವಿಕಲತೆಯುಳ್ಳ ವ್ಯಕ್ತಿಗಳ ಕಲ್ಯಾಣ) 1999

ಭಾರತದ ಪುನರ್ವಸತಿ ಪರಿಷತ್ತು ಅಧಿನಿಯಮ 1992

ಪಾಲಕರ ಮತ್ತು ಪೋಷಕರ ಹಾಗೂ ಹಿರಿಯ ನಾಗರಿಕರ ನಿರ್ವಹಣಾ ಕಾಯಿದೆ 2007