ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

ಕರ್ನಾಟಕ ಸರ್ಕಾರ

H.D. Kumaraswamy
GOK > WCDEDASC > ಕಾರ್ಯಗಳು
Last modified at 17/01/2019 10:48 by System Account

​​ಕಾರ್ಯಗಳು

ರಾಜ್ಯದ ಮಹಿಳೆಯರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಿಷ್ಠರಾಗಲು ಮತ್ತು ರಾಜ್ಯದ ಮಕ್ಕಳ ಭವಿಷ್ಯವು ಬಾಲ್ಯಾವಸ್ಥೆಯಿಂದಲೇ ಆಶಾದಾಯಕವಾಗಿರಲು ಭದ್ರ   ಬುನಾದಿ ಹಾಕುವುದಾಗಿದೆ.

ಘನೋದ್ದೇಶ (ಮಿಷನ್)

 • ಮಹಿಳೆಯರಿಗೆ  ಆರ್ಥಿಕ  ಮತ್ತು  ಸಾಮಾಜಿಕ ಭದ್ರತೆಯನ್ನು ಒದಗಿಸಲು ಬೇಕಾದ ಸಾಂಸ್ಥಿಕ ಮತ್ತು ಆರ್ಥಿಕ ನೆರವನ್ನು ಒದಗಿಸುವುದಾಗಿದೆ.
 • ಮಹಿಳೆಯರ ಮತ್ತು ಮಕ್ಕಳ ಆರೋಗ್ಯ, ಪೌಷ್ಠಿಕತೆ ಹಾಗೂ ಶಿಕ್ಷಣಕ್ಕೆ ಆದ್ಯತೆಯನ್ನು  ನೀಡಲು ಇತರೆ  ಸಹ ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿದೆ.
 • ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣ, ಸಾಮಾಜಿಕ ಶಾಸನಗಳು, ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆ  ಅರಿವನ್ನು  ಮೂಡಿಸುವುದಾಗಿದೆ. ಈ  ಮೂಲಕ   ಮಹಿಳೆಯರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ  ಸಬಲೀಕರಣಗೊಳಿಸುವುದಾಗಿದೆ.
 • ಮಕ್ಕಳು ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ  ಪಾಲ್ಗೊಳ್ಳುವುದು ಸೇರಿದಂತೆ ಅವರ ಹಕ್ಕುಗಳನ್ನು ಸಂರಕ್ಷಿಸಿ ಅವರು ಬದುಕುಳಿದು ಅಭಿವೃದ್ಧಿಹೊಂದಲು ಪೂರಕವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಅನುಷ್ಟಾನಗೊಳಿಸುವುದಾಗಿದೆ.
 • ಮಹಿಳೆಯರು ಮತ್ತು ಮಕ್ಕಳು ಸಮಾಜದಲ್ಲಿ ನ್ಯಾಯಬದ್ಧವಾಗಿ ಸಮಾನತೆಯನ್ನು ಹೊಂದಲು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪಿಸಿರುವ ಕಾಯ್ದೆಗಳು ಮತ್ತು ಅಧಿನಿಯಮಗಳನ್ನು  ಪರಿಣಾಮಕಾರಿಯಾಗಿ ಜಾರಿಗೊಳಿಸಿ ವಿವಿಧ ಶೋಷಣೆಗಳಿಂದ ರಕ್ಷಿಸಿ ಸಂಕಷ್ಟ  ಪರಿಸ್ಥಿತಿಯಿಂದ  ಹೊರತರುವುದಾಗಿದೆ.
 • ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇರುವ ಕಾಯ್ದೆಗಳನ್ನು, ಕಾರ್ಯ ನೀತಿಗಳನ್ನು, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಹಾಗೂ ನಿರ್ದಿಷ್ಟ ಗುರಿಗಳನ್ನು ತಲುಪಲು ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೇತರ ಹಾಗೂ  ಕಾರ್ಪೋರೇಟ್ ವಲಯಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದಾಗಿದೆ.

