ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

ಕರ್ನಾಟಕ ಸರ್ಕಾರ

H.D. Kumaraswamy
GOK > WCDEDASC
​​

​​ ಮುಖಪುಟ​

​​ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವಾಲಯವು 1994 ರಲ್ಲಿ ಸ್ಥಾಪನೆಗೊಂಡಿದ್ದು ಇದಕ್ಕೆ ಪೂರ್ವದಲ್ಲಿ ಇದು ಸಮಾಜ ಕಲ್ಯಾಣ ಇಲಾಖೆಯ ಒಂದು ಭಾಗವಾಗಿತ್ತು. ಮಾನ್ಯ ಇಲಾಖಾ ಸಚಿವರ ನೇತೃತ್ವದಲ್ಲಿ ಸಹಕಾರ ನೀಡಲು ಪ್ರಧಾನ ಕಾರ್ಯದರ್ಶಿಗಳು ಮತ್ತು 45 ಸಿಬ್ಬಂದಿಗಳನ್ನೊಳಗೊಂಡ ಸಚಿವಾಲಯವನ್ನು ಹೊಂದಿರುತ್ತದೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಹೊಂದಿಕೊಂಡಿರುವ ಇತರೆ ಕ್ಷೇತ್ರ ಇಲಾಖೆಗಳು

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ವಿಕಲಚೇತನರ ಹಾಗು ಹಿರಿಯರ ನಾಗರೀಕರ ಸಬಲೀಕರಣ ಇಲಾಖೆ
  • ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ
  • ಕರ್ನಾಟಕ ರಾಜ್ಯ ಮಹಿಳಾ ಆಯೋಗ
  • ಜವಾಹರ ಬಾಲಭವನ ಸೊಸೈಟಿ
  • ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ
  • ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಛೇರಿ
  • ಕರ್ನಾಟಕ ಬಾಲ ವಿಕಾಸ ಅಕಾಡಮಿ
  • ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಇಲಾಖೆಯು ರಾಜ್ಯದಲ್ಲಿ ಮಹಿಳೆಯರ, ಮಕ್ಕಳ, ಹಿರಿಯರ ಮತ್ತು ವಿಕಲಚೇತನರ ಕಲ್ಯಾಣ ಹಾಗು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜೊತೆಗೆ, ಅವಶ್ಯವಾದ ಯೋಜನೆಗಳು, ಕಾರ್ಯಕ್ರಮಗಳನ್ನು ಮತ್ತು ನೀತಿಗಳನ್ನು ಸಿದ್ಧಪಡಿಸುತ್ತದೆ ಹಾಗು ಮಹಿಳೆಯರ, ಮಕ್ಕಳ ಹಿರಿಯರ ಮತ್ತು ವಿಕಲಚೇತನರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಹಾಗು ಸರ್ಕಾರೇತರ ಸಂಸ್ಥೆಗಳ ಪ್ರಯತ್ನಗಳಿಗೆ ಸಹಯೋಗವನ್ನು ಕಲ್ಪಿಸುತ್ತದೆ.

ಸಚಿವಾಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಡಳಿತ ಇಲಾಖೆಯಾಗಿದ್ದು. ಇದು ಯೋಜನೆಗಳನ್ನು ಹಾಗೂ ನೀತಿಗಳನ್ನು ರೂಪಿಸಲು, ಆಯವ್ಯಯ ಸಿದ್ಧಪಡಿಸಲು ಮತ್ತು ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಸೇವೆಗಳ ಜವಾಬ್ದಾರಿಯನ್ನು ಹೊಂದಿದೆ. ಇದು ಯೋಜನೆ, ಹಣಕಾಸು ಮತ್ತು ಇತರೆ ಸಂಬಂಧಿಸಿದ ಸರ್ಕಾರದ ಇಲಾಖೆಗಳೊಂದಿಗೆ ಸಹಯೋಗ ಕಲ್ಪಿಸುತ್ತದೆ, ಮತ್ತು ಮಹಿಳೆಯರ ಮತ್ತು ಮಕ್ಕಳ ಸರ್ವಾಂಗೀಣ ಆಭಿವೃದ್ಧಿಗೆ ಮಾರ್ಗದರ್ಶನ ಹಾಗೂ ವಿಧಿವಿಧಾನಗಳನ್ನು ರೂಪಿಸುತ್ತದೆ. ಇದು ಶಾಸನ ಸಭೆಗಳಲ್ಲಿ, ಶಾಸಕಾಂಗ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತದೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯ ಮತ್ತು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಮಂತ್ರಾಲಯಗಳು ಇಲಾಖೆಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ಸಹಾಯ ನೀಡುತ್ತದೆ.

ಒಟ್ಟಿನಲ್ಲಿ ಇಲಾಖೆಯು ಮಹಿಳೆಯರ, ಮಕ್ಕಳ, ಹಿರಿಯರ ಮತ್ತು ವಿಕಲಚೇತನರಲ್ಲಿ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶಹೊಂದಿದೆ.


 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top