ಉದ್ದೇಶಗಳು :-

 • 0-6 ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬುನಾದಿ ಹಾಕುವುದಲ್ಲದೆ, ಪೂರಕ ಪೌಷ್ಠಿಕ ಆಹಾರ, ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ, ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕತೆಯ ಬಗ್ಗೆ ತಾಯಂದಿರಿಗೆ ತರಬೇತಿ ಹಾಗೂ ಅರಿವು ಮೂಡಿಸುವುದರ ಬಗ್ಗೆ ಒತ್ತು ನೀಡುವುದು.
 • 11-18 ವರ್ಷದ  ಪ್ರಾಯ ಪೂರ್ವ ಬಾಲಕಿಯರ  ಸಬಲೀಕರಣಕ್ಕಾಗಿ ಆರೋಗ್ಯ, ಪೌಷ್ಠಿಕತೆ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು.
 • ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಹಾಗೂ ಕಾನೂನಿನೊಂದಿಗೆ  ಸಂರ್ಷದಲ್ಲಿರುವ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸುರಕ್ಷಿತವಾದ ವಾತಾವರಣವನ್ನು  ಕಲ್ಪಿಸುವುದು.
 • ಬಾಲ್ಯ ವಿವಾಹವನ್ನು ತಡೆಗಟ್ಟಲು, ಹಾಗೂ ಬಾಲ್ಯ ವಿವಾಹದಿಂದ ಆಗುವ ಪರಿಣಾಮದ ಬಗ್ಗೆ ಅರಿವು ಮೂಡಿಸಲು, ಹೆಣ್ಣು ಮಗುವಿನ ವಿರುದ್ಧವಿರುವ ಪಕ್ಷ ಪಾತವನ್ನು ಹೋಗಲಾಡಿಸುವುದು, ಇಳಿಯುತ್ತಿರುವ ಲಿಂಗ ಪ್ರಮಾಣವನ್ನು ಸರಿಪಡಿಸುವುದು ಹಾಗೂ ಸಾಮಾಜಿಕ ಪಿಡುಗುಗಳ ನಿರ್ಮೂಲನೆ.
 • ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ  ತಡೆಗಟ್ಟುವುದು.
 • ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ  ರಾಜಕೀಯ ಸಬಲೀಕರಣ
 • ಕೌಟುಂಬಿಕ/ ಸಾಮಾಜಿಕ ಬೆಂಬಲವಿಲ್ಲದ, ಪ್ರತ್ಯೇಕ ಆದಾಯವಿಲ್ಲದ, ಖಂಡನೆಗಳಿಗೆ  ಅವಕಾಶವೀಯುವಂತಹ ಮಹಿಳೆಯರಿಗೆ ನೆರವು  ಹಾಗೂ ಪುನರ್ವಸತಿ ಕಲ್ಪಿಸುವುದು.
 • ಮಹಿಳಾ ಉದ್ದೇಶಿತ ಆಯವ್ಯಯವನ್ನು ನಿಗದಿಪಡಿಸುವ  ಮೂಲಕ  ಮಹಿಳೆಯರ ಪರ ನೀತಿ/ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿ, ಲಿಂಗತ್ವ ಸಮಾನತೆಯನ್ನು  ಪಡೆಯುವುದು.
 • ವಿಕಲಚೇತನರ  ಹಾಗೂ ಹಿರಿಯ ನಾಗರೀಕರ ಕಲ್ಯಾಣವನ್ನು ನಿಶ್ಚಯಪಡಿಸುವುದು.
 • ರಾಜ್ಯ ಸಮಾಜ ಕಲ್ಯಾಣ ಮಂಡಳಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜಾಲದ ಮೂಲಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬೆಂಬಲಿಸುವ ಸೇವೆಗಳನ್ನು ಒದಗಿಸುವುದು.
 • ದುಡಿಯುವ ಮಹಿಳೆಯರ ಮಕ್ಕಳಿಗಾಗಿ ರಾಜೀವಗಾಂಧಿ ಶಿಶುಪಾಲನಾ ಕೇಂದ್ರ ಯೋಜನೆಯ ಅನುಷ್ಠಾನ ಹಾಗೂ  ತಿದ್ದುಪಡಿ
 • ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರ ಆಕ ಸಬಲೀಕರಣ  ಯೋಜನೆಗಳನ್ನು ಅನುಷ್ಟಾನಗೊಳಿಸುವುದು
 • ಮಹಿಳಾ ಆಯೋಗದ ಮೂಲಕ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ  ಮಹಿಳೆಯರನ್ನು ಸಬಲೀಕರಿಸುವುದು.
 • ಬಾಲ ವಿಕಾಸ ಅಕಾಡೆಮಿ ಹಾಗೂ ಬಾಲಭವನಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರಹೊಮ್ಮಲು ಕ್ರಿಯಾತ್ಮಕ, ಸೃಜನಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವುದು.

ಕೆಲಸ ಕಾರ್ಯಗಳು :-

 • ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಹಾಗೂ ಮಕ್ಕಳ ರಕ್ಷಣೆ / ಅಭಿವೃದ್ಧಿಗೆ ಸಂಬಂಧಿಸಿದಂತೆ  ಕಾಯ್ದೆ ಕಾನೂನು,  ನೀತಿ,  ಯೋಜನೆಗಳ  ಹಾಗೂ  ಕಾರ್ಯಕ್ರಮಗಳ ಚೌಕಟ್ಟಿನ ರಚನೆ  ಹಾಗೂ ಅನುಷ್ಠಾನ.
 • ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸಾರ್ವತ್ರೀಕರಣ, ಮೂಲ ಕರ್ಮಚಾರಿಗಳ  ತರಬೇತಿ, ಪ್ರಾಯ ಪೂರ್ವ ಬಾಲಕಿಯರಿಗೆ ಪೌಷ್ಠಿಕಾಂಶ, ಕೌಶಲ್ಯ ಆಧಾರಿತ ಶಿಕ್ಷಣ, ವೃತ್ತಿಪರ ತರಬೇತಿ, ಆರೋಗ್ಯ ಶಿಕ್ಷಣ ಹಾಗೂ ಗೃಹ ಆಧಾರಿತ ಚಟುವಟಿಕೆಗಳ ಬಗ್ಗೆ ಕೌಶಲ್ಯವನ್ನು ಒದಗಿಸುವುದು.
 • ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ  ಅನುಷ್ಠಾನ
 • ಕಾರ್ಯಕರ್ತೃತ್ವ ಹಾಗೂ ಮಹಿಳೆಯರ ಹಾಗೂ ಮಕ್ಕಳ ಸಾಗಣೆ ಬಗ್ಗೆ ಅರಿವು ಮೂಡಿಸುವುದು, ಸಾಗಾಣೆಗೆ ಒಳಪಟ್ಟ ಮಹಿಳೆಯರ ಹಾಗೂ ಮಕ್ಕಳಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಅಲ್ಲದೆ ಸಂಕಷ್ಟದಲ್ಲಿರುವ   ಮಹಿಳೆಯರಿಗೆ ಅಲ್ಪಾವಧಿ  ಗೃಹ/ಕೇಂದ್ರ ಹಾಗೂ ಸಾಂತ್ವನ ಕೇಂದ್ರಗಳ ಸ್ಥಾಪನೆ.
 • ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು.  ವಿವಿಧ ಸಂಸ್ಥೆಗಳಲ್ಲಿ ಮಹಿಳಾ ಉದ್ದೇಶಿತ ಆಯವ್ಯಯವನ್ನು ನಿಗಧಿಪಡಿಸುವ ಪ್ರಕ್ರಿಯೆ ಬಗ್ಗೆ ಕಾರ್ಯಕತೃತ್ವ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತರಬೇತಿ ನೀಡುವುದು
 • ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯನ್ನು ಒಮ್ಮುಖವಾಗುವಂತೆ ನೋಡಿಕೊಳ್ಳುವುದು.
 • ಆಸ್ತಿ ಇಲ್ಲದ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ  ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸೂಕ್ಷ್ಮ ಜಮಾಕಟ್ಟು ನೆರವು (miಛಿಡಿo ಛಿಡಿeಜiಣ ಜಿiಟಿಚಿಟಿಛಿe) ಪಡೆಯಲು ಅನುಕೂಲತೆಯನ್ನು ಕಲ್ಪಿಸುವುದು.
 • ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಹಾಗೂ ಅನುಷ್ಟಾನಗೊಳಿಸುವುದು.

​ವಿಶ್ವ ಸಂಸ್ಥೆಯ ಸಹಸ್ರಮಾನದ ಗುರಿ :-

 • ಅತಿಯಾದ ಬಡತನ ಮತ್ತು ಹಸಿವೆಯನ್ನು ನಿರ್ಮೂಲಗೊಳಿಸುವುದು
 • ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸುವುದು
 • ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು
 • ಮಕ್ಕಳ ಮರಣವನ್ನು ತಗ್ಗಿಸುವುದ,
 • ತಾಯಿಯ ಆರೋಗ್ಯವನ್ನು ಸುಧಾರಿಸುವುದು
 • ಹೆಚ್.ಐ.ವಿ/ಏಡ್ಸ್, ಮಲೇರಿಯಾ ಮತ್ತು ಇತರೆ ರೋಗಗಳ ವಿರುದ್ಧ ಪ್ರತಿಭಟಿಸುವುದು
 • ಪರಿಸರವನ್ನು ಸಂರಕ್ಷಿಸುವುದು
 • ಅಭಿವೃದ್ಧಿಗಾಗಿ ವಿಶ್ವ ಸಹಭಾಗಿತ್ವವನ್ನು ಕಲ್ಪಿಸುವುದು


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top